ಸರ್ವಂ ಪ್ಲಾಸ್ಟಿಕ್ ಮಯಂ

September 16, 2010 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಿಲಾಯುಗ ಮತ್ತೆ ಲೋಹ ಯುಗಂದ ನಂತ್ರ ನಾವು ಈಗ ಪ್ಲಾಸ್ಟಿಕ್ ಯುಗಲ್ಲಿ ಇದ್ದು. ಪ್ಲಾಸ್ಟಿಕ್ ಯಾವುದಕ್ಕೆಲ್ಲಾ ಉಪಯೋಗ ಆವುತ್ತು ಕೇಳಿರೆ ಯಾವುದಕ್ಕೆ ಉಪಯೋಗ ಇಲ್ಲೆ ಹೇಳಿ ಆಲೋಚನೆ ಮಾಡೆಕ್ಕಾದ ಪರಿಸ್ಥಿತಿಲಿ ಇದ್ದು ಇಂದು ನಾವು. ಆಸ್ಪತ್ರೆಗಳಲ್ಲಿ ಮಗು ಹುಟ್ಟಿ ಅಪ್ಪಗ ಮನುಗುಸಲೆ ಉಪಯೋಗಿಸುವ ಹಾಳೆ (sheet)೦ದ ಹಿಡುದು ಪ್ರತಿಯೊಂದು ಆವಶ್ಯಕತೆಗು ಕೂಡಾ ನಾವು ಪ್ಲಾಸ್ಟಿಕ್ ನ ಉಪಯೋಗ ಮಾಡುತ್ತು. ದಿನ ನಿತ್ಯದ ನಮ್ಮ ಬಳಕೆಗಳ ಪಟ್ಟಿ ಮಾಡಿರೆ, ಪ್ಲಾಸ್ಟಿಕ್ ಇಲ್ಲದ್ದ ಸಾಧನಂಗೊ ಬಹಳ ಕಮ್ಮಿ ಹೇಳಿಯೇ ಹೇಳ್ಲಕ್ಕು. ಮುಂದೊಂದು ದಿನ ನಮ್ಮ ಭೂಮಿಯ ಉತ್ಖನನ ಮಾಡಿರೆ ಬರೇ ಪ್ಲಾಸ್ಟಿಕ್ ಸಿಕ್ಕುಗಷ್ಟೆ.

ಹಾಂಗಾರೆ ಇದರ ಉಪಯೋಗ ಇಷ್ಟು ಜಾಸ್ತಿ ಅಪ್ಪಲೆ ಕಾರಣ ಎಂತ ಮತ್ತೆ ಇದರ ಉಪಯೋಗದ ಸಾಧಕ ಬಾಧಕಂಗಳ ರೆಜಾ ಅಲೋಚನೆ ಮಾಡುವೊ°.

ಕಡಿಮೆ ಖರ್ಚಿಲ್ಲಿ ಸುಲಾಭಲ್ಲಿ ತಯಾರು ಮಾಡ್ಲೆ ಆವುತ್ತು, ನೀರಿಲ್ಲಿ ವಿಲೀನ ಆವುತ್ತಿಲ್ಲೆ, ಬೇಕಾದ ಆಕಾರಕ್ಕೆ, ಗಾತ್ರಕ್ಕೆ ಹೊಂದಿಸಿಗೊಂಬಲೆ ಆವುತ್ತು (ತೆಳೂ ಶೀಟ್, ಪ್ಲೇಟ್, ದಾರ, ಪೈಪ್, ಪೆಟ್ಟಿಗೆ, ಬಾಟ್ಲಿ ಇತ್ಯಾದಿ). ಈ ಎಲ್ಲಾ ಅನುಕೂಲಂದಾಗಿ, ಇಂದು ಸಣ್ಣ ಪೇಪರ್ ಕ್ಲಿಪ್ ೦ದ ಹಿಡುದು ದೊಡ್ಡ ದೊಡ್ಡ ಹಡಗು, ವಿಮಾನಂಗಳಲ್ಲಿ ಕೂಡಾ ಇದರ ಬಳಕೆ ಯಥೇಚ್ಛವಾಗಿ ನಡೆತ್ತಾ ಇದ್ದು. ಲೋಹ, ಮರ, ಪಿಂಗಾಣಿ, ಪೇಪರ್ , ಚರ್ಮ, ಗಾಜು ಇತ್ಯಾದಿ ಉಪಯೋಗಿಸಿ  ಮಾಡುತ್ತ ಎಲ್ಲಾ ಸಾಧನಂಗಳ ಇಂದು ಪ್ಲಾಸ್ಟಿಕ್ ೦ದ ಮಾಡ್ಲೆ ಎಡಿತ್ತು. ಕಾಂಬಲೆ ಚೆಂದ, ಬಿದ್ದರೆ ಒಡದು ಹೋವುತ್ತು ಹೇಳ್ತ ಹೆದರಿಕೆ ಇಲ್ಲೆ, ಕ್ರಯವೂ ಕಮ್ಮಿ. ಜೆನಂಗೊಕ್ಕೆ ಇದಕ್ಕಿಂತ ಹೆಚ್ಚಿಗೆ ಎಂತ ಬೇಕು. ಇದರಲ್ಲಿಯೇ ಬೇಕಾಷ್ಟು ಆವಿಷ್ಕಾರಂಗಳ ಮಾಡಿದವು. ಪೇಪರ್ ಟೀವಿ ಗಳಲ್ಲಿ ಜಾಹೀರಾತು (advertisement) ಕೊಟ್ಟವು, ಜೆನಂಗಳ ಅಗತ್ಯ ಎಂತರ ಹೇಳಿ ಸರ್ವೇ ಮಾಡಿದವು. ಬೇಕಾ ಬಿಟ್ಟಿ ಮಾರ್ಕೆಟ್ಟಿಂಗೆ ಬಿಡುಗಡೆ ಮಾಡಿದವು. ಜೆನಂಗಳೂ ಹಿಂದು ಮುಂದು ನೋಡದ್ದೆ ಉಪಯೋಗಿಸಲೆ ಸುರು ಮಾಡಿದವು. ಈಗ ಪರಿಸ್ಥಿತಿ ಎಲ್ಲಿಗೆ ಎತ್ತಿದ್ದು ಹೇಳಿರೆ ಪ್ಲಾಸ್ಟಿಕ್ ಇಲ್ಲದ್ದರೆ ಜೀವನವೇ ಇಲ್ಲೆ ಹೇಳ್ತ ಮಟ್ಟಿಂಗೆ ಆಯಿದು.

ಪ್ಲಾಸ್ಟಿಕ್ ಹೇಳಿರೆ ಎಂತರ?

ಗ್ರೀಕ್ ಶಬ್ದ “ಪ್ಲಾಸ್ಟಿಕೋ” ಹೇಳಿರೆ ಸುಲಭವಾಗಿ ಬೇಕಾದ ಆಕಾರ ಕೊಡ್ಲೆ ಎಡಿಗಪ್ಪದು ಹೇಳ್ತ ಅರ್ಥ.ಇದರಿಂದ “ಪ್ಲಾಸ್ಟಿಕ್” ಶಬ್ದ ಬಂತು.

ಇದರ ತಯಾರಿಲಿ ಬೇಕಪ್ಪ ಮುಖ್ಯ ಅಂಶಂಗೊ (component) ಕಾರ್ಬನ್ (carbon), ಹೈಡ್ರೊಜನ್ (hydrogen), ಮತ್ತೆ ಸಣ್ಣ ಪ್ರಮಾಣಲ್ಲಿ ಆಮ್ಲಜನಕ (oxygen), ಸಾರಜನಕ (nitrogen), ಗಂಧಕ (sulphur). ಪೆಟ್ರೋಲಿಯಂ ಉತ್ಪನ್ನಂಗಳಲ್ಲಿ ಕಾರ್ಬನ್ ಮತ್ತೆ ಹೈಡ್ರೊಜನ್  ಅಧಿಕ ಪ್ರಮಾಣಂಗಳಲ್ಲಿ ಇಪ್ಪ ಕಾರಣ ಕಚ್ಚಾ ವಸ್ತು ಆಗಿ ಇದರ ಉಪಯೋಗ ಆವುತ್ತು.

ದೈನಂದಿನ  ಉಪಯೋಗಕ್ಕೆ ಅನುಕೂಲ ಅಪ್ಪ ಹಾಂಗೆ ಪ್ಲಾಸ್ಟಿಕ್ ಲ್ಲಿ ಹಲವಾರು ವಿವಿಧತೆಗೊ ಇದ್ದು.

 1. PET (PolyEthylene Terephathalate): ನೀರಿನ ಬಾಟ್ಲಿ, ಸೋಪ್ಟ್ ಡ್ರಿಂಕ್ಸ್ ಬಾಟ್ಲಿ, ಅಡಿಗೆ ಎಣ್ಣೆ ಬಾಟ್ಲಿ ಇತ್ಯಾದಿ ತಯಾರು ಮಾಡುವಲ್ಲಿ ಇದರ ಉಪಯೋಗ
 2. HDPE (High Density Poly Ethylene): ಜಗ್ (jug), ನೀರಿನ ಪೈಪ್ ಇತ್ಯಾದಿ ತಯಾರಿ ಮಾಡುವಲ್ಲಿ ಇದರ ಉಪಯೋಗ
 3. PVC (Poly Vinyl Chloride): ನೀರಿನ ಪೈಪ್, ಪಿಠೋಪಕರಣ, ನೆಲಕ್ಕೆ ಹಾಸುವ ಟೈಲ್ಸ್, ಫೋಮ್ ಲೆದರ್, ಮಳೆಗಾಲಕ್ಕೆ ಆವುತ್ತ ನಮೂನೆ ಡ್ರೆಸ್, ಇತ್ಯಾದಿ ತಯಾರಿ ಮಾಡುವಲ್ಲಿ ಇದರ ಉಪಯೋಗ.
 4. LDPE (Low Density Poly Ethylene): ಸಿದ್ಧ ಪಡಿಸಿದ ಆಹಾರಂಗಳ ಪೇಕ್ ಮಾಡುವಲ್ಲಿ ಇದರ ಉಪಯೋಗ.
 5. PP (Poly Propylene): ಬಾಟ್ಲಿಗಳ ಮುಚ್ಚಳ, ಸೋಫ್ಟ್ ಡ್ರಿಂಕ್ಸ್ ಕುಡಿತ್ತ ಓಟೆ (straw), ತೆಳ್ಳಂಗಿಪ್ಪ ಫಿಲ್ಮ್ ಇತ್ಯಾದಿ ತಯಾರಿ ಮಾಡುವಲ್ಲಿ ಇದರ ಉಪಯೋಗ
 6. PS (Poly Styrene): ಊಟದ ಮೇಜಿಲ್ಲಿ ಉಪಯೋಗ ಅಪ್ಪ ಕಪ್, ತಟ್ಟೆ ಇತ್ಯಾದಿ ತಯಾರಿ ಮಾಡುವಲ್ಲಿ ಇದರ ಉಪಯೋಗ
 7. ಟಪ್ಪರ್ ವೇರ್ (tupper wear), ನಾಲ್ಜೀನ್ (nalgene) ಹೇಳುವದು ಕೂಡಾ ಪ್ಲಾಸ್ಟಿಕ್ ನ ಇನ್ನೊಂದು ರೂಪ

ಯಾವುದೇ ಪ್ಲಾಸ್ಟಿಕ್ ಸಾಧನಂಗಳಲ್ಲಿ ಹೀಂಗಿಪ್ಪ  ತ್ರಿಕೋನ ಕಂಡು, ಅದರ ಒಳ ಸಂಖ್ಯೆ ಬರಕ್ಕೊಂಡು ಇದ್ದರೆ ಅದು ಯಾವ ಜಾತಿ ಪ್ಲಾಸ್ಟಿಕ್ ಹೇಳಲೆ ಎಡಿಗು:

1 ಇದ್ದರೆ PET, 2 ಇದ್ದರೆ HDPE, 3 ಇದ್ದರೆ PVC ಇತ್ಯಾದಿ.

ನಾವು ಉಪಯೋಗಿಸುವ ಪೋಲಿಸ್ಟರ್ (Poly Ester), non-stick ಪಾತ್ರೆಗಳ ಕೋಟಿಂಗ್ (PolyTetraFluroEthylene), ಕಾಂಟಾಕ್ಟ್ ಲೆನ್ಸ್ (Perplex, Oroglas, Plexiglas etc)   ಅಲ್ಲದ್ದೆ ಇನ್ನೂ ಹಲವಾರು ಪ್ಲಾಸ್ಟಿಕ್ ನ  ಅವತಾರಂಗೊ ಇದ್ದು.

ಎಲ್ಲಾ ನಮೂನೆಯ ಪ್ಲಾಸ್ಟಿಕ್ ಗಳ ಹೆಸರಿಲ್ಲಿಯೂ ಒಂದು ಸಾಮಾನ್ಯ ಹೆಸರು ಬಪ್ಪದು “ಪೋಲಿ” (poly). ಜಾಸ್ತಿ ಪೋಲಿ ಕಟ್ಟಿ ಉಪಯೋಗಿಸೆಡಿ ಹೇಳ್ತ ಸೂಚನೆಯ ಹಾಂಗೆ ಇದ್ದಲ್ಲದ.
ನಗೆಗಾರಂಗೆ ಪೋಲಿ ಎಳಗಲೂ ಸಾಕು!

ಪೋಲಿ ಹೇಳಿರೆ “ತುಂಬಾ” ಹೇಳ್ತ ಅರ್ಥ.   ಎಥಿಲೀನ್ (CH2=CH2) ಹೇಳ್ತ ಒಂದು ಕೆಮಿಕಲ್ಸಿಂದ ಪೋಲಿ ಎಥಿಲೀನ್ (poly ethylene) ತಯಾರು ಆವುತ್ತು, ಹಲವಾರು ಎಥಿಲೀನ್ (CH2=CH2) ಗೊ ಒಂದಕ್ಕೊಂದು ಸೇರಿಗೊಂಡು ಹೋಗಿ ಚೈನ್ ನ ಹಾಂಗೆ ಆಗಿ ಕಡೇಂಗೆ ಜಡೆ ಹೆಣದ ಹಾಂಗೆ ಆಗಿ ಗಟ್ಟಿ ಆವುತ್ತು. ಇದುವೇ  ಪೋಲಿ ಎಥಿಲೀನ್. ಹೀಂಗಿಪ್ಪ ರಾಸಾಯನಿಕ ಕ್ರಿಯೆಗೆ ಪೋಲಿಮೆರೈಸೇಶನ್ (Polymerisation) ಹೇಳ್ತವು, ಮತ್ತೆ ಎಲ್ಲಾ ಪ್ಲಾಸ್ಟಿಕ್ ಗಳ ಸಾಮಾನ್ಯವಾಗಿ “ಪೋಲಿಮರ್ಸ್” ಹೇಳ್ತವು.   ಅದೇ ರೀತಿ ಪ್ರೊಪಿಲೀನ್ (CH2=CHCH3) ೦ದ ಪೋಲಿಪ್ರೊಪಿಲೀನ್.
ಬೇರೆ ಬೇರೆ ಕೆಮಿಕಲ್ಸಿಂದ ಬೇರೆ ಬೇರೆ ನಮೂನೆಯ ಪ್ಲಾಸ್ಟಿಕ್ ತಯಾರು ಆವುತ್ತು.

ಈ ರೀತಿ ತಯಾರಿಸುವಾಗ ಅದರ ಭೌತಿಕ ಗುಣಂಗಳ (physical properties) ಒಳ್ಳೆದು ಮಾಡ್ಲೆ ಬೇಕಾಗಿ ಅದಕ್ಕೆ ಥಾಲೇಟ್ (phthalate) ಹೇಳ್ತ ಪ್ಲಾಸ್ಟಿಸೈಸರ್ ( plasticizer), ಕ್ಲೋರಿನ್ ಕಾಂಪೌಂಡ್ ಇತ್ಯಾದಿ ಸೇರುಸುತ್ತವು.
ಇದು ನಿಧಾನಕೆ ಪ್ಲಾಸ್ಟಿಕ್೦ದ ಬಿಡುಗಡೆ ಆವುತ್ತು ಮತ್ತೆ ಉಪಯೋಗಿಸುವನ ಶರೀರ ಸೇರುತ್ತು. ಮಾತ್ರ ಅಲ್ಲದ್ದೆ PVC  ತಯಾರು ಅಪ್ಪಗ ಡಯೋಕ್ಸಿನ್ ಹೇಳುವ ಕಾನ್ಸರ್ ಕಾರಕ (carcinogenic) ಕೆಮಿಕಲ್ ಉಂಟಾವುತ್ತು ಮತ್ತೆ ಬಿಡುಗಡೆ ಆವುತ್ತು.

ಮಾರಕ ಪ್ಲಾಸ್ಟಿಕ್:

ದಿನ ನಿತ್ಯದ ಬಳಕೆಲಿ ಇಪ್ಪ ಪ್ಲಾಸ್ಟಿಕ್ ಚೀಲಂಗೊಕ್ಕೆ ಬಣ್ಣ ಬಣ್ಣದ ಚಿತ್ತಾರಂಗೊ ಇರ್ತು. ಮುಖ್ಯವಾಗಿ ಜವುಳಿ ಅಂಗಡಿಯವರ ಚೀಲ, ದಿನಸಿ ಅಂಗಡಿಗಳ ದೊಡ್ಡ ದೊಡ್ಡ ಚೀಲ, ಮಾಲ್ ಗಳಲ್ಲಿ ಕಟ್ಟಿ ಕೊಡುವ ಚೀಲಂಗೊ. ಇಲ್ಲಿ ಬಣ್ಣಂಗೊಕ್ಕೆ ಉಪಯೋಗ ಅಪ್ಪ ಕೆಮಿಕಲ್ಸ್ ಗಳಲ್ಲಿ ಸೀಸ (lead)ದ ಅಂಶ ಜಾಸ್ತಿ ಇರ್ತು ಮಾತ್ರ ಅಲ್ಲದ್ದೆ, ದಿನ ಕಳುದಪ್ಪಗ, ಆ ಬಣ್ಣಂಗೊ ನಿಧಾನಕ್ಕೆ ನಮ್ಮ ಕೈಗೋ, ಅದರಲ್ಲಿ ತುಂಬಿಸಿದ ವಸ್ತುಗೊಕ್ಕೋ ಹಿಡುದು ಹೋವುತ್ತು. ಸೀಸದ ಅಂಶ ಮನುಷ್ಯರಿಂಗೆ ಅತ್ಯಂತ ಹೆಚ್ಚು ವಿಶಕಾರಕ.

ಪ್ಲಾಸ್ಟಿಕ್೦ದ ತಯಾರು ಅಪ್ಪ ಆಟದ ಸಾಮಾನುಗಳಲ್ಲಿ ಕೂಡಾ ಈ ನಮೂನೆ ಬಣ್ಣಂಗಳ ಉಪಯೋಗ ಆವುತ್ತ ಕಾರಣ ಮಕ್ಕೊಗೆ ಇದರ ಕೊಡುವದು ಆರೋಗ್ಯದ ದೃಷ್ಟಿಂದ ಒಳ್ಳೆದಲ್ಲ. ಅವಕ್ಕೆ ಗೊಂತಿಲ್ಲದ್ದೇ ಅವರ ಹೊಟ್ಟೆ ಸೇರುವ ವಿಷ ಸೀಸದ ಅಂಶ.

ಪ್ಲಾಸ್ಟಿಕ್ ನ (ಅವ) ಗುಣಂಗಳಲ್ಲಿ ಒಂದನೇದಾಗಿ ಅದು ಮಣ್ಣಿಂಗೆ ಸೇರುತ್ತಿಲ್ಲೆ (non-biodegradable). ಹಲವಾರು ವರ್ಷ ಕಳುದರೂ ಭೂಮಿಲಿ ಹಾಂಗೇ ಒಳಿತ್ತು. ವರ್ಷಕ್ಕೆ ಸಾವಿರಾರು ಟನ್ ಗಟ್ಲೆಲಿ ತಯಾರು ಅಪ್ಪ ಪ್ಲಾಸ್ಟಿಕ್ ಭೂಮಿಗೆ ಸೇರಿಗೊಂಡು ಹೋಗಿ ಹಾಂಗೇ ಒಳುದರೆ, ಮಣ್ಣಿನ ಸಾರ ನಷ್ಟ ಅಕ್ಕಲ್ಲದ್ದೆ, ಅಂತರ್ಜಲಕ್ಕೆ ಸೇರೆಕ್ಕಾದ ನೀರು  ಮೇಗಂದಳೇ ಹರುದು ಹೋಕು. ಹಾಂಗಾಗಿ ಇದರ ಮಣ್ಣಿಲ್ಲಿ ಹುಗಿವದು ಸರಿಯಲ್ಲ. ಹಾನಿಕಾರಕ ಕೆಮಿಕಲ್ಸ್ ಗೊ ಮಣ್ಣಿಂಗೆ ಬಿಡುಗಡೆ ಆಗಿ ಆ ಮಣ್ಣು ಯಾವುದೇ ಪ್ರಯೋಜನಕ್ಕೆ ಸಿಕ್ಕದ್ದೆ ಅಕ್ಕು.

ಜೆನಂಗೊ ಮಾಡುವ ಇನ್ನೊಂದು ತಪ್ಪು ಕೆಲಸ ಹೇಳಿರೆ ಪ್ಲಾಸ್ಟಿಕ್ ನ ಹೊತ್ತುಸುವದು. ಮುಖ್ಯವಾಗಿ ಡಯೋಕ್ಸಿನ್ ಬಿಡುಗಡೆ ಅಪ್ಪದು. ಇದು PVC.ಹೊತ್ತುಸುವಾಗ ಅತ್ಯಂತ ಹೆಚ್ಚು ಪ್ರಮಾಣಲ್ಲಿ ಬಿಡುಗಡೆ ಆವುತ್ತು. ಡಯೋಕ್ಸಿನ್ ಹೇಳುವದು, ಇಷ್ಟರವರೆಗೆ ತಯಾರಿಸಿದ ಕೃತಕ ಕೆಮಿಕಲ್ಸ್ ಪೈಕಿ ಅತೀ ಹೆಚ್ಚು ಪ್ರಭಾವ ಬೀಳುವ ಕಾನ್ಸರ್ ಕಾರಕ. ಪ್ರಯೋಗ ಶಾಲೆಗಳಲ್ಲಿ ಜೀವಿಗಳ ಮೇಲೆ ಮಾಡಿದ ಪ್ರಯೋಗಂಗಳಲ್ಲಿ ಸಾಬೀತಾದ್ದು ಎಂತ ಹೇಳಿರೆ, ಇದರ ಅತ್ಯಂತ ಸಮೀಪದ ಕಾನ್ಸರ್ ಕಾರಕಕ್ಕಿಂತ ಇದು 10,000 ಪಾಲು ಜಾಸ್ತಿ ಪ್ರಭಾವ ಬೀರುತ್ತು ಹೇಳುವ ವಿಶಯ.
ಕಸವಿನ ಒಟ್ಟಿಂಗೆ ಪ್ಲಾಸ್ಟಿಕ್ ತೊಟ್ಟೆಗಳ, ಚೀಲಂಗಳ ಹೊತ್ತುಸುವ ತಪ್ಪು ಕೆಲಸ ಆರೂ ಮಾಡ್ಲೇ ಆಗ ಹೇಳುವ ಒಂದು ಎಚ್ಚರಿಕೆ.

ಒಂದರಿ ಉಪಯೋಗ ಆದ ಪ್ಲಾಸ್ಟಿಕ್ ನ ಮರು ಉತ್ಪಾದನೆ (recycling) ಕಷ್ಟದ ಕೆಲಸ. ಹಲವಾರು ನಮೂನೆಯ ಪ್ಲಾಸ್ಟಿಕ್ ಇಪ್ಪದರಿಂದಾಗಿ, ಅದರ ಎಲ್ಲಾ ಒಟ್ಟಿಂಗೆ ಹಾಕಿ recycle ಮಾಡ್ಲೆ ಎಡಿತ್ತಿಲ್ಲೆ. ಮೊದಲಾಗಿ ಬೇರೆ ಬೇರೆ ನಮೂನೆಯ ಪ್ಲಾಸ್ಟಿಕ್ ಗಳ ವಿಂಗಡಿಸೆಕ್ಕು. ಇದುವೇ ಕಷ್ಟದ ಕೆಲಸ. ಮಾತ್ರ ಅಲ್ಲದ್ದೆ recycle ಮಾಡಿದ ಪ್ಲಾಸ್ಟಿಕ್ ನ ಗುಣ ಮಟ್ಟ ಅದರ ಮೂಲ ಉತ್ಪಾದನೆಯ ಗುಣ ಮಟ್ಟಕ್ಕೆ ಸರಿ ಸಾಟಿ ಆಗಿರ್ತಿಲ್ಲೆ.

ಇನ್ನೊಂದು ಮಾಡುವ ದೊಡ್ಡ ತಪ್ಪು ಹೇಳಿರೆ, ತಿಂತ ಸಾಮನುಗೊ ಹಾಳು ಆದರೆ, ಇಲ್ಲದ್ದರೆ ತರಕಾರಿ ಚೋಲಿ, ಇತ್ಯಾದಿಗಳ ಪ್ಲಾಸ್ಟಿಕ್ ಚೀಲಂಗಳಲ್ಲಿ ಹಾಕಿ ಹೆರ ಇಡ್ಕುವದು. ತಿಂಬ ಸಾಮಾನು ಇದ್ದು ಹೇಳಿ ದನಗೊ ಇದರ ತಿಂತವು. ಇದರಿಂದಾಗಿ ಆವುತ್ತ ಅನಾಹುತಂಗೊ ತುಂಬಾ ಗಂಭೀರವಾದ್ದು. ದನಗಳ ಹೊಟ್ಟೆಲಿ ಪ್ಲಾಸ್ಟಿಕ್ ಕರಗುತ್ತಿಲ್ಲೆ. ಇದರಿಂದಾಗಿ ಅದರ ಜೀರ್ಣ ಕ್ರಿಯೆ ನಿಂದು ಹೋವುತ್ತು. ಅಂಕಿ ಅಂಶಂಗಳ ಪ್ರಕಾರ ಉತ್ತರ ಪ್ರದೇಶಲ್ಲಿ, ದಿನಕ್ಕೆ ಸುಮಾರು 100 ರಷ್ಟು ದನಗೊ ಪ್ಲಾಸ್ಟಿಕ್ ತಿಂದರಿಂದಾಗಿ ಸಾಯುತ್ತಾ ಇದ್ದವು. ಒಂದು ಉದಾಹರಣೆಲಿ, ಸತ್ತ ದನದ ಹೊಟ್ಟೆಯ ಒಳಾಂದ 35 ಕಿಲೋದಷ್ಟು ಪ್ಲಾಸ್ಟಿಕ್ ತೆಗವೆಲೆ ಸಿಕ್ಕಿದ್ದು ಕೂಡಾ ವರದಿ ಆಯಿದು.

ಇತ್ತೀಚೆಗಿನ ಒಂದು ಸಾಮಾನ್ಯ ದೃಶ್ಯ ಹೇಳಿರೆ, ಎಲ್ಲಿ ನೋಡಿದರೂ ಖಾಲಿ ಪ್ಲಾಸ್ಟಿಕ್ ಚೀಲಂಗೊ ಗಾಳಿಗೆ ಹಾರಿಗೊಂಡು ಇಪ್ಪದು. ಮಾರ್ಗದ ಕರೇಲಿ ಈ ದೃಶ್ಯ ತುಂಬಾ ಸಾಮಾನ್ಯ. ಇದು ಹೋಗಿ ನೀರು ಹೋವುತ್ತ ಚರಂಡಿಗೋ ಇಲ್ಲದ್ದರೆ ಡ್ರೈನೇಜಿಂಗೊ ಸೇರಿರೆ, ಅದು ಬ್ಲೋಕ್ ಆಗಿ ಮಳೆಗಾಲಲ್ಲಿ ಕೃತಕ ನೆರೆ ಉಂಟಪ್ಪದು ಪೇಟೆಗಳಲ್ಲಿ ಸರ್ವೇ ಸಾಮಾನ್ಯ.

ಸರ್ಕಾರ ಎಂತ ಮಾಡಿದ್ದು?

ಢೆಲ್ಲಿ ಸರ್ಕಾರ ಅಲ್ಲಿಗೆ ಅನ್ವಯ ಅಪ್ಪ ಹಾಂಗೆ ಒಂದು ಆದೇಶ ಹೊರಡಿಸಿತ್ತಿದ್ದು. ಇದರ ಪ್ರಕಾರ 40 ಮೈಕ್ರೋನ್ (1 micron= 0.001 cm, ನಂದಿನಿ ಹಾಲಿನ ತೊಟ್ಟೆ ಸುಮಾರು 40 ಮೈಕ್ರೋನ್ ದಪ್ಪ ಇರ್ತು )  ಗಿಂತ ಕಡಿಮೆ ದಪ್ಪದ ಮತ್ತೆ 12”X18” (30cm X 45cm) ಸಣ್ಣ ಸೈಜಿನ ಪ್ಲಾಸ್ಟಿಕ್ ಚೀಲಂಗಳ ಉತ್ಪಾದನೆ, ಮಾರಾಟ ಮತ್ತೆ ಬಳಕೆ ಮಾಡ್ಲೆ ಆಗ. ಯಾವುದೇ ರೀತಿಯ recycle ಮಾಡಿದ ಪ್ಲಾಸ್ಟಿಕ್ ಉಪಯೋಗಿಸಲೆ ಆಗ, ಚೀಲಂಗೊಕ್ಕೆ ಯಾವುದೇ ಬಣ್ಣಂಗಳ ಬಳಕೆ ಮಾಡ್ಲೆ ಆಗ. ಆದರೆ, ಇದರ ಕಟ್ಟು ನಿಟ್ಟಿನ ಪಾಲನೆ ಅಯಿದಿಲ್ಲೆ.

ಈಗ ಇನ್ನೊಂದು ಆದೇಶ ಪ್ರಕಾರ (ಆದೇಶ ಬಿಡುಗಡೆ ಆಯೆಕ್ಕಷ್ಟೆ) ಯಾವುದೇ ನಮೂನೆಯ ಪ್ಲಾಸ್ಟಿಕ್ ಚೀಲಂಗಳ ಉಪಯೋಗ ಮಾಡ್ಲೆ ಆಗ. ತರಕಾರಿ, ಜಿನಸಿ ಸಾಮಾನು, ಜವುಳಿ, ಇತ್ಯಾದಿ ಯಾವುದೇ ಸಾಮಾನುಗಳ ಕೊಂಡೋಪಲೆ ಪ್ಲಾಸ್ಟಿಕ್ ಚೀಲವ ಉಪಯೋಗುಸುವ ಹಾಂಗೆ ಇಲ್ಲೆ,   ನಿಯಮ ಉಲ್ಲಂಘನೆ ಮಾಡಿದವಕ್ಕೆ1 ಲಕ್ಷದ ವರೇಗೆ ದಂಡ ಮತ್ತೆ 5 ವರ್ಷದ ವರೇಗೆ ಜೈಲ್ ಶಿಕ್ಷೆ ಕೊಡುವ ಅಧಿಕಾರ ಸರ್ಕಾರಕ್ಕೆ ಇದ್ದು.

ನಾವು ಎಂತ ಮಾಡೆಕ್ಕು?

 1. ಸಾಮಾನು ತಪ್ಪಲೆ ಹೋಪಗ ಒಂದು ಕೈ ಚೀಲ (ವಸ್ತ್ರಂದ ತಯಾರು ಮಾಡಿದ್ದು) ತೆಕ್ಕೊಂಡು ಹೋಪದು.
 2. ಪ್ರತಿಯೊಂದು ತರಕಾರಿಗೆ ಒಂದೊಂದು ಪ್ಲಾಸ್ಟಿಕ್ ಚೀಲವ ಉಪಯೋಗಿಸದ್ದ ಹಾಂಗೆ, ತೂಕ ಮಾಡಿ ಸೀದಾ ಕೈ ಚೀಲಕ್ಕೆ ಹಾಕ್ಸಿಗೊಂಬದು.
 3. ಬರೇ ಕೈಲಿ ಹೋದರೂ, ಸಣ್ಣ ಸಣ್ಣ ಐಟಂಗೊಕ್ಕೆ ಪ್ಲಾಸ್ಟಿಕ್ ಚೀಲ ಕೇಳದ್ದೆ ಅಂಗಿ ಗಿಸೆಲಿಯೋ, ಪೇಂಟ್ ಗಿಸೆಲಿಯೋ ಹಾಕಿಂಡು ಬಪ್ಪದು
 4. ದೊಡ್ಡ ದೊಡ್ಡ ಮಾಲ್ ಗಳಲ್ಲಿ ಎಲ್ಲದಕ್ಕೂ ಪ್ಲಾಸ್ಟಿಕ್ ಚೀಲಲ್ಲಿಯೇ ತುಂಬಿಸಿ ಕೊಡುವ ಕ್ರಮ. ಅಲ್ಲಿಗೆ ಹೋಪದರ ರೆಜಾ ಕಮ್ಮಿ ಮಾಡಿ, ಹತ್ರಾಣ ಅಂಗಡಿಗಳಿಂದ ಸಾಮಾನುಗಳ ಪಡಕ್ಕೊಂಬದು.
 5. ಆದಷ್ಟು ಕಾಗದಲ್ಲಿಯೇ ಕಟ್ಟಿ ಕೊಡಲೆ ಕೇಳಿಗೊಂಬದು.
 6. ಕೆಲವೊಂದು ಸಾಮಾನುಗೊ ಪ್ಲಾಸ್ಟಿಕ್ ಚೀಲಂಗಳಲ್ಲಿಯೇ ಪೇಕ್ ಅಗಿ ಬಪ್ಪದರ ತೆಕ್ಕೊಳದ್ದೆ ನಿವೃತ್ತಿ ಇಲ್ಲದ್ದ ಸಂದರ್ಭಲ್ಲಿ, ಮನೆಗೆ ಬಂದ ನಂತ್ರ, ಚೀಲಂಗಳ ಪ್ರತ್ಯೇಕ ತೆಗದು ಮಡುಗಿ, ಚೀಲಂಗಳ ಇರುವಾರ ಹೋಪಗ ಅವಕ್ಕೆ ವಾಪಸ್ ಕೊಡುವದು. (ಎಂಗೊ ಹಾಂಗೊಂದು ಅಭ್ಯಾಸ ಮಾಡಿದ್ದೆಯೊ°)
 7. ಪ್ಲಾಸ್ಟಿಕ್ ಚೀಲಂಗಳ ಹೆರ ಅಂತೆ ಇಡ್ಕದ್ದೆ, ಮುನ್ಸಿಪಾಲಿಟಿ ವೇಸ್ಟ್ ಬಿನ್೦ಗೆ ಹಾಕುವದು.
 8. ದೊಡ್ಡ ದೊಡ್ದ ನಗರಂಗಳಲ್ಲಿ ಕಸ ತೆಕ್ಕೊಂಡು ಹೋಪಲೆ ವೆವಸ್ತೆ ಇರ್ತು. ಅಲ್ಲಿ ಪ್ಲಾಸ್ಟಿಕ್ ಮತ್ತೆ ಇತರ ಕಸವಿನ ಬೇರ್ಪಡಿಸಿ ಬೇರೆ ಬೇರೆಯಾಗಿ ಕೊಡುವದು.
 9. ಸುಲಭ ಆವುತ್ತು ಹೇಳಿ ಯಾವುದೇ ಕಾರಣಕ್ಕೂ, ಹೊತ್ತುಸದ್ದೇ ಇಪ್ಪದು.
 10. ಮಕ್ಕೊಗೆ ಪ್ಲಾಸ್ಟಿಕ್ ಆಟಿಕೆಗಳ ಕೊಡದ್ದೆ ಇಪ್ಪದು.
 11. ತಿಂತ ಸಾಧನಂಗಳ ಪ್ಲಾಸ್ಟಿಕ್ ಚೀಲಂಗಳಲ್ಲಿ ತುಂಬುಸದ್ದೆ ಇಪ್ಪದು.
 12. PET ಬಾಟ್ಲಿಗಳಲ್ಲಿ ತುಂಬುಸಿದ ನೀರು ಕುಡಿಯದ್ದೆ ಇಪ್ಪದು. ಯಾವುದೇ ಕಾರಣಕ್ಕೂ ಬಿಸಿ ನೀರಿನ ಹೀಂಗಿಪ್ಪ ಬಾಟ್ಲಿಗಳಲ್ಲಿ ತುಂಬಿಸಿ ಕುಡಿವಲೆ ಆಗ.
 13. ಸುಲಾಭ ಆವುತ್ತು ಹೇಳಿ ದೂರ ಪ್ರಯಾಣ ಹೋಪಗ  ಪ್ಲಾಸ್ಟಿಕ್ ಲೋಟೆ ತಟ್ಟೆಗಳ ತೆಕ್ಕೊಂಡು ಹೋಗಿ ಬಳಕೆ ಮಾಡುವದು ಬೇಡ. ಅದರ ಬದಲು ಹಾಳೆ ತಟ್ಟೆ, ಪೇಪರ್ ಲೋಟೆ ಉಪಯೋಗಿಸುವೊ°
 14. ನಮ್ಮ ಮನೆ ಜೆಂಬಾರಂಗಳಲ್ಲಿ ಪ್ಲಾಸ್ಟಿಕ್ ನ ಲೋಟೆ, ತಟ್ಟೆ, ಅಲಂಕಾರ ಸಾಮಾಗ್ರಿಗಳ (decorations) ಉಪಯೋಗ ಬೇಡ.
 15. ಪೇಟೆಗಳಲ್ಲಿ ಕೇಟರರ್ಸ್ ವೆವಸ್ಥೆ ಮಾಡುವದಿದ್ದರೆ, ಅವಕ್ಕೆ ಪ್ಲಾಸ್ಟಿಕ್ ತಟ್ಟೆ, ಲೋಟ, ಚೀಲಂಗಳ ಉಪಯೋಗಿಸಲೆ ಆಗ ಹೇಳಿ ಖಡಾ ಖಂಡಿತವಾಗಿ ಮೊದಲಾಗೇ ತಿಳುಸುವದು.

ಪ್ಲಾಸ್ಟಿಕ್ ಸಾಧನಂಗೊಕ್ಕೆ ನಾವು ಎಷ್ಟು ಒಗ್ಗಿ ಹೋಯಿದು ಹೇಳಿರೆ, ನವಗೆ ಅದರ ಬಿಡ್ಲೆ ಎಡಿಯ, ಬಿಟ್ಟರೆ ನಮ್ಮ ಜೀವನ ಕ್ರಮ ಏರುಪೇರು ಆಕ್ಕು ಹೇಳ್ತಲ್ಲಿಂಗೆ ವರೇಗೆ.

ಯಾವುದಕ್ಕಾದರೂ ಆದಿ ಇದ್ದರೆ ಒಂದು ಅಂತ್ಯ ಇದ್ದೇ ಇದ್ದಲ್ಲದ. ಅದಕ್ಕಾಗಿ ಈ ಭಸ್ಮಾಸುರನ ಓಡುಸಲೆ ಪ್ರಯತ್ನ ಮಾಡೆಕಾದ್ದು ಇಂದಿನ ಮೊದಲ ಆವಶ್ಯಕತೆ. ನಾವು ಈಗ ಮಾಡೆಕ್ಕಾದ್ದರ ಮಾಡದ್ದರೆ ಮುಂದಿನ ಪೀಳಿಗೆಯವು ಇದರ ಅನುಭವಿಸೆಕ್ಕಾವುತ್ತು. ಅಂಬಗ ನಾವು ಕ್ಷಮೆಗೂ ಕೂಡಾ ಅರ್ಹರಾಗಿರ್ತ್ತಿಲ್ಲೆ ಹೇಳುವದರ ನೆನಪಿಸಿಂಡು, ಇದರಲ್ಲಿ ಎಲ್ಲರೂ ಒಂದಾಗಿ ಕೈ ಜೋಡಿಸಿ ಕಾರ್ಯ ಪ್ರವೃತ್ತ ಅಪ್ಪೊ°.

ನಿಂಗಳ ಅನಿಸಿಕೆಗೆ ಸ್ವಾಗತ ಇದ್ದು

ಸರ್ವಂ ಪ್ಲಾಸ್ಟಿಕ್ ಮಯಂ, 5.0 out of 10 based on 4 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಒಪ್ಪಣ್ಣ

  ಶರ್ಮಪ್ಪಚ್ಚೀ..
  ಯೇವದೇ ವಿಶಯ ತೆಕ್ಕೊಂಡ್ರೂ ಅದರ ಸಂಪೂರ್ಣವಾಗಿ ವಿವರುಸುತ್ತ ನಿಂಗಳ ಶುದ್ದಿಗಳ ಕೇಳುದೇ ಒಂದು ಕೊಶಿ.
  ಪ್ಳೇಷ್ಟಿಕುದೇ ಹಾಂಗೆ, ಸುಮಾರು ಗೊಂತೇ ಇಲ್ಲದ್ದ ವಿಷಯಂಗೊ ಗೋಷ್ಟಿ ಆತು.

  ಒಳ್ಳೆ ಮಾಹಿತಿಯುಕ್ತ, ಗಂಭೀರ ಲೇಖನ. ತುಂಬಾ ಕೊಶಿ ಆತು.
  ಇನ್ನೂ ಬತ್ತಾ ಇರಳಿ. ನಮಸ್ಕಾರ.

  [Reply]

  ಶ್ರೀಶಣ್ಣ

  ಶ್ರೀಶಣ್ಣ Reply:

  [ಗಂಭೀರ ಲೇಖನ]
  ಶರ್ಮಪ್ಪಚ್ಚಿಗೆ ಊರಿಲ್ಲಿ “ಗಂಭೀರ ಮತ ಪ್ರಸಂಗ” ಬೋರ್ಡ್ ನೋಡಿ ನೋಡಿ, “ಗಂಭೀರ ಪ್ಲಾಸ್ಟಿಕ್ ಲೇಖನ” ಬರವ ಹೇಳಿ ಆತೋ?

  [Reply]

  VA:F [1.9.22_1171]
  Rating: +1 (from 1 vote)
 2. ಬೊಳುಂಬು ಮಾವ°
  ಗೋಪಾಲ ಮಾವ

  ಮನಸ್ಸಿಲ್ಲಿ ಬತ್ತ ಪ್ರತಿಯೊಂದು ಪ್ರಶ್ನೆಗವಕ್ಕೂ ವಿವರಣೆ ಕೊಟ್ಟು ಪ್ಲಾಸ್ಟಿಕ್ಕಿನ ವಿವಿಧ ಅವತಾರಂಗಳ, ಅವುಗಳಿಂದ ಸಿಕ್ಕುವ ಪ್ರಯೋಜನಂಗಳ, ಅದಕ್ಕಿಂತಲೂ ಹೆಚ್ಚಿನ ಉಪದ್ರಂಗಳ ತಿಳುಸಿ ಕೊಟ್ಟ ಶರ್ಮಪ್ಪಚ್ಚಿಗೆ ಧನ್ಯವಾದಂಗೊ. ಡಾಮರು ಬದಲಿಂಗೆ ಪ್ಲಾಸ್ಟಿಕ್ಕು ತೊಟ್ಟೆ ಉಪಯೋಗಿಸಿ ಲಾಯಕಿನ ಮಾರ್ಗ ಮಾಡುತ್ತವು ಹೇಳಿ ಕೇಳಿದ್ದೆ. ಕೇರಳಲ್ಲಿ ತುಂಬಾ ಮಾರ್ಗಂಗಳಲ್ಲಿ ಈ ಪ್ರಯೋಗ ಆಯಿದು ಹೇಳಿ ಸುದ್ದಿ. ನಮ್ಮ ಕುಂಬಳೆ ಮಂಗಳೂರು ಮಾರ್ಗಕ್ಕೆ ಹಾಕಲೆ ಬೇಕಾದ್ದಕ್ಕಿಂತ ಜಾಸ್ತಿ ತೊಟ್ಟೆಗೊ ಮಂಗಳೂರು ಪೇಟೆ ಸುತ್ತ ಮುತ್ತ ಹಾರೆಂಡು ಇದ್ದು/ ಇರುತ್ತು. ನಮ್ಮ ಗೋಣ (ಘನ)ಸರಕಾರ ಇಲ್ಲಿ ಏಕೆ ಆ ಪ್ರಯತ್ನ ಮಾಡುತ್ತಿಲ್ಲೆ ?

  [Reply]

  VA:F [1.9.22_1171]
  Rating: +1 (from 1 vote)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಈ ಲೇಖನಕ್ಕೆ ಪೂರಕವಾಗಿ ಕೆಲವು ಸಂದೇಹಂಗೊಕ್ಕೆ ಉತ್ತರ ಕೊಡ್ಲೆ ಪ್ರಯತ್ನ:
  ಮೊದಾಲಿಂಗೆ ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲರಿಂಗೂ ಧನ್ಯವಾದಂಗೊ
  @ ಶ್ರೀ.. ಮತ್ತೆ ರಘು ಮುಳಿಯ
  [ಒಂದೇ ಸರ್ತಿಗೆ ಯಾವುದನ್ನೂ ಪೂರ್ತಿ ಬಿಡ್ಲೇ ಎಡಿಯ ]
  ನಾವು ಇಲ್ಲಿ ಪ್ಲಾಸ್ಟಿಕ್ ಚೀಲಂಗಳ ಬಗ್ಗೆ ಹೆಚ್ಚು ಮಾತಾಡಿದ್ದು. ಏಕೆ ಹೇಳಿರೆ ಅದರ ಉಪಯೋಗ ತುಂಬಾ ಜಾಸ್ತಿ ಆವುತ್ತಾ ಇದ್ದು. ಅದು ಬಿಟ್ಟರೆ ಬೇರೆ ನಮ್ಮ ನಿತ್ಯ ಉಪಯೋಗಲ್ಲಿ (ಉದಾ: ಫ್ರಿಡ್ಜ್, ಟೀವಿ, ಕಂಪ್ಯೂಟರ್, ಫೋನ್, ಕರೆಂಟಿನ ಕನ್ನೆಕ್ಷನ್.. ಇತ್ಯಾದಿ..) ಇದರ ಪೂರ್ತಿ ಆಗಿ ಬಿಡ್ಲೆ ಎಡಿಯ. ಆದರೆ ಹೀಂಗಿಪ್ಪದು ಹಲವಾರು ವರ್ಷ ಬಾಳಿಕೆ ಬತ್ತ ಕಾರಣ ಪರಿಸರಕ್ಕೆ ಅಷ್ಟೊಂದು ಹಾನಿ ಇಲ್ಲೆ ಹೇಳಿ ಸಮಾಧಾನ ಮಾಡ್ಲೆ ಆಕ್ಕು. ಹಾಳಾದ ಟೀವಿ, ಕಂಪ್ಯೂಟರ್ ಇದರ ವಿಲೇವಾರಿಂದಾಗಿ ಪರಿಸರಕ್ಕೆ ಖಂಡಿತವಾಗಿಯೂ ಹಾನಿ ಇದ್ದು, [ಇದರಲ್ಲಿ ಇಪ್ಪ “ಬೆಸುಗೆ” ಸೀಸ ಅಂಶ ಜಾಸ್ತಿ ಇಪ್ಪ ಲೋಹ]. ಹಾಂಗಾಗಿ ನವಗೆ ಪೂರ್ತಿಯಾಗಿ ಬಿಡ್ಲೆ ಎಡಿಯ ಹೇಳುವ ಸತ್ಯ ಇದ್ದು. ಮಾತ್ರ ಅಲ್ಲದ್ದೆ ಅಂಗಡಿಂದ ತಪ್ಪ ಸಾಮಾನುಗೊ ಹೆಚ್ಚಿನದ್ದೂ ಪ್ಲಾಸ್ಟಿಕ್ ಚೀಲಂಗಳಲ್ಲಿಯೇ ಇರ್ತು. ಹೀಂಗಿಪ್ಪ ಸಂದರ್ಭಂಗಳಲ್ಲಿ, ನವಗೆ ಎಡಿಗಾದಷ್ಟು ಪ್ಲಾಸ್ಟಿಕ್ ಉಪಯೋಗ ಕಮ್ಮಿ ಮಾಡುವೊ.
  @ ಗಣೇಶ ಮಾವ:
  [ಪ್ಲಾಸ್ಟಿಕ್ ಪೆಟ್ರೋಲಿಯಮ್ ಕಚ್ಹಾ ತೈಲದ ಶುದ್ದೀಕರಣದ ಒಂದು ಉಪ ಉತ್ಪನ್ನ]. ಕಚ್ಚಾ ತೈಲದ ಸಂಗ್ರಹ ಇಪ್ಪ ವರೇಗೆ ಪ್ಲಾಸ್ಟಿಕ್ ಮಾಡ್ಲೆ ಎಡಿಗು. ಮತ್ತೆ ಎಂತದು ಹೇಳುವ ಸಮಸ್ಯೆ ಇದ್ದು. ಮಾತ್ರ ಅಲ್ಲದ್ದೆ, ಕಚ್ಚಾ ತೈಲ, ಪ್ಲಾಸ್ಟಿಕ್ ತಯಾರಿಸಲೇ ಉಪಯೋಗ ಆದರೆ, ಇಂಧನಕ್ಕೆ ಎಂತ ಮಾಡುವದು? ಇದು ಶುದ್ಧೀಕರಣದ ಉಪ ಉತ್ಪನ್ನ ಅಲ್ಲ (by product ಅಲ್ಲ). ಶುದ್ಧೀಕರಣ ಆದ ಮತ್ತೆ ಪ್ಲಾಸ್ಟಿಕ್ ತಯಾರು ಮಾಡಲೇ ಬೇರೆ ಸಂಸ್ಕರಣೆ ಇದ್ದು. ಅದಕ್ಕೂ ಶಕ್ತಿಯ ಮೂಲ ಇದೇ ಕಚ್ಚಾ ತೈಲ.
  @ ಗೋಪಲ ಮಾವ
  [ಡಾಮರು ಬದಲಿಂಗೆ ಪ್ಲಾಸ್ಟಿಕ್ಕು ತೊಟ್ಟೆ ಉಪಯೋಗಿಸಿ ಲಾಯಕಿನ ಮಾರ್ಗ ಮಾಡುತ್ತವು ಹೇಳಿ ಕೇಳಿದ್ದೆ]. ಡಾಮರು ಬದಲಿಂಗೆ ಅಲ್ಲ. ಅದರ ಒಟ್ಟಿಂಗೆ ಮಿಕ್ಸ್ ಮಾಡಿ ಹಾಕುವ ಪ್ರಯೋಗ success ಆಯಿದು ಹೇಳಿ ಕೇಳಿದ್ದೆ. ಡಾಮರಿಂಗೆ ಹಾಳಾದ ಟಯರಿನ ಹೊಡಿ ಮಿಕ್ಸ್ ಮಾಡಿ ಡಾಮರಿನ ಒಟ್ಟಿಂಗೆ ಕರಗಿಸಿ ಮಾರ್ಗಕ್ಕೆ ಹಾಕುತ್ತವು. ಇದರ ಪ್ರಯೋಗ ಕೇರಳಲ್ಲಿ success ಆಯಿದು. ಇದೇ ರೀತಿ ನೇಚುರಲ್ ರಬ್ಬರ್ ನ ಮಿಕ್ಸ್ ಮಾಡಿ ಕೂಡಾ ಡಾಮರು ಹಾಕುತ್ತವು. ಒಂದು ನಿರ್ಧಿಷ್ಟ ಪ್ರಮಾಣಲ್ಲಿ ಮಿಕ್ಸ್ ಮಾಡಿರೆ ಒಳ್ಳೆ ಪ್ರಯೋಜನ ಸಿಕ್ಕುತ್ತು.
  ಆರಿಂಗಾರೂ ಸಂಶಯ ಇದ್ದರೆ ಕೇಳಿ. ಗೊಂತಿಪ್ಪದರ ತಿಳುಸುವ ಪ್ರಯತ್ನ ಎನ್ನದು.

  [Reply]

  VA:F [1.9.22_1171]
  Rating: +1 (from 1 vote)
 4. ಗೋಪಾಲಣ್ಣ
  gopalakrishna BHAT S.K.

  thumba olle iekhana.plastickna bidudu kashta.niyantrana madadde aga.maargakke damaringe sersudu olledu.ella plastickoo idakke akko?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಕೊಳಚ್ಚಿಪ್ಪು ಬಾವಯೇನಂಕೂಡ್ಳು ಅಣ್ಣಉಡುಪುಮೂಲೆ ಅಪ್ಪಚ್ಚಿನೆಗೆಗಾರ°ಕೆದೂರು ಡಾಕ್ಟ್ರುಬಾವ°ದೊಡ್ಡಭಾವಬಟ್ಟಮಾವ°ದೇವಸ್ಯ ಮಾಣಿಸರ್ಪಮಲೆ ಮಾವ°ಅನುಶ್ರೀ ಬಂಡಾಡಿಒಪ್ಪಕ್ಕಮಂಗ್ಳೂರ ಮಾಣಿಶ್ಯಾಮಣ್ಣಮಾಲಕ್ಕ°ಮಾಷ್ಟ್ರುಮಾವ°ಪೆರ್ಲದಣ್ಣಶಾ...ರೀಬಂಡಾಡಿ ಅಜ್ಜಿವಿನಯ ಶಂಕರ, ಚೆಕ್ಕೆಮನೆಕೇಜಿಮಾವ°ಕಜೆವಸಂತ°ಸುಭಗಪುತ್ತೂರಿನ ಪುಟ್ಟಕ್ಕವೆಂಕಟ್ ಕೋಟೂರುಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ