Oppanna.com

ಒಪ್ಪಣ್ಣನ ಬೈಲಿಲ್ಲಿ ಒಂದು ಸ್ವಗತ…

ಬರದೋರು :   ಡೈಮಂಡು ಭಾವ    on   05/03/2011    37 ಒಪ್ಪಂಗೊ

ಡೈಮಂಡು ಭಾವ

ನಮ್ಮ ಬೈಲಿನ ಹಿರಿಯರು, ಪ್ರೀತಿಯ ಶರ್ಮಪ್ಪಚ್ಚಿ ನವಗೆಲ್ಲೋರಿಂಗೂ ಅರಡಿಗು.
ವೈಜ್ಞಾನಿಕ, ಆಧುನಿಕ, ಸಾಂಸ್ಕೃತಿಕ – ಇತ್ಯಾದಿ ಒಳ್ಳೊಳ್ಳೆ ಶುದ್ದಿಗಳ ಹೇಳಿ, ಬೈಲಿನವರ ಜ್ಞಾನ ಹೆಚ್ಚಪ್ಪಲೆ ಕಾರಣೀಭೂತರು.
ಎಷ್ಟೋ ಕ್ಲಿಷ್ಟಕರ ವಿಚಾರಂಗಳ ಸರಳವಾಗಿ, ಸುಲಲಿತವಾಗಿ ಬೈಲಿಂಗೆ ಹೇಳ್ತರಲ್ಲಿ ಶರ್ಮಪ್ಪಚ್ಚಿದು ಎತ್ತಿದ ಕೈ.
ಬೈಲಿನ ಆರಂಭಂದಲೇ ಕಟ್ಟಿ ಬೆಳೆಶಿದ ವೆಗ್ತಿತ್ವಂಗಳಲ್ಲಿ ಇವುದೇ ಒಬ್ಬರು.
ಶರ್ಮಪ್ಪಚ್ಚಿ ಬೈಲಿಂಗೆ ಇಳುದು ಶುದ್ದಿ ಹೇಳುಲೆ ಸುರು ಮಾಡಿ ಇಂದಿಂಗೆ ಒಂದೊರಿಶ ಆತು.
ಆ ಪ್ರಯುಕ್ತ ಅವರದ್ದೇ ಸ್ವಗತಲ್ಲಿ ವಿಶೇಷ ಶುದ್ದಿ.
ಓದಿ, ಶುದ್ದಿಗೆ ಒಪ್ಪ ಕೊಡಿ.
ಅನಂತಕಾಲವೂ ಅವು ನಮ್ಮೊಟ್ಟಿಂಗೆ ಇದ್ದೊಂಡು, ಅದೇ ಪ್ರೀತಿಲಿ ಶುದ್ದಿ ಹೇಳುವ ಹಾಂಗೆ ಎಲ್ಲೋರುದೇ ಹಾರಯಿಸುವೊ°.

ಮಗಳ ಮನೆ ಬೆಂಗಳೂರಿಂದ, ಮಂಗಳೂರಿಂಗೆ ಹಗಲು ರೈಲು ಪ್ರಯಾಣ ಮಾಡಿಂಡು ಬರೆಕು ಹೇಳ್ತ ಕೆಲವು ದಿನದ ಬಯಕೆ ಇತ್ತಿದ್ದು. ಹಾಂಗೇ ಬಪ್ಪಗ ಒಂದಷ್ಟು ಪಟ ತೆಗದೆ.
ಈಗ ಡಿಜಿಟಲ್ ಕೆಮರಾ ಬಂದ ಮತ್ತೆ, ಪಟ ತೆಗವಲೆ ಆಲೋಚನೆ ಮಾಡೆಕ್ಕು ಹೇಳಿ ಇಲ್ಲೆ.
ಕಂಡದರೆಲ್ಲಾ ತೆಗದತ್ತು, ಬೇಡದ್ದರ ಕೆಮರಾಂದ ತೆಗದತ್ತು, ಬೇಕಾದ್ದರ ಕಂಪ್ಯೂಟರಿಲ್ಲಿ ಹಾಕಿತ್ತು, ಕೆಮರಾಲ್ಲಿ ಇಪ್ಪದರ ಖಾಲಿ ಮಾಡಿ ಮತ್ತಾಣ ಸರ್ತಿಂಗೆ ರೆಡಿ ಮಾಡಿ ಮಡುಗಿತ್ತು.

ತೆಗದ ಪಟವ ಆರಿಂಗಾರೂ ತೋರ್ಸೆಕ್ಕಲ್ಲದ. ಇಲ್ಲದ್ದರೆ ಅದರ ವಿಮರ್ಶೆ ಅಪ್ಪದು ಹೇಂಗೆ? ಎನ್ನೊಬ್ಬ ಚೆಂಙಾಯಿಗೆ ತೋರ್ಸಿದೆ.
ಅವ° ಇಪ್ಪದು ದುಬಾಯಿಲಿ. ನಮ್ಮ ಊರಿನ ಪಟ ನೋಡಿರೆ ಅವಂಗೂ ಒಂದರಿ ಕೊಶೀ ಆವ್ತಿದ.
ಹಾಂಗೇ ಮಾತಾಡುವಾಗ (chat) ನಿಂಗೊ https://oppanna.com ಹೇಳ್ತ ಸೈಟ್ ನೋಡಿದ್ದೀರಾ ಕೇಳಿದ.
ಎನಗೆ ಒಪ್ಪಣ್ಣ, ಒಪ್ಪಣ್ಣಪ್ಪಚ್ಚಿ, ಒಪ್ಪಣ್ಣ ಮಾವ, ಒಪ್ಪಣ್ಣ ದೊಡ್ಡಪ್ಪ ಎಲ್ಲಾ ಕೇಳಿ, ಕಂಡು, ಮಾತಾಡಿ ಗೊಂತಿತ್ತು. ಈ ಒಪ್ಪಣ್ಣ ಸೈಟ್ ಹೇಳಿರೆ, ಇದರ ಯೆಜಮಾನ ಆರು, ಕೇಳಿದೆ.

ಒಪ್ಪಣ್ಣ ಹೇಳ್ತವ° ನಮ್ಮ ಭಾಷೆಲಿ ವಾರಕ್ಕೊಂದರಿ ಲೇಖನ ಬರೆತ್ತ°.

ಒಪ್ಪ ಹೆಸರು: "ಶರ್ಮಪ್ಪಚ್ಚಿ". ಇಪ್ಪ ಹೆಸರು: "ಶ್ರೀಕೃಷ್ಣ ಶರ್ಮ ಹಳೆಮನೆ"

ನಿಂಗೊ ಒಂದರಿ ಒಳಾಂಗೆ ಹೋಗಿ ನೋಡಿ ಹೇಳಿದ°. ಸರಿ ನೋಡಿಕ್ಕುವೊ° ಅಂಬಗ ಹೇಳಿ ಮೆಲ್ಲಂಗೆ ಇಣುಕಿದೆ.
ಬೈಲಿಂಗೆ ಬೇಲಿ ಹಾಕಿಂಡು ಇಲ್ಲೆ
. ಒಳ ಹೋಪಲೆ ಲಾಗ ಹಾಕೆಕ್ಕು ಹೇಳಿ ಇಲ್ಲೆ, ನೇರ ಹೋದರೆ ಆತು.
ಒಂದೆರಡು ಲೇಖನ ಓದಿದೆ. ಪಟದ ಪುಟ ಹೇಳಿ ಕಂಡತ್ತು. ಚೆಂದ ಚೆಂದದ ಪಟಂಗಳ ನೋಡಿ ಕೊಶೀ ಆತು.
ಅನು ತೆಗದ ಪಟಂಗಳನ್ನೂ ಇದರಲ್ಲಿ ನೇಲಿಸಿರೆ ಹೇಂಗೆ ಹೇಳ್ತ ಒಂದು ಆಲೋಚನೆ ಬಂತು.
ಎಷ್ಟಾದರೂ ಹೆತ್ತಮ್ಮಂಗೆ ಹೆಗ್ಗಣ ಮುದ್ದು ಅಲ್ಲದ. ಆನು ತೆಗದ ಪಟ ಎನಗೆ ಚೆಂದವೇ. ಕೆಲವೊಂದು ಪಟ ನೋಡುವಾಗ ಅಂತೂ ಅದರ ತೆಗವಲೆ ಬಂದ ಬಂಙ ನೆಂಪಾವ್ತಿದ.
ಎತ್ತರಕ್ಕೆ ನಿಂದು ಸರ್ಕಸ್ ಮಾಡ್ಯೊಂಡು ತೆಗದ್ದು, ಅಡ್ಡ ಮನುಗಿಂಡು ಅಂಗಿ ಪೇಂಟಿಂಗೆ ಮಣ್ಣು ಮಾಡಿಂಡು ತೆಗದ್ದು, ಬೇರೆಯವರ ಹತ್ರೆ ಬೈಸಿಗೊಂಡು ತೆಗದ್ದು, ಬೇರೆಯವಕ್ಕೆ ಬೈದು ತೆಗದ್ದು….
ಹೀಂಗೇ….

ಈ ಒಪ್ಪಣ್ಣನ ಸೈಟಿಲ್ಲಿ ನಮ್ಮ ಬೇರು ಊರುವದು ಹೇಂಗೆ ಹೇಳಿ ಒಂದು ಆಲೋಚನೆ ಬಂದಪ್ಪಗ, ಹೋದರೆ ಒಂದು ಕಲ್ಲು, ಸಿಕ್ಕಿರೆ ಒಂದು ಹಣ್ಣು ಜಾನ್ಸಿದೆ, ಒಂದು ಮಿಂಚಂಚೆ ಬರದು ಕಳ್ಸಿದೆ.
ಇಡ್ಕಿದ ಕಲ್ಲು ನಷ್ಟ ಅಯಿದೆಲ್ಲೆ
. ಉತ್ತರ ಬಂತು.
ನಿಂಗ ಕಳಿಸಿದ ಪಟ ಬಯಲಿಲ್ಲಿ ಹಾಕುತ್ತೆ. ನಿಂಗಳ ಪೋನ್ ನಂಬ್ರ ಕೊಡಿ ಹೇಳಿ.
ಜೆನ ಆಗದ್ದೆ ಇಲ್ಲೆ, ಕಳಿಸಿದ್ದಕ್ಕೆ ಒಳ್ಳೆ ಪ್ರತಿಕ್ರಿಯೆ ಇದ್ದು ಹೇಳಿ ಸಂತೋಷ ಆತು.

ಬಹುಶಃ ಒಂದೆರಡು ದಿನ ಕಳುದಿಕ್ಕು. “ಆನು ಒಪ್ಪಣ್ಣ ಮಾತಾಡುವದು, ಪುರುಸೊತ್ತು ಇದ್ದರೆ ರೆಜ ಮಾತಾಡ್ಲೆ ಅಕ್ಕಾ?” ಹೇಳಿ ಮೊಬೈಲಿಂಗೆ ಕಾಲ್ ಮಾಡಿದ°. ಮತಾಡ್ಲೆ ಎಂತ ಆಯೆಕ್ಕು.
ಯಾವಗಲೂ ಪುರುಸೊತ್ತೇ. ಪರಸ್ಪರ ಗುರ್ತ ಪರಿಚಯ ಮಾತಾಡಿಗೊಂಡೆಯೊ°.
ನಿಂಗಳ ಹವ್ಯಾಸ ಎಂತರ ಕೇಳಿದ°. ಕಷ್ಟಕ್ಕೆ ಬಿದ್ದತ್ತನ್ನೆ..!! ಹೇಳುವ ಹಾಂಗಿಪ್ಪ ಹವ್ಯಾಸ ಎಂತರ? ಎಂತಾರು ಓದ್ತೆ ಹೇಳುವದೋ, ಪದ್ಯಂಗಳ ಕೇಳ್ತೆ ಹೇಳುವದೋ, ಮೀವಗ ಪದ್ಯ ಹೇಳ್ತ ಹವ್ಯಾಸ ಹೇಳುವದೋ.
ಪುರುಸೊತ್ತು ಇಪ್ಪಗ ಎಂತಾರೂ ಗುರುಟಿಗೊಂಡು ಕೂಬದು ಹೇಳುವದೋ,.. ಒಟ್ಟು ಕಂಪ್ಯೂಷನ್. “ಎಂತ ಇಲ್ಲೆ” ಹೇಳಿದೆ.

ಬರೆತ್ತ ಹವ್ಯಾಸವೋ? ಕೇಳಿಯೇ ಬಿಟ್ಟ°. ಇವ° ಇನ್ನೂ ಕಾಲೆಳೆತ್ತನ್ನೆ ಹೇಳಿ ಆತು.
ಶಾಲೆಲಿ ಪ್ರಬಂಧ ಬರದು ಕೆಂಪು ಶಾಯಿಲಿ ಅಡಿ ಗೀಟು ಹಾಕ್ಸಿ 10 ಕ್ಕೆ ನಾಲ್ಕೋ ಐದೋ ಮಾರ್ಕ್ ಸಿಕ್ಕಿರೆ ಹೆಚ್ಚು.
ನಿನ್ನ ಕಾಗೆ ಕಾಲು ಅಕ್ಷರ ಓದ್ಲೆ ಆರಿಂಗೆ ಅರಡಿಗು, ಓದ್ಲೆ ಅರಡಿಯದ್ದೆ ಅಷ್ಟು ಮಾರ್ಕ್ ಕೊಟ್ಟದು ಅವು, ಓದಿದ್ದರೆ ಆಷ್ಟೂ ಸಿಕ್ಕುತ್ತಿತ್ತಿಲ್ಲೆ ಹೇಳಿ ಅಜ್ಜ ಅಜ್ಜಿ ಹತ್ರೆ ಕೂಡಾ ಹೇಳಿಸಿಗೊಂಡು ಇತ್ತಿದ್ದವನ ಹತ್ರೆ ಬರೆತ್ತ ಹವ್ಯಾಸ ಕೇಳಿರೆ!!!

ಎಡಿಗಾರೆ ಪಟಕ್ಕೆ ಹೊಂದಿಕೆ ಆವ್ತ ಹಾಂಗೆ ರೆಜ ಬರದು ಕಳಿಸಿ ಹೇಳಿದ°.

ಇಲ್ಲೆ ಹೇಳ್ಲೆ ಮನಸ್ಸಾತಿಲ್ಲೆ. ಮರ್ಯಾದೆ ಪ್ರಶ್ನೆ.
ಬೀಸುವ ದೊಣ್ಣೆಂದ ಒಂದರಿ ತಪ್ಪಿಸಿರೆ ಬಚಾವಾದ ಹಾಂಗೆ
ಹೇಳಿ ಜಾನ್ಸಿ “ಆತಂಬಗ” ಹೇಳಿದೆ.

ಮನೆಗೆ ಬಂದು ಆಲೋಚನೆ ಮಾಡಿದೆ, ಇದಕ್ಕೆ ಬರೆತ್ತೆಂತರ ಹೇಳಿ. ಕಾಗದಲ್ಲಿ ಬರವಲೆ ಹೆರಟರೆ ಬರದು ಹೊಡದು ಗೀಚಿ, ಹರುದು ಎಲ್ಲಾ ಅಪ್ಪಗ, ಎಷ್ಟು ಕಾಗದ ಮುಗಿಗು ಗೊಂತಿಲ್ಲೆ.
ಮಗಳು ಹೇಳಿತ್ತು ನಿಂಗೊ ಕಂಪ್ಯೂಟರಿಲ್ಲಿ ಬರೆಯಿ. ಬರದ್ದರ ಬೇರೆಯವಕ್ಕೆ ಓದಲೂ ಎಡಿಗು. ನಿಂಗೊಗೂ ಇನ್ನೊಂದು ಸರ್ತಿಯಂಗೆ ಓದ್ಲೂ ಎಡಿಗು, ತಿದ್ದೆಕ್ಕಾರೆ ಸುಲಾಭಲ್ಲಿ ತಿದ್ದಲೂ ಅಕ್ಕು ಹೇಳಿ.

ಸಲಹೆ ಕೊಡುವವಕ್ಕೆ ಎಂತ ಮಾಡೆಕ್ಕು. ಸುಲಾಭ. ಆಚರಿಸುತ್ತವಕ್ಕೆ ಅಲ್ಲದ ಬಂಙ ಹೇಳಿದೆ.
ಎನಗೆ ಕಂಪ್ಯೂಟರಿಲ್ಲಿ ಕನ್ನಡ ಅ ಆ ಇ ಈ ಬರವಲೆ ಎಂತ ಮಾಡೆಕ್ಕು ಹೇಳಿಯೇ ಗೊಂತಿಲ್ಲೆ. ಹಾಂಗಿಪ್ಪಗ ಅದರಲ್ಲಿ ಲೇಖನ ಬರೆ ಹೇಳಿರೆ.
ನೀರಿಳಿಯದ್ದ ದೊಂಡೆಲಿ, ನಿನ್ನ ಅಮ್ಮ ಮಾಡುವ ಕಲ್ಲು ಉಂಡೆ ತುರುಕಿಸಿದ
ಹಾಂಗೆ ಅಕ್ಕು ಹೇಳಿದೆ.

ಸಾಧಿಸಿರೆ ಸಬಳ ನುಂಗಲಕ್ಕು ಹೇಳಿ ಅಜ್ಜಿ ಹೇಳಿಂಡು ಇರ್ತಲ್ಲದಾ, ಇದು ಕಲಿವದು ಅಷ್ಟೊಂದು ಬಂಙವೋ , ಪಂಥಾಹ್ವಾನ ಕೊಟ್ಟತ್ತು ಮಗಳು. ಸರಿ. ಕಚ್ಚೆ ಕಟ್ಟಿದ್ದೇ.
ಇನ್ನು ಕಲಿಯದ್ದರೆ ಆಗ ಹೇಳಿ “ಬರಹ” ಸೋಪ್ಟ್ ವೇರ್ ನ ಇಳುಶಿದೆ.
ಕೀಲಿ ಮಣೆಯ ಗುಬ್ಬಿಗಳ ಕುಟ್ಟಿದೆ. ಕನ್ನಡ ಅಕ್ಷರ ಬಪ್ಪದು ಕಂಡಪ್ಪಗ. ಕೊಶಿಯೂ ಆತು, ಧೈರ್ಯವೂ ಬಂತು.
ಇನ್ನು ಕಾಕೆ ಕಾಲು ಅಕ್ಷರ ಹೇಳಿ ಆರೂದೆ ನೆಗೆ ಮಾಡ್ಲೆ ಇಲ್ಲೆ ಅನ್ನೆ ಹೇಳಿ ವಿಶ್ವಾಸವೂ ಬಂತು.

ಪರದೆಲಿ ಕನ್ನಡ ಅಕ್ಷರಂಗೊ ಬಪ್ಪಲೆ ಸುರು ಅತು. ಆದರೆ ಲೇಖನ ಬರೆಕನ್ನೆ. ಇದಕ್ಕೆ ಎಂತ ಕೆಣಿ ಹೇಳಿ ಅರಡಿಯ. ಎಂತಾರೂ ಬರದು ಕೊಡ್ತೆ ಹೇಳಿ ಒಪ್ಪಣ್ಣನ ಹತ್ರೆ ದೈರ್ಯಲ್ಲಿ ಹೇಳಿ ಆಯಿದು.
ಹೇಂಗೂ ನೀರಿಲ್ಲಿ ಮುಂಗಿ ಆಯಿದು. ಇನ್ನು ಛಳಿ ಹೇಳಿರೆ ಅಗ ಹೇಳಿದೆ,
ಮನಸ್ಸಿಂಗೆ ಬಂದ ನೆಂಪುಗಳ ಬರೆತ್ತಾ ಹೋದೆ.
ಅಂತೂ ಇಂತೂ ರೆಜ ಬರದೆ. ಇದಕ್ಕೊಂದು ತಲೆಬರಹ ಆಯೆಕ್ಕನ್ನೆ ಹೇಳಿದೆ ಮಗಳ ಹತ್ರೆ. ಆನು ಹೇಳಿದ್ದು ಅದಕ್ಕೆ ಕೇಳಿದ್ದಿಲ್ಲೆ ಕಾಣ್ತು, ಎನಗೆ ಕೇಳಿದ್ದು ರೇಡಿಯೋಲ್ಲಿ ಬಂದ ಪದ್ಯ  “ಚುಕ್ ಬುಕ್ ರೈಲೇ…ನಿಲ್ಲೋದಿಲ್ಲ ಇಲ್ಲಿ ಯಾಕಿಂಗೆ ಓಡ್ತೈತೆ..” ಯುರೇಕಾ ಹೇಳಿ ಮೀತ್ತಲ್ಲಿಂದ ಓಡಿದ್ದಿಲ್ಲೆ ಅಷ್ಟೆ. ಅದನ್ನೇ ತಲೆಬರಹ ಮಾಡಿ ಕಳಿಸಿದೆ.
ಒಪ್ಪಣ್ಣ ಬೈಲಿಲ್ಲಿ ಹಾಕಿರೆ “ಕೂ…ಕೂ…” ಹೇಳಿ ಕೊಶಿಲಿ ಓಡ್ಲೆ ಅಕ್ಕು
, ಇಲ್ಲದ್ದರೆ ತಲೆ ಬರಹ ಅಲ್ಲ “ಹಣೆ ಬರಹ” ಹೇಳಿ ಜಾನ್ಸಿಗೊಂಡೆ.  (ಶುದ್ದಿ ಸಂಕೊಲೆ)

ನಿಂಗಳ ಲೇಖನ ಸದ್ಯವೇ ಹಾಕುತ್ತೆ,  ಬೈಲಿಲ್ಲಿ ಹೆಸರು ಹಿಡುದು ದೆನುಗೊಳಲೆ ಇಲ್ಲೆ, ನಿಂಗಳ ಶರ್ಮಪ್ಪಚ್ಚಿ ಹೇಳಿರೆ ಅಕ್ಕೋ ಕೇಳಿದ ಒಪ್ಪಣ್ಣ.
ಇಷ್ಟರ ವರೆಗೆ ಆನು ಶರ್ಮಣ್ಣ, ಶರ್ಮ ಮಾವ, ಶರ್ಮ ಭಾವ, ಶರ್ಮ ದೊಡ್ಡಪ್ಪ ಎಲ್ಲಾ ಅಯಿದೆ. ಕಡೆಂಗೆ ಒಂದುದಿನ ಹೆಸರು ಗೊಂತಿಲ್ಲದ್ದವಕ್ಕೆ ಶರ್ಮ ಭಟ್ಟನೂ ಆಯಿದೆ.  ಇದೊಂದು ಹೊಸ ಸಂಬಂಧ “ಶರ್ಮಪ್ಪಚ್ಚಿ”, ಸಂತೋಷ, ಇರಳಿ ಹೇಳಿದೆ.

ಹಾಂಗೆ ಮಾರ್ಚ್ 5 ರ ಒಂಭತ್ತು ಗಂಟೆಯ ಶುಭ ಗಳಿಗೆಲಿ ಮೊದಲಾಣ ಸೆಸಿ, ಬೈಲಿಲ್ಲಿ ನೆಟ್ಟು ಆತು.  (ಸಂಕೊಲೆ)
ಅದಕ್ಕೆ ನಮ್ಮ ನೆರೆಕರೆಯವು ಬಂದು ನೀರು ಗೊಬ್ಬರ ಹಾಕಿ ಪೋಚಕಾನ ಮಾಡಿದವು. ಇನ್ನೂದೆ ಸೆಸಿ ನೆಡ್ಲಕ್ಕು ಹೇಳಿ ಧೈರ್ಯ ಬಂತು.

ಇದರ ಎಡಕ್ಕಿಲಿ ಒಪ್ಪಣ್ಣ ಇನ್ನಾಣದ್ದು ಬರಲಿ ಹೇಳ್ಲೆ ಸುರು ಮಾಡಿದ°. ಎಂತರ ಬಪ್ಪದು. ಊಟಕ್ಕೆ ಕೂದಪ್ಪಗ ನಮ್ಮ ಒಪ್ಪಣ್ಣಂಗೆ ಚೂರ್ಣಿಕೆ ಒಂದಾದ ಮತ್ತೆ ಒಂದು ಬತ್ತಡ.
ಪಾಚ ಬಪ್ಪಗ ಸುರು ಮಾಡಿರೆ ಮಜ್ಜಿಗೆ ಬಂದು ಊಟ ಮುಗುದರೂ ಚೂರ್ಣಿಕೆ ಮುಗಿತ್ತಿಲ್ಲೆಡ. ಎನಗೆ ಅದು ಕೂಡಾ ಇಲ್ಲೆ.

ಅಂಬಗ ನೆಂಪಾದ್ದು ಎನ್ನ ಕಾರ್ಯಕ್ಷೇತ್ರದ ಬಗ್ಗೆ. ಇದರ ವಿವರ ಕೊಟ್ಟರೆ ಜೆನಂಗೊಕ್ಕೆ ರೆಜ ಉಪಕಾರ ಅಕ್ಕು  ಕಂಡತ್ತು.
ಇನ್ನೊಂದಷ್ಟು ಗೀಚಿದೆ. ಹೀಂಗೆ ಮುಂದೆ ಹೋತು ಬೈಲಿಲ್ಲಿ ತಿರುಗಾಟ.  
ನೆರೆಕರೆಯವು ದೆನುಗೊಳಿದವು, ಪರಿಚಯ ಮಾಡಿಗೊಂಡವು, ಪ್ರೀತಿ ವಿಶ್ವಾಸ ತೋರಿಸಿದವು.

* * *

ಅಣ್ಣೆ ಬರೆಯಿನವು ಅಣ್ಣೆನೇ ಓದೊಡಾತೆ ಹೇಳಿ ಒಂದು ಮಾತು ಇದ್ದು,  ಆನು ಯಾವ ಅರ್ಥಲ್ಲಿ ಬರದ್ದೋ ಅದು ಎನಗೆ ಹಾಂಗೇ ಅರ್ಥ ಅಕ್ಕು.
ಬೇರೆಯವಕ್ಕೆ ಹೇಂಗೆ ಅರ್ಥ ಅಕ್ಕು ಹೇಳಿ ತಿಳ್ಕೊಂಬಲೆ ಮೊದಾಲು ಮಗಳಿಂಗೆ ತೋರ್ಸಲೆ ಸುರು ಮಾಡಿದೆ.
ಅದು ಎನ್ನ ಪ್ರೂಫ್ ರೀಡರ್ ಆಗಿ ಸಲಹೆ ಕೊಡ್ತಾ ಇರ್ತು. ಪ್ರತಿ ಸರ್ತಿ ಲೇಖನ ಪ್ರಕಟ ಅಪ್ಪಗಳೂ, ಪರೀಕ್ಷೆ ಬರದು ಮಾರ್ಕಿಂಗೆ ಕಾದು ಕೂರ್ತ ಮಕ್ಕಳ ಹಾಂಗಿಪ್ಪ ಸ್ಥಿತಿ ಎನ್ನದು. ಬೈಲಿನವು, ನೆರೆಕರೆಯವು ನಿರೀಕ್ಷೆಗೂ ಮೀರಿ ಪ್ರೋತ್ಸಾಹ ಕೊಟ್ಟವು

* * *

ಒಂದು ವಿಶಯದ ಎಲ್ಲಾ ಆಯಾಮಂಗಳನ್ನು ವಿವರಿಸಿ ಅವ° ಬರದರೆ ಅದು ಹೇಂಗಿಪ್ಪ ಬೋಸಂಗೊಕ್ಕೂ ಅರ್ಥ ಅಕ್ಕು . ಆ ನಮೂನೆಲಿ ಬರವದು ನಮ್ಮ ಒಪ್ಪಣ್ಣನ ಶೈಲಿ.
ಆಯಾಯ ಕಾಲಕ್ಕೆ, ಸಂದರ್ಭಕ್ಕೆ, ತಕ್ಕ ಹಾಂಗೆ, ಧಾರ್ಮಿಕ, ವೈಚಾರಿಕ, ಸಾಮಾಜಿಕ ಕಳಕಳಿಯ  ಲೇಖನಂಗಳಲ್ಲಿ  ತಮಾಷೆಯನ್ನೂ ಸೇರಿಸಿಂಡು, ವಿಚಾರಂಗಳ ಪ್ರಚೋದಿಸಿಂಡು  ಅವ° ಬರದ್ದರ ಓದಲೇ ಕೊಶಿ.
ಪ್ರತಿಯೊಂದು ವಿಶಯಂಗಳಲ್ಲಿಯೂ ಅದರ ಸೂಕ್ಷ್ಮವ ಗಮನಿಸಿ, ಅದರ ವಿವರುಸಲೆ ಹೆರಟರೆ, ಓದುವವಕ್ಕೆ ತಾನೇ ಅಲ್ಲಿ ಇಪ್ಪ ಅನುಭವ ಕೊಡ್ತ ಹಾಂಗೆ ಬರವದೇ ಅವನ ವಿಶೇಷತೆ.
ಲೇಖನದ ಅಕೇರಿಗೆ ಕೊಡುವ ಒಂದೊಪ್ಪ ಇಡೀ ಲೇಖನಕ್ಕೆ ಹೈಲೈಟ್.  ಶುಕ್ರವಾರ ಬಪ್ಪಲೆ ಕಾದು ಕೂದೊಂಡು ಇಪ್ಪವು ಎಷ್ಟೋ ಜೆನಂಗೊ. ಅದರಲ್ಲಿ ಆನೂ ಒಬ್ಬ ಆದೆ.
ತಾನು ಬರವದರ ಒಟ್ಟಿಂಗೆ ಬೇರೆಯವಕ್ಕೂ ಅದೇ ರೀತಿ ಪ್ರೋತ್ಸಾಹ ಕೊಡುವದು, ಎಲ್ಲರನ್ನೂ ಒಟ್ಟಿಂಗೆ ಕರಕ್ಕೊಂಡು ಹೋಪದು, ಎನಗೆ ಆತ್ಮ ವಿಶ್ವಾಸ ತಂದು ಕೊಟ್ಟತ್ತು.

ಶ್ರೀ ಶ್ರೀಗಳ ಸದಾ ಶಿಷ್ಯ ಹೇಳಿ ಗುರುತಿಸಿಗೊಂಡ ಇವ°, ಅವರಿಂದ ಬೈಲಿಂಗೆ ಆಶೀರ್ವಾದ ಕೇಳಿದ್ದಕ್ಕೆ ಅವರ ಆಶೀರ್ವಚನ ಹೀಂಗಿತ್ತು:
ಒಪ್ಪಣ್ಣಾ, ಎಂಗೊ ಮಾಡೆಕ್ಕಾದ ಕೆಲಸ ನೀನು ಮಾಡ್ತಾ ಇದ್ದೆ. ನಿನಗೆ ಮತ್ತೆ ನಿನ್ನ ಬೈಲಿನ ಎಲ್ಲರಿಂಗೂ ತುಂಬಿದ ಮನಸ್ಸಿಂದ ಪೂರ್ಣ ಆಶೀರ್ವಾದ, ತುಂಬಾ ತುಂಬಾ ಆಶೀರ್ವಾದಂಗೊ”.
ಇದಕ್ಕಿಂತ ದೊಡ್ಡ ಆಶೀರ್ವಾದ ಇದ್ದೋ?  ಬೈಲು ಒಳ್ಳೆ ರೀತಿಲಿ ಪ್ರಗತಿಯ ದಾರಿಲಿ ಮುಂದೆ ಹೋಪದು ಇದೇ ಆಶೀರ್ವಾದಂದಲೇ ಅಲ್ಲದೋ?.
ಒಪ್ಫಣ್ಣನ ಹೆತ್ತವರು ಧನ್ಯರು. ಅವರ ಮಗನಾಗಿ, ಸಮಾಜ ಸೇವೆ, ಸರಸ್ವತಿ ಸೇವೆ ಮಾಡ್ತಾ ಇಪ್ಪ ಇವ° ಪುಣ್ಯವಂತ.

* * *

ಬೈಲಿನ ಕಾರ್ಯಕ್ರಮಂಗಳ ಸುಸೂತ್ರಲ್ಲಿ ತೆಕ್ಕೊಂಡು ಹೋಪಲೆ ಒಬ್ಬರು ಗುರಿಕ್ಕಾರ್ರ ಅಗತ್ಯ ಇದ್ದೇ ಇದ್ದಲ್ಲದ.
ನಮ್ಮ ಬೈಲಿಲ್ಲಿಯೂ ಹಾಂಗೆ. ಬೈಲಿನವರ ಯೋಗ ಕ್ಷೇಮ ವಿಚಾರಿಸಿಗೊಂಡು, ಕಾಲ ಕಾಲಕ್ಕೆ ಸಲಹೆ ಕೊಟ್ಟೊಂಡು, ವಿಶೇಷ ಸಂದರ್ಭಂಗೊಕ್ಕೆ ತಕ್ಕ  ಲೇಖನಂಗಳ ಬರೆಶಿಗೊಂಡು, ಬೈಲಿಲ್ಲಿ ಬಂದ ಎಲ್ಲಾ ತಕರಾರುಗಳ ಸೂಕ್ತವಾಗಿ ನಿಭಾಯಿಸಿಂಡು, ಎಲ್ಲರನ್ನು ಪ್ರೋತ್ಸಾಹಿಸಿಂಡು, ಬೈಲಿನವರ ಸಲಹೆಗೊಕ್ಕೆ ಸ್ಪಂದಿಸಿಂಡು, ಜವಾಬ್ದಾರಿಲಿ, ಎಲ್ಲರೊಟ್ಟಿಂಗೆ ಆನೂ ಇದ್ದೆ ಹೇಳಿಂಡು, ಕೈ ಹಿಡುದು ಒಟ್ಟಿಂಗೆ ಮುಂದೆ ತೆಕ್ಕೊಂಡು, ಬೈಲಿನ ಶ್ರೇಯಸ್ಸೇ ತನ್ನದು ಹೇಳಿ ತಿಳ್ಕೊಂಡು, ಯಾವಾಗಲೂ ಹೊಸತನದ ಪರಿಚಯ ಮಾಡ್ಸಿಂಡು, ಆವಿಷ್ಕಾರಂಗಳ ಸೇರ್ಸಿಗೊಂಡು, ಮುಂದೆ  ಹೋಪ ಗುರಿಕ್ಕಾರ್ರ ನೋಡುವಾಗ, ಈ ಬೈಲಿನ ಸದಸ್ಯ ಆದ್ದಕ್ಕೆ ಕೊಶಿಯೂ ಆವ್ತು, ಅವರ ಬಗೆ  ಅಭಿಮಾನವೂ ಆವ್ತು.

* * *

ಬೈಲಿಲ್ಲಿ ಸುಮಾರು ಜೆನಂಗಳ ಪರಿಚಯ ಆತಲ್ಲದ, ಅದರಲ್ಲಿ ನಮ್ಮ ಮಾಷ್ಟ್ರುಮಾವನ ಸಣ್ಣ ಮಗನೂ ಒಬ್ಬ°.
ಪರಿಚಯ ಆದಂದಿಂದ ಆತ್ಮೀಯತೆ. ಶರ್ಮಪ್ಪಚ್ಚೀ.. ಹೇಳಿ ಮಾತಾಡ್ಲೆ ಸುರು ಮಾಡಿರೆ, ವಿಶಯಂಗೊಕ್ಕೆ ಕೊರತ್ತೆ ಇಲ್ಲೆ.
ತಮಾಶೆ ವಿಶಯಂಗಳೂ, ಗಂಭೀರ ವಿಶಯಂಗಳೂ, ಲೋಕಾಭಿರಾಮವೂ, ಎಲ್ಲವೂ. ಸಮಯ ಹೋದ್ದು ಗೊಂತಾಗ. ನಮ್ಮ ಮನೆ ಮಾಣಿಯೇ ಆದ°.

ಅಣ್ಣನ ಮದುವೆ ಹೇಳಿಕೆ ಮಿಂಚಂಚೆಲಿ ಕಳುಸಿದ°. ಪರಿಚಯ ಆದ ಸುರು ಅಷ್ಟೆ. ರಜೆ ಮಾಡಿ ಹೋಯೆಕ್ಕೋ, ಬೇಡ, ಇನ್ನು ಇವನ ಮದುವೆ ಅಪ್ಪಗ ಹೋದ° ಹೇಳಿ ಜಾನ್ಸಿದೆ.
ರೆಜ ಸಮಯ ಕಳುದ ಮತ್ತೆ, ಅವನ ಮದುವೆ ನಿಶ್ಚಯ ಆದ ಸುದ್ದಿ ಹೇಳಿಕ್ಕಿ, ಹೇಳಿಕೆ ಕಳುಸುತ್ತೆ, ಈಗಳೇ ಎರಡು ರಜೆ ತೆಗದು ಮಡುಗಿ, ನಿಂಗೊ ಅಗತ್ಯ ಬರೆಕು ಹೇಳಿದ°.
ಮುಖ ಪರಿಚಯ ಇನ್ನೂ ಆಗಿತ್ತಿಲ್ಲೆ.  ಕೂಸು ಎಲ್ಲಿಂದ ಕೇಳಿದ್ದಕ್ಕೆ ಉತ್ತರ ಅವನ ಭಾಷೆಲಿ ಹೇಳುವದಾದರೆ, ಎಂಗಳ ಕುಂಬಳೆ ಸೀಮೆಯ ಕೇಂದ್ರ ಸ್ಥಾನಂದ.

ಜುಲಾಯಿ ನಾಕರಂದು, ಬೈಲಿನ ಕೆದೂರು ಡಾಕ್ಟ್ರದ್ದು ಮತ್ತೆ ಚೆನ್ನಬೆಟ್ಟಣ್ಣನ ಮದುವೆ. ಒಂದೇ ದಿನ. ಜಾಗೆ ಮಾತ್ರ ಬೇರೆ. ಎರಡಕ್ಕೂ ಹಾಜರಿ ಆದರೂ ಹಾಕದ್ದೆ ನಿವೃತ್ತಿ ಇಲ್ಲೆ.
ಚೆನ್ನ ಬೆಟ್ಟನ ಮದುವೆ ಹಾಲಿಲ್ಲಿ ಎನಗಾಗಿ ಕಾದು ನಿಂದ°. ಮುಖತಃ ಪರಿಚಯ ಆತು. ಮಧ್ಯಾಹ್ನ ಆಯಿದು, ಹೆಚ್ಚು ಮಾತಾಡ್ಲೆ ಪುರುಸೊತ್ತು ಇಲ್ಲೆ.
ಅವಂಗೆ ಕೆದೂರು ಡಾಕ್ಟ್ರ ಮದುವೆಗೆ ಹೋಪಲೆ ಸಮಯ ಮೀರುತ್ತಾ ಇದ್ದು.  ಮನೆಯವರ ಪರಿಚಯ ಮಾಡ್ಸಿ ಕೊಟ್ಟೆ. ಹೆರಡುವಾಗ ಪುನಃ ಹೇಳಿದ° ಎರಡು ರಜೆ ತೆಗದು ಮಡುಗಿ.
ಮದುವೆ, ಸಟ್ಟುಮುಡಿ ಎಲ್ಲಾ ಸುದರಿಸಿಕೊಡೆಕು ಹೇಳಿ.  ಬಯಲಿನ ಶ್ರೀ ಅಕ್ಕನ ಪರಿಚಯ ಆದ್ದು ಇಲ್ಲಿಯೇ.

ಕೆಲವು ಜೆನಂಗಳ ನೋಡಿದ್ದೆ, ಹೇಳಿಕೆ ಕಾಗದ ಪೋಸ್ಟಿಲ್ಲಿ ಕಳುಸುತ್ತವು. ಮತ್ತೆ ಎದುರು ಕಂಡರೆ ಅಗಲೀ, ಮಾತಾಡುವಾಗ ಅಗಲೀ ಆ ಸುದ್ದಿಯೇ ತೆಗಯದ್ದೆ, ಜೆಂಬಾರ ಮುಗುದ ಮತ್ತೊಂದರಿ ಕಾಂಬಗ “ ಮದುವೆಲಿ ನಿನ್ನ ತಲೆ ಕೊಡಿ ಕಂಡತ್ತಿಲ್ಲೆ ಅನ್ನೆ” ಕೇಳುವವು ಇದ್ದವು.
“ಎನ್ನ ತಲೆ ಮಾತ್ರ ಆಗಿ ಎಲ್ಲಿಗೂ ಕಳುಸುತ್ತ ಕ್ರಮ ಎನಗೆ ಅರಡಿಯ” ಹೇಳಿ ಹೇಳೆಕ್ಕು ಹೇಳಿ ಮನಸ್ಸಿಲ್ಲಿ ಆಲೋಚನೆ ಬಂದರೂ, ಎಂತಗೆ ಮಾತಾಡಿ ನಿಷ್ಟೂರ ಕಟ್ಟಿಸಿಗೊಂಬದು ಹೇಳಿ “ಹೆಃ ಹೆಃ , ಬಪ್ಪಲೆ ಆಯಿದಿಲ್ಲೆ, ರಜೆ ಸಿಕ್ಕಿದ್ದಿಲ್ಲೆ ” ಹೇಳಿ  ಎಂತಾರೂ ಒಂದು ಕಾರಣ ಹೇಳಿ ಸುದಾರ್ಸುವದು.

ಹೇಳಿಕೆ ಕಾಗದ ಪೋಸ್ಟಿಲ್ಲಿ ಬಂತು. ದೊಡ್ಡ ಕಟ್ಟ. ಕಾಗದ ಭರ್ಜರಿ ಮಾಡ್ಸಿದ್ದ ಹೇಳಿ ಜಾನ್ಸಿ, ಕವರಿನ ಬಿಡಿಸಿರೆ, ಅದರಲ್ಲಿ ಹೇಳಿಕೆ ಕಾಗದದೊಟ್ಟಿಂಗೆ, ಮಾಷ್ಟ್ರು ಮಾವ ಬರದ ಪುಸ್ತಕ “ದೃಷ್ಟ-ಅದೃಷ್ಟ”.
ಕೊಶೀ ಆತು. ಯಾವಗಲೋ ಒಪ್ಪ ಬರವಗ ಬರದಿತ್ತಿದ್ದೆ, ಆ ಪುಸ್ತಕ ಒಂದರಿ ಓದೆಕ್ಕು ಹೇಳಿ. ಅದರ ನೆಂಪು ಮಾಡಿ, ತಾನೇ ಬರೆಸಿ, ಮಾಷ್ಟ್ರು ಮಾವನ ಷಷ್ಠಿ ಪೂರ್ತಿ ಸಂದರ್ಭಲ್ಲಿ  ಶ್ರೀಗುರುಗಳಿಂದ ಬಿಡುಗಡೆ ಮಾಡಿದ ಪುಸ್ತಕವ ಕಳಿಸಿ  ಕೊಟ್ಟ°.
ಹೃದಯ ತುಂಬಿ ಬಂತು. ಅದೇ ದಿನ ಅದರ ಓದಿದೆ. ಮತ್ತೊಂದರಿ ಪುರುಸೊತ್ತಿಲ್ಲಿ ಓದಿದೆ. ಜೀವನ ಹೇಳಿರೆ ಎಂತರ ಹೇಳಿ ಮನಸ್ಸಿಂಗೆ ತಟ್ಟಿತ್ತು. ಗಂಧ ತೇದಷ್ಟು ಪರಿಮಳ ಜಾಸ್ತಿ . ಮಾಷ್ಟ್ರು ಮಾವನ ಜೀವನವೂ ಹಾಂಗೆ.
ಜೀವನಲ್ಲಿ ಎಲ್ಲಾ ಕಷ್ಟಂಗಳನ್ನೂ ಎದುರಿಸಿದವು. ಬೇರೆಯವಕ್ಕೆ ಅಮೃತ ಧಾರೆ ಕೊಟ್ಟವು.

ಮಾಷ್ಟ್ರು ಮಾವಂಗೂ, ಅವರ ಸಣ್ಣ ಮಗಂಗೂ ಹೃದಯಲ್ಲಿ ಒಂದು ಜಾಗೆ ಭದ್ರವಾಗಿ ನೆಲೆ ನಿಂದತ್ತು.

* * *

ಮದುವೆಯಂದು ನೆರೆಕರೆಯ ನೆಂಟ್ರ ಮುಖ ಪರಿಚಯ ಆತು.
ಮುಳಿಯ ಭಾವಯ್ಯ ಸಂದರ್ಭಕ್ಕೆ ಸರಿಯಾಗಿ ಬರದ ಕವನವ ಕುಡ್ಪಲ್ತಡ್ಕ ಭಾವಯ್ಯ ಸುಮಧುರವಾಗಿ ಹಾಡಿದವು.  ಶ್ರೀ ಅಕ್ಕನ ಕಸೂತಿ ಕಲೆ ಉತ್ತರೀಯಕ್ಕೆ ಮೆರುಗು ಕೊಟ್ಟತ್ತು.

ಸಟ್ಟುಮುಡಿ ದಿನದ ಕಾರ್ಯಕ್ರಮಕ್ಕೆ ಮಾಷ್ಟ್ರುಮಾವನ ಮಕ್ಕೊ ಹಾಕಿದ ರೂಪುರೇಷೆ ಕಾವ್ಯಮಯವಾಗಿ ಕಂಡತ್ತು.
ಮನೆ ಒಳ ಹೊಗ್ಗುವಲ್ಲಿ ಶ್ರೀಗುರುಗಳು ಮಾಷ್ಟ್ರು ಮಾವನ ಷಷ್ಠಿ ಪೂರ್ತಿ ಸಂದರ್ಭಲ್ಲಿ ಮನೆಗೆ  ಬಂದ ಸುಮಧುರ ಕ್ಷಣಂಗಳ ನೆನಪಿಸಿ ಕೊಡುವ ಪಟಂಗೊ, ಚೆಪ್ಪರದ ಕರೇಲಿ ಸಪ್ತ ಪದಿಯ ಅರ್ಥ, ಮಾಂಗಲ್ಯಂ ತಂತುನಾನೇನ…. ಇದರ ವಿವರಣೆ, ಕಾಳಿದಾಸನ ಅಭಿಜ್ಞಾನದ ಆ ನಾಕು ಶ್ಲೋಕಂಗೊ, ಕೂಳಕ್ಕೋಡ್ಲು ಡಾಮಹೇಶ ಬರದ ಶ್ವೇತಾಳನ್ನು ಪಡೆದ ಈತ°  `ಧ್ಯೇಯ’ವನ್ನು ಸಾಧಿಸಿ ಅಭೀಷ್ಟಗಳನ್ನು ಹೊಂದಲಿ ಹೇಳುವ ಆಶಯದ ಶ್ಲೋಕ ಎಲ್ಲವೂದೆ ಸಂದರ್ಭಕ್ಕೆ ಶೋಭೆ ಕೊಟ್ಟತ್ತು.
ಮಂಟಪದ ಎರಡು ಹೊಡೆಲಿ ಬಿಡಿಸಿದ ರಂಗೋಲಿಗೊ (ಜೋಡಿ ಹಕ್ಕಿ ಮತ್ತೆ ಹೂಗಿನ ಕಳ), ಮಂಟಪದ ಅಲಂಕಾರ, ಯಕ್ಷಗಾನದ ವೇಶದ ಬೊಂಬೆಗೊ, ಎಲ್ಲವೂ ಅದರ ತಯಾರಿಲಿ ತೊಡಗಿಸಿದವರ  ತನ್ಮಯತೆ, ಪರಿಶ್ರಮ ಎದ್ದು ಕಂಡೊಂಡು ಇತ್ತಿದ್ದು.

ಸುಪ್ರಿಯ ಸುಭಾಷಿತಾನಿ”  ಬಿಡುಗಡೆ ಒಳ್ಳೆ ಕಾರ್ಯಕ್ರಮ ಆಗಿ ಮೂಡಿ ಬಂತು.
ಮಾಷ್ಟ್ರು ಮಾವನ ಅತ್ಮೀಯ ಸ್ವಾಗತ, ಮನೋರಮ ಅವರ ಪ್ರಸ್ತುತಿ, ಚೌಕ್ಕಾರು ಮಾವನ ಮಾತುಗೊ, ವಿದ್ವಾನಣ್ಣನ ಪ್ರವಚನ, ಪುಸ್ತಕ ಮಳಿಗೆ ಎಲ್ಲವೂ ಒಂದು ಒಳ್ಳೆ ಸಾಂಸ್ಕೃತಿಕ ಕಾರ್ಯಕ್ರಮ ಆಗಿ ಸಭೆಗೆ ಮೆರುಗು ಕೊಟ್ಟತ್ತು.

ಮಳೆಯ ಪೂರ್ವ ನಿರೀಕ್ಷೆಲಿ, ಚೆಪ್ಪರಕ್ಕೆ ಶೀಟ್ ಹಾಕಿದ್ದು, ನೆಲಕ್ಕೆ ಪಸೆ ಬಾರದ್ದ ಹಾಂಗೆ ಕಾರ್ಪೆಟ್ ಹಾಕಿದ್ದು, ಬಫೆ ಮಾಡ್ತಲ್ಲಿಂದ ಚೆಪ್ಪರಕ್ಕೆ ವರೆಗೆ ಶೀಟ್ ಹಾಕಿ ವೆವಸ್ತೆ ಮಾಡಿದ್ದು, ಊಟಕ್ಕೆ ಮೇಜಿನ ವೆವಸ್ಥೆ ಎಲ್ಲವೂದೆ ಅತಿಥಿಗೊಕ್ಕೆ ಮನೆಯವರ ಕಾಳಜಿಯ ಎತ್ತಿ ತೋರಿಸಿತ್ತು.
ಬೈಲಿನ ಜೌವ್ವನಿಗರ ಸುದರಿಕೆ ನೋಡುವಾಗ ಒಂದು ಸಂಘಟನೆ ಜೆನಂಗಳ ಎಷ್ಟು ಹತ್ತರಂಗೆ ತತ್ತು , ಒಂದು ಕಾರ್ಯಕ್ರಮವ ಎಷ್ಟು  ಯಶಸ್ವಿಯಾಗಿ ಮಾಡ್ತು ಹೇಳ್ತಕ್ಕೆ, ಒಪ್ಪಣ್ಣ.ಕಾಂ ಸಾಕ್ಷಿ ಆಗಿ ಕಂಡತ್ತು ಎನಗೆ

* * *

ಬೈಲಿಲ್ಲಿ, ಎಲ್ಲರೂ ಒಟ್ಟಿಂಗೆ ಕೂದೆಯೊ°, ಮಾತಾಡಿದೆಯೊ°, ಎಲ್ಲರೂ ಅವರವರ ಮನದ ಅಡಿಗೆಯ  ರಸಪಾಕ ತಂದು ಬಳುಸಿದವು.
ಉಂಡಷ್ಟು ಹಶು ಜಾಸ್ತಿ ಆವ್ತಾ ಇದ್ದು.
ಇನ್ನುದೆ ಬೇರೆ ಬೇರೆ ನಮೂನೆಯ ಅಡಿಗೆಗೊ ಬರಲಿ.
ಹೊಸ ರುಚಿ ತಯಾರು ಮಾಡ್ಲೆ ಎಲ್ಲರೂ ಹೆರಡಲಿ, ಹೊಸಬರೂ ಬರಳಿ, ಜ್ಞಾನ ಸಂಪತ್ತು ವೃದ್ಧಿ ಆಗಲಿ, ಪ್ರೀತಿ ವಿಶ್ವಾಸ ಎಲ್ಲರಲ್ಲಿಯೂ ಇರಳಿ, ಬೈಲು, ಸಮುದ್ರದ ಹಾಂಗೆ ವಿಸ್ತಾರ ಆಗಲಿ, ವಟ ವೃಕ್ಷದ ಹಾಂಗಾಗಲಿ.

“ಕೂಡಿ ಬಾಳೋಣ ಎಂದೆಂದು ಸೇರಿ ದುಡಿಯೋಣ”

“ತಮಸೋಮಾ ಜ್ಯೋತಿರ್ಗಮಯ”

“ಜ್ಞಾನವೆಂಬ ಬೆಳಕು ಎಲ್ಲಾ ಕಡೆಂದಲೂ ಬರಲಿ”

~*~*~*~

ಸೂ:

37 thoughts on “ಒಪ್ಪಣ್ಣನ ಬೈಲಿಲ್ಲಿ ಒಂದು ಸ್ವಗತ…

  1. ಸ್ವಗತ ಲಾಯ್ಕ ಆಯ್ದು ಶರ್ಮ ಅಪ್ಪಚ್ಚಿ….

  2. anna, ತುಂಬಾ ಒಳ್ಳೆ ‘ಸ್ವಗತ’. ಓದಿಸಿಗೊಂಡ್ ಹೋಪಂತ ಲೇಖನ. ಓದಿ ತುಂಬಾ ಖುಷಿ ಆತು.

  3. ಶರ್ಮಪ್ಪಚ್ಚಿ.. ಎನ್ನ ದೋಸ್ತಿ…. 🙂
    ಭಾರಿ ಕೊಶಿಯಾವುತ್ತು ಅವರ ಹತ್ತರೆ ಮಾತಾಡ್ಲೆ ಎನಗೆ .. 😀
    ಅವರ ಬರವಣಿಗೆ ಎನಗೆ ಸ೦ಪೂರ್ಣವಾಗೆ ಅರ್ಥ ಆವುತ್ತು.. 🙂

    1. ಅಪ್ಪೊ ಬೋಸಣ್ಣ… ನೀನು ಯೇವಾಗಲೂ ಲೊಟ್ಟೆ ಹೇಳುದಡ..ಮನ್ನೆ ನಮ್ಮ ಬೈಲಿನವು ಫೊನಿಲಿ ಹಾಂಗೆ ಹೇಳಿಗೊಂಡಿತ್ತಿದ್ದವು.

  4. ಶರ್ಮಪ್ಪಚ್ಚಿ, ಬೈಲಿಂಗೆ ಇಳುದು ಒಂದು ವರ್ಷ ಅಪ್ಪಗ ನಿಂಗೊ ಹಿಂತಿರುಗಿ ನೋಡಿ ಬಂದ ದಾರಿಯ ಬಗ್ಗೆ, ಬೈಲಿಲಿ ಬೆಳದ ಬಗ್ಗೆ ಬರದ್ದದು ಲಾಯ್ಕಾಯಿದು. ಅಂತರ್ಜಾಲಲ್ಲಿ ಎಷ್ಟೊ ಬೈಲುಗ ಇದ್ದು. ನಾನಾ ನಮುನೆದು, ನಾನಾ ಭಾಷೆದು, ನಾನಾ ಮನಸ್ಥಿತಿಯ ಮನುಷ್ಯರದ್ದು!!! ಇದೆಲ್ಲದರ ಎಡಕ್ಕಿಲಿ ನಮ್ಮ ಹವ್ಯಕ ಭಾಶೆಯ ಒಂದು ಬೈಲು ಪ್ರತ್ಯೇಕ ಆಗಿ ನಿಲ್ಲುತ್ತು. ಎಂತಕ್ಕೆ ಹೇಳಿದರೆ, ಹೆಚ್ಚಿನ ಎಲ್ಲಾ ಬೈಲುಗಳಲ್ಲಿ ನಾವು, ಅವ್ವು ಬೆಳದ್ದದರ ನೋಡಿ ಅದರ ವಿಮರ್ಶೆ ಮಾಡ್ಲೆ ಮಾಂತ್ರ ಎಡಿಗಷ್ಟೆ. ಕೆಲವು ಬೈಲಿಲಿ ನವಗೆ ಬಿತ್ತುಲೆ ಜಾಗೆ ಸಿಕ್ಕುಗು. ಆದರೆ ಒಪ್ಪಣ್ಣನ ಬೈಲಿಲಿ ನವಗೆ ಬೇಕಾದಷ್ಟು ಜಾಗೆ ಮಾಡಿ ಅದರ ಸಜ್ಜು ಮಾಡಿ ನವಗೆ ಬೇಕಾದ್ದದರ, ಬೇಕಾದ ಹಾಂಗೆ ಬೆಳವಲೆ ಎಡಿಗು.

    ಬೇರೆ ಬೈಲ ಗುರಿಕ್ಕಾರಕ್ಕ ಯಾವ ಬೈಲಿಲೂ ಬರವೋರ ಬಗ್ಗೆ ವಿಚಾರ್ಸುಲೆ ಬಾರವು. ಬೆಳವ ಜಾಗೆ ಕೊಟ್ಟಿಕ್ಕಿ ನಿಂಗಳ ಕೊಶಿವಾಶಿ ಬೆಳೆರಿ ಹೇಳಿ ನಡಗು ಅಲ್ಲದಾ? ಒಪ್ಪಣ್ಣನ ಬೈಲಿಲಿ ನಾವು ‘ಬೆಳವಗ’ ಅದರ ಸರಿ ತಪ್ಪು ಗುರುತಿಸಿ, ಬೇಕಾದಲ್ಲಿ ತಿದ್ದಿ, ಸೇರ್ಸೆಕ್ಕಾದ್ದದರ ಸೇರ್ಸುಲೆ ಸಕಾಯ ಮಾಡಿ ಕೊಡುಲೆ ಬೈಲ ಗುರಿಕ್ಕಾರ್ರು, ಒಪ್ಪಣ್ಣ ಅವರ ಅನುಭವಂದ ನಮ್ಮ ಬೆಳವಣಿಗೆ ಪೂರ್ಣ ರೀತಿಲಿ ಬಪ್ಪ ಹಾಂಗೆ ಮಾಡ್ತವು. ಈ ರೀತಿ ಮಾಡುಲೆ, ಇಷ್ಟು ವಿಶಾಲ ಹೃದಯ ಇಪ್ಪ ಬೇರೆ ಬೈಲ ಗುರಿಕ್ಕಾರಕ್ಕ ಸಿಕ್ಕವು.

    ಒಬ್ಬ ಬೈಲಿಂಗೆ ಬಂದಲ್ಲಿಂದ ಹಿಡುದು ಅವರ ಪೂರ್ತಿ ಚಟುವಟಿಕೆ ಎಂತೆಲ್ಲ ಆವುತ್ತು ಹೇಳಿ ನೋಡಿ, ಅವರಲ್ಲಿಪ್ಪ ಬರವಣಿಗೆಯ ಹೆರ ತಪ್ಪಲೆ ಒಪ್ಪಣ್ಣಂಗೆ ಲಾಯ್ಕ ಅರಡಿತ್ತು. ಅವನಲ್ಲಿ ಒಂದು ಸೂಕ್ಷ್ಮ ದೃಷ್ಟಿ ಇದ್ದು. ಬೈಲಿಂಗೆ ಬಪ್ಪ ಮೊದಲು ಆನು ಏನನ್ನೂ ಬರದ್ದಿಲ್ಲೆ(ಮೊದಲು ಪರೀಕ್ಷೆ ಬರದ್ದದರ ಬಿಟ್ಟರೆ!!!) ಕಳುದ ಒಂದು ವರ್ಷಲ್ಲಿ ಆನು ಬೈಲಿಂಗೆ ಇಳುದ ದಿನಂದ ಆನು ಎಂತದೇ ಬರೆಯಲಿ ಅದರ ಸೂಕ್ಷ್ಮವಾಗಿ ಪರೀಕ್ಷೆ ಮಾಡಿ ತಿದ್ದೆಕ್ಕಾದಲ್ಲಿ ತಿದ್ದಿ, ಅಚ್ಚುಕಟ್ಟಾಗಿ ಅದು ಬೈಲಿಲಿ ಬಪ್ಪ ಹಾಂಗೆ ಮಾಡಿ ಗುರಿಕ್ಕಾರ್ರು ಒಪ್ಪಣ್ಣ, ಬಟ್ಟಮಾವ° ನೋಡಿಗೊಂಡಿದವು.

    ಅಪ್ಪಚ್ಚಿ, ನಿಂಗೋ ಹೇಳಿದ ಹಾಂಗೆ ಮಾಷ್ಟ್ರುಮಾವನ ಸಣ್ಣ ಮಗ°, ಎಲ್ಲೋರ ಮನಸ್ಸು ಗೆದ್ದವ°. ನೀರು ಹೇಂಗೆ ಎಲ್ಲಾ ಪಾತ್ರಲ್ಲಿಯುದೇ ಹೊಂದಿಗೊಂಡು ತನ್ನ ಮೂಲಸ್ವರೂಪವ ಬಿಡದ್ದೆ ಇರ್ತೋ ಹಾಂಗೇ ಮಾಷ್ಟ್ರುಮಾವನ ಸಣ್ಣ ಮಗಂದೇ ಎಲ್ಲೋರ ಒಟ್ಟಿಂಗೆ ಎಲ್ಲೋರಿಂಗೆ ಬೇಕಾದ ಹಾಂಗೆ ಇದ್ದುಗೊಂಡು ತನ್ನ ಅಸ್ತಿತ್ವ ತಾನೇ ಕಂಡವ°. ಇದರಲ್ಲಿ ಅವನ ಹಿರಿಯರ ಮಾರ್ಗದರ್ಶನ ಇಕ್ಕು. ಅವನ ಮದುವೆಯ ಸಮಯ ನಿಜವಾಗಿ ನಾವು ಬೈಲಿನವ್ವು ಸೇರಿ ಸಂಭ್ರಮ ಮಾಡಿದ್ದು. ಮದುವೆ ಸಮಯಲ್ಲಿ ತಮ್ಮನ ಅಕ್ಕನಾಗಿ ಮೆರವಲೆ ಎನಗೆ ತುಂಬಾ ತುಂಬಾ ಹೆಮ್ಮೆ ಅನಿಸಿದ್ದು. ಮದುವೆಲಿ ಅಕ್ಕನ ಜವಾಬ್ದಾರಿಯ ಎಲ್ಲ ಕೆಲಸಂಗಳ ಆನು ಮಾಡ್ಲೆ ಅವ° ಇಚ್ಚಿಸಿದ್ದದು ಎನಗೆ ಧನ್ಯತೆಯ ಕ್ಷಣ. ಹೀಂಗಿಪ್ಪ ತಮ್ಮನ ಪಡೆಯೆಕ್ಕಾದರೂ ಪುಣ್ಯ ಬೇಕಲ್ಲದಾ? ಎನ್ನ ಸ್ವಂತ ತಮ್ಮ ಆರು ಹೇಳಿ ಅಪ್ಪಷ್ಟು ಎನಗೆ ಮನಸ್ಸಿಂಗೆ ಹತ್ತರಾಣವ°. ಮದುವೆಲಿ ಬೈಲಿನವಕ್ಕೆ ಪೂರ್ಣ ಸ್ವಾತಂತ್ರ್ಯ ಕೊಟ್ಟು ನಮ್ಮ ಮನಸ್ಸಿಲಿ ಇದ್ದದರ ಹೇಳುಲೆ ಅವಕಾಶ ಕೊಟ್ಟಿದ°.ಸೂರ್ಯ ಚಂದ್ರಂಗೆ ಆರುದೇ ಅವರವರ ಮಹತ್ವ ಹೇಳೆಕ್ಕು ಹೇಳಿ ಇಲ್ಲೆನ್ನೆ, ಲೋಕಕ್ಕೇ ಗೊಂತಿದ್ದು ಅದೇ ರೀತಿ ಈ ಮಾಣಿಯ ಬಗ್ಗೆದೇ ನಾವು ಪ್ರತ್ಯೇಕ ಹೇಳೆಕ್ಕಾಯಿದಿಲ್ಲೆ ಎಲ್ಲೋರಿಂಗೂ ಅನುಭವಕ್ಕೆ ಬಂದದೇ ಅಲ್ಲದಾ ಅದು??

    ಮಾಷ್ಟ್ರುಮಾವನ ಎಲ್ಲಾ ಅನುಭವ, ತಿಳುವಳಿಕೆಯ ಅವರಿಂದ ತೆಗದು ನವಗೆ ಕೊಡ್ತ ಒಪ್ಪಣ್ಣ ವಾರ ವಾರ ಪ್ರತ್ಯೇಕ ಶುದ್ದಿಗಳಲ್ಲಿ. ಬೈಲು ಒಬ್ಬಂಗೆ ಅಥವಾ ಒಂದೇ ಪ್ರಾಯದವಕ್ಕೆ ಇಪ್ಪದು ಅಲ್ಲ ಇಡೀ ಸಮಾಜದ ಎಲ್ಲಾ ಪ್ರಾಯದವಕ್ಕೆ ಇಪ್ಪದು ಹೇಳಿ ತೋರ್ಸಿ ಕೊಟ್ಟಿದ° ಒಪ್ಪಣ್ಣ. ಅವನ ಶುದ್ದಿಗಳಲ್ಲಿ ಎಲ್ಲೋರಿಂಗೂ ವಿಷಯಂಗ ಇರ್ತು. ಸಮಾಜದ ಬಗ್ಗೆ ಕಳಕಳಿ ಇಪ್ಪ ಒಬ್ಬ° ಸನ್ಮನಸ್ಸಿಪ್ಪವಂದ ಮಾಂತ್ರ ಇದು ಸಾಧ್ಯ!! ಅವನ ಪ್ರಾಯಕ್ಕೆ ಈ ಸಾಧನೆ ನಿಜವಾಗಿ ಅದ್ಭುತ!! ಸಂಸ್ಥಾನ ಆಶೀರ್ವಾದ ಮಾಡಿದ ಹಾಂಗೆ ಶಂಕರಾಚಾರ್ಯರ ಪಾದದೆತ್ತರ ಬೆಳೆಯಲಿ. ಅವನ ಈ ಪುಣ್ಯಕಾರ್ಯಲ್ಲಿ ನಾವೆಲ್ಲ ನಮ್ಮಂದಾದಷ್ಟು ತೊಡಗಿಸಿಗೊಂಬ. ದೊಡ್ಡಮಾವ° ಹೇಳಿದ ಹಾಂಗೆ ಅಳಿಲ ಸೇವೆಯೋ, ಮಂಗಂಗಳ ಸೇವೆಯೋ ಮಾಡುವ° ರಾಮಾನುಗ್ರಹ, ಗುರುಅನುಗ್ರಹ ಸಿಕ್ಕುಗು. ಮಾಡುವ ಕೆಲಸಲ್ಲಿ ಕುಂದು ಹುಡುಕ್ಕಿ, ಮಾಡುವೋರ ಮಾಡ್ಲೆ ಬಿಡದ್ದರೆ ಕೋಳಿಗೆ ಸಿಕ್ಕಿದ ಹಾಂಗೆ ಶಾಪ ಸಿಕ್ಕುಗು ಅಲ್ಲದಾ ಅಪ್ಪಚ್ಚಿ?

    ಶರ್ಮಪ್ಪಚ್ಚಿ, ನಿಂಗಳ ಲೆಕ್ಕಲ್ಲಿ ಎನಗೆ ಒಬ್ಬ° ಮನೆ ಹಿರಿಯ° ಸಿಕ್ಕಿದ ಹಾಂಗೆ ಆಯಿದು. ಬೈಲಿಲಿ ಎಂತದೇ ಸಂತೋಷ, ದುಃಖ ಆದರೂ ನಿಂಗೋ ಎನ್ನ ಒಟ್ಟಿಂಗೆ ಯಾವಾಗಲೂ ಇರ್ತಿ. ಸಮಯಕ್ಕೆ ಸರಿಯಾಗಿ ಸೂಕ್ತ ಮಾರ್ಗದರ್ಶನ ಕೊಡ್ತಿ. ತಮ್ಮನ ಹತ್ತರೆ ಲಡಾಯಿ ಅಪ್ಪಗ ಪಂಚಾತಿಗೆದೇ ಮಾಡಿ ಸರಿ ಮಾಡ್ತಿ. (ಆದರೂ ಎಲ್ಲ ಸರ್ತಿಯೂ ಆನೇ ತಪ್ಪಾಗಿಪ್ಪದು ನಿಂಗೊಗೆ!!! ತಮ್ಮ ಯಾವಾಗಲೂ ಸರಿಯೇ!!! 🙁 🙁 😉 ) ಎನ್ನ ಬೆಳವಣಿಗೆಲಿ ನಿಂಗಳದ್ದೂ ಅಷ್ಟೆ ಆಶೀರ್ವಾದ ಇದ್ದು. ಅಪ್ಪಚ್ಚಿ ನಿಂಗೋ ಹೀಂಗೇ ಎಂಗಳ ಒಟ್ಟಿಂಗೆ ಇರಿ. ಮಾರ್ಗದರ್ಶನ ಮಾಡಿ, ತಪ್ಪಿದಲ್ಲಿ ಜೋರು ಮಾಡಿ ತಿದ್ದಿ. ನಿಂಗಳ ಎಲ್ಲಾ ಪ್ರೀತಿಗೆ ಎನ್ನ ಮನಸ್ಸಿನಾಳಂದ ಧನ್ಯವಾದಂಗ ಅಪ್ಪಚ್ಚಿ.

    ಸುವರ್ಣಿನಿ ಅಕ್ಕ° ಹೆಳಿದ ಹಾಂಗೆ ನಮ್ಮ ಬೈಲಿನ ಕೂಡು ಕುಟುಂಬಲ್ಲಿ ಎಲ್ಲೋರೂ ಇದ್ದವು. ಎಲ್ಲೋರ ಪ್ರೀತಿ ಎನಗೆದೇ ಸಿಕ್ಕಿದ್ದು. ಪ್ರತಿಯೊಬ್ಬಂಗೂ ಎನ್ನ ಧನ್ಯವಾದಂಗ.
    ನಮ್ಮ ಬೈಲು ಇನ್ನುದೇ ಬೆಳೆಯಲಿ. ಸಾಹಿತ್ಯಿಕವಾಗಿಯೂ, ಸಂಖ್ಯೆಲೂ..
    ಬೈಲು ಬೆಳದಷ್ಟು ಮನಸ್ಸುಗೋ ಹತ್ತರೆ ಆಗಲಿ..
    ಗುರಿಕ್ಕಾರ್ರಿಂಗೆ , ಒಪ್ಪಣ್ಣಂಗೆ, ಬಟ್ಟಮಾವಂಗೆ ಶ್ರೀ ಗುರು ದೇವರ, ಸರಸ್ವತಿಯ ಅನುಗ್ರಹ ಇರಲಿ.. ಯಾವತ್ತಿಂಗುದೇ!!!!!
    ॥ಹರೆರಾಮ॥

  5. ಶರ್ಮಪ್ಪಚ್ಚಿ ಎರಡನೇ ವರ್ಷಕ್ಕೆ ಸ್ವಾಗತ….
    ಸ್ಫ್ವಗತ ಲಾಯಿಕ ಆಯಿದು….ಹೀಂಗೆ ಬರಕ್ಕೊಂಡಿರಿ…..

  6. ನಿಂಗಳ ಅಭಿಮಾನಕ್ಕೆ ಎಂತ ಹೇಳುವದು ಗೊಂತಾವ್ತಿಲ್ಲೆ. ನಿಂಗಳ ಎಲ್ಲರ ಹಾರೈಕೆಯೇ ಶ್ರೀ ರಕ್ಷೆ ಎನಗೆ

  7. ಮಾತಾಡ್ಸಿಯೊ೦ಡಿಲ್ಲದ್ರೆ ನಿ೦ಗಳಿ೦ದ ಯೆನಗೇ ಹೆಚ್ಹು ಅಸಕ್ಕ ಆವುತ್ತು ಆದರೂ ಕೆಲವು ಸರ್ತಿ ಪರಿಸ್ತಿತಿಗೊ ನಮ್ಮ ಹೊಡೇ೦ಗೆ ಇರ್ತಿಲ್ಲೆ.ಬಯಲಿ೦ಗೆ ಸದ್ಯ ಇದ್ದಷ್ಟು ಬ೦ದೇಬತ್ತೆ.ಒಪ್ಪ೦ಗಳೊಟ್ಟಿ೦ಗೆ.

  8. ಶರ್ಮಪ್ಪಚ್ಚಿ ಬೈಲಿನ ಒಳಾಂಗೆ ಬಂದ ಬಗೆ, ಗೊಂತಾಗದ್ದೇ ಕಳುದ ಒಂದು ವರ್ಷ, ಒಪ್ಪಣ್ಣನ ಒಪ್ಪ ಲೇಖನಂಗೊ, ಮಾಸ್ಟ್ರ ಸಣ್ಣ ಮಗನ ಮದುವೆ ಗೌಜಿ ಎಲ್ಲವನ್ನು ಅಪ್ಪಚ್ಚಿ ಸ್ವಗತದ ಮುಖಾಂತರ ಹೇಳಿದ್ದದು, ಅವು ಏವತ್ತೂ ಬರೆತ್ತ ಅವರ ಮಾಹಿತಿಯುಕ್ತ ಲೇಖನಂಗಳಷ್ಟೆ ಚೆಂದ ಆಯಿದು. ಶರ್ಮಪ್ಪಚ್ಚಿ ನಿಜವಾಗಿಯುದೆ ನಮ್ಮ ಬೈಲಿನ ಹಿರಿಯರು. ಅವು ಎಂತ ಬರೆತ್ತರುದೆ, ಅದು ಕರಾರುವಾಕ್ಕಾಗಿ ಇರುತ್ತು. ಅವು ಕನ್ನಡಲಿ ಟೈಪು ಮಾಡ್ಳೆ ಕಲುತ್ತು, ವಿಷಯವನ್ನೂ ಸಂಗ್ರಹಿಸಿ ಈಗ ದೀರ್ಘ ಲೇಖನಂಗಳ ಬರೆತ್ತದು ನೋಡಿರೆ ಅವರ ಆಸಕ್ತಿ ಅದೆಷ್ಟು ಇದ್ದು ಹೇಳಿ ಗೊಂತಾವುತ್ತು. ಲೇಖನದ ಶೈಲಿಯೂ ಅತಿ ಸುಂದರ. ವೈಯುಕ್ತಿಕವಾಗಿಯೂ ಅವರ ಪರಿಚಯ ಎನಗಿದ್ದದಕ್ಕೆ ಎನಗೆ ತುಂಬಾ ಅಭಿಮಾನ ಎನಿಸುತ್ತ್ತಾ ಇದ್ದು. ಬೈಲಿಂಗೆ ಬಂದು ಒಂದು ವರ್ಷ ಕಳುದ್ದಕ್ಕೆ ಅಭಿನಂದನೆಗೊ. ಬೈಲಿಲ್ಲಿ , ನೆರೆಕರೆಲಿ ಅವರ ಸಾಹಿತ್ಯ ಕೃಷಿ ಇನ್ನೂ ಹೆಚ್ಚಾಗಲಿ. ಶುಭಾಶಯಂಗೊ.

  9. ಬಾರಿ ಲಾಯಕಯಿದು.ಸುಮ್ಮನೆ ಮೆಲ೦ದ ಮೆಲೆ ಓದುವೊ೦ಹೇಳಿ ಹೆರತಟರೆ ಈ ಲೇಖನ ಬಿಟ್ಟತ್ತೇಇಲ್ಲೆ.ಶರ್ಮಪ್ಪಚ್ಹಿಗೆ ಧನ್ಯವಾದ೦ಗೊ.ಒಪ್ಪ೦ಗಳೊಟ್ಟಿ೦ಗೆ

    1. ಧನ್ಯವಾದಂಗೊ ಮೋಹನಣ್ಣಂಗೆ
      ಬೈಲಿಲ್ಲಿ ಕಾಣದ್ದೆ ಸುಮಾರು ದಿನ ಆತಿದ.
      ನಮ್ಮ ಬೈಲಿಲ್ಲಿ ತಿರುಗಿಂಡು ಮಾತಾಡ್ಸಿಂದು ಇರಿ. ಇಲ್ಲದ್ದರೆ ಅಸಕ್ಕ ಹಿಡಿತ್ತಿದ

  10. Laykkaydu appachi…

    Havyaka samjada yelige bagge ningala baddathe gamanisigondu idde.

    Illi ippa ashtu jenavu namma samajada aasthi. Yellaru havyaka samajadada bagge kalaji ippavu.

    Navellaru namma samjava innnashtu unnathige thekkondu hoyekku.

    Idu oppanna.com ondu samana manskara samskrithika thana.

  11. ಹ್ಹೆ ಹ್ಹೆ ….. ಗೋಕರ್ಣ ದ ಸುದ್ದಿ ಲಿ ಇಪ್ಪ ಪಟಂಗೊ ಲಾಯ್ಕ ಕಂಡತ್ತಪ್ಪ. ಮತ್ತೆ ಅವ್ವ್ ತೆಗದ ಎನ್ನ ಮದುವೆ ಪಟ ನೊಡಿದ್ದಿಲ್ಲೆ ಆನು 🙁

  12. ಚೆನ್ನಬೆಟ್ಟಣ್ಣ, ಫಟ ತೆಗದ್ದು ಲಾಯಕ್ಕ ಇದ್ದು ಹೇಳಿ ಗ್ರೇಶಿಕ್ಕೇಡಿ ಇನ್ನು. ಫೋಟೋ ತೆಗೆತ್ತವು ಅವಕ್ಕೆ ವಿಶೇಷ ಹೇಳಿ ಕಾಂಬದರ ಎಲ್ಲಾ ಕ್ಲಿಕ್ ಮಾಡುತ್ತವಡಪ್ಪ. ಆನು ಹೇಳಿದ್ದಲ್ಲ. ಹಳೆಮನೆ ಅಣ್ಣ ಹೇಳಿದ್ದು ಆತೋ.

  13. ಲಾಯಕ ಆಯ್ದು ಶರ್ಮಪ್ಪಚ್ಚಿ, ಇನ್ನೂ ಬತ್ತಾ ಇರಳಿ.
    ಎನ್ನ ಮದುವೆಲಿ ಒಂದು ಮನುಷ್ಯ ಮಂಟಪದ ಎದುರ್ಲಿಯೇ ನಿಂದುಗೊಂಡು ಪಟ ತೆಗಕ್ಕೊಂಡು ಇತ್ತಿದ್ದವ್, ಆದರೆ ಫೋಟೋಗ್ರಾಫರ್ ಅಲ್ಲ, ಮತ್ತಾರಪ್ಪಾ ಹೇಳಿ ಮನಾಸಿಲಿ ಆಲೋಚನೆ ಮಾಡಿಗೊಂಡಿತ್ತಿದ್ದೆ. ಆರೋ ಕೂಸಿನ ಕಡೆಯವ್ ಹೇಳಿ ಗ್ರೆಶಿತ್ತಿದ್ದೆ. ಮತ್ತೆ ರಜ್ಜ ಹೊತ್ತು ಕಳುದಾಪ್ಪಗ ಅವ್ವೇ ಬಂದು ಆನು ಆರು ಗೊಂತಾತೋ ಹೇಳಿ ಕೇಳಿದವ್. ಒಳ್ಳೆತ ಗುರ್ತ ಇಪ್ಪ ಹಾಂಗೆ ಮಾತಾಡುದರ ಕಂಡು ಎಂತ ಹೇಳುದಪ್ಪ ಹೇಳಿ ಆತು, ಕೂಡ್ಲೇ “ಆನು ಶರ್ಮಪ್ಪಚ್ಚಿ” ಹೇಳಿಯಪ್ಪಗ ಜಬುಕ್ಕನೆ ಕುಶೀ ಆತು. ಓಹ್ ಇದೇ ಮನುಷ್ಯ ಬಯಲಿಲಿ ಎನ್ನ ಕಾಲು ಹಿಡುದು ಎಳಕ್ಕೊಂಡಿತ್ತದು ಹೇಳಿ ಮನಾಸಿಲಿ ನೆಗೆ ಬಂತು. ಹೇಹೇ… ಹಾಂಗೆ ಎನಗೂ ಅವರ ಭೇಟಿ ಆದ್ದು ಎನ್ನ ಮದುವೆಲಿಯೇ….
    ನಿಂಗ ಯಾವಾಗ ಇನ್ನು ಮಗಳ ಹೊಸ ಮನೆಗೆ ಬಪ್ಪದು ? ಬಂದಿಪ್ಪಗ ಒಂದು ಕೂಕುಳು ಹಾಕಿರಾತು ಆತೋ ?

    1. ಧನ್ಯವಾದಂಗೊ ಚೆನ್ನಂಗೆ.
      ಗುರ್ತ ಪರಿಚಯ ಮಾಡಿ ಮಾತಾಡ್ಸುವದು ಎನಗೆ ಕೊಶಿ ಕೊಡುವ ಸಂಗತಿ.

  14. ಪುಟ್ಟ ಭಾವಂಗೆ ಧನ್ಯವಾದಂಗೊ.

  15. ಶರ್ಮಪ್ಪಚ್ಚಿ !! ನಿಂಗಳ ಲೇಖನಂಗ ಹೀಂಗೇ ಬರಲಿ!!

  16. ಅಪ್ಪಚ್ಚಿ,
    ಒ೦ದರಿ ಸಿ೦ಹಾವಲೋಕನ ಮಾಡಿದ ರೀತಿ ಲಾಯಿಕ ಆಯಿದು.
    ಬಾಲ್ಯಲ್ಲಿ ಕ೦ಡಿದ್ದರೂ ಎಡೆಲಿ ಸ೦ಪರ್ಕ ಇಲ್ಲದ್ದರೂ,ನಿ೦ಗಳ ಒ೦ದು ವರುಷದ ಬೈಲಿನ ಪ್ರಯಾಣಲ್ಲಿ ಆನೂ ಕೆಲವು ತಿ೦ಗಳು ಕಳುದು ಸೇರಿಗೊ೦ಡದು ಯೋಗವೇ ಆಗಿಕ್ಕು.ಪೂರ್ವಜನ್ಮದ ಯೇವದೋ ಬ೦ಧ ಸಮಾನ ಮನಸ್ಸಿನ ಎಲ್ಲಾ ಬ೦ಧುಗಳ ಬೈಲಿಲಿ ಒಟ್ಟು ಸೇರುಸಿದ್ದು ಹೇಳಿರೆ ತಪ್ಪಾಗ.
    ನಿ೦ಗ ಬರಹಲ್ಲಿ ವಿಷಯ೦ಗಳ ಸ್ಪಷ್ಟವಾಗಿ ಅರ್ಥ ಅಪ್ಪ ಹಾ೦ಗೆ ( ಪಾಟ ಮಾಡುತ್ತ ಹಾ೦ಗೆ)ವಿವರುಸುವ ಕ್ರಮವ ನೋಡಿದರೆ ನಿ೦ಗೊ ಇತ್ತೀಚೆಗೆ ಬರವಲೆ ಶುರು ಮಾಡಿದ್ದು ಹೇಳುವ ಮಾತಿನ ಆರೂ ನ೦ಬವು.
    ಇದೇ ರೀತಿಲಿ ಮು೦ದೆ ಬೈಲಿ೦ಗೆ ವಿಜ್ಞಾನ೦ದ ಹಿಡುದು ಶ್ಲೋಕ೦ಗಳ ವರೆಗೆ ಹೊಸ ಲೇಖನ೦ಗಳ ಕೊಟ್ಟು ಎ೦ಗಳ ಜ್ಞಾನವ ಹೆಚ್ಚುಸುವ ಕೆಲಸ ಮಾಡಿಗೊ೦ಡಿರಿ ಹೇಳಿ ಹಾರೈಸುತ್ತೆ.

    ಇದಾ ನಿ೦ಗೊಗೆ ಒ೦ದು ನಮನ ಭಾಮಿನಿಲಿ.

    ವರುಷವಾತಿ೦ದಿ೦ಗೆ ಬೈಲಿಲಿ
    ಹಿರಿಯ ಶರ್ಮಪ್ಪಚ್ಚಿ ಬರವದು
    ಹರುಷ ಮೂಡಿತ್ತೀಗ ಓದಿರೆ ಸ್ವಗತ ಲೇಖನವಾ
    ಬರಹಲ್ಲಿ ವಿವಿಧತೆಯ ವಿವರವ
    ಸರಳತೆಲಿ ವಿವರಿಸುವ ರೀತಿಲಿ
    ಮೆರಗಿದೋ ಸುಜ್ಞಾನ ಬೆಳೆಯಿದು ಹೊಳದು ಥಳಥಳನೆ.

    1. ರಘುಭಾವಂಗೆ ಭಾಮಿನಿಯು ಒಲಿದು….ಬತ್ತು ಸದಾ ಹೊಸತು ನಲಿ ನಲಿದು!! (ರೈಸಿತ್ತು ಭಾವ!!)
      😀 😀

    2. [ಯೇವದೋ ಬ೦ಧ ಸಮಾನ ಮನಸ್ಸಿನ ಎಲ್ಲಾ ಬ೦ಧುಗಳ ಬೈಲಿಲಿ ಒಟ್ಟು ಸೇರುಸಿದ್ದು ಹೇಳಿರೆ ತಪ್ಪಾಗ.]- ಖಂಡಿತಾ ಸತ್ಯವಾದ ಶುಭವಾದ ಮಾತುಗೊ
      ಈ ಸಂದರ್ಭಲ್ಲಿ, ನಿನ್ನೀ ಭಾಮಿನಿ ಎನಗೊಂದು ಉಡುಗೊರೆ. ಧನ್ಯವಾದಂಗೊ

    1. ಧನ್ಯವಾದಂಗೊ ಪ್ರದೀಪಂಗೆ

  17. ಶರ್ಮಪ್ಪಚ್ಚಿಗೆ ಎರಡನೆ ವರ್ಷಕ್ಕೆ ಸ್ವಾಗತ.
    ರೈಲು ಪ್ರಯಾಣಂದ ಶುರುವಾದ ಪರಿಚಯ ಇನ್ನು ಹಲವು ವಿಚಾರಂಗಳ ಮಂಥನ ಮಾಡುತ್ತ ಮುಂದುವರೆಯಲಿ ಹೇಳ್ತ ಆಶಯದೊಟ್ಟಿಂಗೆ ಶುಭ ಹಾರೈಕೆಗೊ…

    1. ಧನ್ಯವಾದಂಗೊ ಭಾವ. ನಿಂಗಳ ನಿರೀಕ್ಷೆಯ ಈಡೇರುಸಲೆ ಪ್ರಯತ್ನ ಮಾಡ್ತೆ.

  18. ಬೈಲಿನ ಪರಿಚಯ ಆದಲ್ಲಿಂದ ಇಂದಿನ ವರೆಗಾಣ ಪ್ರತಿಯೊಂದೂ ಮುಖ್ಯ ವಿಚಾರವನ್ನೂ ಮರೆಯದ್ದೆ(!), ಸರಳವಾಗಿ , ಸುಂದರವಾಗಿ ಸ್ವಗತದ ರೂಪಲ್ಲಿ ಹೇಳಿದ್ದು ಲಾಯ್ಕಾಯ್ದು 🙂
    ಒಪ್ಪಣ್ಣ ಮಾಡ್ತಾ ಇಪ್ಪದೂ ನಿಜವಾಗಿಯೂ ತುಂಬಾ ದೊಡ್ಡ ಕೆಲಸವೇ, ದೂರ ದೂರ ಇಪ್ಪ ಹವ್ಯಕ ಮನಸ್ಸುಗಳ ಒಟ್ಟು ಸೇರ್ಸುವ ಕೆಲಸ. ಅಲ್ಲದ್ದೆ ಇಲ್ಲಿ ನಾವು ಕೇವಲ ಸ್ನೇಹಿತರಾಗಿ ಉಳಿಯದ್ದೆ ಹೊಸ ರೀತಿಯ ಬಾಂಧವ್ಯವ ಬೆಳಶುತ್ತಾ ಇಪ್ಪದು ಸಂತೋಷದ ವಿಷಯ, ಒಬ್ಬ ಅಪ್ಪಚ್ಚಿ ಆದರೆ ಮತ್ತೊಬ್ಬ ಮಾವ, ಒಂದಿಬ್ರು ಅಕ್ಕಂದ್ರು..ಅಜ್ಜಿ…ಅತ್ತೆ..ಅಣ್ಣ..ತಮ್ಮ…ಆಚಕರೆಮಾಣಿ..ಒಪ್ಪಕ್ಕ… ಒಟ್ಟು ಹೇಳ್ತರೆ ಒಪ್ಪಣ್ಣನ ಬೈಲು ಒಂದು wesite ಅಥವಾ blog ಮಾಂತ್ರ ಅಲ್ಲ. ಅದು ಒಂದು ಕೂಡು ಕುಟುಂಬ 🙂
    ಎನಗೆ ಬೈಲಿಂಗೆ ಬಂದಮೇಲೆ ಸುಮಾರು ಜೆನರ ಗುರ್ತ ಆತು, ಅಲ್ಲದ್ದೆ ಹೊಸ ವಿಚಾರಂಗೊ ತಿಳ್ಕೊಂಬಲೂ ಸಹಾಯ ಆವ್ತಾ ಇದ್ದು. ಬೈಲಿನ ಎಲ್ಲೋರಿಂಗೂ ಧನ್ಯವಾದ.
    ಶರ್ಮಪ್ಪಚ್ಚಿಗೆ ಅಭಿನಂದನೆಗೊ….ನಿಂಗಳ ಶುದ್ದಿಗೊ ಇನ್ನುದೇ ಹೆಚ್ಚು ಹೆಚ್ಚು ಬರಲಿ 🙂 🙂

    1. [ಒಪ್ಪಣ್ಣನ ಬೈಲು ಒಂದು website ಅಥವಾ blog ಮಾಂತ್ರ ಅಲ್ಲ. ಅದು ಒಂದು ಕೂಡು ಕುಟುಂಬ]-ಸರಿಯಾಗಿಯೇ ಹೇಳಿದ್ದೆ. ಈ ಭಾವನೆಯೇ ಎನ್ನ ಈ ಸ್ವಗತಕ್ಕೆ ಕಾರಣ.
      ವಿಮರ್ಶೆ ಒಟ್ಟಿಂಗೆ ಪ್ರೋತ್ಸಾಹದ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ

  19. ಮನೋಗತವ ಚೆ೦ದಕೆ ಪ್ರತಿಬಿ೦ಬಿಸಿದ್ದವು ಶರ್ಮಪ್ಪಚ್ಚಿ.

    1. ಮಹೇಶಂಗೆ ಧನ್ಯವಾದಂಗೊ.

  20. ಶರ್ಮಣ್ಣ ಬರೆವದು ಓದುವಾಗ ಇವು ಎಂತ ಈ ವರೆಗೆ ಬರದ್ದವಿಲ್ಲೆ ಹೇಳಿ ತೋರಿತ್ತೆನಗೆ.ಏಕೆ ಹೇಳಿದರೆ,
    ಅವರ,ಎನ್ನ ಪರಿಚಯ ಎನ್ನ ಬಾಲ್ಯ ಕಾಲಂದಲೇ ಇದ್ದು. ಆನೂ ಈ ವೆಬ್ ಸೈಟಿಂಗೆ ಬಂದು ಬರವಲೆ ಪ್ರೋತ್ಸಾಹ ಕೊಟ್ಟವು-ಎನ್ನ ಬಗ್ಗೆ ಒಂದು ಸುದ್ದಿಯ ಬರವ ದಿನಂದ!ಎನಗೆ ಒಪ್ಪಣ್ಣ.ಕಾಂ ವಿಷಯ ಗೊಂತಾದ್ದೆ ಅವರಿಂದ.
    ನೀರಿನ ಬಗ್ಗೆ,ಕಣ್ಯಾರ ಪೇಟೆಯ ಬಗ್ಗೆ ಅವು ಬರೆದ ಲೇಖನ ಯಾವ ಮಾನದಂಡಲ್ಲೂ ಅತ್ಯುತ್ತಮ ಬರಹಂಗೊ.ಇಂದ್ರಾಣ ಪೇಪರುಗಳಲ್ಲೂ ಇಷ್ಟು ಚೆಂದದ ಶೈಲಿಯ ಬರಹ ಬಪ್ಪದು ಕಡಿಮೆಯೇ.
    ಅವು ನಮ್ಮ ಬೈಲಿಲಿ ಅಲ್ಲದ್ದೆ ಬೇರೆ ಪತ್ರಿಕೆಗಳಲ್ಲೂ ಬರೆಯೆಕ್ಕು-ಹೇಳಿ ಒತ್ತಾಯಿಸುತ್ತೆ.
    ಈಗ ಅವು ಎಂಗಳ ಗೌರವಕ್ಕೆ ಪಾತ್ರರಾದ ಕುಟುಂಬವೈದ್ಯ ಶಾಮಭಟ್ರು ಬರೆದ ಮಂತ್ರಾರ್ಥವನ್ನೂ ಬರೆತ್ತಾ ಇಪ್ಪದು ತುಂಬಾ ಸಂತೋಷದ ವಿಷಯ.ಆ ಪುಸ್ತಕಂಗೊ ಎಂಗಳ ಮನೆಲಿ ಇದ್ದು-ಮೊದಲು ಓದಿದ್ದರೂ ಈಗ ರುದ್ರ ಕಲಿವಲೆ ಸುರು ಮಾಡಿದ ಮೇಲೆ ಓದುವಾಗ,ಓದುಗರ ಪ್ರತಿಕ್ರಿಯೆ ಓದುವಾಗ ಅರ್ಥ ಮನಸ್ಸಿಂಗೆ ತಟ್ಟುತ್ತು.
    ಅವರ ಸಾಹಿತ್ಯ ಸೇವೆ ನಿರಂತರವಾಗಿ ನಡೆವಲೆ ಅವು ನಂಬಿದ ಕೆದೂರು ಮಹಾದೇವ ಅನುಗ್ರಹಿಸಲಿ ಹೇಳಿ ಹಾರೈಸುತ್ತೆ.

    1. ಒಳ್ಳೆ ಪ್ರೋತ್ಸಾಹ ಕೊಟ್ಟು ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ

  21. ಶರ್ಮಪ್ಪಚ್ಚಿ ‘ಸೀದಾ ಸಾದ ಸರಳ ಸುಂದರ ವಿರಳ’. ಇದಂತೂ ಸ್ಪಷ್ಟ ಚಿತ್ರಣ. ನಿಂಗೊ ಈಗ ಎಂಗೊಗೆಲ್ಲರಿಂಗೂ ಅಪ್ಪಚ್ಚಿಯೇ.

    ಅದೆಷ್ಟು ಗಾದೆಗೋ ಪ್ರತಿ ಶುದ್ದಿಲ್ಯೂ. ಓದಿ ನೆಂಪು ಮಡುಗಿ ಮೆಲುಕು ಹಾಕಲೆ ಬಹಳಷ್ಟು ಸಿಕ್ಕುತ್ತು ನಿಂಗಳ ಶುದ್ದಿಲಿ.

    ಕೃಷ್ಣ ಶರ್ಮ ಶರ್ಮಪ್ಪಚ್ಚಿ ಆಗಿ ಬೈಲಿ ಇಂದು ಒಂದು ‘ಮರ’ ಒಪ್ಪಣ್ಣನ್ಗೆ ಅದು ‘ವರ’.

    ನಿಂಗಳ ಹಾಂಗೆ ಬೈಲಿಂಗೆ ಎನ್ನ ಪ್ರವೇಶ ಒಂದು ಆಕಸ್ಮಿಕ. ಕಂಪ್ಯೂಟರ್ ಇಪ್ಪವಂಗೆ ‘ಔಟ್ಲುಕ್’ ಎಷ್ಟು ಪ್ರಾಮುಖ್ಯವೋ ಎನಗೆ ಒಪ್ಪಣ್ಣ.ಕಾಂ ಅಷ್ಟೇ ಮುಖ್ಯ. ಕಂಪ್ಯೂಟರ್ಲಿ ಕೂರ್ತನೋ ಮದಾಲು ಒಪ್ಪಣ್ಣ.ಕಾಂ ಓಪನ್ ಮಾಡಿ ಮಡಿಗಿಕ್ಕುವದು. ಬಾಕಿ ಕೆಲ್ಸ ಮಾಡ್ತಾ ಇಪ್ಪಾಂಗೆ ಎಡೆ ಎಡೆಲಿ ಇಲ್ಲ್ಯೂ ಗುರುಟಿಕ್ಕುವದು. ಒಪ್ಪಣ್ಣ ನ ಮದುವೆಂದ ಮದಲೇ ‘ಸುಭಗ’ ಹೇಳಿದ ಹೀಂಗೊಂದು ಇದ್ದು . ನೋಡು ಒಂದಾರಿ ಹೇಳಿ. ಎನಗೆ ಅಂಬಗ ದೊಡ್ಡ ಇಂಟರೆಷ್ಟು ಹೇಳಿ ಕಂಡತ್ತಿಲ್ಲೆ. ಎಂತಕೆ ಹೇಳಿರೆ ಒಪ್ಪಣ್ಣ ಆರೋ, ಎಂತ ದೊಡ್ಡ ಕುಳವಾರೋ , ಕಂಪ್ಯೂಟರ್ ಪಂಡಿತನೋ, ನಮ್ಮ ಎಲ್ಲಾ ಕಣ್ಣಿಂಗೆ ಕಾಂಗೋ ಹೀಂಗೆಲ್ಲಾ ನಮ್ಮ ಅಲ್ಪ ಬುದ್ದಿಗೆ ಮದಾಲು ಕಾಂಬೊದು. ನವಗೆ ಏವತ್ತೂ ಹಾಂಗೆ ಅಲ್ಲದೋ ಮತ್ತೆ ‘ನಾವೇ ದೊಡ್ಡ ಜೆನ, ಎಲ್ಲಾ ನವಗೆ ಗೊಂತಿದ್ದು ಆಚವ ಮಾಡ್ತದು ಎಂತದೋ ಲಾಭಕ್ಕೆ’ !!. ಅಂದರೂ ಒಂದು ದಿನ ಇತ್ತೀಚಗೆ ಕೂದು ನೋಡಿದೆ. ಗುರುಗಳ ಭಾಷಣ ಮದಾಲು ಕಣ್ಣಿಂಗೆ ಬಿದ್ದತ್ತು. ಮಂತ್ರಂಗೊ , ಸ್ತೋತ್ರಂಗೊ , ಶುದ್ದಿಗೊ ಒಂದೊಂದೇ ಇಣುಕಿ ನೋಡಿದೆ. ಛೆ., ಹೇಳಿದ್ದು ಗ್ರೆಶಿದ್ದು ತಪ್ಪಾತು ಕಂಡತ್ತು. ಎಂತಕೂ ಇರಲಿ ಹೇಳಿ ಅಂತೇ ಒಂದು ಲಾಗ ಹಾಕುವೋ ಕಂಡತ್ತು ದರ್ಖಾಸ್ತು (ರಿಜಿಸ್ತ್ರಿ) ಮಾಡಿಗೊಂಡೆ. ಅದಾ ಮರುದಿನ ಒಪ್ಪಣ್ಣನ ಮೈಲ್. ನೀನಾರು, ಎಲ್ಲಿ ಹುಟ್ಟಿದ್ದು, ಎಲ್ಲಿ ಇಪ್ಪದು, ಎಂತ ಹರಿವದು ಹೇಳಿ ಪರಿಚಯ ಕೇಳ್ತಾ. ಒತ್ತಿದೆ ಅದಕ್ಕೂ ಉತ್ತರ. ಅದಾ, ಮರುದಿನ ಒಪ್ಪಣ್ಣನ ಫೋನ್ – ‘ನಾನಾರು ಗೊಂತಾತೋ, ಶುದ್ದಿ ಬರೆಯಿ, ಪದ್ಯ ಬರೆಯಿ……. ಕಡೆಂಗೆ – ‘ಒಟ್ಟಿನ್ಗೆ ಹೋಪೋ’. ಇದು ರಜಾ ನಾಟಿತ್ತು ಎನಗೆ. ಅಂತೇ ಒಂದು ಬರದು ಹಾಕಿದೆ . ಹೋಯ್, ಬೈಲಿನ ನೆಂಟ್ರು ಹೇಳಿರೆ ‘ಸುಮ್ಮನಲ್ಲ ‘ ಕಂಡತ್ತು. ಎಂತ ಪ್ರೋತ್ಸಾಹ ಪ್ರತಿಕ್ರಿಯೆ. ಗುರಿಕ್ಕರ್ರದ್ದಂತೂ ಥಂ ಥಂ ರಿಪ್ಲೈ. ಇದರ ನೋಡಿಕ್ಕಿ ನವಗೇಡಿತ್ತೋ ತಳಿಯದ್ದೆ ಕೂಬಲೆ. ನಮ್ಮ ಕೂಟಲ್ಲಿಯೂ ಬಿಕ್ಕಲೆ ಸುರುಮಾಡಿತ್ತಯ್ಯಾ ಪುಕ್ಸಟೆ ಎಡ್ವರ್ಟೈಸ್ಮೆಂಟ್ – ನೋಡಿ ಒಪ್ಪಣ್ಣ.ಕಾಂ.

    ಕಂಡತ್ತೋ – ಅಲ್ಲಿ ನಿಲ್ಲುತ್ತ ಒಪ್ಪಣ್ಣ.

    ವಿ.ಸೂ : ಇದರ ಬರವಲೆ ಶರ್ಮಪ್ಪಚ್ಚಿಯೋ , ಒಪ್ಪಣ್ಣನೋ ಎಷ್ಟು ಪೈಸೆ ಕೊಟ್ಟಿದವು ಹೇಳಿ ಕೇಳಿಕ್ಕೇಡಿ. ಆನು ಹೇಳೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×