ದೋಷಂಗಳ ಪರಿಹಾರ ಮಾಡುವ ಪ್ರದೋಷ ಪೂಜೆ

February 16, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗೋಕರ್ಣ ಮಂಡಲಾಧೀಶ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಗೋಕರ್ಣ ಶ್ರೀ ಮಹಾಬಲೇಶ್ವರನ ಸನ್ನಿಧಿಲಿ ಕೋಟಿ ರುದ್ರ ಜಪ ಅಯೆಕ್ಕು ಹೇಳುವ ಸಂಕಲ್ಪ ಮಾಡಿದವು.
ದೇವತಾ ಸಾನ್ನಿದ್ಯಕ್ಕೆ ಶಕ್ತಿ ಕೊಡುವ ಕಾರ್ಯ, ಬ್ರಾಹ್ಮಣರು ವೇದ ಸಾಕ್ಷರರಪ್ಪ ಅವಕಾಶ. ಶಿಷ್ಯ ಸಮಾಜಕ್ಕೆ ಹೇಳಿದವು, ನಿಂಗೊ ಎಲ್ಲರೂ ರುದ್ರ ಕಲಿಯಿರಿ, ಮಠಂದ ಬೇಕಾರೆ  ವ್ಯವಸ್ಥೆ ಮಾಡ್ತೆಯೊ°.
ಪುರೋಹಿತ ವರ್ಗಕ್ಕೆ ಅಪ್ಪಣೆ ಕೊಟ್ಟವು, ನಿಂಗೊ ಮಠದ ಶಿಷ್ಯರು, ನಿಂಗಳ ಶಿಷ್ಯ ವರ್ಗಲ್ಲಿ ಇಪ್ಪ ಎಲ್ಲಾ ಹವ್ಯಕರೂ ರುದ್ರ ಕಲಿವಲೆ ನಿಂಗೊ ಏರ್ಪಾಡು ಮಾಡಿ ಹೇಳಿ. 
ಒಂದು ವೈದಿಕ ಆಂದೋಲನಕ್ಕೆ ನಾಂದಿ ಹಾಡಿದವು
. ಅವರ ಸಂಕಲ್ಪಂಗಳೇ ಹಾಂಗೆ, ನಾವು ಯಾವುದು ಅಸಾಧ್ಯ ಹೇಳಿ ಜಾನ್ಸುತ್ತೋ ಅದರ ಸಾಧಿಸಲೆ ಎಡಿತ್ತು ಹೇಳಿ ತೋರಿಸಿ ಕೊಡುವದು, ಶಿಷ್ಯ ವರ್ಗಕ್ಕೆ ಅದಕ್ಕೆ ಪ್ರೇರಣೆ ಕೊಡುವದು.
ನ ಭೂತೋ ನ ಭವಿಷ್ಯತಿ ಹೇಳ್ತ ಹಾಂಗಿಪ್ಪ ಯೋಜನೆಗಳ ಸಂಕಲ್ಪ ಮಾಡಿ, ಅದರ ಕಾರ್ಯರೂಪಕ್ಕೆ ತಪ್ಪ ಶ್ರೀ ಶ್ರೀಗಳ ಮಾರ್ಗದರ್ಶನ ಸಿಕ್ಕುವ ನಾವು ಧನ್ಯರು.

ವೇದ ಸಾಕ್ಷರರಪ್ಪ ಈ ಯೋಜನೆಲಿ ನಾವು ಪಾಲ್ಗೊಳ್ಳೆಕ್ಕು ಹೇಳ್ತ ಪ್ರೇರಣೆ ಬಂದಪ್ಪಗ, ಈ ಪ್ರಾಯಲ್ಲಿ ಇದು ಎಡಿಗಾ ಹೇಳ್ತ ಸಂಶಯವೂ ಇತ್ತು.
ಪೇಟೆ ವಾತಾವರಣಲ್ಲಿ ಇದಕ್ಕೆ ವೆವಸ್ಥೆ ಮಾಡ್ಲೆ ಎಡಿಗಾ, ಕಲುಶಲೆ ಗುರುಗೊ ಸಿಕ್ಕುಗಾ, ಪಾಠ ಶಾಲೆ ಎಲ್ಲಿ ಮಾಡ್ಲೆ ಎಡಿಗು, ಎಷ್ಟು ಜೆನ ಸೇರುಗು, ಸೇರಿದವರಲ್ಲಿ ಎಷ್ಟು ಜೆನ ಮುಂದುವರಿಸಿಂಡು ಹೋಕು.. ಹೀಂಗಿಪ್ಪ ಯೋಚನೆಗೊ.

ಏನಾದರಾಗಲಿ, ನಾವು ಸುರುಮಾಡುವದು ಮಾಡುವದೇ.
ಕಲುಶಲೆ ಗುರುಗಳ ವ್ಯೆವಸ್ಥೆ ಆನು ಮಾಡ್ತೆ. ಜಾಗೆ ಎಂಗಳ ಮನೆ ಹಾಲ್. ಬಪ್ಪಷ್ಟು ಜೆನ ಬರಳಿ, ಹೇಳಿ ಧೈರ್ಯಲ್ಲಿ ಮುಂದೆ ಹೋದವು ಎಂಗಳ ವಲಯದ ಪ್ರಸಾರ ವಿಭಾಗದ ಮುಖ್ಯಸ್ಥರಾದ ಬಾಯಾಡಿ ಬಾಲಕೃಷ್ಣ ಭಟ್.
ಒಂದು ಶುಭ ಘಳಿಗೆಲಿ, ವೇದ ಮೂರ್ತಿ ಅಮೈ ಕುಮಾರ ಸುಬ್ರಹ್ಮಣ್ಯ ಭಟ್ಟರು ದೀಪ ಬೆಳಗಿಸಿ, ವೇ||ಮೂ ಮುಕುಂದ ಭಟ್ಟರು ಗುರುಗಳಾಗಿ ಪಾಠ ಶಾಲೆ ಸುರು ಆತು.
ನಿರೀಕ್ಷೆಗೂ ಮೀರಿ ಆಸಕ್ತರು ಭಾಗವಹಿಸಿದವು. 12 ವರ್ಷದ ಮಾಣಿಂದ ಹಿಡುದು, 60 ವರ್ಷ ಮೀರಿದವು ಕೂಡಾ ಸಹಪಾಠಿಗೊ.
ವಾರಕ್ಕೊಂದು ದಿನ ಪಾಠ, ಎಲ್ಲರೂ ಹೊಸತಾಗಿ ಕಲಿವವೇ. ಎಂಗೊಗೆ ಕಲುಶಲೆ ಗುರುಗೊ ಎಷ್ಟು ಬಂಙ ಬಯಿಂದವು ಹೇಳ್ತರ ಇಲ್ಲಿ ವಿವರ್ಸಲೆ ಅಸಾಧ್ಯ.

ಕೆಲವು ಸಮಯ ಪಾಠ ಮುಂದುವರುದತ್ತು.  ಸ್ವರ ಜ್ಞಾನ ಒಂದು ಮಟ್ಟಿಂಗೆ ಬಂತು. ರುದ್ರ, ಚಮಕ, ಪುರುಷ ಸೂಕ್ತಂಗಳ ಪಾಠಂಗೊ ಕಂಠಸ್ತ ಅಲ್ಲದ್ದರೂ, ಪುಸ್ತಕ ನೋಡಿ ಹೇಳುವಷ್ಟು ಜ್ಞಾನ ಆತು.
ಕಲುಶುತ್ತ ಗುರುಗೊ ಹೇಳಿದವು, ನಿಂಗೊ ಕಲ್ತದರ ಮರೆಡಿ, ಹಾಂಗೆ ಮಾಡಿರೆ, ಕಲುಶಿದ ಎಂಗೊಗೆ ದೋಷ ತಟ್ಟುಗು. ನಿಂಗೊ ದಿನ ನಿತ್ಯ ಪಠನ ಮಾಡುವದೇ ನಿಂಗೊ ಎನಗೆ ಕೊಡುವ ಗುರುದಕ್ಷಿಣೆ ಹೇಳಿ.

ಸ್ವರ ಶುದ್ದವಾಗಿರೆಕ್ಕು ಹೇಳಿ ಅದಕ್ಕೊಂದು ಉದಾಹರಣೆ ಕೊಟ್ಟದರ ಮರವಲೆ ಸಾಧ್ಯ ಇಲ್ಲೆ. ಅವು ಹೇಳಿದವು: ನಿಂಗೊ ಒಬ್ಬಂಗೆ ಪೋನ್ ಮಾಡೆಕ್ಕಾರೆ, ಸರಿಯಾದ ನಂಬ್ರವನ್ನೇ ಡಯಲ್ ಮಾಡೆಕ್ಕು.
ಅದರಲ್ಲಿ ಒಂದು ನಂಬ್ರ ಬದಲಿದರೂ, ಅದು ಬೇರೆಯವಕ್ಕೆ ಹೋಕು. ಹಾಂಗೇ ಮಂತ್ರಲ್ಲಿ ಕೂಡಾ. ಸ್ವರ ಶುದ್ಧ ಇದ್ದರೆ ಮಾತ್ರ ಅದು ಆ ಸಲ್ಲೆಕ್ಕಾದವಂಗೇ ಸಲ್ಲುಗಷ್ಟೆ ಹೇಳಿ.

ಕಲ್ತದರ ಮರೆಯದ್ದ ಹಾಂಗೂ ಆತು, ಶಿವ ಸಾನಿದ್ಯಲ್ಲಿ ರುದ್ರ ಪಠನ ಮಾಡಿದ ಹಾಂಗೂ ಆತು ಹೇಳಿ ನಿಶ್ಚಯ ಮಾಡಿ, ಎಂಗೊ° ಇಲ್ಲೇ ಹತ್ತರೆ ಇಪ್ಪ ಶಿವ ದೇವಸ್ಥಾನಕ್ಕೆ ಆದಿತ್ಯವಾರ ಉದಿಯಪ್ಪಗ ಹೋಗಿ, ಕಲ್ತದರ ಅಲ್ಲಿ ಒಪ್ಪುಸಲೆ ಸುರು ಮಾಡಿದೆಯೊ°.
ಒಂದು ಏಕಾದಶ ರುದ್ರ ಅಪ್ಪಲೇ ಜೆನ ಸಿಕ್ಕದ್ದ ಈ ಊರಿಲ್ಲಿ, ನಿಂಗೊ ಹೀಂಗೆ ಬಂದು ಹೇಳುವದು ಸಂತೋಷ ಆವ್ತಾ ಇದ್ದು ಹೇಳಿ ಕೊಶಿ ಪಟ್ಟವು ಅಲ್ಲಿಯಾಣ ಪೂಜೆ ಮಾಡ್ತ ಪುರೋಹಿತರು.
ಒಂದೆರಡು ಸರ್ತಿ ಏಕಾದಶ ರುದ್ರ ಪೂಜೆಗೆ ದೆನುಗೊಳಿದವು. ದೇವರ ಸಾನ್ನಿದ್ಯಲ್ಲಿ ಹೇಳುವ ಅವಕಾಶ, ಸಂತೋಷಲ್ಲಿ ಒಪ್ಪಿದೆಯೊ°. ವರ್ಷಾವಧಿ ಜಾತ್ರೆ ಸಮಯಲ್ಲಿ, ಅಕೇರಿಯಾಣ ದಿನ ಉದಿಯಪ್ಪಗ ಕವಾಟೋದ್ಘಾಟನೆ ಸಮಯಲ್ಲಿಯೂ ಅವಕಾಶ ಕೊಟ್ಟವು.

***

ನಿಂಗೊ ಪ್ರದೋಷ ಪೂಜೆಗೆ ಬಂದು ರುದ್ರ ಹೇಳ್ತಿರಾ, ಸೂರ್ಯಾಸ್ತ ಸಮಯಲ್ಲಿ ಅಪ್ಪ ಕಾರ್ಯಕ್ರಮ, ನಿಂಗಳ ಆಪೀಸ್ ಕೆಲಸ ಮುಗುಶಿಕ್ಕಿ ಬಂದರೆ ಸಾಕು ಹೇಳಿ ಅಹ್ವಾನ ಕೊಟ್ಟವು.
ಸಂತೋಷ, ಇದು ಬಯಸದ್ದೆ ಒದಗಿ ಬಂದ ಒಂದು ಸೌಭಾಗ್ಯ ಹೇಳಿ ತಿಳ್ಕೊಂಡು ಅದಕ್ಕೂ ಸಮ್ಮತಿ ಕೊಟ್ಟೆಯೊ°. ಸೂರ್ಯಾಸ್ತ ಆದ ನಂತ್ರ ರುದ್ರ ಹೇಳ್ತ ಕ್ರಮ ಇಲ್ಲೆ ಹೇಳುವದು ಎಂಗಳ ನಂಬಿಕೆ.
ಇವು ನೋಡಿರೆ, ಸೂರ್ಯಾಸ್ತ ಅಪ್ಪ ಸಮಯಲ್ಲಿ ಬಪ್ಪಲೆ ಹೇಳ್ತಾ ಇದ್ದವಲ್ಲದ ಹೇಳಿ ಒಂದು ಸಂಶಯ. ಸುಮ್ಮನೆ ಎಂತಕೆ ಹೇಳ್ತವು. ಇದರಲ್ಲಿ ಎಂತಾರೂ ವಿಶಯ ಇಕ್ಕು, ವಿಚಾರುಸುವೊ° ಹೇಳಿ, ಒಂದು ಪ್ರದೋಷ ಪೂಜೆಗೆ ಹೋಗಿಪ್ಪಗ ಕೇಳಿತ್ತು.

ಎಂಗೊ ಪೂಜೆಗೆ ತಯಾರಿಲಿ ಇದ್ದೆಯೊ°. ನಿಂಗೊಗೆ ವಿವರ ಬೇಕಾರೆ ಈಗ ತಂತ್ರಿಗೊ ಬಕ್ಕು, ಅವರ ಹತ್ರೆ ಕೇಳಿ, ಹೇಳ್ತ ಉತ್ತರ ಸಿಕ್ಕಿತ್ತು.
ಪರಿಚಯ ಇಲ್ಲದ್ದ ತಂತ್ರಿಗೊ. ಆರಾದರೆ ಎಂತ. ವಿಶಯ ಗೊಂತಾಯೆಕ್ಕಾರೆ ಕೇಳಿಯೇ ಆಯೆಕ್ಕಷ್ಟೆ. ಪೂಜೆಗೆ ರೆಜ ಸಮಯ ಇದ್ದು. ಅವರ ನಿರೀಕ್ಷೆಲಿ ಹೆರ ಹೋಗಿ ನಿಂದೆಯೊ°.

ಜೈ ಶ್ರೀ ರಾಮ, ಜೈ ಶ್ರೀ ರಾಮ ಬರದ ಕೇಸರಿ ಬಣ್ಣದ ಬ್ರಹ್ಮ ವಸ್ತ್ರ, ಕಚ್ಚೆ ಪಂಚೆ, ಹಣೆಲಿ ಅಡ್ಡಕ್ಕೆವಿಭೂತಿ ನಾಮ, ಮಧ್ಯಲ್ಲಿ ಕುಂಕುಮ ಬೊಟ್ಟು, ಹೆಗಲಿಲ್ಲಿ ಒಂದು ಸಣ್ಣ ಸಂಚಿ, ದೂರಂದ ನೋಡುವಾಗಲೇ ನಮಸ್ಕಾರ ಮಾಡೆಕ್ಕು ಹೇಳಿ ಕಾಣುವ ಸಾತ್ವಿಕ ಪ್ರಶಾಂತ ಮೋರೆ,
– ಇವೇ ತಂತ್ರಿಗೊ ಆದಿಕ್ಕು ಹೇಳಿ ಮಾತಾಡ್ಸಿದೆಯೊ°. ಕೇಳ್ಲೆ ನಿಂಗೊ ತಯಾರು ಇಪ್ಪಗ ಹೇಳ್ಲೆ ಎನಗೆ ಸಂತೋಷವೇ, ಪೂಜೆಗೆ ಹೇಂಗೂ ರೆಜ ಸಮಯ ಇದ್ದು, ಹೇಳಿ ಸುರು ಮಾಡಿದವು.

***

ಪ್ರದೋಷ ಕಾಲ ಹೇಳಿರೆ ಸೂರ್ಯಾಸ್ತಂದ ಒಂದೂವರೆ ಗಂಟೆ ಮೊದಲು ಮತ್ತೆ ಸೂರ್ಯಾಸ್ತಂದ ನಂತರದ ಒಂದು ಗಂಟೆ ಸಮಯ.
ಇದು ಯಾವಾಗಲೂ ಇಪ್ಪದೇ. ಇದಕ್ಕೆ ದಿನ ಪ್ರದೋಷ ಹೇಳುವದು. ಆದರೆ ಶಿವಂಗೆ ಪ್ರದೋಷ ಪೂಜೆ ಹೇಳಿ ಮಾಡುವ ವಿಶೇಷ ದಿನ ಹೇಳಿರೆ ಶುಕ್ಲ ಪಕ್ಷ ಮತ್ತೆ ಕೃಷ್ಣ ಪಕ್ಷದ ತ್ರಯೋದಶಿ ದಿನ.
ಪ್ರದೋಷ ಕಾಲಲ್ಲಿ ತ್ರಯೋದಶಿ ಸಿಕ್ಕಿದ ದಿನವೇ ಈ ಪೂಜೆ ಮಾಡುವದು.
ಸೋಮವಾರ ಶಿವಂಗೆ ವಿಶೇಷ ದಿನ ಆದ್ದರಿಂದ, ಸೋಮವಾರ ಬಂದರೆ ಸೋಮಪ್ರದೋಷ ಹೇಳಿಯೂ, ಶನಿವಾರ ಬಂದರೆ ಶನಿ ಪ್ರದೋಷ ಹೇಳಿಯೂ ಹೇಳುವದು ವಾಡಿಕೆ.

ಶಿವ ಪ್ರಸನ್ನನಾಗಿ ಕೈಲಾಸ ಪರ್ವತಲ್ಲಿ ನೃತ್ಯ ಮಾಡ್ತಾ ಇರ್ತ°.
ದೇವತೆಗೊ ಎಲ್ಲರೂ ಇದರಲ್ಲಿ  ಭಾಗವಹಿಸಿಗೊಂಡು ಇರ್ತವು. ಈ ಸಮಯಲ್ಲಿ ಶಿವನ ಸ್ತುತಿ ಮಾಡಿರೆ, ನಮ್ಮ ಎಲ್ಲ ಪಾಪಂಗೊ ನಿವಾರಣೆ ಅಗಿ ಇಷ್ಟಾರ್ಥ ಸಿದ್ದಿ ಆವುತ್ತು. ಹೇಳಿದ ತಂತ್ರಿಗೊ ಇದಕ್ಕೆ ಸಂಬಂಧಿಸಿದ ಕತೆ ಈ ರೀತಿಯಾಗಿ ಇದ್ದು ಹೇಳಿದವು:

***

ನವಗೆ ಎಲ್ಲರಿಂಗೂ ಗೊಂತಿಪ್ಪ ಕತೆಯೇ. ಕ್ಷೀರಸಮುದ್ರ ಮಥನ.
ಮಂದರ ಪರ್ವತವ ಮಂತು ಆಗಿ, ವಾಸುಕಿಯ ಕಡೆತ್ತ ಬಳ್ಳಿಯಾಗಿ ಮಾಡಿ ಕ್ಷೀರಸಮುದ್ರವ ದೇವತೆಗಳೂ, ರಾಕ್ಷಸರೂ ಸೇರಿ ಕಡವಲೆ ಸುರು ಮಾಡ್ತವು. ದೇವತೆಗೊ ಬೀಲದ ಹೊಡೆಯ ಹಿಡ್ಕೊಂಡರೆ, ರಾಕ್ಷಸರು ತಲೆಯ ಹೊಡೆಯ ಹಿಡ್ಕೊಂಡು ಕಡವಲೆ ಸುರು ಮಾಡ್ತವು.
ಮಂದರಪರ್ವತವ ಸಮುದ್ರಲ್ಲಿ ಮುಂಗದ್ದ ಹಾಂಗೆ ಮಾಡ್ಲೆ ವಿಷ್ಣು ಕೂರ್ಮಾವತಾರಲ್ಲಿ, ಸಮುದ್ರದ ಅಡಿಲಿ ಹೋಗಿ ಬೆನ್ನು ಕೊಟ್ಟು ಆಧಾರ ಆಗಿ ನಿಲುತ್ತ°.

ಹೀಂಗೆ ಸಮುದ್ರವ ಕಡವಗ, ವಾಸುಕಿ ವಿಷವ ಕಾರಲೆ ಸುರು ಮಾಡ್ತು. ಅದು ಅಂತಿಂಥ ವಿಷ ಅಲ್ಲ. “ಹಾಲಾಹಲ” ಹೇಳಿರೆ ಸಮಸ್ತ ಜೀವರಾಶಿಯನ್ನೇ ನಾಶ ಮಾಡುವ ಶಕ್ತಿ ಇಪ್ಪಂಥದ್ದು.
ದೇವತೆಗೊಕ್ಕೆ ಎಂತ ಮಾಡೆಕ್ಕು ಗೊಂತಾವ್ತಿಲ್ಲೆ. ವಿಷ್ಣು ಅಂಬಗ ಹೇಳ್ತ°, ಈ ವಿಷವ ಜೀರ್ಣಿಸುವ ಶಕ್ತಿ ಇಪ್ಪದು ಹಾವನ್ನೇ ಮಾಲೆಯಾಗಿ ಹಾಕಿಂಡು ಇಪ್ಪ ಶಿವಂಗೆ ಮಾತ್ರ, ಅವನತ್ರೆ ಹೋಗಿ ಪ್ರಾರ್ಥನೆ ಮಾಡುವೊ° ಹೇಳಿ.
ಇಂದ್ರಾದಿ ಎಲ್ಲಾ ದೇವತೆಗಳೂ, ಯಕ್ಷಂಗೊ, ಗಂಧರ್ವಂಗೊ, ಮಹರ್ಷಿಗೊ ಎಲ್ಲರೂ ಕೈಲಾಸ ಪರ್ವತಕ್ಕೆ ಹೋಗಿ, ನೀನೇ ರಕ್ಷಿಸೆಕ್ಕು ಹೇಳಿ ಶಿವನ ಕೇಳಿಗೊಳ್ತವು.

ಎಲ್ಲರಿಂಗೂ ಶುಭವನ್ನೇ ಉಂಟು ಮಾಡುವವ° ಶಂಕರ°, ದೇವರುಗಳ ಪ್ರಾರ್ಥನೆಗೆ ಒಲಿತ್ತ°. ಅತು ಹೇಳಿ ಒಪ್ಪಿಗೊಳ್ತ°. ಕ್ಷೀರಸಮುದ್ರಕ್ಕೆ ಹೋಗಿ, ವಿಷವ ತಂದು ಕುಡಿತ್ತ°.

ಶಿವನ ಹೊಟ್ಟೆಗೆ ವಿಷ  ಹೋಗದ್ದ ಹಾಂಗೆ ಮಾಡ್ಲೆ ಪಾರ್ವತೀ ದೇವಿ  ಅವನ ಕೊರಳಿನ ಒತ್ತಿ ಹಿಡಿತ್ತು.  ವಿಷಕಂಠ° ಆವ್ತ°. ಲೋಕವ ಉದ್ಧಾರ ಮಾಡ್ತ°.

ಇಷ್ಟೆಲ್ಲಾ ಅಪ್ಪಗ ದೇವತೆಗೊಕ್ಕೆ ಕೊಶೀ ಆವ್ತು. ಸಮುದ್ರ ಮಥನವ ಮುಂದುವರುಸುತ್ತವು. ಬೆಲೆ ಕಟ್ಟಲೆ ಎಡಿಯದ್ದ ಕೌಸ್ತುಭ, ಕಾಮಧೇನು, ಪಾರಿಜಾತ, ಐರಾವತ, ಶಂಖ, ತುಳಸಿ ಹೀಂಗೆ ಒಳ್ಳೊಳ್ಳೆಯ ಅಮೂಲ್ಯ ವಸ್ತುಗೊ ಸಿಕ್ಕುತ್ತು.
ಅಕೇರಿಗೆ ಧನ್ವಂತರಿ, ಅಮೃತವ ತಂದು ಕೊಡ್ತ°. ಇದೆಲ್ಲಾ ಅಪ್ಪದು ದ್ವಾದಶಿ ದಿನ ಆಗಿರ್ತು.

ಶಿವಂ ಶಂ-ಕರಂ! (ಚಿತ್ರ: ಸ್ವಂತ ಸಂಗ್ರಹದ ಹಳೆ ಆಲ್ಬಂ)

ವಾಸುಕಿಯ ಹಾಲಾಹಲಂದ ಜೀವ ಜಗತ್ತಿನ ಸೃಷ್ಟಿಯ ರಕ್ಷಿಸಿ, ಅಮೃತ ಸಿಕ್ಕಲೆ ಅನುವು ಮಾಡಿದ ಶಿವನ ಉಪಕಾರಕ್ಕೆ ಪ್ರತಿ ವಂದನೆ ಹೇಳ್ಲೆ, ದೇವತೆಗೊಕ್ಕೆ ಮರೆತ್ತು.
ಅಮೃತ ಸಿಕ್ಕಿದ ಕೊಶಿಲಿ ಎಲ್ಲರೂ ಇರ್ತವು. (ನಮ್ಮಲ್ಲಿಯೂ ಹೀಂಗಿಪ್ಪವು ಇರ್ತವಲ್ಲದ. ಉಪಕಾರ ಸಿಕ್ಕುವನ್ನಾರ ಹಿಂದೆ ಮುಂದೆ ತಿರುಗಿಂಡು, ನಮಸ್ಕಾರ ಹಾಕಿಂಡು, ನೀನೇ ಇಂದ್ರ° ಚಂದ್ರ° ಎಲ್ಲಾ ಹೊಗಳಿಂಡು, ಉಪಕಾರ ತೆಕ್ಕೊಂಡ ಮತ್ತೆ, ಗುರ್ತ ಇಲ್ಲದ್ದವರ ಹಾಂಗೆ ಮೋರೆ ತಿರುಗಿಸಿಂಡು ಹೋಪ ಜೆನಂಗೊ)

ಮರುದಿನ, ಹೇಳಿರೆ, ತ್ರಯೋದಶಿ ದಿನ ನೆಂಪು ಆವ್ತು. ದೇವತೆಗೊ ಸೀದಾ ಕೈಲಾಸಕ್ಕೆ ಹೋಗಿ, ಶಿವನ ಹತ್ರೆ ಕ್ಷಮೆ ಕೇಳ್ತವು. ಶಿವ° ಪ್ರಸನ್ನನಾಗಿ ನೃತ್ಯ ಮಾಡ್ತ°. ಸರಸ್ವತಿದೇವಿ ವೀಣೆ ನುಡಿಸಿರೆ, ಇಂದ್ರ° ಕೊಳಲು ನುಡಿಸುತ್ತ°, ಲಕ್ಷ್ಮೀದೇವಿ ಹಾಡಲೆ ಸುರು ಮಾಡುತ್ತು, ವಿಷ್ಣು ಮೃದಂಗ ನಾದ ಮಾಡುತ್ತ°. ಶಿವನ ಸುತ್ತ ನಿಂದು ಎಲ್ಲಾ ದೇವತೆಗಳೂ ಅವನ ಸ್ತುತಿ ಮಾಡಿ ಸಂತೋಷಪಡ್ತವು. ಹಾಂಗಾಗಿ ಈ ದಿನ ವಿಶೇಷ. ಎಲ್ಲಾ ದೇವತೆಗಳೂ ಒಟ್ಟಿಂಗೆ ಪ್ರಸನ್ನರಾಗಿ ಇಪ್ಪ ಸುದಿನ. ಶಿವನ ಒಬ್ಬನ ಪೂಜಿಸಿರೆ ಎಲ್ಲರನ್ನೂ ಪೂಜಿಸಿದ ಫಲ ಸಿಕ್ಕುತ್ತು.

***

ಅಂಬಗ ಇದರ ಹೇಂಗೆ ಆಚರಣೆ ಮಾಡ್ಲಕ್ಕು ಕೇಳಿದೆಯೊ° ತಂತ್ರಿಗಳ ಹತ್ರೆ.

ಪ್ರದೋಷ ಆಚರಣೆ ಬೇರೆ ಬೇರೆ ರೀತಿಲಿ ಮಾಡ್ತವು. ಕೆಲವು ಜೆನಂಗೊ, ಎರಡು ಪಕ್ಷಲ್ಲಿಯೂ ಬಪ್ಪ ಪ್ರದೋಷಂಗಳ ಆಚರಣೆ ಮಾಡಿರೆ ಇನ್ನು ಕೆಲವು ಜೆನಂಗೊ ಕೃಷ್ಣ ಪಕ್ಷದ್ದರ ಮಾತ್ರ ಮಾಡ್ತವು.
ಇಡೀ ದಿನ  ಬರೇ ನೀರು ಮಾತ್ರ ಕುಡ್ಕೊಂಡು ಶಿವನ ಧ್ಯಾನ ಮಾಡಿ, ಪೂಜೆ ನಂತರ ಫಲಾಹಾರ (ಹಣ್ಣು ಮಾತ್ರ) ಮಾಡಿ, ಮರುದಿನಂದ ಬೇಯಿಸಿದ ಅಡಿಗೆ ಉಂಬವೂ ಇದ್ದವು.
ಇನ್ನು ಕೆಲವು ಜೆನಂಗೊ ಇಡೀ ದಿನ ಫಲಾಹಾರ ತೆಕ್ಕೊಂಡು, ಪೂಜೆ ಪ್ರಸಾದ ತೆಕ್ಕೊಂಡ ಮತ್ತೆ ಬೇಯಿಸಿದ ಆಹಾರ ತೆಕ್ಕೊಳ್ತವು. ಇನ್ನು ಕೆಲವು ಜೆನಂಗೊ ಉಪವಾಸ ವ್ರತ ಮಾಡದ್ದೆ, ಶಿವನ ಪೂಜೆ ನೋಡಿಕ್ಕಿ ಪ್ರಸಾದ ತೆಕ್ಕೊಳ್ತವು. ಅವರವರ ನಂಬಿಕೆ ಅವಕ್ಕವಕ್ಕೆ.

ಪ್ರದೋಷ ಕಾಲಲ್ಲಿ ಶಿವನ ಪೂಜೆ ಮಾಡಿದವಕ್ಕೆ, ಆಯುರಾರೋಗ್ಯ, ಸುಖ, ಸಂಪತ್ತು, ಪದೋನ್ನತಿ ಸಿಕ್ಕುತ್ತು ಮಾತ್ರ ಅಲ್ಲದ್ದೆ  ಎಲ್ಲಾ ಪಾಪಂಗಳಿಂದಲೂ ಮುಕ್ತ ಆಗಿ ಅವಂಗೆ ಮೋಕ್ಷ ಸಿಕ್ಕುತ್ತು ಹೇಳುವ ನಂಬಿಕೆ.

ಬಿಲ್ವ ಪ್ರಿಯ ಶಿವಂಗೆ ಈ ದಿನ ಒಂದೇ ಒಂದು ಬಿಲ್ವ ಸಮರ್ಪಣೆ ಮಾಡಿರೂ, ಅದು ನೂರು ಮಹಾಪೂಜೆ ಮಾಡಿದ್ದಕ್ಕೆ ಸರಿ ಸಮ.

ಅಭಿಷೇಕಪ್ರಿಯ ಶಿವಂಗೆ ಈ ಸಮಯಲ್ಲಿ ಹಾಲಿಂದ ಅಭಿಷೇಕ ಮಾಡಿರೆ, ದೀರ್ಘ ಅಯುಷ್ಯ, ತುಪ್ಪಂದ ಮಾಡಿರೆ ಮೋಕ್ಷ, ಮೊಸರಿಂದ ಮಾಡಿರೆ ಒಳ್ಳೆ ಸಂತತಿ, ಜೇನಿಂದ ಮಾಡಿರೆ ಜೇನಿನ ಹಾಂಗಿಪ್ಪ ಮಧುರ ಸ್ವರ, ಅಕ್ಕಿ ಹೊಡಿಂದ ಮಾಡಿರೆ ಸಾಲಂದ ಮುಕ್ತಿ, ಕಬ್ಬಿನ ಹಾಲಿಂದ ಮಾಡಿರೆ ಒಳ್ಳೆ ಆರೋಗ್ಯ, ಪಂಚಾಮೃತಂದ ಮಾಡಿರೆ ಸಂಪತ್ತು, ನಿಂಬೆರಸಂದ ಮಾಡಿರೆ ಮೃತ್ಯು ಭಯ ನಿವಾರಣೆ, ಸಕ್ಕರೆಂದ ಮಾಡಿರೆ ಶತ್ರು ಭಯ ನಿವಾರಣೆ, ಬೊಂಡಂದ ಮಾಡಿರೆ ಸುಖ ಸಂತೋಷ, ಅನ್ನಂದ ಮಾಡಿರೆ ರಾಜ ಯೋಗ, ಗಂಧಂದ ಮಾಡಿರೆ ಲಕ್ಷ್ಮೀ ಕಟಾಕ್ಷ ಸಿಕ್ಕುತ್ತು ಹೇಳಿ ಶಾಸ್ತ್ರ ಹೇಳುತ್ತು.

***

ಅಭಿಷೇಕಕ್ಕೆ ಅಪ್ಪಲೆ ಆತು. ಇನ್ನು ನಾವು ಸೋಮಸೂತ್ರ ಪ್ರದಕ್ಷಿಣೆ ಮಾಡಿ ದೇವರ ಎದುರು ಕೂದು, ರುದ್ರ ಪ್ರಿಯಂಗೆ ರುದ್ರ ಹೇಳುವೊ° ಹೇಳಿದವು ತಂತ್ರಿಗಳು.

ಇದೊಂದು ಹೊಸ ಸೂತ್ರ ಎಂತರ ಕೇಳಿದೆಯೊ°. ಎಂತ ಇಲ್ಲೆ, ಎನ್ನ ಒಟ್ಟಿಂಗೆ ಬನ್ನಿ. ಆನು ಸುತ್ತ ಹಾಕಿದ ಹಾಂಗೆ ನಿಂಗಳೂ ಸುತ್ತು ಹಾಕಿರೆ ಆತು ಹೇಳಿದವು. ಇದನ್ನೂ ಕಲ್ತ ಹಾಂಗೆ ಆತು. ಹೊಸತ್ತು ಸಿಕ್ಕುವದರ ಬಿಡುವದೆಂತಕೆ?. ಎಂಗಳೂ ಹೆರಟೆಯೊ°.

ಶಿವ ದೇವಸ್ಥಾನಲ್ಲಿ ಅಭಿಷೇಕ ನೀರು ಹೋಪ ವೆವಸ್ಥೆ, ದೇವಸ್ಥಾನದ ಉತ್ತರ ಭಾಗಲ್ಲಿ ಇರ್ತು. ಇಲ್ಲಿ ಶಕ್ತಿಯ ಪ್ರವಾಹ ಇಪ್ಪ ಕಾರಣ ಇದರ ದಾಂಟಲೆ ಆಗ ಹೇಳ್ತವು. ಈ ಜಾಗೆಗೆ ಗೋಮುಖಿ ಹೇಳಿ ಹೆಸರು.

ದೇವಸ್ಥಾನದ ಎದುರು ಇಪ್ಪ ನಂದಿಗೆ ನಮಸ್ಕಾರ ಮಾಡಿ ಅಪ್ರದಕ್ಷಿಣೆಯಾಗಿ ಗೋಮುಖಿ ವರೆಗೆ ಹೋಗಿ ಅಲ್ಲಿ ಶಿವಂಗೆ ನಮಸ್ಕಾರ ಮಾಡಿ ಪ್ರದಕ್ಷಿಣಾಕಾರವಾಗಿ ಬಪ್ಪಗ, ನಂದಿಗೆ ನಮಸ್ಕಾರ ಮಾಡಿ ಮುಂದೆ ಗೋಮುಖಿವರೆಗೆ ಹೋಗಿ ಅಲ್ಲಿಂದ ಅಪ್ರದಕ್ಷಿಣಾಕಾರವಾಗಿ ಬಂದು ನಂದಿಗೆ ಪುನಃ ನಮಸ್ಕಾರ ಮಾಡೆಕ್ಕು. ಅಲ್ಲಿಂದ ಮುಂದೆ ಹಾಂಗೇ ಗೋಮುಖಿ ವರೆಗೆ ಹೋಗಿ,ತಿರುಗಿ, ಪ್ರದಕ್ಷಿಣಾಕಾರವಾಗಿ ಬಂದು, ಗೋಮುಖಿ ವರೆಗೆ ಹೋಯೆಕ್ಕು. ಈ ಸರ್ತಿ ನಂದಿಗೆ ನಮಸ್ಕಾರ ಮಾಡ್ಲೆ ಇಲ್ಲೆ.
ಅಲ್ಲಿಂದ ಪುನಃ ತಿರುಗಿ ಅಪ್ರದಕ್ಷಿಣಾಕಾರವಾಗಿ ಬಪ್ಪಗ ನಂದಿಗೆ ನಮಸ್ಕಾರ ಮಾಡಿ ಗೋಮುಖಿ ವರೆಗೆ ಹೋಗಿ ಶಿವಂಗೆ ನಮಸ್ಕಾರ ಮಾಡಿ, ತಿರುಗಿ ಪ್ರದಕ್ಷಿಣಾಕಾರವಾಗಿ ಬಂದು, ನಂದಿಯ ಎರಡು ಕೊಂಬಿನ ನಡುವಿಂದಾಗಿ ಶಿವಲಿಂಗವ ನೋಡಿ ನಮಸ್ಕಾರ ಮಾಡಿರೆ, ಒಂದು ಸೋಮ ಸೂತ್ರ ಪ್ರದಕ್ಷಿಣೆ ಮುಗುದತ್ತು. ಹೀಂಗೆ ಮೂರು ಸುತ್ತು ಹಾಕಿದರೆ ವಿಶೇಷ.

***

ಈ ಪೂಜೆಯ ಬಗ್ಗೆ ಕೇಳಿ ತಿಳುದ ನಿಂಗೊಗೆ, ಶಿವನ ಪೂರ್ಣಾನುಗ್ರಹ ಖಂಡಿತಾ ಸಿಕ್ಕುತ್ತು. ಇದರ ಇಲ್ಲಿಗೆ ನಿಲ್ಲುಸೆಡಿ.
ಎಡಿಗಾದಷ್ಟು ಜೆನಂಗೊಕ್ಕೆ ತಿಳಿಸಿ. ಅವು ಕೂಡಾ ಈ ಪೂಜೆಲಿ ಭಾಗವಹಿಸಿ, ಪುಣ್ಯಾರ್ಥಿಗಳಾಗಲಿ ಹೇಳಿ ತಂತ್ರಿಗಳು ಮಾತು ನಿಲ್ಲಿಸಿ,  ಉತ್ತರಕ್ಕೆ ಮೋರೆ ಮಾಡಿ  ಪದ್ಮಾಸನಲ್ಲಿ ಕೂದವು..

***

ರುದ್ರ, ಚಮಕ, ಪುರುಷ ಸೂಕ್ತಂಗಳ ಹೇಳಿ ಶಿವಂಗೆ ಅಭಿಷೇಕ ಆತು.
ಬಿಲ್ವ ಪತ್ರೆಂದ ಅರ್ಚನೆ ಆತು, ಮಂಗಳಾರತಿಯೂ ಆಗಿ ಪ್ರಸಾದ ಸಿಕ್ಕಿತ್ತು. ಪೂಜೆ ನೋಡಿದ ಧನ್ಯತಾ ಭಾವಂದ ಹೆರ ಬಪ್ಪಗ ಮನಸ್ಸು ನಿರ್ಮಲವಾಗಿ ನೆಮ್ಮದಿಯ ಅನುಭವ ಆತು.

***

ಪ್ರದೋಷ ಕಾಲಲ್ಲಿ  ಪ್ರಸನ್ನ ಶಿವನ, ಪ್ರಸನ್ನ ಮನಸ್ಸಿಂದ ಪೂಜೆ ಮಾಡಿ, ನಮ್ಮ ಎಲ್ಲಾ ದೋಷಂಗಳ ನಿವಾರಣೆ ಮಾಡ್ಲೆ ಪ್ರಾರ್ಥಿಸಿಗೊಂಬೊ°. ಶಿವನ ಒಲುಮೆ ಎಲ್ಲರಿಂಗೂ ಸಿಗಲಿ.

||ಓಂ ನಮಃ ಶಿವಾಯ||

ದೋಷಂಗಳ ಪರಿಹಾರ ಮಾಡುವ ಪ್ರದೋಷ ಪೂಜೆ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ.

  ಯಬ್ಭಾ…! ಎಷ್ಟು ವಿಷಯಂಗೊ ಇಷ್ಟು ಸಣ್ಣ ಲೇಖನಲ್ಲಿ.

  ಸವಿಸ್ತಾರವಾಗಿ ವಿವರಿಸಿದ್ದಕ್ಕೆ ಕೃತಜ್ಞತೆಗಳು ಶರ್ಮಅಪ್ಪಚ್ಚಿಗೆ. ನಿಂಗಳ ಅಪ್ಪಣೆಯಿಲ್ಲದ್ದೆ ಸೇವ್ ಮಾಡಿ ಮಡಿಕ್ಕೊಂಡೆ. ನಮ್ಮ ಹೆಮ್ಮೆಯ ಸನಾತನ ಸಂಸ್ಕೃತಿಯ ಒಂದು ತುಣುಕು ನಮ್ಮ ಅರಿವಿಂಗೆ ಸಿಕ್ಕಿತ್ತು.

  ಹೀಂಗೇ ಇನ್ನೂ ಅನೇಕ ಹಬ್ಬ – ಆಚರಣೆ – ನಂಬಿಕೆ ನಡವಳಿಕೆ ಮಾಹಿತಿಯ ಇಲ್ಲಿ ಎದುರುನೋಡುತ್ತಾ ಇರುತ್ತೆ. ಸಕಾಲಕ್ಕೆ ಬರುತ್ತಾ ಇದ್ದರೆ ಖಂಡಿತಾ ಮನಸ್ಸಿಲ್ಲಿ ಅಚ್ಚಳಿಯದ್ದೆ ನಿಂಗು.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಚೆನ್ನೈ ಭಾವಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°

  ಶರ್ಮಪ್ಪಚ್ಚಿ, ಒಳ್ಳೆ ಶುದ್ದಿ ಅಗತ್ಯವಾಗಿ ಬೇಕಾಗಿದ್ದದು. ನಿಂಗೊ ಶುದ್ದಿ ಸುರು ಮಾಡಿದ್ದದು ತುಂಬಾ ಲಾಯಕ ಆಯಿದು. ನಿಜವಾಗಿ ನಮ್ಮ ಗುರುಗೋ ಒಂದು ವೈದಿಕ ಆಂದೋಲನವನ್ನೇ ಮಾಡಿದ್ದವು ರುದ್ರ ಪಠಣ ಮಾಡೆಕ್ಕು ಹೇಳಿ. ನಿಂಗಳ ಗುರುಗೋ ಸ್ವರ ಶುದ್ಧ ಎಂತಕ್ಕೆ ಬೇಕು ಹೇಳಿ ಕೊಟ್ಟ ಉದಾಹರಣೆ ಎಲ್ಲಾ ರೀತಿಯ ನಮ್ಮ ಪಾರಾಯಣ, ಅರ್ಚನೆಗೊಕ್ಕುದೇ ಆವುತ್ತಲ್ಲದಾ? ಒಳ್ಳೆದಾಯಿದು ಆ ಉದಾಹರಣೆ.

  ಪ್ರದೋಷ ಪೂಜೆಯ ಬಗ್ಗೆ ಎನಗೆ ದಿನದರ್ಶಿಕೆಲಿ ನೋಡಿ ಮಾತ್ರ ಗೊಂತಿದ್ದದು ಹಾಂಗೊಂದು ದಿನ ಇದ್ದು ಹೇಳಿ!!! ನಿಂಗಳ ಶುದ್ದಿ ಓದಿ ಅಪ್ಪಗ ಹತ್ತರೆ ಇಪ್ಪ ದೇವಸ್ಥಾನಲ್ಲಿ ಇದ್ದರೆ ಇನ್ನು ಮುಂದೆ ಆದರೂ ಖಂಡಿತಾ ಹೋಯೆಕ್ಕು ಹೇಳಿ ಆತು.

  ಪ್ರದೋಷ ಪೂಜೆಯ ಬಗ್ಗೆ ನಿಂಗೊ ಹೇಳುವಾಗ ಎಂಗಳೂ ಆ ಹೊತ್ತಿಲಿ ಅಲ್ಲಿ ಇದ್ದ ಹಾಂಗೆ ಕಣ್ಣಿಂಗೆ ಕಟ್ಟಿತ್ತು. ಯಾವ ಯಾವ ರೀತಿಲಿ ಶಿವನ ಮೆಚ್ಚಿಸಿದರೆ ನವಗೆ ಎಂತೆಲ್ಲ ಪ್ರಾಪ್ತಿ ಆವುತ್ತು ಹೇಳಿ ಕೊಟ್ಟದು ಲಾಯ್ಕಾತು. ನಿಂಗೊ ಹೇಳಿದ ರೀತಿಗಳಲ್ಲಿ ಪೂಜಿಸಿದರೆ ಅವರವರ ಮನೋಭೀಷ್ಟ ಪೂರೈಸುಗು ಆ ಭಕ್ತವತ್ಸಲ ಶಿವ° ಅಲ್ಲದಾ?
  ಸೋಮಸೂತ್ರ ಪ್ರದಕ್ಷಿಣೆಯ ಬಗ್ಗೆ ತಿಳಿಶಿದ್ದು ಒಂದು ಹೊಸ ವಿಚಾರ ಗೊಂತಾದ ಹಾಂಗೆ ಆತು ಅಪ್ಪಚ್ಚಿ.

  ನಮ್ಮ ಹಿರಿಯರಿಂದ ನಡೆಶಿಗೊಂಡು ಬಂದ ಇಷ್ಟು ಒಳ್ಳೆಯ ರೀತಿಲಿ ಶಿವನ ಒಲಿಶಿಗೊಂಬ ಒಂದು ವಿಧಾನವ ಎಂಗೊಗೆ ಮನಸ್ಸಿಂಗೆ ಮುಟ್ಟುವ ಹಾಂಗೆ, ಎಂಗೊಗೂ ಆಚರಣೆ ಮಾಡ್ಲೆ ಅನುಕೂಲ ಅಪ್ಪ ಹಾಂಗೆ ತಿಳಿಶಿ ಕೊಟ್ಟದಕ್ಕೆ ಧನ್ಯವಾದಂಗ ಅಪ್ಪಚ್ಚಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಶಾ...ರೀತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°ಚೆನ್ನೈ ಬಾವ°ಹಳೆಮನೆ ಅಣ್ಣಪ್ರಕಾಶಪ್ಪಚ್ಚಿಕೇಜಿಮಾವ°ಅನುಶ್ರೀ ಬಂಡಾಡಿಗಣೇಶ ಮಾವ°ಶುದ್ದಿಕ್ಕಾರ°ದೀಪಿಕಾಅಕ್ಷರದಣ್ಣಚುಬ್ಬಣ್ಣಪುಣಚ ಡಾಕ್ಟ್ರುಬೋಸ ಬಾವವೆಂಕಟ್ ಕೋಟೂರುವಿನಯ ಶಂಕರ, ಚೆಕ್ಕೆಮನೆಡಾಮಹೇಶಣ್ಣಬಂಡಾಡಿ ಅಜ್ಜಿವಾಣಿ ಚಿಕ್ಕಮ್ಮಪೆಂಗಣ್ಣ°ಒಪ್ಪಕ್ಕಮಾಲಕ್ಕ°ಶೇಡಿಗುಮ್ಮೆ ಪುಳ್ಳಿvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ