ಮೋಹ-ಮುದ್ಗರಃ (ಭಜ ಗೋವಿಂದಮ್)

May 8, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 ಶ್ರೀ ಶಂಕರಾಚಾರ್ಯರ ಕೃತಿಗಳಲ್ಲಿ ಇದು ಅತ್ಯಂತ ಸಣ್ಣದಾದರೂ, ಇದು ಶ್ರೇಷ್ಠ ಕೃತಿ. ಗೀತೆಯ ಮಾಧುರ್ಯ ಇಪ್ಪ ಈ ಪದ್ಯಂಗಳಲ್ಲಿ ವೇದಾಂತದ ತತ್ವವ ಬಹು ಸರಳವಾಗಿ ಹೇಳಿ ಕೊಟ್ಟಿದವು. ಈ ಪದ್ಯಂಗಳ ಅಧ್ಯಯನ ಮಾಡಿರೆ, ಎಲ್ಲಾ ಮೋಹಂಗಳೂ ನಾಶ ಆವ್ತ ಕಾರಣ ಇದಕ್ಕೆ “ಮೋಹ ಮುದ್ಗರ” ಹೇಳಿಯೂ ಹೆಸರು ಇದ್ದು.

ಈ ಪದ್ಯಂಗಳ ರಚನೆಯ ಹಿನ್ನೆಲೆ ಆಗಿ ಒಂದು ಕತೆ ಇದ್ದು.
ಶ್ರೀ ಶಂಕರಾಚಾರ್ಯರು ಒಂದು ಸರ್ತಿ ತನ್ನ ಹದಿನಾಲ್ಕು ಜೆನ ಶಿಷ್ಯರೊಟ್ಟಿಂಗೆ ಕಾಶಿಗೆ ಹೋವ್ತಾ ಇಪ್ಪಗ ದಾರಿ ಕರೇಲಿ ಒಬ್ಬ ವೃದ್ಧ ಪಂಡಿತ ವ್ಯಾಕರಣಂಗಳ ಅಭ್ಯಾಸ ಮಾಡ್ತಾ ಇತ್ತಿದ್ದಡ. ಅತ್ಮ ಜ್ಞಾನವ ತಿಳಿಯದ್ದೆ,ಈ ರೀತಿ ಬೌದ್ಧಿಕ ಶ್ರಮ ಪಡುವದರ ಕಂಡಪ್ಪಗ ರಚನೆಯಾದ ಮೊದಲಾಣ ಸಾಲು “ಭಜ ಗೋವಿಂದಂ….. ನಹಿ ನಹಿ ರಕ್ಷತಿ ಡುಕೃಙ್ಕರಣೇ ಹೇಳುವದು.
ಈ ಪಲ್ಲವಿ ಆದ ನಂತರದ ೧೨ ಪದ್ಯಂಗಳ ಶ್ರೀ ಶಂಕರಾಚಾರ್ಯರು ಸ್ವತಹ ರಚಿಸಿತ್ತಿದ್ದವು. ಆ ನಂತರ ಅವರ ೧೪ ಶಿಷ್ಯರು ಒಂದೊಂದು ಪದ್ಯವ ರಚಿಸಿದವಡ. ಈ ಹದಿನಾಲ್ಕು ಪದ್ಯಂಗಳ ಕೇಳಿದ ಶಂಕರಾಚಾರ್ಯರು ಅಕೇರಿಗೆ ನಾಲ್ಕು ಪದ್ಯ ಕೊಟ್ಟು ಆಶೀರ್ವಾದ ಮಾಡಿದವು.

ಹಾಂಗಾಗಿ ಸುರುವಾಣ ಹನ್ನೆರಡು ಪದ್ಯಂಗೊಕ್ಕೆ “ ದ್ವಾದಶ ಮಂಜರಿ ಸ್ತೋತ್ರ” ಹೇಳಿಯೂ, ಒಟ್ಟು ಮೂವತ್ತೊಂದು ಪದ್ಯಂಗಳ ಸಮೂಹಕ್ಕೆ “ಮೋಹ ಮುದ್ಗರ” ಹೇಳಿಯೂ ಹೇಳುವದು ರೂಢಿ.

ಭಜ ಗೋವಿಂದಂ- ಇದರಲ್ಲಿ ಅತ್ಮಜ್ಞಾನವ ಹೇಂಗೆ ಪಡಕ್ಕೊಳೆಕ್ಕು, ಮನುಷ್ಯನ ಜೀವನಲ್ಲಿ ದುಃಖಕ್ಕೆ ಮೂಲಕಾರಣ ಎಂತರ ಹೇಳುವದರ ವಿವರುಸುತ್ತವು.  ಜೀವನಲ್ಲಿ ನಾವು ಹೋಯೆಕ್ಕಾದ ಮಾರ್ಗ ಯಾವದು, ನಮ್ಮ ಗುರಿ ಯಾವುದು ಅಗಿರೆಕ್ಕು ಹೇಳಿ ತಿಳುಶುತ್ತು. ನಾವು ಜೀವನಲ್ಲಿ ಎಲ್ಲಿ ದಾರಿ ತಪ್ಪುತ್ತಾ ಇದ್ದು ಹೇಳಿ ತೋರಿಸಿಕೊಡುತ್ತಲ್ಲದ್ದೆ, ಇದೇ ರೀತಿ ಕಾಮ ಮತ್ತೆ ಮೋಹಕ್ಕಾಗಿ ಜೀವಿಸಿರೆ ಮುಂದೆ ಎಷ್ಟು ಭೀಕರ ಪರಿಣಾಮ ಎದುರುಸೆಕ್ಕಾವ್ತು ಹೇಳುವದನ್ನೂ ತಿಳುಶುತ್ತು.

ಶ್ರೀಮತಿ ಸುಬ್ಬು ಲಕ್ಷ್ಮಿ ಇವು ಇದರ ಅತ್ಯಂತ ಶ್ರದ್ಧಾ ಭಕ್ತಿಂದ ಹಾಡುವದರ ಕೇಳಲೆ ತುಂಬಾ ಕೊಶಿ ಅವ್ತು

~~~

ಭಜ ಗೋವಿಂದಂ ಭಜ ಗೋವಿಂದಂ

ಆದಿಶಂಕರಾಚಾರ್ಯರು

ಗೋವಿಂದಂ ಭಜ ಮೂಢಮತೇ|

ಸಂಪ್ರಾಪ್ತೇ ಸನ್ನಿಹಿತೇ ಕಾಲೇ

ನಹಿ ನಹಿ ರಕ್ಷತಿ ಡುಕೃಙ್ಕರಣೇ || ೧||

ಮೂಢ ಜಹೀಹಿ ಧನಾಗಮ ತೃಷ್ಣಾಮ್

ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್|

ಯಲ್ಲಭಸೇ ನಿಜ ಕರ್ಮೋಪಾತ್ತಂ

ವಿತಂ ತೇನ ವಿನೋದಮಯ ಚಿತ್ತಮ್||೨||

ನಾರೀ ಸ್ತನಭರ ನಾಭೀದೇಶಂ

ದೃಷ್ಟ್ವಾಮಾಗಾ ಮೋಹಾವೇಶಮ್|

ಏತನ್ಮಾಂಸವಸಾದಿ ವಿಕಾರಂ

ಮನಸಿ ವಿಚಿಂತಯ ವಾರಂ ವಾರಮ್ ||೩||

ನಲಿನೀದಲಗತ ಜಲಮತಿ ತರಲಂ

ತದ್ವಜ್ಜೀವಿತಮತಿಶಯ ಚಪಲಮ್|

ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ

ಲೋಕಂ ಶೋಕಹತಂ ಚ ಸಮಸ್ತಮ್ ||೪||

ಯಾವದ್ವಿತ್ತೋಪಾರ್ಜನ ಸಕ್ತಃ

ತಾವನ್ನಿಜ ಪರಿವಾರೋ ರಕ್ತಃ|

ಪಶ್ಚಾಜ್ಜೀವತಿ ಜರ್ಜರ ದೇಹೇ

ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||೫||

ಯಾವತ್ಪವನೋ ನಿವಸತಿದೇಹೇ

ತಾವತ್ ಪೃಚ್ಛತಿ ಕುಶಲಂ ಗೇಹೇ|

ಗತವತಿ ವಾಯೌ ದೇಹಾಪಾಯೇ

ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ||೬||

ಬಾಲಸ್ತಾವತ್ ಕ್ರೀಡಾಸಕ್ತ-

ಸ್ತರುಣಸ್ತಾವತ್ ತರುಣೀಸಕ್ತಃ|

ವೃದ್ಧಸ್ತಾವತ್ ಚಿಂತಾಸಕ್ತಃ

ಪರಮೇ ಬ್ರಹ್ಮಣಿ ಕೋಪಿ ನ ಸಕ್ತಃ ||೭||

ಕಾಂತೇ ಕಾಂತೇ ಕಸ್ತೇ ಪುತ್ರಃ

ಸಂಸಾರೋsಯಮತೀವ ವಿಚಿತ್ರಃ|

ಕಸ್ಯ ತ್ವಂ ಕಃ ಕುತ ಆಯಾತಃ

ತತ್ತ್ವಂಚಿಂತಯ ತದಹಿ ಭ್ರಾತಃ ||೮||

ಸತ್ಸಂಗತ್ವೇ ನಿಸ್ಸಂಗತ್ವಂ

ನಿಸ್ಸಂಗತ್ವೇ ನಿರ್ಮೋಹತ್ವಮ್|

ನಿರ್ಮೋಹತ್ವೇ ನಿಶ್ಚಲತತ್ತ್ವಂ

ನಿಶ್ಚಲ ತತ್ತ್ವೇ ಜೀವನ್ಮುಕ್ತಿಃ ||೯||

ವಯಸಿ ಗತೇ ಕಃ ಕಾಮವಿಕಾರಃ

ಶುಷ್ಕೇ ನೀರೇ ಕಃ ಕಾಸಾರಃ|

ಕ್ಷೀಣೇ ವಿತ್ತೇ ಕಃ ಪರಿವಾರೋ

ಜ್ಞಾತೇ ತತ್ತ್ವೇ ಕಃ ಸಂಸಾರಃ ||೧೦||

ಮಾ ಕುರು ಧನಜನಯೌವನ ಗರ್ವಂ

ಹರತಿ ನಿಮೇಷಾತ್ ಕಾಲಃ ಸರ್ವಮ್|

ಮಾಯಾಮಯಮಿದಮಖಿಲಂ ಬುದ್ಧ್ವಾ

ಬ್ರಹ್ಮ ಪದಂ ತ್ವಂ ಪ್ರವಿಶ ವಿದಿತ್ವಾ||೧೧||

ದಿನ ಯಾಮಿನ್ಯೌ ಸಾಯಂ ಪ್ರಾತಃ

ಶಿಖಿರ ವಸಂತೌ ಪುನರಾಯಾತಃ|

ಕಾಲಃ ಕ್ರೀಡತಿ ಗಚ್ಛತ್ಯಾಯುಃ

ತದಪಿನ ಮುಂಚತ್ಯಾಶಾವಯುಃ ||೧೨||

ಕಾ ತೇ ಕಾಂತಾ ಧನಗತಚಿಂತಾ

ವಾತುಲ ಕಿಂ ತವ ನಾಸ್ತಿ ನಿಯಂತಾ|

ತ್ರಿಜಗತಿ ಸಜ್ಜನ ಸಂಗತಿರೇಕಾ

ಭವತಿ ಭವಾರ್ಣವ ತರಣೀ ನೌಕಾ ||೧೩||

ಜಟಿಲೋ ಮುಂಡೀ ಚುಂಚಿತ ಕೇಶಃ

ಕಾಷಾಯಾಂಬರ ಬಹುಕೃತ ವೇಷಃ|

ಪಶ್ಯನ್ನಪಿ ಚ ನ ಪಶ್ಯತಿ ಮೂಢೋ-

ಹ್ಯುದರ ನಿಮಿತ್ತಂ ಬಹುಕೃತ ವೇಷಃ ||೧೪||

ಅಂಗಂ ಗಲಿತಂ ಪಲಿತಂ ಮುಂಡಂ

ದಶನವಿಹೀನಂ ಜಾತಂ ತುಂಡಂ|

ವೃದ್ಧೋ ಯಾತಿ ಗೃಹೀತ್ವಾ ದಂಡಂ

ತದಪಿ ನ ಮುಂಚತಿ ಆಶಾಪಿಂಡಮ್||೧೫||

ಅಗ್ರೇ ವಹ್ನಿಃ ಪೃಷ್ಠೇ ಭಾನುಃ

ರಾತ್ರೌಚುಬುಕ ಸಮರ್ಪಿತ ಜಾನುಃ|

ಕರತಲ ಭಿಕ್ಷಸ್ತರುತಲವಾಸಃ

ತದಪಿ ನ ಮುಂಚತ್ಯಾಶಾಪಾಶಃ ||೧೬||

ಕುರುತೇ ಗಂಗಾ ಸಾಗರ ಗಮನಂ

ವ್ರತ ಪರಿಪಾಲನಮಥವಾ ದಾನಮ್|

ಜ್ಞಾನ ವಿಹೀನಃ ಸರ್ವಮತೇನ

ಭಜತಿ ನ ಮುಕ್ತಿಂ ಜನ್ಮಶತೇನ||೧೭||

ಸುರಮಂದಿರ ತರು ಮೂಲನಿವಾಸಃ

ಶಯ್ಯಾಭೂತಲಮಜಿನಂ ವಾಸಃ|

ಸರ್ವ ಪರಿಗ್ರಹ ಭೋಗತ್ಯಾಗಃ

ಕಸ್ಯ ಸುಖಂ ನ ಕರೋತಿ ವಿರಾಗಃ ||೧೮||

ಯೋಗರತೋ ವಾ ಭೋಗರತೋ ವಾ

ಸಂಗರತೋ ವಾ ಸಂಗವಿಹೀನಃ|

ಯಸ್ಯ ಬ್ರಹ್ಮಣಿ ರಮತೇಚಿತ್ತಂ

ನಂದತಿ ನಂದತಿ ನಂದತ್ಯೇವ ||೧೯||

ಭಗವದ್ಗೀತಾ ಕಿಂಚಿದಧೀತಾ

ಗಂಗಾಜಲಲವ ಕಣಿಕಾ ಪೀತಾ|

ಸಕೃದಪಿ ಯೇನ ಮುರಾರಿ ಸಮರ್ಚಾ

ಕ್ರಿಯತೇ ತಸ್ಯಯಮೇನ ನ ಚರ್ಚಾ ||೨೦||

ಪುನರಪಿ ಜನನಂ ಪುನರಪಿ ಮರಣಂ

ಪುನರಪಿ ಜನನೀ ಜಠರೇ ಶಯನಂ|

ಇಹ ಸಂಸಾರೇ ಬಲು ದುಸ್ತಾರೇ

ಕೃಪಯಾಪಾರೇ ಪಾಹಿ ಮುರಾರೇ ||೨೧||

ರಥ್ಯಾಚರ್ಪಟ ವಿರಚಿತ ಕಂಥಃ

ಪುಣ್ಯಾಪುಣ್ಯ ವಿವರ್ಜಿತ ಪಂಥಃ|

ಯೋಗೀ ಯೋಗ ನಿಯೋಜಿತ ಚಿತ್ತೋ

ರಮತೇ ಬಾಲೋನ್ಮತ್ತವದೇವ ||೨೨||

ಕಸ್ತ್ವಂ ಕೋಹಂ ಕುತ ಆಯಾತಃ

ಕಾಮೇ ಜನನೀ ಕೋ ಮೇ ತಾತಃ|

ಇತಿ ಪರಿಭಾವಯ ಸರ್ವಮಸಾರಂ

ವಿಶ್ವಂ ಕೃತ್ವಾ ಸ್ವಪ್ನವಿಚಾರಮ್ ||೨೩||

ತ್ವಯಿಮಯಿ ಚಾನ್ಯತ್ರ್ಯಕೋ ವಿಷ್ಣುಃ

ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ|

ಭವ ಸಮಚಿತ್ತಃ ಸರ್ವತ್ರ ತ್ವಂ

ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್||೨೪||

ಶತ್ರೌ ಮಿತ್ರೇ ಪುತ್ರೇ ಬಂಧೌ

ಮಾಕುರು ಯತ್ನಂ ವಿಗ್ರಹ ಸಂಧೌ|

ಸರ್ವಸ್ಮಿನ್ನಪಿ ಪಶ್ಯಾತ್ಮಾನಂ

ಸರ್ವತ್ರೋತ್ಸೃಜ ಭೇದ ಜ್ಞಾನಮ್ ||೨೫||

ಕಾಮಂ ಕ್ರೋಧಂ ಲೋಭಂ ಮೋಹಂ

ತ್ಯಕ್ತ್ವಾತ್ಮಾನಂ ಪಶ್ಯತಿ ಸೋsಹಂ|

ಆತ್ಮಜ್ಞಾನವಿಹೀನಾ ಮೂಢಾಃ

ತೇ ಪಚ್ಯಂತೇ ನರಕ ನಿಗೂಢಾಃ ||೨೬||

ಗೇಯಂ ಗೀತಾ ನಾಮ ಸಹಸ್ರಂ

ಧ್ಯೇಯಂ ಶ್ರೀಪತಿ ರೂಪಮಜಸ್ರಮ್|

ನೇಯಂ ಸಜ್ಜನ ಸಂಗೇ ಚಿತ್ತಂ

ದೇಯಂ ದೀನಜನಾಯ ಚ ವಿತ್ತಮ್ ||೨೭||

ಸುಖತಃ ಕ್ರಿಯತೇ ರಾಮಾಭೋಗಃ

ಪಶ್ಚಾದ್ದಂತ ಶರೀರೇ ರೋಗಃ|

ಯದ್ಯಪಿ ಲೋಕೇ ಮರಣಂ ಶರಣಂ

ತದಪಿ ನ ಮುಂಚತಿ ಪಾಪಾಚರಣಮ್ ||೨೮||

ಅರ್ಥಮನರ್ಥಂ ಭಾವಯ ನಿತ್ಯಂ

ನಾಸ್ತಿತತಃ ಸುಖಲೇಶಃ ಸತ್ಯಮ್|

ಪುತ್ರಾದಪಿ ಧನಭಾಜಂ ಬೀತಿಃ

ಸರ್ವತ್ರೈಷಾ ವಿಹಿತಾ ರೀತಿಃ ||೨೯||

ಪ್ರಾಣಾಯಾಮಂ ಪ್ರತ್ಯಾಹಾರಂ

ನಿತ್ಯಾನಿತ್ಯ ವಿವೇಕ ವಿಚಾರಮ್|

ಜಾಪ್ಯ ಸಮೇತ ಸಮಾಧಿ ವಿಧಾನಂ

ಕುರ್ವವಧಾನಂ ಮಹದವಧಾನಮ್ ||೩೦||

ಗುರುಚರಣಾಂಬುಜ ನಿರ್ಭರ ಭಕ್ತಃ

ಸಂಸಾರಾದಚಿರಾದ್ಭವ ಮುಕ್ತಃ|

ಸೇಂದ್ರಿಯ ಮಾನಸ ನಿಯಮಾದೇವಂ

ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಮ್ ||೩೧||

||ಓಮ್ ತತ್ ಸತ್ ||

ಮಾಹಿತಿ- ಬೇರೆ ಬೇರೆ ಮೂಲಂಗಳಿಂದ
ಪಟ-ಇಂಟರ್ನೆಟ್ ಕೃಪೆ


ಮೋಹ-ಮುದ್ಗರಃ (ಭಜ ಗೋವಿಂದಮ್), 5.0 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  [Reply]

  VA:F [1.9.22_1171]
  Rating: 0 (from 0 votes)
 2. ಚುಬ್ಬಣ್ಣ
  ಚುಬ್ಬಣ್ಣ

  ಶರ್ಮಪ್ಪಚ್ಚಿ ಕೊಶಿಯಾತು ಇದರ ಓದಿ..
  ಧನ್ಯವಾದ ತಿಳುಶಿದಕ್ಕೆ,

  [Reply]

  VN:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ

  ಧನ್ಯವಾದ೦ಗೊ ಶರ್ಮಪ್ಪಚ್ಚಿ.

  ಸತ್ಸಂಗತ್ವೇ ಸಿಸ್ಸಂಗತ್ವಂ

  ಸಿಸ್ಸಂಗತ್ವೇ ನಿರ್ಮೋಹತ್ವಮ್|

  ಸಿಸ್ಸ೦ಗತ್ವ೦ ಹೇಳಿರೆ ಎ೦ತರ? ಅದು ನಿಃಸ೦ಗತ್ವ೦ ಹೇಳಿ ಆಯೆಕಾದ್ದದೋ? ಎನ್ನ ಸ೦ಶಯ ಪರಿಹರಿಸುವಿರಾ?

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ‘ನಿ’ ಆದ ಮತ್ತೆ ವಿಸರ್ಗ ಬಂದು ‘ಸ’ ಬತ್ತ ಕಾರಣ ಅಲ್ಲಿ ಹಾಂಗೆ ಉಛ್ಛಾರ ಮಾಡುವದು.
  ನಿಃಸಂಗತ್ವ= ನಿಸ್ಸಂಗತ್ವ
  ಅಭಿಪ್ರಾಯ ಬೇಧ ಇದ್ದಲ್ಲಿ ಬೈಲಿಲ್ಲಿ ವಿಮರ್ಶೆ ಮಾಡುವೊ

  [Reply]

  ಗಣೇಶ ಪೆರ್ವ

  ಗಣೇಶ Reply:

  ಹಾ೦ಗಲ್ಲ ಅಪ್ಪಚ್ಚಿ ಆನು ಹೇಳಿದ್ದದು..
  ನಿಸ್ಸ೦ಗತ್ವ ಆದರೆ ಸರಿ. ಆದರೆ ಮೇಲೆ ಓದಿಯಪ್ಪಗ ‘ನಿ’ಯ ಬದಲು ‘ಸಿ’ ಇದ್ದಲ್ಲದಾ? ಆದ ಕಾರಣ ಆನು ಕೇಳಿದ್ದ್ದದು. ಹಾ೦ಗೆ (ಸಿಸ್ಸ೦ಗತ್ವ) ಒ೦ದು ಶಬ್ದ ಇಪ್ಪಲೂ ಸಾಕು, ಎನಗೆ ಗೊ೦ತಿಲ್ಲದ್ದದು ಹೇಳಿ ಆನು ಗ್ರೇಶಿದ್ದದು.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಅದು ಎನ್ನ ಟೈಪಿಂಗ್ ಮಿಸ್ಟೇಕ್ ಅಷ್ಟೆ.

  ಗಣೇಶ ಪೆರ್ವ

  ಗಣೇಶ Reply:

  ಧನ್ಯವಾದ೦ಗೊ ಅಪ್ಪಚ್ಚಿ, ಈಗ ಸ೦ಶಯ ಪರಿಹಾರ ಆತು..

  VA:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಸರಿ ಮಾಡಿದೆ. ತಪ್ಪಿನ ತೋರಿಸಿ ಕೊಟ್ಟದಕ್ಕೆ ಧನ್ಯವಾದಂಗೊ

  VA:F [1.9.22_1171]
  Rating: 0 (from 0 votes)
 4. ಸುಭಗ
  ಸುಭಗ

  ಶರ್ಮಪ್ಪಚ್ಚಿ ಸಂಗ್ರಹಿಸಿ ಕೊಟ್ಟ ‘ಮೋಹ ಮುದ್ಗರ’ದ ಪೂರ್ಣ ಪಠ್ಯ. ಅದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಗಳ ಓದಿ ತುಂಬಾ ಕೊಶಿ ಆತು.

  ಗಣೇಶಣ್ಣ ಹೇಳಿದಹಾಂಗೆ ಇಪ್ಪ ‘ಟೈಪಿಂಗ್ ಮಿಸ್ಟೇಕ್’ಗೊ ಇನ್ನೂ ಒಂದೆರಡು ಇದ್ದೋ ಹೇಳಿ ಎನ್ನ ಅನುಮಾನ..
  ಮೂರನೇ ಶ್ಲೋಕದ ಸುರೂವಾಣ ಸಾಲು ‘ನಾಭೀಸ್ತನ ಭರ ನಾಭೀದೇಶಂ’ ಇಪ್ಪದು ‘ನಾರೀ ಸ್ತನಭರ ನಾಭೀದೇಶಂ’ ಆಗೆಡದೊ?
  ಇಪ್ಪತ್ತಒಂದನೇ ಶ್ಲೋಕಲ್ಲಿ ‘ಇಹ ಸಂಹಾರೇ’ ಇಪ್ಪದು ‘ಇಹ ಸಂಸಾರೇ’ ಆಯೆಕ್ಕು ಹೇಳಿ ಕಾಣ್ತು

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಸುಭಗರು ಹೇಳಿದ್ದು ಸರಿಯಾಗಿಯೆ ಇದ್ದು.
  ಎಷ್ಟು ನೋಡಿರೂ ಕಣ್ತಪ್ಪಿ ದೋಷಂಗೊ ಬಯಿಂದು. ಒಳ್ಳೆ ಉದ್ದೇಶಂದ ತಿಳಿಸಿದ್ದಕ್ಕೆ ಧನ್ಯವಾದಂಗೊ.
  ತಪ್ಪಿನ ಸರಿ ಪಡಿಸಿದ್ದೆ.

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  Gopalakrishna BHAT S.K.

  ಅಮ್ಮೆಂಬಳ ಶಂಕರ ನಾರಾಯಣ ನಾವಡರು ಇದರ ಕನ್ನಡಲ್ಲಿ ಪದ್ಯ ರೂಪಲ್ಲಿ ಬರೆದ್ದವು-ಎನಗೆ ಇಡೀ ಸಿಕ್ಕಿದ್ದಿಲ್ಲೆ.
  ಗೋವಿಂದನ ನೆನೆ,ಗೋವಿಂದನ ನೆನೆ ,
  ಗೋವಿಂದನ ನೆನೆ ಮತಿಹೀನ
  ಮೃತ್ಯುವು ಹತ್ತಿರವಾಗುವ ಕಾಲದಿ
  ರಕ್ಷಿಪುದಿಲ್ಲವು ವ್ಯಾಕರಣ
  ಮೂಢನೆ ನೀ ಬಿಡು ಧನಸಂಪಾದನೆ
  ಸನ್ಮತಿಯಿರಲೈ ನೀ ಬಿಡು ಕಾಮನೆ
  ಏನನು ಪಡೆವೆಯೊ ತನ್ನಯ ಕರ್ಮದಿ
  ಆ ಹಣದಿಂದಲೆ ಸುಖವಿರು ಚಿತ್ತದಿ
  ಹೀಂಗೆ ಇದ್ದು.
  ಶರ್ಮಣ್ಣ ಬರೆದ್ದು ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: +1 (from 1 vote)
 6. ಅಕ್ಷರ°
  ಅಕ್ಷರ ದಾಮ್ಲೆ

  ಒೞೆಯ ಪದ್ಯ………. ಎನಗೆ ತುಂಬಾ ಇಷ್ಟ……..

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಆತ್ಮಜ್ಞಾನವ ತಿಳಿವಲೆ ಉಪಾಸನೆಯೇ ಮಾರ್ಗ. ಉಪನಿಷದ್ವಾಙ್ಮಯಲ್ಲಿ ಮೂವತ್ತೆರಡು ಬಗೆಯ ವಿದ್ಯೆಗಳ ಹೇಳುತ್ತವು. ವಿದ್ಯೆ ಹೇಳಿರೆ ಉಪಾಸನೆಯ ಮಾಡುತ್ತ ರೀತಿಗೊ. ವಿದ್ಯೆಗೊ ಆತ್ಮವ ಅರಿವಲೆ ಸಹಕರುಸುತ್ತು.
  ಇಂದ್ರಿಯ ಜ್ಞಾನಂಗೊಕ್ಕೆ ಪ್ರತ್ಯಕ್ಷ ಪ್ರಮಾಣಂಗಳೇ ಆಧಾರವಾದರೆ ಆತ್ಮಜ್ಞಾನ ಪ್ರಮಾಣ-ಪ್ರಮೇಯಂಗಳ ವ್ಯಾಪಿಗೆ ಸಿಕ್ಕುತ್ತಿಲ್ಲೆ. (ಆತ್ಮಜ್ಞಾನ ಪ್ರಮಾಣ-ಪ್ರಮೇಯಂಗಳ ರೇಂಜಿಲಿ ಇಲ್ಲೆ.) ಆತ್ಮವ ಅರಿಯೆಕ್ಕಾದರೆ ಮನಸ್ಸು ಅಂತರ್ಮುಖವಾಗಿರೆಕ್ಕಡ. ಅದರ ತಪಸ್ಸಿನ ಮೂಲಕ ಸಾಧುಸುಲೆಡಿಗು. ತಪಸ್ಸಿಂದಾಗಿ ಮನಸ್ಸಿಲಿ ಏಕಾಗ್ರತೆ ಒದಗಿ ಸೃಜನಶೀಲವಾದ ಶಕ್ತಿ ಉದ್ದೀಪನಗೊಂಬದರ ಒಟ್ಟಿಂಗೆ ಮನಸ್ಸುದೇ ಸಂಸ್ಕಾರಗೊಳುತ್ತು. ಉಪಾಸನೆ ತಪಸ್ಸಿಂಗೆ ದಾರಿ, ತನ್ಮೂಲಕ ಆತ್ಮಜ್ಞಾನಕ್ಕೂ ಸಹಕಾರಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಒಪ್ಪಕ್ಕಅಕ್ಷರ°ಮಂಗ್ಳೂರ ಮಾಣಿಪುತ್ತೂರುಬಾವಕಜೆವಸಂತ°ನೆಗೆಗಾರ°ಅಜ್ಜಕಾನ ಭಾವವೇಣೂರಣ್ಣಹಳೆಮನೆ ಅಣ್ಣಶ್ಯಾಮಣ್ಣದೊಡ್ಡಭಾವಕೊಳಚ್ಚಿಪ್ಪು ಬಾವಜಯಗೌರಿ ಅಕ್ಕ°ಶಾಂತತ್ತೆಅಡ್ಕತ್ತಿಮಾರುಮಾವ°ಶೀಲಾಲಕ್ಷ್ಮೀ ಕಾಸರಗೋಡುಶ್ರೀಅಕ್ಕ°ದೊಡ್ಡಮಾವ°ದೇವಸ್ಯ ಮಾಣಿಶಾ...ರೀತೆಕ್ಕುಂಜ ಕುಮಾರ ಮಾವ°ವಿನಯ ಶಂಕರ, ಚೆಕ್ಕೆಮನೆಮುಳಿಯ ಭಾವಪೆಂಗಣ್ಣ°ಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ