ಮಂಗಳೂರು ಉತ್ತರ ವಲಯದ – “ವಲಯೋತ್ಸವ”

ಮಂಗಳೂರು ಉತ್ತರ ವಲಯದ ವಿಶಿಷ್ಟ ಕಾರ್ಯಕ್ರಮ-ವಲಯೋತ್ಸವ

ಶ್ರೀ ಗುರುಗಳ ಪರಿಕಲ್ಪನೆಯ ಹಾಂಗೆ ಮಹಾ ಮಂಡಲ, ಮಂಡಲ, ವಲಯ ಹೇಳಿ ಸಂಘಟನೆಗೊ ಚಾಲ್ತಿಲಿ ಇಪ್ಪ ವಿಷಯ ಎಲ್ಲರಿಂಗೂ ಗೊಂತಿಪ್ಪದೇ.
ಮಂಗಳೂರು ಉತ್ತರ ವಲಯ ಹೇಳಿರೆ ಮಂಗಳೂರಿಲ್ಲಿ ದಕ್ಷಿಣದ ಕುಳೂರು ನದಿಂದ ತೊಡಗಿ ಉತ್ತರದ ಮೂಲ್ಕಿ ವರೇಂಗೆ, ಹಾಂಗೇ ಮೂಡುಬಿದ್ರೆ, ಕಟೀಲು, ಕಿನ್ನಿಗೋಳಿ ವ್ಯಾಪ್ತಿಲಿ ಸುಮಾರು 170 ಮನೆಗಳ ಒಳಗೊಂಡಿಪ್ಪ ಒಂದು ಸಂಘಟನೆ.
ಈ ವಲಯ,ಶ್ರೀ ಗುರುಗಳ ಎಲ್ಲಾ  ಸಮಾಜಮುಖೀ ಕಾರ್ಯಕ್ರಮಂಗಳಲ್ಲಿ ಸರ್ವ ವಿಧಲ್ಲಿಯೂ ಸಕ್ರಿಯವಾಗಿ ಭಾಗವಹಿಸ್ತುತ್ತಾ ಇಪ್ಪದು ವಲಯದ ಸಮಾಜ ಬಾಂಧವರಿಂಗೆ ಹೆಮ್ಮೆಯ ವಿಷಯ ಮಾತ್ರ ಅಲ್ಲದ್ದೆ, ಶ್ರೀ ಗುರುಗಳ ಕಾರ್ಯಂಗಳಲ್ಲಿ ಭಾಗಿಯಪ್ಪಲೆ ಒದಗಿದ ಸುವರ್ಣ ಅವಕಾಶ ಹೇಳ್ತ  ಅಭಿಮಾನ ಮತ್ತೆ ಸಾರ್ಥಕತೆಯ ಭಾವನೆ.

ಉದ್ಯೋಗ ನಿಮಿತ್ತ ಬೇರೆ ಬೇರೆ ಊರುಗಳಿಂದ ಬಂದು ಇಲ್ಲಿ ವಾಸ್ತವ್ಯ ಇಪ್ಪ ಹವೀಕರೆಲ್ಲಾ ಒಟ್ಟಾಗಿ ಪರಸ್ಪರ ಪರಿಚಯ ಅಪ್ಪಲೆ, ಮತ್ತೆ ಅವರವರ ಪ್ರತಿಭೆಯ ಪ್ರದರ್ಶನ ಮಾಡ್ಲೆ ಒಂದು ಸದವಕಾಶ ಸೃಷ್ಟಿ ಮಾಡಿದ ಒಂದು ಕಾರ್ಯಕ್ರಮವೇ “ವಲಯೋತ್ಸವ” ವಾಗಿ ರೂಪುಗೊಂಡತ್ತು.
ಹೀಂಗೊಂದು ಪ್ರಸ್ತಾಪ ಅಧ್ಯಕ್ಷರಿಂದ ಬಂದಪ್ಪಗ ಅದಕ್ಕೆ ಎಲ್ಲರೂ ತನು ಮನ ಧನದ ಸಹಕಾರಕ್ಕೆ ತಾವಾಗಿಯೇ ಮುಂದೆ ಬಂದವು.
ಧಾರ್ಮಿಕ , ಸಾಂಪ್ರದಾಯಿಕ ಹಾಂಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಪ್ಪಗ ಎಲ್ಲರಲ್ಲಿಯೂ ಉತ್ಸಾಹ ಎಳಗಿತ್ತು ಹೇಳ್ತದು ಮತ್ತಾಣ ಕಾರ್ಯಕ್ರಮಂಗಳಲ್ಲಿ ಸ್ಪಷ್ಟವಾಗಿ ಕಂಡು ಬಂತು.

ಜೆನಂಗೊ ಸೇರಲೆ ಅನುಕೂಲ ಆಯೆಕ್ಕಾರೆ ಆದಿತ್ಯವಾರ ಆಯೆಕ್ಕು, ಯಾವುದೇ ಶುಭ ಕಾರ್ಯಕ್ರಮಂಗೊ ಇಲ್ಲದ್ದ ದಿನ ಆಗಿರೆಕು, ಮಕ್ಕೊಗೆ ರಜೆ ಇಪ್ಪ ದಿನ ಆಗಿರಲೇ ಬೇಕು.
ಹೀಂಗೆಲ್ಲಾ ಒದಗಿ ಬರೆಕಾರೆ ಕಷ್ಟ ಇದ್ದು. ಮೇ ತಿಂಗಳ ಇಪ್ಪತ್ತರ ಆದಿತ್ಯವಾರವೇ ಎಂಗೊಗೆ ಒದಗಿ ಬಂದ ಶುಭ ಮುಹೂರ್ತ.
ಇದಕ್ಕಾಗಿ ಒಂದು ಕಾರ್ಯಕಾರೀ ಸಮಿತಿ ಮಾಡಿ ಕಾರ್ಯಪ್ರವೃತ್ತರಾದೆಯೊ°.
ಪೂರ್ವಭಾವೀ ಸಭೆಗಳಲ್ಲಿ ಸಮಿತಿಯ ಸದಸ್ಯರೆಲ್ಲಾ ಒಗ್ಗಟ್ಟಿಲ್ಲಿ ಭಾಗವಹಿಸಿ ಜವಾಬ್ದಾರಿಯ ನಿರ್ವಹಣೆಗೆ ಹೆಗಲು ಕೊಟ್ಟವು.

~~

ಮೇ 20 ರ ಆದಿತ್ಯವಾರ ಬಂತು.
ಉದಿಯಪ್ಪಗ 8 ಗಂಟೆಗೆ ಗಣಪತಿ ಹೋಮ ಸುರು ಆಯೆಕ್ಕು. ನೆರೆಕರೆಯವು ಕಾಪಿ ಸುದರಿಕೆಗೆ 7ಗಂಟೆಗೆ ಹಾಜರಾದರೆ, ರೆಜ ದೂರಂದ ಬಪ್ಪವೂದೆ ಬೇಗ ಬೇಗ ಬಂದು ಸಹಕಾರ ಕೊಟ್ಟವು.
ಒಗ್ಗರಣೆ ಸೇಮಗೆ, ಮೆಂತೆ ಕೊದಿಲು, ಮೊಸರು, ಉಪ್ಪಿನಕಾಯಿ, ಕಾಪಿ, ಚಾಯ, ಕಷಾಯ  ವ್ಯವಸ್ಥಿತವಾಗಿ ಕಾಪಿತಿಂಡಿ ಸುದರಿಕೆ ನಡದತ್ತು.

ಇನ್ನೊಂದು ಹೊಡೆಲಿ, ಮಂಡಲ ಬರದು ಗಣಪತಿ ಹೋಮಕ್ಕೆ ತಯಾರಿ ಆವ್ತಾ ಇತ್ತಿದ್ದು. ನವಗೆ 12 ಕಾಯಿ ಗಣಪತಿ ಹೋಮ ಆಯೆಕ್ಕು ಹೇಳಿಪ್ಪಗ ಕಲ್ಯಾಣ ಮಂಟಪದವು “ನಮ್ಮ ಹತ್ರ ಅಷ್ಟು ದೊಡ್ಡ ಅಗ್ನಿ ಕುಂಡ ಇಲ್ಲ” ಹೇಳಿ, ಅವರತ್ರೆ ಇಪ್ಪ ಸಣ್ಣ ಕಬ್ಬಿಣದ ಕುಂಡ ತೋರಿಸಿದವು.
ಎಲ್ಲಿಯಾದರೂ ಒಂದು ಕಾಯಿ ಗಣಪತಿ ಹೋಮ ಸುದಾರ್ಸಲೆ ಎಡಿತ್ತಿತೋ ಎಂತದೋ. ಬಾಡಿಗೆಗೆ ದೊಡ್ಡ ಕುಂಡವನ್ನೇ ಮುನ್ನಾ ದಿನ ತಂದು ಪ್ರತಿಷ್ಠಾಪನೆ ಮಾಡಿ ಆಗಿದ್ದ ಕಾರಣ ತೊಂದರೆ ಆಯಿದಿಲ್ಲೆ.
ಪೂರ್ಣಾಹುತಿ ಅಪ್ಪಗ ಸಾಕಷ್ಟು ಸಂಖ್ಯೆಲಿ ಜೆನಂಗೊ ಸೇರಿದವು, ಆಜ್ಯ ಅಷ್ಟದ್ರವ್ಯದ ಪರಿಮಳದ ಹೋಮದ ಹೊಗೆಯೂ ತುಂಬಿ  ವಾತಾವರಣ ಪರಿಶುದ್ದ ಆತು.

ಮುಂದಾಣ ಕಾರ್ಯಕ್ರಮ ಶಿವಪೂಜೆ. ಶ್ರೀ ಗುರುಗಳ ಆಶೀರ್ವಾದಂದಾಗಿ ವಲಯಲ್ಲಿ ರುದ್ರ ಕಲ್ತವು ಕಮ್ಮಿ ಜೆನಂಗೊ ಎಂತ ಅಲ್ಲ.
ಮಂಗಳೂರಿನ ಬಾಂಧವರೂ ಬಂದು ಸೇರಿಗೊಂಡವು. ಏಕ ಕಾಲಲ್ಲಿ ಒಂದೇ ಸ್ವರಲ್ಲಿ 36 ಜೆನಂಗೊ ಹೇಳಿದ ರುದ್ರ, ಸರ್ವೋವೈ ರುದ್ರ, ನಮಕ ,ಚಮಕ, ಪುರುಷಸೂಕ್ತದ ಅನುರಣನಂದ ಉಂಟಾದ ಕಂಪನದ ಅನುಭವ ಅಲ್ಲಿ ಸೇರಿದವಕ್ಕೆ ಖಂಡಿತಾ ಆಯಿದು.
ಇಷ್ಟೆಲ್ಲಾ  ಆವ್ತಾ ಇದ್ದ ಹಾಂಗೆ ಹೆಮ್ಮಕ್ಕೊ ಕುಂಕುಮಾರ್ಚನೆಗೆ ತಯಾರಾದವು.
ಎರಡು ಸಾಲಾಗಿ ಕೂದ 24 ಹೆಮ್ಮಕ್ಕೊ ಶ್ರೀ ಮಹಾಲಕ್ಷ್ಮ್ಯಷ್ಟಕಂದ ಪ್ರಾರ್ಥನೆ ಮಾಡಿ, ಶ್ರೀ ಲಲಿತ ಸಹಸ್ರನಾಮಪೂರ್ವಕ ಕುಂಕುಮಾರ್ಚನೆ ಮಾಡಿ, ಶ್ರೀ ರಾಮ ಮಂಗಲಂ ಹಾಡಿ, ಶ್ರೀ ದೇವಿಯ ಕೃಪೆಗೆ ಪಾತ್ರರಾದವು.

ಎಲ್ಲರೂ ಕಾದುಕೂದೊಂಡಿತ್ತಿದ್ದ ಶಿವಪೂಜೆಯ ಮಂಗಳಾರತಿಗೆ ಸಮಯ ಆವ್ತಾ ಬಂತು.
ಬೇರೆ ಬೇರೆ ನಮೂನೆಯ ಹೂಗು, ಸಿಂಗಾರಂದ ಅಲಂಕಾರಗೊಂಡ ಮಹಾದೇವಂಗೆ ಬಹು ವಿಧದ ಆರತಿಗಳಿಂದ ಶ್ರದ್ಧಾಪೂರ್ವಕ ದೀಪದರ್ಶನ ಅಪ್ಪ ಕಾಲಲ್ಲಿ ಎಲ್ಲರಲ್ಲಿಯೂ ಭಕ್ತಿಭಾವ ತುಂಬಿ ಬಂತು.

ಮುಂದೆ ಸಭಾಕಾರ್ಯಕ್ರಮಲ್ಲಿ ನಮ್ಮ ಬೈಲಿನ ಗೋಪಾಲಣ್ಣ, ಮಕ್ಕೊಗಾಗಿ ಬರದ “ಶ್ರೀ ದೇವೀ ಮಹಾತ್ಮ್ಯ” ಪುಸ್ತಕವ ಬಿಡುಗಡೆ ಮಾಡಿದ್ದು, ಗೋವಿಂದದಾಸ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಶ್ರೀ ಶಂಕರನಾರಾಯಣ ಭಟ್.

ನಮ್ಮ ಸಂಸ್ಕಾರಂಗಳ ಬಗ್ಗೆ ಎರಡು ಮಾತು ಹೇಳೆಕ್ಕು ಹೇಳಿ ಕೇಳ್ಯಪ್ಪಗ ಸಂತೋಷಲ್ಲಿ ಒಪ್ಪಿದವು ಪಳ್ಳತ್ತಡ್ಕ ವೇ| ಮೂ| ಪರಮೇಶ್ವರ ಭಟ್ರು.
ವೃತ್ತಿಲಿ ಪುರೋಹಿತರಾದ ಇವರ ಶಿಷ್ಯವರ್ಗ ತುಂಬಾ ದೊಡ್ಡದು. ಹಲವಾರು ಧಾರ್ಮಿಕ ಕಾರ್ಯಕ್ರಮಂಗಳಲ್ಲಿ ಪ್ರವಚನ ಮಾಡಿ ಅನುಭವ ಇಪ್ಪ ಹಿರಿಯವು.
ಎಂಗಳ ಮೇಲಣ ಪ್ರೀತಿಂದ ಅವರ ಬೇರೆ ಕಾರ್ಯಕ್ರಮಂಗಳ ಹೊಂದಾಣಿಕೆ ಮಾಡಿ ಪುರುಸೊತ್ತು ಮಾಡಿ ಬಂದದು ಎಂಗಳ ಸೌಭಾಗ್ಯವೇ ಸರಿ.

ಇಂದ್ರಾಣ ಸಮಾಜ ಮುಂದುವರುದ್ದು ಹೇಳ್ತಾ ಇದ್ದು ನಾವು . ಆದರೆ ಆಚಾರ ವಿಚಾರಂಗಳ ನಾವು ಬಿಡ್ತಾ ಇದ್ದು. ಮನುಷ್ಯ ಜನ್ಮಲ್ಲಿ ಹುಟ್ಟೆಕ್ಕಾರೆ ಅದೆಷ್ಟೋ ಪುಣ್ಯ ಮಾದಡಿರೆಕು.
ಅದರಲ್ಲಿಯೂ ಬ್ರಾಹ್ಮಣನಾಗಿ ಹುಟ್ಟಿದ ನಾವು, ದೇವರ ಸಾಮೀಪ್ಯಲ್ಲಿ ಇಪ್ಪವು. ದಿನಕ್ಕೆ ಕನಿಷ್ಟ 108 ಗಾಯತ್ರೀ ಜೆಪ ಮಾಡ್ಲೇ ಬೇಕು. ಇದರಿಂದಾಗಿ ನಮ್ಮ ವರ್ಚಸ್ಸು ವೃದ್ಧಿ ಆವುತ್ತು.
ಹೆಮ್ಮಕ್ಕೊ ಹೇಳಿರೆ “ಶ್ರೀ ಮಾತಾ” ಸ್ವರೂಪಿಗೊ. ಆ ಮಾತೆಯ ಶಕ್ತಿ ಈ ಮಾತೆಯರಲ್ಲಿ ಇದ್ದು.
ಶರೀರ, ಆರೋಗ್ಯ, ಆಯುಷ್ಯ, ವಿದ್ಯೆ, ಧನ ಇವೆಲ್ಲಾ ನಮ್ಮ ಸಂಪತ್ತುಗೊ. ನಮ್ಮ ನಮ್ಮ ಕರ್ಮಕ್ಕನುಗುಣವಾಗಿ ದೇವರು ಇದರ ನಮಗೆ ಕೊಟ್ಟಿದ°. ಈ ಸಂಪತ್ತು ದೇಶ, ಧರ್ಮ, ಸಮಾಜ ಮತ್ತು ಕುಟುಂಬಕ್ಕಾಗಿ ವಿನಿಯೋಗ ಆಯೆಕ್ಕೇ ವಿನಹ ವಿಲಾಸಕ್ಕಾಗಿ ಅಲ್ಲ.
ನಮ್ಮ ಸಂಸ್ಕಾರಂಗಳ ನಾವು ಯಾವುದೇ ಕರ್ತವ್ಯ ಲೋಪ  ಇಲ್ಲದ್ದೆ ಆಚರುಸಲೇ ಬೇಕು.
ವೇಷಭೂಷಣಂಗಳಲ್ಲಿ, ಆಚಾರ ವಿಚಾರಂಗಳಲ್ಲಿ ನಾವು ನಮ್ಮ ಸಂಸ್ಕೃತಿಯ  ಎತ್ತಿ ಹಿಡಿಯಲೇ ಬೇಕು. ವಿದ್ಯಾಸಂಪನ್ನರಾಗಿಯೂ ವಿನಯವಂತರಾಗಿಯೂ ಇರೆಕು. ಮಾತಿಲ್ಲಿ ಯಾವದೇ ಅವಾಚ್ಯ ಶಬ್ದಂಗೊ ಬಪ್ಪಲೇ ಆಗ.
ಗಂಡಸರಾಗಲೀ ಹೆಂಗಸರಾಗಲೀ ತಿಲಕ ಧಾರಣೆ ಮಾಡೆಕ್ಕು. ಹಣೆಲಿ ತಿಲಕಧಾರಣೆ ಮಾಡುವಲ್ಲಿ ಸಾರಸ್ವತ ನಾಡಿ ಇದ್ದು. ಜ್ಞಾನ ಸಂಪತ್ತು ನಮಗೆ ಹರಿದು ಬಪ್ಪ ಸಾರಸ್ವತ ನಾಡಿಲಿ ತಿಲಕ ಇಪ್ಪಲೇ ಬೇಕು.
ದಂಪತಿಗೊ ಲಕ್ಷ್ಮೀ-ನಾರಾಯಣರ ಹಾಂಗೆ, ಪಾರ್ವತೀ ಪರಮೇಶ್ವರರ ಹಾಂಗೆ ಅನ್ಯೋನ್ಯತೆಂದ ಇರೆಕ್ಕು. ಮಕ್ಕಳ ಚಲನವಲನಲ್ಲಿ ಒಂದು ಕಣ್ಣು ಮಡುಗೆಕ್ಕು – ಹೇಳಿ ಹಿತವಚನವನ್ನೂ ಹೇಳಿದವು.

ಮಧ್ಯಾಹ್ನದ ಗಂಟೆ ಒಂದು ದಾಂಟಿದರೂ ಎಲ್ಲರೂ ನಿಶ್ಶಬ್ಧವಾಗಿ ಕೂದು ಪ್ರವಚನವ ಕೇಳಿ ಮನನ ಮಾಡಿಯೊಂಡವು.
ಇವರ ಪ್ರವಚನದ ಪೂರ್ಣ ಪಾಠವ ಕೇಳುಲೆ ಶುದ್ದಿಯ ಅಕೇರಿಗೆ ಸಂಕೋಲೆ ಕೊಟ್ಟದರ ಒತ್ತಿರೆ ಆತು.

~~

ಯಾವದೇ ಜೆಂಬಾರದ ಊಟಕ್ಕೂ ಕಮ್ಮಿ ಆಗದ್ದ ಹಾಂಗೆ ಊಟದ ವ್ಯವಸ್ಥೆ. ಅದರ ಜವಾಬ್ದಾರಿ ಹೊತ್ತವರ ಶ್ರಮ ಸಾರ್ಥಕ ಆಯಿದು ಹೇಳಿ ಉಂಡವರ ಅನುಭವದ ಮಾತಿಂದ ಗೊಂತಾತು.
ಎರಡು ಬಗೆ ತಾಳು, ಅವಿಲು, ಮೆಣಸುಕಾಯಿ, ಕೊಚ್ಚುಸಳ್ಳಿ, ಕೋಸಂಬ್ರಿ, ಅಶನ, ಉರಗೆ ತಂಬ್ಳಿ, ಸಾರು, ಕೊದಿಲು, ಮೇಲಾರ, ಹಸರು-ಹಲಸಿನ ಹಣ್ಣಿನ ಪಾಯಸ, ಹೋಳಿಗೆ,ರಸಾಯನ, ದೀಗುಜ್ಜೆ ಪೋಡಿ, ಮಾವಿನ ಕಾಯಿ ಉಪ್ಪಿನಕಾಯಿ, ಮಜ್ಜಿಗೆ ಇಷ್ಟೆಲ್ಲಾ ಉಂಡ ಮತ್ತೆ ಒರಕ್ಕು ತೂಗಲಾಗನ್ನೆ!!!
ಎಲ್ಲರೂ ಒಂದೇ ಮನೆಯವು ಹೇಳ್ತ ಭಾವನೆಂದ ಊಟದಕ್ಷಿಣೆಗೆ ಆರೂ ಕೈ ಒಡ್ಡಿದ್ದವಿಲ್ಲೆ !!!

ಪಾಯಸ ಬಂದಪ್ಪಗ ಸುರುವಾದ ಚೂರ್ಣಿಕೆ, ಮಜ್ಜಿಗೆ ಉಂಡು ಅಪ್ಪನ್ನಾರ ಮೆನಕ್ಕಡು ಇಲ್ಲದ್ದೆ ಒಂದಾದ ನಂತರ ಒಂದು ಬಂದದರಲ್ಲಿ ವಿಶೇಷ ಎಂತ ಹೇಳಿರೆ, ಸಣ್ಣ ಮಕ್ಕಳ ಭಾಗವಹಿಸುವಿಕೆ.
ಎರಡ್ನೇ ಹಂತಿ ಕೂಡಾ ಇದಕ್ಕಿಂತ ಭಿನ್ನವಾಗಿ ಇತ್ತಿದ್ದಿಲ್ಲೆ ಹೇಳುವದು ಇನ್ನೊಂದು ವಿಶೇಷ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟದು ವಲಯ ಮಾತೃಶಾಖೆ ಪ್ರಧಾನರು.
ಅವರವರ ಪ್ರತಿಭೆ ಪ್ರದರ್ಶನಕ್ಕೆ ಇದೊಳ್ಳೆ ಅವಕಾಶ ಹೇಳಿ ಎಲ್ಲರೂ ಉತ್ಸಾಹಂದ ಭಾಗವಹಿಸಿದ್ದಕ್ಕೆ ಸಾಕ್ಷಿ 20 ಕ್ಕಿಂತಲೂ ಜಾಸ್ತಿ ಪ್ರದರ್ಶನಂಗಳ ನೋಂದಣಿ ಆದ್ದು.

ಭರತನಾಟ್ಯ, ಹಾಡುಗಾರಿಕೆ, ವೀಣಾವಾದನ, ಕೊಳಲುವಾದನ, ಛದ್ಮವೇಷ, ವೃಂದಗಾನ, ಪುರಾಣವಾಚನ, ಮ್ಯಾಜಿಕ್ ಶೋ, ಹೀಂಗೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಂಗೊ ಎಲ್ಲರಿಂಗೂ ಮನರಂಜನೆ ಒದಗಿಸಿತ್ತು.

ಛದ್ಮ ವೇಷಲ್ಲಿ ಅಜ್ಜಿಯಾಗಿ ಬಂದ ಮಾತೃಶಾಖೆ ಪ್ರಧಾನರು ಒಪ್ಪಣ್ಣ ಬೈಲನ್ನೂ ಹೆಸರಿಸಿದ್ದು ವಿಶೇಷವೇ ಸರಿ.

ಶ್ರೀಶಣ್ಣನ ಅನುಪಸ್ಥಿತಿಲಿ “ಎಲ್ಲೋರು ಬನಿ ಬೈಲಿಂಗೆ”  ಹಾಡಿನ ಸಮೂಹಗಾನವಾಗಿ ಹಾಡ್ಸಿದ್ದು ವಲಯದ ಪ್ರಸಾರ ವಿಭಾಗದ ಮುಖ್ಯಸ್ಥರು.
ಇದು ಎಲ್ಲರನ್ನೂ ರಂಜಿಸಿದ್ದು ಹೇಳ್ತಲ್ಲಿ ಎರಡು ಮಾತಿಲ್ಲೆ.

ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಪ್ರದರ್ಶನ ಕೊಟ್ಟ ಮಕ್ಕೊಗೆ  ಬಹುಮಾನ ಕೊಟ್ಟು ಪ್ರೋತ್ಸಾಹಿಸಿದೆಯೊ°

“ನೀನಾರಿಗಾದೆಯೋ ಎಲೆ ಮಾನವ, ಹರಿ ಹರಿ ಗೋವು ನಾನು” ಈ ಗೋವಿನ ಹಾಡಿನ ಕೇಳದ್ದವು ಆರು?
ಮನುಕುಲಕ್ಕೆ ಗೋವು ಒದಗಿಸುವ ಸೇವೆಯ ತುಂಬಾ ಚೆಂದಕೆ ವಿವರಿಸಿದ್ದು ಮಾತ್ರ ಅಲ್ಲದ್ದೆ ಅದೇ ಗೋವು ಪ್ರಾಯ ಆಗಿ ಹಾಲು ಕೊಡ್ತಿಲ್ಲೆ ಹೇಳಿ ಅಪ್ಪಗ  ಮನುಷ್ಯರು ಯಾವ ರೀತಿ ನೋಡಿಗೊಳ್ತವು ಹೇಳ್ತ ಅಂಶವೂ ಇಪ್ಪ ಕರುಣಾ ರಸದ ಪದ್ಯ.
ಇದರ ಸಭಿಕರೆಲ್ಲರಿಂದಲೂ ಹಾಡಿಸಿದ್ದು ಬಾಯಡಿ ಬಾಲಕೃಷ್ಣ. ಹಾಡುತ್ತಾ ಇದ್ದ ಹಾಂಗೆ ಭಾವುಕರಾದವು ಹಲವಾರು ಜೆನಂಗೊ.

ಕಾರ್ಯಕ್ರಮಲ್ಲಿ ಭಾಗವಹಿಸಿದವು ಅವರ ಅನುಭವಂಗಳನ್ನು ಹಂಚಿಗೊಂಡವು.
ಸಮಾಜ ಬಾಂಧವರ ಒಟ್ಟು ಸೇರುಸುವಲ್ಲಿ ಇದೊಂದು ಒಳ್ಳೆಯ ಕಾರ್ಯಕ್ರಮ,  ಹೀಂಗಿಪ್ಪ ಕಾರ್ಯಕ್ರಮಂಗೊ  ಇನ್ನು ಮುಂದೆಯೂ ನೆಡೆಕು ಹೇಳ್ತ ಅಭಿಪ್ರಾಯ ಎಲ್ಲರಿಂದಲೂ ಬಂತು.

ಕಾರ್ಯಕ್ರಮಲ್ಲಿ ಕಂಡ ವಿಶೇಷತೆಗೊ

 • ಎಲ್ಲರೂ ಸಕಾಲಲ್ಲಿ ಹಾಜರಾಗಿ ಎಲ್ಲಾ ಕಾರ್ಯಕ್ರಮಂಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಗೊಂಡದು.
 • ಪೂಜೆಗೆ ಬೇಕಾದ ತೊಳಶಿ, ಬಿಲ್ವಪತ್ರೆ, ಹೂಗುಗಳ ಅವರವರ ಮನೆಂದಲೇ ತಂದದು. ಒಂದೇ ಒಂದು ಪೇಟೆ ಹೂಗಿನ ಉಪಯೋಗ ಮಾಡದ್ದದು.
 • ಕುಂಕುಮಾರ್ಚನೆಗೆ ಶ್ರೀ ಮಠಲ್ಲಿ ತಯಾರಾದ ಶುದ್ಧ ಕುಂಕುಮವನ್ನೇ ಉಪಯೋಗಿಸಿದ್ದು.
 • ಹೋಮಕ್ಕೆ ಶುದ್ಧ ದನದ ತುಪ್ಪವನ್ನೇ ಉಪಯೋಗ ಮಾಡಿದ್ದು.
 • ಎಲ್ಲರೂ ಸಾಂಪ್ರದಾಯಿಕ ಉಡುಗೆಲಿಯೇ ಬಂದದು.
 • ಅಂಗಿ ತೆಗದು ಉಂಬಲೆ ಕೂದ್ದು, ಬಳುಸುವವೂ ಅಂಗಿ ತೆಗದು ಬಳಿಸಿದ್ದು, ನಮ್ಮ ಹಳೇ ಸಂಪ್ರದಾಯವ ನೆನಪಿಸಿ ಕೊಟ್ಟತ್ತು.
 • ಕಾರ್ಯಕ್ರಮ ಮುಗಿವ ವರೆಗೆ ಎಲ್ಲರ ಉಪಸ್ಥಿತಿ.

ಎಲ್ಲರ ಸಹಕಾರ ಮತ್ತೆ ಪ್ರಾಯೋಜಕತ್ವಂದಲೇ ನಡದ ಈ ಕಾರ್ಯಕ್ರಮ ತುಂಬಾ ಯಶಸ್ವಿ ಆಯಿದು ಹೇಳ್ತಲ್ಲಿ ಯಾವದೇ ಸಂಶಯ ಇಲ್ಲೆ.

ಪಳ್ಳತ್ತಡ್ಕ ಭಟ್ಟಮಾವನ ಪ್ರವಚನ ಕೇಳುಲೆ:

ಕಾರ್ಯಕ್ರಮದ ಕೆಲವು ಪಟಂಗ:

ಶರ್ಮಪ್ಪಚ್ಚಿ

   

You may also like...

6 Responses

 1. ಚೆನ್ನೈ ಭಾವ° says:

  ವಲಯೋತ್ಸವ ಒಂದು ಅವಿಸ್ಮರಣೀಯ ದಿನ ಹೇಳಿ ಶುದ್ದಿ ಓದಿ ಕೊಶಿ ಆತು. ಸವಿವರವಾದ ಶುದ್ದಿ ಮೈ ಪುಳಕಿಸಿತ್ತು. ಫಟಂಗಳನ್ನೂ ಹಾಕಿ ಚಂದ ಆಯ್ದು. ಪಳ್ಳತ್ತಡ್ಕ ಭಟ್ಟಮಾವನ ಭಾಷಣ ಪ್ರವಚನ ಲಾಯಕ ಇರ್ತು. ಭರ್ತಿ ಒಂದು ಗಂಟೆಯ ಪ್ರವಚನ ಅನೇಕ ವಿಷಯಂಗಳ ಮನದಟ್ಟು ಮಾಡಿಕೊಟ್ಟತ್ತು. ಕತೆ ಉಪಕತೆ ಸೇರಿಗೊಂಡು ನಮ್ಮತನದ ಹಿರಿಮೆ ಮಹತ್ವ ಮತ್ತು ಅಗತ್ಯವ ನಿರೂಪಿಸಿದ ಈ ಕಾರ್ಯಕ್ರಮವ ಬೈಲಿಂಗೆ ತಂದು ಮಡುಗಿದ ಶರ್ಮಪ್ಪಚಿಗೆ ವಿಶೇಷ ಅಭಿನಂದನೆ ಹೇಳಿತ್ತು – ‘ಚೆನ್ನೈವಾಣಿ’

 2. ಬೊಳುಂಬು ಗೋಪಾಲ says:

  ವಲಯೋತ್ಸವಲಿ ಭಾಗವಹಿಸಿದ ಹಾಂಗೇ ಆತು, ಶರ್ಮಪ್ಪಚ್ಚಿಯ ಸವಿವರ ವರದಿಯ ಓದಿ ಅಪ್ಪಗ. ಅಚ್ಚುಕಟ್ಟಾದ ಕಾರ್ಯಕ್ರಮ. ಕಾರ್ಯಕ್ರಮದ ವಿಶೇಷತೆಗಳ ಪಟ್ಟಿ ನೋಡಿ ಅಪ್ಪಗ ಮತ್ತುದೆ ಕೊಶಿ ಆತು. ನಮ್ಮ ಸಂಸ್ಕಾರಂಗಳ ಬಗೆಲಿ ಪಳ್ಳತ್ತಡ್ಕ ಮಾವನ ಪ್ರವಚನ ತುಂಬಾ ಲಾಯಕಿರ್ತು. ಸರಳವಾಗಿ ಎಲ್ಲೋರಿಂಗು ಅರ್ಥ ಅಪ್ಪಹಾಂಗೆ ಹೇಳುವ ಅವರ ಶೈಲಿ ಅದ್ಭುತ. ನಮ್ಮ ಪ್ರೀತಿಯ ಗೋಪಾಲಣ್ಣ, ಮಕ್ಕೊಗಾಗಿ ಬರದ “ಶ್ರೀ ದೇವೀ ಮಹಾತ್ಮ್ಯ” ಈ ಸಂದರ್ಭಲ್ಲಿ ಬಿಡುಗಡೆ ಆದ್ದದು ತುಂಬಾ ಸಂತೋಷ.
  ಶ್ರೀಶಣ್ಣನ ಅನುಪಸ್ಥಿತಿಲಿಯುದೆ ಕಾರ್ಯಕ್ರಮದ ಸಂಯೋಜಕರು ಸಮೂಹಗಾನದ ನೇತೃತ್ವ ವಹಿಸಿ ಹಾಡಿದ್ದರುದೆ ತುಂಬಾ ಚೆಂದ ಆಯಿಕ್ಕದು. ಎಲ್ಲೋರು ಬನ್ನಿ ಬೈಲಿಂಗೆ. ವಾಹ್ !

  ಮಂಗಳೂರು ಉತ್ತರ ವಲಯದ ಈ ಕಾರ್ಯಕ್ರಮವ ಮಾದರಿಯಾಗಿ ಮಡಗೆಂಡು ಹವ್ಯಕ ಕಾರ್ಯಕ್ರಮಂಗಳ ಮಾಡ್ಳಕ್ಕು. ಸುಂದರ ಕಾರ್ಯಕ್ರಮವ ಏರ್ಪಾಟು ಮಾಡಿದ ಶರ್ಮಪ್ಪಚ್ಚಿ ಬಳಗಕ್ಕೆ ಅಭಿನಂದನೆಗೊ. ವರದಿ ಒಪ್ಪುಸಿದ ಶರ್ಮಪ್ಪಚ್ಚಿಗೆ ಧನ್ಯವಾದಂಗೊ.

 3. ಬಾಲಣ್ನ says:

  ಚೆನ್ದ ಆಯಿದು.ವೇದಿಕೆಲಿ ಕದೆವರೆಗೂ ಒನ್ದುದೆ ಕುರ್ಚಿ ಮಡುಗದ್ದದು ಇನ್ನೊನ್ದು ವಿಶೇಶವೇ.ಅಲ್ಲದೊ?

 4. ಅಡಕೋಳಿ says:

  ಶರ್ಮಣ್ಣನ ಶ್ರಮದ ಬಗ್ಗೆ ಎರದು ಮಾತಿಲ್ಲೆ. ನಂಗಳ ವಲಯದ ಪ್ರತಿಯೊಬ್ಬರಿಂಗೆ ಇರುವ ಬದ್ಧತೆ ಅತ್ಯಂತ ಖುಷಿ ಕೊಡ್ತು.
  ಕೊನೆಯಲ್ಲಿನ ರಾಮತಾರಕ ಮಂತ್ರದ ಹೊತ್ತಿಂಗೆ ಎಲ್ಲರೂ ಭಾವುಕರಾಗಿದ್ದೊ.
  ಬಾಲಣ್ಣನ ಅಂದಿನ ಸ್ವರದಲ್ಲಿದ್ದ ಸಮರ್ಪಣಾ ಭಾವ ಅಧ್ಬುತವಾಗಿತ್ತು.
  ಅತ್ಯಂತ ಸ್ಮರಣಿಯವಾಗಿತ್ತು.

 5. ರಘು ಮುಳಿಯ says:

  ಶುದ್ದಿ ಕೊಶಿ ಕೊಟ್ಟತ್ತು ಅಪ್ಪಚ್ಚಿ.ಅಭಿನ೦ದನೆಗೊ.

 6. ಆನಂದ says:

  ಶುದ್ದಿ ಒಟ್ಟಿಂಗೆ ಫಟವುದೆ ಬಹಳ ಸುಂದರವಾಗಿ ಬಯಿಂದು. ಶರ್ಮಪ್ಪಚ್ಚಿಯ ಹಾಗೂ ವಲಯದ ಎಲ್ಲರ ಶ್ರಮವೂ ಬಹಳ ಪ್ರಶಂಸನೀಯ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *