ಟೈಗರ್ ವಾಸ್ಪ ಕಟ್ಟಿದ ಹತ್ತು ಬೆಡ್ ರೂಮಿನ ಮನೆ!!

ಹೀ೦ಗೇ ಒಂದು ದಿನ ಆಫೀಸಿ೦ಗೆ ಹೆರಟು ಕಾರು ತೆಗವಲೆ ಹೋಪಾಗ ಕಾರಿನ ಬಾನೆಟ್ ಮೇಲೆ ಒಂದು ಟೈಗರ್ ವಾಸ್ಪ (TIGER VASP) ಕೀಟ ಎ೦ತದೋ ಪರೀಕ್ಷೆ ಮಾಡುವ ಹಾ೦ಗೆ ಹಾರೊದು ಕ೦ಡತ್ತು. ಅದು ಮೊಟ್ಟೆ ಮಡಗಲೆ ಕಸ್ತಲೆ ಇಪ್ಪ ಜಾಗೆಯ ಹುಡುಕ್ಕುತ್ತಾ ಇದ್ದು ಹೇಳಿ ಗೊ೦ತಾತು. ಹೀ೦ಗಿಪ್ಪ ಅವಕಾಶಕ್ಕಾಗಿ ಸದಾ ಹೊಣಕ್ಕೊ೦ಡಿಪ್ಪ ಆನು, ಅಂದು ಕಾರು ಹೆರ ತೆಗವ ಆಲೋಚನೆ ಕೈಬಿಟ್ಟು ಮನೆಯವಕ್ಕೆ ಕಾರಿನ ಹತ್ತರ೦ಗೆ ಹೋಗಿಕ್ಕೆಡಿ ಹೇಳಿ ಎಚ್ಚರಿಸಿಕ್ಕಿ ಆಫೀಸಿ೦ಗೆ ಹೆರಟೆ. TIGER VASP ಜಾತಿಯ ,ಹೇಳಿರೆ  ಕಣಜ ಜಾತಿಯ ಕೀಟ೦ಗೊ ಮೊಟ್ಟೆ ಮಡುಗೊಗ ಜಾಗೆಯನ್ನೂ ಭಾರೀ ಜಾಗ್ರತೆ೦ದ ಎರಡು ಮೂರು ದಿನ ಪರಿಶೀಲಿಸಿ ಏನೂ ಅಪಾಯ ಇಲ್ಲೆ ಹೇಳಿ ನಿಶ್ಚಯ ಆದ ಮೇಲೆಯೇ ಗೂಡು ನಿರ್ಮಿಸಲೆ ಆರಂಭಿಸುತ್ತದು. ನಾವು ಅಲ್ಲಿ ಸುಳುದು ತೊಂದರೆ ಕೊಟ್ಟರೆ ಜಾಗೆ ಖಾಲಿ ಮಾಡುತ್ತವು. ಹಾ೦ಗಾದಲ್ಲಿ,ನಿಸರ್ಗದ ಅದ್ಭುತ ಜೀವಜಾಲದ ಚಟುವಟಿಕೆಯ ನೋಡುವ ಹಾಗೂ ಆನಂದಿಸುವ ಅಪೂರ್ವ ಅವಕಾಶವೂ ನವಗೆ ದಕ್ಕ!
ಅಂದು ಹೊತ್ತೋಪ್ಪಗ ಬಂದು ನೋಡುವಗ ಕಣಜ ಕೀಟ ತನ್ನ ಮನಗೆ ಪ೦ಚಾ೦ಗ ಹಾಕಿ ಒಂದು ಗೂಡಿನ ಮುಗುಶುವ ಹಂತಕ್ಕೆ ತಂದಿತ್ತು. ಕ್ಯಾಮೆರಾ ತಂದು ಅದರ ಒಂದು ಫೋಟೋ -ಅದು ದೂರ ಇಪ್ಪ ಹೊತ್ತಿ೦ಗೆ ತೆಕ್ಕೊ೦ಡೆ.ಮರದಿನ ಉದಿಯಪ್ಪಗ ಅದು ಗೂಡಿಲಿ ಮೊಟ್ಟೆ ಮಡುಗಿ ಬಾಯಿಯ ಮುಚ್ಚಿ ಆಯಿದು. ಅದರ ನಿರೀಕ್ಷಿಸಿದ್ದ ಕಾರಣ ಎನಗೂ ದೊಡ್ದ ಬೇಜಾರೇನೂ ಆಯಿದಿಲ್ಲೆ. ಆದರೆ ಮುಂದಿನ ಹಂತ೦ಗಳ  ನಾನು ಕಾದುಕೂದು ದಾಖಲಿಸೆಕ್ಕಾಗಿತ್ತು. ಹಾ೦ಗಾಗಿ ಆಫೀಸಿ೦ಗೆ ಅರ್ಧ ದಿನ ರಜೆ ಹಾಕಿ ಸದ್ದುಗದ್ದಲ ಮಾಡದ್ದೆ ಕಾರಿ೦ದ ದೂರಲ್ಲಿ ಕೂದು ಆ ಅಬ್ಬೆ ಕಣಜ ಬಂದಪ್ಪಗ ಆನಲ್ಲಿ ಇದ್ದರೂ  ಎನ್ನ೦ದ ಏನೂ ಅಪಾಯ ಬಾರ ಹೇಳ್ತ ಸಂದೇಶವ ಅದಕ್ಕೆ ರವಾನಿಸಿದೆ. ತಳೀಯದ್ದೆ ಕೂದ ಎನ್ನ ತಲೆಯ ಸುತ್ತ ಸುತ್ತಾಡಿ  ಆನೊಬ್ಬ ನಿರುಪದ್ರವಿ ಎಂದು ನಿಘ೦ಟು ಮಾಡಿಗೊ೦ಡ ಆ ಕೀಟ ತನ್ನ ಕೆಲಸ ಶುರು ಮಾಡಿತ್ತು. ಅದು ವಿಷಕಾರಿ ಕೀಟ . ಅದರ ಕಡಿತಕ್ಕೆ ಸಿಕ್ಕಿರೆ ಸಾವಲ್ಲದಿದ್ದರೂ ನಾಲ್ಕಾರು ದಿನ ವಿಷದ ಪ್ರಭಾವ೦ದ ನರಳೆಕ್ಕು.

ಕಣಜದ ಕೀಟಲ್ಲಿ ಹಲವಾರು ವೈವಿಧ್ಯ೦ಗೊ ಇದ್ದವು, TIGER VASP, PAPER VASP. MUD VAASPಇತ್ಯಾದಿ. ನಮ್ಮ ಜೇನುಹುಳು ಕೂಡಾ ಇದೆ ಜಾತಿಯದ್ದು,ಗೋತ್ರ ಮಾ೦ತ್ರ ಬೇರೆ !. ಈ VASP ಜಾತಿಯವು ಮಣ್ಣಿಲಿ ಗೂಡುಕಟ್ಟಿ ಮೊಟ್ಟೆ ಮಡುಗುವ ಜಾತಿಯವು . ಇದರ ವಿಷಯಲ್ಲಿ ಆನು ತಿಳುಕ್ಕೊ೦ಡ ಮಾಹಿತಿಗೊಗಳು ಸತ್ಯವೋ ಸುಳ್ಳೋ ಹೇಳ್ತರ ನಿಘ೦ಟು ಮಾಡೆಕ್ಕಾಗಿತ್ತೆನಗೆ. ಅದಕ್ಕಾಗಿ ಊಟತಿಂಡಿ ಮರದು ಜಾಗ್ರತೆಲಿ ಅದರ ಚಟುವಟಿಕೆಗಳ ಕ್ಯಾಮೆರಾಲ್ಲಿ ದಾಖಲಿಸಿಗೊ೦ದು ಬ೦ದೆ. ಪ್ರಸ್ತುತ ನಮ್ಮ TIGER VASP ಸಾಮಾನ್ಯವಾಗಿ ಹತ್ತರಿಂದ ಹದಿಮೂರು ಗೂಡು ಕಟ್ಟುತ್ತವು. ಪ್ರತಿ ಗೂಡಿಲಿ ಒಂದು ಮೊಟ್ಟೆ ಮಡಗೊದು. ಗೂಡಿನ ಬಾಯಿಯ ಮುಚ್ಚುವ ಮದಲು ಹುಟ್ಟುಲಿಪ್ಪ ಮರಿಗೆ ಆಹಾರಕ್ಕಾಗಿ ಚಿಟ್ಟೆಯ ಲಾರ್ವಾ ಮರಿಗಳ (ಕಂಬಳಿ ಹುಳ) ಹುಡುಕ್ಕಿ ತ೦ದು ಅದಕ್ಕೆ ತನ್ನ ದೇಹ೦ದ ವಿಷವ ಕ೦ತುಸಿ ಪ್ರಜ್ಞೆ ತಪ್ಪಿಸುತ್ತು. ಹುಳು ಸಾವಲಾಗ ಆದರೆ ಪ್ರಜ್ಞೆ ತಪ್ಪೆಕ್ಕು ಹೇಳ್ತದು ಅದರ ಬುದ್ಧಿವ೦ತಿಗೆ.  ಹುಟ್ಟಿದ ಕು೦ಞಗೆ ಕೂಡಲೇ ಅದಕ್ಕೆ ತಾಜಾ ಹುಳಗಳ ಭೋಜನ ಆಯೆಕ್ಕನ್ನೆ?!! ಹೀ೦ಗೆ ಒಂದು ಗೂಡಿಲಿ ಹುಳುವಿನ ಹಾಕಿ ಮುಚ್ಚಿ ಮುಂದಿನ ಗೂಡಿ೦ಗೆ ಹೆರಡುವ ಕ್ರಮ. ಸಾಲಾಗಿ ನಾಲ್ಕು ಅದರ ಮೇಲೆ ಮೂರು ಅದರ ಮೇಲೆ ಎರಡು ಅದರ ಮೇಲೆ ಒಂದು ಹೀ೦ಗೆ ಮೂರು ನಾಲ್ಕು ಅಂತಸ್ತುಗಳ ಹತ್ತಾರು ಬೆಡ್ ರೂಮಿನ ಮನೆ ಕಟ್ಟುತ್ತದರ ನೋಡುಲೆ, ಅಧ್ಯಯನ ಮಾಡುಲೆ ಅಪರೂಪದ ಕುತೂಹಲದ ಸೋಜಿಗದ ಸಂಗತಿ. ಹೀ೦ಗೆ ಎಲ್ಲಾ ಗೂಡುಗಳ ಕಟ್ಟುಲೆ ಅದಕ್ಕೆ ಕನಿಷ್ಠ ಏಳು ಎಂಟು ದಿನ ಬೇಕು. ಎಲ್ಲ ಗೂಡು ಕಟ್ಟುವಗ ಅಬ್ಬೆ ಹುಳು ತಾನು ಆಹಾರ ಸೇವಿಸದ್ದೆ ಕಡೇ೦ಗೆ ಸಾಯುತ್ತಡ.ಆನು ಗಮನಿಸಿದ ಹಾ೦ಗೆಅಬ್ಬೆ ಕಣಜ ಹುಳು ದಿನ ಕಳುದ ಹಾ೦ಗೆ ಸೊರಗಿಗೊ೦ಡುಬ೦ತು, ಆದರೆ ಕಡೇ೦ಗೆ ಸತ್ತತ್ತೋ ಇಲ್ಲೆಯೋ ಗೊ೦ತಿಲ್ಲೆ.
ಇದಕ್ಕೆ ಸಂಬಂಧಿಸಿದ ಹಾ೦ಗೆ ಮತ್ತೊಂದು ವಿಶೇಷ  ಸಂಗತಿ ಹೇಳದ್ದರಾಗ. ಹೆಣ್ಣು ಹತ್ತಾರು ಮೊಟ್ಟೆ ಮಡಗುತ್ತಾದರೂ ಗೆ೦ಡಿನೊಟ್ಟಿ೦ಗೆ ಮಿಲನ ಅಪ್ಪದು ಒಂದೇ ಸರ್ತಿ! ಅದೂ ಎಷ್ಟೋ ದಿನ೦ಗಳ ಮದಲು. ಗೆ೦ಡಿನೊಟ್ಟಿ೦ಗೆ ಮಿಲನವಾದ ಕೂಡಲೇ ಅದು ಗರ್ಭ ಧರಿಸುತ್ತೂ ಇಲ್ಲೆ. ಮಳೆಗಾಲದವರೆಗೆ ಗೆ೦ಡಿನ ಧಾತುವಿನ ತನ್ನ ವಿಶೇಷ ಚೀಲಲ್ಲಿ ಕಾಪಾಡಿಗೊ೦ಡಿರುತ್ತು. ಮಳೆಗಾಲದ ಆರಂಭದ ಸಮಯಲ್ಲಿ ಚಿಟ್ಟೆ ಮೊಟ್ಟೆ ಮಡಗಿ ಕು೦ಞ ಅಪ್ಪ ಸಮಯಲ್ಲಿ ತಾನು ಸಂಗ್ರಹಿಸಿ ಮಡಗಿಗೊ೦ಡ ಧಾತುವಿನ, ವಿಶೇಷ ಸ್ನಾಯುಗಳ ಸಹಾಯ೦ದ ಗರ್ಭ ಕೋಶದ ಕಡೆ೦ಗೆ ತಳ್ಳಿ ಗರ್ಭ ಧರಿಸುತ್ತು. ಕೆಲವೊ೦ದು ಸರ್ತಿ ಗೆ೦ಡಿನ ಧಾತು ಇಲ್ಲದ್ದೆಯೂ  ಮೊಟ್ಟೆ ಮಡಗುವ ಶಕ್ತಿ ಈ ಜೀವಿಗೆ ಇದ್ದು. ಇದರ್ಲೊ೦ದು ನಂಬಲೆ ಅಸಾಧ್ಯ ಹೇಳ್ತ ಸಂಗತಿ ಇದ್ದು. ಅದು ಎ೦ತರ ಹೇಳಿರೆ,ತಾನು ಮಡಗೆಕ್ಕಾದ  ಮೊಟ್ಟೆ ಮುಂದೆ ಹೆಣ್ಣಾಗಿರೇಕೋ ಅಥವಾ ಗೆ೦ಡಾಗಿರೇಕೋ ಹೇಳಿ  ನಿರ್ಧರಿಸಿ ಈ ಕೀಟ ಗೆ೦ಡಾಯೆಕ್ಕಾರೆ ಗಂಡಿನ ಧಾತುವಿನ ಸಂಪರ್ಕ ಇಲ್ಲದ್ದೆ, ಹೆಣ್ಣಾಯೆಕ್ಕಾರೆ ಧಾತುವಿನ ಸಂಯೋಗದೊಟ್ಟಿ೦ಗೆ ಮೊಟ್ಟೆ ಮಡಗೊದು ! ಇದಕ್ಕೆ ವಿಜ್ಞಾನಿಗೊ HEPLO DIPLOYDI ಹೇಳಿ ಹೇಳ್ತವು. ಮೊಟ್ಟೆ ಮಡಗುವ ಕಾಲಲ್ಲಿ ನಿಸರ್ಗಲ್ಲಿ ಯಾವ ಲಿಂಗದ ಹುಳಗಳ ಕೊರತೆ ಇದ್ದೋ ಆ ಲಿಂಗದ ಅನುಪಾತವ ಸಮಗೊಳುಶಲೆ ಈ ಕೀಟ ಇಂತಹ ವ್ಯವಸ್ಥೆಯ ಅನುಸರಿಸೊದು.ಎ೦ತಾ ಆಶ್ಚರ್ಯಕಾರೀ ಸ೦ಗತಿ ಅಲ್ಲದೋ?ಇದು ಕೀಟ ವಿಜ್ಞಾನಿಗೊ ಹಲವಾರು ವರ್ಷ ಸಂಶೋಧನೆ ನಡೆಶಿ ಕಂಡುಗೊ೦ಡ ಸತ್ಯ.
ಇರಳಿ, ಹೀ೦ಗೆ ಮೊಟ್ಟೆ ಮಡಗಿದ ಮೇಲೆ ಕು೦ಞ ಅಪ್ಪಲೆ ಹದಿನಾರು ದಿನ ಬೇಕು. ಹತ್ತು ಗೂಡು ಅದರಲ್ಲಿಪ್ಪ ಎಲ್ಲಾ ಮೊಟ್ಟೆ ಕು೦ಞಯಪ್ಪಲೆ ಒಟ್ಟಾರೆ ಬೇಕಾದ ಕಾಲ ಸುಮಾರು ಇಪ್ಪತ್ತಾರು ದಿನ೦ಗೊ. ಅಷ್ಟೂ ದಿನ ಎನಗೆ ಕಣ್ಣಿಲಿ ಒರಕ್ಕುಇಲ್ಲೆ, ಹೊಟ್ಟಗೆ ಹಶು ಇಲ್ಲೆ,ಅದರ ಎಲ್ಲಾ ಮಾಡ್ಯೊ೦ಡು ಕೂದರೆ ನಿಸರ್ಗದ ಈ ಅಪರೂಪದ ವಿದ್ಯಮಾನವ ನೋಡುತ್ತದಾದರೂ ಹೇ೦ಗೆ? ಅದು ಕಾಲುಗಳಲ್ಲಿ ಮಣ್ಣು ಕಲಸಿ ದುಂಡಗೆ ಉಂಡೆ ಮಾಡಿ ತಪ್ಪ ಚಂದ, ಮೊಟ್ಟೆ ಮಡಗುವ ಕಾಲದ ಪ್ರಸವ ವೇದನೆ, ಮಕ್ಕಳ ಆಹಾರಕ್ಕೆ ಬೇಕಾದ ಹುಳು  ಹಿಡಿದು ತಪ್ಪ ದೃಶ್ಯ ಎಲ್ಲವೂ ರೋಮಾಂಚಕ ಅಲ್ಲದೋ? ಕು೦ಞಗೊ ಹುಟ್ಟಿ ಗೂಡಿನ ಕೊರದು ಹೆರ೦ಗೆ ಬಪ್ಪ ಅಪರೂಪದ ಕ್ಷಣವ ಕ್ಯಾಮೆರಾಲ್ಲಿ ಸೆರೆ ಹಿಡಿವಲೆ ಎಷ್ಟೇ ಪ್ರಯತ್ನ ಮಾಡಿರೂ ಸಾಧ್ಯ ಆತಿಲ್ಲೆ. ಇರುಳು ರಜಾ ಕಣ್ಣಡ್ಡ ಆತು ಹೇಳಿ ಕೋಣಗೆ ಹೋಗಿ ತಿರುಗಿ ಬ೦ದಪ್ಪಗ ಕುನ್ಜಿ ಗೂಡಿನ ಕೊರದು ಹೆರ ಹೋಗಿರ್ತು.ಹೀ೦ಗೆ ನಿರಾಶೆ ಆಗಿಯಪ್ಪಗ ಒಂದು ಕೆಣಿ ತಲಗೆ ಹೋತು.ಎನ್ನ ಗುರ್ತದ ಡಾಗುಟ್ರಲ್ಲಿ೦ದ ಹಳೇ ಸ್ತೆತಾ ಸ್ಕೋಪ್ ತೆಕ್ಕ೦ಡು ಬಂದು ಗೂಡಿನ ಮೇಲೆ ಮಡಗಿ ಒಳಾ೦ದ ಕೊರೆತ್ತ ಶಬ್ದ ಕೇಳುತ್ತೋ ಹೇಳಿ ಕಾವಲೆ ಶುರು ಮಾಡಿದೆ.ಕಡೇ೦ಗೆ ಒ೦ದರಿ ಎನ್ನ ತಪಸ್ಸು ಫಲಿಸಿದ ಹಾ೦ಗೆ ಒಳಾ೦ದ ಗೂಡು ಕೊರೆತ್ತ ಶಬ್ದ ಕೇಳಿತ್ತು. ಕೂಡಲೇ ಕ್ಯಾಮೆರಾ ಫ್ಲಾಶ್ ಸಿದ್ಧ ಮಾಡಿ ಕೂದುಗೊ೦ಡೆ.ಒ೦ದರಿ ಗೂಡಿ೦ದ ಕೀಟದ ತಲೆ ಕ೦ಡತ್ತು. ಹತ್ತಾರು ಫ್ಲಾಶ್ ಮಾಡುವಗ ಹುಳು ಹೆರ ಬಂದೇ ಬಿಟ್ಟತ್ತು. ರಜಾ ಕೂದು ವಿಶ್ರಮಿಸಿಗೊ೦ಡು ರೆಕ್ಕೆಗಳ ಬಡಿದು ರೊಯ್ಯನೆ ಹಾರಿ ಹೋತು , ಅಲ್ಲೇ ಕೂದು ಗೆಬ್ಬಾಯಿಸಿಗೊ೦ಡಿದ್ದ ಎನಗೆ ಒ೦ದು ಹಾಯ್. . . ಅಥವಾ ಬಾಯ್ ಬಾಯ್ ಕೂಡಾ ಹೇಳದ್ದೆ!!!!!
ಹೀ೦ಗೆ ಆನು ಕಂಡ ಜೀವ ಜಾಲದ ಸಣ್ಣ ಕೊಂಡಿಯ ಸಂಕೀರ್ಣ ವಿದ್ಯಮಾನದ ಕೆಲವು ಹಂತ೦ಗಳ ಚಿತ್ರ ನಿ೦ಗೊಗೆ ಹ೦ಚುತ್ತಾ ಇದ್ದೆ. ನಿ೦ಗಳ ಅನಿಸಿಕೆ, ಅಭಿಪ್ರಾಯ ತಿಳಿಸಿಬಿಡಿ. . . ಆಗದ?

ಕೇಶವ ಕುಡ್ಲ

   

You may also like...

27 Responses

  1. ಶ್ಯಾಮಣ್ಣ says:

    ಇಪ್ಪತ್ತು ವರ್ಷಗಳ ಹಿಂದೆ ಆನು ಮಣಿಪಾಲಲ್ಲಿ ಇದ್ದಿಪ್ಪಗ ಆನಿತ್ತ ಮನೆ ಒಂದು ಆರು ಕಿ.ಮೀ. ದೂರ ರಜಾ ಕಾಡಿನಂಗೆ ಇಪ್ಪ ಜಾಗೆಲಿ ಇದ್ದತ್ತು. ಆಲ್ಲಿ ಎದುರಿಲಿ ಒಂದು ಮುಳಿ ಪಡ್ಪು. ಆನು ಎನ್ನ ರೂಮಿಲಿ ಪೈಂಟಿಂಗ್ (ಗೋಡೆ ಪೈಂಟಿಂಗ್ ಅಲ್ಲ, ಚಿತ್ರಕಲೆಯ ಪೈಂಟೀಂಗ್) ಮಾಡಿಗೊಂಡು ಇತ್ತಿದ್ದೆ. ಎನ್ನ ಕಲಾಕೃತಿಗಳ ಸೈಡಿನ ಫ್ರೇಮುಗಳ ಕರೆಲಿ ಈ ಟೈಗರ್ ವಾಸ್ಪ ಗೂಡು ಕಟ್ಟುಗು. ಆನು ತೆಗದು ಇಡ್ಕುದು, ಅದು ಕಟ್ಟುದು ಆಯ್ಕೊಂಡು ಇತ್ತು. ನೋಡಿದರೆ ೮-೧೦ ವಾಸ್ಪಂಗ ಬಂದುಗೊಂಡು ಇತ್ತಿದ್ದವು. ಒಂದು ಸಲ ಒಂದು ವಾಸ್ಪದ ಮೇಲೆ ತರ್ಪೆಂಟೈನ್ ಎಣ್ಣೆ ಒಂದು-ಎರಡು ಬಿಂದು ಬಿಟ್ಟು ನೋಡಿದೆ. ಪಾಪ ಸತ್ತತ್ತು. ( ಮರ್ಡರ್ ಮಾಡಿದ್ದಕ್ಕೆ ಬೈಯಡಿ) ಆದರ ಶವವ ತೆಗದು ಮಡುಗಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸುಮಾರು ಎರಡು ವರ್ಷಗಳವರೆಗೆ ಒಂದು
    ಚೂರೂ ಹಾಳಾಗದ್ದೆ, ಬಣ್ಣ ಮಾಸದ್ದೆ ಇತ್ತು.(ಬಹುಷ ಟರ್ಪೆನ್ತೈನ್ ಪ್ರಭಾವ) ಮತ್ತೆ ಮನೆ ಬದಲಾಯ್ಸುವಗ ಅದರ ಇಡ್ಕಿದೆ.
    ಒಂದು ಸಲ ಕಟ್ಟಿದ ಗೂಡಿನ ಮತ್ತೆ ಮತ್ತೆ ಉಪಯೋಗುಸುದರ ಆನು ಆಗ ನೋಡಿದ್ದೆ. ಬಹುಷ ಅಲ್ಲೇ ಹುಟ್ಟೀದ ವಾಸ್ಪಂಗ ಪುನ ಅಲ್ಲಿಗೇ ಬತ್ತವೋ ಏನೋ.
    ಎನ್ನ ಹತ್ತರೆ ಆವಾಗ ಕೆಮರ ಇತ್ತಿದ್ದಿಲ್ಲೆ. ಈಗಾಣ ಹಾಂಗೆ ಡಿಜಿಟಲ್ ಕೆಮರವೂ ಇತ್ತಿಲ್ಲೆ) ಇಲ್ಲದ್ದ್ರೆ ಪಟ ತೆಗೆದು ಮಡುಗುಲಾವ್ತ್ತಿತ್ತು. 🙁

  2. ಮನೆಯ ಗೋಡೆಗಳಲ್ಲಿ ಅದರಷ್ಟಕ್ಕೆ ಗೂಡು ಕಟ್ಟಿ, ಸಂತಾನೋತ್ಪತ್ತಿ ಮಾಡಿ, ಎಡೇಲಿ ಮನೆಲಿಪ್ಪ ಮಕ್ಕೊ [ಕೂಸುಗೋ 😉 ] ’ಅಯ್ಯೋ ಹುಳು!!!!’ ಹೇಳಿ ಬೊಬೆ ಹೊಡವ ಹಾಂಗೆ ಮಾಡ್ತ ವಾಸ್ಪ್ ಬಗ್ಗೆ ಇಷ್ಟು ತಿಳುವಳಿಕೆ ಕೊಟ್ಟದು ನಿಜಕ್ಕೂ ಅದ್ಭುತ.. ನಿಂಗಳ ಫೋಟೋಗ್ರಫಿ ಪಷ್ಟಾಯಿದು, ಶುದ್ದಿಯೂ! ಹಿಂಗಿಪ್ಪ ಶುದ್ದಿಗೊ ಇನ್ನೂ ಬರಳಿ.. ನಮ್ಮ ಬೈಲಿನ ಬಗ್ಗೆ, ಭಾಷೆಯ ಬಗ್ಗೆ ವಿಶೇಷ ಅಭಿಮಾನ ಮಡುಗಿದ್ದಲ್ಲದೇ ಭಾಷೆ ಕಲಿತ್ತಾ ಇದ್ದಿ ಹೇಳುದು ತುಂಬಾ ಸಂತೋಷದ ವಿಷಯ! ಹರೇರಾಮ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *