ಯೇನಂಕೂಡ್ಲಿಲ್ಲಿ ಕೂಡಿದ ಬೈಲು

April 15, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 35 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯೇನಂಕೂಡ್ಲು ಮನೆಲಿ ಮುನ್ನಾ ದಿನವೇ ಸಂಭ್ರಮದ ವಾತಾವರಣ.
ಕಿಶೋರಣ್ಣ ಉತ್ಸಾಹಲ್ಲಿ ಒಳಾಂದ ಹೆರಾಂಗೆ ನಾಕು ಸರ್ತಿ ಹೆಚ್ಚೇ ಓಡಾಡಿದ. ಬಾಳೆ ಹಣ್ಣಿನ ಕಾಸಲೆ, ಚಕ್ಕುಲಿ ಒತ್ತಿ ಕೊಡ್ಲೆ, ಎಳತ್ತು ಹಲಸಿನ ಕಾಯಿಯ ಕೊರದು, ಸಜ್ಜಿ ಮಾಡಿ ಸೊಳೆಯ ಉದ್ದಕೆ ಸಪೂರಕೆ ಕತ್ತರಿಸಿ ಹೊರಿವಲೆ, ಇದಕ್ಕೆಲ್ಲಾ ಸಕಾಯಕ್ಕೆ ಅವನೇ ಆಯೆಕ್ಕಶ್ಟೆ ಅನ್ನೆ.
ಮರುದಿನಕ್ಕೆ  ಅಡಿಗೆ ಅಜ್ಜನ ಬಪ್ಪಲೆ ಹೇಳಿದ್ದ . ಆದರೆ ಪೂರ್ವ ತಯಾರಿ ಮನೆಲಿಯೇ ಆಯೆಕ್ಕಿದಾ. ಹಾಂಗೆ ಕಿಶೋರಣ್ಣಂಗೆ ಎಡೆ ಬಿಡದ್ದೆ ಕೆಲಸದ ಗೌಜಿ.
ನೆರೆಕರೆಯವು ಬಂದು ಸೇರುವ ಆ ಕ್ಷಣಂಗಳ  ನಿರೀಕ್ಷೆಲಿ, ಹೊತ್ತು ಹೋದ್ದೇ ಗೊಂತಾಯಿದಿಲ್ಲೆ ಇದ. ಇನ್ನು ಮನುಗದ್ರೆ ನಾಳೆ ಅವು ಬಪ್ಪಗ ಒರಕ್ಕು  ತೂಗುವೆ ಹೇಳಿ ಅವನ ಅಬ್ಬೆ ಹೇಳಿ ಅಪ್ಪಗಳೇ ಅವಂಗೆ ಗೊಂತಾದ್ದು ಸಮಯ ಸುಮಾರು ಆಯಿದು ಹೇಳಿ.
ಇದರೆಡೆಕ್ಕಿಲಿ ನೆಗೆ ಮಾಡ್ಲೂ ಪುರುಸೊತ್ತು ಸಿಕ್ಕಿದ್ದಿಲ್ಲೆ ಹೇಳಿ ಮತ್ತೆ ನೆಂಪಾತು ಅವಂಗೆ.

ಮೌಢ್ಯದ ದಿನಂಗಳಲ್ಲಿ ಒಂದು ಮೂರ್ತ ಆಯೆಕ್ಕು ಹೇಳಿ ಭಟ್ಟ ಮಾವನ ಹತ್ರೆ ಕೇಳಿ ನಿಶ್ಚಯ ಮಾಡಿದ ಎಪ್ರಿಲ್ ೧೦ ರ  ಆದಿತ್ಯವಾರದ ಆ ದಿನ ಬಂದೇ ಬಂತು..
ಯೇವತ್ತಿಂದಲೂ ಹೆಚ್ಚು ಉತ್ಸಾಹಂದ ಬೈಲಿನ ನೆರೆಕರೆಯವು ಉದಿಯಪ್ಪಗಳೇ ಎದ್ದು ಗಡಿಬಿಡಿಲಿ ಹೆರಟವು.
ನೆಗೆ ಮಾಣಿಗೆ, ನೆಗೆ ಮಾಡ್ಸಲೆ ಹೊಸಬ್ಬರು ಆರಾರೂ ಸಿಕ್ಕುಗೋ ಹೇಳ್ತ ಕುತೂಹಲ.
ಗುರಿಕ್ಕಾರ್ರಿಂಗೆ, ಶಾಲಿಂಗೆ ಇಸ್ತ್ರಿ ಹಾಕ್ತ ಗೌಜಿ. ಕಾರ್ಯಕ್ರಮದ ರೂಪು ರೇಷೆಯ ಆಲೋಚನೆ.
ಭಟ್ಟ ಮಾವಂಗೆ ಬೇರೆ ವೈದಿಕ ಇದ್ದ ಕಾರಣ ದೊಡ್ಡಣ್ಣನ ಕಳುಶುತ್ತ ಜವಾಬ್ದಾರಿ.
ಪೆಂಗಣ್ಣಂಗೆ, ಊರು ಸುತ್ತಿ ವಾರ್ತೆ ತಪ್ಪಲೆ ಎಡಿಯದ್ದರೂ ತೊಂದರೆ ಇಲ್ಲೆ, ಇಲ್ಲಿಯೇ ಬೇಕಾಷ್ಟು ವರ್ತಮಾನ ಸಿಕ್ಕುಗು ಹೇಳ್ತ ಸಮಾಧಾನ.

ಬೋಸ ಭಾವಂಗೆ, ಎನ್ನ ಹಾಂಗಿಪ್ಪ ಬೋಸಂಗೊ ಅಲ್ಲಿಗೆ ಬಾರದ್ದೆ ಇರವು ಹೇಳ್ತ ಬಲವಾದ ನಂಬಿಕೆ.
ಬೊಳುಂಬು ಮಾವಂಗೆ, ಮಗನ ಓದಲೆ ಕೂರ್ಸಿಕ್ಕಿ ಹೆರಡ್ತ ಗೌಜಿ,
ಶ್ರೀಶಣ್ಣಂಗೆ, ಇರುಳಾಣ ಡ್ಯೂಟಿ ಮುಗುದು ರಿಲೀವ್ ಆಗದ್ದೆ ಹೆರಡ್ಲೆ ಎಡಿಗಾಯಿದಿಲ್ಲೆ ಹೇಳ್ತ ತಲೆಬೆಶಿ.
ಒಂದು ವಾರಂದ ಶ್ರೀ ಅಕ್ಕಂಗೆ ಬೈಲಿನ ಚಿತ್ರವ ಸೀರೆಲಿ ಬಿಡುಸುತ್ತ ತೆರಕ್ಕಿನ ಕೆಲಸ.
ಅದರ ಸುತ್ತಿ ಕನ್ನಾಟಿ ಎದುರು ನಿಂದು ಎರಡೆರಡು ಸರ್ತಿ ನೋಡಿ ಸಮಾಧಾನ ಮಾಡಿಯೊಂಡು, ನಿನ್ನೆ ತಂದು ಮಡುಗಿದ ಹೂಗುಗೊ, ರಂಗೋಲಿ ಹೊಡಿ, ಪುಸ್ತಕಂಗೊ, ಇನ್ನೂ ಹಲವಾರು ಸಾಮಾನುಗಳ ಕಾರಿಂಗೆ ತುಂಬುಸುತ್ತ ಗೌಜಿ.
ಬೇಟರಿ ಚಾರ್ಜ್ ಮಾಡಿ, ಕೆಮರವ ಅದರದ್ದೇ ಬೇಗಿಲಿ ಸರಿಯಾಗಿ ಕೂರಿಸಿ ಅಂಬೆರ್ಪಿಲ್ಲಿ ಹೆರಡುವ ಚುಬ್ಬಣ್ಣ.

ಸರ್ಪಮಲೆ ಮಾವ-ಅತ್ತೆಗೆ ತುರ್ತು ಇದ್ದು ಹೇಳಿ ಈ ಕಾರ್ಯಕ್ರಮ ಬಿಟ್ಟಿಕ್ಕಿ ಹೋಪದು ಹೇಂಗೆ ಹೇಳ್ತ ಚಿಂತೆ

ಅಟ್ಟುಂಬೊಳ ರೆಜ ಸಕಾಯ ಮಾಡಿ ಕೊಟ್ಟರೆ,  ಹೆಮ್ಮಕ್ಕೊಗೂ ಬೇಗ ಹೆರಡ್ಲೆ ಆವ್ತು ಹೇಳ್ತ ಅನುಭವದ  ಈ ಶರ್ಮಪ್ಪಚ್ಚಿ.
ಯಾವ ಗೌಜಿಯೂ ಬೇಡ ಹೇಳಿ ಬೇಗ ಹೆರಟು ಬಂದ ಕೆಪ್ಪಣ್ಣನೂ, ನೆರೆಕರೆಲಿ ಕಾಯಿ ಬರ್ಫಿ ಹಂಚಿ, ಮಗಳು ಹುಟ್ಟಿದ ಸಂತೋಷವ ಅಚರುಸಲೆ ತಯಾರಾದ ಕೆದೂರು ಡಾಕ್ಟ್ರೂ, ಮನೆಯವರೊಟ್ಟಿಂಗೆ ಸೇರಿದವು ಎಲ್ಲರನ್ನೂ ಎದುರುಗೊಂಬಲೆ.
ಆದರೆ ಎಲ್ಲರಿಂಗೂ ಇತ್ತಿದ್ದ ಸಾಮಾನ್ಯ ನಿರೀಕ್ಶೆ ಒಂದೇ. ಮುಖತಃ ಕಂಡು ಮಾತಾಡದ್ದವರ ಇಂದು ಕಂಡು ಗುರ್ತ ಪರಿಚಯ ಮಾಡಿ ಮತಾಡ್ಲೆ ಆವ್ತು.  ಹಳ್ಳಿ ಮನೆ ವಾತಾವರಣಲ್ಲಿ ಒಂದು ದಿನ ಎಲ್ಲರೂ ಸೇರಿ ಒಂದು ಹಬ್ಬದ ವಾತಾವರಣ ಸೃಷ್ಟಿ ಮಾಡಿ ಒಂದು ಒಳ್ಳೆ ಕಾರ್ಯಕ್ರಮ ಆವ್ತು ಹೇಳಿ.
ಕೈ ಕಾಲು ತೊಳದು, ಮೋರೆಗೆ ನೀರು ಹಾಕಿ, ಜೆಗಿಲಿಲಿ ಮಡುಗಿದ ಕುರ್ಚಿಲಿ ಕೂದು, ಅಚ್ಚು ಬೆಲ್ಲ ತಿಂದು, ಕಾಚಿ ಹಾಕಿದ ನೀರು ಕುಡುದಪ್ಪಗ ಹಿತವಾದ ಅನುಭವ.

ಕಾಪಿ ಅಕ್ಕೋ ಚಾಯ ಅಕ್ಕೋ ಅಲ್ಲ ಸರ್ಬತ್ತೋ ಕೇಳಿದ್ದಕ್ಕೆ ನಮ್ಮ ನೆಗೆ ಮಾಣಿ ಚಾಯ ಕಾಪಿ ಬಪ್ಪನ್ನಾರಕ್ಕೆ ಸರ್ಬತ್ತೇ ಅಕ್ಕು ಹೇಳಿ ಎರಡು ಗ್ಲಾಸ್ ಸರ್ಬತ್ತು ತೆಕ್ಕೊಂಡು ಬೋಸ ಭಾವಂಗೂ ಅದರಿಂದಲೇ ಒಂದು ಗ್ಲಾಸ್ ತೆಗದು ಕೊಟ್ಟ°.
ಮುಂದಾಣ ಕಾರ್ಯಕ್ರಮ ಕಾಪಿ ತಿಂಡಿ. ಮನೆಯ ಪಡು ದಿಕ್ಕಾಣ ಜೆಗಲಿಲಿ.
ಮನೆ ಯೆಜಮಾನರೊಟ್ಟಿಂಗೆ ಚುಬ್ಬಣ್ಣ, ಅಜ್ಜ ಕಾನ ಭಾವ, ದೊಡ್ಡ ಭಾವ, ಕೆದೂರು ಡಾಕ್ಟ್ರು, ಕೆಪ್ಪಣ್ಣ, ಕಿಶೋರಣ್ಣನೂ ಸೇರಿ ಸಜ್ಜಿಗೆ, ಅವಲಕ್ಕಿ, ಸೊಳೆ ಹೊರುದ್ದದು, ಕೆದೂರು ಡಾಕ್ಟ್ರ ಲೆಕ್ಕದ ಕಾಯಿ ಬರ್ಫಿ, ಮೊಸರು, ಮೆಡಿ ಉಪ್ಪಿನ ಕಾಯಿ ಎಲ್ಲಾ ಬಳುಸಿದವು.

ಕೈ ತೊಳದು ಹೆರ ಬಂದು ನೋಡಿರೆ, ಮೂಡ ಜೆಗುಲಿಲಿ, ಶ್ರೀ ಅಕ್ಕ° ಉರುಳಿಲಿ ನೀರು ತುಂಬಿಸಿ ಹೂಗುಗಳ ಅಲಂಕರಿಸಿ “ಉರುಳಿಕ್ಕಳಂ” ತಯಾರು ಮಾಡ್ತಾ ಇತ್ತಿದ್ದವು.
ಶ್ರೀ ಅಕ್ಕಂಗೆ ಹಾಂಗೆ, ಒಂದು ಕೆಲಸ ಹಚ್ಚಿಯೊಂಡರೆ, ಆ ಕೆಲಸ ಮುಗಿವನ್ನಾರ ಹಶು ಆಸರು ಎಂತದೂ ಆವ್ತಿಲ್ಲೆ. ಮಾಡ್ತ ಕೆಲಸಲ್ಲಿ ಅಷ್ಟು ಶ್ರದ್ಧೆ.
ಅವಕ್ಕೆ ಸಹಕಾರ ಕೊಟ್ಟದು ಸುವರ್ಣಿನಿ ಅಕ್ಕ°, ಬಂಡಾಡಿ ಅನುಶ್ರೀ, ಕುಕ್ಕಿಲ ಜಯತ್ತೆ ಮತ್ತೆ ಹಳೆಮನೆ ತಂಗೆ. ಶ್ರೀ ಅಕ್ಕನ ಕಾಪಿಗೆ ಹೋಪಲೆ ಅವೂದೆ ಬಿಟ್ಟಿದವಿಲ್ಲೆ.
“ಉರುಳಿಕ್ಕಳಂ” ಲ್ಲಿ ಒಪ್ಪಣ್ಣನ ಬೈಲು ಚೆಂದಕೆ ಸೃಷ್ಟಿ ಆತು. ಶ್ರೀ ಅಕ್ಕ ಸೀರೆಲಿ ಚಿತ್ರಿಸಿದ ಬೈಲಿಂಗೂ ಉರುಳಿಕ್ಕಳಕ್ಕೂ ಒಂದು ಸಣ್ಣ ಸ್ಪರ್ದೆಯೇ ಆತೋ ಸಂಶಯ. ಉರುಳಿಯ ಸುತ್ತಲೂ ರಂಗೋಲಿಯ ರಂಗು ಏರಿತ್ತು. .

~
ಬೈಲಿನ ಮಿಲನ ಸುದ್ದಿ ತಿಳಿವಲೆ ಶ್ರೀಶ ಮನೆಗೆ ಬಂದ. ಆನು ಬರೆತ್ತರ ಓದಲೆ ಸುರು ಮಾಡಿದ.
ಅಲ್ಲ ಅಪ್ಪಚ್ಚಿ, ಗುರಿಕ್ಕಾರ್ರು ಸುದ್ದಿ ಬರೆಯಿ ಹೇಳಿರೆ ನಿಂಗೊ ಪೋಲಿ ಕಟ್ಟುತ್ತಾ ಇದ್ದಿ ಅಲ್ಲದಾ, ಅಕ್ಷೇಪಿಸಿದ. ಅತ್ಮೀಯತೆ ಇಪ್ಪಲ್ಲಿ ರೆಜ ಸಲಿಗೆ ಜಾಸ್ತಿ ಅಲ್ಲದಾ
ಎಂತ ಮಾಡುವದು ಶ್ರೀಶ, ಮೂನ್ನೆಯ ಕಾರ್ಯಕ್ರಮ ಕಳುದ ಮತ್ತೆ ಒಂದು ಹತ್ತು ವರ್ಶ ಕಮ್ಮಿ ಆದ ಹಾಂಗೆ ಅನುಭವ ಆವ್ತಾ ಇದ್ದು. ಹಾಂಗೆ ರೆಜ ಪೋಲಿ ಕಟ್ಟಿದೆ. ಇನ್ನು ನೇರ್ಪಕೆ ಬರೆತ್ತೆ ಹೇಳಿದೆ.

~

ಮೂಡ ಜೆಗುಲಿಲಿ ಒಪ್ಪಣ್ಣ ಬೈಲಿನ ಮಿಲನ ಹೇಳ್ತ ಫಲಕ (ಬ್ಯಾನ್ನರ್) ಕಟ್ಟಿ ಆತು.
ಗುರಿಕ್ಕಾರ್ರಿಂಗೆ ಕೂಬಲೆ ಎದುರು ಜಂಖಾನ ಹಾಕಿ ಆತು.
ಎಲ್ಲರಿಂಗೂ ಎದುರು ಬದುರು ಕೂರ್ತ ಹಾಂಗೆ ಹಸೆ ಹಾಕಿ ಅತು. ಒಮ್ಮನಸ್ಸಿಂದ ಎಲ್ಲರೂ ಸಭಾ ಕಾರ್ಯಕ್ರಮಕ್ಕೆ ತಯಾರು ಆದವು.
ಯಾವದೇ ಕಾರ್ಯಕ್ರಮಕ್ಕೂ ಗುರು ಬಲ ಬೇಕೇ ಬೇಕು. ಅವರ ಅನುಪಸ್ಥಿಲಿ, ಅವರ ಭಾವ ಚಿತ್ರವೂ ನವಗೆ ಅದೇ ಪ್ರೇರಣೆ ಕೊಡುತ್ತು.
ಕೆಂಪಂಚಿನ ಬೆಳಿ ಪಸ್ತ್ರ ಹಾಸಿದ ಕುರ್ಚಿಲಿ ಶ್ರೀ ಗುರುಗಳ ಭಾವ ಚಿತ್ರ ಸ್ಥಾಪಿಸಿ, ಹೂ ಮಾಲೆ ಹಾಕಿ ಫಲ ಸಮರ್ಪಣೆ ಮಾಡಿದವು ಬೈಲಿನ ಗುರಿಕ್ಕಾರ್ರು. ಶಂಖ ನಾದ ಮತ್ತೆ ಗುರು ವಂದನೆಯೊಟ್ಟಿಂಗೆ ನಮ್ಮ ಸಭಾ ಕಾರ್ಯಕ್ರಮ ಶುರು ಆತು.

ಭದ್ರಂ ಕರ್ಣೇಭಿ ಶೃಣುಯಾಮ ದೇವಾಃ – ಶಾಂತಿ ಮಂತ್ರವ ಎಲ್ಲರೂ ಒಟ್ಟಿಂಗೆ ಹೇಳಿ ಅಪ್ಪಗ ಅಲ್ಲಿ ಒಂದು ಧನಾತ್ಮಕ ಶಕ್ತಿಯ ಸಂಚಲನ ಆತು.
ಕಾರ್ಯಕ್ರಮದ ಕಾರ್ಯ ಸೂಚಿಯ ಗುರಿಕ್ಕಾರ್ರು ಸಭೆಗೆ ತಿಳಿಶಿದವು.
ನೆರೆಕರೆಯವೆಲ್ಲರೂ ಇಲ್ಲಿ ಬಂದು ಸೇರಿದ್ದಿ. ಇದು ನಿಂಗಳ ಮನೆಯ ಹಾಂಗೆ. ಎಲ್ಲರೂ ಒಂದೇ ಮನೆಯವರ ಹಾಂಗೆ ಇದ್ದುಗೊಂಡು ಕಾರ್ಯಕ್ರಮವ ಮುಂದುವರುಸುವೊ” ಹೇಳಿ ಆತ್ಮೀಯವಾಗಿ ಸ್ವಾಗತ ಮಾಡಿದ್ದು ನಮ್ಮ ಯೇನಂಕೂಡ್ಲು ಕಿಶೋರಣ್ಣ ಅವನ ಯೇವತ್ರಾಣ ನೆಗೆಯೊಟ್ಟಿಂಗೆ.
ಹಳೆಮನೆ ಅಣ್ಣನೂ, ಚುಬ್ಬಣ್ಣನೂ  ಕೆಮರಾ ಹಿಡ್ಕೊಂಡರೆ, ಹಳೆಮನೆ ತಮ್ಮ ವೀಡ್ಯೋ ಕೆಮರಾ ಹಿಡ್ಕೊಂಡು ತಯಾರಾದವು.

~

ಬೈಲಿನ ನೆರೆಕರೆಯವೆಲ್ಲಾ ಸೇರಿದ್ದು ನೋಡಿ ಗುರಿಕ್ಕಾರ್ರಿಂಗೆ ತುಂಬಾ ಕೊಶಿ ಆತು.
ಅವರ ಎಡ ಹೊಡೆಲಿ ಅಜ್ಜಕಾನ ಭಾವ. (ಕೂದ್ದು ಎಡ ಹೊಡೆ ಆದರೂ, ಬಲಗೈ ಬಂಟನೇ ಸರಿ) ಕೂದಲ್ಲಿಂದಲೇ ಎಲ್ಲರನ್ನೂ ಒಂದರಿ ನೋಡಿ ಮಂದಸ್ಮಿತರಾಗಿ, ಶಾಲಿನ ಒಂದರಿ ಸರಿ ಮಾಡಿಕ್ಕಿ ಮಾತಾಡ್ಲೆ ಸುರು ಮಾಡಿದವು.
ಒಪ್ಪಣ್ಣನ ಬೈಲು ಹೇಳಿರೆ ಅದು ಒಬ್ಬನೇ ಅವನ ಶುದ್ದಿಗಳ ಮಾತ್ರ ಹೇಳ್ತ ಬೈಲು ಅಲ್ಲ. ಅಲ್ಲಿ ಆರು ಬೇಕಾರೂ ಅವರವರ ಶುದ್ದಿಯ ಅನುಭವಂಗಳ ಹೇಳಲೆ ಅಕ್ಕು. ಅನುಭವಂಗಳ ಹಂಚಿಯೊಂಡು ಎಲ್ಲರೂ ಒಟ್ಟಿಂಗೆ ಬೆಳೆಕು, ಬೈಲೂ ಬೆಳೆಕು ಹೇಳುವದೇ ಇಲ್ಲಿಯ ಆಶಯ.
ಸಾರಡಿ ತೋಡು, ಒಂದು ತರವಾಡು ಮನೆ. ಅಲ್ಲಿ ಹೆರಿ ತಲೆಯವು, ಆಗಿ ಹೋದವು ವೆಂಕಪ್ಪಜ್ಜ-ಸರಸಜ್ಜಿ, ಅವರ ಮಗ ಶಂಭಜ್ಜ-ಕಾಂಬಜ್ಜಿ. ಈಗ ಇಪ್ಪದು ಶಂಭಜ್ಜನ ಮಗ ರಂಗ ಮಾವ, ಪಾತಿ ಅತ್ತೆ ಸಂಸಾರ, ಅವರ ಮಗ ಶಾಂ ಭಾವ ವಿದ್ಯ ಅಕ್ಕ ಸಂಸಾರ, ಇವರ ಸುತ್ತ ಸುತ್ತುವ ಬೈಲಿನ ಕತೆಗೊ. ಇವರೊಟ್ಟಿಂಗೆ ಅಜ್ಜಕಾನ ಭಾವ, ದೊಡ್ಡಬಾವ, ಆಚಕರೆ ಮಾಣಿ, ಶುಭತ್ತೆ, ಅವರ ಮನೆ ರೋಸಿ, ರೂಪತ್ತೆ ಅವರ ಕಾರು ಎಲ್ಲವೂ ಇದ್ದು ಬೈಲಿಲ್ಲಿ.
2009 ಜನವರಿ ಒಂದರಂದು oppanna.blogspot ಇತ್ತಿದ್ದದು ಸರೀ ಒಂದು ವರ್ಷ ಮುಗಿವಗ ಒಪ್ಪಣ್ಣ ಕೇಳಿದ° ಈ ಶುದ್ದಿ ಹೇಳುವದರ ನಿಲ್ಲುಸುವದೋ ಅಲ್ಲ ಮುಂದುವರಿಸಿದವೋ ಹೇಳಿ

ಅಷ್ಟಪ್ಪಗ ಬಂದದು ನಮ್ಮ ಗುರುಗಳ ಆದೇಶ  “ಬರವದರ ನಿಲ್ಲುಸುಲೆಡಿಯ.. ಇದೆಂಗಳ ಉಪದೇಶ ಅಲ್ಲ ಆದೇಶ..! ಆತಾ..?”
ಶಂಭಜ್ಜನ ಪಳಮೆ ಭಾಷೆಲಿ ಹೇಳುವದಾದರೆ, ಒಪ್ಪಣ್ಣಂಗೆ ಆಡಿಂಗೆ ಆನೆಯ ಬಲ ಬಂದ ಹಾಂಗೆ ಆತು.
2009 ರಲ್ಲಿ 21,000 ಸರ್ತಿ ಜೆನಂಗೊ ಬ್ಲಾಗಿನ ಪುಟಂಗಳ ತಿರುಗಿಸಿದವು.

ಮುಂದಾಣ ಅಲೋಚನೆ ಪೂರ್ಣರೂಪಗೊಂಡು 2010 ಜನವರಿ ಒಂದಕ್ಕೆ ಅಪ್ಪಗ oppaanna.com ಹೇಳ್ತ ಸೈಟ್ ಬಿಡುಗಡೆ ಆತು.
ಓದುವವು ಮತ್ತೆ ಒಪ್ಪ ಕೊಡುವವರ ಸಂಖ್ಯೆಯೂ ಹಾಂಗೇ ಅಭಿವೃದ್ಧಿ ಆತು. ವರ್ಷದ ಅಕೇರಿ ಅಪ್ಪಗ ಎರಡೂವರೆ ಲಕ್ಷಂದಲೂ ಹೆಚ್ಚು ಸರ್ತಿ ಜೆನಂಗೊ ಪುಟ ತಿರುಗಿಸಿದ್ದವು.
ಎಲ್ಲೊರೂ ಅವರವರ ಯೋಚನೆಗಳ, ಅವಕ್ಕವಕ್ಕೆ ತಿಳುದ ವಿಷಯಂಗಳ ಚೆಂದಲ್ಲಿ ಬರಕ್ಕೊಂಡು ಬಂದು ಬೈಲಿನ ಸಾಹಿತ್ಯ ಕೃಷಿಲಿ ಒಳ್ಳೆ ಫಲಬಪ್ಪಾಂಗೆ ಮಾಡಿದ್ದವು.
530 ರಷ್ಟು ಶುದ್ದಿಗೊ (ಲೇಖನಂಗೊ), 7,700 ರಷ್ಟು ಒಪ್ಪಂಗೊ ಬಯಿಂದು ಹೇಳಿರೆ, ಬೈಲು ಎಷ್ಟು ಒಳ್ಳೆ ಹೆಸರು ತೆಕ್ಕೊಂಡಿದು ಹೇಳಿ ಗೊಂತಾವ್ತು.

ಸಂಕೊಳಿಗೆ ಬಾಬಣ್ಣ, ಅಜ್ಜಕಾನ ಭಾವ, ಒಪ್ಪಣ್ಣ ಎಲ್ಲರೂ ಸೇರಿ  ಬೈಲಿಂಗೆ ಒಂದು ಹೊಸಾ ಅಂಗಿ ಕೊಟ್ಟು, ಹೊಸ ರೂಪಲ್ಲಿ (ಈಗ ನಾವು ನೋಡ್ತ) ತಂದವು 2011 ರ ಜನವರಿಲಿ.
ಹೊಸತ್ತು ಅಂಗಿಲಿ ಬೈಲಿನ ನೋಡ್ಲೆ ಶುರು ಶುರುವಿಂಗೆ ಕೆಲವು ಜೆನಂಗೊಕ್ಕೆ ಹೊಂದಾಣಿಕೆ ಆಗದ್ದರೂ ಈಗ ಇದುವೇ ಚೆಂದ ಹೇಳಿ ಹೇಳ್ತಾ ಇದ್ದವು.
ಸದ್ಯಕ್ಕೆ ಬೈಲಿಲ್ಲಿ ತಿರುಗುವವರ ಸಂಖ್ಯೆ ದಿನಕ್ಕೆ ಎರಡುಸಾವಿರಂದ ಎರಡುವರೆ ಸಾವಿರದ ವರೆಗೆ.

ಇಷ್ಟರವರೆಗೆ ಇಲ್ಲಿ ಸೇರಿದ ಕೆಲವು ಜೆನಂಗೊ ಮುಖತಃ ಕಂಡು ಮಾತಾಡಿದ್ದು ಇರ.
ಒಂದರಿ ಎಲ್ಲರೂ ಅವರವರ ಗುರ್ತ ಪರಿಚಯ ಮಾಡಿಸಿ ಕೊಡಿ
” ಹೇಳಿ ಗುರಿಕ್ಕಾರ್ರು ಕೇಳಿಯೊಂಡು ಅವರ ಮಾತಿಂಗೆ ವಿರಾಮ ಹಾಕಿದವು.

~

ಅಜ್ಜಕಾನ ಭಾವನ ಸುಪರ್ದಿಲಿ ಆದ ಸ್ವ -ಪರಿಚಯ ಕಾರ್ಯಕ್ರಮಲ್ಲಿ ಎಲ್ಲರೂ ಅವರವರ ಅನುಭವಂಗಳನ್ನೂ, ಬೈಲಿಂಗೆ ಒಳ ಬಂದ ಬಗೆ ಹೇಂಗೆ, ಅಲ್ಲಿ ಅವಕ್ಕೆ ಎಂತ ಸಿಕ್ಕಿದ್ದು ಹೇಳ್ತನ್ನೂ ಹೇಳಿಯೊಂಡವು.

ವೈವಿಧ್ಯಮಯ ಲೇಖನಂಗಳ ಓದಿ ಸಾಮಾನ್ಯ ಜ್ಞಾನ ಹೆಚ್ಚು ಅವ್ತು, ಬರೆತ್ತವಕ್ಕೆ ಒಂದು ಒಳ್ಳೆ ವೇದಿಕೆ ಆವ್ತು, ಸಮಾಜಲ್ಲಿ ಒಬ್ಬ ವೆಕ್ತಿ ಆಗಿ ಗುರುತಿಸಿಲ್ಪಡ್ತ, ಲೇಖನ ಬರವಲೆ ಬೇಕಾದ ತಯಾರಿ ಮಾಡುವಾಗ, ಹಲವಾರು ವಿಶಯಂಗಳ ಓದಿ ತಿಳ್ಕೊಂಡು ಅವನ ಜ್ಞಾನವೂ ಹೆಚ್ಚು ಆವ್ತು, ಮರತ್ತು ಹೋದ ನಮ್ಮ ಹಳೆಯ ಭಾಷೆಯ ನೆಂಪು ಮಾಡಿ ಕೊಡ್ತು, ನಮ್ಮ ಸಂಸ್ಕೃತಿಯ ತಿಳಿಶಿ ಕೊಡ್ತು – ಹೀಂಗೇ ಎಲ್ಲಾ ಬಗೆಯ ಅಭಿಪ್ರಾಯಂಗೊ ಕೇಳಿ ಬಂತು.

ಬೈಲಿಲ್ಲಿ ಇಂದು ಅನಿವಾರ್ಯ ಕಾರಣಂದ ಸೇರಲೆ ಎಡಿಯದ್ದ ಮುಳಿಯ ರಘು (ಮುಳಿಯಗೊಲಿದ ಭಾಮಿನಿ),ದೊಡ್ಡ ಮಾವ, ಕಾಂತಣ್ಣ, ನೀರ್ಕಜೆ ಅಪ್ಪಚ್ಚಿ, ಉಂಬೆ ಮಾವ, ಚೆನ್ನ ಬೆಟ್ಟಣ್ಣ, ಚೆನ್ನೈ ಭಾವ, ಕೇ.ಜಿ ಮಾವ, ಡಾಕುಟ್ರಕ್ಕ, ಡಾ| ಮಹೇಶ, ಶಾಂತತ್ತೆ, ಗೋಪಾಲಣ್ಣ, ಪುಟ್ಟ ಭಾವ, ಪೆರ್ಲದಣ್ಣ, ಗೀತತ್ತೆ, ದೀಪಕ್ಕ – ಮತ್ತೂ ಒಳುದ ಬೈಲಿನ ಎಲ್ಲರನ್ನೂ ಗುರಿಕ್ಕಾರ್ರು ನೆಂಪು ಮಾಡಿದವು.
ಅವರ ಕೊಡುಗೆಯ ಬಗ್ಗೆ ಮೆಚ್ಚಿ ಮಾತಾಡಿದವು.
ಇರ್ತಲೆ (palindromes) ಎಲ್ಲಿಯಾರೂ ಸಿಕ್ಕುತ್ತೋ ನೋಡ್ಲೆ ಸುಭಗರು ಒಂದರಿ ಜಾಲಿನ ಕೊಡೀಂಗೆ ಹೋಗಿ ಬಂದವು

ಬೇಶಿಗೆಯ ಧಗೆಯ ಕಮ್ಮಿ ಮಾಡ್ಲೆ, ಅಂಬಗಂಬಗ ಸರ್ಬತ್ತು, ಮಸಾಲೆ ಮಜ್ಜಿಗೆಯ ಬೆಲಕ್ಕಿದವು ಮನೆ ಯೆಜಮಾನ್ರು.
ಕೇರಳಲ್ಲಿ ವೋಟಿನ ಅಬ್ಬರ.
ಇದರ ನಿರ್ವಹಣೆಗೆ ನಮ್ಮ ಗುಣಾಜೆ ಮಾಣಿ ಊರಿಲ್ಲಿಯೇ ಇತ್ತಿದ್ದವ°, ಮೊಬೈಲಿಲ್ಲಿ ಮಾತಾಡಿಯೊಂಡೇ ಬೈಕಿಂದ ಕೆಳ ಇಳುದ. ವೋಟಿನ ಕೆಲಸದ ತೆರಕ್ಕಿಲ್ಲಿಯೂ ಒಂದು ಘಳಿಗೆ ಪುರುಸೊತ್ತು ಮಾಡಿಂಡು ಬಂದವ° ಅರದ್ದೋ ಫೋನ್ ಬಂತು ಹೇಳಿ ರೆಜ ಬೇಗವೇ ಬೈಕ್ ಹತ್ತಿ ಹೆರಟ°.

~

ನಮ್ಮ ಈ ಪರಿಚಯ ಕಾರ್ಯ ಆವ್ತಾ ಇದ್ದ ಹಾಂಗೇ ಅಲ್ಲಿಗೆ ಬಂದವು ದೂರದ ಸಾಗರಂದ ವಿದ್ವಾನಣ್ಣ. ಅವರ ವಿದ್ವತ್ ಹೇಳಿರೆ ಜ್ಞಾನ ಸಾಗರದ ಹಾಂಗೆ.
ಅಲ್ಲಿಂದ ಮಥಿಸಿ ನಾವು ಬೇಕಾದ್ದರ ತೆಕ್ಕೊಳೆಕ್ಕು. ಬೈಲಿಲ್ಲಿ ಇಪ್ಪ ಪ್ರೀತಿಯೇ ಅವರ ಅಷ್ಟು ದೂರಂದ ಇಲ್ಲಿಗೆ ಎಳಕ್ಕೊಂಡು ಬಂದದು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.

~

ಪ್ರಾಸ್ತಾವಿಕವಾಗಿ ಮಾತಾಡಿದ ವಿದ್ವಾನಣ್ಣ, ಬೈಲಿನ ಕಾರ್ಯ ಯೋಜನೆಗೆಳ ಬಗ್ಗೆ ಒಳ್ಳೆ ಮಾತುಗಳ ಹೇಳಿದವು.
ಒಪ್ಪಣ್ಣ ನೋಡಿದ್ದೆಯಾ ಹೇಳಿ ಶ್ರೀ ಗುರುಗೊ ಒಂದರಿ ಎನ್ನ ಕೇಳಿದವು. ಎಂಗಳಲ್ಲಿ ಈ ಶಬ್ದ ಪ್ರಚಲಿತವಾಗಿ ಇಲ್ಲದ್ದ ಕಾರಣ ಒಂದು ಸರ್ತಿ ಎನಗೆ ಅದು ಎಂತದು ಹೆಳಿಯೇ ಅರ್ಥ ಆಯಿದಿಲ್ಲೆ. ಮತ್ತೆ ಅವೇ ಎನಗೆ ಓದಿ ಹೇಳಿದವು. ಸುರು ಸುವಿಂಗೆ ಓದಿ ಅರ್ಥ ಮಾಡ್ಲೆ ಭಾಷೆ ತೊಡಕಾದರೂ ಈಗ ಸರಿಯಾಗಿ ಅರ್ಥ ಆವ್ತು. ಭಾಷೆ ಸಂಸ್ಕೃತಿ ಒಟ್ಟೊಂಟಿಂಗೆ ಹೋವ್ತು. ಭಾಷೆಯ ಒಳುಶಿರೆ ಸಂಸ್ಕೃತಿಯೂ ಒಳುದ ಹಾಂಗೆ. ಒಂದು ಸಂಘ ಸಂಸ್ಥೆ ಮಾಡ್ತಕ್ಕಿಂತ ಹೆಚ್ಚಿನ ಕೆಲಸ ಈ ಒಪ್ಪಣ್ಣನ ಬೈಲು ಮಾಡ್ತಾ ಇದ್ದು. ಬೈಲಿಲ್ಲಿ ಸೃಷ್ಟಿ ಮತ್ತೆ ಸ್ಥಿತಿ ಆಯಿದು. ಲಯಕ್ಕೆ ಆರೂ ಕೈ ಹಾಕದ್ದೆ ಇರಲಿ.  ಬೈಲು ಇನ್ನೂ ಬೆಳೆಯಲಿ. ಸಮಾಜಕ್ಕೆ ಒಳ್ಳೆ ಕಾರ್ಯಂಗಳ ಮಾಡಲಿ ಹೇಳಿ ಹಾರೈಸಿದವು.

~

ಮಾಷ್ಟ್ರು ಮಾವನ ಬೈಲಿಲ್ಲಿ ಗುರ್ತ ಇಲ್ಲದ್ದವು ಅರೂ ಇರವು. ಒಂದು ವಿಷಯವ ತೆಕ್ಕೊಂಡರೆ ಅದರ ಸಂಪೂರ್ಣ ವಿವರಂಗಳ ಮಕ್ಕೊಗೆ ಪಾಠ ಮಾಡ್ತ ಹಾಂಗೆ ಹೇಳುವದು ಅವರ ಕ್ರಮ.
ಎಲ್ಲರಿಂಗೂ ಹೇಳಿದ್ದು ಎಂತ ಹೇಳಿ ಅರ್ಥ ಆಯೆಕ್ಕು ಹೇಳುವದೇ ಅವರ ಆಶಯ. ತೆಕ್ಕೊಂಬವ ಇಲ್ಲದ್ರೆ ಕೊಡುವವಂಗೆ ಎಂತ ಕೆಲಸ ಹೇಳಿ ಒಂದು ಲೇಖನ ಬರದಿತ್ತಿದ್ದವು.
ಕಿಂ ಕುರ್ವಂತಿ ವಕ್ತಾರಃ ಯದಿ ಶ್ರೋತಾನ ವಿದ್ಯತೇ (ಕೇಳ್ತವೇ ಇಲ್ಲದ್ರೆ ಭಾಷಣಕಾರ ಎಂತ ಮಾಡುಗು?) ಹೇಳಿ ಕೇಳಿದ್ದವು ಅಲ್ಲಿ. ಇದು ಅವರ ಅನುಭವದ ಮಾತು.
ಇಲ್ಲಿ ಅವಕ್ಕೆ ಗೊಂತಿದ್ದು ಎಲ್ಲರೂ ಕೇಳಲೇ ಬಂದದು ಹೇಳಿ. ಬೈಲು ಶಬ್ದವ ವಿಸ್ತಾರ ಮಾಡ್ತಾ ಹೋದವು. ಇಷ್ಟೊಂದು ವಿಶಯ ಇದ್ದೋ ಹೇಳಿ ಗೊಂತಾದ್ದೇ ಅಂಬಗ.

ಬೈಲು ಹೇಳಿರೆ ಜೀವನಕ್ಕೆ ಆಶ್ರಯ ಕೊಡುವ ಜಾಗೆ. ಗಂಗಾ ಸಿಂಧೂ ನದೀ ಬಯಲಿಲ್ಲಿಯೇ ನಾಗರೀಕತೆ ಹುಟ್ಟಿ ಬೆಳದ್ದು. ಬೈಲು ಹೇಳ್ತ ಶಬ್ದಕ್ಕೆ ಯಾವುದೇ ಅಡೆ ತಡೆ ಇಲ್ಲದ್ದ ಜಾಗೆ ಹೇಳಿಯೂ ಅರ್ಥ ಇದ್ದು. ಇಲ್ಲಿ ವಿಶಾಲ ಅವಕಾಶ ಇದ್ದು. ಭೌಗೋಲಿಕವಾಗಿ ಎಲ್ಲರೂ ದೂರ ದೂರ ಇದ್ದರೂ ನಾವೆಲ್ಲಾ ನೆರೆಕರೆಲಿ ಇದ್ದು ಹೇಳಿ ತಿಳ್ಕೊಂಡು, ನಮ್ಮಲ್ಲಿಪ್ಪ ಪ್ರತಿಭೆಯ ಒಳುದವರೊಟ್ಟಿಂಗೆ ಹಂಚೆಕ್ಕು. ಬರವಲೆ ಅರಡಿತ್ತಿಲ್ಲೆ ಅಥವಾ ಅವ° ಬರದ್ದು ಲಾಯಿಕ ಆವ್ತು, ಎನಗೆ ಹಾಂಗೆ ಅರಡಿತ್ತಿಲ್ಲೆ ಹೇಳುವದು ತಪ್ಪು ಕಲ್ಪನೆ. ದಿನ ನಿತ್ಯದ ಡೈರಿ ಬರವಲೆ ಸುರು ಮಾಡಿ. ಇದೇ ಅಭ್ಯಾಸವ ಮುಂದುವರಿಸಿಂಡು ಹೋದರೆ ನಿಧಾನಕೆ ಲೇಖನಂಗಳನ್ನೂ ಬರವಲೆ ಎಡಿಗು ಹೇಳಿ ಸೂತ್ರ ಹೇಳಿ ಕೊಟ್ಟವು.

ಹವ್ಯಕ ಸಂಸ್ಕೃತಿಯ ಒಳುಶಿ ಬೆಳೆಶೆಕ್ಕು. ಹೆಚ್ಚು ಹೆಚ್ಚು ಜೆನಂಗೊ ಬೈಲಿನ ಸಂಪರ್ಕಕ್ಕೆ ಬರೆಕು. ಬೈಲು ಇನ್ನೂ ವಿಸ್ತಾರವಾಗಿ ಬೆಳೆಕು.
ಎಲ್ಲರಿಂದಲೂ ಈ ಬೈಲಿಂಗೆ ಸಂಪೂರ್ಣ ಸಹಕಾರ ಸಿಕ್ಕೆಕ್ಕು ಹೇಳಿ ಹಾರೈಸಿ ಮಾತಿಂಗೆ ವಿರಾಮ ಹಾಕಿದವು.

ಮಾಷ್ಟ್ರುಮಾವನ ಪಾಟಂಗೊ (ಧ್ವನಿ) ಇಲ್ಲಿದ್ದು:

ಮಾಷ್ಟ್ರುಮಾವನ ಪಾಟ | Oppanna.com   ಬೈಲಿನ ಮಿಲನ; ಯೇನಂಕೂಡ್ಳು

~

ಊಟಕ್ಕೆ ಕಾದೊಂಡು ಇತ್ತಿದ್ದ ಸಮಯ ಬಂತು.
ಪಡು ಜೆಗಿಲಿಲ್ಲಿ ಕೊಡಿ ಬಾಳೆಲೆ ಮಡುಗಿ, ಕೂಬಲೆ ಹಸೆ ಹಾಕಿದವು. ಮನೆ ಯೆಜಮಾನ್ರು (ವಿಜಯ ಕುಮಾರಪ್ಪಚ್ಚಿ) ಮತ್ತೆ ಚಿಕ್ಕಮ್ಮ ಖುದ್ದಾಗಿ ಬಡುಸಲೆ ನಿಂದವು.
ನಮ್ಮ ಚುಬ್ಬಣ್ಣ, ಅಜ್ಜಕಾನ ಭಾವ, ಕೊಳಚ್ಚಿಪ್ಪು ಭಾವ, ಕೆಪ್ಪಣ್ಣ, ದೊಡ್ಡ ಭಾವ , ಕಿಶೋರಣ್ಣನೂ ಸೇರಿಯೊಂಡವು.

ಅಡಿಗೆ ಅಜ್ಜನ ಅಡಿಗೆ ಹೇಳಿರೆ ನಳ ಪಾಕವೇ ಸರಿ.
ಗುಜ್ಜೆ ತಾಳು, ಸೌತೆ ಬೇಳೆ ಬೆಂದಿ, ಮೆಣಸು ಕಾಯಿ, ಮಾಂಬಳ ಗೊಜ್ಜು, ಹಲಸಿನ ಹಪ್ಪಳ, ಸಾರು, ಕೊದಿಲು, ಮೇಲಾರ, ಬಾಳೆಹಣ್ಣಿನ ಪ್ರಥಮ, ಹೋಳಿಗೆ, ಮೆಡಿ ಉಪ್ಪಿನ ಕಾಯಿ, ಮಸಾಲೆ ಮಜ್ಜಿಗೆ.
ಎಲ್ಲವೂ ಒಂದಕ್ಕೊಂದು ಸ್ಪರ್ಧೆಲಿ ನಿಂದ ಹಾಂಗೆ ಇತ್ತಿದ್ದು. ಈ ಸಮಯಲ್ಲಿ ಹಲಸಿನ ಬೇಳೆ ಸಂಪಾದಿಸಲೆ ಕಿಶೋರಣ್ಣ ಬಂಙ ಬಂದಿಕ್ಕು ಹೇಳ್ತಲ್ಲಿ ಸಂಶಯವೇ ಇಲ್ಲೆ.
ಸುವರ್ಣಿನಿ ಅಕ್ಕನ ವಿಶೇಷ ಪಾಕ ಅಪ್ಪೆಹುಳಿ ಹೆಚ್ಚಿನವಕ್ಕೂ ಹೊಸತ್ತೇ.
ಕೊಶೀ ಆತು. ಇಷ್ಟೆಲ್ಲಾ ಇದ್ದು ಹೇಳಿ ಗೊಂತಾಗಿದ್ದರೆ ಆನು ಉದಿಯಪ್ಪಗ ತಿಂಡಿ ಕಾಪಿ ತೆಕ್ಕೊಳ್ತಿತಿಲ್ಲೆ ಹೇಳಿ ಮೆಲ್ಲಂಗೆ ಹೇಳಿದೆ ಹತ್ತರೆ ಕೂದ ಮಾಡಾವು ಗಣೇಶ ಮಾವನತ್ರೆ.
ಶ್ರೀ ಅಕ್ಕ ಉದಿಯಪ್ಪಗ ಕಾಪಿ ತಿಂಡಿಗೆ ಬಾರದ್ದು ಇದಕ್ಕೋ ಹೇಳಿ ಸಣ್ಣ ಸಂಶಯವೂ ಬಂತು. ಚೂರ್ಣಿಕೆಗೆ ತೊಂದರೆ ಆಯಿದಿಲ್ಲೆ.
ದೊಡ್ಡಣ್ಣ, ಒಪ್ಪಣ್ಣ, ವೇಣೂರಣ್ಣ, ಶ್ರೀ ಅಕ್ಕನ ಚೂರ್ಣಿಕೆಗೊ ಒಂದಾದ ಮತ್ತೆ ಒಂದು ಬಪ್ಪಲೆ ಸುರು ಆತು.
ಅಡೂರು ಜಾತ್ರೆಗೆ ಹೋಗಿ ಶೀತ ಆದ ಕಾರಣ ಯೇವತ್ರಾಣ ಹಾಂಗೆ ಹೋಳಿಗೆ ತಿಂಬಲೆ ಎಡಿಗಾಯಿದಿಲ್ಲೆ ಹೇಳಿ ಮೆಲ್ಲಂಗೆ ಚುಬ್ಬಣ್ಣನ ಹತ್ರೆ ಹೇಳಿದ ದೊಡ್ಡ ಭಾವ.
ಊಟ ದಕ್ಷಿಣೆ ಸಿಕ್ಕಿದ್ದಿಲ್ಲೆ ಹೇಳಿ ಬೋಸ ಭಾವನೂ ನೆಗೆ ಮಾಣಿಯೂ ಮಾತಾಡಿಯೊಂಡವು.
ಬೆಶಿಲಿಂಗೆ ಮನುಗುವದು ಹೇಳಿ ಮಾಡಿರೆ, ಪಕ್ಕಕ್ಕೆ ಎಚ್ಚರಿಗೆ ಆಗ ಹೇಳಿ ಆ ಸಾಹಸ ಆರೂ  ಮಾಡಿದ್ದವಿಲ್ಲೆ

~

ಸುನಿಲಣ್ಣನ ಪರಿಚಯ ಕೆಲವು ಜೆನಂಗೊಕ್ಕೆ ಇರ.
ನಮ್ಮ ಊರಿನವೇ ಆದ ಕೆಜಂಬಾಡಿ ಸುಬ್ರಹ್ಮಣ್ಯ ಭಟ್ಟರ ಅಳಿಯ; ನಮ್ಮ ಮಾಷ್ಟ್ರು ಮಾವನ ಸಣ್ಣ ಮಗನ ದೊಡ್ಡ ಚೆಂಙಾಯಿ.
ಸಾಮಾಜಿಕ ಕಳಕಳಿ ಇಪ್ಪವು. ಭಾಷೆ, ದೇಶ, ಸಂಸ್ಕೃತಿ, ಬಗ್ಗೆ ತುಂಬಾ ಅಭಿಮಾನ ಇಪ್ಪವು.
ಸಮಾಜಕ್ಕೆ ತನ್ನಿಂದ ಎಂತಾರೂ ಕೊಡುಗೆ ಇರೆಕ್ಕು ಹೇಳಿ ಬಯಸಿ ಕಾರ್ಯ ಪ್ರವೃತ್ತರಾದವು. ಸಂಘದ ಕುವರ.

ಒರಕ್ಕು ತೂಗುತ್ತ ಸಮಯಲ್ಲಿ ಎಲ್ಲರನ್ನೂ ಜಾಗೃತರನ್ನಾಗಿ ಮಾಡಿದ್ದು ನಮ್ಮ ಈ ಸುನಿಲಣ್ಣ.
ಬೌದ್ಧಿಕವಾಗಿಯೂ ಜಾಗೃತರಪ್ಪ ರಸ ಪ್ರಶ್ನೆ ಮತ್ತೆ ಆಟಂಗಳ ತಯಾರು ಮಾಡಿ ತಂದದು ಅವಕ್ಕೆ ಬೈಲಿನ ಬಗ್ಗೆ ಎಷ್ಟು ಆಸಕ್ತಿ ಇದ್ದು ಹೇಳಿ ತೋರ್ಸುತ್ತು.
ಲೇಪ್ಟೋಪಿಲ್ಲಿ ರಸ ಪ್ರಶ್ನೆಗಳ ತಯಾರು ಮಾಡಿ, ಪ್ರೊಜೆಕ್ಟರ್ ತಂದು, ಅದರಲ್ಲಿ ಎಲ್ಲರನ್ನೂ ತೊಡಗಿಸಿಗೊಂಡವು.

ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ರಸ ಪ್ರಶ್ನೆಲಿ ಉತ್ತರ ಹೇಳ್ಲೆ ಬಂಙ ಬಪ್ಪದು ನೋಡುವಾಗ ನಾವೂದೇ ಬೋಸಂಗಳೇ ಹೇಳಿ ಆತು.
ಕೋಟಿ ಗಟ್ಲೆ ಪೈಸೆ ಮಾಡಿದ ತೆಂಡುಲ್ಕರ್, ಧೋನಿ, ಇಲ್ಲದ್ರೆ ಸಯ್ಯದ್ ಅಫ್ರಿದಿಯ ಪಟವ ಒಂದು ಸಣ್ಣ ಅಂಶ ಕಂಡರೂ ಗುರುತಿಸಲೆ ಎಡಿಗಾವ್ತು, ಆದರೆ ನೂರಾರು ಕೋಟಿ ಜೆನಂಗೊ ಈಗ ಅನುಭವಿಸುತ್ತಾ ಇಪ್ಪ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಇಡೀ ಪಟ ತೋರಿಸಿರೂ ಗುರುತಿಸಲೆ ಎಡಿತ್ತಿಲ್ಲೆ ಹೇಳುವಾಗ ನಾವು ಇನ್ನೂ ಜಾಗೃತರಾಯಿದಿಲ್ಲೆ ಹೇಳ್ತ ಅನುಭವ ಆತು.
ಬೋಸ ಭಾವಂಗೆ ಎನ್ನಿಂದ ದೊಡ್ಡ ಬೋಸಂಗೊ ಇಲ್ಲಿ ಇದ್ದವು ಹೇಳಿ ಗೊಂತಾತಡ.
ಸುನಿಲಣ್ಣಂಗೆ ಎಷ್ಟು ಅಭಿವಂದನೆ ಹೇಳಿರೂ ಸಾಲ ಹೇಳಿ ಆತು.

ಇವರ ಕಾರ್ಯಕ್ರಮಕ್ಕೆ ಸಹಾಯಕ್ಕೆ ನಿಂದವು ನಮ್ಮ ಕೊಳಚ್ಚಿಪ್ಪು ಭಾವ ಮತ್ತೆ ಮಾಷ್ಟ್ರು ಮಾವನ ಸಣ್ಣ ಮಗ. ಇಂದ್ರಾಣ ವಿಶೇಷ ಅತಿಥಿ ಆಗಿ ಪ್ರಕೃತಿ ಮಾತೆ ಕಳ್ಸಿ ಕೊಟ್ಟ ಮಳೆಯ ಆಗಮನ ಇದೇ ಹೊತ್ತಿಂಗೆ ಅನಿರೀಕ್ಷಿತವಾಗಿ ಬಂದು ಶುಭವ ಕೋರಿತ್ತು.
ರಸಪ್ರಶ್ನೆಲಿ ಉತ್ತರ ಕೊಟ್ಟವಕ್ಕೆ ಬಹುಮಾನ ವಿತರಣೆ ಕೂಡಾ ಅಲ್ಲಿಯೇ ಮಾಡಿ ಆತು.
ಇದರೆಡೆಕ್ಕಿಲಿ ನಮ್ಮ ಬೋಸಭಾವನೂ ನೆಗೆ ಮಾಣಿಯೂ ಅಲ್ಲಿಯಾಣ ನಾಯಿಯ ಬಾಯಿಗೆ ಕೋಲು ಹಾಕಿ ಅದರಿಂದ ಬೈಸಿಗೊಂಡು ಚಪ್ಪೆ ಮೋರೆ ಮಾಡಿಂಡು ಬಂದವು.

~

ಊಟ, ಆಟ ಕಳುದ ಮತ್ತೆ, ಬೈಲಿಲ್ಲಿ ನಮ್ಮ ಮುಂದಾಣ ಕಾರ್ಯಯೋಜನೆ ಬಗ್ಗೆ ಗುರಿಕ್ಕಾರ್ರ ನೇತೃತ್ವಲ್ಲಿ ಸಭೆ ಸುರು ಆತು.
ಬೈಲಿನದ್ದೇ ಆದ ಒಂದು “ಪ್ರಕಾಶನ” ವಿಭಾಗ ಸುರು ಮಾಡುವ ಬಗ್ಗೆ, ವಿದ್ಯಾರ್ಥಿಗೊಕ್ಕೆ “ಅಕ್ಷಯನಿಧಿ” ಸ್ಥಾಪಿಸುವ ಬಗ್ಗೆ, ಹೊಸ ಲೇಖಕರ ಪರಿಚಯಿಸುವ ಬಗ್ಗೆ, ಚರ್ಚೆ ನೆಡದತ್ತು.
ಹೊಸಬರು ಬೈಲಿಲ್ಲಿ ನೋಂದಣಿಯ ಬಗ್ಗೆ ಚರ್ಚೆಲಿ, ಅವರ ಬಗ್ಗೆ ಹೆಚ್ಚಿನ  ವಿವರ ತಿಳ್ಕೊಂಬದು ಒಳ್ಳೆದು ಹೇಳ್ತ ಸಲಹೆಯೂ ಬಂತು. ಇದಲ್ಲದ್ದೇ ಇನ್ನೂ ಹಲವಾರು ಮಾಹಿತಿಗೊ / ವಿಚಾರಂಗೊ ವಿಮರ್ಶೆಗೆ ಬಂತು.
ಎಲ್ಲರೂ ಇದರಲ್ಲಿ ಅತ್ಯಂತ ಆಸಕ್ತಿ ತೋರಿಸಿ ಭಾಗವಹಿಸಿದವು. ಅವರವರ ಅಬಿಪ್ರಾಯಂಗಳ ಮಂಡಿಸಿದವು.

~

ವಿದ್ವಾನಣ್ಣ ಸಮಾರೋಪ ಭಾಷಣಲ್ಲಿ ಅವರ ಅನಿಸಿಕೆಗಳ ಹಂಚಿಗೊಂಡವು.
ಹವ್ಯಕರ ಭಾಷೆಯ ಉಳಿಶಿ ಬೆಳಶುವದು, ಲೇಖಕರ ಸೃಷ್ಟಿ ಮಾಡುವದು, ಅವಕ್ಕೆ ಪ್ರೋತ್ಸಾಹ ಕೊಟ್ಟು ಅವರನ್ನೂ ಬೆಳಶುತ್ತಾ ಇಪ್ಪದು  ಹೀಂಗೆ ಒಳ್ಳೆ ಕೆಲಸ ಆವ್ತಾ ಇದ್ದು ಈ ಬೈಲಿಲ್ಲಿ. ಮುಂದಿನ ಜನಾಂಗಕ್ಕೆ ನಮ್ಮ ಸಂಸ್ಕೃತಿಯ ನಷ್ಟ ಮಾಡದ್ದೆ ಅವಕ್ಕೆ ತಿಳುಶಿ ಕೊಡುವ ಜವಾಬ್ದಾರಿ ನವಗೆಲ್ಲಾ ಇದ್ದು.
ಪುಸ್ತಕ ಅಥವಾ ಪತ್ರಿಕಾ ಪ್ರಕಾಶನ ಮಾಡಿರೆ ಸಮಾಜಲ್ಲಿ ಎಲ್ಲರಿಂಗೂ ತಲುಪಲೆ ಸಾದ್ಯ ಇದ್ದು. ಇದಕ್ಕೆ ಬೇಕಾದ ಮಾರ್ಗದರ್ಶನ ಆನು ಕೊಡ್ಲೆ ಯಾವತ್ತೂ ತಯಾರು ಇದ್ದೆ.    ನಮ್ಮಲ್ಲಿ ಇಚ್ಛಾ ಶಕ್ತಿ ಮತ್ತೆ ಜ್ಞಾನ ಶಕ್ತಿ ಇದ್ದು. ಕ್ರಿಯಾ ಶಕ್ತಿಯನ್ನೂ  ಸೇರಿಸಿಗೊಂಡು ಎಲ್ಲರೂ ಮುಂದುವರಿಯೆಕ್ಕು. ಸಮಾಜಂದ ನಾವು ಪಡಕ್ಕೊಂಬದು ತುಂಬಾ. ಅದರ ಒಂದಂಶವಾದರೂ ನಾವು ಶ್ರಮ ಪಟ್ಟು ವಾಪಾಸು ಮಾಡೆಕ್ಕು. ಇದಕ್ಕೆ ಎಲ್ಲರ ಸಹಕಾರ ಇರಲಿ. ನಿಂಗೊ ಎಲ್ಲರೂ ಒಟ್ಟಾಗಿ ಮಾಡ್ತಾ ಇಪ್ಪ ಈ ಒಳ್ಳೆ ಕಾರ್ಯಕ್ಕೆ ಅಭಿನಂದನೆಗೊ
ಹೇಳಿ ಅವರ ಮಾತಿಂಗೆ ಪೂರ್ಣ ವಿರಾಮ ಹಾಕಿದವು.
~~

ಬಂದವಕ್ಕೆ ಎಲ್ಲರಿಂಗೂ ಸ್ಮರಣಿಕೆಯಾಗಿ ಬೈಲಿನ ಲಾಂಛನ, ಹವ್ಯಕ ಡಿಕ್ಷನರಿ, ದೃಷ್ಟ-ಅದೃಷ್ಟ ಪುಸ್ತಕ ಮತ್ತೆ ವಿಳಾಸ ಕಾರ್ಡ್ ಮಾಷ್ಟ್ರು ಮಾವನ ಕೈಂದ ಕೊಡಿಸಿ ಆತು.
ಬೈಲಿನ ಬಗ್ಗೆ ಪ್ರೀತಿ ವಿಶ್ವಾಸ ಮತ್ತೆ ಅಭಿಮಾನಂದ ಬಂದ ವಿದ್ವಾನಣ್ಣ ಮತ್ತೆ ಸುನಿಲಣ್ಣಂಗೆ ಯಥೋಚಿತವಾಗಿ ಸನ್ಮಾನ ಮಾಡಿಸಿದವು ಗುರಿಕ್ಕಾರ್ರು.
ಒಂದು ಸೆಸಿ ಬೆಳದು ಮರ ಆವ್ತ ಹಾಂಗೆ ಬೈಲು ಬೆಳೆಕು ಹೇಳ್ತರ ಸಾಂಕೇತಿಕವಾಗಿ, ಮನೆಯವಕ್ಕೆ ಪನ್ನೇರಳೆ ಸೆಸಿಯ ಬೈಲಿನೋರು ಕೊಟ್ಟವು.
ಶ್ರೀ ರಾಮ ತಾರಕ ಮಂತ್ರ, ಶಾಂತಿ ಮಂತ್ರ ಮತ್ತೆ ಶಂಖ ನಾದ ಮಾಡಿ ಸಭೆಯ ಮುಕ್ತಾಯ ಮಾಡಿ ಆತು.
ಮುಂದಾಣ ಸಭೆ ಎಂಗಳಲ್ಲಿ ಮಾಡ್ಲಕ್ಕು ಹೇಳಿ ಸರ್ಪಮಲೆ ಮಾವನೂ, ದೊಡ್ಡ ಭಾವನೂ ಆಹ್ವಾನ ಕೊಟ್ಟವು.

~

ನೀರುಳ್ಳಿ ಬಜೆ , ಚಕ್ಕುಲಿ, ಚುಕ್ಕು ಕಾಪಿ, ಚಾ, ಕಾಪಿಯ ಸಮಾರಾಧನೆ, ಶ್ರೀ ಅಕ್ಕ ತಂದ ಅಡಕ್ಕೆಯ ಹಾಳೆಲಿ.
ಮನೆಯವು ಎಲ್ಲರನ್ನೂ ಹಾರ್ದಿಕವಾಗಿ ಬೀಳ್ಕೊಡುವಾಗ ಹೊತ್ತೋಪಗಾಣ 6 ಗಂಟೆ.
ಹೆರಡುವ ಸಮಯಲ್ಲಿ ಎಲ್ಲರೂ ಸಂತೋಷದ ಕ್ಷಣಂಗಳ ಅನುಭವಿಸುತ್ತಾ ಇದ್ದರೂ ಎಲ್ಲೋ ಒಂದು ಮೂಲೆಲಿ ಇನ್ನೊಂದರಿ ಕಾಂಬದು ಯಾವಾಗ ಹೇಳ್ತ ನಿರೀಕ್ಷೆಯ ಭಾವನೆಯೂ ಒಟ್ಟಿಂಗೆ ಇತ್ತಿದ್ದು.

ಎಲ್ಲಾ ರೀತಿಯ ಅನುಕೂಲ ಮಾಡಿ, ಉಪಚರಿಸಿದ ಮನೆಯವಕ್ಕೆ ಎಷ್ಟು ಧನ್ಯವಾದ ಹೇಳಿರೂ ಕಮ್ಮಿಯೇ ಹೇಳಿ ಅನಿಸಿತ್ತು.

~

ಎಲ್ಲರಿಂಗೂ  ನೆಂಪಿಲ್ಲಿ ಒಳಿವ  ಒಂದು ಕಾರ್ಯಕ್ರಮಕ್ಕೆ ನಾಂದಿ ಆತು ಈ ಶುಭ ದಿನ. ಒಂದು ಶಿಬಿರ ಗೀತೆ ನೆಂಪಿಂಗೆ ಬಂತು

ಕೃತ್ವಾ ನವ ಧೃಢ ಸಂಕಲ್ಪಮ್
ವಿತರಂತೋ ನವ ಸಂದೇಶಮ್ ||
ಘಟಯಾಮೋ ನವ ಸಂಘಟನಮ್
ರಚಯಾಮೋ ನವಮಿತಿಹಾಸಂ||

|| ಹರೇ ರಾಮ||

ಸೂ:
ಬೈಲಿನ ಮಿಲನದ ದಿನ ಮೂರು ಕಮರಲ್ಲಿ – ಯೇನಂಕೂಡ್ಳಣ್ಣ, ಹಳೆಮನೆ ತಮ್ಮ, ಚುಬ್ಬಣ್ಣ – ಮೂರು ಜೆನ ತೆಗದ ಕೆಲವು ಪಟಂಗೊ ಇಲ್ಲಿದ್ದು:

ಯೇನಂಕೂಡ್ಲಿಲ್ಲಿ ಕೂಡಿದ ಬೈಲು, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 35 ಒಪ್ಪಂಗೊ

 1. ಶ್ರೀಅಕ್ಕ°

  ಶರ್ಮಪ್ಪಚ್ಚೀ, ಯೇನಂಕೂಡ್ಳಿಲಿ ನೆರೆಕರೆಯೋರು ಸೇರಿದ್ದರ, ಅಲ್ಲಿ ನಡದ್ದದರ ತುಂಬಾ ಚೆಂದಕ್ಕೆ ಒಂದಾಗಿ ಒಂದು ನಡದ ಹಾಂಗೆ ಬರದ್ದಿ. ಗುರಿಕ್ಕಾರ್ರು ಯಾವಾಗಲೂ ಜವಾಬ್ದಾರಿಯ ಅವರವರ ಸಾಮರ್ಥ್ಯ ನೋಡಿ ಹಂಚುದು ಯಾವತ್ತಿಂಗೂ ತಪ್ಪಾವುತ್ತಿಲ್ಲೆ ಹೇಳಿ ಸರೀ ಗೊಂತಾವುತ್ತು ನಿಂಗ ಬರದ್ದದು ನೋಡುವಾಗ!!! ತುಂಬಾ ಲಾಯ್ಕಾಯಿದು ಬರದ್ದದು.

  ಬೈಲಿನ ನೆರೆಕರೆ ಸೇರ್ತದಕ್ಕೆ ಸಂಭ್ರಮ ಸುಮಾರು ದಿನಂದ ಮದಲೇ ಸುರು ಆಯಿದನ್ನೆ!! ಅದಕ್ಕಿಪ್ಪ ತಯಾರಿ ಮಾಡ್ತ ಕೊಶಿ ಯಾವ ನಮ್ಮ ಮನೆ ಜೆಂಬ್ರಂದಲೂ ಕಡಮ್ಮೆ ಇಲ್ಲೆ ಅಲ್ಲದಾ? ನಮ್ಮ ಬೈಲಿಂದಾಗಿ ಒಂದು ಹೊಸಾ ಸಂಬಂಧ ಏರ್ಪಟ್ಟಿದು ನಮ್ಮೊಳ. ಬೈಲಿಲಿ ಇಪ್ಪ ಒಪ್ಪ ಹೆಸರುಗಳಲ್ಲಿಯೇ ಆತ್ಮೀಯತೆ ಬೆಳದ್ದದು ನೋಡಿದರೆ ನಿಜವಾಗಿ ಬೈಲು ನಮ್ಮ ಜೀವನದ ಒಂದು ಭಾಗವೇ ಆಗಿ ಹೋಯಿದು ಹೇಳಿ ಸ್ಪಷ್ಟ ಆವುತ್ತು.

  ಆ ದಿನ ವಿದ್ವಾನಣ್ಣ ಮತ್ತೆ ಮಾಷ್ಟ್ರುಮಾವನ ಉಪಸ್ಥಿತಿ, ಅವರ ಪಾಟಂಗ ನಮ್ಮ ಬುದ್ಧಿಯ ಹಶುವಿನ ಒಂದರಿಯಂಗೆ ತಣಿಶಿತ್ತು ಆದರೆ ಮತ್ತೆ ಮತ್ತೆ ಅವರ ಇಬ್ಬರ ಪಾಟಂಗ ಕೇಳುತ್ತಾ ಇರಲಿ ಹೇಳಿ ಮನಸ್ಸು ಹೇಳಿತ್ತು. ಬಹುಶ ಬೈಲಿಲಿ ಅಂಬಗಂಬಗ ಅವರ ಪಾಟಂಗ ‘ಕೇಳುತ್ತಾ’ ಇರಳಿ..

  ನಮ್ಮ ಬೈಲಿನ ಅಕ್ಷರದಣ್ಣನ ಬಗ್ಗೆ ಎಷ್ಟು ಹೇಳಿದರೂ ಸಾಲ. ನಿಂಗೋ ಹೇಳಿದ ಹಾಂಗೆ ಅವು ಕೇಳಿದ ಪ್ರಶ್ಣೆಗೊಕ್ಕೆ ಉತ್ತರ ಕೊಡ್ಲೆ ಎಡಿಯದ್ದೆ ನಾವೇ ಬೋಸಂಗ ಹೇಳಿ ಆದ್ದದು ಸುಮ್ಮನೆ ಅಲ್ಲ. (ನಮ್ಮ ಪರಡಾಟಲ್ಲಿ ಬೋಸ ಭಾವಂಗೆ ನೆಗೆ ಬಂದುಗೊಂಡಿತ್ತು ನೋಡಿದ್ದಿರಾ?) ಬೈಲ ನೆರೆಕರೆಯ ಪ್ರತಿಯೋಬ್ಬಂದೇ ಆ ದಿನ ಸಂಭ್ರಮ ಪಟ್ಟಿದವು.

  ಆ ದಿನದ ಆತಿಥ್ಯದ ಮನೆ ಯೇನಂಕೂಡ್ಳಿನ ಬಗ್ಗೆ ಎಷ್ಟು ಹೇಳಿದರೂ ಸಾಲ. ನಾವು ಮದಲೇ ನಮ್ಮ ನಮ್ಮ ಮನಸ್ಸಿಲಿ ನಿಶ್ಚೈಸಿದ ಹಾಂಗೇ ಇಪ್ಪ, ನಾವೆಲ್ಲ ಹಿಡಿತ್ತ ಮನೆ ಜೆಗಿಲಿ ಸಿಕ್ಕಿದ್ದದು ನಿಜವಾಗಿ ನಮ್ಮ ಕಾರ್ಯಕ್ರಮ ಇನ್ನುದೇ ಅದ್ದೂರಿ ಅಪ್ಪಲೆ ಕಾರಣ ಆತು ಹೇಳಿ ಆವುತ್ತು ಎನಗೆ!! ಮನೆ ಜಾಲಿಂಗೇ ಬಂದು ನಮ್ಮ ಸ್ವಾಗತ ಮಾಡಿದ ಮನೆ ಯೆಜಮಾನ್ರು ವಿಜಯಪ್ಪಚ್ಚಿ, ಚಿಕ್ಕಮ್ಮ ಮತ್ತೆ ಯೇನಂಕೂಡ್ಲು ಅಣ್ಣ, ನವಗೆ ಮನೆಯ ವಾತಾವರಣ ಹೊಸತ್ತು ಹೇಳಿ ಮಾಡ್ಲೆ ಬಿಟ್ಟಿದವಿಲ್ಲೆ. ನಮ್ಮದೇ ಮನೆ ಹೇಳ್ತ ಭಾವನೆ ಬಂದು ಹೋತು. ಅಲ್ಲಿಯಾಣ ಅವರ ತಯಾರಿಗಳ ನೋಡಿ ಅಪ್ಪಗ ಅವ್ವು ನಮ್ಮ ಬರುವಿಕೆಯ ಬಗ್ಗೆ ಎಷ್ಟು ಸಂತೋಷಲ್ಲಿ ಎಲ್ಲ ತಯಾರು ಮಾಡಿ ಕಾದಿತ್ತಿದ್ದವು ಹೇಳಿ ಅನಿಸಿ ಮನಸ್ಸು ತುಂಬಿತ್ತು. ಉಂಬ ಹೊತ್ತಿಂಗೆ ಬಾಳೆಲೆಲಿ ತುಂಬಾ ಇದ್ದ ಅಡಿಗೆಗಳ ನೋಡಿ ಅಪ್ಪಗ ಅವರ ಹೃದಯ ಎಷ್ಟು ವಿಶಾಲ ಹೇಳಿ ಆತು. ಮನೆಗೆ ನೆಂಟರು ಬತ್ತವು ಹೇಳಿ ಅಪ್ಪಗ ಅವರ ಹೊಟ್ಟೆ ತಣಿಶೆಕ್ಕು ಹೇಳಿ ಮಾಂತ್ರ ಮಾಡಿದ ತಯಾರಿ ಆಗಿದ್ದತ್ತಿಲ್ಲೆ ಅದು, ಬಂದೋರು ಸಂತೃಪ್ತರಾಯೆಕ್ಕು ಹೇಳಿ ಇದ್ದ ಭಾವನೆ ಅಲ್ಲಿ ಸ್ಪಷ್ಟವಾಗಿತ್ತು. ಕುಡಿವ ನೀರಿಂದ ಹಿಡುದು ಆಸರಿಂಗೆಲಿ, ಊಟದ ವಿವಿಧತೆಲಿ, ಹೊತ್ತಪ್ಪಗಾಣ ತಿಂಡಿ, ಚುಕ್ಕು ಕಾಪಿಲಿ ಎಲ್ಲದರಲ್ಲಿಯೂ ಮನೆಯೋರ ಆಸ್ಥೆ ಎದ್ದು ಕಂಡುಗೊಂಡಿತ್ತು. ಅಡಿಗೆ ಅಜ್ಜನ ಪಾಕ ಅಂತೂ ಅಡಿಪ್ಪೊಳಿ!! ಅವರ ಮಸಾಲ ಮಜ್ಜಿಗೆ ರೈಸಿದ್ದು!!!

  ಆ ದಿನ ಬೈಲ ನೆರೆಕರೆಯೋರ ಕಂಡಿಕ್ಕಿ, ಮಾತಾಡಿಕ್ಕಿ ಹೆರಡುವ ಹೊತ್ತಿಂಗೆ ಮಳೆ ಬಂದು ಹೆರ ತಂಪಾಗಿತ್ತು. ಮನಸ್ಸು ಮಾಂತ್ರ ಭಾರ ಆಗಿತ್ತು. ಆದರೆ ಇನ್ನೊಂದರಿ ಸೇರ್ತ ಅವಕಾಶ ಇದ್ದು ಹೇಳುವ ಕಾತರವೂ ಇದ್ದ ಕಾರಣ ಅಲ್ಲಿಂದ ಹೆರಟತ್ತು ಮರಳಿ ಅವರವರ ಗೂಡಿಂಗೆ!!

  ಗುರಿಕ್ಕಾರ್ರು, ಅಜ್ಜಕಾನ ಭಾವ°, ಇದರ ಪೂರ್ವ ತಯಾರಿ ಮಾಡಿದ್ದದು ಅದರ ಚೆಂದಕ್ಕೆ ನಡೆಶಿಕೊಟ್ತದಕ್ಕೆ ಅವಕ್ಕೆ ನಾವು ಎಷ್ಟು ಋಣಿಗಳಾಗಿದ್ದರೂ ಸಾಲ!!! ಮೂಲ ಬೀಜ ಬಿತ್ತಿಕ್ಕಿ, ಜೋಯಿಷಪ್ಪಚ್ಚಿ, ಬಟ್ಟಮಾವನ ಹತ್ತರೆ ಕೇಳಿ ದಿನ ನಿಗಂಟು ಮಾಡಿ ಎಲ್ಲ ತಯಾರಿ ಮಾಡಿ, ಬೇಕಾದಲ್ಲಿ ಮಾಹಿತಿ ಕೊಟ್ಟು ಎಲ್ಲ ಕಾರ್ಯಕ್ರಮ ಚೆಂದಲ್ಲಿ ನಡೆತ್ತ ಹಾಂಗೆ ಮಾಡಿ ಅಕೇರಿಗೆ ಜೀವನ ನಿರ್ವಹಣೆಯ ಆಪೀಸಿನ ಕೆಲಸಂದಾಗಿ ಅನಿವಾರ್ಯವಾಗಿ ಬಪ್ಪಲೆ ಎಡಿಯದ್ದ (“ಕೈಕೊಟ್ಟ”) ರಘು ಭಾವನ ಅನುಪಸ್ಥಿತಿ ಎದ್ದುಕಂಡುಗೊಂಡಿತ್ತು. ಗುರಿಕ್ಕಾರ್ರ ಒಂದು ಹೊಡೆ ಕಾಲಿಯೇ ಇದ್ದತ್ತು ಕಡೆವರೆಂಗೆದೇ!!!!!!

  ಇನ್ನೊಂದರಿ ನಾವೆಲ್ಲ ಸೇರ್ತ ಮೂರ್ತ ಬೇಗ ಸಿಕ್ಕಲಿ. ಎಲ್ಲೋರೂ ಸೇರಿ ಇನ್ನೂ ಮನಸ್ಸುಗ ಹತ್ತರೆ ಅಪ್ಪ ಗಳಿಗೆಗ ಬರಲಿ.. ನಮ್ಮ ಬೈಲ ಕೂಡು ಕುಟುಂಬ ಬೆಳೆಯಲಿ.. ಬೆಳಗಲಿ..

  @ಯೇನಂಕೂಡ್ಳು ಅಣ್ಣ,
  ಅಪ್ಪಚ್ಚಿ, ಚಿಕ್ಕಮ್ಮ ಕೊಟ್ಟ ಹಲಸಿನ ಕಾಯಿ ಸೊಳೆಲಿ ಲಾಯಕ ದೋಸೆ ಎರದು ತಿಂದೆಯಾ°. ತುಂಬಾ ಲಾಯಕಿದ್ದತ್ತು. ಈ ವರ್ಷದ ಸುರೂವಾಣ ಕಾಯಿಚೆಕ್ಕೆ ದೋಸೆ ತಿಂಬ ಯೋಗ ನಿಂಗಳಿಂದಾಗಿ ಸಿಕ್ಕಿತ್ತು. ಅಪ್ಪಚ್ಚಿ, ಚಿಕ್ಕಮ್ಮಂಗೆ ಎನ್ನ ಧನ್ಯವಾದ ತಿಳಿಶಿಕ್ಕು ಆತೋ!!!

  [Reply]

  VN:F [1.9.22_1171]
  Rating: +2 (from 2 votes)
 2. ಅದ್ವೈತ ಕೀಟ
  ಅದ್ವೈತ ಕೀಟ

  ಯೆನಗೆ ಬಪ್ಪಲಾತಿಲ್ಲೆ ಕೂಟಕ್ಕೆ. ಆ ೨ಜಿ ರಾಜಂದುದೇ ವಿನಾಯಕ ಸೇನಮಂದುದೇ ಕೇಸು ಹೇರೆಂಗಿ ಇತ್ತು ಮರದಿನ ಇದಾ.. ಹಾಂಗಾಗಿ ಡೆಲ್ಲಿಗೆ ಹೋಪಲಿತ್ತು. ಚೇ… ತಪ್ಪಿ ಹೋತು ಒಂದು ಒಳ್ಳೆ ವೊಪಾರ್ಚುನಿಟಿ.

  [Reply]

  VA:F [1.9.22_1171]
  Rating: 0 (from 0 votes)
 3. ವೇಣೂರಣ್ಣ

  ಶರ್ಮಪ್ಪಚ್ಚಿ ನಿಂಗೋ ಬರದ ಲೇಖನವ ಓದಿಯಪ್ಪಗ ಯೆನ೦ಕೊದ್ಲು ಮನೆ ಜೆಗಿಲಿಲಿ ನಡದ ಕಾರ್ಯಕ್ರಮ ಪೂರ್ತಿ ಒಂದರಿ ಮನಸ್ಸಿಲ್ಲಿ ಬಂದು ಕೊಶಿ ಆತು… ಸವಿವರವಾದ ವರದಿ ಮಾಡಿದ ನಿ0ಗೊಗೂ ಒಳ್ಳೆಯ ಆತಿಥ್ಯ ಕೊಟ್ಟ ಕಿಶೋರನ್ನನ ಬಳಗಕ್ಕೂ ಮತ್ತೊಂದರಿ ವಂದನೆಗೋ

  [Reply]

  VN:F [1.9.22_1171]
  Rating: 0 (from 0 votes)
 4. ಪ್ರಶಾಂತ ಕುವೈತ್

  ಎಂತರ ಅದ್ವೈತ ಕೀಟ ಹೇಳಿರೆ ??? ಅದ್ವೈತ ”ಕೀಟ” ಆದ್ದು ಯೆವಾಗ ???

  [Reply]

  ಶ್ರೀಶಣ್ಣ

  ಶ್ರೀಶಣ್ಣ. ಹೊಸಬೆಟ್ಟು Reply:

  [ಅದ್ವೈತ ”ಕೀಟ” ಆದ್ದು ಯೆವಾಗ ???]
  ಎನಗೂ ಇದೇ ಕಂಪ್ಯೂಸ್ ಆದ್ದು. ಹೀಂಗಿಪ್ಪ ಹೆಸರೂ ಇದ್ದಾ ಹೇಳಿ.

  [Reply]

  ಪ್ರಶಾಂತ ಕುವೈತ್ Reply:

  [Reply]

  VA:F [1.9.22_1171]
  Rating: 0 (from 2 votes)
  ಅದ್ವೈತ ಕೀಟ

  ಅದ್ವೈತ ಕೀಟ Reply:

  (ಎಂತರ ಅದ್ವೈತ ಕೀಟ ಹೇಳಿರೆ ??? ಅದ್ವೈತ ”ಕೀಟ” ಆದ್ದು ಯೆವಾಗ ??)

  ಅದು ಎನ್ನ ವೃತ್ತಿಧರ್ಮ ಮಕ್ಕಳೇ…. ಪಟ ನೋಡಿರೆ ಗೊಂತಾಗದೋ…..?

  [Reply]

  VA:F [1.9.22_1171]
  Rating: 0 (from 0 votes)
  ಶ್ಯಾಮಣ್ಣ

  ಶ್ಯಾಮಣ್ಣ Reply:

  ಕೀಟಲೆ ಕೊಡುವೋರಿಂಗೆ ಕೀಟ ಹೇಳಿ ಹೇಳ್ಲಕ್ಕಾ? ( ತಮಾಷೆಗೆ ಹೇಳಿದ್ದು 😀 )

  [Reply]

  ಅದ್ವೈತ ಕೀಟ

  ಅದ್ವೈತ ಕೀಟ Reply:

  ನಾವು ಆರಿಂಗೂ ಕೀಟಲೆ ಕೊಡ್ತ ಕ್ರಮ ಇಲ್ಲೆ. ಅವ್ವವ್ವೇ ಕೀಟಲೆ ಕೊಟ್ಟೊಂಡೋವು ನಮ್ಮ ಹತ್ತರೆ ಬಪ್ಪದು. ನಂಬ್ರಕ್ಕೆ. ಕೋರ್ಟು ಕಛೇರಿ ಹೇಳಿ ನಾವು ಓಡಿಯಾಡಿ ಅವರ ಕೆಲಸ ಎಲ್ಲಾ ಮಾಡಿ ಕೊಡ್ತ್ಸು.

  [Reply]

  VA:F [1.9.22_1171]
  Rating: 0 (from 0 votes)
 5. ಪುಚ್ಚಪ್ಪಾಡಿ ಮಹೇಶ

  ಬೈಲಿನ ಕಾರ್ಯಕ್ರಮಕ್ಕೆ ಬಪ್ಲೆ ಹೊರ್ಟು ಬಪ್ಲೆ ಆಯಿದಿಲ್ಲೆ.ಅನಿವಾರ್ಯ ಕಾರಣದ. ಆದ್ರೆ ಇಲ್ಲಿ ಓದಿ ಕಾರ್ಯಕ್ರಮಕ್ಕೆ ಬಂದ ಹಾಂಗೆ ಆತು.

  [Reply]

  VN:F [1.9.22_1171]
  Rating: 0 (from 0 votes)
 6. ಸುಭಗ
  ಸುಭಗ

  ಇರ್ತಲೆ ಹುಡ್ಕಿಂಡು ಆನು ಜಾಲ ಕೊಡೀಂಗೆ ಹೋದ್ದು ಅಪ್ಪು; ಆದರೆ ಅಷ್ಟೊತ್ತಿಂಗೆ ಅದು ಬೈಲಿನ ಬಗ್ಗೆ ಶ್ರೀಗುರುಗೊ ನೀಡಿದ ಆದೇಶವ ಸಭೆಗೆ ವಿವರ್ಸಿಂಡು ಇದ್ದಿದ್ದ ಗುರಿಕ್ಕಾರ್ರ ಮುಂದಿಕ್ಕೇ ಕೂಡಿ ಹೋತು. ಅಲ್ಲೆ ಹಿಡ್ಕೊಂಡೆ ಅದರ!

  ‘ಒಪ್ಪಣ್ಣ’ವನ್ನು ನಿರಂತರವಾಗಿ ಮುಂದುವರೆಸುತ್ತಾ “ಸದಾ ನಲಿ ಬೈಲಿನ ದಾಸ..” ಹೇಳ್ತದು ಶ್ರೀಗುರುಗೊ ಕೊಟ್ಟ ಪ್ರೀತಿಪೂರ್ವಕ ಆದೇಶ ಅಡ. 😉

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ಮುಳಿಯ ಭಾವvreddhiಸುಭಗಪ್ರಕಾಶಪ್ಪಚ್ಚಿಕೊಳಚ್ಚಿಪ್ಪು ಬಾವಪುತ್ತೂರುಬಾವಯೇನಂಕೂಡ್ಳು ಅಣ್ಣಶೀಲಾಲಕ್ಷ್ಮೀ ಕಾಸರಗೋಡುಡಾಮಹೇಶಣ್ಣವಿದ್ವಾನಣ್ಣಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°ಗೋಪಾಲಣ್ಣಬಟ್ಟಮಾವ°ಜಯಶ್ರೀ ನೀರಮೂಲೆವಿಜಯತ್ತೆನೀರ್ಕಜೆ ಮಹೇಶಶ್ರೀಅಕ್ಕ°ಒಪ್ಪಕ್ಕಕೆದೂರು ಡಾಕ್ಟ್ರುಬಾವ°ಅನಿತಾ ನರೇಶ್, ಮಂಚಿಪುತ್ತೂರಿನ ಪುಟ್ಟಕ್ಕಶಾಂತತ್ತೆಮಂಗ್ಳೂರ ಮಾಣಿವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ