ಮಂಗಳೂರು ರಿಫೈನರಿಲಿ ಭಟ್ಟಿ ಇಳುಶುದರ ಬಗ್ಗೆ

ಶರ್ಮಪ್ಪಚ್ಚಿ ಕೊಡೆಯಾಲಲ್ಲಿ ಇಪ್ಪದು ಹೇಳ್ತದು ಇಡೀ ಬೈಲಿಂಗೇ ಗೊಂತಿದ್ದು!
ಕೊಡೆಯಾಲಲ್ಲಿ ಕೂದಂಡು ಎಂತ ಮಾಡ್ತವು? – ಅದು ಹೆಚ್ಚಿನವಕ್ಕೆ ಗೊಂತಿರ.
ಹಗಲೊತ್ತು ಅಂತೇ ಕೂದು ಹೊತ್ತು ಕಳೆತ್ತವಿಲ್ಲೆ, ಹೆರದೇಶಂದ ಬತ್ತ ಕಚ್ಚಾತೈಲವ ನಮ್ಮ ಬೈಕ್ಕು, ಲೋರಿಗೆ ಆವುತ್ತ ಹಾಂಗೆ ಶುದ್ದಮಾಡಿ, ಟೇಂಕಿಲಿ ತುಂಬುಸುತ್ತ ಕಾರ್ಯಲ್ಲಿ ಅಂಬೆರ್ಪಿಲಿ ಇರ್ತವು.
ಅದರೆಡಕ್ಕಿಲಿ ಒಂದೊಂದರಿ ಬೈಲಿಂಗೆ ಬಂದು ಶುದ್ದಿಯೂ ಹೇಳ್ತವು.
ಈ ಸರ್ತಿ ಅದೇ ಶುದ್ದಿ – ಅದು ಹೇಂಗೆ ಶುದ್ದ ಮಾಡುದು, ಎಂತೆಲ್ಲ ಸಿಕ್ಕುತ್ತು, ಇತ್ಯಾದಿ.
ಓದಿಗೊಂಬೊ°, ನಾವೆಲ್ಲೊರು ತಿಳ್ಕೊಂಬೊ°.

ಓದಿದ ಕೂಡ್ಳೇ ಒಂದು ಒಪ್ಪ ಕೊಡುವೊ°,
ಆಗದೋ? ಏ°?
~
ಒಪ್ಪಣ್ಣ

ನಾವು ದಿನ  ನಿತ್ಯ ಒಂದಲ್ಲದ್ದರೆ ಒಂದು ವಾಹನಲ್ಲಿ ಓಡಾಡಿಗೊಂಡು ಇರುತ್ತು. ಅದು ಸ್ಕೂಟರ್, ಬೈಕ್ ಹಾಂಗಿಪ್ಪ ಎರಡು ಚಕ್ರದ ವಾಹನ ಅಗಿಕ್ಕು ಇಲ್ಲದ್ದರೆ, ಕಾರು, ಬಸ್,ವ್ಯಾನ್, ಜೀಪ್ ಹಾಂಗಿಪ್ಪ ನಾಲ್ಕು ಚಕ್ರದ ವಾಹನ ಅಗಿಕ್ಕು, ಇಲ್ಲದ್ದರೆ ರೈಲ್ ಬಂಡಿ ಆಗಿಕ್ಕು, ಅಲ್ಲ ವಿಮಾನ ಆದಿಕ್ಕು. ಇದೆಲ್ಲ ನಮ್ಮನ್ನೂ, ನಮ್ಮ ಲೋಡ್ ಗಳನ್ನೂ ಎಳಕ್ಕೊಂಡು ಹೋಯೆಕ್ಕಾದರೆ ಅದಕ್ಕೆ ಶಕ್ತಿ ಬೇಕಲ್ಲದ. ಆ ಶಕ್ತಿ ಸಿಕ್ಕೆಕ್ಕಾದರೆ ಅದಕ್ಕೆ ಇಂಧನ ತುಂಬುಸೆಕ್ಕು. ನಾವು ಹಷು ಅಪ್ಪಗ ಊಟ ಮಾಡುತ್ತ ಹಾಂಗೆ. ನಮ್ಮಊಟ ಸರಿಯಾಗಿ ಇದ್ದರೆ ಮಾತ್ರ ನಮ್ಮ ಆರೋಗ್ಯ ಸರಿಯಾಗಿ ಇಕ್ಕು. ಇದೇ ರೀತಿ ವಾಹನಂಗೊಕ್ಕೆ ಕೂಡ ಸರಿಯಾದ ಇಂಧನ ಹಾಕದ್ದರೆ ಅದರ ಆರೋಗ್ಯ ಹಾಳು ಅಕ್ಕು. ನವಗೆ ಅಸೌಖ್ಯ ಅಪ್ಪಗ ಡಾಕ್ಟ್ರಲ್ಲಿಗೆ ಹೋಯೆಕ್ಕಾಗಿ  ಬಪ್ಪ ಹಾಂಗೆ ವಾಹನಂಗೊಕ್ಕೆ   ಗೇರೇಜಿಂಗೆ ಹೋಗಿಗೊಂಡು ಇರೆಕಕ್ಕು.  ನಮ್ಮ ಅರೋಗ್ಯ ನವಗೆ ಹೇಂಗೆ ಮುಖ್ಯವೋ ಹಾಂಗೆ ವಾಹನಂಗಳ ಸುಸ್ಥಿತಿಲಿ ಮಡುಗುವದು ಕೂಡ ಅಷ್ಟೇ ಮುಖ್ಯ. ಇದರಲ್ಲಿ ಇಂಧನ ತುಂಬಾ ಮುಖ್ಯ  ಪಾತ್ರ ವಹಿಸುತ್ತು.

ಈ ಇಂಧನ ಹೇಂಗೆ  ತಯಾರಾಗಿ ನಮಗೆಲ್ಲ ಸಿಕ್ಕುತ್ತು, ಅದರ ಕ್ವಾಲಿಟಿ (Quality) ಹೇಂಗೆ ಇರೆಕು, ಇತ್ಯಾದಿ ಬಗ್ಗೆ ಸ್ಥೂಲ ಪರಿಚಯ ಮಾಡುವ°, ಆಗದೊ?

Petrol

ಪೆಟ್ರೋಲು ಶುದ್ದ ಮಾಡ್ತ ಶುದ್ದಿ

ಇದಕ್ಕೆ  ಕಛ್ಛಾ ಸಾಮಾಗ್ರಿ ಹೇಳಿದರೆ, ಕಛ್ಛಾ ತೈಲ (Crude Oil). ಇದು ನಮಗೆ ಬೇರೆ ಬೇರೆ ದೇಶಂದ ಬತ್ತು. ಹೆಚ್ಚಾಗಿ ಗಲ್ಪ್ ರಾಜ್ಯಂಗಳಾದ ಕುವೈಟ್, ಇರಾನ್, ಅರಬ್, ಸುಡಾನ್ ಇಲ್ಲಿಂದ ಬತ್ತು. ಹಾಂಗೆ ಹೇಳಿ ನಮ್ಮ ದೇಶಲ್ಲಿ ಇಲ್ಲೆ ಹೆಳಿ ಅಲ್ಲ. ಮುಂಬಯಿಲಿ, ರಾಜಸ್ಥಾನಲ್ಲಿ, ಅಸ್ಸಾಮಿಲ್ಲಿ ಎಲ್ಲ ಸಿಕ್ಕುತ್ತು. ಇದು ನೆಲಂದ ಕೆಳ, ತುಂಬಾ ಆಳಲ್ಲಿ ಇರುತ್ತು. ಅಲ್ಲಿಂದ ಮೇಲೆ ತೆಗದು ಶುದ್ಧೀಕರಿಸಿ, ರಿಫೈನರಿಗೆ ಕಳುಸುತ್ತವು. ಕಾಂಬಲೆ ದ್ರವ ರೂಪಲ್ಲಿ ಕಪ್ಪು ಅಥವಾ ಕಂದು ಬಣ್ಣಲ್ಲಿ ಇರುತ್ತು. ಇದು ತುಂಬಾ ಪ್ರಮಾಣಲ್ಲಿ ಬೇಕಾದ ಕಾರಣ, ಹಡಗಿಲ್ಲಿ ಬತ್ತು. ಅದಕ್ಕಾಗಿ ಬೇರೆ ನಮೂನೆಯ ಹಡಗು ಇರ್ತ್ತು. ಪ್ರಯಾಣ ಮಾಡುವ ಇಲ್ಲ ಸರಕು ತುಂಬಿಸುವ ಹಾಂಗೆ ಇಪ್ಪದರಲ್ಲಿ ಅಲ್ಲ. ಎಣ್ಣೆ ತುಂಬುಸಲೆ ಇಪ್ಪ ಹಡಗು ಹೇಳಿ ಬೇರೆಯೇ ಇದ್ದು.

ರಿಫೈನರಿಯ  ಸಾಮರ್ಥ್ಯ ಅಳವದು ಅದು ಎಷ್ಟು  ಕಛ್ಛಾ ತೈಲವ ವರ್ಷಕ್ಕೆ ಸಂಸ್ಕರಿಸಿತ್ತು  ಹೇಳುವುದರ ಮೇಲೆ ಆಗಿರುತ್ತು. ಉದಾಹರಣಗೆ, 9MMT ಹೇಳಿದರೆ, ಅದು ವರ್ಷಕ್ಕೆ 9 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಕಛ್ಛಾ ತೈಲವ ಸಂಸ್ಕರಣೆ ಮಾಡುತ್ತು ಹೇಳಿ ಅರ್ಥ. ಈಗ ಮಂಗಳೂರು ರಿಫೈನರಿ ಸುಮಾರು 12MMT ಯಷ್ಟು ಸಂಸ್ಕರಣೆ ಮಾಡುತ್ತು. ಇದು 1996 ರಲ್ಲಿ ಆರಂಭವಾಗಿ ಈಗಳೂ ನಮ್ಮ ರಾಜ್ಯಕ್ಕೆ ಮತ್ತೆ ನೆರೆಕರೆ ರಾಜ್ಯಕ್ಕೆ ಅಲ್ಲದ್ದೆ ಹೆರ ದೇಶಂಗೊಕ್ಕೆ ಕೂಡಾ ತನ್ನ ಉತ್ಪನ್ನಂಗಳ ಕಳುಸುತ್ತಾ ಇದ್ದು.

ಕಛ್ಛಾ ತೈಲವ ರೆಫೈನರಿಲಿ ಭಟ್ಟಿ ಇಳುಸಿ (ಇದಕ್ಕೆ Fractional Distillation ಹೇಳಿ ಹೇಳುತ್ತವು) ಅಪ್ಪಗ ಬೇರೆ ಬೇರೆ ಉತ್ಪನ್ನಂಗೊ ಸಿಕ್ಕುತ್ತು. ಹಗುರ ಇಪ್ಪ ತೈಲ ಮೊದಲು ಬಪ್ಪಲೆ ಸುರು ಆಗಿ ಸಾಂದ್ರ ಇಪ್ಪದು ಮತ್ತೆ ಬತ್ತಾ ಇರುತ್ತು. ಒಂದೊಂದಾಗಿ ಅದು ಯಾವುದು ಹೇಳಿ ನೋಡುವ.

ಮೊದಲು ಸಿಕ್ಕುವದು ನಾವು ಅಡಿಗೆ ಮಾಡಲೆ ಉಪಯೋಗಿಸುವ ಗ್ಯಾಸ್. ಇದಕ್ಕೆ ಎಲ್.ಪಿ.ಜಿ ಹೇಳಿ ಹೇಳುತ್ತವು, (Liquefied Petroleum Gas-LPG) ಹೆಸರೇ ಹೇಳುವ ಹಾಂಗೆ ಇದು ದ್ರವೀಕರಿಸಿದ ಪೆಟ್ರೋಲಿಯಂ ಗೇಸ್. ಇದರ ಹಂಡೆಲಿ ಪ್ರೆಶ್ಶರಿಲ್ಲಿ ತುಂಬುಸುತ್ತವು. ಅಂಬಗ ಅದು ದ್ರವ ರೂಪಲಿ ಇರುತ್ತು. ಹೆರಾಂಗೆ ಬಪ್ಪಗ ಅದು ಆವಿ ಆಗಿ ಗ್ಯಾಸ್ ಆಗಿ ಬತ್ತು, ಹೆಮ್ಮಕ್ಕೊಗೆ (ಅಡಿಗೆ ಮಾಡುವ ಎಲ್ಲರಿಂಗೂ) ಹೊಗೆ ಬಾರದ್ದೆ ಕಣ್ಣು ಉರಿಯದ್ದೆ ಫಕ್ಕನೆ ಅಡಿಗೆ ಮಾಡಲೆ ತುಂಬಾ ಅನುಕೂಲ ಆವುತ್ತು. ಇದಕ್ಕೆ ಪಕ್ಕನೆ ಕಿಚ್ಚು ಹಿಡಿವ ಗುಣ ಇದ್ದು,ಹಾಂಗಾಗಿ ಇದರ ಉಪಯೋಗಿಸುವಾಗ ಜಾಗ್ರತೆ ಹೆಚ್ಚು ಬೇಕು. ಒಂದು ಸಣ್ಣ ಕಿಡಿ ಸಾಕು ಇದಕ್ಕೆ ಕಿಚ್ಚು ಹಿಡಿವಲೆ. ಗಾಸ್ ಲೈಟರ್ ನ ಸಣ್ಣ ಕಿಡಿಂದ ಸ್ಟೌ ಹೊತ್ತುಸಲೆ ಎಡಿತ್ತಲ್ಲದೊ?. ಮನೆಂದ ಹೆರ ಹೋಪಗ ಅಥವಾ ಉಪಯೋಗ ಇಲ್ಲದ್ದೆ ಇಪ್ಪಗ ಗ್ಯಾಸ್ ನ ವಾಲ್ವ್ ಮುಚ್ಚಿ (off) ಮಡುಗುವದು ಸುರಕ್ಷಾ ಲೆಕ್ಕಂದ ಒಳ್ಳೆದು. ಇದರಲ್ಲಿ ಮುಖ್ಯವಾಗಿ ಮೀಥೇನ್ ಮತ್ತೆ ಪ್ರೊಪೇನ್  ಸಾಧಾರಣವಾಗಿ 25:75 ಪ್ರಮಾಣಲ್ಲಿ ಇರುತ್ತು. ಹೈವೇಗಳಲ್ಲಿ ದೊಡ್ಡ ದೊಡ್ಡ ಟ್ಯಾಂಕರ್ ಗಳಲ್ಲಿ (ದೊಡ್ಡ ಹಂಡೆಯ ಹಾಂಗಿಪ್ಪದರಲ್ಲಿ-Bullet ಹೇಳುತ್ತವು) ಹೋಪದು ನೋಡಿಪ್ಪಿ. ಅದರಲ್ಲಿ ಈ ಎಲ್.ಪಿ.ಜಿ. ಯ ಬೇರೆ ಬೇರೆ ಊರುಗೊಕ್ಕೆ ಸಾಗುಸುತ್ತವು.

ಎಲ್.ಪಿ.ಜಿ. ಆದ ನಂತರ ಮತ್ತೆ ಸಿಕ್ಕುವದು ನಾಪ್ತಾ (Naphtha). ಇದು ಕಾಂಬಲೆ ಬಣ್ಣ ಇಲ್ಲದ್ದ ದ್ರವ. ಬೇಗ ಆವಿ ಆವುತ್ತು ಮತ್ತೆ ಆವಿಗೆ ಕಿಚ್ಚು ಹಿಡಿವಲೆ ಒಂದು ಸಣ್ಣ ಕಿಡಿ ಸಾಕು. ಇದರ ಉಪಯೋಗಂಗೊ ಹಲವಾರು. ನಾವು ಉಪಯೋಗಿಸುವ ಪೆಟ್ರೋಲ್ ಮಾಡಲೆ ಇದುವೇ ಕಛ್ಛಾ ಸಾಮಾಗ್ರಿ. ಪೈಂಟ್ ತಯಾರು ಮಾಡಲೆ, ರಸ ಗೊಬ್ಬರ ಯೂರಿಯಾ ತಯಾರು ಮಾಡಲೆ, ಇಂಡಸ್ಟ್ರಿಗಳಲ್ಲಿ ದ್ರಾವಣ ಆಗಿ (solvent) ಕೂಡಾ ಉಪಯೋಗ ಆವುತ್ತು. (ಪೇಟೆಲಿ ಸಿಕ್ಕುವ ನಾಪ್ತಲಿನ್ ಗುಳಿಗೆ ಬೇರೆ, ಈಗ ಹೆಳುವ ನಾಪ್ತಾ ಬೇರೆ.)

ಪೆಟ್ರೋಲ್ (Motor Gasoline-MS): ನವಗೆ ಎಲ್ಲ ಗೊಂತಿದ್ದ ಹಾಂಗೆ ಪೆಟ್ರೋಲ್ ಇಂಧನವಾಗಿ ಹಲವಾರು ನಮೂನೆಯ ವಾಹನಂಗೊ ಓಡಾಡುತ್ತ ಇದ್ದು. ಈ ಮೊದಲೇ ಹೇಳಿದ ಹಾಂಗೆ ನಾಪ್ತಾ ಉಪಯೋಗಿಸಿ ಇದರ ತಯಾರು ಮಾಡುವದು. ಇದರಲ್ಲಿ ಇಪ್ಪ ಒಂದು ಮುಖ್ಯ ಅಂಶ ಹೇಳಿದರೆ “ಓಕ್ಟೇನ್” . ಇದು ಒಂದು ಸಂಖ್ಯೆ-anti  knocking property. (ಪ್ರಯೋಗ ಶಾಲೆಲಿ ಎಂಜಿನ್ ರನ್ ಮಾಡಿ ಈ ಸಂಖ್ಯೆ ಎಷ್ಟು ಹೇಳಿ ನೋಡೆಕ್ಕಷ್ಟೆ.)   ನಮ್ಮಲ್ಲಿಪ್ಪ ಹೆಚ್ಚಿನ ಕಾರುಗೊಕ್ಕೆ 88 ಇದ್ದರೆ ಸಾಕು. ಇದಕ್ಕಿಂತ ಕಮ್ಮಿ ಆದರೆ ಎಂಜಿನ್ ನ ಒಳಾಂದ ಲೋಹ ಹೆಟ್ಟುತ್ತ ಹಾಂಗಿಪ್ಪ ಶಬ್ಧ ಕೇಳುಗು. ಪೆಟ್ರೋಲಿಂಗೆ ನಾಪ್ತಾ ಅಥವಾ ಚಿಮಿಣಿ ಎಣ್ಣೆ ಬೆರಕ್ಕೆ ಆದರೆ ಹೀಂಗೆ ಅಪ್ಪ ಚಾನ್ಸ್ ಇದ್ದು.

ಪೆಟ್ರೋಲಿಂಗೆ ಕಿತ್ತಳೇ ಬಣ್ಣ ಇಪ್ಪದು ನಿಂಗೊಗೆ  ಗೊಂತಿಕ್ಕು. ಈ ಬಣ್ಣ ಬಪ್ಪಲೆ ಅದಕ್ಕೆ ಕಲರ್ ಹೊಡಿ (orange dye) ಹಾಕುತ್ತವು. ಪೆಟ್ರೋಲ್ ಹೇಳಿ ಗೊಂತಪ್ಪಲೆ ಬೆಕಾಗಿ ಇದರ ಸಣ್ಣ ಪ್ರಮಾಣಲ್ಲಿ ಹಾಕುವದು. ಇದಲ್ಲದ್ದೆ ಪೆಟ್ರೋಲಿಂಗೆ Multi Functional Additive (MFA) ಹಾಕುತ್ತವು. ಇದು ಎಂಜಿನ್ ರನ್ ಅಪ್ಪಲೆ ಎಂಜಿನ್ ನ ಒಳ  ಪೆಟ್ರೋಲ್ ಹೊತ್ತೆಕ್ಕಲ್ಲದ, ಅಂಬಗ ಅಲ್ಲಿ ಎಂತ ತೊಂದರೆ ಬಾರದ್ದ ಹಾಂಗೆ ಅಪ್ಪಲೆ ಬೇಕಾಗಿ ಹಾಕುವದು. ಕೆಲವು ಮಾರ್ಕೆಟಿಂಗ್ ಕಂಪೆನಿಯವು (ಉದಾ: HPCL/IOCL/BPCL/SHELL) ಫೇಕ್ಟರಿಲಿ ಹಾಕಿದ್ದ additive ಅಲ್ಲದ್ದೆ ಅವರದ್ದೇ ಆದ ಕೆಲವು additives ಗಳ ಹಾಕಿ ಅವರದ್ದೇ ಬ್ರಾಂಡ್ ಹೆಸರಿಲ್ಲಿ ರಜಾ ಹೆಚ್ಚು ಕ್ರಯಕ್ಕೆ ಮಾರುತ್ತವು. “ಓಕ್ಟೇನ್” ಕೂಡ 91 ಮಡುಗಿ ಪ್ರೀಮಿಯಂ ಗ್ರೇಡ್ ಹೇಳಿ ಕೊಡುತ್ತವು. ಇತ್ತೀಚೆಗೆ ಎಥನಾಲ್ ಮಿಶ್ರಣ ಕೂಡಾ ಮಾಡುತ್ತವು. ಇದರಿಂದಾಗಿ ಮೈಲೇಜ್ ಜಾಸ್ತಿ ಸಿಕ್ಕದ್ದರೂ ಎಂಜಿನ್ ನ ಆರೋಗ್ಯಕ್ಕೆ ಒಳ್ಳೆದು.

ಇನ್ನು ನಾವು ಹೆಚ್ಚ್ಚು ಉಪಯೋಗಿಸುವ ಒಂದು ಇಂಧನ ಹೇಳಿದರೆ ಚಿಮಿಣಿ ಎಣ್ಣೆ (Superior Kerosine Oil-SKO). ಇದು ಬಣ್ಣ ಇಲ್ಲದ್ದ ದ್ರಾವಣ. ರೇಶನ್ ಅಂಗಡಿಲಿ ಸಿಕ್ಕುವದಕ್ಕೆ ನೀಲಿ ಬಣ್ಣ ಹಾಕಿರ್ತ್ತವು. ಹಳ್ಳಿ ಮನೆಗಳಲ್ಲಿ ಚಿಮಿಣಿ ಎಣ್ಣೆ ದೀಪಂಗಳ ನೋಡಿಪ್ಪಿ. ಚಿಮಿಣಿ ಎಣ್ಣೆಲಿ ಓಡುವ ಕರೆಂಟ್ ಜನರೇಟರ್, ನೀರು ಎತ್ತುವ ಪಂಪ್, ಅಡಿಗೆ ಮಾಡುಲೆ ಸ್ಟೌ ಎಲ್ಲದರ ಉಪಯೋಗಂಗಳೂ ಇದ್ದು. ಹಿಂದಾಣ ಕಾಲಲ್ಲಿ, ಇರುಳಪ್ಪಗ ರೈಲಿಂಗೆ ಸಿಗ್ನಲ್ ಕೊಡಲೆ ಚಿಮಿಣಿ ದೀಪವನ್ನೇ ಉಪಯಗಿಸಿಗೊಂಡು ಇತ್ತಿದ್ದವು. ಇಷ್ಟು ಅಲ್ಲದ್ದೆ ನಾವು ಹೆಚ್ಚಾಗಿ ಉಪಯೋಗಿಸುವ detergent ತಯಾರು ಮಾಡಲೆ ಬೇಕಾದ linear alkyl benzene (LAB) ತಯಾರು ಮಾಡಲೆ ಕೂಡ ಇದರ ಒಂದು ಅಂಶವ ಉಪಯೋಗ ಆವುತ್ತು.

ದೊಡ್ಡ ದೊಡ್ಡ  ವಿಮಾನಂಗೊ10 -12 ಕಿ.ಮೀ, ಎತರಕ್ಕೆ ಘಂಟೆಗೆ ಸಾಧಾರಣ 600 ರಿಂದ 800 ಕಿ.ಮೀ ಸ್ಪೀಡಿಲ್ಲಿ   ಜನಂಗಳನ್ನೂ, ಟನ್ ಗಟ್ಲೆ  ಸಾಮಾನುಗಳನ್ನೂ ಸಾಗುಸೆಕ್ಕಾದರೆ ಎಷ್ಟು ಶಕ್ತಿ ಬೇಕು ಅಲ್ಲದ ಅದಕ್ಕೆ? ಅಂಬಗ ಅದಕ್ಕೆ ಹೇಂಗಿಪ್ಪ ಇಂಧನ ಬೇಕು?. ಇದಕ್ಕೆ ಉಪಯೋಗಿಸುವದು ಶುಧ್ಧೀಕರಿಸಿದ ಚಿಮಿಣಿ ಎಣ್ಣೆಯೇ. ಹಾಂಗೆ ಹೇಳಿಗೊಂಡು ಚಿಮಿಣಿ ಎಣ್ಣೆ ಹಾಕಿ ಹಾರುಸಲೆ ಎಡಿಯ. ರಿಫೈನರಿಲಿ ಸಿಕ್ಕಿದ ಚಿಮಿಣಿ ಎಣ್ಣೆಯ ಅಲ್ಲಿಯೇ ಬೇರೆ ರೀತಿ ಸಂಸ್ಕರಿಸಿ, ಕೆಲವು additives ಗಳ ಹಾಕಿ, ಏವಿಯೇಷನ್ ಟರ್ಬೈನ್ ಫುಯೆಲ್ (Aviation Turbine Fuel-ATF-Jet A1) ಹೇಳುವ ಈ ಇಂಧನವ ತಯಾರು ಮಾಡುತ್ತವು.

ಡೀಸೆಲ್ ನ ನಂಬಿಗೊಂಡು ಇಂದು ಹಲವಾರು ವಾಹನಂಗೊ ಓಡಾಡುತ್ತ ಇದ್ದು. ಬಸ್, ಕಾರ್, ರೈಲ್, ನೀರು ಎತ್ತುವ ದೊಡ್ಡ ದೊಡ್ಡ ಎಂಜಿನ್, ಕರೆಂಟ್ ಉತ್ಪಾದಿಸುವ ದೊಡ್ಡ ದೊಡ್ಡ ಜೆನೆರೇಟರ್ ಗೊ ಇದಕ್ಕೆಲ್ಲಾ ಡೀಸೆಲ್ ಬೇಕೇ ಬೇಕು. ಇದು ಕೂಡ ರಿಫೈನರಿಲಿ ಕ್ರೂಡ್ ಎಣ್ಣೆಂದ ತೆಗವ ಒಂದು ಇಂಧನ. ಇದಕ್ಕೆ High Speed Diesel-Gas oil ಹೇಳಿ ಕೂಡಾ ಹೆಸರು ಇದ್ದು. ಪೆಟ್ರೋಲ್ ಬಂಕ್ ಗಳಲ್ಲಿ ಸಿಕ್ಕುವ ಈ ಇಂಧನಕ್ಕೆ ರಜ ಹಳದಿ ಮಿಶ್ರ ಕಂದು ಬಣ್ಣ ಅದರದ್ದೇ ಆಗಿ ಇದ್ದು.

ರೆಫೈನರಿಯ  ಇನ್ನೊಂದು ಉತ್ಪಾದನೆ, ಫೂಯೆಲ್ ಆಯಿಲ್ (Fuel Oil-FO). ಇದು ಕಾಂಬಗ ಕಪ್ಪು ಬಣ್ಣ, ರಜ ಹೆಚ್ಚು ದಪ್ಪ ಇಪ್ಪ ಎಣ್ಣೆ. ಮಾರ್ಕೆಟಿಲ್ಲಿ ಬಂಕಿಲ್ಲಿ ಸಿಕ್ಕುತ್ತಿಲ್ಲೆ ಮಾತ್ರ ಅಲ್ಲದ್ದೆ ನವಗೆ ಸಾಧಾರಣ ಉಪಯೋಗಕ್ಕೆ ಬೇಕಾವುತ್ತಿಲ್ಲೆ. ಕಾರ್ಖಾನೆಗಳಲ್ಲಿ, ಕರೆಂಟ್ ಉತ್ಪಾದುಸಲೆ ಬಾಯ್ಲರ್ ಉಪಯೋಗುಸುತ್ತವು. ಅಲ್ಲಿ ಉಗಿ (steam) ತಯಾರು ಮಾಡಲೆ ಇದರ ಉಪಯೋಗ ಆವುತ್ತು. ಶಾಖ ಉತ್ಪಾದನೆ ಮಾಡುವಲ್ಲಿ ಒಂದು ಇಂಧನ ವಾಗಿ ಉಪಯೋಗ ಆವುತ್ತು. ಬೇರೆ ಬೇರೆ ಉಪಯೋಗಕ್ಕೆ ಬೇರೆ ಬೇರೆ ಗ್ರೇಡ್ ತಯಾರು ಮಾಡುತ್ತವು.

ನಮ್ಮ ಮಾರ್ಗಂಗೊಕ್ಕೆ ಹಾಕುವ ಡಾಮರೂದೆ (Bitumen) ರಿಫೈನರಿಂದಲೇ ಬಪ್ಪದು. ಇದರಲ್ಲಿ ಬೇರೆ ಬೇರೆ ಗ್ರೇಡ್ ಇದ್ದು. ವಿಮಾನದ ರನ್ ವೇಗೆ ಉಪಯೋಗಿಸುವದರ ಹೈ ವೇಗೆ ಹಾಕಲೆ ಆವುತ್ತಿಲ್ಲೆ. ಹಾಂಗೇ ಒಳಾಣ ಸಣ್ಣ ಸಣ್ಣ ಮಾರ್ಗಂಗೊಕ್ಕೆ ಬೇರೆ, ಟೇರೇಸ್ ನ ಸೋರುವುದರ ನಿಲ್ಲುಸಲೆ ಹಾಕುವದು ಬೇರೆ ನಮೂನೆದು. ಉಪಯೋಗವ ಹೊಂದಿಗೊಂಡು ಗ್ರೇಡ್ ತಯಾರು ಮಾಡುವದು.

ಈ ಕಚ್ಚಾ  ಎಣ್ಣೆಲಿ ಸಲ್ಫರ್ (Sulphur-ಗಂಧಕ) ಹೇಳುವ ಒಂದು ಬೇಡದ್ದ ಅಂಶ ಇದ್ದು. ಇದು ನಮ್ಮ ಇಂಧನಂಗಳಲ್ಲಿ ಕಮ್ಮಿ ಇದ್ದಷ್ಟು ಒಳ್ಳೆದು. ಈ ಸಲ್ಫರ್ ನ ಬೇರ್ಪಡಿಸಿ ಅದರ ಕೂಡ ಕೈಗಾರಿಕೆಗಳಲ್ಲಿ ಉಪಯೋಗಿಸುತ್ತವು. ಗಂಧಕಾಮ್ಲ (Sulphuric Acid) ತಯಾರುಸಲೆ, ಕೆಲವೊಂದು ಮದ್ದುಗಳ (Sulpha Drugs) ತಯಾರುಸಲೆ ಇದರ ಉಪಯೋಗ ಆವುತ್ತು.

ನಾವು ಹೆಚ್ಚಾಗಿ ಉಪಯೋಗುಸುವ ಪೆಟ್ರೋಲ್ ಮತ್ತೆ ಡೀಸೆಲ್ ನ ತುಂಬುಸಲೆ ಪೆಟ್ರೋಲ್ ಬಂಕಿಂಗೆ ಹೋವುತ್ತಲ್ಲದ. ಅಲ್ಲಿ ನಾವು ಎಂತ ನೋಡೆಕ್ಕಾದ್ದು ಹೇಳಿ ತಿಳ್ಕೊಂಬ.

ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಕೂಡಾ, ಲೆಡ್ ರಹಿತ ಪೆಟ್ರೋಲೇ ಸಿಕ್ಕುವದು. ಲೆಡ್ ಹಾಕಲೆ  ಆಗ ಹೇಳಿ ನಿರ್ಬಂಧ ಇದ್ದು. ಮೊದಲಾಣ ಕಾಲಲ್ಲಿ, “ಓಕ್ಟೇನ್” ಕಮ್ಮಿ  ಇಪ್ಪ ಪೆಟ್ರೋಲ್ ನ ಸರಿ ಮಾಡಲೆ (ಜಾಸ್ತಿ ಮಾಡಲೆ) ಟೆಟ್ರಾ ಈಥೈಲ್ ಲೆಡ್ ನ ಸೇರಿಸಿಗೊಂಡು ಇತ್ತಿದ್ದವು. ಆದರೆ ಈಗ ಅದು ಇಲ್ಲೆ. ಅದು ಇಪ್ಪ ಪೆಟೋಲಿಂದ ವಾಯು ಮಾಲಿನ್ಯ ಆವುತ್ತು, ಮತ್ತೆ ಲೆಡ್ ನ ಅಂಶ ವಾತಾವರಣಲ್ಲಿ ಇದ್ದರೆ ಅದು ದೇಹಕ್ಕೆ ತುಂಬಾ ಹಾಳು ಹೇಳುವ ಕಾರಣಂದ ಈಗ ಅದು ನಿರ್ಬಂಧಿತ.

ಪೆಟ್ರೋಲ್  ಸರಿ ಇದ್ದೋ ಇಲ್ಲೆಯೋ ಹೇಳಿ ನೋಡೆಕ್ಕಾದರೆ, ಬಂಕಿಲ್ಲಿ ಫಿಲ್ಟರ್ ಪೇಪರ್ (Filter Paper) ಕೊಡುತ್ತವು. ಅದರಲ್ಲಿ 4 ಹನಿ ಪೆಟ್ರೋಲ್ ಹಾಕೆಕ್ಕು. ಹಾಕಿದ ಪೆಟ್ರೋಲ್ ಆವಿ ಆಗಿ ಕಾಗದಲ್ಲಿ ಯಾವುದೇ ಕಲೆ ಉಳಿಯದಿದ್ದರೆ, ಪೆಟ್ರೋಲ್ ಸರಿ ಇದ್ದು ಹೇಳೆ ಲೆಕ್ಕ. ಸಾಂದ್ರತೆ ಅಳವಲೆ ಬೇಕಾದ ಹೈಡ್ರೋಮೀಟರ್ ಮತ್ತೆ ಅದಕ್ಕೆ ಬೇಕಾದ ಪಾತ್ರೆ (Measuring Cylinder ) ಎಲ್ಲಾ ಬಂಕ್ ಗಳಲ್ಲಿಯೂ ಇರೆಕು. ಪ್ರತಿಯೊಂದು ಟ್ಯಾಂಕರಿಂದ (tanker) ಬಪ್ಪ ಪೆಟ್ರೋಲ್ ಅಥವಾ ಡೀಸೆಲ್ ನೊಟ್ಟಿಂಗೆ ಅದರ ಗುಣದ ಪ್ರಮಾಣ ಪತ್ರ (Quality Certificate) ಇರುತ್ತು. ನವಗೆ ಬೇಕಾದರೆ ಅವು ಅದರ ತೋರುಸೆಕ್ಕು ಮತ್ತೆ ನಮ್ಮ ಎದುರು ಸಾಂದ್ರತೆಯ ಅಳದು ತೋರುಸೆಕ್ಕು. ಅಷ್ಟು ಮಾತ್ರ ಅಲ್ಲದ್ದೆ ನವಗೆ ತುಂಬುಸುವ ಪ್ರಮಾಣ ಸರಿ ಇದ್ದೋ ಹೇಳಿ ನೋಡಲೆ ಅಲ್ಲಿ 5 ಲೀಟರ್ ನ ಅಳತೆ ಪಾತ್ರ (ಮಾಪನ ವಿಭಾಗದ ಸರ್ಟಿಫಿಕೇಟ್ ಇಪ್ಪ ಅಳತೆ ಪಾತ್ರ) ಕೂಡ ಇರೆಕು. ನಾವು ಕೇಳಿದರೆ ಅವು ಪಂಪಿಂದ 5 ಲೀಟರ್ ಪಂಪ್ ಮಾಡಿ ಆ ಪಾತ್ರೆಗೆ ಹಾಕಿ ಸರಿ ಇದ್ದು ಹೇಳಿ ಕೂಡ ತೋರುಸೆಕ್ಕೆ. ಇದೆಲ್ಲಾ ನಾವು ಕೇಳಲೆ ಅಕ್ಕಾದ್ದು ಮತ್ತೆ ಅವರ ಹತ್ರ ಇಪ್ಪಲೇ ಬೇಕಾದ್ದು.

ಯಾವಾಗಲೂ ಉದಿಯಪ್ಪಗ, ತಂಪಿನ ವಾತಾವರಣ ಇಪ್ಪಗ ಪೆಟ್ರೋಲ್ ಅಥವಾ ಡೀಸೆಲ್ ತುಂಬುಸುವದು ಒಳ್ಳೆದು. ಬಿಸಿ ಏರಿ ಅಪ್ಪಗ ಈ ಇಂಧನಂಗೊಕ್ಕೆ ಹಿಗ್ಗುವ ಗುಣ ಇದ್ದು. ವಾತಾವರಣದ ಉಷ್ಣತೆ ಸಾಧಾರಣ 6  ಡಿಗ್ರಿಯಷ್ಟು ಜಾಸ್ತಿ ಆದರೆ (ಉದಿಯಪ್ಪಗ ಮತ್ತೆ ಮಧ್ಯಾಹ್ನ ಅಷ್ಟು ವ್ಯತ್ಯಾಸ ಇರುತ್ತು)  ಪ್ರಮಾಣಲ್ಲಿ 0.8% ನಷ್ಟು ಏರಿಕೆ ಆವುತ್ತು. (ಉದಿಯಪ್ಪಗ 1 ಲೀಟರ್ ಇಪ್ಪದು ಹಿಗ್ಗಿ ಮಧ್ಯಾನ್ಹ ಅಪ್ಪಗ 1.008 ಲೀಟರ್ ನಷ್ಟು ಆವುತ್ತು)

ಈಗಾಣ ವಾಹನಂಗಳಲ್ಲಿ, Bharat II/Bharat III ಹೇಳಿ ನಿಂಗೊ ನೋಡಿಪ್ಪಿ. ವಾಹನದ ಹೊಗೆಲಿ ವಾಯು ಮಾಲಿನ್ಯ ಅಪ್ಪ ಹಾಂಗಿಪ್ಪ ಕೆಲವು ಅಂಷಂಗೊ ಇದ್ದು (ಮುಖ್ಯವಾಗಿ CO, Hydrocarbon). ಇದರ ಪ್ರಮಾಣ ಇಂತಿಷ್ಟೇ ಇಪ್ಪಲೆ ಅಕ್ಕು ಹೇಳಿ ಕಾನೂನು ಇದ್ದು. Bharat III ವಾಹನಲ್ಲಿ ಅಪ್ಪ ವಾಯು ಮಾಲಿನ್ಯ Bharat II ವಾಹನಲ್ಲಿ ಅಪ್ಪ ವಾಯು ಮಾಲಿನ್ಯಕ್ಕಿಂತ ಕಡಿಮೆ. ಎಂಜಿನ್ ಕೂಡಾ ಅದಕ್ಕೆ ಸರಿಯಾಗಿ ಡಿಸೈನ್ ಮಾಡಿರುತ್ತವು. ಅದಕ್ಕೆ ಸರಿಯಾದ ಇಂಧನವೂದೆ ಅಗತ್ಯ ಮತ್ತೆ ಇಂಧನದ ಗುಣಲ್ಲಿ ಅದಕ್ಕೆ ಬೇಕಾದ ಮಾರ್ಪಾಡು ಮಾಡುತ್ತವು.

ಎಲ್ಲಾ ಇಂಧನದ  ಗುಣ ಮಟ್ಟವ, ರಿಫೈನರಿಂದ ಹೆರ ಕಳುಸುವಗ, ಅವರ ಪ್ರಯೋಗ ಶಾಲೆಲಿ ಪರೀಕ್ಷಿಸಿ ನೋಡಿ, ಪ್ರಮಾಣ ಪತ್ರ ಕೊಟ್ಟೇ ಕಳುಸುವದು. ಪ್ರಮಾಣ ಪತ್ರ ಇಲ್ಲದ್ದೆ ಯಾವುದೇ ಇಂಧನಂಗೊ ರಿಫೈನರಿಂದ ಹೆರ ಕಳುಸುವ ಹಾಂಗೆ ಇಲ್ಲೆ ಮಾತ್ರ ಅಲ್ಲದ್ದೆ ಅದು ಇಲ್ಲದ್ದೆ ಯಾವುದೇ ಕಂಪನಿಯವು (marketing company-HPCL,IOCL,BPCL,SHELL ಇತ್ಯಾದಿ) ಉತ್ಪನ್ನಂಗಳ ತೆಕ್ಕೊಳ್ತವಿಲ್ಲೆ. ಪ್ರತಿಯೊಂದು ಇಂಧನದ ಗುಣ ಮಟ್ಟ ಯಾವ ರೀತಿ ಇರೆಕ್ಕು ಹೇಳಿ ನಿಶ್ಚಯ ಮಾಡುವದು ಬ್ಯೂರೋ ಆಫ್ ಇಂಡಿಯನ್ ಸ್ಟೇಂಡಾರ್ಡ್ (BIS) ಹೇಳುವ ಸರಕಾರಿ ಸಂಸ್ಥೆ. ಒಂದೊಂದು ಇಂಧನಕ್ಕೆ, ಅದರ ಉಪಯೋಗ ಹೊಂದಿಗೊಂಡು ಒಂದೊಂದು ಸ್ಟೇಂಡಾರ್ಡ್ ಇರುತ್ತು.

ಇಷ್ಟೆಲ್ಲ  ಇದ್ದರೂ ಕೂಡ, ಕಲ ಬೆರಕೆ ಇಂಧನ ಮಾರಾಟ ಆವುತ್ತಾ ಇದ್ದು. ಜನಂಗೊ ಹೆರ ಕಮ್ಮಿಗೆ ಸಿಕ್ಕುತ್ತು ಹೇಳಿ ಪೆಟ್ರೋಲ್ ಡೀಸೆಲ್ ತೆಕ್ಕೊಳ್ತವು. ಇದರಿಂದಾಗಿ ಎಂಜಿನಿಂಗೆ ಹಾಳು ಮಾತ್ರ ಅಲ್ಲದ್ದೆ ಸರ್ಕಾರಕ್ಕೆ ಸಿಕುವ ಸುಂಕಲ್ಲಿ ಕೂಡಾ ಖೋತಾ. ಕಲಬೆರಕೆ ನವಗೆ ಸುಲಾಭಲ್ಲಿ ಕಂಡು ಹಿಡಿವಲೆ ಎಡಿತ್ತಿಲ್ಲೆ. ಅದಕ್ಕೆ ಎಲ್ಲಾ ಅನುಕೂಲಂಗೊ ಇಪ್ಪ ಪ್ರಯೋಗ ಶಾಲೆ ಬೇಕು.

MRPL (Mangalore Refinery and Petrochemicals) ಕಂಪೆನಿಲಿ ಈ ಎಲ್ಲಾ ಇಂಧನಂಗಳ ಗುಣ ಮಟ್ಟವ ಪರೀಕ್ಷೆ ಮಾಡಿ ನೋಡಲೆ ಹೇಳಿ ದೊಡ್ಡ ಪ್ರಯೋಗ ಶಾಲೆ (Quality Control Laboratory) ಇದ್ದು, ಈ ಪ್ರಯೋಗ ಶಾಲೆಗೆ ISO 17025 (National Accreditation Board for Testing and Calibration Laboratories-NABL) ಮಾನ್ಯತೆ ಇದ್ದು. ಇಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ಜನಂಗೊ ಇದಕ್ಕಾಗಿ ಹಗಲೂ ಇರುಳೂ ಕೆಲಸ ಮಾಡುತ್ತ ಇದ್ದವು. ಇದಕ್ಕೆ ಬೇಕಾದ ಉಪಕರಣಂಗೊಕ್ಕೆ ಬೇಕಾಗಿ ಕಂಪನಿ ಸುಮಾರು 20 ಕೋಟಿಂದಲೂ ಹೆಚ್ಚು ಖರ್ಚು ಮಾಡಿದ್ದು. ಎಲ್ಲಾ ತರದ ಅಟೋಮಾಟಿಕ್ ಉಪಕರಣಂಗಳ (Instruments) ಹೆರ ದೇಶಂದ ಆಮದು ಮಾಡಿದ್ದವು.
ಗುಣ ಮಟ್ಟಲ್ಲಿ ಯಾವುದೇ ರಾಜಿ ಇಲ್ಲೆ ಹೇಳುವದೇ ಇಲ್ಲಿಯ ಧ್ಯೇಯ ವಾಕ್ಯ.

ಶುದ್ದ ಮಾಡುವ ಹಂತದ ಒಂದಷ್ಟು ಪಟಂಗೊ ಇಲ್ಲಿದ್ದು, ನೋಡಿ:


ಇನ್ನು ತಡ ಎಂತಕೆ. ಸರಿಯಾದ ಪೆಟ್ರೋಲ್/ಡೀಸೆಲ್ ನನ್ನೇ ಒಳ್ಳೆ ಬಂಕಿಂದ ತುಂಬಿಸಿ  ನಮ್ಮ ಪ್ರಯಾಣವ ಸುರು ಮಾಡುವ°. ವಾಹನವ ಯಾವಗಲೂ ಸುಸ್ಥಿತಿಲಿ ಇಪ್ಪ ಹಾಂಗೆ ನೋಡಿಗೊಂಬ°. ಆಗದ?
ಮತ್ತೆ ಎಂತಾದರೂ ಸಂಷಯ ಇದ್ದರೆ ಕೇಳಿದರೆ ಉತ್ತರ ಕೊಡುವ ಪ್ರಯತ್ನ ಮಾಡುವೆ.

ನಮಸ್ಕಾರ.

ಶರ್ಮಪ್ಪಚ್ಚಿ

   

You may also like...

11 Responses

 1. ಮಹೇಶ says:

  ಶರ್ಮಪ್ಪಚ್ಚಿ,
  ಹೊಸ ವಿಷಯವ ನಮ್ಮದೇ ಭಾಷೆಲ್ಲಿ ತಿಳ್ಕೊಂಬಲೆ ಎಷ್ಟು ಖುಷಿ ಆವುತ್ತು !!
  ಒಂದು ವೈಜ್ಞಾನಿಕ ವಿಷಯವ ನಮ್ಮ ಜೀವನಲ್ಲಿ ನಿತ್ಯ ಕಾಂಬ, ಉಪಯೋಗುಸುವ ವಿಷಯಂಗಳ ಉಲ್ಲೇಖಿಸಿ ಬರದರೆ ಸುಲಭಲ್ಲಿ ಅರ್ಥ ಆವುತ್ತು ಹೇಳ್ಳೆ ನಿಂಗಳ ಲೇಖನವೇ ದೃಷ್ಟಾಂತ. ಪಾಠ ಪುಸ್ತಕಲ್ಲಿ ಸೇರ್ಸಲಕ್ಕು 🙂

  ನಿಂಗೊ ಹೇಳಿದ ಆ ಪೆಟ್ರೋಲು ಬಂಕಿನ ವಿಷಯ ಜನ-ಜಾಗೃತಿ ಗೆ ತುಂಬಾ ಉಪಕಾರ ಅಕ್ಕು.

  ಬೇಂಕಿನ ವ್ಯವಹಾರ, ಕಾನೂನಿನ ತಿಳುವಳಿಕೆ, ಸರ್ಕಾರಿ ಆಫೀಸಿನ ಕೆಲಸ ಹೀಂಗಿಪ್ಪದೆಲ್ಲ ನಮ್ಮದೇ ಭಾಷೆಲ್ಲಿ/ಅರ್ಥ ಅಪ್ಪ ರೀತಿಲ್ಲಿ ತಿಳುಶುವ ಪ್ರಯತ್ನ ಆದರೆ ಊರಿಲ್ಲಿಪ್ಪವಕ್ಕೆ ಎಷ್ಟು ಉಪಕಾರ! ಅಲ್ಲದ?

  • ಶ್ರೀಕೃಷ್ಣ ಶರ್ಮ. ಹಳೆಮನೆ says:

   ಒಳ್ಳೆ ಅಭಿಪ್ರಾಯ ಕೊಟ್ಟದಕ್ಕೆ ಧನ್ಯವಾದಂಗೊ

 2. It shows your interest in developing the ideas with sociability and it’s concern , please keep it up.

  http://www.kodakkal.ning.com

 3. ಬೊಳುಂಬು ಗೋಪಾಲ ಮಾವ says:

  ಬಟ್ಟಿ ಇಳಿಸಿ ಪೆಟ್ರೋಲು ತೆಗೆವದರ ಬಗ್ಗೆ ಒಳ್ಳೆ ವಿವರಣಾತ್ಮಕ ಲೇಖನ, ಅದೂ ನಮ್ಮ ಭಾಶೆಲಿ ಒಳ್ಳೆ ಅರ್ಥ ಆವುತ್ತ ಹಾಂಗೆ ಸರಳವಾಗಿ ಬರದ್ದವು ಶರ್ಮಪ್ಪಚ್ಚಿ. ಸಾಮಾನ್ಯರಿಂಗೆ ಗೊಂತಿಲ್ಲದ್ದ ಹಲವು ವಿಷಯಂಗಳ ತಿಳುಸಿ ಕೊಟ್ಟಿದವು. ಲಾಯಾಕಾಯಿದು. ಪಟಂಗಳೂ ಪೂರಕವಾಗಿದ್ದು. ಧನ್ಯವಾದಂಗೊ.

 4. was an good informative article in gaining knoweldge

  KODAKKAL
  http://www.kodakkal.ning.com

 5. ಶಶಾಂಕ says:

  ಕಾಲೇಜ್ ಲಿ ಬಾಯಿಪಾಠ ಮಾಡಿದ ಕೆಲವು ವಿಷಯ ಈಗ ಅರ್ಥ ಆತು! ಅದಕ್ಕೆ ಹಿರಿಯೋರು ಹೇಳುದು ಮಾತೃಭಾಷೆಲಿ ಕಲ್ತರೆ ಒಳ್ಳೇದು. ಹಾಂಗೆ ನಮ್ಮ ಕಿಟ್ಟಣ್ಣ ಪೆಟ್ರೋಲ್ ಬಂಕಿಲಿ ಮೋಸ ಹೋದ ವಿಷಯ ಗೊಂತಿದ್ದ? ಕಿಟ್ಟಣ್ಣ ಮಾಮೋಲಾಗಿ ಕಾರಿ೦ಗೆ ೧೦೦೦ ರೂ ಕೊಟ್ಟು ಪೆಟ್ರೋಲ್ ಕೇಳಿದ. ಬಂಕ್ ಜನ “ಝೀರೋ ನೋಡಿ ಸಾರ್” ಹೇಳಿ ೨೦೦ ರೂ ಪೆಟ್ರೋಲ್ ತು0ಬ್ಸಿತ್ತು. ಕಿಟ್ಟಣ್ಣ “ಲೇ ಸಾವಿರ ಹಾಕಲ್ಲೆ” ಹೇಳಿ ಗದರಿಸಿದ. ಆ ಜನ “ಸಾರಿ ಸಾರ್, ಸರಿಯಾಗಿ ಕೇಳಿಸಲಿಲ್ಲ ಇನ್ನು ೮೦೦ ಹಾಕೋಣ” ಹೇಳಿ ಮೀಟ್ರಿಲಿ ೮೦೦ ವರೆಗೆ ತು0ಬ್ಸಿತ್ತು. ಕಿಟ್ಟಣ್ಣ ಮೀಸೆ ತಿರುಗಿಸಿಗೊಂದು ಬಂದ. ಇದೇ ರೀತಿ ೨ ಸರ್ತಿ ಆತು. ವಿಷಯ ಕಿಟ್ಟಣ್ಣ ಎಂಗಳ ಹತ್ತರೆ ಹೇಳಿದ. ಮತ್ತೆ ನೋಡುವಾಗ ಇದು ಸಾಮಾನ್ಯ. ಎಂಥ ಹೇಳಿದರೆ, ಮೀಟರು ೨೦೦ ರಲ್ಲಿ ನಿಂದ ಮೇಲೆ “ಝೀರೋ ನೋಡಿ ಸಾರ್” ಹೇಳುಲೇ ಇಲ್ಲೇ. ೨೦೦ ರಿಂದ ೮೦೦ ವರೆಗೆ ಬರೆ ೬೦೦ ರೇ ತು೦ಬ್ಸುದು. ಒಟ್ಟು ೮೦೦ ರೂಪೈದು. ೨೦೦ ರೂಪಾಯಿ ಗುಳುಂ. ಇಲ್ಲಿ ಎಂಥಕೆ ಹೇಳಿದೆ ಹೇಳಿದರೆ, ನಿಂಗ ಹೋಗಿ ಎನ್ನೋಬ್ಬಂಗೆ ಹೇಳುವಿ ಹೇಳಿ. ಹಾಂಗೆ ಎಷ್ಟು ಎಡಿತ್ತು ಅಷ್ಟು ಜನ ಜಾಗೃತಿ ಮೂಡ್ಸುವ ಹೇಳಿ.

 6. jaenugudu says:

  ಒಪ್ಪಣ್ಣಂಗೆ ಮದುವೆಅಡ. ಅಪ್ಪೊ?

 7. Prashanth says:

  ಒಳ್ಳೆ ಕೆಲಸ, ಸಾರ್ಥಕ ಆತು, ಇಷ್ಟೆಲ್ಲಾ ಬಂಘ ಬಂದು ಹವ್ಯಕ ಭಾಷೆಲ್ಲಿ ಬರದ್ದಕ್ಕೆ, ಬರಕ್ಕೊಂದೆ ಇರಿ,

  ಪ್ರಶಾಂತ ಕುವೈತ್

 8. sharma says:

  ningo mrpl li yava departmentili ippadu anu nungala kasaragod depot li ippadu.

 9. sharma says:

  ningo mrpl li yava departmentili ippadu anu ningala kasaragod depot li ippadu.

 10. ಗಣೇಶ says:

  ಶರ್ಮಣ್ಣ, ಭಾರೀ ಲಾಯ್ಕ ಆಯ್ದು ಬರದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *