ವರದ ಹಳ್ಳಿಯ ವರದ ಮೂರ್ತಿ ಶ್ರೀ ಶ್ರೀಧರ ಸ್ವಾಮಿ

ಓಂ ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ

ಸ್ವಾನಂದಾಮೃತ ಸತ್ವಾಯ ಶ್ರೀಧರಾಯ ನಮೋ ನಮಃ||

ಶ್ರೀ ಶ್ರೀಧರ ಸ್ವಾಮಿಗಳಿಂಗೆ ನಮಿಸುವ ಈ ಸ್ತೋತ್ರ ಹಿತವಾಗಿ ಹಿನ್ನೆಲಿಲಿ ಕೇಳಿಗೊಂಡು, ಕುಟುಂಬ ಸಮೇತ ಸ್ವಾದಿಷ್ಟ ಊಟ ಮಾಡುವ ಒಂದು ಸುಯೋಗ ಬಯಸದ್ದೇ ಬಂತು ಇತ್ತೀಚೆಗೆ.

****

ಸಂಸಾರ, ಅಪೀಸು, ಅದೇ ಜಾಗೆ, ಅದೇ ನೋಟ. ಇದೆಲ್ಲದರಿಂದ ಹೆರ ಬಂದು ಮನೆಯವೆಲ್ಲಾ ಸೇರಿ ಅಳಿಯ, ಮಗಳನ್ನೂ ಕೂಡಿಂಡು ಹೆರ ತಿರುಗುವಾಗ ಸಿಕ್ಕುವ ಸುಖ ಸಂತೋಷವೇ ಬೇರೆ.

“ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ಗುಂಡಿ” ಹೇಳಿ ಮೂಗೂರು ಮಲ್ಲಪ್ಪ ಬರದ ಹಾಡಿನ ಸುಶ್ರಾವ್ಯವಾಗಿ ಹಾಡಿ ಇಳಿ ವಯಸ್ಸಿಲ್ಲಿಯೂ ಜೌವ್ವನಿಗರೊಟ್ಟಿಂಗೆ ಕೊಣುದು ಜೋಗವ ತೋರಿಸಿದ ರಾಜಕುಮಾರನ ಆ ದೃಷ್ಯ ಎಷ್ಟೋ ಸರ್ತಿ ಕಣ್ಣ ಮುಂದೆ ಬಂದು ಹೋಯಿದು. ಒಂದರಿ ಆದರೂ ಹೋಯೆಕ್ಕು ಹೇಳುವ ಆಸೆ ಸುಮಾರು ದಿನದ್ದು.

“ಹಲ್ಲು ಇಪ್ಪಗ ಕಡ್ಲೆ ಇಲ್ಲೆ, ಕಡ್ಲೆ ಇಪ್ಪಗ ಹಲ್ಲು ಇಲ್ಲೆ” ಹೇಳ್ತ ಪರಿಸ್ಥಿತಿ ಆಗಿಂಡು ಇತ್ತಿದ್ದು. ನೀರು ಧುಮ್ಮಿಕ್ಕುವ ಸಮಯಲ್ಲಿ ನವಗೆ ಆಪೀಸಿನ ತೆರಕ್ಕು. ರಜೆ ಸಿಕ್ಕಲೆ ಇಲ್ಲೆ.  ನಮ್ಮ ರಜೆ ಸಿಕ್ಕುವ ಸಮಯಲ್ಲಿ ಅಲ್ಲಿ ನೀರಿಲ್ಲೆ. ಹಾಂಗೇ ಪ್ರತಿ ವರ್ಷವೂ ಮುಂದೆ ಹಾಕಿಂಡು ಇತ್ತಿದ್ದ ಕಾರ್ಯಕ್ರಮ ಈ ವರ್ಷ ಒದಗಿ ಬಂತು.

ಜೋಗದ ಭೋರ್ಗರೆವ ಆ ಜಲಪಾತ, ಅಲ್ಲಿಯ ಪ್ರಕೃತಿ ಸೌಂದರ್ಯ ಕಣ್ತುಂಬ ನೋಡಿ ಮೈ ಮನಸ್ಸು ಹಗುರ ಅಪ್ಪಗ ಕಂಡತ್ತು, “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ………… ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ಗುಂಡಿ” ಹೇಳಿ ಸುಮ್ಮನಲ್ಲ ಕವಿ ಹೇಳಿದ್ದು ಹೇಳಿ.

ಇಲ್ಲಿಯಾಣ ಪ್ರಕೃತಿಯ ಸೌಂದರ್ಯವ ರುದ್ರ ಹೇಳುವದೋ, ರಮಣೀಯ ಹೇಳುವದೋ? ಎಲ್ಲವನ್ನೂ ಮರೆಶಿ ಅಲಿಯೇ ತಲ್ಲೀನ ಅಪ್ಪ ಹಾಂಗೆ ಮಾಡುವ ಕಾರಣ ರುದ್ರನೂ ಅಪ್ಪು, ಮೋಡದ ಹುಗ್ಗಾಟಲ್ಲಿ ಕ್ಷಣ ಕ್ಷಣಕ್ಕೂ ವೈವಿಧ್ಯ ದೃಶ್ಯ, ಕಣ್ಣಿಂಗೆ ಹಬ್ಬ ಕೊಡುವಾಗ ರಮಣೀಯವೂ ಅಪ್ಪು.

ಅಲ್ಲಿಂದ ಹೆರಡುವಾಗ ಇಲ್ಲಿಯೇ ಹತ್ತರೆ ಯಾವುದಾದರೂ ಬೇರೆ ಪ್ರೇಕ್ಷಣೀಯ ಜಾಗೆ ಇದ್ದೋ ಹೇಳಿ ಡ್ರೈವರ್ ಹತ್ರೆ ಕೇಳುವಾಗ ಹೇಳಿತ್ತು, ಸಾಗರ ಹತ್ರೆ ವರದಹಳ್ಳಿ ಹೇಳಿ ಶ್ರೀ ಶ್ರೀಧರ ಸ್ವಾಮಿಯವರ ಮಠ ಇದ್ದು. ಲಾಯಿಕ ಇದ್ದು. ಒಂದರಿ ಹೋಯೆಕ್ಕಾದ ಜಾಗೆ ಹೇಳಿ.

ಮಂಗಳೂರಿನ ಶಂಕರ ಶ್ರೀ ಎದುರು ಶ್ರೀ. ಶ್ರೀಧರ ಸ್ವಾಮಿ ಸನ್ನಿಧಿ

ಶ್ರೀಧರ ತೀರ್ಥ

ಶಿಮೊಗ್ಗಂದ ಜೋಗಕ್ಕೆ ಬಪ್ಪಗ “ವರದಹಳ್ಳಿಗೆ” ಹೇಳಿ ಬೋರ್ಡ್ ನೋಡಿತ್ತಿದ್ದೆ. ಯಾವದೋ ಹಳೆ ನೆನಪು ಬಂತು. ಎಲ್ಲಿಯೋ ಕೇಳಿದ ಹಾಂಗೆ ಆವ್ತು ಹೇಳಿ. ಉಹೂಂ… ಸರಿ ನೆಂಪಿಂಗೆ ಬಂತಿಲ್ಲೆ.

ಶ್ರೀಧರ ಸ್ವಾಮಿ ಹೆಸರು ಕೇಳಿ ಅಪ್ಪಗ ನೆಂಪಾತು. ಇವರದ್ದೇ ಒಂದು ಸನ್ನಿಧಿ ಮಂಗಳೂರಿನ  ಶಂಕರ ಶ್ರೀ  ಸದನಂದಲೇ ಹೆರ ಅಶ್ವತ್ಥ ಮರದ ಕೆಳ ಇದ್ದು. ಅತ್ಲಾಗಿ ಹೋದಿಪ್ಪಗ ಒಂದು ಸುತ್ತು ಹಾಕಿ ಪ್ರಣಾಮಂಗಳ ಸಲ್ಲುಸುವ ಕ್ರಮ ಇದ್ದು.

ಈಗ ಅವರ ಅಶ್ರಮವನ್ನೇ ನೋಡುವ ಒಂದು ಅವಕಾಶ ಸಿಕ್ಕಿದ್ದು ಯೋಗಾಯೋಗ ಹೇಳಿ ಕೊಶೀ ಆತು.

***

ಶಿವಮೊಗ್ಗ ತಾಲೂಕಿನ ಸಾಗರಂದ ಸುಮಾರು ೫-೬ ಕಿಲೋ ಮೀಟರ್ ಒಳ ಹೋದರೆ ಸಿಕ್ಕುವದೇ ಈ ವರದಹಳ್ಳಿ ಅಥವಾ ವರದಾಪುರ. ಸಹ್ಯಾದ್ರಿಯ ತಪ್ಪಲಿನ ಈ ಜಾಗೆ ಸಾವಿರಾರು ವರ್ಷ ಮೊದಲು ಮಹರ್ಷಿ ವೇದವ್ಯಾಸರಿಂದ, ಅಗಸ್ತ್ಯರಿಂದ ತಪಸ್ಸು ಮಾಡಿ ಪಾವನಗೊಂಡಿದು. ಮಹರ್ಷಿ ವೇದವ್ಯಾಸರು ತಪಸ್ಸು ಮಾಡಿದ ಗುಹೆ, ಅವರಿಂದ ಪ್ರತಿಷ್ಠೆಗೊಂಡ ಜಗದಾಂಬಾ ಗುಡಿ ಕೂಡಾ ಇದ್ದು.

ಶ್ರೀಧರ ಮಠ

***

೧೯೦೮ ನೇ ದಶಂಬರ ೭ ರಂದು ಗುಲ್ಬರ್ಗಾದ ಚಿಂಚೋಳಿಲಿ ಜನಿಸಿದ ಇವಕ್ಕೆ, ಸಣ್ಣ ಪ್ರಾಯಂದಲೇ ಆಧ್ಯಾತ್ಮಿಕಲ್ಲಿ ತುಂಬಾ ಆಸಕ್ತಿ. ಶ್ರೀ ಸಮರ್ಥರಾಮದಾಸರ ವಾಣಿಂದ ಪ್ರಭಾವಿತರಾದ ಇವು, ಅವರನ್ನೇ ತನ್ನ ಗುರುವಾಗಿ ತಿಳ್ಕೊಂಡು ಆಧ್ಯಾತ್ಮದ ಸಾಧನೆ ಮಾಡಿದವು.  ತನ್ನ ೨೨ ನೇ ವರ್ಷ ಪ್ರಾಯಲ್ಲಿ ಸಮರ್ಥರಾಮದಾಸರ ಅನುಗ್ರಹ ತೆಕ್ಕೊಂಡ ಇವು ೩೨ ನೇ ವರ್ಷ ಪ್ರಾಯಲ್ಲಿ ಸನ್ಯಾಸ ಸ್ವೀಕರಿಸಿದವು. (ಸಮರ್ಥರಾಮದಾಸರು, ಇವಕ್ಕಿಂತ ಸುಮಾರು ೩೦೦ ವರ್ಷದಷ್ಟು ಹಿಂದಿನವು. ಅವರ ಭಾವಚಿತ್ರ ಮಡ್ಕೊಂಡು ಸಜ್ಜನಗಡದ ಅವರ ಆಶ್ರಮಲ್ಲಿ ಸೇವೆ ಮಾಡಿಂಡು ಅನುಗ್ರಹೀತರಾದವು ಶ್ರೀ ಶ್ರೀಧರ ಸ್ವಾಮಿಗಳು)

ಮುಂದೆ ದೇಶ ಪರ್ಯಟನೆ ಕಾಲಲ್ಲಿ ಮಲ್ನಾಡಿನ ವರದಹಳ್ಳಿಗೆ ಬಂದಪ್ಪಗ ಇದನ್ನೇ ತನ್ನ ತಪೋಭೂಮಿಯಾಗಿ ಮಾಡೆಕ್ಕು ಹೇಳಿ ತೀರ್ಮಾನ ಮಾಡಿ, ಇಲ್ಲಿ ಒಂದು ಆಶ್ರಮ ಮಾಡಿಗೊಂಡವು. ಇಲ್ಲಿ ಧರ್ಮಧ್ವಜ ಸ್ಥಾಪನೆ ಮಾಡಿ, ಆಶ್ರಮಕ್ಕೆ ಶ್ರೀಧರ ಆಶ್ರಮ ಹೇಳಿ ನಾಮಕರಣ ಮಾಡಿದವು. ತನ್ನ ೫೦ನೇ ವರ್ಷ ಪ್ರಾಯಂದ ನಂತರ ನಿರಂತರ ಇಲ್ಲಿಯೇ ಇದ್ದುಗೊಂಡು ಆಧ್ಯಾತ್ಮದ ಬೇರು ಊರಿಸಿ ಅದರ ಹೆಮ್ಮರವಾಗಿ ಬೆಳವಲೆ ಬಿಟ್ಟು ೭೫ ರ ಪ್ರಾಯಲ್ಲಿ  ಬ್ರಹ್ಮೈಕ್ಯರಾದವು. ಭೌತಿಕ ರೂಪಲ್ಲಿ ಶ್ರೀ ಶ್ರೀಧರ ಸ್ವಾಮಿಗಳು ಇಲ್ಲಿ ಇಲ್ಲದ್ದರೂ ಅವರ ಅನುಗ್ರಹಕ್ಕಾಗಿ ಭಕ್ತರ ಸಮೂಹ ಯಾವಾಗಲೂ ಬಂದು ಕೃತಾರ್ಥರಾದ ಭಾವನೆಂದ ಹೋವುತ್ತವು.

***

ಇಲ್ಲಿ ಸ್ವಾಮೀಜಿಯ ಸಮಾಧಿ ಮಂದಿರ, ಅವು ತಪಸ್ಸಿಲ್ಲಿ ನಿರತರಾದ ಗುಹೆ ಇದ್ದು.  ೩೦ ಫೀಟ್ ಎತ್ತರದ ಧರ್ಮಸ್ಥಂಭಲ್ಲಿ ಧರ್ಮ ಧ್ವಜ ಯಾವಾಗಲೂ ಹಾರಾಡಿಗೊಂಡು ಇರ್ತು. ಸಂಸ್ಕೃತ ಮತ್ತೆ ವೇದಾಧ್ಯನ ಮಾಡುವವಕ್ಕಾಗಿ ಪಾಠ ಶಾಲೆ ಇದ್ದು.ಪ್ರಶಾಂತ, ರಮಣೀಯ, ನಿಸರ್ಗ

ಸುಮಾರು ೨೫೦ ದನಗಳ ಗೋಶಾಲೆ ಇದ್ದು. ಶ್ರೀ ಶ್ರೀ ಸಂಸ್ಥಾನ ಈ ವರ್ಷ (೬/೭/೧೧ ರಂದು) ಇಲ್ಲಿ ಹೊಸತಾಗಿ ಕಟ್ಟಿದ ಗೋಶಾಲೆ ಮತ್ತೆ ಭೋಜನ ಶಾಲೆಯ ಉದ್ಘ್ಹಾಟಿಸಿ ಲೋಕಸಮರ್ಪಣೆ ಮಾಡಿದ್ದವು ಹೇಳಲೆ ತುಂಬಾ ಹೆಮ್ಮೆ ಅನಿಸುತ್ತು.

ಯಾತ್ರಾರ್ಥಿಗೊಕ್ಕೆ ಉಳಕೊಂಬಲೆ ಪ್ರತ್ಯೇಕ ವೆವಸ್ಥೆ ಇದ್ದು. ಊಟ ಉಪಹಾರದ ವೆವಸ್ಥೆ ಕೂಡಾ ಇದ್ದು. ಇದಕ್ಕಾಗಿ ಇಲ್ಲಿ ಯಾವದೇ ಶುಲ್ಕ ನಿಗದಿ ಮಾಡಿದ್ದವಿಲ್ಲೆ. ಭಕ್ತರು ಕೊಟ್ಟ ಕಾಣಿಕೆಯ ಸಂತೋಷಲ್ಲಿ ಸ್ವೀಕಾರ ಮಾಡುತ್ತವು.

“ಶ್ರೀಧರ ತೀರ್ಥ” ಹೇಳಿ ಗೋಮುಖದ ಮೂಲಕ ಪರಿಶುದ್ಧವಾದ ನೀರು ತೀರ್ಥ ರೂಪಲ್ಲಿ ನಿತ್ಯ ನಿರಂತರ ಹರುದು ಬತ್ತಾ ಇದ್ದು. ಭಕ್ತರು ಇದರ ತೀರ್ಥವಾಗಿ ಸ್ವೀಕರುಸುವದು ಮಾತ್ರ ಅಲ್ಲದ್ದೆ, ಬಾಟ್ಲಿಗಳಲ್ಲಿ, ಕೇನುಗಳಲ್ಲಿ ಮನೆಗೆ ಕೊಂಡೋವ್ತವು. ಇದರ ಗುಣ ಹೇಳಿರೆ, ಇದು ಶ್ರೀಧರ ಸ್ವಾಮಿಗಳೇ ಒದಗಿಸಿದ ತೀರ್ಥ. ಎಷ್ಟು ದಿನ ಮಡುಗಿದರೂ ಹಾಳು ಆವ್ತಿಲ್ಲೆ. ಪರಿಶುದ್ಧವಾದ ಈ ನೀರಿಂಗೆ ವಿಶೇಷ ಪರಿಮಳ ಕೂಡಾ ಇದ್ದು. ಮದ್ದಿನ ಗುಣ ಇಪ್ಪ ಈ ತೀರ್ಥ ದೇವರ ವರ ಪ್ರಸಾದವೇ ಸರಿ.

ಸ್ವಾಮಿಗಳ ಅನುಯಾಯಿಗೊ ಒಂದು ಟ್ರಸ್ಟ್ ಮಾಡಿ ಈ ಆಶ್ರಮದ ನಿರ್ವಹಣೆ ಮಾಡುತ್ತವು. ನಿಸ್ಸ್ವಾರ್ಥ ಸೇವೆ ಮಾಡುವ ಈ ಸೇವಕಂಗೊ ಯಾವದೇ ಸಂಭಾವನೆಗಾಗಿ ದುಡಿಯದ್ದೆ ಶಿಸ್ತಿಂದ ಇದ್ದುಗೊಂಡು, ಬಂದ ಭಕ್ತರ ಸೇವೆಲಿ ಗುರುಗಳ ಸೇವೆಯನ್ನೂ ಭಗವಂತನ  ಸೇವೆಯನ್ನೂ ಕಂಡುಗೊಂಡಿದವು.

***

ವರದ ಹಳ್ಳಿಯ  ಸುಂದರ ಪ್ರಕೃತಿ, ಮಠ, ಪರಿಸರ ಎಲ್ಲವನ್ನೂ ಅನುಭವಿಸಲೆ ನಿಂಗಳೂ ಒಂದರಿ ಹೋಗಿ ಬನ್ನಿ.

ಶರ್ಮಪ್ಪಚ್ಚಿ

   

You may also like...

21 Responses

 1. ಶರ್ಮಪ್ಪಚ್ಚಿ says:

  ಪ್ರೋತ್ಸಾಹದ ಒಪ್ಪಕ್ಕೆ ಧನ್ಯವಾದಂಗೊ
  [ಹೋಯೆಕ್ಕು ಯೇವತ್ತಾದರೂ ಸಮಯ ಒದಗಿ ಬಂದಪ್ಪಗ] ಆದಷ್ಟು ಬೇಗ ಒದಗಿ ಬರಲಿ ಹೇಳಿ ಹಾರೈಕೆ

 2. ಒಳ್ಳೇ ಲೇಖನ ಅಪ್ಪಚ್ಚಿ…
  ಎನಗೂ ಒಂದರಿ ಹೋಯೆಕು ಹೇಳಿ ಆಶೆ ಆವ್ತಾ ಇದ್ದು…

 3. ಲೇಖನ ಓದಿಯಪ್ಪಗ ಅಂದು ಒಂದು ಸರ್ತಿ ಹೊಸನಗರ ಮಠಕ್ಕೆ ಹೋಗಿಕ್ಕಿ ಬಪ್ಪಗ ಇರುಳಿಂಗೆ ಅಲ್ಲಿ ನಿಂದದು ನೆನಪಾತು. ಅಲ್ಲಿಗೆತ್ತುವಗ ಇರುಳು ೧೦ ಗಂಟೆ ಕಳುದ್ದು ಕಾಣುತ್ತು. ಎಂಗೊ ಸುಮಾರು ೬೦ ಜನ ಒಂದು ಬಸ್ಸಿಲ್ಲಿ ಹೋದ್ದದು. ಇರುಳು ಹೋದವಕ್ಕೆ ಊಟ ತಯಾರು ಮಾಡಿ ಬಡುಸಿದ್ದು ನೆನಪಾವುತ್ತು. ಅಲ್ಲಿ ಇರುಳಿಂಗೆ ನಿಂದು ಮರುದಿನ ಉದಿಯಪ್ಪಗ ಶ್ರೀಧರ ತೀರ್ಥಲ್ಲಿ ಮಿಂದು ಜೋಗ ಜಲಪಾತ ನೋಡ್ಯೊಂಡು ಇತ್ಲಾಗಿ ಬಂದದು. ಅಂಬಗ ಡಿಜಿಟಲ್ ಕೆಮರ ಇಲ್ಲದ್ದ ಕಾರಣ ಅಲ್ಯಾಣ ಫೊಟೋ ಈಗ ಕೈಲಿ ಇಲ್ಲೆ. ನೆನಪು ಮಾಂತ್ರ ಇದ್ದು.

 4. ಗಣೇಶ says:

  ಒಳ್ಳೇದಾಯಿದು. ಒಪ್ಪ೦ಗೊ. ಸಣ್ಣಾದಿಪ್ಪಗ ಅಲ್ಲಿಯಾಣ ಮಠ೦ದ ಮ೦ತ್ರಾಕ್ಷತೆ ಬ೦ದ೦ಡಿತ್ತಿದ್ದು ನೆ೦ಪಿದ್ದು.. ಇಷ್ಟೆಲ್ಲ ವಿಷಯ ಗೊ೦ತಾದ್ದು ಈಗಳೇ..

 5. ಗಣೇಶ ಮಾವ° says:

  ಶರ್ಮಪ್ಪಚ್ಚೀ,,ಶ್ರೀಧರಾಶ್ರಮದ ವಿವರಣೆ ಲಾಯಿಕ ಆಯಿದು.ಶುದ್ಧಿ ಓದುತ್ತಾ ಇದ್ದ ಹಾಂಗೆ ಮನಸು ಒಂದರಿ ವರದಹಳ್ಳಿಗೆ ಹೋದ ಹಾಂಗೆ ಆತು.ಎನ್ನ ಪ್ರವಾಸದ ಪಟ್ಟಿಲಿ ಇದನ್ನೂ ಸೇರ್ಸಿಗೊಂಡೆ.ಧನ್ಯವಾದ……

 6. shiva kumar says:

  Sridhara Swamygala bagge lekana tumba channagide.

  Danyavadagalu

 7. shivakumar says:

  ಮಂಗಳೂರಿನ ಶಂಕರ ಶ್ರೀ ಎದುರು ಶ್ರೀ. ಶ್ರೀಧರ ಸ್ವಾಮಿ ಸನ್ನಿಧಿ. ದಯವಿಟ್ಟು ಈ ಸ್ಥಳದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೊಡಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *