ಸೀತಾಜಲಪಾತಕ್ಕೆ ಒಂದು ಪಯಣ..

ಚೆನ್ನಬೆಟ್ಟಣ್ಣ ಮಂಚನಬೆಲೆಗೆ ಹೋದ್ದರ ಓದ್ಯಪ್ಪಾಗ ಎಂಗ ಮೊನ್ನೆ ಕೂಡ್ಳಿಂಗೆ ಹೋದ್ದು ನೆಂಪಾತು. ಬೈಲಿಲಿ ಎಂತ ಶುದ್ದಿ ಹೇಳುದಪ್ಪಾಳಿ ಆಲೋಚನೆ ಮಾಡಿಗೊಂಡಿದ್ದೋಳಿಂಗೆ ಇದೇ ಶುದ್ದಿ ಹೇಳುವಾಳಿ ಕಂಡತ್ತು.
ಬನ್ನಿ, ಒಂದರಿ ಸೀತಾಜಲಪಾತಕ್ಕೆ ಹೋಗಿ ಬಪ್ಪೊ.

~
ಎಂಗ ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ ನ ಚೆಂಙಾಯಿಗ ಎಲ್ಲೊರುದೇ ಒಂದು ಪಿಕ್‌ನಿಕ್ ಹೋಪದು ಹೇಳಿಗೊಂಡು ಈ ಸೆಮಿಶ್ಟರಿನ ಸುರುವಿಲೇ ಡಿಸ್ಕಶನು ಸುರು ಆಗಿತ್ತು. ಹೋಪದಪ್ಪು, ಎಲ್ಲಿಗೇಳಿ ಬೇಕನ್ನೆ. ಹಲವು ಜನಕ್ಕೆ ಹಲವು ಕಡೆಗೆ ಹೋಪ ಹೇಳುವ ಅಭಿಪ್ರಾಯಂಗ. ಈ ಪೀಜಿ ಮಕ್ಕಳಲ್ಲಿ ಒಮ್ಮತ ಹೇಳ್ತದು ಅಷ್ಟು ಪಕ್ಕನೆ ಬಾರ ಇದಾ. ಅಂತೂ ಇಂತೂ ಸುಮಾರೆಲ್ಲ ಮಾತುಕತೆ ಆಗಿ, ಕೂಡ್ಳಿಂಗೆ ಹೋಪದು ಹೇಳಿ ನಿಗಂಟಾತು ಅಕೇರಿಗೆ. ಎಂಗಳ ಒಟ್ಟಿಂಗೆ ನಾಕು ಜೆನ ಲೆಕ್ಚರುಗಳನ್ನುದೇ ಹೆರಡ್ಸಿಗೊಂಡೆಯ.
ಹೋಪ ದಿನ ನಿಗಂಟು ಮಾಡ್ಳೆ ಪುನಾ ಹತ್ತು ಹಲವು ಸಮಸ್ಯೆಗೊ ಒಬ್ಬೊಬ್ಬಂಗೆ. ಆ ದಿನ ಅಕ್ಕು, ಈ ದಿನ ಅಕ್ಕು ಹೇಳಿಗೊಂಡು ದಿನ ನಿಗಂಟು ಮಾಡ್ಳೆಯೇ ನಾಕು ದಿನ ಬೇಕಾತು. ಒಂದರಿ ಅಕ್ಟೋಬರು ನಾಕಕ್ಕೆ ಹೋಪದು ಹೇಳಿ ಆಗಿ, ಆ ದಿನ ಬಸ್ಸು ಸಿಕ್ಕುತ್ತಿಲ್ಲೆ ಹೇಳಿ ಆಗಿ, ಮತ್ತೆ ಮೂರಕ್ಕೆ ಹೋಗಿಯೇ ಹೋಪದು ಹೇಳಿ ನಿಗಂಟಾತು.
ಕೂಡ್ಳು ಹೇಳಿರೆ, ಉಡುಪಿಂದ ಸುಮಾರು ನಲುವತ್ತೆರಡು ಕಿಲೋಮೀಟ್ರು ದೂರದ ಜಾಗೆ, ಹೆಬ್ರಿಯ ಹತ್ತರೆ. ತೀರಾ ಕಾಡು ಪ್ರದೇಶ. ಉಂಬುಳುಗಳ ಆಶ್ರಯತಾಣ. – ಹೋಪ ಮೊದಲು ಇಷ್ಟು ವಿಶಯ ಗೊಂತಿತ್ತು ಎಂಗೊಗೆ.
ಎಲ್ಲೊರುದೇ ಬೇರೆಲ್ಲ ವಿಶಯಂದ ಹೆಚ್ಚು ಗಮನ ಕೊಟ್ಟದು ‘ಉಂಬುಳು’ವಿಂಗೆ. ಲೀಚ್ ಹೇಳ್ತ ಇಷ್ಟುದ್ದದ ಪ್ರಾಣಿ ಅಲ್ಲಿಗೆ ಹೋಪ ವಾರದ ಮೊದಲೇ ಎಲ್ಲೊರ ಕನಸಿಲಿ ಬಂದು ನೆತ್ತರು ಹೀರ್ಲೆ ಸುರುಮಾಡಿದ್ದತ್ತು!
ಅದಕ್ಕೆಂತರ ಮುಂಜಾಗ್ರತೆ ಹೇಳಿ ಕೇಳಿಯಪ್ಪಗ, ಮಾಷ್ಟ್ರುಮಾವನ ಎಲೆ ತಟ್ಟೆಲಿಪ್ಪ ಹೊಗೆಸೊಪ್ಪು ಹೇಳಿ ಗೊಂತಾತು.  ಮಾಷ್ಟ್ರುಮಾವನಲ್ಲಿಂದ ರಜ ಹೊಗೆಸೊಪ್ಪು ತೆಕ್ಕೊಂಡು ಬಾ ಹೇಳಿ ನೆಗೆಗಾರಣ್ಣನ ಹತ್ರ ಹೇಳಿತ್ತಿದೆ. ಅವ ಇಂಗ್ಲೀಶು ಕಲಿಯದ್ದ ಹೆದರಿಕೆಲಿ ಅಲ್ಲಿಗೆ ಹೋಯ್ದನೇ ಇಲ್ಲೆ. ಅಜ್ಜಿಯತ್ರೆ ಕೇಳಿಯಪ್ಪಗ, ಇಷ್ಟು ಲಾಯ್ಕಿನ ಹೊಗೆಸೊಪ್ಪಿನ ಕಾಲಿಂಗೆ ಉದ್ದಿ ಹಾಳು ಮಾಡ್ತದೋ ಹೇಳಿ ಎರಡ್ಡು ಪರಂಚಾಣ ಸಿಕ್ಕಿತ್ತು. ಆತನ್ನೆ ಇನ್ನೆಂತರ ಮಾಡುದು ಆದಾಂಗಾವ್ತು ಹೇಳಿಗೊಂಡು ಹೆರಟತ್ತು.
ಉದೀಯಪ್ಪಗ ಆರೂಕಾಲಕ್ಕೆ ಬಸ್ಸು ಹೇಳಿ ಹೇಳಿತ್ತಿದ್ದವು. ಎರಡು ದೊಡ್ಡ ಕುಪ್ಪಿಲಿ ನೀರು ತುಂಬುಸಿಗೊಂಡು ಬೇಗಿಂಗೆ ಹಾಕಿ, ಬೇಗಿನ ಹೆಗಲಿಂಗೆ ಸಿಕ್ಕುಸಿಗೊಂಡು ಹೆರಟಾಗಿ, ಆರು ಗಂಟೆಗೇ ಹೋಗಿ ಬಸ್ಸಿಂಗೆ ಕಾದು ನಿಂದತ್ತು. ಕಾದು, ಕಾದು, ಕಾದು… ಬಸ್ಸು ಬಪ್ಪಾಗ ಗಂಟೆ ಏಳು! ಡ್ರೈವರಿಂಗೆ ಉದಿಯಪ್ಪಾಗ ಎಚ್ಚರಿಗೆ ಆಯ್ದಿಲ್ಲೆ ಆಯ್ಕು. ಅಂತು ಎಲ್ಲೊರ ಕೈಲಿ ಬೈಗಳು ತಿಂದತ್ತು ಅದು, ಪಾಪ. ಹೋಪ ದಾರಿಲಿ ಬಸ್ಸಿನ ಅಲ್ಲಲ್ಲಿ ನಿಲ್ಸಿ ಹತ್ತುಲಿಪ್ಪವರ ಎಲ್ಲ ಹತ್ತುಸಿಗೊಂಡು ಎಂಟೂವರೆಗೆ ಪಡುಬಿದ್ರೆಗೆ ಎತ್ತಿತ್ತು. ಅಲ್ಲಿ ಒಂದು ಹೋಟ್ಳಿಲಿ, ಹಶು ಆಗಿ ಹುಳುಸತ್ತ ಹೊಟ್ಟೆಗೆ ಒಂದೊಂದು ಪ್ಲೇಟು ಪಲಾವುದೇ, ಒಂದೊಂದು ಗ್ಳಾಸು ಕಾಪಿಯುದೇ ಬಿದ್ದತ್ತು. ಅಷ್ಟಪ್ಪಗ ಹೊಟ್ಟೆಗಟ್ಟಿ ಆಗಿ ಎಲ್ಲೊರಿಂಗೂ ಶಕ್ತಿ ಬಂದಿತ್ತು. ಬಸ್ಸಿಲಿ ಹಾಕಿದ ಧಿಮಿಧಿಮಿ ಪದ್ಯಕ್ಕೆ ದಿತ್ತೈ ದಿತ್ತೈ ಕೊಣುದವು. ನಾವು ಕರೇಲಿ ಕೂದುಗೊಂಡು ವೀಡ್ಯ ಮಾಡಿತ್ತು. 🙂
ಅಲ್ಲಿಂದ ಹೆಬ್ರಿಗೆ ಬಂದು ಅಲ್ಲಿ ಒಂದು ಹತ್ತು ನಿಮಿಶ ನಿಂದಿಕ್ಕಿ ಕೂಡ್ಳಿನ ಕಡೆಗೆ ಹೆರಟತ್ತು ಬಸ್ಸು. ಕೂಡ್ಳಿಲಿ ಸುಮಾರು ನಡವಲಿದ್ದು ಹೇಳ್ತ ಕಾರಣಕ್ಕೆ ಡೇನ್ಸು ಮಾಡ್ತವೆಲ್ಲ ರಜ ವಿಶ್ರಾಂತಿ ತೆಕ್ಕೊಂಡವು. ಹೆಬ್ರಿಂದ ಕೂಡ್ಳು ಕಾಡಿನ ಬುಡಕ್ಕೆ ಬಸ್ಸು ಹೋಪಲ್ಲಿ ವರೆಗೆ ಹೋಗಿ ಇಳುದೆಯ. ಎಂಗಳ ಕ್ಳಾಸು ಲೀಡರು ಬೇಗಿಂದ ನಶ್ಯದ ಹೊಡಿ ಕಟ್ಟುಗಳ ತೆಗದತ್ತು. ಬೌಶ್ಶ ಪಾರೆ ಮಗುಮಾವನತ್ರ ಕೇಳಿತ್ತೋಳಿ. ಉಮ್ಮಪ್ಪ, ಆನು ಕೇಳಿದ್ದಿಲ್ಲೆ ಎಲ್ಲಿಂದಾಳಿ. ಎಲ್ಲೊರು ಉದ್ದಿಗೊಂಡಾಂಗೆ ಪಾದಕ್ಕೆ ಸಮಾ ತಿಕ್ಕಿದೆ, ಉಂಬ್ಳು ಕಾಲಿನ ಮೂಸಿರೂ ತಲೆತಿರುಗುವಾಂಗೆ!
ಎಲ್ಲೊರೂ ಅವರವರ ಚೆಂಙಾಯಿಗಳೊಟ್ಟಿಂಗೆ ಬೊಬ್ಬೆ ಹೊಡಕ್ಕೊಂಡು ಹೆರಟೆಯ. ಅಲ್ಲಿಂದ ನಿಜವಾಗಿ ಮತ್ತುದೇ ವಾಹನ ಹೋವುತ್ತ ಮಾರ್ಗ ಇದ್ದು ಒಂದು ನಾಕು ಕಿಲೋಮೀಟ್ರು ಅಪ್ಪಷ್ಟು. ಆದರೆ, ಆ ಮಾರ್ಗಲ್ಲಿ ಜೀಪೋ, ಸ್ಕೂಟರೋ, ಬೈಕ್ಕೋ ಹೋಕಷ್ಟೆ. ಬಸ್ಸು ಹೋಗ. ಹಾಂಗೆ ಎಂಗೊಗೆ ಅಷ್ಟು ಜಾಸ್ತಿ ನಡವಲೆ. ನಡುಮದ್ಯಾನ್ನದ ಸಮೆಯ. ನಟಬೆಶಿಲು. ದೇಹಲ್ಲಿದ್ದ ಪಸೆ ಪೂರ ನಾಕು ಹೆಜ್ಜೆ ನಡದಪ್ಪಗಳೇ ಆರಿತ್ತು. ಒಟ್ಟೊಟ್ಟಿಂಗೆ ಉಂಬುಳು ದರ್ಶನವೂ ಅಪ್ಪಲೆ ಸುರು ಆತು. ಒಂದೆರಡು ಜನರ ಕಾಲಿಂಗೆ ಹತ್ತಿತ್ತುದೇ.
ನಡದು ನಡದು ಕಾಡಿನ ಬುಡಕ್ಕೆ ಎತ್ತಿದೆಯ.ಅಲ್ಲಿ ಒಂದು ಹೊಳೆ ದಾಂಟುಲೆ. ಆತನ್ನೆ, ಕಾಲಿಂಗೆ ಉದ್ದಿದ ನಶ್ಯ ಎಲ್ಲ ನೀರುಪಾಲು! ಮುಂದೆ ಸಿಕ್ಕಿದ ಉಂಬುಳುಗೊಕ್ಕೆಲ್ಲ ಭರ್ಜರಿ ಊಟ ಎಂಗಳ ಕಾಲು!
ಹೊಳೆ ದಾಂಟಿ ಹೋಪಾಗ ಒಂದು ರಜ್ಜ ದಾರಿ ತಪ್ಪಿತ್ತು ಎಂಗೊಗೆ. ಹಾಂಗಾಗಿ ಕಾಡಿನ ಕಡಿದಾದ ದಾರಿಲಿ, ಉಂಬುಳುವಿನ ಸತತ ಆಕ್ರಮಣಲ್ಲಿ ಹೇಂಗೇಂಗೋ ನಡಕ್ಕೊಂಡು ಹೋದೆಯ. ಕೆಲವು ಜನಕ್ಕೆ ಉಂಬುಳು ದೊಡ್ಡ ರಾಕ್ಷಸನ ಹಾಂಗೆ ಕಂಡು, ಗೆಂಟ್ಳು ಹರಿತ್ತ ನಮುನೆ ಕಿರ್ಚಿದವಯ್ಯ! ಅಲ್ಲೆಲ್ಯಾರು ನಕ್ಸಲೈಟುಗೊ ಇದ್ದಿದ್ದರೆ ಹೆದರಿ ಓಡ್ತಿತವೋ ಏನೊ ಈ ಬೊಬ್ಬೆಗೆ.

ಸೀತಾಜಲಪಾತ..

ಈ ಟ್ರಿಪ್ಪಿನ ಜಾಗೆಯ ನಿಗಂಟು ಮಾಡಿದವಕ್ಕೆ ಸಹಸ್ರ ನಾಮಾರ್ಚನೆ ಮಾಡಿಗೊಂಡು ಕಾಡಿನ ಗುಡ್ಡೆ ಹತ್ತಿದೆಯ ಎಲ್ಲೊರುದೇ. ಇನ್ನು ಈ ಜನ್ಮಲ್ಲಿ ಇಲ್ಲಿಗೆ ಬಪ್ಪಲಿಲ್ಲೆ ಹೇಳಿಗೊಂಡು ಎಲ್ಲೊರೂ ಆವ್ಗಳೇ ಶಪಥ ಮಾಡಿದವು. ಅಂತೂ ಇಂತೂ ಒಂದೂವರೆ ಗಂಟೆ ನಡದು ಕಡೇಂಗೆ ಕೂಡ್ಳು ಜಲಪಾತಕ್ಕೆ ಎತ್ಯಪ್ಪಗ… ವಾ…ವ್!!! ಸೂ..ಪರ್.. ಹೇಳಿ ಎಲ್ಲೊರದ್ದೂ ಉದ್ಗಾರ! ಇಷ್ಟ್ರ ವರೆಗಾಣ ಬಚ್ಚಲು ಎಲ್ಲ ಆ ಸೀತಾಜಲಪಾತದ ಸೊಬಗಿನ ನೋಡ್ಯಪ್ಪಗ ಮಾಯ!

ಹೇಂಗೋ ಸರ್ಕಸ್ಸು ಮಾಡಿಗೊಂಡು, ಎದ್ದುಗೊಂಡು ಬಿದ್ದುಗೊಂಡು ಜಲಪಾತದ ಬುಡಕ್ಕೊರೆಗೆ ಹೋದೆಯ. ನಿಜಕ್ಕೂ ಅವಿಸ್ಮರಣೀಯ ಅನುಭವ ಅದು. ಭೋರ್ಗರೆವ ಜಲಪಾತದ ಸುತ್ತ ಇಪ್ಪ ಪ್ರಶಾಂತ ವಾತಾವರಣ. ಪ್ರಪಂಚದ ಬೆಶಿಯೇ ಇಲ್ಲದ್ದೆ ತನ್ನಷ್ಟಕ್ಕೇ ತಂಪಾಗಿ ಹರಿವ ತಂಪು ತಂಪು ನೀರು. ಆಹಾ! ಸ್ವರ್ಗವೇ ಇದ್ದಾಂಗಿತ್ತು. ಅಲ್ಲಿ ಸಮಯ ಹೋದ್ದೇ ಗೊಂತಾಯಿದಿಲ್ಲೆ. ಬೇಕಾದಷ್ಟು ಕುಶಿ ಪಟ್ಟು, ಕಟ್ಟಿಗೊಂಡು ಹೋಗಿದ್ದ ಚಪಾತಿ ತಿಂದು ಹೊಟ್ಟೆ ತುಂಬುಸಿಗೊಂಡೆಯ. ಮೂರೂವರೆ ವರೆಗೆ ಅಲ್ಲೇ ಇದ್ದು ಪ್ರಾಕೃತಿಕ ಜಲಧಾರೆಯ ಕಣ್ಣು ತುಂಬುಸಿಗೊಂಡು, ಇಲ್ಲಿಗೆ ಹೋಪಾಳಿ ಹೇಳಿದವಕ್ಕೆ ಮನಸಾರೆ ಅಭಿನಂದನೆ ಹೇಳಿಗೊಂಡೆಯ. 🙂
ಮನಸ್ಸಿಲ್ಲದ್ದ ಮನಸ್ಸಿಲಿ ಅಲ್ಲಿಂದ ಹೆರಟು, ಮತ್ತದೇ ದಾರಿಲಿ, ಉಂಬ್ಳುಗಳ ತಪ್ಸಿಗೊಂಡು ಹಾರಿಗೊಂಡು, ಓಡಿಗೊಂಡು ವಾಪಾಸು ಬಂದೆಯ. ವಾಪಾಸು ಬಪ್ಪಗ ಸರಿ ದಾರಿ ಸಿಕ್ಕಿದ ಕಾರಣ ಕಾಡಿನ ದಾರಿ ಬೇಗ ಮುಗುದತ್ತು. ಮುಂದಾಣ ಮಾರ್ಗಲ್ಲಿ ನಡವಾಗ ಮಾತ್ರ ಎಲ್ಲೊರಿಂಗೂ ಪುನಾ ಬಚ್ಚಿತ್ತು. ಎಷ್ಟೇ ಬಚ್ಚಿರೂ, ಈಗ ಮಾತ್ರ ಆ ಜಲಪಾತವೇ ಇದ್ದು ಮನಸ್ಸಿಲಿ. ಆ ನೆಂಪೇ ಬಚ್ಚಲಿನ ಎಲ್ಲ ತಣಿಶಿತ್ತು.
ಅವರವರ ಸ್ಪೀಡಿಲಿ ಒಬ್ಬೊಬ್ಬನೇ ನಡಕ್ಕೊಂಡು ಬಂದು ಬಸ್ಸು ಹತ್ತಿದವು. ಎಲ್ಲೊರೂ ಬಂದ ಮತ್ತೆ ಕೊಣಾಜೆ ಹೊಡೆಂಗೆ ಬಸ್ಸು ತಿರುಗಿತ್ತು.

~*~
ಅಲ್ಲಿ ತೆಗದ ಕೆಲವು ಪಟಂಗ ಇಲ್ಲಿದ್ದು:

ಅನುಶ್ರೀ ಬಂಡಾಡಿ

   

You may also like...

26 Responses

 1. ವಿದ್ಯಾ ರವಿಶಂಕರ್ says:

  ಲಾಯ್ಕಾಯಿದು ಬರದ್ದದು.

 2. shivakumara says:

  ಯಾವುದೆ ಹುಳಿ ಇರುವ ವಸ್ಥು ಇಂಬಳ ಒಡಿಸಲು ಉಪಯೋಗಿಸಬಹುದು

 3. vaishali says:

  bhaari olle lekhana. odiyappaga khushi athu. ondu payana belesidare akku kantu. dhanyavadango..

 4. ಸೂರ್ಯ says:

  ಬಂಡಾಡಿ ಅಜ್ಜಿ ಪುಳ್ಳಿಯ ಪ್ರವಾಸ ಕಥನ ಲಾಯ್ಕ ಆಯ್ದು. ಎಂಗೊ ಪಿಜಿಲಿ ಇಪ್ಪಗ ಅಲ್ಲೇ ಹತ್ತರೆ ಇಪ್ಪ ವಿಸಿ ಫಾಲ್ಸಿಂಗೆ ಹೋಗಿ ಆಡಿದ ಆಟಂಗೊ ಎಲ್ಲ ನೆಂಪಾತು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *