ನಾವು ಎಂತಕೆ ತೆಂಗಿನಕಾಯಿ ಸಮರ್ಪಿಸುತ್ತು?

June 2, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭಾರತದ ದೇವಸ್ಥಾನಂಗಳಲ್ಲಿ ಅತ್ಯಂತ ಪ್ರಮುಖ ಸಮರ್ಪಣಾ ವಸ್ತು ಹೇಳಿರೆ ತೆಂಗಿನಕಾಯಿ.
ವಿವಾಹ, ಉಪನಯನ, ಹೋಮ, ಪೂಜೆ, ಹಬ್ಬ ಹರಿದಿನ ಹೇಳಿ ವಿಶೇಷ ದಿನಂಗಳಲ್ಲಿಯೂ ದೇವರಿಂಗೆ ತೆಂಗಿನಕಾಯಿ ಒಡದು ಮಡುಗಿ ಅಡ್ಡ ಬೀಳ್ತು.
ಮೊನ್ನೆ ದೊಡ್ಡ ಭಾವ ಹೊಸ ಬೈಕ್ ತೆಗದಿಪ್ಪಗಳೂ ಒಂದು ಕಾಯಿ ಒಡದ್ದವು. ಹಾಂಗೇಳಿ ಅಡ್ಕತ್ತಿಮಾರು ಮಾವ ಕಾಯಿ ಒಡದ್ದು ಅದು ಬೇರೆ ವಿಷಯ. ಅದು ಇದಕ್ಕೆ ಸೇರ್ತದಲ್ಲ. ಅದು ಚೆನ್ನೈ ಭಾವಂಗೂ ಸೇರಿ ಎಣ್ಣೆ ಮಾಡ್ಳೆ ಒಡದ್ದದು ಕೊಪ್ಪರ ಕಾಯಿ. ನಾವೀಗ ಮಾತಾಡ್ತ ಇಪ್ಪದು ಹಣ್ಣು ಕಾಯಿ ವಿಷಯ.

‘ನೈವೇದ್ಯ’ ಸಮಯಲ್ಲಿ ತೆಂಗಿನಕಾಯಿ ಸರೀ ಎರಡು ಹೋಳಪ್ಪಾಂಗೆ ಒಡದು ದೇವರಿಂಗೆ ಸಮರ್ಪಿಸುವದು ಕ್ರಮ. ಮತ್ತೆ ಅದನ್ನೇ ಪ್ರಸಾದ ಹೇಳಿ ಹಂಚುವ ಕ್ರಮವೂ ಇದ್ದು. ನಮ್ಮಿಚ್ಚೆಯ ಪೂರೈಸಿಕೊಡು  ಪರಮಾತ್ಮ ಹೇಳಿ ಪ್ರಾರ್ಥಿಸಿ ದೇವರಿಂಗೆ ಅರ್ಪುಸುವದು. ಹೋಮದ ಪೂರ್ಣಾಹುತಿಲಿ ಕೂಡ ತೆಂಗಿನಕಾಯಿ ವಾ ಕೊಬ್ಬರಿ ಅರ್ಪುಸುವದು ನಮ್ಮಲ್ಲಿ ವಾಡಿಕೆ.
ಕಲಶಕ್ಕೂ ತೆಂಗಿನಕ್ಕಾಯಿ ಮಡುಗುತ್ತು.
ಎಂತಕೆ?

ಪ್ರಾಚೀನ ಕಾಲಲ್ಲಿ ನಮ್ಮ ಪಶು ಸ್ವಭಾವವ ನಶಿಸಿಕೊಂಬ ನೆಪಲ್ಲಿ ಪ್ರಾಣಿಗಳ ಬಲಿಕೊಡ್ತಾ ಇತ್ತಿದ್ದವಡಾ!
ಕಾಲಕ್ರಮೇಣ ಇದು ಬದಲಾಗಿ ತೆಂಗಿನಕಾಯಿ ಒಡವದು – ಅರ್ಪುಸುವದು ರೂಢಿಲಿ ಜಾರಿಗೆ ಬಂತಡ. ಸಾಮಾನ್ಯವಾಗಿ ತೆಂಗಿನ ಜುಟ್ಟು ಮಾತ್ರ ಮಡುಗಿ ಬಾಕಿ ನಾರುಗಳ ಪೂರ್ತಿ ತೆಗದು ಮಡುಗುತ್ತ ಕ್ರಮ.

 • ಅದರ ಮೇಲ್ಭಾಗವ ಸೂಕ್ಷ್ಮವಾಗಿ ಗಮನಿಸಿರೆ ಆದೊಂದು ಮನುಷ್ಯನ ಮುಖದ ಹಾಂಗೇ ಕಾಣುತ್ತಡ. ‘ಅಹಂಕಾರ’ ಕಳದುಕೊಂಬ ಬಗೆಯಾಗಿ ತೆಂಗಿನಕಾಯಿ ಓಡವದು ಹೇಳ್ವ ನಂಬಿಕೆಯೂ ಸುರುವಾತಡ.
 • ಕಾಯಿಯೊಳ ಇಪ್ಪ ನೀರು ನಮ್ಮ ‘ವಾಸನೆ’ ಮತ್ತೆ ಅದರೊಳ ಇಪ್ಪ ತಿರುಳು (ಬೊಂಡ) ‘ಮನಸ್ಸಿ’ನ ಸಂಕೇತ.
 • ಆದ್ದರಿಂದಲೇ ಸರ್ವನಿಯಾಮಕನಾದ ಭಗವಂತಂಗೆ ಪರಮಾತ್ಮನಲ್ಲಿ ಶರಣಾಗತಿ ಬಯಸುವ ತತ್ವಲ್ಲಿ ಎಳನೀರ ಅಭಿಷೇಕ.

ತೆಂಗಿನಕಾಯಿ ನಿಸ್ವಾರ್ಥ ಸೇವೆಯ ಪ್ರತಿಬಿಂಬ ಹೇಳಿಯೂ ಮಡಿಕ್ಕೊಂಡಿದವು.
ತೆಂಗಿನ ಮರದ ಬೇರಿಂದ ಹಿಡುದು ನಾರು ಸಹಿತ ಗರಿ ವರೆಂಗೆ (ಪ್ರತಿ ಭಾಗವೂ) ಅಸಂಖ್ಯಾತ ರೀತಿಲಿ ಪ್ರಯೋಜನಕಾರಿ. ಮನೆ ಕಟ್ಟಲೆ ಅಡ್ಡ, ಸಂಕ ಹಾಕಲೂ ಮರ, ಚಾಪೆ ನೇಯಲು ಗರಿ, ಹಗ್ಗ ತಯಾರುಸಲೆ ನಾರು, ಸಾಬೂನು ಮಾಡ್ಲೆ, ದೀಪ ಬೆಳಗುಸಲೆ, ಅಡುಗೆ ಮಾಡ್ಲೆ , ಮೇಣ ಉದ್ದಲೆ.. – ಎಣ್ಣೆ ., ಹೀಂಗೆ ಹಲವಾರು ರೀತಿಲಿ ಉಪಯೋಗಿಸಲ್ಪಡುತ್ತು. ಅನೇಕ ಔಷಧ ತಯಾರಿಕೆಲಿಯೂ, ಔಷಧೋಪಚಾರಲ್ಲಿಯೂ ಇದರ ಉಪಯೋಗ ಆವ್ತು.

ತೆಂಗಿನಕಾಯಿಲಿಪ್ಪ  ಮೂರು ಚುಕ್ಕಿಗೊ ಶಿವನ ಮೂರು ಕಣ್ಣುಗಳ ಸಂಕೇತ. ನಮ್ಮ ಇಷ್ಟಾರ್ಥಂಗಳ ಪೂರೈಸುವ ಭಗವಂತಂಗೂ ಪ್ರಿಯವಪ್ಪ ಏಕೈಕ ದ್ರವ್ಯ – ತೆಂಗಿನಕಾಯಿ.
ಆದ್ದರಿಂದಲೇ ಬ್ರಾಹ್ಮಣಾಭಾವಲ್ಲಿ ತೆಂಗಿನಕಾಯಿ ಮಡುಗಿ ಸುಧಾರ್ಸುತ್ತು.
ಗುರುಗಳ ಭೇಟಿಗೆ ಫಲ ಸಮರ್ಪಣೆ ಹೇಳಿ ತೆಂಗಿನಕಾಯಿಯೇ ‘ಪೂರ್ಣ’ ಹೇಳಿ ಭಾವನೆಂದ ಇದಕ್ಕಿಂತ ಮಿಗಿಲು ಬೇರೇ ಫಲ ಇಲ್ಲೆ  ಹೇಳಿ ಭಾವಿಸಿ ತೆಂಗಿನಕಾಯಿಯ ಅರ್ಪಿಸುತ್ತು. ಮತ್ತು ಪ್ರಸಾದ ರೂಪಲ್ಲಿ ಅದನ್ನೇ ನಾವೂ ಪಡಕ್ಕೊಳ್ಳುತ್ತು ಧನ್ಯತಾ ಭಾವಂದ.

ತೆಂಗಿನಕಾಯಿಯ ಮಹತ್ವ, ಉಪಯೋಗ ಅರ್ಥ ಮಾಡಿಗೊಂಡ ಮನುಷ್ಯಂಗೆ ಜೀವನದ ಅರ್ಥ ಬೇಗ ಗೊಂತಕ್ಕು.

ಹರೇ ರಾಮ.

(ಸಂಗ್ರಹ)

ನಾವು ಎಂತಕೆ ತೆಂಗಿನಕಾಯಿ ಸಮರ್ಪಿಸುತ್ತು?, 5.0 out of 10 based on 3 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಮುಣ್ಚಿಕಾನ ಭಾವ

  ಲೇಖನ ತುಂಬಾ ಒಪ್ಪ ಆಯಿದು ಚೆನ್ನೈ ಬಾವ. ತೆಂಗಿನ ಕಾಯಿಯ ಮಹತ್ವ/ಉಪಯೋಗ ವಿವರಿಸಿದ್ದಕ್ಕೆ ಧನ್ಯವಾದಂಗೊ…

  [Reply]

  VA:F [1.9.22_1171]
  Rating: 0 (from 0 votes)
 2. ಏಕನಾಥ ಶೆಣೈ

  ನಾವು ದೇವರಿಗೆ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣನ್ನು ಮಾತ್ರ ಅರ್ಪಿಸಬೇಕು. ಅದರ ಹಿಂದಿನ ಉದ್ದೇಶ ಬಹಳ ಕುತೂಹಲಕಾರಿ. ಬಾಳೆಹಣ್ಣು ಮತ್ತು ತೆಂಗು ಮಾತ್ರವೇ “ಎಂಜಲು ” ಬೀಜದ ಗಿಡದಲ್ಲಿ ಹುಟ್ಟುವುದಿಲ್ಲ ! ಅಂದರೆ ಈ ಎರಡು ವಸ್ತುಗಳು ನಾವು ತಿಂದು ಬಿಸಾಡಿದ ಹಣ್ಣಿನ ಬೀಜದಿಂದ ಉತ್ಪತ್ತಿ ಯಾಗುವುದಿಲ್ಲ ! ದೇವರಿಗೆ ಎಂಜಲಾದ ಬೀಜದಲ್ಲಿ ಹುಟ್ಟಿದ ಫಲಗಳನ್ನೂ ಸಹಾ ಅರ್ಪಿಸಬಾರದು ಎನ್ನುವ ಒಂದು ಕಲ್ಪನೆಯೇ ಈ ಹಣ್ಣು ಕಾಯಿ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಒಳ್ಳೆ ಸುದ್ದಿಯನ್ನು ಇಲ್ಲಿ ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಇದೇ ಅಭಿಪ್ರಾಯವನ್ನ ನಿನ್ನೆಯಷ್ಟೇ ಎಲ್ಲೋ ಒಂದು ಬ್ಲೋಗ್ ಲ್ಲಿ ನೋಡಿದೆ ಕೂಡ.

  [Reply]

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘು ಮುಳಿಯ Reply:

  ಹಣ್ಣುಕಾಯಿಯ ಈ ಕಲ್ಪನೆ ತು೦ಬಾ ಲಾಯ್ಕ ಇದ್ದು.ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಈಗೊಂದು ಸಂದೇಹ…. ಹಾಗಿದ್ರೆ ಗೇರುಬೀಜ ಮತ್ತು ಅಂತಹ ವರೈಟಿ ಬೇರೆಯವುಗಳು ?!!

  [Reply]

  VN:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  :)

  [Reply]

  VN:F [1.9.22_1171]
  Rating: 0 (from 0 votes)
 3. ಏಕನಾಥ ಶೆಣೈ

  ಹೌದು. ಗೇರು ಬೀಜ ಸಹಾ ಎಂಜಲು ಗಿಡದಿಂದ ಉತ್ಪತ್ತಿಯಾಗುವುದಿಲ್ಲ. ಆದ್ರೂ ಅದನ್ನು ದೇವರಿಗೆ ಅರ್ಪಿಸುವುದಿಲ್ಲ. ಅದಕ್ಕೆ ಕಾರಣ ಅದು ವಿದೇಶದಿಂದ ಬಂದದ್ದು! ಹೌದು ಗೇರು ಹಣ್ಣು ನಮ್ಮಲ್ಲಿಗೆ ತಂದದ್ದು ಪೋರ್ಚುಗೀಸರು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಚುಬ್ಬಣ್ಣಕೆದೂರು ಡಾಕ್ಟ್ರುಬಾವ°ವೆಂಕಟ್ ಕೋಟೂರುದೊಡ್ಡಮಾವ°ನೀರ್ಕಜೆ ಮಹೇಶಪ್ರಕಾಶಪ್ಪಚ್ಚಿಮಾಲಕ್ಕ°ವೇಣೂರಣ್ಣಅನು ಉಡುಪುಮೂಲೆಚೆನ್ನಬೆಟ್ಟಣ್ಣಶ್ರೀಅಕ್ಕ°ಬಂಡಾಡಿ ಅಜ್ಜಿರಾಜಣ್ಣಸುವರ್ಣಿನೀ ಕೊಣಲೆಶ್ಯಾಮಣ್ಣಪಟಿಕಲ್ಲಪ್ಪಚ್ಚಿಅಜ್ಜಕಾನ ಭಾವವಿನಯ ಶಂಕರ, ಚೆಕ್ಕೆಮನೆಪುಟ್ಟಬಾವ°ಶೀಲಾಲಕ್ಷ್ಮೀ ಕಾಸರಗೋಡುಕಳಾಯಿ ಗೀತತ್ತೆಚೂರಿಬೈಲು ದೀಪಕ್ಕಶುದ್ದಿಕ್ಕಾರ°ಕೇಜಿಮಾವ°ಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ