ಗಬ್ಬಲಡ್ಕದ ’ಸುಭಗ’ರು ಗದ್ದಲ ಇಲ್ಲದ್ದೆ ಬೈಲಿಂಗೆ ಬಂದವು!

ಬೈಲು ಪಕ್ವ ಆಯೇಕಾರೆ ಅದರ್ಲಿ ಎಲ್ಲವುದೇ ಬೇಕು – ಎಲ್ಲೋರುದೇ ಬೇಕು.
ಉಶಾರಿಯ ಇಂಜಿನಿಯರಕ್ಕೊ ಮಾಂತ್ರ ಇದ್ದರೆ ಸಾಕೋ? ಸಾಲಲೇ ಸಾಲ – ಪೆಂಗಣ್ಣನೋ, ಬೋಸಬಾವನೋ ಸೇರಿಗೊಳೆಕ್ಕು!
ಬಿಂಗಿಮಾಡ್ತ ನೆಗೆಗಾರ ಇದ್ದರೆ ಸಾಕೋ – ಜೋರು ಮಾಡ್ಳೆ ಮಾಷ್ಟ್ರುಮಾವಂದೇ ಬೇಕು!
ಹಾಂಗೆಯೇ, ಬೈಲಿನ ಬೇರೆಬೇರೆ ವೆಗ್ತಿತ್ವಂಗಳ ಒಟ್ಟಿಂಗೆ – ಬೇಕೇಬೇಕಾದ ಹೊಸ ವೆಗ್ತಿ – ಸುಭಗ!!
~

ಗಬ್ಬಲಡ್ಕದ ಸುಭಗ ಬೈಲಿಂಗೆ ಬಂದರೆ ಗದ್ದಲಡ್ಕ ಅಕ್ಕೋ? 🙂

ಅಪ್ಪು, ಇವು ಸುಬ್ರಹ್ಮಣ್ಯಟ್ಬ್ಬಲಡ್ಕ.
ಹೆಸರು ಮಾಂತ್ರ ಸುಭಗ ಅಲ್ಲ, ಕಾಂಬಲೂ ಹಾಂಗೇ, ಇಪ್ಪಲೂ ಹಾಂಗೇ, ಗುಣವುದೇ ಹಾಂಗೇ, ಯೇವತ್ತೂ ಸುಭಗನೇ!!
~
ಕಲ್ಲುಗುಂಡಿಗೆ ಮಂಡಲೋತ್ಸವಕ್ಕೆ ಹೋಗಿದ್ದರೆ ನೋಡಿಪ್ಪಿ ನಿಂಗೊ – ರಂಗುರಂಗಿನ ಮಂಟಪವ!
ಇಡೀ ಕಾರ್ಯಕ್ರಮ ಒಳ್ಳೆ ರೀತಿಲಿ ನೆಡತ್ತಲ್ಲದೋ, ಹಾಂಗಪ್ಪಲೆ ಕಾರ್ಯಕ್ರಮಲ್ಲಿ ಷ್ಟೇಜಿನ ಜೆವಾಬ್ದಾರಿ ಹೊತ್ತದಾರಪ್ಪಾ – ಹೇಳಿ ಆನುಸಿತ್ತಿದ್ದು.
ಅಜ್ಜಕಾನಬಾವ ಚೌಕಿಹೊಡೆಂಗೆ ಹೋಗಿ ತಿಳುದು ಹೇಳಿದ, ‘ಷ್ಟೇಜಿನ ಜೆವಾಬ್ದಾರಿ ಸುಬಗಂದಡ’’ ಹೇಳಿ!
ಅಪ್ಪೋ – ಹೇಳಿ ಕೊಶಿಯೂ ಆಶ್ಚರ್ಯವೂ ಆತೊಂದರಿ!

ಹಾಂಗೆ, ಕಲ್ಲುಗುಂಡಿ ಕಾರ್ಯಕ್ರಮ ಮುಗುದ ಮೇಗೆ, ಕಲ್ಲು-ಗುಂಡಿಯ ಮಾರ್ಗಲ್ಲಿ ಬೈಲಿಂಗೆ ಬರೆಕ್ಕಲ್ಲದೋ – ಏನಾರೊಂದು ವೆವಸ್ತೆ ಇದ್ದೋ ಹೇಳಿ ನೋಡಿಗೊಂಡಿತ್ತು..
ಅಣ್ಣ ಸುಬಗ ಬೈಕ್ಕಿಲಿ ಬುರುಬುರು ಮಾಡಿಗೊಂಡು ಹತ್ತರೆ ಬಂದು ಕೇಳಿದವು, ಒಪ್ಪಣ್ಣಾ – ಬತ್ತೆಯೋ? – ಹೇಳಿಗೊಂಡು.
ಹತ್ತಿತ್ತು ಬೈಕ್ಕು… ಗಬ್ಲಡ್ಕ ಒರೆಂಗೆ!!
ಅವಕ್ಕೆ ಇಪ್ಪ ಸಾಹಿತ್ಯ – ಯಕ್ಷಗಾನದ ಆಸಗ್ತಿ, ಬರಹಗಾರರ ಸಹವಾಸ, ಪದ್ಯ-ಗದ್ಯ-ಭಾಮಿನಿಗಳ ಆಸಗ್ತಿ – ಹಿಂಗುರ್ತ ಎಲ್ಲ ವಿಶಯಂಗಳುದೇ ಗೊಂತಾತು!
ಹೇಳಿದಾಂಗೆ, ಅವು ಸುಬಗ° ಹೇಳಿ ಗುರುಗೊಕ್ಕೆ ಗೊಂತಾಗಿ ನಮ್ಮ ಸಂಘಟನೆಲಿ ಒಂದು ಜೆವಾಬ್ದಾರಿಯನ್ನೂ ಕೊಟ್ಟಿದವಡ!!
~

ಗಬ್ಲಡ್ಕದ ಹತ್ತರೆಯೇ ನಮ್ಮ ಬೈಲಿನ ಜಾಲು-ಸುರು ಇದಾ! ಹಾಂಗೆ, ತಿರ್ಗಾಸು ಎತ್ತುವಗ ಮೆಲ್ಲಂಗೆ ಇಳುದೆ.
– ಇಳಿವಲಪ್ಪಗ ಕೇಳಿದೆ, ಬೈಲಿಂಗೆ ಶುದ್ದಿ ಹೇಳ್ತಿರೋ – ಹೇಳಿಗೊಂಡು!
ಬೈಲಿಂಗೆ ದಿನಾಗುಳು ಬತ್ತರೂ, ಕೆಲಸಂಗಳ ಎಡಕ್ಕಿಲಿ ಯೇವತ್ತೂ ಶುದ್ದಿ ಹೇಳಿಕ್ಕಲೆ ಎಡಿಯ; ಪುರುಸೊತ್ತಿಲಿ ಹೇಳುವೊ° – ಹೇಳಿದವು.

ಒಳ್ಳೆ ಅಭಿರುಚಿ ಇಪ್ಪ ನಮ್ಮ ಸುಭಗ° ನೆರೆಕರೆಗೆ ಬಂದು, ಶುದ್ದಿಹೇಳುಲೆ ಸುರುಮಾಡ್ಳಿ ಹೇಳ್ತದು ಎಲ್ಲೋರ ಅನಿಸಿಕೆ.
ದಿನಾಗುಳೂ ಬೈಲಿಂಗೆ ಬಪ್ಪಲೆ ಅವರ ಮನೆದೇವರು ಉಮಾಮಹೇಶ್ವರ° ಅವಕಾಶಮಾಡಿ ಕೊಡ್ಳಿ ಹೇಳ್ತದು ಬೈಲಿನೋರ ಹಾರಯಿಕೆ!
~
ಒಪ್ಪಣ್ಣ

ಸುಭಗಣ್ಣನ ಸಂಪರ್ಕ ವಿವರ:

ನೆರೆಕರೆಯ ಪುಟ: ಸಂಕೊಲೆ
ಓರುಕುಟ್ಟುತ್ತ ಪುಟ: ಸಂಕೊಲೆ
ಮೋರೆಪುಟ: ಸಂಕೊಲೆ

ಸುಭಗರ ಶುದ್ದಿಗೊ ಸದ್ಯಲ್ಲೇ ಬೈಲಿಲಿ ಬತ್ತು.
ಕಾದೊಂಡಿರಿ.
~
ಗುರಿಕ್ಕಾರ°

Admin | ಗುರಿಕ್ಕಾರ°

   

You may also like...

16 Responses

 1. Gopalakrishna BHAT S.K. says:

  ಸ್ವಾಗತ

 2. ”ಸುಭಗ’' says:

  ಛೆ..ಛೆ..ಛೆ..!! ಗದ್ದಲ ಎಂತಗಪ್ಪಾ ಶುದ್ಧ ಹವ್ಯಕರ ಈ ಚೆಂದದ ‘ಸುದ್ದಿಯ ಬೈಲಿ’ಂಗೆ ಬಪ್ಪಲೆ..?! ನವಗೆ ಹಾಂಗಿಪ್ಪದೆಲ್ಲ ಅರಡಿಯ..
  ಎಲ್ಲೋರು ಭಾಳ ಆತ್ಮೀಯತೆಲಿ ಸ್ವಾಗತ ಮಾಡಿದ್ದಿ. ತುಂಬ ಕೊಶಿ ಆತು. ಇದಾ, ‘ಸರ್ವೇಭ್ಯೋ ಬ್ರಾಹ್ಮ್ಣೇಭ್ಯೋ ನಮಃ’ ಹೇಳಿ ಉದ್ದಂಡ ನಮಸ್ಕಾರ ಮಾಡಿ ಕೃತಜ್ಞತೆ ಸಲ್ಲುಸುತ್ತಾ ಇದ್ದೆ. ಹೇಳಿ ಕೇಳಿ ನಾವಿಲ್ಲಿಗೆ ಹೊಸೊಕ್ಲು. ಹಾಂಗಾಗಿ ಬೈಲಿನ ನೆರೆಕರೆಯವರ ಪೂರ ಗುರ್ತ ಸಾಲ. “ಗುರಿಕ್ಕಾರ್ರೆ, ನಿಂಗೊ ಎಲ್ಲರು ಕೂದಂಡು ಶುದ್ದಿ ಮಾತಾಡಿ; ರಜ ಸಮಯ ಆನೊಂದು ಕರೇಲಿ ತಳಿಯದ್ದೆ ಕೂದು ಕೇಳಿಂಡಿರ್ತೆ” ಹೇಳಿದೆ. “ಅದಾಗ; ನಿಂಗಳೂ ಬನ್ನಿ ಸಭೆಲಿ ಕೂರೆಕ್ಕು” ಹೇಳಿದವು. ನಿವುರ್ತಿ ಇಲ್ಲದ್ದೆ “ಆತಂಬಗ” ಹೇಳಿದೆ.

  ಕೃಷ್ಣಮೋಹನಣ್ಣ ‘ಹಾರ-ತುರಾಯಿ ಹಿಡ್ಕಂಡು ಕಾದಂಡಿದ್ದೆಯೊ, ಗಂಭೀರ ಸುದ್ದಿಗೊ ಬರಲಿ’ ಹೇಳಿದವು. ಇದರ ಅರ್ಥ ‘ಪೆದಂಬು-ಗದ್ದಲ ಮಾಡಿರೆ ಬೆನ್ನಿಂಗೆ ಗುದ್ದಲೆ ಗುದಿಗೆ ಹಿಡ್ಕಂಡು ಕಾದಂಡಿದ್ಯೊ, ಪರಿಸ್ಥಿತಿ ಗಂಭೀರ ಅಕ್ಕು’ ಹೇಳಿ ಎನಗೆ ಆಗಳೇ ಗೊಂತಾಯಿದು..!

  • ರಘುಮುಳಿಯ says:

   “ಶುದ್ಧ ಹವ್ಯಕರ ”
   ಏ ಭಾವ, ಬೋಚನ ಬಿಟ್ಟಿರೋ ಹೇಳಿ…

   • ಸುಭಗ says:

    ಭಾವ, ಬೋಚಣ್ಣ ಕಾಂಬಲೆ ಹಾಂಗಿದ್ದರೂ ಅವನ ಮನಸ್ಸು ಶುದ್ಧ ಇದ್ದಪ್ಪ, ಸುಮ್ಮನೆ ಹೇಳ್ಳಾಗ.. 😉

 3. ಬೊಳುಂಬು ಮಾವ says:

  “ಸುಭಗ”ನಿಂದ ಬೈಲಿನ ಸೊಬಗು ಹೆಚ್ಚಾಗಲಿ. ಬೈಲಿಂಗೆ ಆತ್ಮೀಯ ಸ್ವಾಗತ. ಸುಭಗನ ಮನೆದೇವರು ಉಮಾ ಮಹೇಶ್ವರ ಸರಿ. ಅದರಲ್ಲಿ ಉಮಾ ಕೆಂಪು ಕೆಂಪು ಆದ್ದೆಂತಕೆ ? ಮನೆ ದೇವರ ಕೃಪೆ ಇಲ್ಲದ್ರೆ ಏವ ಕೆಲಸ ಮಾಡ್ಳೂ ಎಡಿಯ ಹೇಳಿ ಗುರಿಕ್ಕಾರರ ಅಭಿಪ್ರಾಯ ಯಾವತ್ತೂ ನಿಜ.

  • ಸುಭಗ says:

   ಬೊಳುಂಬು ಮಾವಾ, ‘ಉಮಾ’ ಹೇಳಿರೆ ದೇವಿ ಅಲ್ಲದೊ? ಅಂಬಗಂಬಗ ಕುಂಕುಮಾರ್ಚನೆ ಮಾಡೆಕ್ಕಾವ್ತಿದ! ಹಾಂಗಾಗಿ ಕೆಂಪು ಬಣ್ಣ ಬಂದದಾಯ್ಕು 😉

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *