ಸುಬ್ರಹ್ಮಣ್ಯ ಷಷ್ಠಿ ವ್ರತ

ಸುಬ್ರಹ್ಮಣ್ಯ  ಷಷ್ಠಿ ವ್ರತವ  ಲೋಕಲ್ಲಿ ಮದಾಲು ಆಚರಿಸಿದವು

ಪುರಾತನ ಕಾಲಲ್ಲಿ ಹಿರಣ್ಯಾಕ್ಷ ಹೇಳ್ತ  ರಾಕ್ಷಸ ಇದ್ದಿದ್ದನಾಡ. ಅವನ ಮಗ° ತಾರಕಾಸುರನೂ ದುಷ್ಟನೆ. ಇವ°  ಗೋಕರ್ಣಲ್ಲಿ ಶಿವನ ತಪಸ್ಸು ಮಾಡಿ ಒಲಿಸಿಗೊಂಡ°. ಎಂತಕೆ ಎನ್ನ ತಪಸ್ಸು ಮಾಡಿ ಕರೆಸಿಗೊಂಡೆ ಕೇಳಿದ° ಶಿವ°.  ಅಂಬಗ, ಎನಗೆ ಮಹಾದೇವನಾದ ನಿನ್ನ ಹೊರತಾಗಿ ಬೇರೆ ಆರಿಂದಲೂ ಸಾವು ಬಪ್ಪಲಾಗ ಹಾಂಗೆ ವರ ಕೊಡೆಕು ಕೇಳಿಗೊಂಡ°. ಶಿವ° ತಥಾಸ್ತು ಹೇಳಿದ°. ವರ ಕೊಟ್ಟ ಪರಮಾತ್ಮ ಕೊಲ್ಲಲಿದ್ದೊ? ಹೇಳಿ ತಾರಕಾಸುರನ ಲೆಕ್ಕ: ಹೀಂಗೆ ಯೋಚಿಸಿಗೊಂಡು ಮದಾಂಧನಾಗಿ ದೇವತಗೊಕ್ಕೆ ತುಂಬ ಕಾಟ ಕೊಡ್ಳೆ ತೊಡಗಿದ°. ಎಲ್ಲ ದೇವತಗೊ ಇವನ ಕಾಟ ತಡೆಯದ್ದೆ ಸ್ವರ್ಗ ಬಿಟ್ಟು ಓಡಿದವಡ. ಇದರಿಂದಾಗಿ ಕಂಗೆಟ್ಟ ದೇವೇಂದ್ರ ದೇವಗುರುಗಳಾದ ಬ್ರಹಸ್ಪತಾಚಾರ್ಯರಲ್ಲಿಗೆ ಬಂದು ಇದಕ್ಕೆ ಪರಿಹಾರೋಪಾಯ ಹೇಳೆಕ್ಕು ಹೇಳಿ ಭಿನ್ನವಿಸಿದ°.

ಅಂಬಗ ಬ್ರಹಸ್ಪತಿ,  “ದೇವೇಂದ್ರಾ.., ತಾರಕಾಸುರ ಶಿವನತ್ರೆ ಅವನ ಹೊರತಾಗಿ ಬೇರೆ ಆರಿಂದಲೂ ಸಾವು ಬಪ್ಪಲಾಗ ಹೇಳಿ ಕೇಳಿಗೊಂಡಿದನಷ್ಟೇ, ಇದಕ್ಕೆ ಮಹಾದೇವನೇ ಪರಿಹಾರ ಹೇಳುಗು” ಹೇಳಿದ°.  ದೇವಗುರುಗಳ ಈ ಮಾತಿನ ಕೇಳಿದ ದೇವೇಂದ್ರ ಕೈಲಾಸ ಪರ್ವತಕ್ಕೆ ಹೋಗಿ ಮಹಾದೇವನ ಅಡಿದಾವರಗೆ ಎರಗಿ, ವಿಷಯ ತಿಳಿಸಿ ಅವನತ್ರೆ, ” ಪ್ರಭೋ, ಶಂಕರಾ, ನೀನು ವರಕೊಟ್ಟ ನಿನ್ನ ಭಕ್ತನ ನಿನ್ನ ಕೈಯಾರೆ ಕೊಲ್ಲಲೆಡಿಯ ನಿಜ, ಅದಕ್ಕಾಗಿ ನಿನ್ನಾಂಗೇ ಒಬ್ಬ ಸಮರ್ಥ ಮಗನ ಎಂಗೊಗೆ ಕೊಡು, ಅವನ ನಮ್ಮ ದೇವಸೇನಗೆ ಅಧಿಪತಿಯಾಗಿ ಮಾಡುತ್ತೆ  ತಾರಕನ ಸಂಹಾರ ಮಾಡ್ಳೆ ನಿನ್ನಂಶಂದಲೇ ಹುಟ್ಟಿ ಬಂದವನೇ ಆಯೆಕ್ಕಲ್ಲದಾ?”.

ದೇವತೆಗಳ ಈ ಬಿನ್ನಹವ ಮನ್ನಿಸಿಗೊಂಡ ಮಹಾದೇವ°,  ಕೈಲಾಸ ಪರ್ವತಕ್ಕೆ ಹೋಗಿ ಮನದನ್ನೆ ಪಾರ್ವತೀ ದೇವಿಯೊಟ್ಟಿಂಗೆ ಅಲ್ಲಿಯ ಕೇಳೀಕುಂಜಲ್ಲಿ ವಿಲಾಸ ಶೃಂಗಾರಲ್ಲಿ ತೊಡಗಿದ°.  ಹೀಂಗೇ ಹಲವಾರು ವರ್ಷ ಕಳಾತು.  ಈಚಿಗೆ ತಾರಕನ ಉಪದ್ರ ತಾಳಿಯೊಂಬಲೆ ಎಡಿಯದ್ದೆ ದೇವತಗೊ, ವಾಯುದೇವನ ಶಿವನಲ್ಲಿಗೆ ಕಳಿಸಿದವು.  ವಾಯು, ಶಿವ-ಪಾರ್ವತಿಯರ ಏಕಾಂತ ಜಾಗ್ಗೇ ನುಗ್ಗಿ ಬಂದ°. ಈಗ ದೇವತಗೊಕ್ಕೆ ಮಾತು ಕೊಟ್ಟದು ನೆಂಪಾತು ಶಿವಂಗೆ.  ತನ್ನ ಕ್ರೀಡೆಯ ಅರ್ಧಕ್ಕೇ ನಿಲ್ಲುಸಿ ಎದ್ದು ಬಂದ°.  ತನ್ನ ಲಿಂಗ ಮಧ್ಯಲ್ಲಿಪ್ಪ ಅಮೋಘವಾದ ವೀರ್ಯವ ಅಗ್ನಿಯ ಮದ್ಯಲ್ಲಿ ಬಿಟ್ಟ°.  ಅಗ್ನಿಗೆ ಇದರ ತಾಳಿಯೊಂಬಲೆಡಿಯದ್ದೆ ಗಂಗಗೆ ಚೆಲ್ಲಿದ°.  ಗಂಗಗೂ ಶಿವನ ಶಕ್ತಿಪಾತವ ಸಹಿಸಿಗೊಂಬಲೆ ಎಡಿಗಾತಿಲ್ಲೆ.  ಗಂಗೆ ದಡಲ್ಲಿಪ್ಪ ದರ್ಭೆಹಾಸಿಂಗೆ ಚೆಲ್ಲಿತ್ತು.  ಅಷ್ಟೊತ್ತಿಂಗೆ ಅಲ್ಲಿ ಸಂಚರಿಸುತ್ತಿಪ್ಪ ಆರು ಜೆನ ಮುನಿಪತ್ನಿಯರಾದ ಕೃತ್ತಿಕೆಯರು ಬಂದವು.  ಅವಕ್ಕೆ ಇಂದ್ರ ಮೊದಲೆ ಹೇಳಿತ್ತಿದ್ದ° – ಇಲ್ಲಿ ಹುಟ್ಟಿದ ದ್ವಾದಶ ಆದಿತ್ಯರ ಹಾಂಗೆ ಕಾಂಬ, ಪ್ರಕಾಶಿಸುವ ಮಗ° ನಿಂಗೊಗೂ ಮಗನೇ ಹೇಳಿ.

ದೇವೇಂದ್ರನ ಅಪ್ಪಣೆ ಅಪ್ಪದ್ದೆ ಆರು ಜೆನ ಮುನಿಪತ್ನಿಯರೂ ಮಹಾದೇವನ ಶಕ್ತಿಯ ರಕ್ಷಣೆ ಮಾಡಿದವು.  ಹೀಂಗಿಪ್ಪಗ ಒಂದು ದಿನ ಶಿವನ ಆ ಶಕ್ತಿಂದ  ತೇಜಪುಂಜವಾದ ಒಂದು ಶಿಶು ಹುಟ್ಟಿತ್ತು. ಮಗು ಕೂಗಲೆ ಸುರುಮಾಡಿತ್ತು.  ಈ ಕೂಗು ಕೇಳಿ ಆರು ಜೆನ ಕೃತ್ತಿಕೆಯರೂ ಓಡಿ ಬಂದವು.  ಆರು ಜೆನ ಅಬ್ಬೆಕ್ಕೊ ಶಿಶುವಿನ ನೋಡಿಯಪ್ಪಗ ಅವರ ಎಲ್ಲೋರ ಮೊಲೆಲಿಯೂ ಹಾಲು ಸುರಿವಲೆ ಸುರುವಾತಡ.  ಆಶ್ಚರ್ಯ! ಮಗುವಿಂಗೆ ಆರು ಮೋರೆ ಹುಟ್ಟಿತ್ತಡ;  ಆರುಮೋರೆಲಿ ಮಲೆ ತಿಂದ ಕಾರಣ ಷಣ್ಮುಖ ಹೇಳಿ ಹೆಸರಾತು.  ಕೃತ್ತಿಕೆಯರ ಮಗನಾದ ಕಾರಣ ಕಾರ್ತಿಕೇಯ ಹೇಳಿಯೂ, ಶಿವ-ಪಾರ್ವತಿಯರ ಮಗನಾದ ಕಾರಣ ಕುಮಾರ ಹೇಳಿಯೂ, ಶಿವನ ರೇತಸ್ಸು ನೆಲಲ್ಲಿ ಬಿದ್ದು ಹುಟ್ಟಿದ ಕಾರಣ ಸ್ಕಂದ ಹೇಳಿಯೂ ಹೆಸರಾತು. ಶಂಕರ ಇಂದ್ರನ ಅಪೇಕ್ಷೆ ಹಾಂಗೆ ಇವನ ದೇವತೆಗಳ ಸೇನಾಪತಿಯಾಗಿ ಮಾಡಿದ°.  ಹಾಂಗಾಗಿ ಇವಂಗೆ ದೇವಸೇನಾಪತಿ ಹೇಳ್ತ ಹೆಸರೂ ಬಂತು. ಶಿವ°, ಮಗಂಗೆ ಶಕ್ತಿ ಹೇಳ್ತ ಆಯುಧವ ಕೊಟ್ಟು ನವಿಲಿನ ವಾಹನವಾಗಿ ಕೊಟ್ಟ°.  ಹಾಂಗಾಗಿ ಮಯೂರವಾಹನ ಹೇಳಿಯೂ ದೆನಿಗೇಳಿದವು.  ವಿಷ್ಣು ಇವಂಗೆ ಶಸ್ತ್ರಗಳನ್ನೂ ದೇವೇಂದ್ರ ಅಸ್ತ್ರಗಳನ್ನೂ ಮಾತೃ ಗಣಂಗೊ ಬಗೆ ಬಗೆಯ ಆಯುಧಂಗಳ ಕೊಟ್ಟವು.

ದೇವತಗೊ, ಸ್ಕಂದನ ಅವರ ಸೇನಾಪತಿಯಾಗಿ ಮಾಡಿಗೊಂಡು ತಾರಕಾಸುರನೊಟ್ಟಿಂಗೆ ಯುದ್ಧ ಮಾಡ್ಲೆ ಹೆರಟೊವು. ದೇವತಗೊಕ್ಕೂ ರಾಕ್ಷಸರಿಂಗೂ ರಕ್ತಶೃಂಗ ಪರ್ವತಲ್ಲಿ ಘನ ಘೋರ ಯುದ್ಧ ಅತು. ಸ್ಕಂದ ತನ್ನ ಅಪ್ಪ° ಕೊಟ್ಟ ಶಕ್ತ್ಯಾಯುಧಂದ ತಾರಕಾಸುರನ  ಸೀಳಿ   ನೆಲಕಚ್ಚಿಸಿದ°.  ತಾರಕಾಸುರ ಸತ್ತ ಸಂತೋಷಂದ ಸ್ವರ್ಗಕ್ಕೆ ಹಿಂತಿರುಗಿದವು.

ಸುಬ್ರಹ್ಮಣ್ಯ ಷಷ್ಟಿ ಮಹತ್ವ ಸ್ಕಂದನ ಶಕ್ತಿಪ್ರಹಾರಂದ ತಾರಕಾಸುರ ನೆಲಕ್ಕೆ ಬಿದ್ದಪ್ಪಗ ಭಯಂಕರ ಭೂಕಂಪ ಆತು.  ರಕ್ತಶೃಂಗ ಪರ್ವತ ರಜ್ಜ ಚಲಿಸಿತ್ತು , ಪರಿಣಾಮವಾಗಿ ಅಲ್ಲಿ ಇದ್ದ ಬ್ರಾಹ್ಮಣರಿಂಗೆ ಅಪಾಯ ಉಂಟಾಗಿ ಹೆದರಿ ಸ್ಕಂದಂಗೆ ಶಾಪ ಕೊಟ್ಟವು.  ಕೂಡ್ಳೇ ಹೊಯ್ದಾಡುತ್ತಿಪ್ಪ ರಕ್ತಶೄಂಗದ ಮೇಗೆ ಸ್ಕಂದ ತನ್ನ ಶಕ್ತ್ಯಾಯುಧವ ನಿಲ್ಲಿಸಿಕ್ಕಿ ಸತ್ತ ಬ್ರಾಹ್ಮಣರ ಬದುಕಿಸಿದ°.  ಹೀಂಗಾದರೂ ಬ್ರಾಹ್ಮಣರ ಶಾಪ ಹೋಯಿದಿಲ್ಲೆ.  ಅವ° ಕಾಳಸರ್ಪ ಆದ°.  ಇದರಿಂದ ಪಾರ್ವತಿಗೆ ಅತೀವ ದುಃಖ  ಆತು.  ಎಲ್ಲ ಅಬ್ಬೆಕ್ಕಳ ಹಾಂಗೆ ಪಾರ್ವತಿಯೂ ತನ್ನ ಮಗ° ಮದಲಾಣ ಹಾಂಗೆ ಅಪ್ಪಲೆ ಎಂತ ಮಾಡುದು? ಹೇಳಿ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದು ನೂರೆಂಟು ಷಷ್ಟಿ ವ್ರತವನ್ನೂ ಉಪವಾಸ ವ್ರತವನ್ನೂ ಮಾಡ್ಳೆ ಸುರುಮಾಡಿತ್ತು.  ಈ ವ್ರತದ ಉದ್ಯಾಪನಕ್ಕೆ ಎಲ್ಲ ದೇವತಗಳನ್ನೂ ದೆನಿಗೇಳಿತ್ತು. ಸ್ಕಂದನೂ ಕಾಳಸರ್ಪ ರೂಪಲ್ಲಿ ಬಂದ°. ಆಶ್ಚರ್ಯ!. ವಿಷ್ಣುವಿನ ಸ್ಪರ್ಶಂದ;  ಪಾರ್ವತಿಯ ವ್ರತಾಚರಣೆಂದಲಾಗಿ ಕುಮಾರಂಗೆ ಮದಲಾಣ ರೂಪವೇಬಂತು! ಹೀಂಗೆ ಸುಬ್ರಹ್ಮಣ್ಯಷಷ್ಠಿ ವ್ರತವ ಲೋಕಲ್ಲಿ ಪಾರ್ವತೀದೇವಿಯೇ ಮದಾಲು ಆಚರಿಸಿ ಇಷ್ಟಾರ್ಥ ಈಡೇರಿಸಿಗೊಂಡತ್ತು.

ದಕ್ಷಪ್ರಜಾಪತಿಯ ಮಗಳಾದ ದೇವಸೇನೆ ಒಂದು ದಿನ ಉದ್ಯಾನವನಲ್ಲಿ ತಿರುಗಿಗೊಂಡಿತ್ತು. ಅಂಬಗ ಕೇಶಿ ಹೇಳ್ತ ರಾಕ್ಷಸ ಅದರ ಅಪಹರಿಸಿತ್ತಿದ್ದ°. ಇಂದ್ರ ಆ ರಕ್ಕಸನ ಸೆರೆಂದ ಅದರ ಬಿಡಿಸಿ ತಾನೇ ರಕ್ಷಿಸಿಗೊಂಡಿತ್ತಿದ್ದ. ಷಣ್ಮುಖ ತಾರಕಾಸುರನನ್ನೂ ಶೂರಪದ್ಮಾಸುರನನ್ನೂ ಕೊಂದ ಮತ್ತೆ ದೇವಸೇನೆಯ ಷಣ್ಮುಖಂಗೆ ಇಂದ್ರ ಮದುವೆ ಮಾಡಿಸಿದ°. ಇವರ ಮದುವೆ ಸುಬ್ರಹ್ಮಣ್ಯಷಷ್ಟಿ ದಿನವೇ ಆತು. ಅವರಿಬ್ರ ಪಟ್ಟಾಭಿಷೇಕವಾದ ದಿನ ಶ್ರೀಪಂಚಮಿ ಹೇಳ್ತವು.

ಸುಬ್ರಹ್ಮಣ್ಯ ದೇವಸ್ಥಾನ ದಕ್ಷಿಣಕನ್ನಡದ ಸುಳ್ಯ ತಾಲೂಕಿನ ಒಂದು ಪುಣ್ಯಕ್ಷೇತ್ರ. ಇದರ ಹತ್ತರೆ ಕುಮಾರಧಾರಾ ಹೊಳೆ ಹರಿತ್ತು. ಈ ದೇವಸ್ಥಾನದ ಮೂಡು ಹೊಡೆಲಿ ಕುಮಾರಪರ್ವತ ತಲೆ ನೆಗ್ಗಿ ನಿಂದೊಡಿದ್ದು. ಚೈತ್ರ ಶುಕ್ಲ ಷಷ್ಟಿದಿನ ಸುಬ್ರಹ್ಮಣ್ಯಲ್ಲಿ ವಿಜೃಂಭಣೆಲಿ ಜಾತ್ರೆ ಆವುತ್ತು. ಈದಿನವ ಕುಕ್ಕೆಷಷ್ಠಿ, ಸ್ಕಂದಷಷ್ಠಿ, ಸುಬ್ರಹ್ಮಣ್ಯಷಷ್ಠಿ ಹೀಂಗೆಲ್ಲ ಹೇಳ್ತವು.ಇಲ್ಲಿ ಷಷ್ಠಿದಿನ ರಥ ಎಳವಗ ಮದಾಲು ರಥದ ಸುತ್ತೂ ಆಕಾಶಲ್ಲಿ ಗರುಡ ಪಕ್ಷಿ ಮೂರು ಸುತ್ತು ಹಾಕುತ್ತಡ. ಇಲ್ಯಾಣ ರಥ ತುಂಬಾ ದೊಡ್ಡದು. ರಥ ಎಳವ ಬಳ್ಳಿ ಹೇಳಿರೆ ನಾಗರಬೆತ್ತ. ರಥ ಎಳವಲೆ ಸೇರಿದ ಜೆನಂಗೊ ಅವವು ಕೈ ಹಿಡುದಷ್ಟು ಜಾಗೆಯ ಬಳ್ಳಿಯ [ಬೆತ್ತ] ಚೂರು ಪ್ರಸಾದ ರೂಪಲ್ಲಿ ಮನಗೆ ತೆಕ್ಕಂಡು ಹೋವುತ್ತವು. ಇದರ ಗಂಧ ತಳೆತ್ತ ಹಾಂಗೆ  ತಳದು ಚರ್ಮವ್ಯಾಧಿಗೆ ಕಿಟ್ಟಿರೆ ಗುಣ ಆವುತ್ತು ಹೇಳಿ ನಂಬಿಕೆ, ಅನುಭವವೂ ಇದ್ದು. ಸರ್ಪನ  ದೋಶ,  ಸಂತಾನಹೀನತೆ, ಪಾಂಡುರೋಗ ಮೊದಲಾದ ದೋಷಕ್ಕೆ ಸುಬ್ರಹ್ಮಣ್ಯನ ನಂಬಿರೆ ಒಳ್ಳೆ ಫಲ ಸಿಕ್ಕುತ್ತು ಹೇಳ್ತ ಅಚಲ ನಂಬಿಕೆ ಭಕ್ತಾದಿಗಳಲ್ಲಿದ್ದು.

~~**~~**~~

ವಿಜಯತ್ತೆ

   

You may also like...

12 Responses

  1. ಉಡುಪುಮೂಲೆ ಅಪ್ಪಚ್ಹಿಗೆ ಮನದಾಳದ ಧನ್ಯವಾದಂಗೊ ಏವದಕ್ಕೂ ಪ್ರೋಹ್ತ್ಸಾಹಸಿಕ್ಕೀರೆ ಉತ್ಸಾಹ ಬಪ್ಪದಲ್ಲೋ ಆಪ್ಪಚ್ಹಿ,?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *