ಶಿಕ್ಷಣ ಮತ್ತು ದಂಡನೆ

ಈ ಪರಿಸರ ಸಂರಕ್ಷಣೆ ಮಾಡವು, ಊರೂರಲ್ಲೂ ಸಂಡಾಸ್‌ಮನೆ ಬೇಕೆ ಬೇಕು, ಐದ್‌ವರ್ಷದ ವರೆಗೂ ಪೋಲಿಯೋ ಹನಿ ಹಾಕ್ಸಲೇ ಬೇಕು – ಇದೆಲ್ಲ ಬೇರೆ ದೇಶದವು ಹೇಳಿದ ಮೇಲೆ ನಮ್ಮ ಆಡಳಿತ ಬುದ್ಧಿಜೀವಿಗಳು, NGO ಗಳು ಬೊಬ್ಬೆ ಹೊಡುಲೆ ಶುರು ಮಾಡ್ತ.
ಈ, ಶಾಲೆಲಿ ಮಾಸ್ತರು ದಂಡಿಸುಲಾಗ ಹೇಳೂದುವಾ ಅದ್ರ ಸಾಲಲ್ಲೇ ಬಂದದ್ದು.
ಪಾಶ್ಚಾತ್ತ್ಯದೇಶದಲ್ಲಿ ಗಂಡ ಗೊರಕೆ ಹೊಡದ್ರೂ ಹೆಂಡತಿ ಅವನ ಮೇಲೆ ಕೇಸ್ ಹಾಕುಲಕ್ಕಡ ! ಅಲ್ದಾ ?
ಹಾಂಗೆಯಾ ಈಗ ಯಾವ ಪರಿಸ್ಥಿತಿ ಬಂದೋಜು ಅಂದ್ರೆ ಮಕ್ಕ 1058 ಗೆ ಫೋನ್ ಹೊಡ್ದ್ರೆ ಮಾಸ್ತರು ಕಂಬಿ ಎಣ್ಸುದೇಯಾ!

ಇದೂ ” ಅಲ್ಲಿ” ಶಂಖದಿಂದ ಬಂದ ತೀರ್ಥನೇ ಅಲ್ದಾ ?
ಬಹುತೇಕ ಯಾವ ಶಿಕ್ಷಕಂಗೂ ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ದ್ವೇಷ ಇರ್ತಿಲ್ಲೆ ಅಲ್ದಾ ?
ಛಡಿ ಛಡಿ ಛಂ ಛಂ . . . . . . ದಿಂದ ನಾವು ನೀವು ಎಲ್ಲಾ ಈ ಸ್ಥಿತಿಗೆ ಬಂಜ ಹೇಳಿ ನಂಗೆ ಕಾಣ್ತು.
ನೋಡಿ traffic signal ನಲ್ಲಿ ಪೋಲಿಸ್ ಮಾವ ಇಲ್ಲದಿದ್ರೆ ಎಂಥಕ್ಕೆ ಜಾಮ್ ಆಗ್ತು ? ಸಿಗ್ನಲ್ ಹಾರಿದ್ರೆ ದಂಡ ಹಾಕುವ ಪದ್ಧತಿ ಇಲ್ದಿದ್ರೆ ಅದೆಷ್ಟ ಜನ ಹಸಿರ ದೀಪದ ತನಕ ಕಾಯ್ತಾ ಇರ್ತಿದ್ದ ?
ಕೋರ್ಟಲ್ಲಿ ತಪ್ಪಿತಸ್ಥಂಗೆ (ಒಂದೊಂದ ಸಾರಿ ಉಲ್ಟಾನೂ ಆಗ್ತು ಅಲ್ದಾ?) ಶಿಕ್ಷೆ ಎಂಥಕ್ಕೆ ಕೊಡವು ?

ನಾಲ್ಕ್ ಬುದ್ಧಿ ಮಾತ ಹೇಳಿ ತಿದ್ದುಲಾಗ್ತಿಲ್ಯಾ?
ಬುದ್ಧಿಬಲ ಇಪ್ಪವಕೇ ಬುದ್ಧಿಮಾತಿಂದ ತಿದ್ದುಲಾಗ್ತಿಲ್ಲೆ ಅಂದಮೇಲೆ, ಬುದ್ಧಿ ಬೆಳೆಯದೇ ಇಪ್ಪ ಮಕ್ಕೊಗೆ (ಕೆಲವೊಂದ ಸಾರಿ) “ದಂಡಿಸದೇ ” ತಪ್ಪಿನ ಅರವು ಅಕ್ಕಾ?!
ಅದರಲ್ಲೂ ಈಗಿನ ಮಕ್ಕಳು ಹೇಂಗೆ ಹೇಳಿ, ನಿಂಗಕ್ಕೆ ಗುತ್ತಿದ್ದಿಕ್ಕು, ಸುಳ್ ಹೇಳುದು ತಪ್ಪು ಹೇಳಿ ಗೊತ್ತೇ ಇಲ್ಲೆ ಅವು ಗುರವೇ ನಮಃ ಅಂಬುದು ಇರಲಿ, ಗುರು ಏನ್ ಮಹಾ ಹೇಳೋ ಸ್ಥಿತಿಗೆ ಬಂದ್ ಮುಟ್ಟಿದ್ದ, ಹಾಂಗಿಪ್ಪಾಗ..

ಸರಳ ದಂಡನೆ (ಶಿಕ್ಷೆ = ಶಿಕ್ಷಣ, ವಿದ್ಯೆ) ಇಲ್ಲದೇ ವಿದ್ಯೆ ತಲೆಗೆ ಹತ್ಸುದು, ತಪ್ ತಿದ್ದುದು ಅಸಾಧ್ಯ !!
ತಪ್ಪೇ ಮಾಡದ ಸ್ವಭಾವ ಸಹಜವಾಗಿಯೇ ಉತ್ತಮರಾದ ೧೦೦% ವಿದ್ಯಾರ್ಥಿಗಳಿದ್ದಲ್ಲಿ ಸಾಧ್ಯ ಅಕ್ಕು.
ಇಲ್ದಿದ್ದರೆ ಈಗಿನ ಶಾಲೆಗಳ ನಿಯಮದ ಹಾಂಗೆ ಹೇಂಗ್‌ಬತ್ತ ಹಾಂಗೆ ಕಳ್ಕ್ಯಂಡು ಹೋಪುದು, ಏನ್ ಆಗ್ತ ಅದನ್ನೆಲ್ಲ ಹಾಂಗೇ ಒಪ್ಪಿಕೊಂಡು ಹೋಪ ಪ್ರಿನ್ಸಿಪಲ್ ಇದ್ದಲಿ ಹಾಂಗ್‌ಅಪ್ಪುದೆಯಾ !
ಅಕ್ಕಿ ಖರ್ಚಾಪ್ಲಿಲ್ಲೆ ಹೇಳಾದ್ರೆ ಹಸಕಂಡೇ ಇರವು, ಹಾವಾರೂ ಸಾಯವು ಇಲ್ಯ ಕೋಲರು ಮುರ್ಯವು ಅಲ್ದಾ ?

ಹಾಂಗೇಳಿ, ಆನು ೨೧ ವರ್ಷದಿಂದ ಹೈಸ್ಕೂಲ್ ಮಾಸ್ತರ, ಮಕ್ಕಗೆ ಕಠುವಾಗಿ ಬೈಯದೇ, ಕೈಯೆತ್ತಿಗಿದ್ದೆ, ದಂಡಿಸದೇ ೧೨ ವರ್ಷ ಆಗೋತು !!
ಕಾಲಾಯ ತಸ್ಮೈ ನಮಃ ||

ಕಾಂತಣ್ಣ

   

You may also like...

22 Responses

 1. ಕೆ.ಜಿ.ಭಟ್. says:

  ಪೆಟ್ಟು ಕೊಟ್ಟರೆ ಕೊಟ್ಟವನ ಕೋಪ ಶಮನ ಅಕ್ಕು ಅಲ್ಲದ್ದೆ ಮಕ್ಕೋ ಶಿಸ್ತು ಕಲಿಯವು.ಪೆಟ್ಟು ಕೊಡೆಕಾದ ಹಾಂಗಿಪ್ಪ ಮಕ್ಕೋ ಇದ್ದರೆ ಮಕ್ಕಳ ಅಪ್ಪ ಅಮ್ಮ ಅವಕ್ಕೆ ಸರಿಯಾಗಿ ಬುದ್ದಿ ಹೇಳಿ ಕೊಟ್ಟಿದವಿಲ್ಲೇ ಹೇಳಿ ಅರ್ಥ,ಅದು ಅಲ್ಲದ್ದೆ ಮಕ್ಕೊಗೆ ಪೆಟ್ಟು ಬೇಡವೇ ಬೇಡ.
  ಎನ್ನ ಯಾವದೇ ಗುರುಗೋ ಎನಗೆ ಪೆಟ್ಟು ಕೊಟ್ಟದಿಲ್ಲೇ.
  ಈಗ ಗುರುಗೋ ಬೇರೆ ಕೆಲಸ ಸಿಕ್ಕದ್ದೇ ಅಥವಾ ಯೋಗ್ಯತೆ ಇಲ್ಲದ್ದೆ ಬಂದವೆ ಹೆಚ್ಚು ಇಪ್ಪ ಹಾಂಗೆ ಕಾಣುತ್ತು.ಅಥವಾ ಕೆಲವು ಶಾಲೆಗಳಲ್ಲಿ ಇಪ್ಪ ಹಾಂಗೆ,ಎರಡು ಮಕ್ಕೋ ಆಗಿ ಮನೇಲಿ ಸುಮ್ಮನೆ ಕೂಪ ಬದಲಿನ್ಗೆ ಬಪ್ಪ,(ಎಲ್ಲಾರೂ ಅಲ್ಲ,ಕೋಪ ಮಾಡಿಯೋಳೆಕ್ಕಾದ ಅಗತ್ಯ ಇಲ್ಲೆ) ಅಕ್ಕ ತಂಗೆಯಕ್ಕೋ ಕಲಿಶುವ ಉತ್ಸಾಹ ಅಥವಾ ತಾಳ್ಮೆ ಇಲ್ಲದ್ದೆ ಶಿಕ್ಷೆ ಕೊದುವದೂ ಇದ್ದು.ಆನು ಒಂದು ಶಾಲೆ ನೆಡಶುವ ಕಮಿಟಿಲಿ ಇದ್ದು ಅನುಭವಲ್ಲಿ ಹೇಳುದು.
  ಅಪ್ಪ ಅಮ್ಮನ್ದ್ರು ಮಕ್ಕಳ ನೋಡಿಯೋಮ್ಬದು ಅತೀ ಮುಖ್ಯ.ಬದಲು ಅವು ಮನೇಲಿ ಪೆಟ್ಟು ಕೊಟ್ಟು ಅಥವಾ ಅತೀ ಕೊಂಡಾಟ ಮಾಡಿ ಮಕ್ಕಳ ಹಾಳು ಮಾಡಿದ್ದೂ ನಮ್ಮ ಎದುರು ಕಾಣುತ್ತು.
  ಮುಖ್ಯವಾಗಿ ಪೆಟ್ಟು ಯಾವದಕ್ಕೂ ಮದ್ದಲ್ಲ ಹೇಳಿ ತಿಳ್ಕೊಂಬದು ಅಗತ್ಯ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *