ಸು-’ನಾಮ’ ಅಲ್ಲದ್ದ ಸುನಾಮಿ

March 19, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಬೈಲಿಲ್ಲಿ ಮಾತಾಡುವಾಗ ಒಪ್ಪಣ್ಣ ಹೇಳಿದ, ಈ ಭೂಮಿ ಒಂದು ಸರ್ತಿ ಮೈ ಅಡಿಸಿರೆ ಸಾಕು, ಮನುಷ್ಯಪ್ರಾಣಿ – ಸಸ್ಯ ಸಂಕುಲಂಗೊ ಅಲ್ಲೋಲ ಕಲ್ಲೋಲ ಆಗಿ ಬಿಡ್ತು!
ಕಳುದ ಶುಕ್ರವಾರ ಭೂಮಿ ತನ್ನ ಇಡೀ ಮೈ ಕುಡುಗಿದ್ದಿಲ್ಲೆ, ರೆಜಾ ಬೆರಳು ಹನುಸಿದ್ದಷ್ಟೆ. ಜಪಾನಿಲ್ಲಿ ಎಷ್ಟೊಂದು ಅನಾಹುತಂಗೊ ಆತು!
ಅಲ್ಲಿ ಪ್ರಕೃತಿಯ ರೌದ್ರ ನರ್ತನ ನೋಡುವಾಗ ಮಾಷ್ಟ್ರು ಮಾವ ಹೇಳಿದ ಮಾತು, “ಹಿಂದೆ ಇದು ಹೀಂಗಿದ್ದಿರ. ಮುಂದೆಯೂ ಹೀಂಗೆ ಇಕ್ಕು ಹೇಳುವ ನಿರೀಕ್ಷೆಯೂ ಬೇಡ”.
ಇದರ ಅನುಭವ ಕೂಡಾ ಆವ್ತಾ ಇದ್ದು.  ಎಲ್ಲಾ ದಿಕ್ಕಿಲ್ಲಿ ಕಿಚ್ಚು ಹೊತ್ತುವದು ಕಾಂಬಗ,ಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೇ  ಧರೆಯ  ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೇಹೇಳ್ತ ಮಾತು ನೆಂಪು ಮಾಡಿಸಿಕೊಟ್ಟತ್ತು.
ಸೆಟಲೈಟ್ ತೆಗದ ಪಟಂಗಳಲ್ಲಿ, ಲೂಟಿ ಮಕ್ಕೊ ಆಟದ ಸಾಮಾನಿನ ಚೆಲ್ಲಾ ಪಿಲ್ಲಿ ಮಾಡಿದ ಹಾಂಗೆ ಕಾಂಬಗ, ಈ ಪ್ರಕೃತಿಯ ಎದುರು ನಾವು ಎಂತದೂ ಅಲ್ಲ ಹೇಳುವದರ ಮತ್ತೆ ಮತ್ತೆ ನೆನಪಿಸಿ ಕೊಡ್ತು.

ಈಗ ಕೆಲವು ವರ್ಷ ಮೊದಲು, ಸುನಾಮಿ ಹೇಳಿರೆ ಎಂತರ ಹೇಳಿ ಬಹುಶಃ ಹೆಚ್ಚಿನವಕ್ಕೂ ಗೊಂತಿದ್ದಿರ.
ಆದರೆ 2004 ರ ದಶಂಬರ 26 ರಂದು ಇಂಡೋನೇಶ್ಯಾದ ಸುಮಾತ್ರ ದ್ವೀಪದ ಹತ್ತರೆ ಉಂಟಾದ ಸುನಾಮಿ ನಮ್ಮ ದೇಶದ ಪೂರ್ವ ಕರಾವಳಿಲಿ ಮಾಡಿದ ಹಾನಿ, ಅಲ್ಲಿ ಉಂಟಾದ ಸಾವು ನೋವು,  ಮನೆ ಮಠ ಕಳಕ್ಕೊಂಡ ಸಂತ್ರಸ್ತರು, ಅವು ಮತ್ತೆ ಅನುಭವಿಸಿದ ಸಂಕಟಂಗೊ ಇದೆಲ್ಲಾ ಟೀವಿಲಿ ನೋಡಿ, ವಾರ್ತೆಗಳ ಕೇಳಿ ಅಪ್ಪಗ ಅದರ ಬಗ್ಗೆ ಜೆನಂಗೊಕ್ಕೆ ಮಾಹಿತಿಗೊ ಸಿಕ್ಕಿತ್ತು. ಹೆದರಿಕೆಯೂ ಹುಟ್ಟಿತ್ತು.
ಮೊನ್ನೆ ಮೊನ್ನೆ ಜಾಪಾನಿಲ್ಲಿ ಸಂಭವಿಸಿದ ಸುನಾಮಿಯ ತೀವ್ರತೆ ನೋಡಿದವಕ್ಕೆ “ಸುನಾಮಿ” ಹೇಳ್ತ ಶಬ್ದ ಕೇಳಿರೇ ಛಳಿ ಜ್ವರ ಬಂದ ಅನುಭವ ಆಗದ್ದೆ ಇರ.

ಸುನಾಮಿ (ತ್ಸುನಾಮಿ) ಹೇಳುವದು ಜಾಪಾನ್ ಶಬ್ದ. ಆ ಭಾಷೆಲಿ “ತ್ಸು” ಹೇಳಿರೆ ಬಂದರು, “ನಾಮಿ” ಹೇಳಿರೆ ಭಾರೀ ದೊಡ್ಡ ಅಲೆಗೊ, ಅಥವಾ “ತ್ಸುನಾಮಿ” ಹೇಳಿರೆ ಸಮುದ್ರಲ್ಲಿ ಬಪ್ಪ ದೊಡ್ಡ ಅಲೆಗಳ ಸಮೂಹ.

ಅಷ್ಟೊಂದು ಅಗಾಧ ಪ್ರಮಾಣಲ್ಲಿ ನೀರು ಕರಾವಳಿ ತೀರಕ್ಕೆ ಬಂದು ಅಪ್ಪಳುಸುವಾಗ, ಆ ನೀರಿನ ಶಕ್ತಿ, ಇಡೀ ಕರಾವಳಿಯನ್ನೇ ಅಲ್ಲೋಲ ಕಲ್ಲೋಲ ಮಾಡುತ್ತು. ತನ್ನ ದಾರಿಗೆ ಅಡ್ಡ ಬಂದವರ, ಎನ್ನ ಎದುರುಸುವವು ಅರೂ ಇಲ್ಲೆ ಹೇಳಿ, ಜಂಭಂದ  ಕೊಚ್ಚಿಗೊಂಡು ಹೋವುತ್ತು. . ಸಮುದ್ರಲ್ಲಿ ಇರೆಕಾದ ಹಡಗು, ಜಲಚರ ಪ್ರಾಣಿಗೊ ಭೂಮಿಗೆ ಬಂತು. ಭೂಮಿಲಿ ಇರೆಕ್ಕಾದ ವಾಹನ, ಮನೆ,ಮರಂಗೊ, ಕಟ್ಟಡಂಗೊ ಸಮುದ್ರಕ್ಕೆ ಸೇರಿತ್ತು. ರೈಲಿನ ಬೋಗಿಗಳ ಬೆಂಕಿಪೆಟ್ಟಿಗೆ ಹರಗಿ ಮಡುಗಿದ ಹಾಂಗೆ ಮಾಡಿ ಮಡುಗಿತ್ತು.
ಜಪಾನಿಲ್ಲಿ, ಸುನಾಮಿ ಹಲವಾರು ಸರ್ತಿ ಬಂದದಿದ್ದರೂ, ಇಷ್ಟೊಂದು ತೀವ್ರ ಪ್ರಮಾಣಲ್ಲಿ ಬಂದದು ಇದೇ ಸುರು. ಭೂ ಕಂಪನದ ತೀವ್ರತೆ ಕೂಡಾ ಅತೀ ಹೆಚ್ಚು ಇದ್ದ ಕಾರಣ, ಹಾನಿ ಕೂಡಾ ಅಷ್ಟೇ ತೀವ್ರವಾಗಿ ಕಂಡು ಬಂತು.

ನಿರ್ನಾಮಿ ಸುನಾಮಿ!

* * *

ಸುನಾಮಿ ಹೇಂಗೆ ಉಂಟಾವುತ್ತು?

ಸಮುದ್ರದ ಅಡಿಲಿ ಯಾವುದೇ ರೀತಿಯಾದ ಭೂ ಕಂಪನ, ಜ್ವಾಲಾಮುಖಿ ಸ್ಫೋಟ , ಅಣುಸ್ಫೋಟ (ಅಣು ಶಕ್ತಿ ಪ್ರಯೋಗ) ಉಂಟಾದಲ್ಲಿ ಅಥವಾ ಮೇಲ್ಭಾಗಲ್ಲಿ  ದೊಡ್ಡ ಪ್ರಮಾಣದ ಉಲ್ಕಾಪಾತ ಉಂಟಾದಲ್ಲಿ ಸುನಾಮಿ ಉಂಟಪ್ಪ ಸಂಭಾವ್ಯತೆ ಜಾಸ್ತಿ.
ಎಲ್ಲಾ ಭೂಕಂಪನ ಸಮಯಲ್ಲಿ ಸುನಾಮಿ ಉಂಟಾಯೆಕ್ಕು ಹೇಳಿ ಇಲ್ಲೆ. ಆದರೆ ರಿಕ್ಟರ್ ಮಾಪಕಲ್ಲಿ 6.75 ಕ್ಕಿಂತ ಹೆಚ್ಚು ತೀವ್ರ ತರದ ಕಂಪನ ಸಮುದ್ರದ ಅಡಿಲಿ ಉಂಟಾದಪ್ಪಗ ಸುನಾಮಿ ಬಪ್ಪದು ಅಂತೂ ಖಂಡಿತ.
ಹೆಚ್ಚಿನ ಸುನಾಮಿಗಳೂ ಭೂ ಕಂಪನಂದಾಗಿಯೇ ಉಂಟಾದ್ದು ಹೇಳುವದೂ ತಿಳಿದು ಬಂದ ಅಂಶ.

1958 ರಲ್ಲಿ ಅಲಾಸ್ಕದ  ಲಿತುಯಾ ಕೊಲ್ಲಿ ಹೇಳ್ತಲ್ಲಿ  ಭೂಕುಸಿತಂದಾಗಿ ಉಂಟಾದ ಸುನಾಮಿಲಿ ಅಲೆಯ ಎತ್ತರ 1700 ಅಡಿಯಷ್ಟು ಇತ್ತಿದ್ದಡ. ಆದರೆ ಅದರ ಅಲೆ ಹೆಚ್ಚು ದೂರ ಪ್ರಯಾಣ ಮಾಡ್ಲೆ ಅವಕಾಶ ಇಲ್ಲದ್ದೆ ಅಂಬಗಳೇ ದಡಕ್ಕೆ ಬಡುದ್ದರಿಂದ ದೊಡ್ಡ ಪ್ರಮಾಣದ ಕಷ್ಟ ನಷ್ಟ ಉಂಟಾಯಿದಿಲ್ಲೆ. ಹೀಂಗಿಪ್ಪದಕ್ಕೆ “ಮೆಗಾ ತ್ಸುನಾಮಿ” ಹೇಳ್ತವು.

ಭೂಮಿಯ ಅಡಿಲಿ, ಪದರಂಗೊ (tectonic plate) ಇರ್ತು.
ಈ ಪದರಂಗಳಲ್ಲಿ ಒಂದಕ್ಕೊಂದು ಘರ್ಷಣೆ ಉಂಟಪ್ಪಗ ಅಲ್ಲಿ ಶಕ್ತಿಯ ಸಂಚಯನ ಉಂಟಾವುತ್ತು. ಒಂದು ಹಂತಕ್ಕೆ ಎತ್ತಿ ಅಪ್ಪಗ, ಆ ಅಗಾಧ ಪ್ರಮಾಣದ ಶಕ್ತಿ ಸಂಪೂರ್ಣವಾಗಿ ಬಿಡುಗಡೆ ಆವುತ್ತು. ಅಂಬಗ ಭೂಕಂಪನ ಉಂಟಾವುತ್ತು.
ಇದರ ತೀವ್ರತೆಯ ಅಳವಲೆ ರಿಕ್ಟರ್ ಹೇಳ್ತ ಮಾಪನ ಉಪಯೋಗಿಸುತ್ತವು.

ನೀರಿನ ಅಡಿಲಿ ಈ ರೀತಿ ಭೂ ಕಂಪನ ಆದರೆ, ಅಲ್ಲಿ ಬಿಡುಗಡೆ ಆದ ಶಕ್ತಿ, ನೀರಿಂಗೆ ವರ್ಗಾವಣೆ ಆಗಿ. ಅಲೆ ಉಂಟಾವುತ್ತು. ಈ ಅಲೆ ಸುರು ಉಂಟಪ್ಪ ಜಾಗೆಗೆ  ಎಪಿಸೆಂಟರ್ ಹೇಳ್ತವು, ಅಲ್ಲಿಂದ ಅದು ವೃತ್ತಾಕಾರವಾಗಿ ಸಂಚಾರ ಸುರು ಮಾಡುತ್ತು.
ಗಂಟೆಗೆ ಸುಮಾರು 900 ಕಿಲೋಮೀಟರ್ ವೇಗಲ್ಲಿ ಇದು ಚಲುಸುತ್ತು ಹೇಳಿರೆ, ಇದರ ಚಲನೆಯ ತೀವ್ರತೆ ಅರ್ಥ ಅಕ್ಕು. ಸರಿ ಸುಮಾರು ಒಂದು ಜೆಟ್ ವಿಮಾನದ ವೇಗವೇ ಆತು. ಹಾಂಗಾಗೆ ಇದು ಕರಾವಳಿಗೆ ಬಂದು ಬಡಿವಲೆ ಹೆಚ್ಚು ಸಮಯ ಬೇಕಾವ್ತಿಲ್ಲೆ.

ಸುನಾಮಿ ಉಂಟಪ್ಪಗ, ಅಲೆಯ ಎತ್ತರ ತುಂಬಾ ಕಮ್ಮಿ ಇರ್ತು, ಆದರೆ ಅಲೆಯ ಉದ್ದ (ಅಲೆಯ ಒಂದು ಶಿಖರಂದ ಇನ್ನೊಂದು ಶಿಖರಕ್ಕೆ ಇಪ್ಪ ದೂರ) ಜಾಸ್ತಿ ಇರ್ತು.
ಎತ್ತರ ಒಂದು ಅಡಿಗಿಂತ ಕಮ್ಮಿ ಇದ್ದರೆ, ಉದ್ದ ನೂರಾರು ಕಿಲೋಮೀಟರ್ ನಷ್ಟು ಇರ್ತು.  ಈ ಅಲೆ ಸಮುದ್ರದ ಕರೆ, ಕರೆಂಗೆ ಬಂದ ಹಾಂಗೆ,  ಅದರ ಉದ್ದ ಕಮ್ಮಿ ಆವ್ತು, ಎತ್ತರ ಜಾಸ್ತಿ ಜಾಸ್ತಿ ಆವ್ತಾ ಹೋಗಿ 12 ಮೀಟರ್ (40 ಅಡಿ) ಗಿಂತಲೂ ಎತ್ತರ ಆದ ನಿದರ್ಶನಂಗೊ ಇದ್ದು.
ಹಾಂಗಾಗಿ ಸಮುದ್ರದ ಮಧ್ಯಲ್ಲಿ ಸುನಾಮಿ ಅಲೆಯ ಗುರುತಿಸಲೆ ಎಡಿತ್ತಿಲ್ಲೆ.
ಕರಾವಳಿಗೆ ಬಂದಪ್ಪಗ, ಮೊನ್ನೆ ಮಾಡಿದ ಹಾಂಗಿಪ್ಪ ಹಾನಿ ಮಾಡಿ, ಮತ್ತೆ ತಳೀಯದ್ದೆ ಕೂರುತ್ತು.
– ಅರ್ಗೆಂಟು ಮಾಣಿ ಎಡಿಗಾಷ್ಟು ಲೂಟಿ ಮಾಡಿಕ್ಕಿ ಮತ್ತೆ ತಳೀಯದ್ದೆ ಏನೂ ಗೊಂತಿಲ್ಲದ್ದವರ ಹಾಂಗೆ ಕೂರ್ತ ಅಲ್ಲದಾ, ಅದೇ ನಮೂನೆ.

* * *

ಪೂರ್ವ ಸೂಚನೆ:

ಕೆಲವೊಂದು ಸರ್ತಿ, ಸುನಾಮಿ ಅಲೆ ಬಪ್ಪನ್ನ ಮೊದಲು, ಕರಾವಳಿಲಿ ಸಮುದ್ರದ ನೀರು ತುಂಬಾ ಹಿಂದಂಗೆ ಹೋವುತ್ತು ಹೇಳಿ ಗಮನಿಸಿದ್ದು ಇದ್ದರೂ ಪ್ರತೀ ಸರ್ತಿ ಹಾಂಗೆ ಆವುತ್ತು ಹೇಳ್ಲೆ ಬತ್ತಿಲ್ಲೆ. ಆದರೆ, ಹಾಂಗೆ ಹಿಂದಂಗೆ ಹೋಪದು ಕಂಡು ಬಂದರೆ, ಸುನಾಮಿ ಅಲೆ ಬಡಿತ್ತು ಹೇಳುವದು ನಿಶ್ಚಯ. ಜೆನಂಗೊ ತುಂಬಾ ಎತ್ತರದ ಜಾಗೆಯ ಆಯ್ಕೆ ಮಾಡಿ ಅಲ್ಲಿ ಉಳಕ್ಕೊಂಬದು ಕ್ಷೇಮ.

ಸುನಾಮಿಯ ಪೂರ್ವ ಸೂಚನೆಯ ತಿಳಿವಲೆ ಸಮುದ್ರದ ಅಡಿಲಿ ಸ್ವಯಂಚಾಲಿತ ಉಪಕರಣಂಗಳ ಮಡುಗುತ್ತವು.
ಅಲ್ಲಿ ಉಂಟಪ್ಪ ಕಂಪನದ ಮಾಹಿತಿಗಳ, ಕಂಪ್ಯೂಟರಿಂಗೆ ಕಳಿಸಿ, ತಕ್ಕ ಮಟ್ಟಿಂಗೆ ಲೆಕ್ಕಾಚಾರ ಮಾಡ್ಲೆ ಆವ್ತರೂ, ಕರಾರುವಾಕ್ಕಾಗಿ ಹೇಳ್ಲೆ ಎಡಿತ್ತಿಲ್ಲೆ.
ಗೊಂತಾದರೂ, ಸಿದ್ಧತೆ ಮಾಡ್ಲೆ ಮತ್ತೆ ಹೆಚ್ಚು ಸಮಯ ಸಿಕ್ಕುತ್ತಿಲ್ಲೆ.

ಕೆಲವೊಂದು ಪ್ರಾಣಿಗೊಕ್ಕೆ ಇದು ಅನುಭವಕ್ಕೆ  ಮೊದಲೇ ಬತ್ತು ಹೇಳುವದು ಅವರ ಚಲನ ವಲನಂದ ಗೊಂತಾವ್ತು ಹೇಳ್ತ ಅಭಿಪ್ರಾಯ ಇದ್ದರೂ ಬಾಯಿ ಬಾರದ್ದ ಪ್ರಾಣಿಗಳ ಭಾಷೆ ನವಗೆ ಸರಿಯಾಗಿ ಅರ್ಥ ಅಪ್ಪಲೆ ರೆಜ ಕಷ್ಟ ಇದ್ದು.
ಇದೊಂದು ಅಧ್ಯಯನ ಯೋಗ್ಯ ವಿಷಯ ಹೇಳ್ತಕ್ಕೆ ಅಡ್ಡಿ ಇಲ್ಲೆ.

ಭೂ ಕಂಪನವ ರಿಕ್ಟರ್ ಮಾಪಕಲ್ಲಿ ಅಳೆತ್ತ ಹಾಂಗೆ ಇದನ್ನೂ ಅಳೆತ್ತ ವೆವಸ್ತೆ ಇದ್ದಾ ಹೇಳಿ ಕೇಳಿರೆ ಇದ್ದು.

ತೀಕ್ಷ್ಣತೆಯ ಅಳವಲೆ Soloviev-Imamura tsunami intensity scale ಮತ್ತೆ ಪರಿಮಾಣವ ಅಳವಲೆ Abe tsunami magnitude scale. ಆದರೆ, ಯಾವುದೂದೆ ಅಷ್ಟೊಂದು ಪ್ರಚಲಿತಲ್ಲಿ ಇಲ್ಲೆ.

 

ತಡೆಗಟ್ಟುವದು ಹೇಂಗೆ?

ಸುನಾಮಿ ಅಲೆ ಬಪ್ಪದರ ತಡೆಗಟ್ಟಲೆ ಎಡಿಯ ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.
ಅದು ಪ್ರಕೃತಿ ವಿಕೋಪಂದ ಉಂಟಪ್ಪದು. ಆದರೆ ಅದರಿಂದ ಅಪ್ಪ ಹಾನಿಗಳ ಕಮ್ಮಿ ಮಾಡ್ಲೆ ಎಡಿಗೋ ಹೇಳುವದೇ ಪ್ರಶ್ನೆ.

ಜಪಾನಿಲ್ಲಿ ಈ ಮೊದಲು ಎತ್ತರದ ತಡೆಗೋಡೆ ಕಟ್ಟಿ ಪ್ರಯೋಗ ಮಾಡಿದ್ದವು.
ಆದರೆ 10-12 ಮೀಟರ್ ಎತ್ತರದ ಅಲೆ ಬಂದಿಪ್ಪಗ, ಗೋಡೆಯನ್ನೇ ಕೊಚ್ಚಿಗೊಂಡು ಹೋಯಿದಡ

ಇನ್ನು ಸಮುದ್ರ ಕರೆಲಿ ಇಪ್ಪ ಕೆಲವು ಜಾತಿಯ ಸಸ್ಯ ಸಂಪತ್ತು (ತೆಂಗಿನ ಮರ, ಮಾಂಗ್ರೋವ್,ಪ್ರಕೃತಿ ನಿರ್ಮಿತ ಸಸ್ಯಂಗೊ) ಕೆಲವು ಮಟ್ಟಿಂಗೆ ತೀವ್ರತೆಯ ಕಮ್ಮಿ ಮಾಡ್ಲೆ ಸಹಾಯ ಮಾಡುತ್ತು.

ಆಮೆಗಾತ್ರದ ಅಲೆಗೊ ಆನೆಗಾತ್ರ ಅಪ್ಪದು!

* * *

ಶಕ್ತಿಯ ಪ್ರಮಾಣ:

ಸುನಾಮಿ ಒಂದು ಅಲೆ ಬಂದು ನಿಂಬದು ಅಲ್ಲ. ಅಲೆಗೊ ಒಂದಾದ ಮತ್ತೆ ಒಂದು ಬತ್ತಾ ಇರ್ತು.
ಭೂಕಂಪನಲ್ಲಿ ಉಂಟಾದ ಶಕ್ತಿಯ ಪ್ರವಾಹವೇ ಇದರಲ್ಲಿ ಇಪ್ಪ ಕಾರಣ, ಭೂ ಕಂಪದ ಪ್ರಮಾಣಕ್ಕೆ ಅನುಗುಣವಾಗಿ ಇದರದ್ದು ತೀವ್ರತೆ ಇರ್ತು. ಸುಮಾತ್ರಲ್ಲಿ ಉಂಟಾದ ಸುನಾಮಿ ಮಾಡಿದ ನಾಶವ ಲೆಕ್ಕ ಹಾಕಿರೆ, ಅದರ ಶಕ್ತಿ ಸರಿ ಸುಮಾರು ಹಿರೋಶಿಮಾಲ್ಲಿ ಹಾಕಿದ ಬಾಂಬಿನ 1500 ಪಾಲಿನಷ್ಟು ಇದ್ದತ್ತು.

* * *

ಸುನಾಮಿಂದ ನಂತರ ಬಪ್ಪ ತೊಂದರೆಗೊ:

 • ಜೆನಂಗೊ ಮನೆ, ಮಠ, ಆಸ್ತಿ ಪಾಸ್ತಿ, ಬಂಧು ಬಳಗಂಗಳ ಕಳಕ್ಕೊಂಬದು ಮಾತ್ರ ಅಲ್ಲದ್ದೆ ಅಲ್ಲಿ ಆರೋಗ್ಯದ ಸಮಸ್ಯೆಗಳೂ ಉಂಟಪ್ಪದು.
 • ಇಡೀ ವಾತಾವರಣವೇ ಕಲುಷಿತ ಅಪ್ಪದು.
 • ಸರಿಯಾದ ರೀತಿಲಿ ಶವ ಸಂಸ್ಕಾರ ಆಗದ್ದೆ ಅದರಿಂದ ಬಪ್ಪ ತೊಂದರೆಗೊ.
 • ಶುದ್ಧ ನೀರಿನ ಮತ್ತೆ ಆಹಾರದ ತೀವ್ರ ಕೊರತೆ.
 • ಅಶುದ್ದ ನೀರು ಮತ್ತೆ ಹವೆಂದಾಗಿ ಕೊಲೆರಾ, ಅರಸಿನ ಪಿತ್ತ, ಡಿಪ್ಥೀರಿಯಾ, ಡೀಸೆಂಟ್ರಿ, ಟೈಫಾಯಿಡ್ ಇತ್ಯಾದಿ ರೋಗಂಗೊ ಹರಡುವದು.
 • ಮತ್ಸೋದ್ಯಮಕ್ಕೆ ಹಾನಿ ಆಗಿ, ಅವರ ಜೀವನಕ್ಕೆ ತೊಂದರೆ ಮಾತ್ರ ಅಲ್ಲದ್ದೆ, ದೇಶದ ಹಣಕಾಸು ವೆವಸ್ತೆ ಮೇಲೆ ಅದರ ಪರಿಣಾಮ.
 • ಸಿಹಿ ನೀರಿನ ಬಾವಿ, ಕೆರೆಗೊಕ್ಕೆ ಉಪ್ಪು ನೀರು ಬಂದು ತುಂಬುವದು.
 • ಉಪ್ಪು ನೀರು ಹೀರಿದ ಮಣ್ಣು ಕೆಲವೊಂದು ಬೆಳಗೊಕ್ಕೆ ಅನನುಕೂಲವಾಗಿ ಪರಿಣಮಿಸುವದು.
 • ಕರಾವಳಿ ಪ್ರದೇಶಲ್ಲಿ ಇಪ್ಪ ಪ್ರವಾಸೀ ತಾಣಂಗೊ ಹಾಳಪ್ಪದು.

– ಇನ್ನೂ ಹಲವು ಇಕ್ಕು.

* * *

2000 ರ ನಂತ್ರ ಬಂದ ತೀವ್ರ ಸುನಾಮಿಗೊ:

26 ದಶಂಬರ, 2004 ರ ಸುಮಾತ್ರಾಲ್ಲಿ ಉಂಟಾದ ಸುನಾಮಿ, ತಮಿಳ್ನಾಡಿನ ಕರಾವಳಿಲಿ ಮಾಡಿದ ಹಾನಿ. ರಿಕ್ಟರ್ ಮಾಪಕಲ್ಲಿ 9.1 ರಷ್ಟು ತೀವ್ರತೆ ಇತ್ತಿದ್ದ ಭೂ ಕಂಪನಂದಾಗಿ ಸಂಭವಿಸಿದ ಈ ಸುನಾಮಿಲಿ ಒಟ್ಟು ಸತ್ತವರ ಸಂಖ್ಯೆ 2.3 ಲಕ್ಷ ದಾಂಟಿದ್ದು. 14 ದೇಶಕ್ಕೆ ವ್ಯಾಪಿಸಿ ಹಾನಿ ಮಾಡಿದ ಈ ಸುನಾಮಿ ಸಮಯಲ್ಲಿ ಭೂಮಿಯ ಕಂಪನದ ಸಮಯ 8 ರಿಂದ 10 ನಿಮಿಷದಷ್ಟು ಹೊತ್ತು ಇತ್ತಿದ್ದು. ನೂರು ಅಡಿಯಷ್ಟು ಎತ್ತರಕ್ಕೆ ಅಲೆ ಉಂಟಾಯಿದು.

ಇದಾದ ನಂತ್ರ ಬಂದ ದೊಡ್ಡ ಸುನಾಮಿ ಮೊನ್ನೆ ಹೇಳಿರೆ ಮಾರ್ಚ್ 11 ರಂದು ಬಂದದು. ಭೂಕಂಪನ ರಿಕ್ಟರ್ ಮಾಪಕಲ್ಲಿ 9.1 ರಷ್ಟು ತೀವ್ರತೆ. ಹಾನಿ ಎಷ್ಟು ಅಯಿದು ಹೇಳಿ ಇನ್ನು ಲೆಕ್ಕ ಸಿಕ್ಕೆಕ್ಕಷ್ಟೆ. ಆದರೆ ಸುನಾಮಿಂದಾಗಿ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಪೋಟ ಅಗಿ ವಾತವರಣಕ್ಕೆ ವಿಕಿರಣ ಬಿಡುಗಡೆ ಆದ ಸಂಭವ ಇದೇ ಮೊದಲು.

* * *

ನಮ್ಮೀ ಭೂಮಿಯ ಆದಿಶೇಷ ಹೊತ್ತುಗೊಂಡು ವಿಷ್ಣುವಿನ ಸ್ತುತಿ ಮಾಡಿಗೊಂಡು ಇರ್ತ ಹೇಳಿ ಪುರಾಣಲ್ಲಿ ಹೇಳುತ್ತು. ಅವಂಗೆ ರೆಜವೇ ಕೋಪ ಬಂದು ಹೆಡೆಯ ಆಡಿಸಿರೆ, ಈ ಭೂಮಿ ಒಳಿಯ ಹೇಳಿ ಕೂಡಾ  ಉಲ್ಲೇಖ ಇದ್ದು.

ಪ್ರಕೃತಿ ಕೋಪಗೊಂಡಪ್ಪಗ ಅದರ ಶಕ್ತಿಯ ಅನುಭವ ನವಗೆ ಸರಿಯಾಗಿ ಉಂಟಾವ್ತು. ವಿಜ್ಞಾನ ಎಷ್ಟೇ ಮುಂದುವರುದರೂ,
ಪ್ರಕೃತಿಯ ಮುಂದೆ ನಾವೆಲ್ಲರೂ ತಲೆ ಬಗ್ಗುಸಲೇ ಬೇಕು. ಇದರ ನಾವು ಮರದರೆ, ಅದುವೇ ನವಗೆ ನೆಂಪು ಮಾಡಿ ಕೊಡ್ತು.

~*~*~*~

ಪಟಂಗೊ- ಇಂಟರ್ನೆಟ್ ಕೃಪೆ

ಸು-’ನಾಮ’ ಅಲ್ಲದ್ದ ಸುನಾಮಿ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಲಕ್ಷ್ಮಿ ಜಿ.ಪ್ರಸಾದ

  2004 ರ ತ್ಸುನಾಮಿ ಸಮಯಲ್ಲಿ ಎಂಗ ಕೊಡೆಯಾಲಲ್ಲಿ ಇತ್ತಿದೆಯ.ಕೊಡೆಯಾಲಲ್ಲಿ ಇದ್ದವಕ್ಕೆ ಅಂಬಗ ಚಳಿ ಕೂದಿತ್ತು !ಎಂಗೊಗುದೆ!
  ತ್ಸುನಾಮಿ ಬಗ್ಗೆ ವಿಸ್ತೃತ ಮಾಹಿತಿ ಒಳ್ಳೆದಿದ್ದು , ತಿಳಿಸಿದ್ದಕ್ಕೆ ಶರ್ಮಪ್ಪಚ್ಚಿ ಗೆ ಧನ್ಯವಾದಂಗ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಚೂರಿಬೈಲು ದೀಪಕ್ಕಬೋಸ ಬಾವಅಡ್ಕತ್ತಿಮಾರುಮಾವ°ಪಟಿಕಲ್ಲಪ್ಪಚ್ಚಿಸಂಪಾದಕ°ವೆಂಕಟ್ ಕೋಟೂರುಜಯಗೌರಿ ಅಕ್ಕ°ವಿದ್ವಾನಣ್ಣಸರ್ಪಮಲೆ ಮಾವ°ಪುಣಚ ಡಾಕ್ಟ್ರುವಿಜಯತ್ತೆದೊಡ್ಮನೆ ಭಾವಅನಿತಾ ನರೇಶ್, ಮಂಚಿಯೇನಂಕೂಡ್ಳು ಅಣ್ಣನೀರ್ಕಜೆ ಮಹೇಶಮುಳಿಯ ಭಾವಮಾಷ್ಟ್ರುಮಾವ°ಅಜ್ಜಕಾನ ಭಾವಶಾ...ರೀಸುಭಗಗೋಪಾಲಣ್ಣಅನು ಉಡುಪುಮೂಲೆಕಳಾಯಿ ಗೀತತ್ತೆಹಳೆಮನೆ ಅಣ್ಣಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ