ವಿಮಾನ ಪ್ರಯಾಣದ ಅನುಭವಂಗೊ

May 1, 2010 ರ 2:00 pmಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ತಲೆ ಮೇಲ್ಕಟೆ ಗುಂಯ್ ಹೇಳಿ ಶಬ್ದ ಮಾಡಿಗೊಂಡು ವಿಮಾನ ಹಾರುತ್ತರ ನೋಡುವಾಗ ಒಂದು ಸರ್ತಿ ಆದರೂ ಅದರಲ್ಲಿ ಕೂರೆಕ್ಕು, ಹಾರೆಕ್ಕು ಹೇಳಿ ಆರಿಂಗಾದರೂ ಕೊದಿ ಆಗದ್ದೆ ಇಕ್ಕಾ?. ಮೊದಲೇ ಹೋದವು, ಇಲ್ಲದ್ದರೆ ಹೋದವರ ಅನುಭವ ಕೇಳಿ ತಮ್ಮ ಸ್ವಂತ ಅನುಭವದ ಹಾಂಗೆ ಅದರಲ್ಲಿ ಹಾಂಗಿದ್ದು, ಹೀಂಗಿದ್ದು ಹೇಳಿ ಚೆಂದಕೆ ವರ್ಣನೆ ಮಾಡುವಾಗ ಒಂದು ಸರ್ತಿ ಆದರೂ ಹೋಯೆಕ್ಕು ಹೇಳಿ ಆಗದ್ದೆ ಇಕ್ಕಾ? ಆದರೆ ಟಿಕೆಟ್ ನ ಚಾರ್ಜ್ ನೋಡಿದರೆ ಸಾಧಾರಣದವಕ್ಕೆ ಒಂದು ಸರ್ತಿ ಕೂಡಾ ಹೋಪಲೆ ಎಡಿಗಪ್ಪದು ಕಷ್ಟವೇ ಸರಿ. ಎಂತಕೆ ಕೇಳಿರೆ, ಮಂಗಳೂರಿಂದ ಬೆಂಗಳೂರಿಂಗೆ ರಾಜ ಹಂಸ ಬಸ್ಸಿಲ್ಲಿ 350 ರೂಪಾಯಿಗೆ ಹೋಪಲೆ ಎಡಿಗಾದರೆ, ಇದಕ್ಕೆ ಕಮ್ಮಿ ಹೇಳಿದರೆ ಅದರ ಹತ್ತು ಪಾಲು ಆದರೂ ಕೊಡೆಕಕ್ಕು. ಅಷ್ಟು ಪೈಸೆ ಕೊಡೆಕ್ಕು ಹೇಳುವಾಗ ಅದರ ಬದಲು ಬಸ್ಸಿಲ್ಲಿಯೋ, ರೈಲಿಲ್ಲಿಯೋ ಹೋದರೆ ಒಳುದ ಪೈಸೆಯ ಬೇರೆ ಎಂತಾರೂ ಒಳ್ಳೆ ಕೆಲಸಕ್ಕೆ ಉಪಯೋಗ ಅಕ್ಕು ಹೇಳಿ ಆಲೋಚನೆಗೊ ಬಕ್ಕು. ವಿಮಾನಲ್ಲಿ ಹೋಪ ಯೋಜನೆ “ಪಂಚವಾರ್ಷಿಕ ಯೋಜನೆ” ಆಗಿಯೇ ಒಳಿವದು ಹೆಚ್ಚು.

ಆನು ರಿಫೈನರಿಗೆ ಸೇರಿದ ಸಮಯ. ಒಂದು ಸರ್ತಿ ಹೀಂಗೆ ವಿಮಾನಲ್ಲಿ ಬೊಂಬಾಯಿಗೆ ಹೋಪ ಯೋಗ ಕೂಡಿ ಬಂದಿತ್ತು. ಹೆಚ್ಚು ಕಮ್ಮಿ 14 ವರ್ಷ ಹಳೆ ನೆಂಪು. ಅದರ ನಂತರ ಸುಮಾರು ಸರ್ತಿ ಹೋದರೂ, ಸುರುವಾಣ ಅನುಭವವೇ ಬೇರೆ. ನೆಂಪು ಇದ್ದಷ್ಟು ಹೇಳುತ್ತೆ.
ಬೊಂಬಾಯಿಲಿ ಒಂದು ಸೆಮಿನಾರ್ (seminar) ಇದ್ದು, ನೀನು ಹೋಯೆಕ್ಕು ಹೇಳಿ ಎಂಗಳ ಬಾಸ್ (Boss-ಮೇಗಾಣ ಅಧಿಕಾರಿ) ಹೇಳಿದ. ಇಲ್ಲಿ ಕೆಲ್ಸದ ತುರ್ತು ಇದ್ದು. ರೈಲಿಲ್ಲಿ ಹೋಗಿ ಬಂದರೆ ಸಮಯ ಹಾಳಾವುತ್ತು, ವಿಮಾನಲ್ಲೇ ಹೋಗಿ ಬಾ ಹೇಳುವಾಗ ಕೊಶಿಯೇ ಆತು. ಬೊಂಬಾಯಿ ಹೇಳಿ ಕೇಳಿ ಗೊಂತಿದ್ದಲ್ಲದ್ದೆ ಹೋಗಿ ಗೊಂತಿಲ್ಲೆ. ಹೊಸ ಊರು ನೋಡಿದ ಹಾಂಗೂ ಆತು, ವಿಮಾನಲ್ಲಿ ಹೋದ ಹಾಂಗೂ ಆತು, ಸೆಮಿನಾರಿಲ್ಲಿ ಹೇಳುತ್ತ ಹೊಸ ವಿಷಯ ತಿಳ್ಕೊಂಡ ಹಾಂಗೂ ಆತು ಹೇಳಿ ಒಪ್ಪಿಗೊಂಡೆ. ಅಲ್ಲದ್ದೆ ಎನ್ನ ಕ್ಲಾಸ್ ಮೇಟ್ (ಕಾಲೇಜಿಲ್ಲಿ) ಅಲ್ಲಿ ಕೆಲಸಲ್ಲಿ ಇದ್ದ. ಅವನ ಕಾಣದ್ದೆ ಸುಮಾರು ಸಮಯ ಕೂಡಾ ಆತು. ಅವನ ಕಂಡು ಮಾತಾಡಿದ ಹಾಂಗೂ ಆತು. ಸ್ವಾಮಿ ಕಾರ್ಯದೊಟ್ಟಿಂಗೆ ಸ್ವಕಾರ್ಯವೂದೆ ಆವುತ್ತಲ್ಲದ.
ಟಿಕೆಟ್ಟಿಂಗೆ, ಉಳಕ್ಕೊಂಬ ವೆವಸ್ತೆ ಎಲ್ಲ ಮಾಡ್ಲೆ ಕಂಪೆನಿಲಿ ಬೇರೆ ವಿಭಾಗ ಇದ್ದು. ಅಲ್ಲಿಗೆ ಬೇಕಾದ form ಎಲ್ಲಾ ಕಳಿಸಿದೆ. ಮತ್ತಾಣ ಸೋಮವಾರ ಹೊತ್ತೋಪಗಾಣ ವಿಮಾನಲ್ಲಿ ಹೋಪದು, ಮಂಗಳವಾರ ಬುಧವಾರ ಸೆಮಿನಾರ್ ಹಾಜರಿ ಮಾಡಿ ಗುರುವಾರ ಉದಿಯಪ್ಪಗಾಣ ವಿಮಾನಲ್ಲಿ ವಾಪಾಸ್ ಬಪ್ಪದು ಹೇಳಿ, ಟಿಕೆಟ್, ಆಲ್ಲಿ ಒಳುಕ್ಕೊಂಬಲೆ ಅತಿಥಿ ಗೃಹ (guest house) ಎಲ್ಲ ವೆವಸ್ತೆಗೊ ಆತು.

ನಿಲ್ದಾಣದ ಒಳನೋಟ...
ನಿಲ್ದಾಣದ ಒಳನೋಟ...

ಮನೆಲಿ ಬಂದು ವಿಷಯ ಹೇಳಿ ಅಪ್ಪಗ, ಹೆಂಡ್ತಿಗೆ ಕೊಶಿಯೂ ಆತು ಅದರೊಟ್ಟಿಂಗೆ ರಜ ಬೇಜಾರೂ ಆತು. ಬೇಜಾರು ಎಂತಕೆ ಹೇಳಿರೆ, ಎಂತಾದರೂ ಹೆಚ್ಚು ಕಮ್ಮಿ ಆದರೆ “ದೇವರೇ ಗತಿ” ಅಲ್ಲದ ಹಾಂಗೆ. ಪೇಪರಿಲ್ಲಿ ಒಂದೊಂದು ವಿಮಾನಂಗಳ ಅಫಘಾತದ ಸುದ್ದಿ ಓದಿ ಅಪ್ಪಗ ಹೀಂಗೆಲ್ಲ ಯೇಚನೆ ಬಪ್ಪದು ಇಪ್ಪದೇ. ದಿನ ನಿತ್ಯಾ ಎಷ್ಟು ವಿಮಾನ ಹೋವುತ್ತು, ಎಷ್ಟು ಜನಂಗೊ ಹೋವುತ್ತವು, ಹೆದರಿಕೆ ಎಂತ ಇಲ್ಲೆ ಹೇಳಿ ಸಮಾಧಾನ ಹೇಳಿರೂ ಒಳಾಂದ ಒಂದು ಅಳುಕು ಇತ್ತಿದ್ದು. ಅದರ ಅಲೋಚನೆಗೂ ಒಂದು ಅರ್ಥ ಇದ್ದಲ್ಲದಾ?
3 ದಿನಕ್ಕೆ ಬೇಕಾದ ಸಾಮಾನುಗಳ ಎಲ್ಲಾ ಚೀಲಕ್ಕೆ (bag) ತುಂಬುಸಿ ರೆಡಿ ಮಾಡಿ ಆತು. ಹೋಯೆಕ್ಕಾದ ದಿನವೂ ಬಂತು. ವಿಮಾನ ನಿಲ್ದಾಣಕ್ಕೆ ವರೆಗೆ ಎಂಗಳೂ ಬತ್ತೆಯೊ ಹೇಳಿ ಮಕ್ಕಳೊಟ್ಟಿಂಗೆ ಅವರ ಅಮ್ಮನೂ ದೆನಿ ಸೇರ್ಸಿತ್ತು. “ಆನು ಎಂತ ಹೆರ ದೇಶಕ್ಕೆ ಹೋಪದು ಎಂತ ಅಲ್ಲ. 3 ದಿನಲ್ಲಿ ವಾಪಾಸ್ ಬತ್ತೆ ಅಲ್ಲದ, ಅಷ್ಟು ಮಾತ್ರ ಅಲ್ಲದ್ದೆ ವಿಮಾನದ ಹತ್ರಂಗೆ ಟಿಕೆಟ್ ಇಲ್ಲದ್ದವರ ಹೋಪಲೆ ಬಿಡುತ್ತವಿಲ್ಲೆ ಅಡ, ಬಸ್ಸಿಲ್ಲಿ ಕೂದ ಮತ್ತೆ ಕೆಳ ಇಳುದು ಟಾಟಾ ಮಾಡುವ ಹಾಂಗಿಪ್ಪ ವೆವಸ್ತೆ ಅಲ್ಲಿ ಇಲ್ಲೆ ಅಡ” ಹೇಳಿ ಅಪ್ಪಗ ಅವಕ್ಕೂ ಅಪ್ಪು ಹೇಳಿ ಆಗಿ ಮನೆಂದಳೇ ಟಾಟಾ ಮಾಡಿ ಕಳಿಸಿದವು.
“ಕೊಂಕಣ ಸುತ್ತಿ ಮೈಲಾರಕ್ಕೆ” ಹೇಳುತ್ತ ಹಾಂಗೆ, ಸುರತ್ಕಲ್ಲಿಂದ ಬಜಪ್ಪೆ ವಿಮಾನ ನಿಲ್ದಾಣಕ್ಕೆ ಹೋಯೆಕ್ಕಾರೆ, MRPL ಕಂಪೆನಿಗೆ ಒಂದು ದೊಡ್ಡ ಸುತ್ತು ಹಾಕಿಂಡು ಹೋಯೆಕ್ಕು. ಕಾಂಬಲೆ ಹತ್ತರೆ, ಕಂಪನಿಯ ಮೇಗಂದಲೇ ವಿಮಾನ ಹಾರುತ್ತು. ದಾರಿ ಮಾತ್ರ ಸುತ್ತು. ಹೀಂಗೆ ಹೋಪಗ, ಮೊದಲು ಒಂದೆರಡು ಸರ್ತಿ ಅಲ್ಲಿಗೆ ಹೋದ ನೆಂಪು ಬಂತು. ಎಂಗಳ ಅಜ್ಜನ ಮನೆಯ ಅಜ್ಜಿ ಅಜ್ಜಂಗೆ ರಜೆಲಿ ಪುಳ್ಳಿಯಕ್ಕಳ ಸೇರ್ಸಿಗೊಂಡು ಎಲ್ಲಿಗಾದರೂ ಕರಕ್ಕೊಂಡು ಹೋಪ ಅಭ್ಯಾಸ ಇತ್ತಿದ್ದು. ಒಂದು ಸರ್ತಿ ವಿಮಾನ ನೋಡ್ಲೆ ಹೇಳಿ ಅಲ್ಲಿಗೆ ಕರಕ್ಕೊಂಡು ಹೋಯಿದವು. ಸಣ್ಣ ಇಪ್ಪಗ ಹೋದ್ದು ಆದರೂ ನೆಂಪು ಸರಿ ಇದ್ದು. ನಿಲ್ದಾಣದ ಟೇರೇಸಿಲ್ಲಿ ನಿಂದು ವಿಮಾನ ಕೆಳ ಇಳಿವದು, ಮತ್ತೆ ಪುನಹ ಜನಂಗಳ ಹತ್ತಿಸಿಗೊಂಡು ಮೇಗಂಗೆ ಹಾರುವದು ಎಲ್ಲ ನೋಡಿದ್ದೆಯೊ. ರಜೆ ಕಳುದು ಶಾಲೆಲಿ ಫ್ರಂಡ್ ಗೊಕ್ಕೆ ಅದರ ವಿವರಿಸಿಯೂ ಅಯಿದು. ಅಂಬಗ ಈಗಾಣ ಹಾಂಗಿಪ್ಪ ದೊಡ್ಡ ದೊಡ್ಡ ವಿಮಾನಂಗೊ ಬಂದೊಂಡು ಇತ್ತಿದ್ದಿಲ್ಲೆ. ಇನ್ನೊಂದು ಸರ್ತಿ,ವೀರಪ್ಪ ಮೊಯಿಲಿ ಮುಖ್ಯ ಮಂತ್ರಿ ಆಗಿಪ್ಪಗ ಅದು ಬಂದ ವಿಮಾನ, ರನ್ ವೇಂದ (Runway) ಕೆಳ ಇಳುದು ಒಂದು ಮರಕ್ಕೆ ತಾಗಿ ನಿಂದು ಆರಿಂಗೂ ಎಂತೂ ಆಗದ್ದೆ ಬಚಾವ್ ಆದ ಸಮಯ. ಕಾಲೇಜಿಂದ ಎಂಗಳ ಒಂದು ಗಾಂಗ್ ಅಂಬಗ ಅದರ ನೋಡ್ಲೆ ಹೇಳಿ ಹೋಯಿದೆಯೊ. ಅದು ಬಿಟ್ಟರೆ ವಿಮಾನ ಹತ್ತಲೇ ಹೇಳಿ ಹೋಪದು ಇದೇ ಮೊದಲು. ನವಗೆ ಎಂತೂ ಕೆಲಸ ಇಲ್ಲದ್ದಿಪ್ಪಗ ಅಲ್ಲಿಗೆ ಅಂತೇ ಎಂತಕೆ ಹೋವುತ್ತು ಅಲ್ಲದ?

ನಿಲ್ದಾಣಕ್ಕೆ ಎತ್ತಿತ್ತು. ಒಳ ಹೋಯೆಕ್ಕಾರೆ ಅಲ್ಲಿ 2 ಜನ ದ್ವಾರ ಪಾಲಕರು. ಟಿಕೇಟ್ ನೋಡಿಯೇ ಒಳ ಬಿಟ್ಟವು. ಒಂದೋ ವಿಮಾನದ ಟಿಕೆಟ್, ಇಲ್ಲದ್ದರೆ ವಿಸಿಟರ್ಸ್ ಪಾಸ್ (visitors pass) ಬೇಕು. ಇಲ್ಲದ್ದರೆ ಒಳ ಹೋಪಲೆ ಇಲ್ಲೆ.ವಿಮಾನ ಹೆರಡುವದರಿಂದ ಒಂದು ಘಂಟೆ ಮೊದಲೇ ಅಲ್ಲಿ ಇರೆಕ್ಕು ಹೇಳಿ ಗೊಂತಿತ್ತಿದ್ದು. ಹಾಂಗೆ ಇನ್ನೂದೆ ರಜ ಬೇಗವೇ ಎತ್ತಿದ್ದೆ. ಒಂದು ಸೀಟಿಲ್ಲಿ ಹೋಗಿ ಕೂದು ಆತು. ಅಲ್ಲೇ ಎದುರು “ಭಧ್ರತಾ ತಪಾಸಣೆ (security check)“ ಹೇಳಿ ಬೋರ್ಡ್ ಕಂಡತ್ತು. ರಜ ಹೊತ್ತು ಅಪ್ಪಗ ಬೊಂಬಾಯಿಗೆ ಹೋಪವು ಸೆಕ್ಯೂರಿಟಿ ಚೆಕ್ ಮಾಡಿಸಿಗೊಂಬಲೆ ಹೋಯೆಕ್ಕು ಹೇಳಿ ಮೈಕಿಲಿ ಬೇರೆ ಬೇರೆ ಭಾಷೆಲಿ (ಕನ್ನಡ, ಇಂಗ್ಲೀಷ್, ಹಿಂದಿ) ಅನೌನ್ಸ್ ಮಾಡ್ಲೆ ಸುರು ಮಾಡಿದವು. ಎಲ್ಲರೂ ಕ್ಯೂ ಲ್ಲಿ ಹೋಪಗ ಅವರೊಟ್ಟಿಂಗೆ ಆನೂದೆ ಸೇರಿಗೊಂಡೆ. ಅಲ್ಲಿಪ್ಪ ದ್ವಾರಪಾಲಕ, “ಬೋರ್ಡಿಂಗ್ ಪಾಸ್” ತೋರಿಸಿ ಹೇಳುವಾಗಲೇ ಗೊಂತಾದ್ದು ಹಾಂಗಿಪ್ಪ ಒಂದು ವಿಶಯ ಇದ್ದು ಹೇಳಿ. ಕೌಂಟರಿಂಗೆ ಪಾಸ್ ತೆಕ್ಕೊಂಬಲೆ ಹೇಳಿ ಹೋದೆ. ಅಲ್ಲಿ ಇಪ್ಪ ಹುಡುಗಿ ಯಾವ ಸೀಟ್ ಬೇಕು ಹೇಳಿ ಕೇಳಿತ್ತು. ಎಡಿಗಾದರೆ ಸೈಡ್ ಸೀಟಿಲ್ಲಿ ಕೂದೊಂಡು ಹೆರ ಎಂತೆಲ್ಲಾ ಕಾಣುತ್ತು ಹೇಳಿ ನೋಡೆಕ್ಕು ಹೇಳಿ ಮನೆಂದ ಬಪ್ಪಗಳೇ ಲೆಕ್ಕ ಹಾಕಿತ್ತಿದ್ದೆ. ಅದೇ ಸಿಕ್ಕಿತ್ತು. ದೊಡ್ಡ ದೊಡ್ಡ ಬೇಗ್ ಗೊ ಇದ್ದರೆ ಅದಕ್ಕೆ ಬೇರೆ ವೆವಸ್ತೆ ಇದ್ದು ಹೇಳಿ ಗೊಂತಾತು. ನಾವು ಹೊತ್ತೊಂಡು ಹೋಯೆಕ್ಕು ಹೇಳಿ ಇಲ್ಲೆ. ಅದರ ಚೆಕ್ ಮಾಡಿ ವಿಮಾನಕ್ಕೆ ಅವೇ ಲೋಡ್ ಮಾಡುತ್ತವಡ. ಬೋರ್ಡಿಂಗ್ ಪಾಸ್ ಹೇಳುವದು ಒಂದು ಕಾರ್ಡ್. ಅದರಲ್ಲಿ ನಮ್ಮ ಹೆಸರು, ಎಲ್ಲಿಗೆ ಹೋಪದು, ಎಷ್ಟು ಹೊತ್ತಿಂಗೆ ಹೆರಡುವದು, ಸೀಟ್ ನಂಬ್ರ ಯಾವುದು ಎಲ್ಲಾ ವಿವರಂಗೊ ಇದ್ದು. ಸಿನೆಮಾ ಟಿಕೆಟಿನ ಒಂದು ತುಂಡು ಗೇಟ್ ಕೀಪರ್ ಹರುದು ತೆಗದು ಮಡುಗುತ್ತಲ್ಲದ, ಹಾಂಗೇ ಇದರಲ್ಲಿಯೂದೆ ಒಂದು ತುಂಡು ಅವಕ್ಕೆ ಹರುದು ಮಡ್ಕೊಂಬ ಹಾಂಗೆ ಇದ್ದು. ಬೇಗಿಂಗೆ ಒಂದು ಚೀಟಿ ನೇಲಿಸಿದವು. ಸೆಕ್ಯೂರಿಟೀ ಚೆಕ್ಕಿಂಗೆ ಬಂದೆ. ತಪಾಸಣೆಗೆ (scan) ಹೇಳಿ ಅಲ್ಲಿ ಒಂದು ಕಪ್ಪು ಪೆಟ್ಟಿಗೆ ಒಳಾಂಗೆ ಬೇಗಿನ ಕಳುಸಿದವು. ನಮ್ಮ ಬೇಗಿಲ್ಲಿ ಎಂತೆಲ್ಲ ಇದ್ದು ಹೇಳಿ ಅವಕ್ಕೆ ಕಾಣುತ್ತು. ಅದರ ನೋಡ್ಲೆ ಹೇಳಿಯೇ 2 ಇನ್ಸಪೆಕ್ಟರ್ ಗೊ ಅಲ್ಲಿ ಕೂದೊಂಡು ಇರ್ತ್ತವು. ಇನ್ನು ಮನುಷ್ಯರ ತಪಾಸಣೆ ಆಯೆಕ್ಕು. ಅದಕ್ಕೆ ಲೋಹ ಪರಿಶೋಧಕ (metal detector) ಮೂಲಕ ನಾವು ಹೋಯೆಕ್ಕು. ಅದು ಆದ ನಂತ್ರ ನಮ್ಮ ತಪಾಸಣೆ ಮಾಡ್ಲೆ ಇನ್ನೊಬ್ಬ ಇರ್ತ. ಪೋಲೀಸ್ ಗೊ “ಹೇಂಡ್ಸ್ ಅಪ್” ಹೇಳುವಾಗ ಶರಣಾಗತ (surrender) ಅಪ್ಪವು ಎರಡೂ ಕೈ ಮೇಗೆ ನೆಗ್ಗುತ್ತವಲ್ಲದ ಹಾಂಗೆ ಎರಡು ಕೈ ಮೇಗೆ ನೆಗ್ಗೆಕ್ಕು. ಅದು ಎಂತದೋ ಸಾಧನಲ್ಲಿ ಚೆಕ್ ಮಾಡಿದ ಮತ್ತೆ ಬೇಗಿನ ತೆಕ್ಕೊಂಬಲೆ ಹೋಯೆಕ್ಕು.(ಹೆಮ್ಮಕ್ಕಳ ಚೆಕ್ ಮಾಡ್ಲೆ ಹೆಮ್ಮಕ್ಕೊ ಇರ್ತ್ತವು.) ಕಿಸೆಲಿ ಚಿಲ್ಲರೆ ಪೈಸೆ, ಕೀ ಚೈನ್, ಮೊಬೈಲ್ ಎಲ್ಲಾ ಮಡುಗುಲೆ ಆಗ ಹೇಳಿ ಮೊದಲೇ ಹೇಳಿತ್ತಿದ್ದವು. ಬೇಗ್ ತೆಕ್ಕೊಂಬಲೆ ಹೋಪಗ ಅಲ್ಲಿಯಾಣ ಇನ್ಸ್ ಪೆಕ್ಟರ್ ಹೇಳಿದ ನಿಂಗಳ ಬೇಗಿಲ್ಲಿ ಬ್ಲೇಡ್, ಕತ್ತರಿ ಎಲ್ಲ ಇದ್ದು. ಅದರ ತೆಕ್ಕೊಂಡು ಹೋಪ ಹಾಂಗೆ ಇಲ್ಲೆ, ಇಲ್ಲಿಯೇ ಬಿಟ್ಟಿಕ್ಕಿ ಹೋಯೆಕ್ಕು ಹೇಳಿ. ಇದು ಒಳ್ಳೆ ಕತೆ ಆತಲ್ಲದ. ಉದಿಯಪ್ಪಗ ಒಂದು ಶೇವ್ ಮಾಡದ್ದರೆ ಮರುಳು ಹಿಡುದ ಹಾಂಗ ಆವುತ್ತನ್ನೆ. ಎಂತ ಮಾಡುದು. ಹೋದರೆ ಹೋಗಲಿ, ಅಲ್ಲಿ ಹೋಗಿ ಒಂದು ತೆಕ್ಕೊಂಡರೆ ಆತು ಹೇಳಿ ಮನಾಸಿಲ್ಲೇ ಜಾನ್ಸಿಗೊಂಡೆ. ಅದಕ್ಕೆ ಅವು ಕತ್ತರಿ ಹಾಕಿದವು. ಬೇಗಿಂಗೆ ಒಂದು ಚೀಟಿ ನೇಲಿಸಿತ್ತಿದ್ದವಲ್ಲದ, ಅದರಲ್ಲಿ ಚೆಕ್ ಆಯಿದು ಹೇಳಿ ಗೊಂತಪ್ಪಲೆ ಒಂದು ಸೀಲ್ ಹಾಕಿದವು. ಇನ್ನೂ ವಿಮಾನ ಹತ್ತಲೆ ರಜ ಸಮಯ ಇದ್ದು ಹೇಳಿ ಗೊಂತಾತು. ಅಲ್ಲಿಯೇ ಒಂದು ಜಾಗೆ ಹಿಡುದು ಕೂದಾತು. ಉದಾಸೀನ ಆಗದ್ದ ಹಾಂಗೆ ನೋಡ್ಲೆ ಟಿ,ವಿ, ಆಸರು ಆದ್ರೆ ಕುಡಿವಲೆ ನೀರು, ಸೆಖೆ ಆಗದ್ದ ಹಾಂಗೆ ಏರ್ ಕಂಡಿಶನ್, ಶೌಚಾಲಯ, ಎಲ್ಲಾ ವೆವಸ್ತೆಯೂ ಅಲ್ಲಿ ಇದ್ದು. ಎಂಗೂ ಹೋಪಲೆ ಇಪ್ಪ ವಿಮಾನ ಬತ್ತಾ ಇದ್ದು ಹೇಳಿ ಪ್ರಕಟಣೆ ಕೊಟ್ಟವು. ಅದು ಎಲ್ಲಿಂದ ಬಂತು ಹೇಳಿ ಗೊಂತಿಲ್ಲೆ, ದೊಡ್ಡ ವಿಮಾನ ಬಂದು ನಿಂದತ್ತು. (ವಿಮಾನ ಮೇಗಂದ ಕೆಳ ಇಳಿವದು, ರನ್ ವೇಲಿ ಓಡಿ ಬಪ್ಪದು ಎಲ್ಲ ಎಂಗೊ ಕೂದಲ್ಲಿಂಗೆ ಎಂತ ಕಂಡೊಂಡು ಇತ್ತಿದ್ದಿಲ್ಲೆ). ಅದರ ದೊಡ್ಡ ದೊಡ್ಡ ಫೇನ್ ತಿರುಗುವದು ನಿಂದಪ್ಪಗ, ಜನಂಗೊಕ್ಕೆ ಇಳಿವಲೆ ಬೇಕಾಗಿ, ಒಂದು ಏಣಿ ಸಿಕ್ಕಿಸಿದವು. ಜನಂಗ ಎಲ್ಲಾ ಇಳುದು ಹೋಪಲೆ ಸುರು ಮಾಡಿದವು. ವಿಮಾನ ಖಾಲಿ ಅದ ಮತ್ತೇ ಎಂಗೊ ಹತ್ತೆಕ್ಕಷ್ಟೆ ಅಲ್ಲದ. ಇನ್ನೊಂದು ಪ್ರಕಟಣೆ ಬಂತು. ಸೆಕ್ಯೂರಿಟಿ ಚೆಕ್ ಆದವು ವಿಮಾನದ ಹತ್ರಂಗೆ ಹೋಯೆಕ್ಕು ಹೇಳಿ. ಹೆರಾಂಗೆ ಹೋಪಗ ಪುನಹ ಬೇಗಿನ ಚೀಟಿಯ ಚೆಕ್ ಮಾಡಿ ಕಳಿಸಿದವು. ವಿಮಾನ ಹತ್ತುವ ಏಣಿ ಹತ್ರ “ಬೋರ್ಡಿಂಗ್ ಪಾಸ್” ನ ಚೆಕ್ ಮಾಡಿ ಒಂದು ತುಂಡು ವಾಪಾಸು ಕೊಟ್ಟವು. ಅದರ ತೆಕ್ಕೊಂಡು ಒಳ ಹೋಪಗ ಅಲ್ಲಿ ಎದುರುಗೊಂಬಲೆ ಗಗನ ಸಖಿಗೊ (Air hostess)ನಿಂದೊಂಡು ಇತ್ತಿದ್ದವು. ಚೆಂದಕೆ ಒಂದು ನೆಗೆ (smile) ಮಾಡಿ “ವೆಲ್ ಕಂ” (Welcome) ಹೇಳಿದವು. ಈ ನೆಗೆ ಮಾಡುವದು ಇದ್ದಲ್ಲದ, ಅದು ಆತ್ಮೀಯತೆಯ ನೆಗೆ ಎಂತ ಅಲ್ಲ. ಅವಕ್ಕೆ ಹಾಂಗೆ ಮಾಡೆಕ್ಕು ಹೇಳಿ ತರಬೇತಿ ಕೊಟ್ಟಿರ್ತ್ತವು. ನಾವು ಅದಕ್ಕೆ ಪ್ರತಿಯಾಗಿ ಶಿಷ್ಟಾಚಾರದ ಒಂದು ನೆಗೆ ಮಾಡಿದರೆ ಆತು. ಸೀಟ್ ಹುಡ್ಕಿ ಕೂದು ಆತು. ಬೇಗಿನ ಬೇಕಾರೆ ಮೇಗೆ ಮಡುಗಲೆ ಜಾಗೆ ಇದ್ದು. ವಿಮಾನ ಹೋಪಗ ಅದು ಕೆಳ ಬೀಳದ್ದಾಂಗೆ ಬಾಗಿಲು ಹಾಕುತ್ತವು.

ಜನಂಗೊ ಎಲ್ಲಾ ಬಂದು ಕೂದಪ್ಪಗ ವಿಮಾನದ ಏಣಿಯ ತೆಗದು, ಬಾಗಿಲು ಮುಚ್ಚಿದವು. ಗಗನ ಸಖಿಗೊ ಎಲ್ಲರಿಂಗೂ ಒಂದು ಬಾಟ್ಲಿ ನಿಂಬೆ ಶರ್ಬತ್ತು ಮತ್ತೆ ಮೋರೆ ಉದ್ದಲೆ ಚೆಂಡಿ ಮಾಡಿ ಸೆಂಟ್ ಹಾಕಿದ ಸಣ್ಣ ಟರ್ಕಿ ಟವೆಲ್ ತಂದು ಕೊಟ್ಟವು. ಮೋರೆ ಉದ್ದಿ ಶರ್ಬತ್ತು ಕುಡುದಪ್ಪಗ ಫ್ರೆಶ್ ಆತು.

ವಿಮಾನ ನಿಲ್ದಾಣ
ವಿಮಾನ ನಿಲ್ದಾಣ

ಸೀಟಿನ ವೆವಸ್ತೆ ಹೇಂಗೆ ಇದ್ದು ಹೇಳಿರೆ, ಒಂದು ಸಾಲಿಲ್ಲಿ 3+3, ಮಧ್ಯಲ್ಲಿ ದಾರಿ. ಇದಕ್ಕೆ Economy Class ಹೇಳುವದು. ಸಾಧಾರಣ ನಮ್ಮ ರಾಜ ಹಂಸ ಬಸ್ಸಿನ ಸೀಟಿನ ಹಾಂಗೆ ಇದ್ದು. ವಿಮಾನದ ಮುಂದೆ Executive class ಸೀಟ್ ಇದ್ದು. ಅಲ್ಲಿ 2+2, ಮಧ್ಯಲ್ಲಿ ದಾರಿ. ಅಲ್ಲಿ ಕೂದವಕ್ಕೆ ಸ್ಪೆಶಲ್ ಟ್ರೀಟ್ ಮೆಂಟ್ ಇದ್ದು. ರೆಜ ಹೊತ್ತು ಅಪ್ಪಗ ಗಗನ ಸಖಿಗೊ ವಿಮಾನದ ಸುರಕ್ಷೆ ಬಗ್ಗೆ ವಿವರಣೆ ಕೊಡ್ಲೆ ಸುರು ಮಾಡಿದವು. ಸೀಟಿನ ಬೆಲ್ಟ್ ಹಾಕುತ್ತ ಕ್ರಮ, ತೆಗೆತ್ತ ಕ್ರಮ, ವಿಮಾನದ ಒಳ ಗಾಳಿ ಒತ್ತಡ ಕಮ್ಮಿ ಆದರೆ ಸೀಟಿನ ಮೇಗಂದ ಕೆಳಾಂಗೆ ನೇತು ಬಪ್ಪ ಮಾಸ್ಕ್ ನ ಹಾಕುತ್ತ ಕ್ರಮ, ವಿಮಾನ ನೀರಿಂಗೆ ಇಳುದರೆ ಜೀವ ರಕ್ಷಕ ಅಂಗಿ (life saving jacket) ಹಾಕುತ್ತ ಕ್ರಮ, ತುರ್ತು ಸಂದರ್ಭಲ್ಲಿ ವಿಮಾನಂದ ಹೆರ ಹೋಪಲೆ ಇಪ್ಪ ದಾರಿ ಯಾವುದು ಎಲ್ಲಾ ವಿವರಿಸಿದವು. ಇನ್ನೂ ಹೆಚ್ಚು ತಿಳಿಯೆಕ್ಕಾರೆ ಸೀಟಿನ ಎದುರಾಣ ಚೀಲಲ್ಲಿ ವಿವರ ಇಪ್ಪ ಕಾರ್ಡ್ ನ ಓದಲೆ ಅಕ್ಕು ಹೇಳಿದವು. ಸುರು ಹೋಪದಲ್ಲದ, ಅವು ಹೇಳಿದ್ದೆಲ್ಲಾ ಶ್ರದ್ಧೆಲಿ ಕೇಳಿಗೊಂಡೆ. ಶಾಲೆಲಿ ಕೂಡಾ ಇಷ್ಟು ಗಮನ ಕೊಟ್ಟು ಪಾಠ ಕೇಳಿರೆ. ಎನ್ನ ಹತ್ರಾಣ ಸೀಟಿಲ್ಲಿ ಕೂದವ ಇದೆಲ್ಲಾ ಕೇಳಿಗೊಂಡು ಇತ್ತಿದ್ದಾ ಇಲ್ಲೆ. ಅವನಷ್ಟಕ್ಕೆ ಎಂತದೋ ಓದಿಯೊಂಡು ಇತ್ತಿದ್ದ. ಆನು ಹೊಸಬ ಹೇಳಿ ಅವಂಗೆ ಅಂದಾಜು ಆದಿಕ್ಕು.ಒಂದು ಸರ್ತಿ ವಿಚಿತ್ರ ಪ್ರಾಣಿಯ ನೋಡ್ತ ಹಾಂಗೆ ಎನ್ನ ನೋಡಿ ಮೋರೆ ಅತ್ತೆ ತಿರುಗಿಸಿದ. ಅವೆಲ್ಲ ಹೆಚ್ಚಾಗಿ ವಿಮಾನಲ್ಲೇ ಹೋಪವಾದರೆ ಇದೆಲ್ಲಾ ಕೇಳಿ ಕೇಳಿ ಬೋರ್ ಆಗಿಕ್ಕು.

ಮನೆಲಿ ಒಂದು ಸಣ್ಣ ಜಂಬಾರ ಆದರೂ ನಮ್ಮಲ್ಲಿ ಎಷ್ಟು ಗಲ ಗಲ ಇಕ್ಕು. ನಾವು ನಿತ್ಯಾ ಹೋವುತ್ತ ಬಸ್ಸಿಲ್ಲಿ , ರೈಲಿಲ್ಲಿ ಎಲ್ಲಾ ಎಷ್ಟು ಗದ್ದಲ ಇಕ್ಕು ಅಲ್ಲದ. ವಿಮಾನದ ಒಳ ಮಾತ್ರ ಒಂದು 200-250 ಜನಂಗೊ ಇದ್ದರೂ ಸೂತಕದ ಮನೆ ಹಾಂಗೆ. ಎಲ್ಲರೂ ಸುಮ್ಮನೆ ಕೂದೊಂಡು ಏನಾರೂ ಮಾಡಿಯೊಂಡು ಇರ್ತ್ತವು. ಒಬ್ಬ ಇನ್ನೊಬ್ಬನ ಹತ್ರೆ ಮಾತಾಡುವದು ಹೇಳಿರೆ ಒಟ್ಟಿಂಗೆ ಬಂದವು ಹತ್ರೆ ಹತ್ರೆ ಕೂದೊಂಡು ಇದ್ದರೆ ಮಾತ್ರ. ಇಲ್ಲದ್ದರೆ ಇಲ್ಲೆ. ಜನಂಗೊ ಗಂಭೀರವಾಗಿ ಎಂತಕೆ ಕೂರ್ತ್ತವು ಅರ್ತ ಆವುತ್ತಿಲ್ಲೆ. ಇದೆಲ್ಲ ನೋಡಿ ಅಪ್ಪಗ ಹತ್ರಾಣವನ ಮಾತಾಡ್ಸಲೆ ಧೈರ್ಯ ಬಂತಿಲ್ಲೆ. ಸುಮ್ಮನೆ ಕೂದೆ.

ವಿಮಾನ ನಿಧಾನಕೆ ಹೆರಟು ಅದರ ರನ್ವೇಗೆ (Runway) ಬಂದು ನಿಂದತ್ತು. ಇನ್ನು ಹಾರಲೆ ಅಕ್ಕು ಹೇಳಿ ಪೈಲಟ್ಟಿಂಗೆ (PILOT) ಸಂದೇಶ ಬಂದಪ್ಪಗ ಜೋರಾಗಿ ಓಡ್ಲೆ ಸುರು ಆತು. ನೋಡ್ತಾ ಇದ್ದ ಹಾಂಗೆ ನೆಲ ಬಿಟ್ಟು ಹಂತ ಹಂತವಾಗಿ ಮೇಗಂಗೆ ಹೋಪಲೆ ಸುರು ಆತು. ಕರೆಯಾಣ ಸೀಟಿಲ್ಲಿ ಕೂದ ಎನಗೆ ಹೆರ ನೋಡುವಾಗ ಒಂದು ಕೊಶಿ ಅದರೊಟ್ಟಿಂಗೆ ಮನಾಸಿಲ್ಲಿ ಒಂದು ಅಳುಕು. ಜಂಬ್ರಂಗಳಲ್ಲಿ ಪ್ರಾರ್ಥನೆ ಮಾಡುವಾಗ ಹೇಳ್ತವಲ್ಲದ “ಅಡೂರು, ಮಧೂರು, ಕಾವು ಕಣ್ಯಾರ” ಹೇಳಿ… ಎಲ್ಲಾ ದೇವರೂ ನೆಂಪು ಆದವು. ಪ್ರಯಾಣ ಸುಖವಾಗಿರಲಿ ಹೇಳಿ ಅಲ್ಲಿಂದಲೇ ಪ್ರಾರ್ಥನೆ ಮಾಡಿಯೊಂಡೆ. ಇಲ್ಲಿಂದ ಹೊರಟು ಬೊಂಬಾಯಿಗೆ ಎತ್ತಲೆ ಎಷ್ಟು ಹೊತ್ತು ಬೇಕು ಹೇಳಿ ಪೈಲಟ್ ವಿವರ ಕೊಟ್ಟು, ನಿಂಗಳ ಪ್ರಯಾಣ ಸುಖಕರವಾಗಲಿ ಹೇಳಿ ಹಾರೈಸಿದ. ರಜ ಹೊತ್ತು ಅಪ್ಪಗೆ ಚಾಕಲೇಟ್ ಬಂತು, ಮತ್ತೆ ರಜ ಹೊತ್ತು ಅಪ್ಪಗ ತಿಂಡಿ- ಎರಡು ಬ್ರೆಡ್ ತುಂಡಿನ ಎಡೆಲಿ ಮುಳ್ಳು ಸೌತೆ, ಟೊಮೆಟೊ, ಕೊತ್ತಂಬರಿ ಸೊಪ್ಪು, ಎಲ್ಲಾ ಹಾಕಿ “ಸೇಂಡ್ ವಿಚ್” ಸರಬರಾಜು ಆತು. ಕುಡಿವಲೆ ಕಾಪಿಯೋ ಚಾಯವೋ, ಆಯ್ಕೆ ನವಗೆ. ಬಿಸಿ ನೀರು, ಕಾಪಿ ಹೊಡಿ, ಹಾಲಿನ ಹೊಡಿ, ಸಕ್ಕರೆ ಹೊಡಿ, ಒಟ್ಟಿಂಗೆ ಮಾಡ್ಲೆ ಒಂದು ಕಪ್ ಎಲ್ಲಾ ಕೊಡ್ತವು. ಬೇಕಾದ ಹಾಂಗೆ ಮಿಕ್ಸ್ ಮಾಡ್ಲೆ ಗೊಂತಿದ್ದರೆ ಆತು. ಗೊಂತಿಲ್ಲದ್ದರೆ ತೊಂದರೆ ಇಲ್ಲೆ. ನಾವು ಮಾಡಿ ನಾವೇ ಕುಡಿವದು ಅಲ್ಲದ. ಲಾಯಿಕ್ ಆಯಿದು ಹೇಳಿಯೊಂಡರೆ ಆತು. ವಿಮಾನ ಎಷ್ಟು ಎತ್ತರಲ್ಲಿ ಇದ್ದು, ಹೆರಾಣ ಟೆಂಪರೇಚರ್, ವಿಮಾನದ ಸ್ಪೀಡ್ ಎಲ್ಲಾ ವಿವರವ ಪೈಲಟ್ ಒಂದು ಸರ್ತಿ ಪ್ರಕಟಣೆ ಮಾಡಿದ.
ವಿಮಾನ ಎತ್ತರಕ್ಕೆ ಹೋವುತ್ತಾ ಇದ್ದು, ಮೋಡಂದಲೂ ಮೇಗೆ. ಹೆರ ನೋಡಿದರೆ ಕೆಳಾಣದ್ದು ಎಂತ ಕಾಣ್ತಿಲ್ಲೆ. ಬಿಳಿ ಬಿಳಿ ಮೋಡ, ಹತ್ತಿಯ ಹರಗಿ ಮಡಗಿದ ಹಾಂಗೆ. ಹಳೆ ಸಿನೆಮಂಗಳಲ್ಲಿ ನಾರದ ಮೋಡದ ಎಡೆಲಿ “ನಾರಾಯಣ, ನಾರಾಯಣ” ಹೇಳಿಯೊಂಡು ಬಪ್ಪದು ನೋಡಿಪ್ಪಿ. ಹಾಂಗೇ ಕಂಡತ್ತು. ಇಲ್ಲಿ ಮಾತ್ರ ನಾರದ ಇಲ್ಲೆ ಅಷ್ಟೆ ವೆತ್ಯಾಸ. ಮುಕ್ಕಾಲು ಘಂಟೆ ಪ್ರಯಾಣ ಅಪ್ಪಗ ವಿಮಾನ ನಡುಗಲೆ ಸುರು ಆತು. ಹವಾಮಾನ ದೋಷಂದ ಹಾಂಗೆ ಅಪ್ಪದು, ಎಲ್ಲವೂ ಸರಿಯಾಗೇ ಇದ್ದು ಹೇಳಿ ಪೈಲಟ್ ವಿವರಣೆ ಕೊಟ್ಟಪ್ಪಗ ಮನಸಿಂಗೆ ನೆಮ್ಮದಿ ಆತು. ತೊಂದರೆ ಆದರೆ ಎಂತ ಮಾಡ್ಲೆ ಎಡಿಗು? ಎಡೆಲಿ ಬ್ರೇಕ್ ಹಾಕಿ ನಿಲ್ಲಿಸಿ ಜನಂಗಳ ಇಳುಶಲೆ ಎಡಿತ್ತೋ, ಅಲ್ಲ ಎಲ್ಲಿಯಾರೂ ನಿಲ್ಲಿಸಿ ರಿಪೇರಿ ಮಾಡ್ಲೆ ಎಡಿತ್ತೋ?

ಸರಂಜಾಮು ಮಡಗಲೆ ಜಾಗೆ
ಸರಂಜಾಮು ಮಡಗಲೆ ಜಾಗೆ

ರಜ ಹೊತ್ತು ಅಪ್ಪಗ, ಇನ್ನು ಕೆಲವೇ ನಿಮಿಷಲ್ಲಿ ನಾವು ಬೊಂಬಾಯಿಲಿ ಇಳಿತ್ತು, ಅಲ್ಲಿಯ ತಾಪಮಾನ ಇಂತಿಷ್ಟು ಇದ್ದು ಹೇಳಿ ಪ್ರಕಟಣೆ ಕೊಟ್ಟವು. ವಿಮಾನ ಕೆಳ ಕೆಳಾ ಇಳಿವಲೆ ಸುರು ಆತು, ಕಟ್ಟಡಂಗೊ, ಮಾರ್ಗಂಗೊ, ವಾಹನಂಗೊ, ಜನಂಗೊ ಎಲ್ಲಾ ಒಂದೊಂದಾಗಿ ಕಾಂಬಲೆ ಸುರು ಆತು. ವಿಮಾನ ರನ್ ವೇಗೆ ಸ್ಪರ್ಷ ಅಪ್ಪಗ ಧಡ ಧಡ ಶಬ್ಧ ಆತು. ಹತ್ರಾಣವನ ನೋಡಿಯಪ್ಪಗ ಗೊಂತಾತು, ಇದೆಲ್ಲಾ ಮಾಮೂಲಿ ಹೇಳಿ. ವಿಮಾನ ಸರಿಯಾಗಿ ನಿಂದು ಏಣಿ ಸಿಕ್ಕಿಸಿ ಅಪ್ಪಗ ಗಗನ ಸಖಿಗೊ ಮೊದಲಾಣ ಹಾಂಗೆ ಒಂದು ನೆಗೆ ಮಾಡಿ ಬೀಳ್ಕೊಟ್ಟವು.
ಇದಾದ ನಂತ್ರ ಕೆಲಾವು ಸರ್ತಿ ವಿಮಾನಲ್ಲಿ ಹೋದ್ದು ಇದ್ದು. ಮೊದಲಾಣ ಪುಸ್ತಕದ ಹಾಂಗಿಪ್ಪ ಟಿಕೆಟ್ ಈಗ ಇಲ್ಲೆ. ಇಂಟರ್ನೆಟ್ಟಿಲ್ಲಿ ಬುಕ್ ಮಾಡಿದರೆ ಒಂದು ಶೀಟ್ ಪೇಪರ್ ಮಾತ್ರ. ವಿಮಾನ ನಿಲ್ದಾಣದ ಒಳಂಗೆ ಹೋಯೆಕ್ಕಾರೆ, ಬೋರ್ಡಿಂಗ್ ಪಾಸ್ಸ್ ತೆಕ್ಕೊಳೆಕ್ಕಾರೆ ಐಡೆಂಟಿಟಿ ತೋರ್ಸೆಕ್ಕು. ಒಂದು ಜೆಟ್ ವಿಮಾನಲ್ಲಿ ಸೀಟಿನ ಎದುರು ಸಣ್ಣ TV ಸ್ಕ್ರೀನ್ ಇತ್ತಿದ್ದು. ಅದರಲ್ಲಿ ಸಿನೆಮವೋ, ಹಾಡೋ ನವಗೆ ಬೇಕಾದ್ದರ ಆಯ್ಕೆ ಮಾಡಿ ನೋಡ್ಲೆ , ಕೇಳ್ಲೆ ವೆವಸ್ತೆ ಇತ್ತಿದ್ದು. (ಕೆಮಿಗೆ ಮಡುಗಲೆ ಹೆಡ್ ಫೋನ್ ಕೂಡಾ). ವಿಮಾನ ಎಷ್ಟು ಎತ್ತರಲ್ಲಿ ಇದ್ದು, ಎಷ್ಟು ದೂರ ಹೋಗಿ ಆಯಿದು, ಇನ್ನು ಎಷ್ಟು ದೂರ ಹೋಪಲೆ ಇದ್ದು, ಈಗಾಣ ಸ್ಪೀಡ್ ಎಷ್ಟು, ಹೆರಾಣ ತಾಪಮಾನ ಎಷ್ಟು, ಯಾವ ದಾರಿ ಆಗಿ ಹೋಪದು ಎಲ್ಲಾ ವಿವರ ಅದೇ ಸ್ಕ್ರೀನಿಲ್ಲಿ ಬೇಕಾರೆ ನೋಡ್ಲೆ ಎಡಿಗಾಗಿಂಡು ಇತ್ತಿದ್ದು. ಜೆಟ್ ಕೊನ್ನೆಕ್ಟ್ ಹೇಳುವದರಲ್ಲಿ ಎಲ್ಲರಿಂಗೂ ಒಂದೇ ನಮೂನೆಯ ಸೀಟ್ ಗೊ. Executive Seat ಇಲ್ಲೆ. ಕಾಪಿ ತಿಂಡಿ ಬೇಕಾರೆ ಕ್ರಯ ಕೊಟ್ಟು ತೆಕ್ಕೊಳೆಕ್ಕು. ಕಿಂಗ್ ಫಿಷರ್ ವಿಮಾನಲ್ಲಿ ಊ ಲಾ ಲಾ ಉ ಲಾ ಲಾ ಹೇಳಿಯೊಂಡು TV ಸ್ಕ್ರೀನಿಲ್ಲಿ ಮಲ್ಯನ ಉಪಚಾರ ಇದ್ದು.
ಒಂದೊಂದು ಸರ್ತಿ ಒಂದೊಂದು ಅನುಭವಂಗೊ. ಆದರೂ ಸುರುವಾಣ ಅನುಭವವೇ ಬೇರೆ. ನಿಂಗಳ ಅನುಭವಂಗಳ ಈ ಲೇಖನಕ್ಕೆ ಒಪ್ಪ ಕೊಡುವಗ ಹೇಳಲೆ ಮರೆಡಿ. ಅನುಭವವ ಎಲ್ಲರೂ ಹಂಚಿಗೊಂಬ ಆಗದಾ?

ವಿಮಾನಲ್ಲಿ ಹೋಪಗ ಎನ್ನ ಕೆಮರಲ್ಲಿ ತೆಗದ ಕೆಲವು ಫೋಟೋಂಗ:

ವಿಮಾನ ಪ್ರಯಾಣದ ಅನುಭವಂಗೊ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಕೊಳಚ್ಚಿಪ್ಪು ಬಾವ

  ಮಾಷ್ಟ್ರುಮಾವನ ದೊಡ್ಡಮಾಣಿ ಅಮೆರಿಕಕ್ಕೆ ಹೋಯಿದ ಅಲ್ಲದ ಒಪ್ಪಣ್ಣ. ಅವ ನಮ್ಮ ಭಾರತದ ವಿಮಾನಂಗೊಕ್ಕೆ ಮತ್ತೆ ಅಮೆರಿಕಾದ ವಿಮಾನಂಗೊಕ್ಕೆ ವ್ಯತ್ಯಾಸ ಎಂತ ಹೇಳಿ ಹೇಳುಗು.
  ಕೊಳಚಿಪ್ಪು ಭಾವನ ತಮ್ಮನೂ ಹೊಯಿದಡ ಅಮೇರಿಕಕ್ಕೆ, ಅವನ ಹತ್ತರೆ ಕೇಳಿರೆ ಅವನೂ ಹೇಳುಗು.

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಮಾಷ್ಟ್ರುಮಾವನ ದೊಡ್ಡಮಗ° ಪುಸ್ತಕ ಓದಿಗೊಂಡಿದ್ದದಡ, ಎರಡೂ ವಿಮಾನಲ್ಲಿ.
  ಹಾಂಗಾಗಿ ಪುಸ್ತಕಕ್ಕಿಪ್ಪ ವಿತ್ಯಾಸ ಮಾಂತ್ರ ಗೊಂತಿಕ್ಕಷ್ಟೆ!! 😉

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಮತ್ತೆ ಈ ಕೊಳಚಿಪ್ಪು ಭಾವ ಸಟ್ಟುಮುಡಿಲಿ ನಾಕು ಪುಸ್ತಕ ಕೊಟ್ಟಿದನಡ.. ಇನ್ನು ಮಾಷ್ಟ್ರುಮಾವನ ಮಗಂಗೆ ಪುರುಸೋತ್ತು ಎಲ್ಲಿ ಇಕ್ಕು ಹೆರ ನೋಡುಲೆ..
  ಕೊಳಚಿಪ್ಪು ಭಾವನ ತಮ್ಮನೇ ಹೇಳೆಕ್ಕಷ್ಟೆ..

  [Reply]

  VA:F [1.9.22_1171]
  Rating: 0 (from 0 votes)
 2. prashanth

  ಗಗನ ಸಖಿಯರ ವಿಷಯ ಬಂದಪ್ಪಗೆ ಎನಗೆ ಒಂದು ವಿಷಯ ನೆಂಪು ಬಂತು, ಎನ್ನ ಶುರುವಾನ ವಿಮಾನ ಪ್ರಯಾಣದ ಸಮಯಲ್ಲಿ ಎನಗೆ ಒಂದು ಗಗನ ಸಖಿ ಭಾರಿ ಸ್ಮೈಲ್ ಕೊತ್ತತ್ತು, ಎನಗೋ ಗಲಿಬಿಲಿ, ಇದಕ್ಕೆ ಎಂತ ಹಿದುದತ್ತೊಪ್ಪ ಗ್ರಾಚಾರ ಹೇಳಿ, ಮತ್ತೆ ಸಮಾಧಾನ ಮದ್ಯೊಂದೆ ನೆಗೆ ಮಾದುದೆ ಅದರ ಕೆಲಸ ಹೇಳಿ …

  ಪ್ರಶಾಂತ
  ಕುವೈತ್

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಸಮಾದಾನ ಮಾಡಿಗೊಂಡದೋ – ಬೇಜಾರು ಮಾಡಿಗೊಂಡದೋ ಪ್ರಶಾಂತಣ್ಣ?! 😉

  [Reply]

  VN:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  ನಿನಗೆ ಸ್ಮೈಲ್ ಕೊಟ್ಟದು ಸರಿಯಾಗಿಯೇ ಇದ್ದು. ಜವ್ವನಿಗರಿಂಗೆ ಸ್ಮೈಲ್ ಕೊಡದ್ದೆ ಮತ್ತೆ ಎಂತ ಪ್ರಾಯದವಕ್ಕೆ ಕೊಡುವದಾ?

  [Reply]

  VA:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಎಡಪ್ಪಾಡಿ ಬಾವ ಒಂದರಿ ಕಲುಕತ್ತಕ್ಕೆ ವಿಮಾನಲ್ಲಿ ಹೋದ್ದಡ!
  ಕಲುಕತ್ತ ಎತ್ತುಲಪ್ಪಗ ಕಾಲುಕುತ್ತ ಆಯಿದಡ, ಸೀಟಿನ ಬೆಳ್ಟು ಸರಿಯಾಗಿ ಸಿಕ್ಕುಸದ್ದೆ! 😉 :-)
  ಅಪ್ಪೋ? ಹಾಂಗಾವುತ್ತೋ?

  [Reply]

  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  ಇತ್ತೀಚೆಗೆ “ಎಮಿರೇಟ್ಸ್” ವಿಮಾನಲ್ಲಿ ಕೊಚ್ಚಿಗೆ ಬಂದವು ಇದಕ್ಕಿಂತ ಭಯಾನಕ ಅನುಭವ ಹೇಳುಗು.

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಗೋಪಾಲ ಮಾವ

  ಶರ್ಮಪ್ಪಚ್ಚಿಯ ವಿಮಾನ ಯಾನದ ವರ್ಣನೆ ಲಾಯಕಾಯಿದು. ಅವರ ಬರೆತ್ತ ಶೈಲಿ ಚಿಂದ ಇದ್ದು. ಹೊಸಬರಿಂಗೆ ವಿಮಾನಲ್ಲಿ ಹೋಪಲೆ ಇದು ಒಳ್ಳೆಯ ಮಾಹಿತಿಯನ್ನೂ ಕೊಡುತ್ತು. ಹೇಳಿದ ಹಾಂಗೆ ಶರ್ಮಪ್ಪಚ್ಚಿಗೆ ವಿಮಾನದ ಒಳಾಂದ ಆಕಾಶದ ಪಟಂಗಳ ತೆಗವಲೆ ಗಗನಸಖಿಗೊ ಬಿಟ್ಟಿದವಿಲ್ಲಿಯೋ ?!! ಪೌರಾಣಿಕ ಸಿನೆಮಾಂಗಳಲ್ಲಿ ದೇವರಕ್ಕೊ, ನಾರದ ಎಲ್ಲ ಆಕಾಶ ಮಾರ್ಗವಾಗಿ ಹೋಪಗ ಕಾಣುತ್ತ ಹಾಂಗೆ, ಹತ್ತಿ ಹಾಂಗೆ ಕಾಣುತ್ತ ಬಿಳಿ ಮೋಡದ ಎಡೆಲಿ, ಅದರ ಮೇಗೆ ಹೋಪಗ ಸಿಕ್ಕುತ್ತ ನೋಟವೇ ಬೇರೆ. ಇನ್ನೊಂದರಿ ಶರ್ಮಪ್ಪಚ್ಚಿ ಹೋಪಗ ಆ ಸೀನು ತೆಗವಲೆ ಮರೆಡಿ. ಕೆಮರ ಹೆರ ತೆಗವಲೆ ಬಿಡದ್ರೆ, ಮೊಬೈಲಿಲ್ಲಿ ತೆಗದರೆ ಆತು !!

  [Reply]

  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  ಗೋಪಾಲ ಮಾವ, ವಿಮಾನಲ್ಲಿ ಮೊಬೈಲ್ ಸ್ವಿಚ್ ಆಪ್ ಮಾಡೆಕ್ಕು ಹೇಳಿ ಮೊದಲೇ ಸೂಚನೆ ಕೊಡುತ್ತವು. ವಿಮಾನದ ಇಲೆಕ್ಟ್ರೋನಿಕ್ ಕಂಟ್ರೋಲ್ ಸಿಸ್ಟಮಿಂಗೆ ತೊಂದರೆ ಆವುತ್ತು ಹೇಳ್ತವು. ಆನು ಸುರು ಹೋದ್ದು ಸುಮಾರು 14 ವರ್ಷ ಮೊದಲು, ಅಂಬಗ ಮೊಬೈಲ್ ಇತ್ತಿದ್ದಿಲ್ಲೆ. ನಂತರ ಹೋದಿಪ್ಪಗ ಸೈಡ್ ಸೀಟ್ ಸಿಕ್ಕಿದ್ದೇ ಕಮ್ಮಿ, ಸಿಕ್ಕಿಪ್ಪಗಳೂ ಹಾಂಗಿಪ್ಪ ಮೋಡಂಗಳ ದರ್ಶನ ಆಯಿದಿಲ್ಲೆ. ಕೆಮರಲಿ ತೆಗವಲೆ ಬಿಡ್ತವೋ ಗೊಂತಿಲ್ಲೆ. ಪ್ರಯತ್ನ ಮಾಡಿದ್ದಿಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 5. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಆನು ವಿಮಾನಲ್ಲಿ ಹಾರಿದ್ದ೦ತೂ ತು೦ಬಾ ಅನಿರೀಕ್ಷಿತ…ತಿರುವನ೦ತಪುರ೦ದ ಬೆ೦ಗ್ಳೂರಿ೦ಗೆ ಹಾರಿಯಪ್ಪಗ ಶರ್ಮಪ್ಪಚ್ಚಿಗೆ ಆದ ಅನುಭವವೇ ಆತು.

  [Reply]

  VA:F [1.9.22_1171]
  Rating: 0 (from 0 votes)
 6. prashanth

  ಹಂಗಾದರೆ ನಿಂಗಳ ೧೪ ವರ್ಷದ ಮೊದಲಾನ ಪ್ರಯಾಣದ ಬಗ್ಗೆ ವಿವರವಾಗಿ ತಿಳುಷಿ

  ಪ್ರಶಾಂತ
  ಕುವೈತ್

  [Reply]

  VA:F [1.9.22_1171]
  Rating: 0 (from 0 votes)
 7. Dr. E. Mahabala Bhatta

  Bhaaree laikkayidu ningala lekhana. Namma bhaasheli ishtu chendakke barada ningoge namaskaarango Dr. E. M. Bhatta.

  [Reply]

  VA:F [1.9.22_1171]
  Rating: 0 (from 0 votes)
 8. ಸುಮನ ಭಟ್ ಸಂಕಹಿತ್ಲು.

  ತುಂಬಾ ಲಾಯಿಕ ಅಯಿದು ಬರದ್ದು, ಹಾಂಗೆ ಬಾಕಿಯವರ ಒಪ್ಪಂಗಳುದೆ.
  ಎನಗೆದೆ ಓದುವಗ ಎನ್ನ ವಿಮಾನಯಾನದ ಘಟನೆಗೊ ಕಣ್ಣಿಂಗೆ ಕಟ್ಟಿತ್ತು.
  ವಿಮಾನ ಇಳುದು ನೆಲ ಮುಟ್ಟುವಗ ನಿಂಗೊಗೆ ಆದ ಅನುಭವ, ಹತ್ರಾಣ ಜನರ ನೋಡಿ ಯಾವಾಗಲೂ ಹೀಂಗೆ ಇಕ್ಕು ಹೇಳಿ ಸಮಾಧಾನಪಟ್ಟದು ಗ್ರೇಶಿ ನೆಗೆ ಬಂತು. ಎನಗೆದೆ ಹಾಂಗೆಲ್ಲ ಅಯಿದು, ಸ್ವಂತ ಅನುಭವಿಸಿದ ಕಾರಣ ಇನ್ನೂ ಹೆಚ್ಚು ನೆಗೆ ಬಂದದು.
  ~ಸುಮನಕ್ಕ…

  [Reply]

  VA:F [1.9.22_1171]
  Rating: 0 (from 0 votes)
 9. ಹರೀಶ್ ಕೇವಳ

  ಉತ್ತಮ ಲೇಖನ ಶರ್ಮಪ್ಪಚ್ಹಿ… ಆನು ಮೊದಲ ಸಲ ಬೆ೦ಗಳೂರಿ೦ದ ಹೋಪಗ, ಎನ್ನ ಸಣ್ನ ಬ್ಯಾಗ್ ಎನ್ನತ್ರೆ, ದೊಡ್ಡ ಬ್ಯಾಗ್, ನಾಪತ್ತೆ, ಮತ್ತೆ ಅದು ಇಮಾನ ಇಳುದ ಮೇಲೆ ಪುನಹ ಸಿಕ್ಕುತ್ತು ಹೇಳಿದ ಮೇಲೆ ಸಮಾಧಾನ ಆದ್ದು..
  ಕಳೆದ ವರ್ಶ ದುಬೈ ಇ೦ದ ಮ೦ಗಳೂರಿ೦ಗೆ ಪಲ್ತಿ ಆದ ಇಮಾನದ ಮೊದಲನದ್ದಲ್ಲಿ ಹೋದ್ದು, ಎನೂ ಕೊನೇ ಕ್ಶಣಲ್ಲಿ ಇದಲ್ಲಿ ಹೋಪಾಳಿ ಆದ್ದು. ಆದಾದ ಮೆಲೆ ಈಗ ಇಮನ ಇಳಿವಲಪ್ಪಗ ಎಲ್ಲ ದೇವರುಗಳ ನೆ೦ಪಾವ್ತು!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಶ್ಯಾಮಣ್ಣಶಾ...ರೀಮಾಲಕ್ಕ°ಬಂಡಾಡಿ ಅಜ್ಜಿಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವದೊಡ್ಡಭಾವಡಾಮಹೇಶಣ್ಣಚುಬ್ಬಣ್ಣಪುಣಚ ಡಾಕ್ಟ್ರುಅನು ಉಡುಪುಮೂಲೆಹಳೆಮನೆ ಅಣ್ಣಅಕ್ಷರ°ಡಾಗುಟ್ರಕ್ಕ°ಅನಿತಾ ನರೇಶ್, ಮಂಚಿವಾಣಿ ಚಿಕ್ಕಮ್ಮಚೂರಿಬೈಲು ದೀಪಕ್ಕಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಶುದ್ದಿಕ್ಕಾರ°ವೇಣೂರಣ್ಣಒಪ್ಪಕ್ಕಬೊಳುಂಬು ಮಾವ°ಶೀಲಾಲಕ್ಷ್ಮೀ ಕಾಸರಗೋಡುಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ