Category: ಶರ್ಮಪ್ಪಚ್ಚಿ

ಮೋಹ-ಮುದ್ಗರಃ (ಭಜ ಗೋವಿಂದಮ್) 24

ಮೋಹ-ಮುದ್ಗರಃ (ಭಜ ಗೋವಿಂದಮ್)

ಭಜ ಗೋವಿಂದಂ ಭಜ ಗೋವಿಂದಂ

ಗೋವಿಂದಂ ಭಜ ಮೂಢಮತೇ|

ಯೇನಂಕೂಡ್ಲಿಲ್ಲಿ ಕೂಡಿದ ಬೈಲು 35

ಯೇನಂಕೂಡ್ಲಿಲ್ಲಿ ಕೂಡಿದ ಬೈಲು

ಬೈಲಿನ ಮಿಲನ ಸುದ್ದಿ ತಿಳಿವಲೆ ಶ್ರೀಶ ಮನೆಗೆ ಬಂದ. ಆನು ಬರೆತ್ತರ ಓದಲೆ ಸುರು ಮಾಡಿದ.
ಅಲ್ಲ ಅಪ್ಪಚ್ಚಿ, ಗುರಿಕ್ಕಾರ್ರು ಸುದ್ದಿ ಬರೆಯಿ ಹೇಳಿರೆ ನಿಂಗೊ ಪೋಲಿ ಕಟ್ಟುತ್ತಾ ಇದ್ದಿ ಅಲ್ಲದಾ, ಅಕ್ಷೇಪಿಸಿದ. ಅತ್ಮೀಯತೆ ಇಪ್ಪಲ್ಲಿ ರೆಜ ಸಲಿಗೆ ಜಾಸ್ತಿ ಅಲ್ಲದಾ
ಎಂತ ಮಾಡುವದು ಶ್ರೀಶ, ಮೂನ್ನೆಯ ಕಾರ್ಯಕ್ರಮ ಕಳುದ ಮತ್ತೆ ಒಂದು ಹತ್ತು ವರ್ಶ ಕಮ್ಮಿ ಆದ ಹಾಂಗೆ ಅನುಭವ ಆವ್ತಾ ಇದ್ದು. ಹಾಂಗೆ ರೆಜ ಪೋಲಿ ಕಟ್ಟಿದೆ. ಇನ್ನು ನೇರ್ಪಕೆ ಬರೆತ್ತೆ ಹೇಳಿದೆ.

ಸು-’ನಾಮ’ ಅಲ್ಲದ್ದ ಸುನಾಮಿ 21

ಸು-’ನಾಮ’ ಅಲ್ಲದ್ದ ಸುನಾಮಿ

ಸುನಾಮಿ (ತ್ಸುನಾಮಿ) ಹೇಳುವದು ಜಾಪಾನ್ ಶಬ್ದ. ಆ ಭಾಷೆಲಿ “ತ್ಸು” ಹೇಳಿರೆ ಬಂದರು, “ನಾಮಿ” ಹೇಳಿರೆ ಭಾರೀ ದೊಡ್ಡ ಅಲೆಗೊ, ಅಥವಾ “ತ್ಸುನಾಮಿ” ಹೇಳಿರೆ ಸಮುದ್ರಲ್ಲಿ ಬಪ್ಪ ದೊಡ್ಡ ಅಲೆಗಳ ಸಮೂಹ.
ಅಷ್ಟೊಂದು ಅಗಾಧ ಪ್ರಮಾಣಲ್ಲಿ ನೀರು ಕರಾವಳಿ ತೀರಕ್ಕೆ ಬಂದು ಅಪ್ಪಳುಸುವಾಗ, ಆ ನೀರಿನ ಶಕ್ತಿ, ಇಡೀ ಕರಾವಳಿಯನ್ನೇ ಅಲ್ಲೋಲ ಕಲ್ಲೋಲ ಮಾಡುತ್ತು. ತನ್ನ ದಾರಿಗೆ ಅಡ್ಡ ಬಂದವರ, ಎನ್ನ ಎದುರುಸುವವು ಅರೂ ಇಲ್ಲೆ ಹೇಳಿ, ಜಂಭಂದ ಕೊಚ್ಚಿಗೊಂಡು ಹೋವುತ್ತು.

ರುದ್ರ, ಚಮಕಾಧ್ಯಾಯ ಭಾಷ್ಯ. 11

ರುದ್ರ, ಚಮಕಾಧ್ಯಾಯ ಭಾಷ್ಯ.

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಂಕಲ್ಪ ಮತ್ತೆ ಪ್ರೇರಣೆಂದಾಗಿ ನಮ್ಮ ಸಮಾಜಲ್ಲಿ ರುದ್ರ ‘ಕ್ರಮ ಪಾಠ’ ಕಲಿತ್ತವರ ಸಂಖ್ಯೆ ಜಾಸ್ತಿ ಆವ್ತಾ ಇದ್ದು. ಉದ್ಯೋಗಲ್ಲಿ ಇಪ್ಪವು, ಡಾಕ್ಟ್ರಕ್ಕೊ, ಎಂಜಿನಿಯರ್ ಗೊ, ವಿದ್ಯಾರ್ಥಿಗೊ, ಸಮಾಜದ ವಿವಿಧ ಸ್ತರಲ್ಲಿ ಇಪ್ಪ ಬೇರೆ ಬೇರೆ...

ಒಪ್ಪಣ್ಣನ ಬೈಲಿಲ್ಲಿ ಒಂದು ಸ್ವಗತ… 37

ಒಪ್ಪಣ್ಣನ ಬೈಲಿಲ್ಲಿ ಒಂದು ಸ್ವಗತ…

ಹಾಂಗೆ ಮಾರ್ಚ್ 5 ರ ಒಂಭತ್ತು ಗಂಟೆಯ ಶುಭ ಗಳಿಗೆಲಿ ಮೊದಲಾಣ ಸೆಸಿ, ಬೈಲಿಲ್ಲಿ ನೆಟ್ಟು ಆತು. ಅದಕ್ಕೆ ನಮ್ಮ ನೆರೆಕರೆಯವು ಬಂದು ನೀರು ಗೊಬ್ಬರ ಹಾಕಿ ಪೋಚಕಾನ ಮಾಡಿದವು. ಇನ್ನೂದೆ ಸೆಸಿ ನೆಡ್ಲಕ್ಕು ಹೇಳಿ ಧೈರ್ಯ ಬಂತು.

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ 29

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ

ಲಘುನ್ಯಾಸ ಆಗಿ, ಏಕ ಸ್ವರಲ್ಲಿ ಸುರು ಮಾಡಿದೆಯೊ° “ಓಂ ನಮೋ ಭಗವತೇ ರುದ್ರಾಯ….”

ದೋಷಂಗಳ ಪರಿಹಾರ ಮಾಡುವ ಪ್ರದೋಷ ಪೂಜೆ 20

ದೋಷಂಗಳ ಪರಿಹಾರ ಮಾಡುವ ಪ್ರದೋಷ ಪೂಜೆ

ಪ್ರದೋಷ ಕಾಲ ಹೇಳಿರೆ ಸೂರ್ಯಾಸ್ತಂದ ಒಂದೂವರೆ ಗಂಟೆ ಮೊದಲು ಮತ್ತೆ ಸೂರ್ಯಾಸ್ತಂದ ನಂತರದ ಒಂದು ಗಂಟೆ ಸಮಯ.

ಶುದ್ಧ ನೀರು 58

ಶುದ್ಧ ನೀರು

ಪುಳ್ಳಿ ಮಾಣಿ (ಸೋದರ ಅಳಿಯನ ಮಗ) ಮನೆಗೆ ಬಂದೊಂಡು ಇರ್ತ. ಅವಂಗೆ ಎನ್ನ ಕೆಣಕುವದೆ ಹೇಳಿರೆ ಇಷ್ಟ. ಹಾಂಗೆ ಎನಗೂದೆ. ಪುಟ್ಟಂಗೆ ಎಂತ ಬೇಕು ಕೇಳಿರೆ “ಜೀಜಿ” ಹೇಳಿಂಡು ಇತ್ತಿದ್ದ ಎರಡು ವರ್ಷ ಮೊದಲು. ಈಗ 4 ವರ್ಷಕ್ಕೆ ಹತ್ರೆ ಆತು...

ಸರ್ವಂ ಪ್ಲಾಸ್ಟಿಕ್ ಮಯಂ 24

ಸರ್ವಂ ಪ್ಲಾಸ್ಟಿಕ್ ಮಯಂ

ಶಿಲಾಯುಗ ಮತ್ತೆ ಲೋಹ ಯುಗಂದ ನಂತ್ರ ನಾವು ಈಗ ಪ್ಲಾಸ್ಟಿಕ್ ಯುಗಲ್ಲಿ ಇದ್ದು. ಪ್ಲಾಸ್ಟಿಕ್ ಯಾವುದಕ್ಕೆಲ್ಲಾ ಉಪಯೋಗ ಆವುತ್ತು ಕೇಳಿರೆ ಯಾವುದಕ್ಕೆ ಉಪಯೋಗ ಇಲ್ಲೆ ಹೇಳಿ ಆಲೋಚನೆ ಮಾಡೆಕ್ಕಾದ ಪರಿಸ್ಥಿತಿಲಿ ಇದ್ದು ಇಂದು ನಾವು. ಆಸ್ಪತ್ರೆಗಳಲ್ಲಿ ಮಗು ಹುಟ್ಟಿ ಅಪ್ಪಗ ಮನುಗುಸಲೆ ಉಪಯೋಗಿಸುವ ಹಾಳೆ (sheet)೦ದ ಹಿಡುದು ಪ್ರತಿಯೊಂದು ಆವಶ್ಯಕತೆಗು ಕೂಡಾ ನಾವು ಪ್ಲಾಸ್ಟಿಕ್ ನ ಉಪಯೋಗ ಮಾಡುತ್ತು. ದಿನ ನಿತ್ಯದ ನಮ್ಮ ಬಳಕೆಗಳ ಪಟ್ಟಿ ಮಾಡಿರೆ, ಪ್ಲಾಸ್ಟಿಕ್ ಇಲ್ಲದ್ದ ಸಾಧನಂಗೊ ಬಹಳ ಕಮ್ಮಿ ಹೇಳಿಯೇ ಹೇಳ್ಲಕ್ಕು. ಮುಂದೊಂದು ದಿನ ನಮ್ಮ ಭೂಮಿಯ ಉತ್ಖನನ ಮಾಡಿರೆ ಬರೇ ಪ್ಲಾಸ್ಟಿಕ್ ಸಿಕ್ಕುಗಷ್ಟೆ..

ಗಾಳಿ ಮತ್ತೆ ಮಳೆಯ ಅಳವದು ಹೇಂಗೆ? 16

ಗಾಳಿ ಮತ್ತೆ ಮಳೆಯ ಅಳವದು ಹೇಂಗೆ?

ಕಾರ, ಆಟಿ, nಸೋಣೆ ತಿಂಗಳ ಮಳೆ ಹೇಳಿರೆ ಭಾರೀ ಜೋರು ಹೇಳಿಯೇ ಲೆಕ್ಕ. ಮನೆ ಒಳ ಕೂದೊಂಡು ಬೆಶಿ ಬೆಶಿ ಕಾಫಿ ಕುಡ್ಕೊಂಡು, ಹೊರುದ ಹಪ್ಪಳ, ಒಟ್ಟಿಂಗೆ ಕಾಯಿ ಹೋಳು ತಿಂದೊಂಡು ಇಪ್ಪಗ ಅದರ ಅಬ್ಬರ ನೋಡ್ಲೆ ಚೆಂದ. ಹೊಳೆ ಕರೇಲಿ ಮನೆಯೋ, ತೋಟವೋ ಇಪ್ಪವಕ್ಕೆ ತಲೆ ಬೆಶಿ ಆಗದ್ದೆ ಇರ. ಯಾವಾಗ ತೋಟ ಮುಳುಗುತ್ತೋ, ಮನೆ ಒಳಾಂಗೆ ನೀರು ಹರುದು ಬತ್ತೋ, ಒಟ್ಟಿಂಗೆ ಹರವದು ಬತ್ತೋ ಹೇಳಿ ಆತಂಕ ಆಗದ್ದೆ ಇರ. ಪೇಟೆಲಿ ಇಪ್ಪವಕ್ಕೆ ಮಾರ್ಗ ಯಾವುದು ತೋಡು ಯಾವುದು ಹೇಳಿ ಗೊಂತಾಗದ್ದ ಅವ್ಯವಸ್ಥೆ. ಹಳ್ಳಿದು ಪ್ರಾಕೃತಿಕ ಬೆಳ್ಳ ಆದರೆ ಪೇಟೆದು ನಾವೇ ಮಾಡಿಗೊಂಡದು.

ವಟ ಸಾವಿತ್ರೀ ವ್ರತ 7

ವಟ ಸಾವಿತ್ರೀ ವ್ರತ

ಒಪ್ಪಣ್ಣ ಹೇಳ್ತ ಹಾಂಗೆ ಈ ಜೆಂಬಾರಂಗಳ ಎಡೆಲಿ ಎಡಿಯಪ್ಪಾ ಎಡಿಯ.
ಸದ್ಯಕ್ಕೆ ಇನ್ನು ಯಾವುದೇ ಜೆಂಬಾರ ಇಲ್ಲೆ ಹೇಳಿ ಜಾನ್ಸಿರೆ, ಒಂದಲ್ಲ ಮೂರು ನಾಲ್ಕು ಒಟ್ಟಿಂಗೆ ಹೇಳಿಕೆ ಬಂದು ಕೂರುಗು. ಹೋಗದ್ದೆ ಗೊಂತಿದ್ದೋ?.
ಹೋದ ಮತ್ತೆ ಸುಮ್ಮನೆ ಕೂದು ಉಂಡಿಕ್ಕಿ ಬಪ್ಪದು ಮನಸ್ಸಿಂಗೆ ಹಿತ ಆವುತ್ತಿಲ್ಲೆ. ತಿಂದ ಉಪ್ಪಿನ ಋಣ ಆದರೂ ತೀರಿಸೆಕ್ಕಡ. ಹಸಿ ನೀರೋ, ಬೆಶಿ ನೀರೋ ಕೇಳುವದಾದರೆ ಸರ್ತಕ್ಕೆ ಒಂದರಿ ಹಂತಿಲಿ ಹೋಗಿಂಡು ಬಪ್ಪಲಕ್ಕು.
ಹೆಚ್ಚು ಬಗ್ಗುತ್ತ ಕೆಲಸ ಇಲ್ಲೆ. ಸಣ್ಣ ಸಣ್ಣ ಪಾತ್ರೆಗಳಲ್ಲಿ ತಾಳೋ, ಉಪ್ಪು, ಉಪ್ಪಿನ ಕಾಯಿಯೋ ಹಿಡ್ಕೊಂಡು ಹೆರಟರೂ ತೊಂದರೆ ಇಲ್ಲೆ. ಅದು ಬಿಟ್ಟು ಅಶನಕ್ಕೆ ಹಿಡಿವಲೆ ಹೆರಟರೆ ಮಾತ್ರ ಎನ್ನ ಹಾಂಗೆ ಬೆನ್ನು ಬಗ್ಗುಸಲೆ ಎಡಿಯದ್ದವಕ್ಕೆ ಬಙವೇ…

ಮಾವಿನ ಕಾಯಿ ಚಿತ್ರಾನ್ನ, ಹಸಿರು ಚಾಯ 19

ಮಾವಿನ ಕಾಯಿ ಚಿತ್ರಾನ್ನ, ಹಸಿರು ಚಾಯ

ಆದಿತ್ಯವಾರ ಪೇಪರಿಲ್ಲಿ ಜೋಶಿಯ “ಪರಾಗ ಸ್ಪರ್ಷ” ಓದಿಂಡು ಇಪ್ಪಗ ಎನ್ನ “ಶ್ರೀಶ” ಬಂದ.
ಆನೂ ಶ್ರೀಶನೂ ಹೆಚ್ಚಾಗಿ ಒಟ್ಟಿಂಗೆ ಇಪ್ಪದು. ನಮ್ಮ ಬೈಲಿಂಗೆ ಒಂದೆರಡಿ ಸರ್ತಿ ಬಂದು ಒಪ್ಪ ಕೊಟ್ಟಿಕ್ಕಿ ಹೋಯಿದ. ಆನೂ ಅವನೂ ಚೆಙಾಯಿಗೊ ಹೇಳ್ತಕ್ಕಿಂತಲೂ ಹೆಚ್ಚು ಆತ್ಮೀಯರು. ಎನ್ನ ಅವ “ಶರ್ಮ” ಹೇಳಿಯೇ ದೆನುಗೊಳಿರೆ ಆನು ಅವನ “ಶ್ರೀಶ” ಹೇಳಿಯೇ ದೆನಿಗೊಳುದು. ತುಂಬಾ ಹತ್ತರೆ ಆದ ಮತ್ತೆ ಸಂಬಂಧ ಹೇಳಿ ಹೇಳುದಕ್ಕಿಂತಲೂ ನಿಜ ಹೆಸರೋ ಅಡ್ಡ ಹೆಸರೋ ಹಿಡುದು ಮಾತಾಡ್ಸಿ ಹೋವ್ತಷ್ಟೆ ಅಲ್ಲದ. ಹಾಂಗೆ. ಒಂದೇ ಪ್ರಾಯದವು, ಒಟ್ಟಿಂಗೇ ಇಪ್ಪವು, ಒಂದೇ ಅಭಿರುಚಿಯವು. ಎಲ್ಲವುದೇ. ಇಲ್ಲೇ ಹತ್ರೆ ಮನೆ ಮಾಡಿಂಡು ಇದ್ದ.
ಎಂತ ಶ್ರೀಶ ಆಸರಿಂಗೆ ಬೇಕಾ ಕೇಳಿದೆ.

ಸಮಯ, ಚೈನ್, ಬ್ಲೇಡ್, ಮುಂಡಾಸು, ಟೊಪ್ಪಿ ಇತ್ಯಾದಿ… 5

ಸಮಯ, ಚೈನ್, ಬ್ಲೇಡ್, ಮುಂಡಾಸು, ಟೊಪ್ಪಿ ಇತ್ಯಾದಿ…

ಆನೆಯ ಕ್ರಯ ಮಾಡುವ ಬಗ್ಗೆ ಒಪ್ಪಣ್ಣಲ್ಲಿ ಒಂದು ಲೆಕ್ಕ ಕೊಟ್ಟಿ ಅಲ್ಲದಾ, ಅದರಲ್ಲಿ ಬಙ ಎಂತ ಇದ್ದು. Excell sheet ಲ್ಲಿ ಆನು ಒಂದೇ ನಿಮಿಷಲ್ಲಿ ಮಾಡಿ ಕೊಡುವೆ, ಶರ್ಮ ಮಾವ” ಹೇಳಿದ 2 ನೇ ವರ್ಷ PUC ಕಲಿವ ನೆರೆಕರೆ ಮಾಣಿ.

ಖಂಡಿತಾ ಎಡಿಗು ಮಾಣಿ, ದೊಡ್ಡ ಲೆಕ್ಕ ಎಂತ ಅಲ್ಲ ಅದು. ಲೆಕ್ಕ ಮಾಡ್ಲೆ ಹೇಳಿ ಅಪ್ಪಗ ನಿನಗೆ ಅದಕ್ಕೆ ಒಂದು ಉತ್ತರ ಸಿಕ್ಕೆಕ್ಕು ಹೇಳಿ ಕಾರ್ಯ ರೂಪಕ್ಕೆ ಇಳುಸಿದೆ. ಆದರೆ ನಾವು ಅದರ ನಮ್ಮ ಜೀವನಲ್ಲಿ ಹೇಂಗೆ ಅಳವಡುಸುತ್ತು ಹೇಳುವದರಲ್ಲಿ ಇಪ್ಪದು ಹೇಳಿದೆ.
ನೀನು ಈಗ II PUC ಲಿ ಕಲಿತ್ತಾ ಇಪ್ಪದಲ್ಲದ, ಮೊನ್ನೆ I PUC ಪರೀಕ್ಷೆಗೆ ಅಪ್ಪಗ ಇರುಳು ಇಡೀ ಕೂದೊಂಡು ಎಂತಕೆ ಓದಿದೆ? ಅಂದಂದ್ರಾಣದ್ದು ಅಂದಂದು ಕಲ್ತಿದ್ದರೆ ಈ ಬಙ ಬತ್ತಿತ್ತಾ? ಕೇಳಿದೆ.

ಕಣ್ಯಾರಲ್ಲಿ ಒಂದು ಸುತ್ತು.. 31

ಕಣ್ಯಾರಲ್ಲಿ ಒಂದು ಸುತ್ತು..

ಮೊನ್ನೆ ಶೇಡಿಗುಮ್ಮೆ ಭಾವ ಮನಗೆ ಬಂದಿತ್ತಿದ್ದ (ನಮ್ಮ ಬೈಲಿಂಗೆ ಗೊಂತಿಪ್ಪವ ಅಲ್ಲ).
ಎಂಗೊ ಇಬ್ರೂ, ಆನು ಹುಟ್ಟಿದಲ್ಲಿಂದ ಡಿಗ್ರಿ ಮುಗುಸುವವರೆಗೆ ಒಂದೇ ಮನೆಲಿ ಬೆಳದವು, ಒಟ್ಟಿಂಗೆ ಆಡಿದವು, ಓದಿದವು. ಒಂದೇ ಶಾಲೆ, ಒಂದೇ ಕ್ಲಾಸ್, ಒಂದೇ ಕಾಲೇಜ್, ಒಂದೇ ಹೋಸ್ಟೆಲ್, ಒಂದೇ ರೂಂ. ಸಣ್ಣ ಇಪ್ಪಗ ಸಣ್ಣ ಸಣ್ಣ ಜಗಳಂಗೊ ಮಾಡಿದ್ದಿಲ್ಲೆ ಹೇಳ್ಲೆ ಎಡಿಯ. ಎಲ್ಲಿಗೆ ಹೋವುತ್ತರೂ ಒಟ್ಟೊಟ್ಟಿಂಗೆ. ನಿಂಗೊ ಅಣ್ಣ ತಮ್ಮಂದಿರೋ? ಆರು ಅಣ್ಣ, ಆರು ತಮ್ಮ ಹೇಳಿ ಕೇಳಿದವು ಎಷ್ಟೋ ಜನಂಗೊ. ಅಷ್ಟೊಂದು ಅನ್ಯೋನ್ಯತೆ. ಪ್ರಾಯಲ್ಲಿ 5 ತಿಂಗಳಿಂಗೆ ಅವ ದೊಡ್ಡವ. ಎನ್ನ ಮಾವನ ಮಗನೇ ಅಲ್ಲದ. ರಜ ಸಾಮ್ಯತೆ ಇಲ್ಲದ್ದೆ ಇರ ಕಾಂಬವಕ್ಕೆ.

ಇನ್ನೊಂದು ಚೋದ್ಯ.. 17

ಇನ್ನೊಂದು ಚೋದ್ಯ..

ಒಬ್ಬ ಯಜಮಾನನ ಹತ್ರ ಒಂದು ಆನೆ ಇತ್ತಿದ್ದಡ. ಅವಂಗೆ ಪೈಸಗೆ ಅರ್ಜೆಂಟ್ ಆಗಿ ಅದರ ಮಾರುವ ಹೇಳಿ ನಿಜ ಮಾಡಿದ.
ಕ್ರಯ ಮಾಡ್ಲೆ ಬಂದ ಬ್ಯಾರಿ ಹತ್ರ ಇದಕ್ಕೆ 20 ಲಕ್ಷ ಕ್ಕಿಂತ ಕಮ್ಮಿಗೆ ಕೊಡ್ತಿಲ್ಲೆ ಹೇಳಿದ. ಹೇಂಗೂ ಕಚ್ಚೋಡ ಮಾಡುವ ಬ್ಯಾರಿ ಅಲ್ಲದ, ರಜ ಚರ್ಚೆ ಮಾಡಿರೆ ಕಮ್ಮಿಗೆ ಬಕ್ಕು ಹೇಳಿ ಆಲೋಚನೆ ಬಂತು.
‘ಇದು ತುಂಬಾ ಜಾಸ್ತಿ ಆತು, ರಜ ಕಮ್ಮಿ ಮಾಡಿ’ ಹೇಳಿ ಒರಂಜಿತ್ತಡ.
(ಎಂಗಳ ಊರಿನ ಬ್ಯಾರಿಗೊ ಆದರೆ “ಕೊರ್ಚ ಕೊರಕ್ಕಿ ಸಾಮಿ” ಹೇಳುಗು, ಕೊರಪ್ಪಲೆ ಎಂತ ನಾವು ನಾಯಿಗಳ?).
ಯಜಮಾನಂಗೆ ಇದರ ರಜ ಆಟ ಆಡುಸುವ ಹೇಳಿ ಆತು.