ರಾಗಂಗಳ ರಾಜ ತ್ಯಾಗರಾಜ!!!!

ಸೋಮವಾರ 24 ನೇ ತಾರೀಕು ಪುಷ್ಯ ಬಹುಳ ಪಂಚಮಿ.

ಕರ್ನಾಟಕ ಸಂಗೀತ ಪದ್ಧತಿಯ ಮುಖ್ಯ ರಚನಾಕಾರರೂ, ನಾದೋಪಾಸಕರೂ, ವಾಗ್ಗೇಯಕಾರರೂ, ರಾಮನ ಪರಮ ಭಕ್ತರೂ ಆಗಿ ಸಂಗೀತ ಸಾಮ್ರಾಜ್ಯದ ರಾಜನಾಗಿ ಮೆರದ ‘ಶ್ರೀ ತ್ಯಾಗರಾಜರ ಆರಾಧನಾ ದಿನ‘.

ತ್ಯಾಗರಾಜಯೋಗವೈಭವಮ್.. ||

ಕರ್ನಾಟಕ ಸಂಗೀತದ ತ್ರಿಮೂರ್ತಿಗೋ ಹೇಳಿಯೇ ಹೆಸರಾದವ್ವು, ತ್ಯಾಗರಾಜರು, ಮುತ್ತು ಸ್ವಾಮೀ ದೀಕ್ಷಿತರ್ ಮತ್ತೆ ಶ್ಯಾಮಾ ಶಾಸ್ತ್ರಿಗೋ. ಸಂಗೀತ ಕ್ಷೇತ್ರಲ್ಲಿ ಇವರೆಲ್ಲರ ಸಾಹಿತ್ಯಿಕ ಕೊಡುಗೆ ತುಂಬಾ ದೊಡ್ಡದು. ಇಂದಿನವರೆಗೆ ಬಹುಶ ಹಾಂಗಿಪ್ಪ ರತ್ನಂಗೋ ಅವತರಿಸಿದ್ದವಿಲ್ಲೆ.

ಪುಣ್ಯ ದಿನ, ಮೇ 4, 1767 ( ಕೆಲವರ ಪ್ರಕಾರ 1759) ತಂಜಾವೂರು ಜಿಲ್ಲೆಯ ತಿರುವಾರೂರಿಲಿ ರಾಮಬ್ರಹ್ಮಂ ಮತ್ತೆ ಸೀತಮ್ಮ ಪುಣ್ಯಗರ್ಭಲ್ಲಿ ಜನಿಸಿದವು.
ಇವರ ಅಜ್ಜ ಗಿರಿರಾಜ ಕವಿ ತಂಜಾವೂರಿನ ಆಸ್ಥಾನಲ್ಲಿ ಕವಿಗಳಾಗಿಯೂ, ಸಂಗೀತಕಾರರಾಗಿಯೂ ಇತ್ತಿದ್ದವು. ಸಣ್ಣ ಮಾಣಿ ಆದಿಪ್ಪಗಳೇ ಅಬ್ಬೆ ಹೇಳಿಗೊಂಡಿದ್ದ ಪುರಂದರದಾಸರ ಕೀರ್ತನೆಗಳಿಂದ ಸಂಗೀತ ವಿದ್ಯೆ ಸುರು ಆದದ್ದಡ್ಡ.
ಸಂಗೀತದ ಒಟ್ಟಿಂಗೆ ವೇದ, ಪುರಾಣ, ಉಪನಿಷತ್ತು ಎಲ್ಲಾ ಕಲ್ತುಗೊಂಡವು. ಅಪ್ಪ° ರಾಮಬ್ರಹ್ಮರು ವಾಲ್ಮೀಕೀ ರಾಮಾಯಣದ ವ್ಯಾಖ್ಯಾನ ಹೇಳುವಾಗ ಅದಕ್ಕೆ ಎಲ್ಲಾ ಶ್ಲೋಕಂಗಳ ಕಲ್ತು ರಾಗಲ್ಲಿ ಹೇಳಿಗೊಂಡು ಇತ್ತಿದ್ದವಡ್ಡ!!!

ಔಪಚಾರಿಕವಾಗಿ ಸಂಗೀತ ಶಿಕ್ಷಣವ ಶ್ರೀ ತ್ಯಾಗರಾಜರು ಸೊಂಟಿ ವೆಂಕಟರಮಣಯ್ಯ ಹೇಳುವ ಗುರುಗಳಿಂದ ಪಡದವು. ಕಲಿವಾಗಳೇ ಸ್ವತಃ ರಚನೆ ಮಾಡುವ ಪ್ರೌಢತೆಯ ಕಂಡ ಗುರುಗಳಿಂಗೆ ತುಂಬಾ ಕೊಶಿ ಆಗಿ ಎಲ್ಲರೆದುರು ತನ್ನ ಶಿಷ್ಯನ ಹೊಗಳಿದವಡ್ಡ.
ಅಂಥಾ ವಿದ್ವತ್ತು ತ್ಯಾಗರಾಜರದ್ದು.!!!
ಸಂಗೀತವ ಭಕ್ತಿಯ ಒಂದು ಮಾರ್ಗ ಹೇಳಿ ತೋರುಸಿ ಕೊಟ್ಟದು ತ್ಯಾಗರಾಜರು.
ಶ್ರೀ ರಾಮಕೃಷ್ಣಾನಂದ ಯತಿಗೋ ತ್ಯಾಗರಾಜರ ವಿದ್ವತ್ತಿನ ಕಂಡು ಸಂಗೀತದ ಒಳ ಮರ್ಮ ಇಪ್ಪಂಥ “ಸ್ವರಾರ್ಣವ” ಗ್ರಂಥವ ಕೊಟ್ಟು ಅದರ ಒಟ್ಟಿಂಗೆ ತಾರಕನಾಮ ಉಪದೇಶ ಮಾಡಿದವು.
ಅಲ್ಲಿಂದ ಮತ್ತೆ ತ್ಯಾಗರಾಜರ ಆರಾಧ್ಯದೈವ ಶ್ರೀರಾಮನೇ ಆದ°.
ಅವ್ವು ತೊಂಭತ್ತಾರು ಕೋಟಿ ರಾಮನಾಮ ಜಪ ಇಪ್ಪತ್ತೊಂದು ವರ್ಷಂಗಳ ಕಾಲ ಮಾಡಿ ಶ್ರೀರಾಮನ ಪ್ರತ್ಯಕ್ಷಪಡಿಸಿಗೊಂಡಿದವು ಹೇಳಿ ಬಲ್ಲವ್ವು ಹೇಳ್ತವು.

ಶ್ರೀ ತ್ಯಾಗರಾಜರ ಪಂಚರತ್ನ ಕೃತಿಯ ಕೇಳದ್ದವ್ವು ಇರವು.
ನಾಟ, ಗೌಳ, ಆರಭಿ, ವರಾಳಿ ಮತ್ತೆ ಶ್ರೀರಾಗಂಗಳ ಒಂದು ಗುಚ್ಛ!!
ತ್ಯಾಗರಾಜರ ಆರಾಧನೆಯ ದಿನ ಇದರ ಹೇಳಿಯೇ ಹೇಳ್ತವು. ದಕ್ಷಿಣ ಭಾರತದ ಸುಮಾರು ಎಲ್ಲಾ ದೇವಸ್ಥಾನಕ್ಕೂ ಭೇಟಿ ಕೊಟ್ಟ ತ್ಯಾಗರಾಜರು, ಎಲ್ಲಾ ದೇವರ ಮೇಲೆ ಸ್ತುತಿಗಳ ಬರದ್ದವು.
ತಿರುವೊಟ್ರಿಯೂರಿನ ತ್ರಿಪುರಸುಂದರಿಯ ಮೇಲೆ, ಕೋವೂರು ಸುಂದರೇಶ್ವರನ ಮೇಲೆ, ಶ್ರೀರಂಗಂನ ರಂಗನಾಥನ ಮೇಲೆ ಇವು ರಚಿಸಿದ ಐದೈದು ಕೃತಿಗಳ ಗುಂಪಿನ ತಿರುವೊಟ್ರಿಯೂರು ಪಂಚರತ್ನ, ಕೋವೂರು ಪಂಚರತ್ನ, ಶ್ರೀರಂಗಂ ಪಂಚರತ್ನ ಹೇಳಿ ಪ್ರಸಿದ್ಧವಾಗಿದ್ದು.
ಸಣ್ಣ ಆದಿಪ್ಪಗ ಕೇಳಿದ ಪುರಂದರ ದಾಸರ ಕೀರ್ತನೆಗಳ ಪ್ರಭಾವ ಇವರ ಕೆಲವು ಕೃತಿಗಳಲ್ಲಿ ಕಾಣ್ತಡ್ಡ.

ತ್ಯಾಗರಾಜರು, ಪ್ರಹ್ಲಾದ ವಿಜಯದ ಮಂಗಳ ಶ್ಲೋಕಲ್ಲಿ ಪುರಂದರ ದಾಸರ ನೆನಪ್ಪಿಸಿಗೊಂಡಿದವು.
ಶ್ರೀ ತ್ಯಾಗರಾಜರು ಸುಮಾರು ಜನ ಶಿಷ್ಯರಿಂಗೆ ಸಂಗೀತದ ಧಾರೇ ಎರದ್ದವು. ಜಾತಿ, ಮತ, ಭೇದ ಇಲ್ಲದ್ದೆ ಸಂಗೀತ ಸುಧೆ ಹರಿಸಿ ತಮ್ಮ ಎಂಭತ್ತನೇ ವರ್ಷಲ್ಲಿ ತನ್ನ ಸಂಗೀತ ಸೌರಭವ ಪ್ರಪಂಚಕ್ಕೆ ಹರಡಿಸಿ ಶ್ರೀ ರಾಮನ ಪಾದಾರವಿಂದವ ಸೇರಿದವು.
ಪುಷ್ಯ ಬಹುಳ ಪಂಚಮಿಯ ದಿನ ಲೋಕಲ್ಲಿ ಇಪ್ಪ ಎಲ್ಲಾ ಸಂಗೀತ ಪ್ರಿಯರು ಭಕ್ತಿ ಶ್ರದ್ಧೆಂದ ‘ಶ್ರೀ ತ್ಯಾಗರಾಜರ ಆರಾಧನೆ’ ಮಾಡ್ಲೆ ತಿರುವಯ್ಯಾರಿಂಗೆ ಎತ್ತಿಗೋಳ್ತವು.
ಆ ದಿನ ಅಲ್ಲಿ ನಡವ ಮಹೋತ್ಸವಲ್ಲಿ ಪಾಲ್ಗೊಂಡು ಧನ್ಯರಾವುತ್ತವು. ದೂರದರ್ಶನ, ರೇಡಿಯೋಲ್ಲಿ ನೇರ ಪ್ರಸಾರ ಇರ್ತು ಉದಿಯಪ್ಪಗಾಣ ಹೊತ್ತಿಂಗೆ.
ನಮ್ಮ ದೇಶದ ಸಂಸ್ಕೃತಿಲಿ ಸಂಗೀತದ ಕೊಡುಗೆ ಬಹಳಷ್ಟಿದ್ದು. ಅದಕ್ಕೆ ತಮ್ಮ ತಮ್ಮ ವಿದ್ವತ್ತಿನ ಧಾರೇ ಎರದವ್ವುದೇ ಬಹಳಷ್ಟಿದ್ದವು.
ಇನ್ನಾಣ ಕಾಲಲ್ಲಿಯೂ ಹೀಂಗಿಪ್ಪ ರತ್ನಂಗೋ ಹುಟ್ಟಿ ಬರಲಿ. ನಮ್ಮ ಸಂಸ್ಕೃತಿಯ ಇನ್ನೂ ಮೆರೆಶಲಿ ಹೇಳಿ ಹಾರೈಕೆ.

ಸೂ:

 • ಸಂಗೀತ ಬ್ರಹ್ಮನ ಬಗ್ಗೆ ಹೇಳುಲೆ ವಿಷಯಂಗ ಸುಮಾರಿದ್ದು. ಇದು ಬೇರೆ ಬೇರೆ ದಿಕ್ಕಂದ ಸಂಗ್ರಹ ಮಾಡಿದ ಮಾಹಿತಿಗ. ಶ್ರೀ ತ್ಯಾಗರಾಜರ ಆರಾಧನೆಲಿ ಅವರ ನೆನಪ್ಪು ಮಾಡಿಗೊಂಬ ಒಂದು ಅಳಿಲ ಸೇವೆ ಅಷ್ಟೇ!!
 • ತ್ಯಾಗರಾಜ ಆರಾಧನೆಯ ಎಂದರೋ ಮಹಾನುಭಾವುಲು ಕೀರ್ತನೆಯ ಒಂದು ತುಣುಕುಃ ಸಂಕೊಲೆ
 • ತ್ಯಾಗರಾಜ ಆರಾಧನೆಲಿ ರೆಕಾರ್ಡ್ ಮಾಡಿದ ‘ಜಗದಾನಂದ ಕಾರಕಾ’ ವೀಡಿಯವ ಇಲ್ಲಿ ನೋಡಿಃ ಸಂಕೊಲೆ

ಶ್ರೀಅಕ್ಕ°

   

You may also like...

20 Responses

 1. ಗಣೇಶ says:

  ತ್ಯಾಗರಾಜರು ಹುಟ್ಟಿದ್ದು ತಮಿಳು ನಾಡಿಲ್ಲಿ ಆದರುದೆ ಆನು ಇಷ್ಟರವರೇ೦ಗೆ ಕೇಳಿದ ಅವರ ಎಲ್ಲಾ ರಚನೆಗಳುದೆ ತೆಲುಗು ಭಾಷೆಲಿ ಇಪ್ಪದು. ಕರ್ಣಾಟಕ ಶಾಸ್ತ್ರೀಯ ಸ೦ಗೀತ ಲೋಕಲ್ಲಿ ‘ಏಕಮೇವಾದ್ವಿತೀಯ’ ಆಗಿಪ್ಪ ಈ ಮಹಾನುಭಾವನ ಸ೦ಗೀತದಷ್ಟೇ ದೈವಭಕ್ತಿಯೂ ಸುಪ್ರಸಿಧ್ಧ. ಒಳ್ಳೇ ಲೇಖನಕ್ಕೆ ಧನ್ಯವಾದ೦ಗೊ

  • ಧನ್ಯವಾದ ಗಣೇಶ ನಿನ್ನ ವಿಷಯ ಸ್ಪಂದನಕ್ಕೆ !!! ಅಪ್ಪು, ತ್ಯಾಗರಾಜರು ನೀನು ಹೇಳಿದ ಹಾಂಗೆ ಸಂಗೀತ ಲೋಕದ ‘ಏಕಮೇವಾದ್ವಿತೀಯರೆ’!!

   ತ್ಯಾಗರಾಜರ ಅಬ್ಬೆ, ಅಪ್ಪ° ಆಂಧ್ರಪ್ರದೇಶದ ಒಂದು ಹಳ್ಳಿಂದ ವಲಸೆ ಬಂದು ತಿರುವಾವೂರಿಲಿ ನೆಲೆ ನಿಂದೋರು. ಕಾಕರ್ಲ ವಂಶದ ಮುಲಕನಾಡು ಮನೆತನದ ಸ್ಮಾರ್ತ ಬ್ರಾಹ್ಮಣ ಕುಲದವ್ವು. ಹಾಂಗಾಗಿ ಅವ್ವು ತಮಿಳುನಾಡಿಲಿ ಇದ್ದರೂ ತೆಲುಗಿಲಿ ಬರದ್ದದು.

 2. ಶ್ರೀಅಕ್ಕಾ..
  ಅಸಾಮಾನ್ಯ ವಿದ್ವಾಂಸ ಶ್ರೀ ತ್ಯಾಗರಾಜರ ಬಗೆಗೆ ಅಮೋಘ ಮಾಹಿತಿಗಳ ಕಲೆಹಾಕಿ, ಸುಂದರ ಶುದ್ದಿ ಕೊಟ್ಟದಕ್ಕೆ ಧನ್ಯವಾದಂಗೊ.
  ಇಂದ್ರಾಣ ದಿನ ತ್ಯಾಗರಾಜ ಆರಾಧನೆಲಿ ಹಾಡ್ತ ಪಂಚರತ್ನ ಕೃತಿಗಳ ಕೇಳಿ ಮತ್ತೂ ಕೊಶಿ ಆತು.

  ಸಂಗೀತಲ್ಲೇ ಆತ್ಮಸಂತೃಪ್ತಿ ಕಂಡು, ಅದರ ಮೂಲಕವೇ ರಾಮದೇವರ ಒಲುಸಿ ಕೃತಾರ್ಥರಾದ ತ್ಯಾಗರಾಜರ ಪುಣ್ಯದಿನ ಇಂದು, ಎಲ್ಲಾ ಸಂಗೀತಪ್ರಿಯರಿಂಗೆ ಒಳ್ಳೆದಾಗಲಿ – ಹೇಳ್ತದು ಬೈಲಿನ ಆಶಯ.

  • ಒಪ್ಪಣ್ಣೊ, ಅಕ್ಕ° ಬರದ ತ್ಯಾಗರಾಜರ ಶುದ್ದಿ ಕೊಶೀಲಿ ಓದಿ, ಅವರ ಕೃತಿಗಳ ಕೇಳಿ ಒಪ್ಪ ಕೊಟ್ಟದು ನೋಡಿ ಸಂತೋಷ ಆತು. ಧನ್ಯವಾದ ಒಪ್ಪಣ್ಣ.

   ಮಹರ್ಷಿ ವಾಲ್ಮೀಕಿಯೇ ತ್ಯಾಗರಾಜರಾಗಿ ಅವತಾರ ಎತ್ತಿದ್ದದು ಹೇಳಿದೇ ನಂಬಿಕೆ ಇದ್ದು. ಅವರ ರಾಮನ ಮೇಲಿನ ಭಕ್ತಿ, ಅವರ ಕೃತಿಗಳ ಸಾಹಿತ್ಯ ಕಾಂಬಗ ಅವತಾರ ಪುರುಷರೇ ಹೇಳಿ ಆವುತ್ತು ಅಲ್ಲದಾ?

 3. ರಘುಮುಳಿಯ says:

  ಧನ್ಯವಾದ,ಒಳ್ಲೆ ಮಾಹಿತಿ.ನಿನ್ನೆ ದೂರದರ್ಶನಲ್ಲಿ ಕಾರ್ಯಕ್ರಮ ನೋಡಿದೆ,ಕೊಶೀ ಆತಕ್ಕಾ..ಪ್ರತಿ ವರುಶದ ಹಾ೦ಗೇ,ಈ ವಾರ ಬೆ೦ಗಳೂರಿನ ಕೆಲವು ಜಾಗೆಲಿ ತ್ಯಾಗರಾಜ ಆರಾಧನೆ ನೆಡೆತ್ತಾ ಇದ್ದು.ತ್ಯಾಗರಾಜ ನಗರ ದತ್ತಾತ್ರೇಯ ದೇವಸ್ಥಾನಲ್ಲಿ ನಾಳ್ತು ಆದಿತ್ಯವಾರ ಆರಾಧನಾ ಕಾರ್ಯಕ್ರಮಲ್ಲಿ ತಾಳವಾದ್ಯ ಕಚೇರಿ ಲಿ ಎನ್ನ ಮಗನೂ ಭಾಗವಹಿಸುತ್ತ°.

  • ಅಕ್ಷರ ದಾಮ್ಲೆ says:

   ಓಹೋ, ನಿಂಗಳ ಮಗ ಎಂತ ಕಲಿತ್ತಾ ಇದ್ದ?

   • ರಘುಮುಳಿಯ says:

    ಯಕ್ಷಗಾನ ಒ೦ದನೆ ಮರುಳು.ಮೃದ೦ಗ ಕಲಿತ್ತಾ ಇದ್ದ°,ತಾಳವಾದ್ಯಲ್ಲಿ ಚೆ೦ಡೆ ನುಡಿಸೊದು.

  • ರಘು ಭಾವ, ಲೋಕಲ್ಲಿ ಇಪ್ಪ ಎಲ್ಲಾ ಸಂಗೀತ ಕ್ಷೇತ್ರಲ್ಲಿ ಇಪ್ಪೋರ ಆಸೆ ಆಗಿರ್ತು ಜೀವನಲ್ಲಿ ಒಂದರಿ ಆದರೂ ತಿರುವಯ್ಯಾರಿಲಿ ತ್ಯಾಗರಾಜರ ಆರಾಧನೆಲಿ ಪಾಲ್ಗೊಳ್ಳೆಕ್ಕು ಹೇಳಿ. ಸಂಗೀತದ ಮೂಲಕ ಆ ನಾದ ಬ್ರಹ್ಮಂಗೆ ಶ್ರದ್ಧಾಸುಮನ ಅರ್ಪಿಸುತ್ತವು. ಆನುದೇ ದೂರದರ್ಶನದ ಕೃಪೆಂದ ನೇರ ಪ್ರಸಾರ ನೋಡಿದೆ. ಕೊಶೀ ಆತು.

   ನಾಳ್ದು ನಿಂಗಳ ಮಗನ ತಾಳವಾದ್ಯ ಕಚೇರಿ ಲಾಯ್ಕಲ್ಲಿ ನಡೆಯಲಿ. ಅವಂಗೆ ಶುಭವಾಗಲಿ ಹೇಳಿ ಹಾರೈಸುತ್ತೆ.

 4. ಅಕ್ಷರ ದಾಮ್ಲೆ says:

  ತ್ಯಾಗರಾಜರ ನೆನಪಿಸಿಕೊಂಡದು ಲಾಯ್ಕ ಆಯ್ದು… ಪ್ರತಿಯೊಬ್ಬ ಸಂಗೀತ ವಿದ್ಯಾರ್ಥಿಗೂ ತ್ಯಾಗರಾಜರು ಒಂದು ದಿಕ್ಸೂಚಿ……

 5. ಆನು ರಜ ಔರ೦ಗಜೇಬನ ವ೦ಶದವ೦.ಆದರೂ ಇ೦ತಾ ಮಹಾತ್ಮರ ಬಗ್ಯೆ ಸಕಾಲಲ್ಲಿ ಬ೦ದ ಲೇಖನಕ್ಕೆ ಒ೦ದ ಒಪ್ಪ ಕೊಡ್ಲೇಬೇಕು.ಅದರೆಡೇಲಿ ರಘು ಭಾವನ ಮಗ೦ ಮ್ರುದ೦ಗ ಕಲಿತ್ತ೦ ಹೇಳಿ ಕೇಳಿ ಕೊಶಿ ಆತು.ಅವನ ಪ್ರಾಯ ಎಷ್ಟೊ.ಹೀ೦ಗೇ ಕೇಳಿದ್ದು.ಸಣ್ಣ ಮಕ್ಕೊ ಹಸ೦ಗೀತ ಹೇಳುವಾಗ ಅಥವ ಪಕ್ಕ ವಾದ್ಯ ನುಡಿಸುವಾಗ ಎಲ್ಲಾ ನೋಡ್ಲೆ ಚೆ೦ದ ಹಾ೦ಗೇ ಕೇಳಲೂದೆ.ಬರಳಿ ಭವ್ಯ ಭವಿಶ್ಯ ಅವನದ್ದಾಗಿರಳಿ ಹೇಳುತ್ತ ಶುಭ ಹಾರಯಿಕೆ ಎನ್ನ ಕಡೇ೦ದ.ಒಪ್ಪ೦ಗಳೊಟ್ಟಿ೦ಗೆ

  • ಧನ್ಯವಾದ ಮಾವ°.

  • raghumuliya says:

   ಮಾವ,ಎನ್ನ ದೊಡ್ಡ ಮಗ ಆರನೆಯ ಕ್ಲಾಸಿಲಿ ಕಲಿತ್ತ.ಯಕ್ಷಗಾನ ನಾಟ್ಯ ಮತ್ತೆ ಕರ್ನಾಟಕ ಸ೦ಗೀತಲ್ಲಿ ಮೃದ೦ಗ ಈ ಎರಡರ ಹವ್ಯಾಸ ಬೆಳೆಶಿದ್ದ.ಚೆ೦ಡೆ ಬಾರುಸುಲೂ ಕಲಿತ್ತಾ ಇದ್ದ.ನಿ೦ಗಳ ಆಶೀರ್ವಾದ ಸದ್ದ ಇರಳಿ ಮಾವ.ಧನ್ಯವಾದ.

 6. ಶ್ರೀಶಣ್ಣ says:

  ಸಂಗೀತ ಕ್ಷೇತ್ರದ ದಿಗ್ಗಜ, ತ್ಯಾಗರಾಜರ ಕೀರ್ತನೆ ಇಲ್ಲದ್ದ ಯಾವದೇ ಕಛೇರಿ ಪರಿಪೂರ್ಣ ಹೇಳಿ ಅನಿಸ. ಭಕ್ತಿ ಮಾರ್ಗಲ್ಲಿ, ಸಂಗೀತದ ಮೂಲಕ ದೇವರ ಒಲುಸಿದ ಮಹಾನುಭಾವ.
  “ಎಂದರೋ ಮಹಾನುಭಾವುಲು, ಅಂದರಿಕೀ ವಂದನಮು”
  ಶ್ರೀ ಅಕ್ಕನ ಸಕಾಲಿಕ ಬರಹಲ್ಲಿ ತ್ಯಾಗರಾಜರ ಬಗ್ಗೆ ತುಂಬಾ ಮಾಹಿತಿ ಸಿಕ್ಕಿತ್ತು. ಧನ್ಯವಾದಂಗೊ

  • ಧನ್ಯವಾದ ಶ್ರೀಶಣ್ಣ. ತ್ಯಾಗರಾಜರು, ತಂಜಾವೂರಿನ ರಾಜ°, ಆಸ್ಥಾನ ವಿದ್ವಾಂಸ ಆಯೆಕ್ಕು ಹೇಳುವ ಆಮಂತ್ರಣವ ತಿರಸ್ಕರಿಸಿ ದೇವರ ಸಂಗೀತಲ್ಲಿಯೇ ಒಲಿಶುಲೆ ಆವುತ್ತು ಹೇಳಿ ತೋರ್ಸಿ ಕೊಡ್ಲೆ ಇಡೀ ಸಂಚಾರ ಮಾಡಿದವ್ವು.
   ಅವರ ‘ಎಂದರೋ ಮಹಾನುಭಾವುಲು’ ಯಾವ ಕಾಲಲ್ಲಿಯೂ ಪ್ರಸ್ತುತ ಸಾಹಿತ್ಯವುದೇ! ಸತ್ಯವುದೇ!!!

 7. ಶ್ರೀ ಅಕ್ಕಾ,ಮಹಾನ್ ಸಂಗೀತ ಸಾಧಕ ತ್ಯಾಗರಾಜನ ಬಗ್ಗೆ ಮಹತ್ವಪೂರ್ಣ ಶುದ್ಧಿ ಹೇಳಿದ್ದಿ..ಈ ಮೂಲಕ ಆ ಮಹಾನ್ ವ್ಯಕ್ತಿಗೆ ನಮನ..ಧನ್ಯವಾದ..

 8. ಹಿಗ್ಗಿನ್ಸ್ ಭಾಗವತರು ಹೇಳುವ ಇ೦ಗ್ಲೀಶ ಎ೦ದುರೋ ಮಹಾನು ಭಾವಲು… ಹೇಳುವ ಆ ಹಾಡಿನ ಎಷ್ಟು ಚೆ೦ದಕೆ ಹಾಡಿದ್ದ೦ ಹೇಳೀರೆ ಬಹುಶಕಹಾ ಇಲ್ಲಿಯೇ ಹುಟ್ಟಿ ಬೆಳದು ಸ೦ಗೀತ ಕಲ್ತವು ಕೂಡಾ ಅಷ್ಟು ಚೆ೦ದಕೆ ಹೇಳ್ಲೆಡಿಯ.ನಮ್ಮ ಬಾಲ ಮುರಳೀ ಕ್ರಷ್ಣ ಕೂಡಾ ಈ ಹಾಡಿನ ಅತ್ಯ೦ತ ಮನೋಜ್ನವಾಗಿ ಹಾಡಇದ್ದವು.ಒಪ್ಪ೦ಗಳೊಟ್ಟಿ೦ಗೆ

 9. ಬೊಳುಂಬು ಮಾವ says:

  ತ್ಯಾಗರಾಜರ ಬಗ್ಗೆ ಅಪೂರ್ವ ಮಾಹಿತಿ ನೀಡಿ ಶ್ರೀ ಅಕ್ಕ ಬರದ ಲೇಖನ ಚೆಂದ ಆಯಿದು. ಒಪ್ಪಂಗಳಲ್ಲಿಯುದೆ ಹಲವು ಮಾಹಿತಿಗೊ ಸಿಕ್ಕಿತ್ತು. ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *