ಶ್ರೀ ಧನ್ವಂತರೀ ಪೂಜೆ

September 13, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇತ್ತೀಚೆಗೆ ಹತ್ತರಾಣ ಸಂಬಂಧಿಕರಲ್ಲಿಂದ ಒಂದು ಹೇಳಿಕೆ ಬಂದಿತ್ತು. ಎಂಗಳಲ್ಲಿ “ಧನ್ವಂತರಿ ಪೂಜೆ” ಇದ್ದು, ನಿಂಗೊ ಅಗತ್ಯ ಬರೆಕು ಹೇಳಿ.
ಸತ್ಯನಾರಾಯಣ ಪೂಜೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ನೆಡೆವಂಥಾದ್ದೆ.
“ಧನ್ವಂತರಿ”
ಹೆಸರು ಕೇಳಿ ಗೊಂತಿದ್ದು, ಪೂಜೆ ಮಾಡ್ತವು ಹೇಳಿಯೂ ಗೊಂತಿತ್ತು. ಆದರೆ ಇಷ್ಟರವರೆಗೆ ನೋಡಿತ್ತಿಲ್ಲೆ.
ಸಿಕ್ಕಿದ ಅವಕಾಶ ಬಿಡುವದು ಬೇಡ ಹೇಳಿ ಸಂಸಾರ ಸಮೇತ ಭಾಗವಹಿಸಿ, ಪ್ರಸಾದ ತೆಕ್ಕೊಂಡೆಯೊ°.
ಇದರ ಬಗ್ಗೆ ರೆಜಾ ಜಾಸ್ತಿ ತಿಳ್ಕೊಂಬ ಆಸಕ್ತಿ ಬಂದು ಮಾಹಿತಿ ಸಂಗ್ರಹ ಮಾಡ್ಲೆ ಹೆರಟಪ್ಪಗ ಎನಗೆ ಸಿಕ್ಕಿದ ಒಂದು ಅಮೂಲ್ಯ ಪುಸ್ತಕ, ವೈದ್ಯ ಕಾ.ರಾ.ಪುರಾಣಿಕರಿಂದ ಸಂಗ್ರಹಗೊಂಡ “ಶ್ರೀ ಧನ್ವಂತರಿ ಕಲ್ಪೋಕ್ತ ಪೂಜಾ, ವ್ರತ ಕಥಾ ಮತ್ತು ಹವನ ವಿಧಿ”.
ಪುಸ್ತಕಲ್ಲಿ ಪೂಜೆ, ವ್ರತ, ಕತೆ, ಹವನ ವಿಧಾನ ಅಲ್ಲದ್ದೆ, ಧನ್ವಂತರಿ ಹೇಳಿರೆ ಆರು, ಯಾವ ಕಾಲದವ°, ಎಲ್ಲೆಲ್ಲಾ ಅವಂಗೆ ದೇವಸ್ಥಾನ ಇದ್ದು, ಅವನ ಬಗ್ಗೆ ಇಪ್ಪ ಬೇರೆ ಬೇರೆ ನಮೂನೆಯ ಸಾಹಿತ್ಯಂಗೊ, ಅವನ ಹಲವಾರು ವರ್ಣ ಭಾವ ಚಿತ್ರಂಗಳ ಸಂಗ್ರಹ  ಕೂಡಾ ಇದ್ದು.
ಓದಿದ್ದರ ಎಲ್ಲಾ ಕೊಡ್ಲೆ ಹೆರಟರೆ ಲೇಖನ ತುಂಬಾ ದೊಡ್ಡ ಆವ್ತು ಹೇಳ್ತ ದೃಷ್ಟಿಂದ ಎನಗೆ ತೋರಿದ ರೀತಿಲಿ ಸಂಗ್ರಹ ಮಾಡಿ ಕೊಡ್ತಾ ಇದ್ದೆ.

* * *

ಮನುಷ್ಯ ಜನ್ಮ ಸಿಕ್ಕೆಕ್ಕಾರೆ ಹಿಂದಾಣ ಜನ್ಮಂಗಳಲ್ಲಿ ಪುಣ್ಯ ಕಾರ್ಯಂಗಳ ಮಾಡಿರೆಕಡ. ಸಿಕ್ಕಿದ ಮನುಷ್ಯ ಜನ್ಮವ ಸಾರ್ಥಕ ಮಾಡುವದು ನಮ್ಮ ಕೈಲಿಯೇ ಇದ್ದು.
ಇದಕ್ಕೆ ಕಾರಣವಾದ, ಎಲಕ್ಕಿಂತಲೂ ಮಿಗಿಲಾದ ಆ ಶಕ್ತಿಯ, ನಾವು ಸದಾ ಸ್ಮರಿಸುತ್ತಾ ಸೇವೆ ಸಲ್ಲುಸುತ್ತಾ ಇರೆಕು, ಅದಕ್ಕಾಗಿ ಧರ್ಮ ಮಾರ್ಗಲ್ಲಿ ನೆಡವದು ಅತೀ ಮುಖ್ಯ.
ಧರ್ಮ ಮಾರ್ಗಲ್ಲಿ ಹೋಪಲೆ ಈ ದೇಹ ಸಾಧನವಾಗಿ ಪೂರ್ಣ ಮನಸ್ಸಿಂದ ಒಳ್ಳೆ ಕಾರ್ಯಂಗಳ ಮಾಡುವದೇ ನಾವು ಸಲ್ಲುಸೆಕ್ಕಾದ ಋಣ ಸಂದಾಯ. ಇಲ್ಲಿ ಹುಟ್ಟಿದ ನಾವು, ಸಲ್ಲಿಸಲೇ ಬೇಕಾದ ಋಣಂಗಳ ನಾವು ಮರವಲೆ ಆಗ.
ಶರೀರ ಮತ್ತೆ ಮನಸ್ಸಿನ ಸುಸ್ಥಿಲಿ ಮಡುಗುವದು ಅತ್ಯಗತ್ಯ. ಸಮಯಕ್ಕೆ ಸರಿಯಾಗಿ ಸಾತ್ವಿಕ ಆಹಾರ, ಆಟ, ವ್ಯಾಯಾಮ, ಧ್ಯಾನ, ಯೋಗ ಎಲ್ಲವೂ ಇದಕ್ಕೆ ಪೂರಕವೇ.

ಅಸೌಖ್ಯ ಆದಿಪ್ಪಗ ಅದಕ್ಕೆ ಸರಿಯಾದ ಮದ್ದು ಮಾಡಿ ದೇಹವ ಸುಸ್ಥಿಲಿ ಮಡುಗದ್ದರೆ, ಮನಸ್ಸು ನಮ್ಮ ಶರೀರದ ಚಿಂತೆಲಿ ಬೇಯುತ್ತಲ್ಲದ್ದೆ, ಅದು ಎಲ್ಲಿ ಕೇಂದ್ರೀಕೃತ ಆಯೆಕ್ಕೋ ಅಲ್ಲಿಗೆ ಹೋವ್ತಿಲ್ಲೆ.
ಹಾಂಗಾಗಿ ಔಷಧಿಯ ಸಕಾಲಲ್ಲಿ ತೆಕ್ಕೊಂಬಲೇ ಬೇಕು.
ಮದ್ದು ಕೊಡುವ ವೈದ್ಯ ಹೇಳಿರೆ ನಾರಾಯಣ ದೇವರ ಇನ್ನೊಂದು ರೂಪ ಹೇಳಿಯೇ ತಿಳ್ಕೊಳ್ತು.
ಮದ್ದು ತೆಕ್ಕೊಂಬಗ
ಶರೀರೇ ಜರ್ಝರೇ ಘೋರೇ ವ್ಯಾಧಿಗ್ರಸ್ತೇ ಕಲೇವರೇ |
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ ||

– ಹೇಳಿ ತೆಕ್ಕೊಳೆಕ್ಕು ಹೇಳ್ತವು.
ಮದ್ದು ತೆಕ್ಕೊಂಬಗ ಆರೆಲ್ಲಾ ಸ್ಮರಣೆ ಮಾಡೆಕ್ಕು ಹೇಳ್ತಲ್ಲಿ
ಧನ್ವಂತರಿಂ ಗರುತ್ಮಂತಂ ಫಣಿರಾಜಂಚ ಕೌಸ್ತುಭಮ್ |
ಅಚ್ಯುತಂಚಾಮೃತಂ ಚ ಚಂದ್ರಂ ಸ್ಮರೇದೌಷಧ ಕರ್ಮಣಿ ||

– ಹೇಳಿಯೂ ಹೇಳ್ತವು.
ಆದರೆ ಇಷ್ಟರಲ್ಲಿಯೇ ನಿಲ್ಲಿಸಿರೆ,   ರೋಗದ ಆದಿ ಭೌತಿಕ ಭಾಗ ಮಾತ್ರ ಹೋಗಿ, ಆಧ್ಯಾತ್ಮಿಕ ಮತ್ತೆ ಅದಿ ದೈವಿಕ ಅಂಶಂಗಳಿಂದಾಗಿ ಬಪ್ಪಂತಹ ರೋಗದ ಶಮನ ಅವ್ತಿಲ್ಲೆ.

ದೇವರ ತೀರ್ಥಲ್ಲಿಯೂ ಔಷಧೀಯ ಗುಣಂಗೊ ಇದ್ದು ಹೇಳಿ ತಿಳ್ಕೊಂಡು, ಸೇವಿಸುವಾಗ
ಅಕಾಲ ಮೃತ್ಯುಹರಣಂ ಸರ್ವ ವ್ಯಾಧಿ ವಿನಾಶನಂ |
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಮ್ ||
– ಹೇಳಿ ತೆಕ್ಕೊಂಬದು ನಮ್ಮ ಸಂಸ್ಕೃತಿ.

ಎಲ್ಲಾ ರೀತಿಯ ರೋಗ ಶಮನಕ್ಕೆ ಇಪ್ಪ ಒಂದೇ ದಾರಿ ಹೇಳಿರೆ ಆ ಮಹಾ ವಿಷ್ಣುವಿನ ಅವತಾರವೇ ಆಗಿಪ್ಪ, ಸಮುದ್ರ ಮಥನ ಸಮಯಲ್ಲಿ ಅಮೃತವ ತಂದು ಕೊಟ್ಟ, ಸುಶ್ರುತಂಗೆ ಶಲ್ಯ ಶಾಸ್ತ್ರವ ಬೋಧಿಸಿದ, ಲೋಕಕ್ಕೆ ಆಯುರ್ವೇದವ ಒದಗಿಸಿಕೊಟ್ಟ ಅಯುರ್ವೇದದ ಅಧಿದೇವತೆಯಾದ “ಧನ್ವಂತರಿ”ಯ ಜಪ, ಧ್ಯಾನ, ಸ್ತೋತ್ರ, ಪೂಜೆ, ಹವನ ಇತ್ಯಾದಿಗಳಿಂದ ಒಲಿಸಿ ಅವನ ಕೃಪೆಗೆ ಪಾತ್ರರಪ್ಪದು.

* * *

ಧನ್ವಂತರಿ ವ್ರತ ಕತೆ ಹೀಂಗಿದ್ದು:

ಶ್ರೀ ಧನ್ವಂತರಿ
ಶ್ರೀ ಧನ್ವಂತರಿ

ಅವಂತೀ ಪಟ್ಟಣದ ರಾಜ° ಧನಗುಪ್ತ, ಪ್ರಜೆಗಳ ಕ್ಷೇಮವೇ ತನ್ನ ಧರ್ಮ ಹೇಳಿ ತಿಳ್ಕೊಂಡು ಒಳ್ಳೆ ರೀತಿಲಿ ರಾಜ್ಯ ಭಾರ ಮಾಡಿಂಡು ಇತ್ತಿದ್ದ°.
ಜನ್ಮಾಂತರದ ಕರ್ಮ ಫಲಂದಾಗಿ ಅವಂಗೆ ಕ್ಷಯ ರೋಗ ಹಿಡಿತ್ತು. ಜಪ, ತಪ, ಹೋಮ, ಹವನ , ಮದ್ದು ಎಲ್ಲಾ ಮಾಡಿದರೂ ರೋಗ ಗುಣ ಆವ್ತಿಲ್ಲೆ.
ಪತಿವ್ರತೆಯಾದ ಇವನ ಹೆಂಡತಿ ಕೂಡಾ ಹಲವಾರು ವ್ರತಂಗಳ ಮಾಡುತ್ತು. ಆದರೂ ಎಂತ ಪ್ರಯೋಜನವೂ ಸಿಕ್ಕುತ್ತಿಲ್ಲೆ ಮಾತ್ರ ಅಲ್ಲದ್ದೆ ಅದಕ್ಕೂ ಅವರ ಐದು ಜೆನ ಮಕ್ಕೊಗೂ ಅಸೌಖ್ಯ ಕಾಡುತ್ತು.
ಇದೆಲ್ಲಾ ನೋಡಿದ ರಾಜಂಗೆ ಬೇಜಾರಾಗಿ, ಕಾಡಿಂಗೆ ಹೋವುತ್ತ°. ಅಲ್ಲಿ ಅವಂಗೆ ಭರಧ್ವಾಜ ಋಷಿಗಳ ಭೇಟಿ ಆವುತ್ತು. ತನ್ನ ಸಂಕಟಂಗಳ ಹೇಳಿಗೊಳ್ತ°. ಇದಕ್ಕೆ ಎಂತಾದರೂ ಪರಿಹಾರ ನಿಂಗಳೇ ಅನುಗ್ರಹಿಸೆಕ್ಕು ಹೇಳಿ ಬೇಡಿಗೊಳ್ತ°.
“ವಿಷ್ಣುವಿನ ಅವತಾರವೇ ಆಗಿಪ್ಪ, ಎಲ್ಲಾ ರೋಗಂಗಳನ್ನೂ ನಾಶ ಮಾಡುವ, ಧನ್ವಂತರಿಗೆ ನೀನು ಶರಣಾಗು. ಅವನ ದರ್ಶನ ಮಾತ್ರಂದಲೇ ನಿನ್ನ ಎಲ್ಲಾ ಸಮಸ್ಯೆಯೂ ಪರಿಹಾರ ಅಕ್ಕು”. ಹೇಳಿ ಭರಧ್ವಾಜ ಮುನಿ ಆಶೀರ್ವಾದ ಮಾಡುತ್ತ°.

ಪೂಜೆ ಮಾಡುವ ವಿಧಾನ ಹೇಳಿ ಕೊಡಿ ಎನಗೆ ಹೇಳಿ ಪುನಃ ರಾಜ° ಕೇಳಿಗೊಂಡಪ್ಪಗ ಈ ರೀತಿಯಾಗಿ ಮಾಡು ಹೇಳಿ ಸೂಚನೆ ಕೊಡ್ತ°:

ಅಶ್ವೀಜ ಕೃಷ್ಣ ತ್ರಯೋದಶಿಯಂದು ಬ್ರಾಹ್ಮೀ ಮುಹೂರ್ತಲ್ಲಿ ಎದ್ದು, ಪುಣ್ಯ ನದಿಲಿ ಮಿಂದು, ನಿತ್ಯಾಹ್ನಿಕ ಮುಗುಶಿ,
ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ ಅಯಂ ಮೇ ವಿಶ್ವಬೇಷಜೋಯಂ ಶಿವಾಭಿಮರ್ಶನಃ” ಹೇಳುವ  ಧನ್ವಂತರಿ ಮೂಲ ಮಂತ್ರವ ಜಪಿಸಿ “ತ್ರಿಕರಣಪೂರ್ವಕವಾಗಿ ಆನು ನಿನ್ನ ವ್ರತ ಮಾಡುತ್ತೆ. ಎನಗೆ ಆಯುರಾರೋಗ್ಯ, ಐಶ್ವರ್ಯ, ಜಯವ  ದಯಪಾಲಿಸು” ಹೇಳಿ ಧನ್ವಂತರಿಯ ಹತ್ತರೆ ಬೇಡಿಗೊ. ಪುಣ್ಯ ನದಿಯ ನೀರು ತಂದು, ಭಕ್ತಿಂದ ದೇವಾಧಿದೇವರ ಒಡೆಯ ಆದ ಧನ್ವಂತರಿಯ ಷೋಡಶೋಪಚಾರಂದ ಪೂಜೆ ಮಾಡಿ, ಹದಿಮೂರು ಎಳೆಯ ಪವಿತ್ರ ದಾರವ ಪೂಜಿಸಿ, ಬಲಕೈಗೆ ಕಟ್ಟಿಗೊ.  “ಆನು ನಿನಗೆ ಶರಣಾಗತನಾಯಿದೆ, ನೀನೇ ಎನ್ನ ರಕ್ಷಿಸು” ಹೇಳಿ ಆ ಧನ್ವಂತರಿಯ ಪ್ರಾರ್ಥಿಸು. ಅವಂಗೆ ಅರ್ಘ್ಯ ಕೊಟ್ಟು, “ಲೋಕದ ಜನಂಗಳ ಹಿತಕ್ಕಾಗಿ, ಮೃತ್ಯು ಭಯ ನಿವಾರಣೆಗಾಗಿ ಆಯುರ್ವೇದವ ಕೊಟ್ಟದು ಮಾತ್ರ ಅಲ್ಲದ್ದೆ, ದುಷ್ಟ ಶಿಕ್ಷಕ° ಆದ ನಿನ್ನನ್ನೇ ಧ್ಯಾನ ಮಾಡ್ತೆ. ಎನಗೆ ನೀನಲ್ಲದ್ದೆ ಬೇರಾರೂ ಗತಿ ಇಲ್ಲೆ” ಹೇಳಿ ದೀನನಾಗು.

ಸಿಹಿ ಭಕ್ಷ್ಯವ ತಯಾರು ಮಾಡಿ, ದೇವರಿಂಗೆ ನೈವೇದ್ಯ ಮಾಡಿ, ಅದರ ಅರ್ಧ ಭಾಗವ ವೇದ ಪಾರಂಗತರಾದವಕ್ಕೆ ದಾನ ಮಾಡಿ, ಒಳುದ ಅರ್ಧವ ಹೆಂಡತಿ ಮಕ್ಕಳೊಟ್ಟಿಂಗೆ ನೀನು ಸೇವಿಸು.
ಈ ರೀತಿ ವ್ರತ ಮಾಡಿರೆ, ತೃಪ್ತ ಆದ ಧನ್ವಂತರಿ ನಿನಗೆ ಒಲುದು, ನಿನ್ನ ಅಭೀಷ್ಟವ ಒದಗಿಸಿಕೊಡುಗು ಹೇಳಿ, ಭರಧ್ವಾಜ ಮುನಿಗೊ ಪೂಜಾ ವಿಧಿಯ ಧನಗುಪ್ತ ಮಹಾರಾಜಂಗೆ ತಿಳಿಶಿ ಕೊಡ್ತವು.

ಹದಿಮೂರು ವರ್ಷ ಕಾಲ ಈ ವ್ರತವ ಹೆಂಡತಿ ಮಕ್ಕಳೊಟ್ಟಿಂಗೆ ಸೇರಿ ಮಾಡಿದ ರಾಜಂಗೆ, ಧನ್ವಂತರಿ ಪ್ರತ್ಯಕ್ಷ ಅಗಿ ನಿನಗೆ ಎಂತ ಬೇಕು ಹೇಳಿ ಕೇಳಿ ಅಪ್ಪಗ, ರಾಜಂಗೆ ಮೈ ರೋಮಾಂಚನ ಆಗಿ ದೇವರ ಸ್ತುತಿಸುತ್ತ°.
“ಎನ್ನನ್ನೂ ಎನ್ನ ಕುಟುಂಬವನ್ನೂ ರೋಗಮುಕ್ತರನ್ನಾಗಿ ಮಾಡು” ಹೇಳಿ ಕೇಳಿಗೊಳ್ತ°.
ಇವನ ಭಕ್ತಿಗೆ ಮೆಚ್ಚಿದ ಧನ್ವಂತರಿ, “ ನಿನ್ನ ಈ ವ್ರತಂದ ಆನು ಸಂತುಷ್ಟ ಆಯಿದೆ. ನಿನ್ನ ಅಭೀಷ್ಟವ  ಪೂರೈಸುತ್ತೆ. ನಿನಗೆ ಮಾತ್ರ ಅಲ್ಲದ್ದೆ, ಈ ವ್ರತವ ಆರೆಲ್ಲಾ ಮಾಡುತ್ತವೋ ಅವಕ್ಕು ಕೂಡಾ ಆಯುರಾರೋಗ್ಯ ಕೊಟ್ಟು ಅನುಗ್ರಹಿಸುತ್ತೆ” ಹೇಳಿ ಅಶೀರ್ವಾದ ಮಾಡುತ್ತ°.

* * *

ದನ್ವಂತರಿ ಪೂಜೆಯ ಭಕ್ಷ್ಯಕ್ಕೆ:

 • ೭೫ ಗ್ರಾಂ ಗೋಧಿ ಹೊಡಿ,
 • ಒಂದು ಕುಡ್ತೆ ಹಾಲು (೧೫೦ ಮಿಲ್ಲಿ. ಲೀ),
 • ಎರಡು ಕುಡ್ತೆ ತುಪ್ಪ (೩೦೦ ಮಿಲ್ಲಿ ಲೀ),
 • ೪೫೦ ಗ್ರಾಂ ಸಕ್ಕರೆ.
 • ಪರಿಮಳ ದ್ರವ್ಯಂಗೊ- ಕುಂಕುಮ ಕೇಸರಿ, ಪಚ್ಚೆ ಕರ್ಪೂರ,ಲವಂಗ, ಪತ್ರೆ, ಜಾಯಿಕ್ಕಾಯಿ, ಏಲಕ್ಕಿ- ೬ ಬಗೆ.

ಗೋಧಿ ಹೊಡಿಯ ತುಪ್ಪಲ್ಲಿ ಹೊರಿಯೆಕ್ಕು.
ಹಾಲು ಮತ್ತೆ ಸಕ್ಕರೆ ಹಾಕಿ ಬೇಯಿಶೆಕ್ಕು. ನಂತರ ಆರು ಬಗೆ ಪರಿಮಳ ದ್ರವ್ಯವ ಹೊಡಿ ಮಾಡಿ ಹಾಕೆಕ್ಕು.
ಒಟ್ಟಿಂಗೆ ದ್ರಾಕ್ಷೆ ಕೂಡಾ ಹಾಕೆಕ್ಕು.

* * *

ಆಶ್ವೀಜ ಕೃಷ್ಣ ತ್ರಯೋದಶಿ, ಅಥವಾ ಕಾರ್ತಿಕ ಕೃಷ್ಣ ತ್ರಯೋದಶಿಯಂದು ಧನ್ವಂತರಿಯ ಪೂಜೆ, ಹವನಕ್ಕೆ ಪ್ರಶಸ್ತ ದಿನ ಅಗಿರ್ತು.
ಈ ವರ್ಷ ಇದು ಸೆಪ್ಟೆಂಬರ್ ೨೫ ಕ್ಕೆ ಮತ್ತೆ ಅಕ್ಟೋಬರ್ ೨೪ಕ್ಕೆ ಆವುತ್ತು, ಅದರಲ್ಲಿಯೂ ವಿಶೇಷವಾಗಿ ಅಕ್ಟೋಬರ್ ೨೪ಕ್ಕೆ ಧನ್ವಂತರೀ ಜಯಂತಿ ದಿನ.

* * *

ಧನ್ವಂತರಿ ಶ್ಲೋಕ:

ನಮಾಮಿ ಧನ್ವಂತರಿಮಾದಿ ದೇವಂ
ಸುರಾಸುರೈರ್ವಂದಿತ ಪಾದ ಪದ್ಮಮ್ |
ಲೋಕೇ ಜರಾರುಗ್ಭಯ ಮೃತ್ಯುನಾಶಂ
ದಾತಾರಮೀಶಂ ವಿವಿಧೌಷಧೀನಾಮ್||

~

ಸರ್ವರೋಗ ನಿವಾರಕ ಧನ್ವಂತರಿಯ ಕೃಪೆ ನವಗೆಲ್ಲಾ ಒದಗಿ ಬರಲಿ
||ಸರ್ವೇ ಜನಾಃ ಸುಖಿನೋ ಭವಂತು ||

~*~*~

ಪಟಃ ಅಂತರ್ಜಾಲ ಕೃಪೆ

ಶ್ರೀ ಧನ್ವಂತರೀ ಪೂಜೆ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ್ಲೋ ರಜಾ ಕೇಳಿ ಮಾತ್ರ ಗೊಂತಿದ್ದ ಧನ್ವಂತರಿ ಮಹಾತ್ಮೆಯ ಇಲ್ಲಿ ವಿಷದೀಕರಿಸಿ ಹಂಚಿದ್ದು ಉತ್ತಮ ಆತು ಹೇಳಿ ಚೆನ್ನೈವಾಣಿ. ಶ್ರೀ ಧನ್ವಂತರಿಯು ಎಲ್ಲೋರಿಂಗು ಸದಾ ಉತ್ತಮ ಆರೋಗ್ಯವ ದಯಪಾಲುಸಲಿ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಇದು ವರೆಗೆ ಕೇಳಿ ಗೊಂತಿಲ್ಲದ್ದ ಕತೆ. ಬೈಲಿಲಿ ಹಂಚಿ ಎಲ್ಲೋರಿಂಗೂ ಆರೋಗ್ಯ ಭಾಗ್ಯ ಹೆಚ್ಚಿಸಿದ ಹಾಂಗಾತು, ಶರ್ಮಚ್ಚಿಗೆ ನಮನ.

  [Reply]

  VN:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಅಪ್ಪಚ್ಚೀ,
  ಚೂರಿಬೈಲು ಡಾಗುಟ್ರಲ್ಲಿ ಧನ್ವಂತರಿ ಪೂಜೆ ಆಗಿತ್ತು. ಹೋಪಲಾಯಿದಿಲ್ಲೆ ನವಗೆ, ಆದರೆ ಪ್ರಸಾದ ಸಿಕ್ಕಿಂಡಿತ್ತು.
  ಈಗ ಶುದ್ದಿ ಕೇಳುವಗಳೇ ಅದರ ಆಂತರಿಕ ತತ್ವ ಗೊಂತಾದ್ಸು.

  ಸುಖೀ ಜೀವನಕ್ಕೆ ಬೇಕಾದ ಆಯುಸ್ಸು, ಆರೋಗ್ಯವ ಕರುಣಿಸೇಕಾದ ದೇವರ ಪೂಜೆ ಮಾಡಿ, ಸಂತೃಪ್ತಿಗೊಳುಶುತ್ತ ಕಾರ್ಯ ನಮ್ಮ ಸಂಸ್ಕೃತಿಲಿ ಮಾಂತ್ರ ಬಕ್ಕಷ್ಟೇ! ಬಾಕಿ ಉಳುದ ದಿಕೆ ’ಸಂಕಟ ಬಂದಾಗ ಮಾಂತ್ರ ವೆಂಕಟ’ನ ನೆಂಪಕ್ಕು. ಅಲ್ಲದೋ?

  ವಿಶೇಷ ಆಚರಣೆಯ ಕ್ರಮವತ್ತಾಗಿ ವಿವರುಸಿದ್ದು ಕೊಶೀ ಆತು ಅಪ್ಪಚ್ಚೀ.
  ಕೆಲವು ಹಳೇ ಶ್ಲೋಕಂಗಳನ್ನೂ ನೆಂಪುಮಾಡಿಕೊಟ್ಟದು ಸಂತೋಷ ಆತು.
  ಹರೇರಾಮ

  [Reply]

  VA:F [1.9.22_1171]
  Rating: +1 (from 1 vote)
 4. ಮಂಗ್ಳೂರ ಮಾಣಿ

  ಸಮಯೋಚಿತ ಲೇಖನ ಕಂಡು ಖುಶಿ ಆತು ಅಪ್ಪಚ್ಚಿ..
  ಅಂತೂ ಬೇಕಿದ್ದ ಪುಸ್ತಕ ಸಿಕ್ಕಿತ್ತಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)
 5. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಶರ್ಮಪ್ಪಚ್ಹಿ, ನಿಂಗಳ ಈ ಲೇಖನಂದಾಗಿ ಬೈಲಿನವರ ಆರೋಗ್ಯ ವೃದ್ಧಿ ಅಪ್ಪ ಹಾಂಗಾತು.

  [Reply]

  VN:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಧನ್ವಂತರೀ ಪೂಜೆಯ ಕೆಲವು ಡಾಕ್ಟರುಗೊ ಮಾಡುಸುತ್ತವು.ಆನು ನೋಡಿದ್ದಿಲ್ಲೆ.
  ಈಗ ಲೇಖನ ಓದಿ ಕುಷಿ ಆತು.

  [Reply]

  VA:F [1.9.22_1171]
  Rating: 0 (from 0 votes)
 7. ಡಾ.ಸೀತಾರಾಮ ಪ್ರಸಾದ್

  ಭಕ್ಷ್ಯದ ಹೆಸರು?

  [Reply]

  ಗೋಪಾಲಣ್ಣ

  S.K.Gopalakrishna Bhat Reply:

  ಸಂಯಾವ ಹೇಳಿ ತೋರುತ್ತು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಶ್ಯಾಮಣ್ಣಬೋಸ ಬಾವತೆಕ್ಕುಂಜ ಕುಮಾರ ಮಾವ°ಜಯಶ್ರೀ ನೀರಮೂಲೆಪ್ರಕಾಶಪ್ಪಚ್ಚಿದೊಡ್ಡಮಾವ°ಎರುಂಬು ಅಪ್ಪಚ್ಚಿವಿದ್ವಾನಣ್ಣಅನುಶ್ರೀ ಬಂಡಾಡಿಸರ್ಪಮಲೆ ಮಾವ°ಕಾವಿನಮೂಲೆ ಮಾಣಿವೇಣಿಯಕ್ಕ°ಶೀಲಾಲಕ್ಷ್ಮೀ ಕಾಸರಗೋಡುಅಕ್ಷರ°ಬಂಡಾಡಿ ಅಜ್ಜಿರಾಜಣ್ಣವಿನಯ ಶಂಕರ, ಚೆಕ್ಕೆಮನೆಡಾಗುಟ್ರಕ್ಕ°ಚೆನ್ನಬೆಟ್ಟಣ್ಣಕಜೆವಸಂತ°ನೆಗೆಗಾರ°ವೆಂಕಟ್ ಕೋಟೂರುಅಕ್ಷರದಣ್ಣಚುಬ್ಬಣ್ಣಅಡ್ಕತ್ತಿಮಾರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ