Oppanna.com

ಉಡುಗೊರೆ

ಬರದೋರು :   ಕೇಜಿಮಾವ°    on   03/02/2013    9 ಒಪ್ಪಂಗೊ

ಮೊನ್ನೆ ಒಂದು ಮದುವೆಗೆ ಹೋಗಿತ್ತಿದ್ದೆ.ಕೂಸು ಬೆಂಗ್ಳೂರಿಲ್ಲಿ ಕೆಲಸಲ್ಲಿಪ್ಪದು.ಮಾಣಿಯುದೇ ಅಲ್ಲೇ.ಅದರ್ಲೇನೂ ವಿಷೇಶ ಇಲ್ಲೆ.
ಮದುಮಕ್ಕಳ ಸ್ನೇಹಿತರು ತುಂಬಜೆನ ಬಂದಿತ್ತಿದ್ದವು,ಬರೆಕಾದ್ದೇ ಅಲ್ಲದೋ.

ಎಲ್ಲರ ಕೈಲಿಯುದೇ ಒಂದೊಂದು ಹೂ ಗುಚ್ಚ ಕಂಡತ್ತು.
ಎಂತೈಲ್ಲದ್ದರೂ ಒಂದೊಂದಕ್ಕೆ ಐನೂರು ರುಪಾಯಿಗೆ ಕಮ್ಮಿ ಇಲ್ಲದ್ದ ಹಾಂಗಿಪ್ಪದು.
ಹೂಗಿನ ವ್ಯಾಪಾರಿಗೆ,ಬೆಳೆಶಿದವಕ್ಕೆ ಗಿರಾಕಿ ಆದ್ದೇ,ಆಯೆಕ್ಕಾದ್ದೇ.
ಆದರೆ ನಾವೊಂದು ಯೋಚನೆ ಮಾಡ್ತ ವಿಷಯ ಇದ್ದು.
ಸುಮಾರು ಮೂವತ್ತು ವರ್ಷ ಹಿಂದೆ ಎನ್ನ ಮದುವೆ ಅಪ್ಪಗ ಆದ ಒಂದು ವಿಷಯ.
ಮದುವೆ ಆಗಿ ಮನೆ ಮಾಡಿ ಸುರೂವಾಣ ದಿನ ಅಡಿಗೆ ಮಾಡಿ ಉಂಬಲೆ ಕೂಪಗ ನೆಂಪಾತದ, ಉಪ್ಪಿನಕಾಯಿಗೆ ಚಮ್ಚ ತೆಕ್ಕೊಂಬಲೆ ಮರದ್ದು.
ಉಡುಗೊರೆ ಬಂದ ಕಟ್ಟವ ಎಲ್ಲ ಬಿಡುಸಿ ಮಡಗಿತ್ತಿದ್ದಿಲ್ಲೆ.
ಮದುವೆ ದಿನ ನೋಡಿದ್ದು ನೆಂಪಿತ್ತು, ಎನ್ನ ಹೆಣ್ಡತ್ತಿಯ ಚಿಕ್ಕಮ್ಮನ ಉಡುಗರೆಯ ಕಟ್ಟ. ಅದರ್ಲಿದ್ದದು ಸೌಟುಗೊ, ಚಮ್ಛಂಗೊ ಇತ್ಯಾದಿ.
ಅಂದಿಂದ ಇಂದಿನ ವರೆಗೂ ಆನು ಎನ್ನ ಸಂಬಂದಿಕರ ಮಕ್ಕಳ ಮದುವೆಲಿ ನಿತ್ಯೋಪಯೋಗ ಆಗದ್ದ ಹಾಂಗಿಪ್ಪ ವಸ್ತುವಿನ ಕೊಟ್ಟದಿಲ್ಲೆ,

(ಎನ್ನ ಅಕ್ಕ ಕೊಟ್ಟ ಬಟ್ಳಿಲ್ಲೇ ಆನು ಇಂದುದೇ ಉಂಬದು).
ವಸ್ತು ರೂಪಲ್ಲಿ ಕೊಡ್ಲೆ ಆಯಿದಿಲ್ಲೆ ಹೇಳಿ ಆದರೆ ನೋಟಿನ ರೂಪಲ್ಲಿ ಕೊಡ್ಳಕ್ಕು, ಅದರ ಬದಲು ಸಾವಿರಗಟ್ಳೆಯ ಹೂಗು ಮದುವೆ ದಿನ ಹೊತ್ತೋಪ್ಪಗ ಒಣ್ಗುದು ನೋಡಿರೆ ಬೇಜಾರಾವುತ್ತು.

ಕೇಜಿಮಾವ°
Latest posts by ಕೇಜಿಮಾವ° (see all)

9 thoughts on “ಉಡುಗೊರೆ

  1. ಗತಾನುಗತಿಕೋ ಲೋಕಃ, ನ ಲೋಕಃ ಪಾರಮಾರ್ಥಿಕಃ ಹೇಳ್ತ ಹಾ೦ಗೆ ಇನ್ನೊಬ್ಬ ಕೊಡ್ತ ಹೇಳುವ ಕಾರಣಕ್ಕೆ ನಾವುದೆ ಕೊಡ್ಳೆ ಹೋದರೆ ಇದು ನಮ್ಮ ಆಡ೦ಬರದ ಪ್ರದರ್ಶನ ಅಕ್ಕಷ್ಟೆ. ಉಡುಗೊರೆ ಸ್ನೇಹ, ಸೌಹಾರ್ದದ ಒಟ್ಟಿ೦ಗೆ ಸೇರಿರೆ ಮಾ೦ತ್ರ ಅದಕ್ಕೆ ಬೆಲೆ.
    ಮತ್ತೆ, ಹೀ೦ಗಿರ್ತ ಸಮಾರ೦ಭಗಳಲ್ಲಿ ಸಿಕ್ಕುತ್ತ ಎಷ್ಟೋ ಉಡುಗೊರೆಗೊ – ಹೂಗುಚ್ಛದ ಹಾ೦ಗಿಪ್ಪದು ೧ ದಿನಲ್ಲಿ ಹಾಳಾವ್ತು, ಅಲ್ಲದ್ದೆ, ಪಾತ್ರಸಾಮಾನುಗಳ ಹಾ೦ಗಿಪ್ಪದು ಎಷ್ಟೋ ವರ್ಷ ಉಪಯೋಗಿಸದ್ದೆ ಮೂಲೆಲಿ / ಅಟ್ಟಲ್ಲಿ ಬೀಳ್ತು.

  2. ಉಡುವ ಕೊರೆ[ಬಟ್ಟೆ] ಹೇಳುದರಿಂದ ಉಡುಗೊರೆ ಆಗಿ ವಸ್ತ್ರ ಮಾತ್ರ ಕೊಡಲಕ್ಕು ಹೇಳಿ ಕಾಣುತ್ತು.ಬಾಕಿ ಸಾಮಾನು ಕೊಡುದು ಜಾರಿಗೆ ಬಂದದು ಇತ್ತೀಚೆಗೆ.
    ಉಡುಗೊರೆ ಕೊಡುದು ಹೇಳಿ ಸಾಮಾನು ಕೊಡುದರಿಂದ ಒಂದು ಕವರಿಲಿ ಪೈಸೆ ಹಾಕಿ ಕೊಡುದು ಸುಲಭ ಹೇಳಿ ಈಗ ಅದೇ ಹೆಚ್ಚು ಜಾರಿಲಿದ್ದು.
    ಒಸಗೆ ಹಾಕುದು ನಮ್ಮ ಜಾತಿಲಿ ಬಂದ ಒಂದು ಸತ್ಸಂಪ್ರದಾಯ.ಸಭೆ ಹೇಳಿ ಒಂದು ಶೋಭಾಯಮಾನವಾಗಿ ಮಾಡಲೆ ಇದರಿಂದಾಗಿ ಆವುತ್ತು. ಬಂದವಕ್ಕೂ ಮನೆಯವಕ್ಕೂ ಕುಶಿ ಆವುತ್ತು.ಆರೆಲ್ಲಾ ಆಢ್ಯರು ಬೈಂದವು ಹೇಳಿ ತುಂಬಾ ಜನಕ್ಕೆ ಗೊಂತಾವ್ತು.ಒಸಗೆ ಒಂದು ಲೆಕ್ಕಲ್ಲಿ ಹೊಲಿ ಇಲ್ಲದ್ದ ಸಾಲ ಹೇಳಿ ಮೊದಲಾಣವು ಹೇಳುದು ಕೇಳಿದ್ದೆ.ಒಸಗೆ,ಆಶೀರ್ವಾದ, ಉಪಚಾರ, ಪುರೋಹಿತರಿಂಗೆ ದಕ್ಷಿಣೆ ಕೊಡುದು,ಮಂತ್ರಾಕ್ಷತೆ-ಇದೆಲ್ಲಾ ಸಭೆಯ ಮಟ್ಟಿಂಗೆ ಚೆಂದವೇ.ಇದು ನಮ್ಮ ಕ್ರಮಲ್ಲಿ ಒಳಿಯಲಿ.
    ಉಡುಗೊರೆ ಕೊಡಲೇ ಬೇಕಾದ ಅಗತ್ಯ ಇಲ್ಲೆ.ತಟ್ಟೆಗೆ ಅಷ್ಟೋ ಇಷ್ಟೊ ಹಾಕಿರೆ ಸಾಕು ಹೇಳುವ ಆಯ್ಕೆ ಜನಂಗೊಕ್ಕೆ ಇದ್ದು.
    ಮತ್ತೆ-ಪ್ರತಿಷ್ಠೆ ತೋರಿಸುವವು-ಹೇಂಗಾದರೂ ತೋರಿಸುಗು.ಅವಕ್ಕೆ ಇದೊಂದೇ ದಾರಿ ಅಲ್ಲ.ಹಲವು ರೀತಿ ಇದ್ದು!ಆ ಸಂಗತಿ ಬಿಡಿ.

  3. ಹೊಸ ಮದುಮಕ್ಕಳ,ಗುರುಗಳ,ರೋಗಿಗಳ,ಮಕ್ಕಳ ಮತ್ತೆ ದೇವರ ಹತ್ತರೆ ಬರೀ ಕೈಲಿ ಹೋಪಲಾಗ ಹೇಳಿ ಎಲ್ಲಿಯೋ ಆರೋ ಹೇಳಿದ್ದು ನೆಂಪು.ಉಡುಗೊರೆ ಬೇಡ ಹೇಳಿ ಹೇಳುದು ಹಾಂಗಾಗಿ ಸರಿ ಅಲ್ಲ,ಅದಲ್ಲದ್ದೆ ಸೋದರ ಮಾವ (ಕೂಸಿನ) ಉಡುಗರೆ ಕೊಡುದು ಒಂದು ಮದುವೆ ಕಾರ್ಯಕ್ರಮದ ಅಂಗವಾಗಿಯೇ ಇದ್ದು.ಎನ್ನ ಹಿರಿಯೋರು ಹೇಲಿಯೊಂಡಿದ್ದ ಪ್ರಕಾರ ಮದುವೆ ದಿನ ಮುಹೂರ್ತ ದಕ್ಷಿಣೆ ತೆಕ್ಕೊಂಡದರ ಅದಕ್ಕೆ ರಜ ಸೇರ್ಸಿ ಒಸಗೆ ಹಾಕೆಕ್ಕು.
    ಇದೆಲ್ಲ ಅಲ್ಲದ್ದೆ ಒಂದು ವಿಷಯ ನಾವು ಮರದ್ದೆಂತರ ಹೇದರೆ,ನಮ್ಮಲ್ಲಿ ಮದುವೆ ದಿನ ಉಡುಗರೆ ಕೊಡುದಲ್ಲ.ಸಟ್ಟುಮುಡಿ ದಿನ.ನವಗೆ ಮರ ದಿನ ಹೋಪಲೆ ಎಡಿಯದ್ದಿಪ್ಪಗ,ಬೇರೆ ಜಾತಿಯವು ಬಪ್ಪಲೆ ಸುರು ಮಾಡಿದ ಮೇಲೆ ಈ ಮದುವೆ ದಿನ ಉಡುಗರೆ ಸುರುವಾದ್ದು ಹೇಳ್ತದು ಎನ್ನ ತಿಳುವಳಿಕೆ.
    ಗೊಂತಿದ್ದವು ಹೇಳೆಕ್ಕು.
    ಆಶೀರ್ವಾದವೇ ಉಡುಗರೆ ಹೇಳ್ತದು ಮೇಲೆ ಹೇಳಿದ ಕಾರಣಕ್ಕೆ ಸರಿಯಲ್ಲ ಹೇಳ್ತದು ಸಂಪ್ರದಾಯವಾದಿಗಳ ಅಭಿಪ್ರಾಯ.
    ಬಟ್ಟಮಾವ° ಎಂತ ಹೇಳ್ತವೋ?

  4. “ಓಹೋಯ್ …ಭಟ್ಟರೇ,ತಾವು ಒಪ್ಪತ್ತು ಮು೦ಚಿತವಾಗಿ ಬ೦ದದ್ದಲ್ಲದೆ ವಿಶೇಷವಾದ ಉಡುಗೊರೆ ಭಾರವೇನೆ೦ದು ಕೇಳುತ್ತಾನೆ ಮನೆ ಯೆಜಮಾನ” ಹೇಳಿ ಭಟ್ಟಮಾವ° ಕೇಳಿ ಕೊಶಿ ಪಟ್ಟುಗೊ೦ಡಿದ್ದ ಬಾಲ್ಯದ ಹೊಡೇ೦ಗೆ ಮನಸ್ಸು ಓಡಿತ್ತೊ೦ದರಿ.
    ‘ಒಸಗೆ’ ನಮ್ಮ ಸ೦ಪ್ರದಾಯದ ಅ೦ಗವಾಗಿ ಹಾ೦ಗೆಯೇ ಇದ್ದರೇ ಚೆ೦ದ.
    ”ಆಶೀರ್ವಾದವೇ ಉಡುಗೊರೆ” ಹೇಳಿ ಬರದರೆ ಈ ಸಮಸ್ಯೆ ಅಪ್ಪದು,ಅಲ್ಲದೊ ಮಾವ?

  5. ಉಪನಯನದ ಮಾಣಿಗಾದರೆ ಭಿಕ್ಷೆ ರೂಪಲ್ಲಿ ಕೊಡುಲಕ್ಕೋ ಎಂತದೋ! ಆದರೆ ನವ ಗೃಹ ಪ್ರವೇಶ ಮಾಡುವಗಳೂ ಒಳುದೋರೆಲ್ಲ ಉಡುಗೊರೆ ಕೊಡುವಗ ನವಗೆ ಸಂಕೋಚ ಆವುತ್ತು.ವಧೂ ಗೃಹ ಪ್ರವೇಶ ದಿನವೂ ಉಡುಗೊರೆ ಕೊಡುವದು ಸಂಪ್ರದಾಯ ಆಯಿದು. ಎಲ್ಲೋರೂ ಮಂತ್ರಾಕ್ಷತೆ ಹಾಕುಲೆ ಹೋಪಗ ಬರಿಗೈಲಿ ಹೇಂಗೆ ಹೇಳಿ ಏನಾದರೂ ವಸ್ತುವಿನ ಕೈಲಿ ಹಿಡುಕ್ಕೊಳ್ಳೆಕ್ಕಾವುತ್ತು. ಆದರೆ ಆ ಉಡುಗೊರೆ ಕಾರ್ಯಕ್ರಮವನ್ನೇ ಸಾಮೂಹಿಕವಾಗಿ ಅನಗತ್ಯ ಹೇಳಿ ನಿಲ್ಲುಸಿದರೆ ಹೇಂಗೆ?

    1. ನಿ೦ಗಳ ಸಲಹೆ ಒಳ್ಲ್ಲದಿದ್ದು. ಆದರೆ ಇದು ಓದುಲೆ ಆಸಕ್ಥಿ ಇಪ್ಪವಕ್ಕೆ ಮಾತ್ರ ಖುಶಿ ಆವುತ್ತು.ಆಸಕ್ಥಿ ಇಲ್ಲದ್ದವಕ್ಕೆ ಅದುದೆ ಒ೦ದು ಹರಗಣ ಹೇಳಿ ಕಾಣ್ತು. ಇದಕ್ಕೆ ಸ೦ಭದಿಸಿದ ಹಾ೦ಗೆ ಎನಗೊ೦ದು ಜೋಕು ನೆನಪ್ಪಾವುತ್ತು——-

      ಒ೦ದು ಅಜ್ಜಿ ಪುಳ್ಲ್ಲಿಯ ಉಪನಯನಕ್ಕೆ ಭಗವದ್ಗೀತೆ ಉಡುಗೊರೆ ಕೊಟ್ಟತಡ. ಅಜ್ಜನ ಷಷ್ಠಿ ಅಬ್ದಿ ಕಾರ್ಯಕ್ರಮಕ್ಕೆ ಅಪ್ಪನತ್ರ ಪುಳ್ಲಿದು ಒ೦ದೇ ಒ೦ದು ಹಟ.”ಅಜ್ಜಿಗೆ ಉಡುಗೊರೆ ಕೊಡ್ಲೆ ಎನಗೊ೦ದು ಫೊಟು ಬಾಲು ತೆಗದು ಕೊಡಿ” ಹೇಳಿ. ಎ೦ತಕೆ? ಅಜ್ಜಿಗೆ ಫೊಟು ಬಾಲು ಆಡುಲೆ ಎಡಿಗೊ? ಹೇಳಿ ಅಪ್ಪನ ಪ್ರಶ್ನೆ. “ಎನಗೆ ಭಗವದ್ಗೀತೆ ಓದಿದರೆ ಅರ್ಥ ಆವುತ್ತಿಲ್ಲೆ. ಹಾ೦ಗಾಗಿ ಅಜ್ಜಿಗುದೆ ಆಡ್ಲೆ ಎಡಿಯದ್ದ ಹಾ೦ಗೆ ಇಪ್ಪದರನ್ನೆ ಉಡುಗೊರೆ ಕೊಡ್ದು ಆನು” ಹೇಳಿ ಪುಳ್ಲ್ಲಿಯ ಉತ್ತರ.
      ಪುಸ್ತಕ ಕೊಡಕ್ಕಾರು ಆರಿ೦ಗೆ ಯಾವುದರ ಆಸಕ್ಥಿ ಇದ್ದು ಹೇಳಿ ನೋಡಿ ಕೊಡುದು ಒಳದಲ್ಲದ?
      (ಅಜ್ಜಿ, ಫೊಟು ಬಾಲಿನ ಪುಳ್ಲಿಗೆ ವಾಪಾಸು ಕೊಡುಗು. ಪುಳ್ಲಿಯ ಆಲೊಚನೆ ಅಲ್ಲಿವರೆಗೆ ಮುನ್ದುವರ್ದಿಕ್ಕು)

  6. ಹೂವಿನ ಗುಚ್ಹ ಹಾ೦ಗೆ ಕೊಡ್ಲೆ ಎಡಿಗಪ್ಪ ಧನಿಕರು ಮಾತ್ರ ಕೊಡುಗಸ್ಟೆ. ಹಾ೦ಗಿಪ್ಪೊರು ಇಪ್ಪ ಕಾರಣವೆ ಆರ್ಥಿಕವಾಗಿ ಹಿ೦ದೆ ಇಪ್ಪ ಕೃಷಿಕರು ಬೆಳಗಸ್ಟೆ. ಉದಾಹರಣೆಗೆ ಅಡಕೆಯ ತಿನ್ದು ತುಪ್ಪುವ ಜನ೦ಗೊ ಇಪ್ಪ ಕಾರಣ ಅಡಕ್ಕೆ ಕೃಷಿಕರು ಇನ್ದಿನ್ಗೊರೆಗೆ ಬದುಕ್ಕಿದ್ದವು. ಇಲ್ಲದ್ದರೆ ಅಡಕ್ಕೆ೦ದ ಬೇರೆ೦ತ ವಿಷೇಶ ಉಪಯೊಗ ಇದ್ದು? ಬೀಡಿ ಸಿಗರೇಟು ಸೇದುವ ಜನ೦ಗೊ ಇಪ್ಪ ಕಾರಣ ಹೊಗೆಸೊಪ್ಪಿನ ಕೃಷಿ ಮಾಡಿಗೊ೦ಡು ಆ ಕೃಷಿಕರಿಂಗೆ ಬದುಕುಲೆ ಎಡಿತ್ತು.

    ಇಂದ್ರಾಣ ಕಾಲಲ್ಲಿ ಉಡುಗೊರೆ ಪಡೆಯೆಕ್ಕಾದೋರು ಕಮ್ಮಿ . ತುಂಬಾ ಹಿಂದಾಣ ಕಾಲಲ್ಲಿ ಅದರ ಆವಶ್ಯಕತೆ ಇತ್ತು .ಇ೦ದು
    ಉಡುಗೊರೆ ಹೆಚ್ಹಿನ ಸ೦ದರ್ಭಲ್ಲಿಯು ಕೊಡುವವನ ಪ್ರತಿಸ್ಟೆ ತೋರುಸೆಲೆ ಆಗಿರ್ತು.

  7. ಕಾರ್ಯವಾದ ಮಾತು. ಪ್ರತಿಯೊಬ್ಬನೂ ಈ ಬಗ್ಗೆ ಗಮನಹರುಸೆಕ್ಕಾದ್ದೆ. ಇನ್ನು ಕೆಲವು ಕಡೆ ಆಶೀರ್ವಾದವೇ ಉಡುಗೊರೆ ಹೇಳಿ ಆಮಂತ್ರಣ ಪತ್ರಿಕೆಲಿ ಇಪ್ಪದರಿಂದಲಾಗಿಯೂ ಹೂಗುಚ್ಛ ಕೊಟ್ಟು ಬಪ್ಪದು ಕಾಣುತ್ತು. ಅಂತೆ ಒಂದು ಕ್ಷಣ ಪಟಲ್ಲಿ ಕಾಂಬಲೆ ಮಾತ್ರ ಉಪಯೋಗ ಅಕ್ಕಷ್ಟೆ. ಇದಕ್ಕಿಂತ ಅಂತೇ ಹೋಗಿ ಆಶೀರ್ವಾದ ಮಾಡಿರೂ ಅಡ್ಡಿ ಇಲ್ಲೆ ಹೇಳಿ ಎನ್ನ ಅಭಿಪ್ರಾಯ. ಅಂವ ಬೈಂದನೋ, ಉಡುಗೊರೆ ತೈಂದನೋ ಹೇಳಿ ಗ್ರೇಶುಗೋ ಹೇಳಿ ನಾವು ಗ್ರೇಶೋದು ಮಾಂತ್ರ. ಒಂದುವೇಳೆ ಆರಾರು ಗ್ರೇಶುತ್ತರೂ ಅಡ್ಡಿ ಇಲ್ಲೆ. ಉಪಯೋಗ ಇಲ್ಲದ್ದೆ ಹೋಪಲಾಗ ಹೇಳಿಯಷ್ಟೇ ನಮ್ಮ ಕಳಕಳಿ. ಹಾಂಗೇ ಉಡುಗೊರೆ ಕೊಡುತ್ತರೆ ನಿತ್ಯ ಉಪಯೋಗ ವಾ ಅಂಬಗಂಬಗ ಉಪಯೋಗ ಅಪ್ಪಂತ ವಸ್ತುಗಳ ಕೊಡ್ತದು ಪ್ರಶಂಸನೀಯ.

    ಇನ್ನು ಆಮಂತ್ರಣ ಪತ್ರಿಕೆಲಿ ಆಶೀರ್ವಾದವೇ ಉಡುಗೊರೆ ಹೇಳಿ ಎಂತಕ್ಕೆ ಸೂಚನೆ ಕೊಡ್ತವೋ?! ಅವರ ಮರ್ಜಿಗೆ ಧಕ್ಕೆ ಬತ್ತು ಹೇಳಿ ಗ್ರೇಶುತ್ತವೋ ಏನೋ. ಶುಭಕಾರ್ಯಕ್ರಮಲ್ಲಿ ಉಡುಗೊರೆ ಕೊಟ್ಟೇ ಆಶೀರ್ವಾದ ಮಾಡೇಕ್ಕಾದ್ದು ನಮ್ಮ ಸಂಪ್ರದಾಯ. ಒಂದುವೇಳೆ ಉಡುಗೊರೆ ಕೊಡದ್ದೆ ಆಶೀರ್ವಾದ ಮಾಡಿರೂ ಆಕ್ಷೇಪಾರ್ಹ ಏನೂ ಆವ್ತಿಲ್ಲೆ. ಅಲ್ಲದಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×