ಸಮಯ, ಚೈನ್, ಬ್ಲೇಡ್, ಮುಂಡಾಸು, ಟೊಪ್ಪಿ ಇತ್ಯಾದಿ…

ಆನೆಯ ಕ್ರಯ ಮಾಡುವ ಬಗ್ಗೆ ಒಪ್ಪಣ್ಣಲ್ಲಿ ಒಂದು ಲೆಕ್ಕ ಕೊಟ್ಟಿ ಅಲ್ಲದಾ, ಅದರಲ್ಲಿ ಬಙ ಎಂತ ಇದ್ದು. Excell sheet ಲ್ಲಿ ಆನು ಒಂದೇ ನಿಮಿಷಲ್ಲಿ ಮಾಡಿ ಕೊಡುವೆ, ಶರ್ಮ ಮಾವ” ಹೇಳಿದ 2 ನೇ ವರ್ಷ PUC ಕಲಿವ ನೆರೆಕರೆ ಮಾಣಿ.

ಖಂಡಿತಾ ಎಡಿಗು ಮಾಣಿ, ದೊಡ್ಡ ಲೆಕ್ಕ ಎಂತ ಅಲ್ಲ ಅದು. ಲೆಕ್ಕ ಮಾಡ್ಲೆ ಹೇಳಿ ಅಪ್ಪಗ ನಿನಗೆ ಅದಕ್ಕೆ ಒಂದು ಉತ್ತರ ಸಿಕ್ಕೆಕ್ಕು ಹೇಳಿ ಕಾರ್ಯ ರೂಪಕ್ಕೆ ಇಳುಸಿದೆ. ಆದರೆ ನಾವು ಅದರ ನಮ್ಮ ಜೀವನಲ್ಲಿ ಹೇಂಗೆ ಅಳವಡುಸುತ್ತು ಹೇಳುವದರಲ್ಲಿ ಇಪ್ಪದು ಹೇಳಿದೆ.
ನೀನು ಈಗ II PUC ಲಿ ಕಲಿತ್ತಾ ಇಪ್ಪದಲ್ಲದ, ಮೊನ್ನೆ I PUC ಪರೀಕ್ಷೆಗೆ ಅಪ್ಪಗ ಇರುಳು ಇಡೀ ಕೂದೊಂಡು ಎಂತಕೆ ಓದಿದೆ?  ಅಂದಂದ್ರಾಣದ್ದು ಅಂದಂದು ಕಲ್ತಿದ್ದರೆ ಈ ಬಙ ಬತ್ತಿತ್ತಾ? ಕೇಳಿದೆ.

ಇಂದ್ರಾಣದ್ದು ಇಂದು ಓದ್ಲೆ ಬೇಕಪ್ಪಸಮಯ ಆನೆಯ ಸುರುವಾಣ ಉಗುರಿನ ಕ್ರಯದ ಹಾಂಗೆ. ಸುಲಭಲ್ಲಿ ಮುಗಿಗು. ಇಂದ್ರಾಣದ್ದು ಬಾಕಿ ಮಡುಗಿರೆ ನಾಳಂಗೆ ಅಪ್ಪಗ ಎರಡು ದಿನದ್ದು ಸೇರಿತ್ತಲ್ಲದ. ಅಷ್ಟು ಮಾತ್ರ ಅಲ್ಲದ್ದೆ ಇಂದ್ರಾಣದ್ದರ ನಾಳೆ ಅರ್ಥ ಮಾಡ್ಲೆ ಹೆಚ್ಚು ಸಮಯವೂ ಬೇಕಾವುತ್ತು. ಹಾಂಗೆ ನಾಳೆ ಕಲಿವಲೆ ಹೆರಟರೆ ಎರಡನೆ ಉಗುರಿನ ಕ್ರಯದ ಹಾಂಗೆ. ಎರಡು ಮೂರು ದಿನ ಹೀಂಗೆ ಹೋದ ಕೂಡ್ಲೆ ಉದಾಸೀನ ಅಪ್ಪಲೆ ಸುರು ಆಗಿ ಮತ್ತೆ ಅದಕ್ಕೆ ಬೇಕಾದ ಸಮಯವೂ ಆನೆಯ ಮತ್ತಾಣ ಉಗುರಿನ ಕ್ರಯದ ಹಾಂಗೆ ಏರುತ್ತ ಹೋವುತ್ತು. ಕಡೆಂಗೆ ಪರೀಕ್ಷೆಗೆ ಅಪ್ಪಗ ಎಲ್ಲಾ ಒಟ್ಟು ಸೇರಿ ಓದಲೇ ಸಮಯ ಸಾಕಾವುತ್ತಿಲ್ಲೆ ಹೇಳಿ ಅಪ್ಪದು ಅಲ್ಲದ? ಇಲ್ಲಿ ಕ್ರಯದ ಬದಲು ಸಮಯ ಹೇಳಿ ತಿಳ್ಕೊಆಷ್ಟೆ.
ಅಪ್ಪು ಮಾವ. ಕ್ರಿಕೆಟ್ ಆಟ ನೋಡುವದರಲ್ಲಿ ಓದುವದರ ರಜ ದಿನ ಬಿಟ್ಟದು ಮತ್ತೆ ಅಕೇರಿಗೆ ಅಪ್ಪಗ ಗೊಂತಾತು, ಇನ್ನು ಮುಂದೆ ಓದಿ ಸಮಯ ಒಳುದರೆ ಮಾತ್ರ TV ಲಿ ಬಪ್ಪ ಆಟಂಗಳ ನೋಡ್ತೆ ಹೇಳಿದ.

ಮಾರ್ಕ್ ತೆಗವಲೆ ಲೆಕ್ಕ ಹಾಕಲೆ ಗೊಂತಿಲ್ಲದ್ದರೂ, ಸಮಯ ಸದುಪಯೋಗಕ್ಕೆ ಲೆಕ್ಕ ಮಾಡ್ಲೆ ಗೊಂತಿರೆಕು.

________________________________________________________

ಇತ್ತೀಚೆಗೆ ಅಷ್ಟೊಂದು ಪ್ರಚಾರಲ್ಲಿ ಇಲ್ಲದ್ದ ಒಂದು ವಿಷಯ ಹೇಳಿರೆ “ಚೈನ್” ಮಾರ್ಕೆಟಿಂಗ್ ಇಲ್ಲದ್ದರೆ “ಮನಿ ಸರ್ಕುಲೇಷನ್ ಸ್ಕೀಂ”.
ಕೆಲವು ವರ್ಷ ಹಿಂದೆ, ಎನ್ನ ಒಬ್ಬ ಗೆಳೆಯ ಈ “ಮನಿ ಸರ್ಕುಲೇಷನ್ ಸ್ಕೀಂ” ಬಗ್ಗೆ ವಿವರಿಸಿ, ನೀನು ಸೇರಲೇ ಬೇಕು, ತುಂಬಾ ಪೈಸೆ ಮಾಡ್ಲಕ್ಕು ಹೇಳಿದ. ತುಂಬಾ ಸುಲಭ ಇದ್ದು.
ಸುರುವಿಂಗೆ 2 ಸಾವಿರ ಹಾಕಿ ನೀನು 6 ಜೆನ ಮಾಡಿರೆ ಆತು. ಅವು ಮತ್ತೆ ಆರು ಜೆನ ಮಾಡ್ತವು, ಹೀಂಗೆ ಈ ಚೈನ್ ಮುಂದುವರಿಸಿಗೊಂಡು ಹೋದ ಹಾಂಗೆ ನವಗೆ ಪೈಸೆ ಬಂದೊಂಡು ಇರ್ತು. ಲಕ್ಷ ಗಟ್ಟಲೆ ಬತ್ತು ಹೇಳಿ ಪೇಪರಿಲ್ಲಿ ಲೆಕ್ಕ ಹಾಕಿದ.
ನವಗೆ ಜೀವನಕ್ಕೆ ಬೇಕಾದ್ದೆಲ್ಲಾ ತೆಕ್ಕೊಂಬಲೆ ಅಕ್ಕು. ಸ್ವರ್ಗಕ್ಕೆ ಮೂರೇ ಗೇಣು ಹೇಳುವಷ್ಟು ವಿವರಣೆ ಆತು
. ಕಾಂಬಲೆ ಎಷ್ಟು ಚೆಂದ ಇದ್ದು.

ಆನು ಕೇಳಿದೆ, ಅದೆಲ್ಲಾ ಅಪ್ಪು, ನೀನು ಈ ಚೈನಿಲ್ಲಿ ಎಷ್ಟನೇ ಸಾಲಿಲ್ಲಿ ಇದ್ದೆ?
ಇದರಲ್ಲಿ ಸಾಲು ಎಲ್ಲಿ ಬಂತು? ಇದು ಒಂದಕ್ಕೊಂದು ಕೊಂಡಿ ಅಲ್ಲದಾ? ಹೇಳಿದ.
ನೀನು ಸುರು ಮಾಡಿದ್ದು ಅಲ್ಲ, ಅಲ್ಲದಾ? ಕೇಳಿದೆ.

ನೋಡು ಮಾರಾಯಾ, ನೀನೇ ಸುರು ಮಾಡಿದ್ದು ಹೇಳಿ ತೆಕ್ಕೊ. ಸುರುವಾಣ ಸಾಲಿಲ್ಲಿ 6 ಜೆನಂಗೊ
ಎರಡನೆ ಸಾಲಿಲ್ಲಿ 6 X 6 = 36  (6^2).
ಮೂರನೇ ಸಾಲಿಲ್ಲಿ 6^3 = 216.
ಹೀಂಗೇ ಲೆಕ್ಕ ಹಾಕಿರೆ 6 ನೇ ಸಾಲಿಲ್ಲಿ 10077696 ಜೆನಂಗೊ (ಒಂದು ಕೋಟಿಂದಲೂ ಹೆಚ್ಚು)
ಮತ್ತೆ ಏಳ್ನೇ ಸಾಲಿಲ್ಲಿ ಅಪ್ಪಗ ಕರ್ನಾಟಕದ ಜನ ಸಂಖ್ಯೆಯ ಮೀರುಗು (ಆರು ಕೋಟಿಂದಲೂ ಹೆಚ್ಚು)
ಈಗ ನೀನೇ ಹೇಳು, ಈ ಚೈನ್ ಎಷ್ಟು ಮುಂದಂಗೆ ವರೆಗೆ ಹೋಕು? ತೆಕ್ಕೊಂಬಲೆ ಜೆನಂಗಳೇ ಇಲ್ಲದ್ದೆ ಅಕ್ಕನ್ನೆ? ಅದಕ್ಕೇ ಆನು ಕೇಳಿದ್ದು ನೀನು ಯಾವ ಸಾಲಿಲ್ಲಿ ಇದ್ದೆ?

ಎನಗೆ ಅದೆಲ್ಲಾ ಗೊಂತಿಲ್ಲೆ. ಎನ್ನ ಪ್ರೆಂಡಿಂಗೆ ಪೈಸೆ ತುಂಬಾ ಬಯಿಂದು ಹೇಳಿದ

ಅದಪ್ಪು. ಆನು ಹೇಳಿದ ಹಾಂಗೆ ಸುರುವಾಣ ಕೆಲವು ಸಾಲಿಲ್ಲಿ ಇಪ್ಪವಕ್ಕೆ ರಜ ಪೈಸ ಅಕ್ಕು.
ಮತ್ತಾಣವು ಜೆನ ಮಾಡ್ಲೆ ಎಲ್ಲಿಗೆ ಹೋಪದು? ಅಥವಾ ನೀನೇ ಹೇಳಿದ ಹಾಂಗೆ ಚೈನ್ ತುಂಡು ಆದರೆ ಪೈಸ ಬಪ್ಪದು ನಿಂಗು ಅಲ್ಲದ?
ಹೀಂಗಿಪ್ಪ ಚೈನ್ ಸಿಸ್ಟೆಂಗೊ ಪೇಪರಿಲ್ಲಿ ಬರವಲೆ ಮಾತ್ರ ಚೆಂದ
ಮಾರ್ಕೆಟಿಂಗ್ ಕಂಪೆನಿಯವು ಕೂಡಾ ಇದೇ ರೀತಿ ಚೆಂದಕೆ ಮಾತಾಡಿ, ಸದಸ್ಯ (member) ಮಾಡಿ ಬಿಡ್ತವು.
ಮತ್ತೆ ನಾವು ಜೆನ ಮಾಡ್ಲೆ ಹೆರಡುವಾಗಲೇ ಗೊಂತಪ್ಪದು ಅದರ ಕಷ್ಟ. ಅವು ಹೇಳುವ ಲೆಕ್ಕಲ್ಲಿ ಚೈನ್ ಮುಂದೆ ಹೋದರೆ 12 ಸಾಲು ಮಾಡ್ಲೆ ಭಾರತದ ಜೆನಂಗೊ ಸಾಕಾಗ.
ಇದು ಒಂದಕ್ಕೂಂದು ಸೇರಿ ಬೆಸೆವ ಸಂಕೋಲೆ ಅಲ್ಲ, ಬದಲಿಂಗೆ ನಮ್ಮ ಬಂಧನದ ಸಂಕೋಲೆ ಅಥವಾ ಕಿಸೆಗೆ ಹಾಕುವ ಕತ್ತರಿ.

ಮಾರ್ಕ್ ತೆಗವಲೆ ಲೆಕ್ಕ ಮಾಡ್ಲೆ ಗೊಂತಿಲ್ಲದ್ದರೂ, ಗಳಿಸಿದ್ದರ ಒಳುಸಲೆ ತಕ್ಕ ಆದರೂ ಲೆಕ್ಕ ಗೊಂತಿರೆಕು.

________________________________________________________

ಇನ್ನೊಂದು ನೆಂಪಾತು.

ಧಿಡೀರನೆ ಒಂದು ದಿನ ಹೊಸ ಅಂಗಡಿ ಸುರು ಆವುತ್ತು. ಅರ್ಧ ಕ್ರಯ ಕೊಟ್ಟರೆ, 15 ದಿನ ಕಳುದಪ್ಪಗ ಸಾಮಾನಿನ ನವಗೆ ಕೊಡ್ತವು.
ಜೆನಂಗಳ ವಿಶ್ವಾಸಕ್ಕೆ ತೆಕ್ಕೊಂಬಲೆ ಸಣ್ಣ ಸಣ್ಣ ಸಾಮಾನುಗಳ ಕೊಡ್ಲೆ ಸುರು ಮಾಡ್ತವು.
ರಜ ದಿನ ಕಳುದಪ್ಪಗ 15 ದಿನದ ವಾಯಿದೆ ಹೋಗಿ ಒಂದು ತಿಂಗಳು ಆವುತ್ತು. ರಜ ದೊಡ್ಡ ಸಾಮಾನುಗಳನ್ನೂ ಕೊಡ್ತವು. ಮತ್ತೆ ರೆಜ ಸಮಯ ಹೋದಪ್ಪಗ ಒಂದು ತಿಂಗಳಿನ ವಾಯಿದೆ ಹೋಗಿ ಮೂರು ತಿಂಗಳು ಆವುತ್ತು.
– ಕಾರು, ಟೀವಿ, ಪ್ರಿಡ್ಜ್, ವಾಶಿಂಗ್ ಮೆಶಿನ್ ಎಲ್ಲಾ ಲೀಸ್ಟಿಲ್ಲಿ ಬತ್ತು. ಜೆನಂಗೊ ಎಲ್ಲಾ ಸಾಲವೋ ಸೋಲವೋ ಮಾಡಿ ಇಲ್ಲದ್ದ ಪೈಸೆಯ ಕಷ್ಟ ಪಟ್ಟು ತಂದು ತುಂಬುಸುತ್ತವು.
ಒಂದು ದಿನ ಉದಿಯಪ್ಪಗ ನೋಡಿರೆ ಅಂಗಡಿಯೂ ಇಲ್ಲೆ, ಯಜಮಾನನೂ ಇಲ್ಲೆ. ಪೈಸ ಹಾಕಿದವು ಕೋಪಂದ ಅಂಗಡಿಲಿ ಸಿಕ್ಕಿದ ಮೇಜೋ ಕುರ್ಚಿಯೋ ಸಿಕ್ಕಿದ್ದರ ಸಿಕ್ಕಿದವು ತೆಕ್ಕೊಂಡು ಹೋವುತ್ತವು.
ಬಾಕಿ ಇಪ್ಪವು ಪೋಲೀಸ್ ಕಂಪ್ಲೈಂಟ್ ಕೊಡ್ತವು. ಪೈಸ ಕಳಕ್ಕೊಂಡವು ಶಾಪ ಹಾಕುತ್ತವು. ಅಲ್ಲಿಗೆ ಕತೆ ಮುಗಿತ್ತು!!

ರಜಾ ಅಲೋಚನೆ ಮಾಡುವ. ಜೆನಂಗೊ ಎಲ್ಲಿ ತಪ್ಪಿದವು ಹೇಳಿ.

ಅರ್ಧ ಕ್ರಯಕ್ಕೆ ಸಾಮಾನು ಕೊಡ್ತವು ಹೇಳಿರೆ, ನವಗೆ ಶೇಕಡಾ ನೂರು ಲಾಭ. ಅದು ಕೂಡಾ 15 ದಿನಲ್ಲಿ. ವಾರ್ಷಿಕ ಬಡ್ಡಿ 2400%.
3 ತಿಂಗಳಿಲ್ಲಿ ಡಬ್ಬಲ್ ಕೊಡ್ತವು ಹೇಳಿರೆ ವಾರ್ಷಿಕ ಬಡ್ಡಿ 400%
ಆರಿಂಗಾರೂ ನಮ್ಮ ಪೈಸಗೆ ಅಷ್ಟೊಂದು ಬಡ್ಡಿ ನ್ಯಾಯ ಮಾರ್ಗಲ್ಲಿ ದುಡಿವಲೆ ಎಡಿಗಾ?
ಆ ಮನುಷ್ಯ ಒಂದು ವೇಳೆ ಅನ್ಯಾಯ ಮಾರ್ಗಲ್ಲಿ ದುಡಿದು ಮಾಡ್ತ ಹೇಳಿರೆ, ನವಗೆ ಅದು ಬೇಕಾ? ಅಲ್ಲ ಅವ ಅದರ ಅಷ್ಟು ಸುಲಭಲ್ಲಿ ಜೆನಂಗೊಕ್ಕೆ ದಾನ ಮಾಡುಗೋ? ಅವ ಜೆನಂಗೊಕ್ಕೆ ಅನ್ಯಾಯವೇ ಮಾಡೆಕ್ಕಷ್ಟೆ. ನಾವು ಮೋಸ ಹೋಪದು ಇಲ್ಲಿ.

ಮಾರ್ಕ್ ತೆಗವಲೆ ಲೆಕ್ಕ ಮಾಡ್ಲೆ ಗೊಂತಿಲ್ಲದ್ದರೂ, ಬೇರೆಯವರಿಂದ ಮೋಸ ಹೋಗದ್ದಷ್ಟಾದರೂ ಲೆಕ್ಕ ಗೊಂತಿರೆಕು.

________________________________________________________

ಆನೆ ಲೆಕ್ಕಲ್ಲಿ ಬ್ಯಾರಿ ಸೋತತ್ತು ಹೇಳಿ ಕೊಶಿ ಆದಿಕ್ಕು. ಅಲ್ಲಿ ಅದು ಸೋತಿಕ್ಕು, ಆದರೆ ನಿಜ ಜೀವನಲ್ಲಿ ಹಾಂಗೆ ಅಲ್ಲ.

ಒಂದು ಊರಿಲ್ಲಿ ಒಬ್ಬ ವ್ಯಾಪಾರಿ ಇತ್ತಿದ್ದ. ಮುಂಡಾಸಿಂಗೆಂ ಮತ್ತೆ ಟೊಪ್ಪಿಗೆ  ಬೇಕಾದ ವಸ್ತ್ರವ ಅವನೇ ನೇಯ್ದು, ರೆಡಿ ಮೇಡ್ ಮುಂಡಾಸು ಮತ್ತೆ  ಟೊಪ್ಪಿ ಮಾರಿಗೊಂಡು ಇತ್ತಿದ್ದ. ಪ್ರಾಯ ಅಪ್ಪಗ ಅವಂಗೆ ಬಙ ಅಪ್ಪಲೆ ಸುರು ಆತು. ಅವ ದೇವರ ಹತ್ರ ಒಂದು ವರ ಕೇಳಿದ.
ಎನಗೆ ಈಗ ನೇವಲೆ ಎಡಿತ್ತಿಲ್ಲೆ. ರೆಡಿಮೇಡ್ ಮುಂಡಾಸಿಂಗೆ ಮತ್ತೆ ಟೊಪ್ಪಿಗೆ ಸಾಕಷ್ಟು ಬೇಡಿಕೆ ಇದ್ದು. ಹಾಂಗಾಗಿ ವಸ್ತ್ರ ನೇಯದ್ದೆ, ಮುಂಡಾಸು ಮತ್ತೆ ಟೊಪ್ಪಿಗೊ ಅದರಷ್ಟಕ್ಕೆ ತಯಾರು ಆಯೆಕ್ಕು. ಹಾಂಗಿಪ್ಪ ವರ ಕೊಡು.

ಇವನ ಕಷ್ಟ ನೋಡಿದ ದೇವರು ಒಪ್ಪಿದ. ಆದರೆ ಒಂದು ಕಂಡಿಷನ್ ಹಾಕಿದ.

ನೀನು ಇಂದು ಒಂದು ಮುಂಡಾಸನ್ನೂ, ಒಂದು ಟೊಪ್ಪಿಯನ್ನೂ ಕತ್ತಲೆ ಕೋಣೆಲಿ ಮಡುಗು. 3 ದಿನ ಕಳುದು ನೋಡಿರೆ ಅದು ಹೆಚ್ಚು ಆಗಿಂಡು ಇಕ್ಕು. ಮುಂಡಾಸು ದಿನಕ್ಕೆ 2 ರ ಆವರ್ತಲ್ಲಿ ವೃದ್ಧಿ ಅಕ್ಕು ಆದರೆ ಟೊಪ್ಪಿ ದಿನಕ್ಕೆ 4 ರ ಆವರ್ತಲ್ಲಿ ವೃದ್ಧಿ ಅಕ್ಕು.
ಅದು ಎಂತ ಹಾಂಗೆ. ಮುಂಡಾಸು ಮಾತ್ರ ಕಮ್ಮಿ ವೃದ್ಧಿ ಅಪ್ಪದು, ಟೊಪ್ಪಿ ಮಾತ್ರ ಜಾಸ್ತಿ- ಕೇಳಿಯೇ ಬಿಟ್ಟ ವ್ಯಾಪಾರಿ
ಮುಂಡಾಸಿಂಗೆ ಆದರೆ ಹೆಚ್ಚು ವಸ್ತ್ರ ಬೇಕಲ್ಲದ, ಮಾತ್ರ ಅಲ್ಲದ್ದೆ ಅದಕ್ಕೆ ಅದರದ್ದೇ ಆದ ಒಂದು ಗತ್ತು, ಠೀವಿ ಇದ್ದು. ಟೊಪ್ಪಿಗೆ ಆದರೆ ಕಮ್ಮಿ ವಸ್ತ್ರ ಬೇಕಾದ್ದು. ಆರು ಬೇಕಾರೂ ಮಾಡ್ಲೆ ಎಡಿಗು ಹೇಳಿ ದೇವರು ಸಮಾಧಾನ ಮಾಡಿದ.

3 ದಿನ ಕಳುದಪ್ಪಗ ನೋಡಿರೆ ವ್ಯಾಪಾರಿಗೆ ಆಶ್ಚರ್ಯ ಆತು. ದೇವರು ಹೇಳಿದ್ದು ಸತ್ಯ ಆಯಿದು. ಕೋಣೆ ಒಳ ನೋಡಿದರೆ ಅವ ಮಡುಗಿದ್ದಲ್ಲದ್ದೆ  14 ಮುಂಡಾಸುಗಳೂ, 84 ಟೊಪ್ಪಿಗಳೂ ಜಾಸ್ತಿ ಆಯಿದು.
ಈಗ ಹೇಂಗಿದ್ದರೂ ಟೊಪ್ಪಿಗೇ ಹೆಚ್ಚು ಬೇಡಿಕೆ ಇಪ್ಪದು. ಮುಂಡಾಸಿಂಗೆ ಅಲ್ಲ ಹೇಳಿ ವ್ಯಾಪಾರಿಗೆ ಕೊಶಿ ಆತು. 50:50 ಪ್ರಮಾಣಲ್ಲಿ ಇತ್ತಿದ್ದ ಮುಂಡಾಸು ಮತ್ತೆ ಟೊಪ್ಪಿ ಈಗ 15:85 ಆತು.

ತಲೆಲಿ ಮುಂಡಾಸು ಮಡ್ಕೊಳದಿದ್ದರೂ ಟೊಪ್ಪಿ ಹಾಕ್ಸಿಗೊಂಬಲೆ ಆಗದ್ದಷ್ಟು ಲೆಕ್ಕ ಗೊಂತಿರೆಕು.

ಶರ್ಮಪ್ಪಚ್ಚಿ

   

You may also like...

5 Responses

 1. ನಿಜಕ್ಕು ನಿಂಗಳ ಲೇಖನದ ವಿಷಯ ಆಲೋಚನೆ ಮಾಡೆಕ್ಕಾದ ಸಂಗತಿ.. ಆನು ಕೂಡ ಈ ಡೈರೆಕ್ಟ್ ಮಾರ್ಕೆಟಿಂಗ್ ಲಿ ಎರಡು ವರ್ಷ ಕೆಲಸ ಮಾಡಿದ್ದೆ,, ಆ ನಮೂನೆಯ ಲೆಕ್ಕ ನೋಡಲೆ ಸುಲಾಭ, ಆದರೆ ಹಾಂಗೆ replication ಅಪ್ಪಲೆ ಸಾಧ್ಯ ಇಲ್ಲೆ. 80% ಜನ ಅದರ ಮುಂದುವರ್ಸದ್ದೆ ಬಿಡ್ತವು, ಇನ್ನು ಜನಸಂಖ್ಯೆ ಮುಗಿವ ಪ್ರಶ್ನೆ ಎಲ್ಲಿ ಬಂತು? ಆದರ್ರೆ ಕಂಪನಿಗಳ ಬಗ್ಗೆ ಜಾಗ್ರತೆ, ಅದರ ಪ್ರಮೋಟರ್ಸ್ ಬಗ್ಗೆ ತಿಳ್ಕೊಂಡೇ ಮುಂದುವರಿಯೆಕ್ಕು.. . ಎಂತಕೆ ಹೇಳಿರೆ, ಈ ವ್ಯವಸ್ತೆಲಿ ಕಳಪೆ ವಸ್ತುಗಳ ಮಾರುಕಟ್ಟೆಗೆ ತಳ್ಳುವ ಒಂದು ಬುದ್ದಿವಂತಿಕೆಯ ಈ ಕಂಪನಿಗ ತೋರ್ಸುತ್ತವು. ವ್ಯವಸ್ತೆ ನಿಜಕ್ಕು ಪೈಸ ಅಪ್ಪದೆ, ಆದರೆ, 🙂 ಎಲ್ಲರಿಂಗು ಅಲ್ಲ.. 🙂 ಸಂಗ್ರಹಯೋಗ್ಯ ಲೇಖನ ಶರ್ಮಪ್ಪಚ್ಚಿ,,

 2. ಒಳ್ಳೆಯ ಲೇಖನ.ಮಕ್ಕಳ ಓದುಲೆ ಹೇಳುವ ನಾವು ಶಾಲೆಗೆ ಹೋಪ ಮಕ್ಕ ಇಪ್ಪಗ t.v. ನೋಡುದರ ಬಿಡುಲೆ ಯೋಚನೆ ಮಾಡುತ್ತು.ಒತ್ತಿಲಿ ಮಕ್ಕೊಗೆ ಒದುವ ಆಸಕ್ತಿ ಬೆಳೆಸುವಾ೦ಗೆ ಮಾಡೆಕ್ಕಪ್ಪದು ಮುಖ್ಯ ಅಲ್ಲದಾ.ಮೋಸ ಹೋಪೋರು ಇಪ್ಪ ವರೇಗೆ ಮೋಸ ಮಾದುವೋರು ಇರುತ್ತವು ಹೇಳುದು ಮೊದಲು,ಇ೦ದು.ಮು೦ದೂ ಸತ್ಯ.ಸದ್ವಿನಿಯೋಗ ಮಾಡುಲೆ,ನಿಜವಾಗಿಯೂ ಅಗತ್ಯ ಇಪ್ಪ ಒಬ್ಬ ಬಡವ೦ಗೆ ಸಹಾಯ ಮಾಡುಲೆ ಹಿ೦ದೆ ಮು೦ದೆ ನೋಡುವ ನಮ್ಮೋರು ನಿ೦ಗೊ ಮೇಲೆ ತಿಳಿಸಿದ ಎಲ್ಲಾ ಹಣಕಾಸಿನ ವ್ಯವಸ್ತೆಲಿ ತೊಡಗಿಸಿ ಈಗ ಹೇಳುಲೆ ಎಡಿಯದ್ದೆ ವ್ಯಥಿಸುವೋರು.
  ಪ್ರಕಟಿಸಿದ ನಿ೦ಗೊಗೆ ಅಭಿನ೦ದನೆ.

 3. ಕೆ.ಜಿ.ಭಟ್. says:

  ನಿಂಗಳ ಬುದ್ದಿವಾದ ಲಾಯಕಿದ್ದು.ಎಲ್ಲೊರು ಈ ಕೊಂಡಿಲಿ ಸಿಕ್ಕಿ ಅಕೇರಿಗೆ ಎನಗೆ ತೊಂದರೆ ಎಂತದೂ ಆಯಿದಿಲ್ಲೆ ಹೇಳಿ ಇನ್ನೊಬ್ಬರ ಸಿಕ್ಕುಸಿ ಹಾಕಲೆ ನೋಡ್ತವು.
  ಎಲ್ಲೊರು ಓದಿರೆ ಲಾಯಕ.

 4. ಗೋಪಾಲ ಮಾವ says:

  ಯಂಡಮೂರಿ (maari ಅಲ್ಲ, moori) ವೀರೇಂದ್ರ ನಾಥನ ಲೇಖನ ಓದಿದ ಹಾಂಗಾತು. ಲಾಯಕಿತ್ತು. ಅನುಭವದ ಮಾತೇ ಆಗಿರೆಕು. ಶರ್ಮಪ್ಪಚ್ಚಿ ಲೇಖನಂಗಳಲ್ಲಿ ಹೊಸತನ ಇರುತ್ತು. ಧನ್ಯವಾದಂಗೊ.

 5. giriajakkala says:

  bhaaree layika aayidu.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *