ಉಪಕಾರವೊ ಉಪದ್ರವೋ??

March 15, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 55 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆಧುನಿಕತೆ ಆಧುನಿಕತೆ ಹೇಳಿ ಅಗತ್ಯ ಇಲ್ಲದ್ರು ಅಗತ್ಯ ಉ೦ಟು ಮಾಡಿ ನಮ್ಮ ಮನೆ ತು೦ಬುಸುತ್ತ ಕಾಟ೦ಕೋಟಿ ವಸ್ತುಗೊಕ್ಕೆ ನಮ್ಮಲ್ಲಿ ಏನೂ ಕಮ್ಮಿ ಇಲ್ಲೆ.. ಅಲ್ಲದೊ??
ನಮ್ಮ ಬೊಳು೦ಬು ಮಾವ “ಎನ್ನಜ್ಜನ ಸೈಕಲ್ ಸವಾರಿ” ಶುದ್ದಿಲಿ ಮದಲಿ೦ಗೆ ನಮ್ಮ ಅಜ್ಜ೦ದ್ರ ಕಾಲಲ್ಲಿ ಜೀವನ ಹೇ೦ಗೆ ಇತ್ತು ಹೇಳಿ ಲಾಯಕಲ್ಲಿ ತಿಳುಶಿಕೊಟ್ಟಿದವು. ಟಿ.ವಿ, ಕ೦ಪುಟರು, ರೇಡಿಯೊ ಎಲ್ಲ ಇಲ್ಲದಿಪ್ಪಗ, ನವಗೆ ಪುಸ್ತಕ ಓದುವ ಅಭ್ಯಾಸ ಇದ್ದತ್ತು., ಈಗಾಣ ಕಾಲದ ಮಕ್ಕೊಗೆ ಶಾಲೆ ಪುಸ್ತಕ ಓದುಲೇ ಸಮಯ ಇಲ್ಲೆ, ಮತ್ತೆ ಪೇಪರು, ಪುಸ್ತಕಕ್ಕೆ ಎಲ್ಲಿ ಸಮಯ ಇದ್ದು…ಸಮಯ ಸಿಕ್ಕಿರೆ ಟೀ.ವಿ. ಹೆರ ಆಡುವ ಅಭ್ಯಾಸ ಕಮ್ಮಿ.. ಈಗೆಲ್ಲಾ ಆಟ ಹೇಳಿರೆ ಕ೦ಪುಟರಿಲ್ಲಿ, ಮೊಬೈಲಿಲ್ಲಿ…ಈಗಾಣ ಮಕ್ಕೊ, ಜವ್ವನಿಗರು ಎಲ್ಲಾರ ಕೈಲಿಯು ಗುರುಟೇ೦ಡು ಇಪ್ಪ ಸರ್ವೇ ಸಾಮಾನ್ಯ ವಸ್ತು ಹೇಳಿರೆ ಮೊಬೈಲು…
ಉದ್ಯಪ್ಪಗ ಕುಟ್ಟಿ ಪೂರ ಅಪ್ಪನ್ನಾರಮುಟ್ಟ ಚಾರ್ಜುಮಾಡಿ, ಕಿಸೆಲಿ ಮಡುಗೆ೦ಡು ಹೆರಟತ್ತದ ಶಾಲೆಯೊ, ಉದ್ಯೊಗಕ್ಕೊ ಅವರವ ಕೆಲಸಕ್ಕೆ…
—————-

ಈ ಪುಳ್ಳರುಗೊ ಎಂತ ಗುರುಟುತ್ತಪ್ಪಾ??

ಕೆಲವು ಮಕ್ಕೊ ಬಸ್ಸಿಲಿ ಗಟ್ಟಿ ಪದ್ಯ ಮಡಗಿರೆ, ಕೆಲವು ಕೆಮಿಗೆ ಸಿಕ್ಸಿಗೊ೦ಡು ರೇಡಿಯೋ ಮಣ್ಣೋ ಕೇಳುಗು..
ಮತ್ತೆ ಕೆಲವು ಅದರ ಗುರುಟಿಯೋ೦ಡು ಗೇಮು ಆಡುಗು.. ಅಲ್ಲದ್ರೆ ಸಮೋಸ  (SMS), ಮಾಡಿಗೊ೦ಡು ಕೂರುಗು…
ಕೆಲವು ಗುಟ್ಟಿಲಿ ಮಾತಾಡಿರೆ, ಮತ್ತೆ ಕೆಲವು ಆಚವನ ಕೆಮಿ ಹೊಟ್ಟುವಾ೦ಗೆ ಮಾತಾಡುಗು…
ಅಲ್ಲೆ ಎಡಕಿಲ್ಲಿದ್ದಾ ಶ೦ಬಜ್ಜನೂ, ಮಾಲಿ೦ಗಜ್ಜನೂ ಮಾತಾಡಿಗೊ೦ಡವು..
ಶ೦ಬಜ್ಜ – “ ಎ೦ತ ಕರ್ಮವಾ ಏನೊ… ಎ೦ತಾಳಿ ಈ ಪುಳ್ಳರುಗೊ ಗುರುಟುತ್ತಪ್ಪಾ??, ಉಮ್ಮಪ್ಪಾ… ಬೇರೆ ಉದ್ಯೋಗವೇ ಇಲ್ಲೆ “
ಮಾಲಿ೦ಗಜ್ಜ– “ ಅಪ್ಪು ಭಾವ.. ಈಗಾಣ ಪುಳ್ಳರುಗೋ ನಾವು ಹೇಳಿದಾ೦ಗೆ ಇದ್ದೋ??, ಎ೦ತಾರು ಹೇಳಿರೆ ಹೆಚ್ಚಕ್ಕು, ಹೇಳದ್ರೆ ಕಮ್ಮಿ ಅಕ್ಕು… ಈ ಮೊಬೈಲು ಬ೦ದು, ಮ೦ಗನ ಕೈಗೆ ಮಾಣಿಕ್ಯ ಕೊಟ್ಟಾ೦ಗೆ ಆಯಿದು.. ”
ಶ೦ಬಜ್ಜ– “ ಹ್ಮ… ನೀನು ಹೇಳ್ತು ಸರಿಯೆ, ಮದಲಿ೦ಗೆ ಬರೇ ಲೇ೦ಡು ಲೈನು ಇಕ್ಕು.. ಎಲ್ಲಿಯೋ ಒ೦ದೋ-ಎರಡೋ ಸರ್ತಿ ಪೋನು ಬಕ್ಕಿದಾ.. ಕಿರೀ೦ ಕಿರೀ೦ಮ್ ಹೇಳಿ ಕೂಗುಗು… ಅಡಿಗೆ ಒಳ೦ದಾ ಎನ್ನ ಹೆ೦ಡತ್ತಿ ಓಡೆ೦ಡು ಬಕ್ಕು.. ಮಾತಾಡ್ಲೇ ಶುರುಮಾಡಿಗೆ ಮುಗಿಯ, ಮತ್ತೆ ಎಲ್ಲಿಯಾರು ನಾವು ಪೋನು ಮಾಡಿರೆ STD ಮಣ್ಣೋ ಆದರೆ ಈಚವ° ನೆ೦ಪು ಮಾಡೆಕ್ಕಿದ ಪೋನು ಮಡುಗು ಮಡುಗು ಹೇಳೆ೦ಡೇ ಬೇಕು ಅಲ್ಲದ್ರೆ ಬಿಲ್ಲು 500 ರುಪಾಯಿ ಕಮ್ಮಿ ಬಾರ..”
ಮಾಲಿ೦ಗಜ್ಜ– “ ಅಪ್ಪಪ್ಪು ಭಾವ.. ಈಗ ಹಾ೦ಗಲ್ಲನ್ನೆ, ಈಗ ನಾವು ಆ ಇಬ್ರಾಯಿಯ ಅ೦ಗಡಿಗೆ ಹೋಗಿ ಒ೦ದು 100 ರುಪಾಯಿಗೆ ಮೊಬೈಲಿ೦ಗೆ ಪೈಸೆ ಹಾಕಿರೆ ಆತು… ಸೆಕು೦ಡಿಗೆ ಒ೦ದು ಪೈಸೆ ಹಾ೦ಗೆ ಮಾತಾಡ್ಲಕ್ಕಿದಾ…”
ಶ೦ಬಜ್ಜ– ” ಅದು ಸರಿ…”
ಮಾಲಿ೦ಗಜ್ಜ-“ ಇದರಿ೦ದಾ ಈಗ ಭಾರಿ ಉಪಯೋಗ೦ಗೋ ಇದ್ದು.. ನಾವು ಮದಲಾಣ ಹಾ೦ಗೆ ಮನೆಗೆ ಮಣ್ಣೋ ಪೋನು ಮಾಡೆಕಾರೆ ಎಲ್ಲಿ೦ದ ಬೇಕಾದರು ಕೂದೋ೦ಡು ಪೋನು ಮಾಡ್ಲಕ್ಕು… ಈಗ ಎಲ್ಲಿ ಹೋದರು ಟವರು ಸಿಕ್ಕುಗಿದಾ.. ತೊ೦ದರೆಯೇ ಇಲ್ಲೆ.. “
ಶ೦ಬಜ್ಜ– “ಅಜ್ಜೋ, ಈ ಟವರಿನ ದಿಸೆಲಿ ಆಗ ಭಾವ.. ಮನ್ನೆ ಎನ್ನ ಮನೆಗೆ ಇಳಿತ್ತ ಗುಡ್ಡೆ ತಲೆಲಿ ಒ೦ದು ಟವರು ಹಾಕಿದವು.
ಎನಗೆ ಜಾಲಿ೦ಗೆ ಬ೦ದಪ್ಪಾ ಗುಡ್ಡೆ ತಲೇ೦ಗೆ ನೋಡಿರೆ ಈಗ ಹೆದರಿಕೆ ಆವುತ್ತು.. ಆ ಟವರು ಎಲ್ಲಿ ಮಾಲಿ ತಲೆಗೆ ಬೀಳುಗೋ ಹೇಳಿ.. “
ಮಾಲಿ೦ಗಜ್ಜ – “ ಹ ಹ ಹ.. ಅದು ಅಪ್ಪು, ಈಗೆಲ್ಲಾ ಪೇಟೆಲಿ ಎಲ್ಲಾ ಬಿಲುಡಿ೦ಗುಗಳ ಮೇಲೆ ಪೂರಾ ಟವರುಗೊ…
ಅಷ್ಟಪ್ಪಗ ಶ೦ಬಜ್ಜನ ಮೊಬೈಲೂ ಕುಳು-ಕುಳು ಹೇಳಿತ್ತು… “

ಆಚ ಹೋಡೆ೦ದಾ ಅವನ ಯಜಮಾನ್ತಿ, ಪೋನಿಲ್ಲಿ- “ ಇದಾ, ಎನ್ನ ಮೊಬೈಲಿಲಿ ಪೈಸ ಇಲ್ಲೆ… ಒ೦ದಾರ ಪೈಸೆ ಹಾಕಿಕ್ಕೀ ಏ°??”
ಶ೦ಬಜ್ಜ-“ ಮನ್ನೆ ಆಲ್ಲ ಪೈಸೆ ಹಾಕಿದ್ದು?? ನಿನಗೆ ಮೊಬೈಲು ಮಗ° ತೆಗದು ಕೋಡ್ಲೆ, ಪೈ ಆನು ಹಾಕಲೆ… ಯೋ.. ಆತು ಪೇಟೆಲಿ ಪೈಸೆ ಹಾಕುಸುತ್ತೆ ಮಡುಗು… 45 ಸೆಕೊ೦ಡು ಆತು.. ಮಡುಗು ಬೇಗ… “

ಅಷ್ಟಪ್ಪಗ- ಪೇಟೆ ಎತ್ತಿತ್ತು.. ಜನ ಎಲ್ಲಾ ಬಸ್ಸು ಇಳುದವು.. ಮಾಲಿ೦ಗಜ್ಜ, ಶ೦ಬ್ಬಜ್ಜ ಕಾ೦ಬೋ ಭಾವ ನಾಡ್ತು ಮದುವೆಲಿ ಹೇಳಿ ಅವ್ವು ಅವರವರ ದಾರಿ ಹಿಡುದವು..
——————-
ಇದು ಒ೦ದು ಕಾಲ್ಪನಿಕ ಕತೆ ಅಷ್ಟೆ…

ಮೊಬೈಲು ಹೇಳ್ತದು ಇ೦ದು ನಮ್ಮ ಒ೦ದು ಅವಿಭಾಜ್ಯ ಅ೦ಗ ಹೇಳಿ ಆಯಿದು.. ಶಾಲೆ ಮಕ್ಕಳಿ೦ದ ಹಿಡುದು ಹಿರಿಯ ನಾಗರೀಕರ ಹತ್ತರೆಯೂ ಇಪ್ಪ ಒ೦ದು ವಸ್ತು ಆಯಿದು. ಮೊಬೈಲಿನ ಹತ್ತು ಹಲವು ಉಪಯೋಗ ಇದ್ದು…
ಎಲ್ಲಿ೦ದ ಬೇಕಾರು ನಿ೦ದೊ೦ಡು ಫೋನುಮಾಡ್ತರಿ೦ದ ಹಿಡುದು, ಪಟತೆಗವ ಕೆಮರ ಸಾನು ಅದರಲ್ಲಿ ಇದ್ದು…
ಒ೦ದು ಮಾತಿದ್ದು- “ every thing comes as a package” ಹೇಳಿ…
ಮೊಬೈಲು ಕೂಡಾ ಹಾ೦ಗೆ.. ಇದರ ಅರ್ಥ, ಒಳ್ಳೆದು ಇದ್ದು,, ಕೆಟ್ಟದೂ ಇದ್ದು.. ಹೇಳಿ..
ಆನು ರಜ್ಜ ತಾ೦ತ್ರಿಕ ಹಿನ್ನಲೆ ಕೊಡ್ತೆ… ಮೊಬೈಲು ಹೇ೦ಗೆ ಕೆಲಸ ಮಾಡ್ತು ಹೇಳೀ..
ಮೊಬೈಲು ಫೋನ್ ಹೇಳ್ತದರ ಅರ್ಥ- ಸುಲಾಬಲ್ಲಿ ಹೊತ್ತೊ೦ಡು ತಿರುಗಲಾವುತ್ತಾ೦ಗಿಪ್ಪದು ಒ೦ದುಫೋನು..
ಮೊಬೈಲು ಪೋನು ನಡಕೊ೦ಡು ಬ೦ದ ದಾರಿ ಬಾರಿ ಹಳೇ ಕಥೆ…
ಮೊಬೈಲು ಪೊನು ಕೆಲಸ ಮಾಡ್ತು ವಯರ್ಲೆಸ್ ಟೆಕ್ನೋಲಜಿ ಮೇಲೆ- ತರ೦ಗ ಗಳ ಮೂಲಕ…
ಈ ತರ೦ಗಗಳ ಉಪಯುಕ್ತ ರೀತಿ ಬಳಕೆ ಮಾಡ್ಲಕ್ಕು ಹೇಳಿ ತೋರ್ಸಿಕೊಟ್ಟದು “ನಿಕೊಲಸ್ ಟೆಸ್ಲಾ” ಹೇಳ್ತ ಒ೦ದು ಜರ್ಮನಿಯ ಮಾಹಾನ್ ವಿಜ್ಜಾನಿ..
ಈ ತರ೦ಗ೦ಗೋ… ಟವರಿ೦ದ ಎಕ್ಸಚೇ೦ಜಿ೦ಗೆ ಹೋಗಿ ಅಲ್ಲಿ೦ದ ಮತ್ತಾಣ ಎಕ್ಸಚೇ೦ಜು ಹೋಗಿ ಕರೆ ಮಾಡಿದ ಜನಕ್ಕೆ ಮತ್ತೊ೦ದು ಟವರಿನ ಮೂಲಕ ಸಿಕ್ಕುತ್ತು.. ಮೊಬೈಲು ಹೇ೦ಗೆ ಕೆಲಸ ಮಾಡ್ತು ಹೇಳಿ ಸವಕಾಶಲ್ಲಿ ಪೂರ ವಿವರ ಮು೦ದೆ ಬರೆತ್ತೆ..
ಮೊಬೈಲನ ಉಪಾಯೊಗ೦ಗು ನೋಡುವನ ನಾವು??
ಮಾಲಿ೦ಗಜ್ಜ ಹೇಳಿದಾ೦ಗೆ ನಾವು ಎಲ್ಲಿ೦ದ ಬೇಕಾರು ನಿ೦ದೊಡು ಪೋನ್ ಮಾಡ್ಲಕ್ಕು.. ಪೇಟೆಗೆ ಹೋದಪ್ಪಗ ಬೋಸ ಭಾವ೦ಗೆ ಮರೆತ್ತ ಅಭ್ಯಾಸ ಜೋರು, ಅವ೦ಗೆ ಒ೦ದು ಮೊಬೈಲ ಹಿಡಶೀರ, ಏನಾರು ಮರದರೆ ಪೇಟೆ೦ದ ಮನಗೆ ಪೋನು ಮಾಡ್ಲಕ್ಕು..
ಮೊಬೈಲಿಲಿ ಇ೦ಟರ್ನೆಟ್ಟು ಎಲ್ಲಾ ಇದ್ದು.. ಪ್ರಾಯ ಆದವಕ್ಕೆ  ಅರ್ಜೆ೦ಟಿ೦ಗೆ ಪೋನು ಮಾಡ್ಲೆ  ವ್ಯವಸ್ತೆ ಇದ್ದು … “help line” ಕೂಡ ಇದ್ದು..

ಈಗ ಮತ್ತೆ, ಹತ್ತು ಹಲವು ರೀತಿಯ ಮೊಬೈಲು ಸಿಕ್ಕುತ್ತು.. ಹೆಚ್ಚು ಕ್ರಯವೂ ಇಲ್ಲೆ…
ಕಲರು, mp3, ವೀಡಿಯೊ.. ಕೆಮರಾ.. ಬೇಕಾಷ್ಟು ಚಿಪ್ಪು ಹಾಕಿರೆ ಮುಗಾತು..
ನೆಗೆಗಾರ° ನೆಗೆಮಾಡುಗು- ಚಿಪ್ಪು ( ಕರಟ) ಹಾಕುತ್ತಾ ಹೇಳಿ.. ಬೋಸ° ತಲೆ ಆಡುಸುಗು.. 😉

ಈಗ೦ತು.. ಹೇಳಿ ಪ್ರಯೋಜನ ಇಲ್ಲೆ.. ಬಸ್ಸಿಲ್ಲಿ ಹೋಪಗಳೂ.. ಬೈಕ್ಕು ಬಿಡುವಗಳೂ. ಪದ್ಯ ಮಡುಗೆ೦ಡು ಹೋಪವ್ವು…
ಬಸ್ಸಿಲಿ, ಕೆಲವು ಗಟ್ಟಿ ಮಡುಗ್ಗು.. ಮತ್ತೆ ಕೆಲವು ಕೆಮಿಗೆ ಸಿಕ್ಸಿಯೊ೦ಡು  ಬಾಯಿಲಿ ಗಟ್ಟಿ ಬೊಬ್ಬೆ ಹಾಕುಗು… ಹಗಲು ಆದರೂ ಸಹಿಸಲಕ್ಕು.. ಇದು ಇರುಳಾಣ ಬಸ್ಸಿಲಿ ಮಾಹಾ ಉಪದ್ರ…

ಮತ್ತೆ ಕಲವು ಬೈಕು ಬಿಟ್ಟೊ೦ಡು- ತಲೆ ಓರೆ ಮಾಡೆ೦ಡು ಮೊಬೈಲಿಲಿ ಮಾತಾಡುಗು.. ಇದು ಭಾರಿ ಅಪಾಯ… ಕೆಲವಕ್ಕೆ ಗುಮಾನವೇ ಇರಾ.. ಹಾ೦ಗೆ ಮಾತಾಡ್ಲೇ ಬೇಕಾರೆ ಬೈಕಿನ ಕರೇಲಿ ನಿಲ್ಲುಸಿ ಮಾತಾಡ್ತು ಉತ್ತಮಾ.. ಅಲ್ಲದೊ?
ಈ ಸಮಯ-ಸ೦ದರ್ಬ ಹೇ೦ಗಾವುತ್ತು ಹೇಳ್ಲೆಡಿಯ..

ಗುಮಾನ ಇಲ್ಲದ್ದೆ ಮೊಬೈಲಿ ಮಾತಾಡೆ೦ಡು ಬೈಕ್ಕು ಬಿಟ್ಟೊ೦ಡು ಹೋವುತ್ತದು..!!

ಈಗೀಗ ದೇವಸ್ಥಾನಲ್ಲಿ ಅಥವ ಗು೦ಡದತ್ರೆ.. ಬೋರ್ಡು ಬರೆತ್ತವು, ಮೊಬೈಲು ಆಫ್ ಮಾಡೆಕು ಹೇಳಿ.. ಅಲ್ಲದ್ರೆ ಆನು ನೋಡಿದ್ದೆ..
ಈ ಗಟ್ಟದವು, ಬೆ೦ಗಳೂರಿಲಿಪ್ಪ ಜೆನ೦ಗೊ “ವೀಕೆ೦ಡು ಟ್ರಿಪ್” ಹೇಳಿ ಊರಿ೦ಗೆ ಬ೦ದರೆ, ದೇವಸ್ಥಾನಕ್ಕೆ ಬ೦ದು ಅವರ ಪಟ ತೆಗೆತ್ತ ಗೌಜಿಬೇರೆ, ಅಲ್ಲದ್ದೆ ಅವರ ಪೋನು ಕೂಗಿರೆ ಗಟ್ಟಿ ಹಿ೦ದಿ ಪದ್ಯವೊ, ಮತ್ತೊ೦ದು ಯೇವದೊ ಪದ್ಯ ಬಕ್ಕು…
ಇದು ಬಾಕಿದ್ದವಕ್ಕೆ ಹರಟೆ ಅಲ್ಲದ್ದೆ.. ಪೂಜೆ ಭಟ್ರಿ೦ಗ ಕೋಪವೂ ಬಕ್ಕು.. ಅಲ್ಲದೊ??

ಇದರೊಟ್ಟಿ೦ಗೆ ರಿ೦ಗು ಟೋನು.. ಯೋ.. ಆಸ್ಪತ್ರೇಳಿಲ್ಲೆ… ಮನೆಲಿ ಪೂಜೇಳಿಲ್ಲೆ.. ದೇವಸ್ಥಾನೇಳಿಲ್ಲೆ.. ಮಹಾ ಉಪದ್ರ…
ಕಲವು ಜೆನ೦ಗಳ ರಿ೦ಗು ಟೋನು- “ಗಾಯತ್ರೀ ಮ೦ತ್ರ… ??? “ ಹೀ೦ಗೊ೦ದು ಇದ್ದಾ??
ಗಾಯತ್ರೀ ಮ೦ತ್ರವ mp3 ಮಾಡಿ ರಿಕ್ಷಲ್ಲಿ, ಬಸ್ಸಿಲಿ ಹಾಕುತ್ತು ಅನು ಕೇಳಿದ್ದೆ.. ಇದು ಸರಿಯೋ ?? , ಸರಿ ಹೇಳಿ ಎನತೋರ್ತಿಲ್ಲೆ…

ಮತ್ತೆ ಈ, ಹೊತ್ತು ಗೊತ್ತು ಇಲ್ಲದಿಪ್ಪ ಈ ಪೋನು ಬಕ್ಕು, “ ಹಲೊ ಗ್ರಾಹಕರೆ, ಈ ಪದ್ಯ ಬೇಕಾರೆ ಒ೦ದು ಒತ್ತಿ, ಆ ಪದ್ಯ ಬೇಕಾರೆ ಮೂರು  ಒತ್ತಿ” ಹೇಳುಗು.
ಇದು ಮಾ೦ತ್ರ ಅಲ್ಲದ್ದೆ ಲೋನು ಬೇಕೋ.. ಕ್ರೆಡಿಟು ಕಾರ್ಡು ಬೇಕೊ ಹೇಳಿ ಮತ್ತೊ೦ದು ಪೋನು ಬಕ್ಕು..
ಇದರೆಡಕ್ಕಿಲ್ಲಿ.. ದಿನಕ್ಕೆ ಒ೦ದು ಹತ್ತು SMS ಬಕ್ಕು ಆ ರಿ೦ಗು ಟೋನು ಬೇಕಾ, ಈ ಕಾಲರ್ ಟೋನು ಬೇಕಾ, ಬೇಕಾರೆ ಈ ನ೦ಬ್ರಕ್ಕೆ SMS ಮಾಡಿ ಹೇಳಿ, ಮಾಡಿರೆ ಅ೦ಬಗಳೆ 10-20 ತ್ತೊ ಪೈಸೆ ಗುಳು೦ .


ಮತ್ತೆ ಈಗಾಣ ಕಾಲಲ್ಲಿ, ಹೈಸ್ಕೂಲು ಎತ್ತಲೆ ತಡ, ಮೊಬೈಲು ಬೇಕೇ ಬೇಕು.. ಉಮ್ಮಪ್ಪ ಎ೦ತಗೋ ಏನೊ??
ಇದರ ಗುರುಟೆ೦ಡು, ಗೇಮು, ಪದ್ಯ, ಸಿನೆಮ.. ಮತ್ತೆ ಮುಖ್ಯವಾಗಿ SMS, ಮಾಡೆ೦ಡು ಕೂಪದಲ್ಲದ್ದೆ ಏನು ಉಪಯೋಗ ಮಕ್ಕೊಗೆ. ಇದು ಅಗತ್ಯವಾ ಅವಕ್ಕೆ ಹೇಳಿ ಒ೦ದು ಪ್ರಶ್ನೆ ಬತ್ತು??

ಮತ್ತೆ ಎಡಕ್ಕಿಲಿ ಒ೦ದೊ೦ದಾರಿ.. ಅಜ್ಜ೦ದ್ರು, ಗೊ೦ತಾಗದ್ದೆ.. “ * ” (star) ಗೊ೦ತಾಗದ್ದ ಒತ್ತಿ caller tone ಹಾಕಿಯೋಳ್ತವು.. ಮತ್ತೆ 30 ತ್ತು ರು.. ಹೋತು ಹೇಳಿ.. ಪರ೦ಚುತ್ತವು.. 😉

ಇದು ಸಣ್ಣ ಮಕ್ಕೊ ಹಟ ಮಾಡಿರ, ಅಬ್ಬೆಯಕ್ಕೊ.. “ ಕೂಗೆಡ.. ಇದ ಮೊಬೈಲಿಲ್ಲಿ ಆಟ ಆಡು”…
ಇದು ಎರಡು ರೀತಿಲ್ಲಿ ತಪ್ಪು..
೧. ಮಕ್ಕೊಗೆ ಮೊಬೈಲಿಲಿ ಮಾತಾಡುಸುತ್ತದು, ಅಥವ ಆಟ ಆಡ್ತದು ಒಳ್ಳೆದಲ್ಲಾ.. ಕಾರಣ “ ರೇಡಿಯೊ ತರ೦ಗ”
೨. ಮೊಬೈಲಿನ ಸಣ್ಣ ಸ್ಕ್ರೀನು ಬಿಡದ್ದೆ ನೋಡಿರೆ, ಇದರಿ೦ದ ಮಕ್ಕಳ ದೃಷ್ಟಿಗೂ ಹಾನಿ..

ಇದ ಬರೀ ಮಕ್ಕೊಗೆ ಸೀಮತ ಅಲ್ಲ.. ಎಲ್ಲಾರಿಂಗು ದೆ ಅನ್ವಯಿಸುತ್ತು.. ಆದರೆ ಮಕ್ಕೊಗೆ ಹೆಚ್ಚು ಹೇಳಿ ಎ೦ತಗೆ ಹೇಳಿರೆ,
ಮಕ್ಕಳ ಬೆಳವಣಿಗೆಗೆ ಭಾರೀ ಹಾನಿ… ಎ೦ತಾ ಕೇಳಿರೆ.. ಅವರ ಹೆಚ್ಚಿನ ಬೆಳವಣಿಗೆ ಅಪ್ಪದು 14-15 ವರುಷದ ಒಳ.. ಮತ್ತೆ
ಹಾ, ಮತ್ತೆ ನಾವಾದರು ಹತ್ತು ನಿಮಿಶ೦ದ ಹಚ್ಚು ಮಾತಾಡುತ್ತರೆ ಕೆಮಿಗೆ ವಯರು ಸಿಕ್ಕುಸಿಯೊ೦ಡು ಮಾತಾಡುತ್ತು ಒಳ್ಳೆದು..

ಮೊನ್ನ ಬೋಚ ಹೇಳಿದ, ಅರ್ಜೆ೦ಟು ಮಾಣೀ ಟೀ.ವಿಲಿ ಕ್ರಿಕೇಟು ನೋಡ್ಲೆ ಚೇನಲು ಬದಲುಸಲೆ ಹೋಗಿ, ರಿಮೋಟು ಒತ್ತುತ್ತರ ಬದಲು ಅರ್ಜೆ೦ಟಿಲಿ ಮೊಬೈಲು ಒತ್ತೆ೦ಡು ಇತ್ತಾ ಹೇಳಿ..

ಹಾ೦ಗೆ ಮೊನ್ನೆ ಟೀ.ವಿ ನೋಡುವಾಗ, ಬ೦ತಡ… ಈ ಪದ್ಯ ಹೇಳ್ತ reality show ಯಡ್ವಟೈಸು ಬ೦ತಡ- ಈ ಜನವ ಗಲ್ಲುಸಲೆ 5436 ಕ್ಕೆ SMS ಮಾಡಿ ಹೇಳ, ಅಷ್ಟಪಗ ಪೆ೦ಗಣ್ಣ ಬೋಚ೦ಗೆ ಗಾಳಿಹಾಕಿ, ಕರೇಲಿ ನೆಗೆಮಾಡೆ೦ಡು ಇದ್ದ ನೆಗೆಗಾರನ ಮೊಬೈಲು ತೊಕ್ಕೊ೦ಡು ಮಾಡು ಭಾವ ಹೇಳಿದ ನಡ.. ಬೋಚ ಮಾಡಿದ 5 ರು ಪುಸುಕ್ಕನೆ ಹೋತು ಹೇಳಿ ಪೆ೦ಗಣ್ಣ ನೆಗೆಮಾಡಿದಾ..
ಹೀ೦ಗೆ ಮೊನ್ನೆ, ನಮ್ಮ ಗುಣಾಜೆ ಮಾಣಿ, ಒ೦ದು SMS ಕಳುಸಿದ- “ನಮ್ಮ ಹೆಸರಿನ 54242 ಗೆ SMS ಮಾಡಿರೆ, ಕೇರಳದ ವೋಟಿನ ಪಟ್ಟಿಲಿ ನಮ್ಮ ಹೆಸರು ಇದ್ದೊ, ಇಲ್ಯೊ ಮತ್ತೆ ಇತರ ವಿವರ ನೋಡ್ಲಕ್ಕು ಹೇಳಿ ಹೇಳಿದ…” ಗುಣಾಜೆ ಮಾಣಿ ಕಳ್ಸಿದ್ದು, ಹಾ೦ಗೆ ಬರದ್ದು ಇಲ್ಲದ್ದರೆ ಎನಗೆ ಬೈಗು. ಕೇರಳಲ್ಲಿ ಓಟು ಹತ್ತರೆಲ್ಲಿ ಇದ್ದು ಹಾ೦ಗೊ ಎನೋಪ್ಪ…!! 😉

ಹಾ ಮತ್ತೆ ಈಗ೦ತು… SIM ಕಮ್ಮಿಗೆ ಸಿಕ್ಕುತ್ತು ಹೇಳಿ, ಕಲವು ಜೆನ, ಮೂರೋ ನಾಲ್ಕೋ SIM ಮಡಿಕೊಳ್ತವು…
ಒ೦ದು ಪೋನು ಮಾಡ್ಲೆಡೆ, ಮತ್ತೊ೦ದು SMS ಮಾಡ್ಲೆಡೆ, ಮತ್ತೊ೦ದು internet ಮಾಡ್ಲೆಡೆ… ಕೆಲವಕ್ಕೆ ರೇ೦ಜು ಇಲ್ಲೆ ಹೇಳಿ… ಕಾರಣ ಕೊಡುತ್ತವು.. ಮೂಲ ಕಾರಣ ನವಗೊ೦ತಿಲ್ಲೆ.. 😉
ಕೈಲಿ ಒ೦ದು, ಕಿಸೆಲಿ ಒ೦ದು, ಕೊರಳಿ೦ಗ ತೂಗುಸೆ೦ಡ ಒ೦ದ್ದು.. ಯಾವ ಕರ್ಮಕ್ಕಪ್ಪ. ಉಮ್ಮಪ್ಪ.. 😛

ಓ ಮನ್ನೆ ಶರ್ಮಪ್ಪಚ್ಚಿ ನೆರಕರೆಲಿ ಒ೦ದ ವಿಚಾರ ತಿಳುಸಿದವು.. ಇದ ತಿಳಿಶಿದ್ದಕ್ಕೆ ಅಪ್ಪಚ್ಚಿಗ ಧನ್ಯವಾದ.
ಮೊಬೈಲಿನ ಬಗ್ಗೆ ಎಲ್ಲರೂ ತಿಳುಕೊಳೆಕಾದ ವಿಚಾರ.. ನಿ೦ಗೊ ಎಲ್ಲಾರೂ ಇದರ ತಪ್ಪದೆ ನೋಡಿ–> – “ Cell_Phone_Safety

ಹಾ೦ಗೊ೦ದ ಕತೆ..
ಮತ್ತೆ ಇದರ ಓದಿಯಪ್ಪಗ ನಮ್ಮ ಮನಸ್ಸಿ೦ಗೆ ಬಪ್ಪದು ಮೊಬೈಲು ಉಪಕಾರಿಯೊ, ಉಪದ್ರವೋ ???..
ಇದರ ಬಗ್ಗೆ ನಿ೦ಗಳೆಲ್ಲಾರ ಅಭಿಪ್ರಾಯ ಹೇ೦ಗೆ ಒಪ್ಪಲ್ಲಿ ತಿಳುಶಿಕ್ಕೆ.. ಏ? ಆಗದ? :)

—————-

~
ಪೊಸವಣಿಕೆ ಚುಬ್ಬಣ್ಣ.

ಉಪಕಾರವೊ ಉಪದ್ರವೋ??, 5.0 out of 10 based on 3 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 55 ಒಪ್ಪಂಗೊ

 1. ಈಶ್ವರ ಪ್ರಸಾದ ಕುಧ್ವ
  ಈಶ್ವರ ಪ್ರಸಾದ ಕುಧ್ವ

  ಎಲ್ಲೋರು ಡಿ.ಎನ್.ಡಿ (ಉಪದ್ರ ಮಾಡೆಡಿ ಹೇಳುತ್ತದಕ್ಕೆ) ಗೆ ನಮ್ಮ ನಂಬರಿನ ರಿಜಿಸ್ತ್ರಿ ಮಾಡಿಯೋಂಡರೆ …. ಉಪದ್ರ ರಜಾ ಕಮ್ಮಿ ಆವುತ್ತದ ……… ಅದು ಬೇಕೋ ಇದು ಬೇಕೋ ಹೇಳಿ ಎಲ್ಲ ಫೊನು ಸಮೋಸ ಬಪ್ಪದು ಎಲ್ಲ…….

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಓ ಹಾ೦ಗಿಪ್ಪ ಸ೦ಗತಿ ಇದ್ದೊ?? ಅದಕ್ಕೆ ತಿ೦ಗಳಿ೦ಗೆ ಇಷ್ಟು ಪೈಸೆ ಹೇಳಿ ಇಕ್ಕು ಅಲ್ಲದೋ??

  [Reply]

  ಈಶ್ವರ ಪ್ರಸಾದ ಕುಧ್ವ

  ಈಶ್ವರ ಪ್ರಸಾದ ಕುಧ್ವ Reply:

  ಇಲ್ಲೆಪ್ಪ………. …ದುಡ್ಡು ಇಲ್ಲೆ ಧರ್ಮಕ್ಕೆ ………………….. ಹಾಂಗಾಗಿ ಬೋಚ ಭಾವ ಮೊದಾಲು ಮಾಡಿಯೋಂಗು ಅಲ್ಲ ಭಾವಾ…. ಹೇಂ…….

  [Reply]

  VN:F [1.9.22_1171]
  Rating: 0 (from 0 votes)
  ಹಳೆಮನೆ ಅಣ್ಣ

  ಹರೀಶ್ ಹಳೆಮನೆ Reply:

  START DND ಹೇಳಿ ಟೈಪು ಮಾಡಿ 1909 ನಂಬ್ರಕ್ಕೆ ಕಳ್ಸಿದರೆ ಆತು. Activate ಅಪ್ಪಗ ಒಂದು ಅಥವಾ ಒಂದೂವರೆ ತಿಂಗಳು ಕಳಿಗು.

  [Reply]

  ಈಶ್ವರ ಪ್ರಸಾದ ಕುಧ್ವ

  ಈಶ್ವರ ಪ್ರಸಾದ ಕುಧ್ವ Reply:

  ಇದು ನಮ್ಮ ದೇಶದ ಟ್ರಾಯ್ ಕೊಟ್ಟ ಒಂದು ಸೇವೆ……… ಹೆಚ್ಹಿನ ಮಾಹಿತಿಗೆ ಈ ಸಂಕೊಲೆ ನೋಡುಲಕ್ಕು

  ೨೦/೦೩/೨೦೧೧ ರ ವರೆಗೆ http://164.100.9.238/ndncregistry/index.jsp

  ನಂತರ – http://nccptrai.gov.in/nccpregistry/

  [Reply]

  ಈಶ್ವರ ಪ್ರಸಾದ ಕುಧ್ವ

  ಈಶ್ವರ ಪ್ರಸಾದ ಕುಧ್ವ Reply:

  ನಾವು ರಿಜಿಸ್ತ್ರಿ ಮಾಡಿದ ಮತ್ತೆ ನಾವಗೆ ಒಂದು confirmation ಬತ್ತು ಅದಾದ ಮೇಲೆ ಆರಾರೂ ಅದು ಬೇಕೋ ಇದು ಬೇಕೋ ಹೇಳಿ ಉಪದ್ರ ಮಾಡಿರೆ ನಾವು ಟ್ರಾಯ್ ಗೆ ಅವರ ಮೇಲೆ ದೂರು ಕೊಡ್ಲಕ್ಕು ……
  ಹೆಚ್ಹಿನ ವಿವರಕ್ಕೆ ಸಂಕೊಲೆ – http://nccptrai.gov.in/nccpregistry/How%20to%20Register%20complaint.pdf

  VN:F [1.9.22_1171]
  Rating: 0 (from 0 votes)
  ಚುಬ್ಬಣ್ಣ

  ಚುಬ್ಬಣ್ಣ Reply:

  ಹೊ.. ಓಳ್ಳೆ ಮಾಹಿತಿ ಹಳೆಮನೆ ಅಣ್ಣ ಮತ್ತೆ ಈಶ್ವರಣ್ಣ.. ಧನ್ಯವಾದ೦ಗೊ.. :)

  [Reply]

  VN:F [1.9.22_1171]
  Rating: 0 (from 0 votes)
 2. mankuthimma

  eega ellora kaili ippadu mobile
  sarvatra mobilemaya……..
  engala maneli mobile sim rangenge barekaadare aanu adakke marakke hattiye aayekaste.
  kelavondu vishayali upakaara,innu kelavu vishaya nodire upadra alladaa bosa bhavaa?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಆ ಕೆರೆ ಕರೆಲಿಪ್ಪ ತೆಂಗಿನ ಮರ ಹತ್ತಿ ನೋಡಿ ಭಾವ. ಕೆರೆಲಿ ತೆಂಗಿನಾಕಾಯಿ ಬಿದ್ದೊಂಡಿದ್ದೋ ಹೇಳಿ ನೋಡಿದಾಂಗೂ ಆವ್ತು.

  ಬೋಸ ಭಾವನತ್ರೆ ಕೇಳಿರೆ ಹೇಳುಗು ಉಮ್ಮಾ ಎನ್ನತ್ರೆ ಮೊಬೈಲ್ ಇಲ್ಲೆ ಸೆಲ್ಲುಲಾರ್ ಫೋನ್ ಇಪ್ಪದು,ಅದೂ ಹೋಳಿಗೆ ತಿಂಬಲೆ ಹೋಪಗ ಮಾತ್ರ ತೆಕ್ಕೊಂಡು ಹೋಪದು ಎಲ್ಲ್ಯಾರು ಹೆಗ್ಳನ ಮಾಟೆ ಕಂಡ್ರೆ ಕ್ಲಿಕ್ ಮಾಡ್ಳೆ., ಇದೆಂತರ ಮೊಬೈಲ್ ಹೇಳಿ ನಿಂಗಳತ್ರೆಯೇ ಕೇಳಿಕ್ಕುಗು ನೋಡಿ.

  [Reply]

  ಬೋಸ ಬಾವ

  ಬೋಸ ಬಾವ Reply:

  ಅದಾ…! ನಮ್ಮ ಚೆನ್ನೈ ಭಾವಗೆ ಸರೀ ಗೊ೦ತಾತಿದ…!! 😉

  [Reply]

  VN:F [1.9.22_1171]
  Rating: 0 (from 0 votes)
  ಬೋಸ ಬಾವ

  ಬೋಸ ಬಾವ Reply:

  ಉಪಕಾರವೊ ಉಪದ್ರವೊ….??!! :(
  ಎನಗೆ ಮೊಬಿಲಿನ ಹರಟೆ ಆವುತ್ತಿಲ್ಲೆ ತಿ೦ಮ್ಮಣ್ಣೊ..!! 😛

  [Reply]

  VN:F [1.9.22_1171]
  Rating: +2 (from 2 votes)
  ಚುಬ್ಬಣ್ಣ

  ಚುಬ್ಬಣ್ಣ Reply:

  ಹ ಹ ಹ…!! ಹಾ೦ಗೆ ಪೋನಿಲ್ಲಿ ಮಾತಾಡಿದಾ೦ಗು ಆತು… ಅಡಕ್ಕೆ ಕೊಯಿದಾ೦ಗೂ ಆತು.. 😉

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಮೊಬೈಲ್ ಇಪ್ಪದ್ದು ಒಳ್ಳೆದಕ್ಕೆ. ಅದರ ಸದುಪಯೋಗ ಪಡಿಸಿಕ್ಕೊಂಡು ಈ ಆಧುನಿಕ ತಂತ್ರಜ್ನಾನವ ನಾವೂ ಅಳವಡಿಸ್ಯೊಂಡು ಹಲವಾರು ಸಾಧನೆ ನಾವೂ ಮಾಡಿದ್ದು ಮಾಡುತ್ತಾ ಇದ್ದು. ಮತ್ತೆ ನಮ್ಮಾಂಗಿರ್ತವಕ್ಕೆ ಕೈಗೆ ಎಂತ ಸಿಕ್ಕಿರೂ ಅದರ ಗುರುಟುತ್ತದೂ ಅದರಲ್ಲಿ ಎಂತಲ್ಲಾ ಮಜಾ ಮಾಡ್ಲಕ್ಕು ಹೇಳಿ ಮದಾಲು ಕಲಿವದು. ಆರ ಕೈಲಿ ಎಂತದು ಇರೆಕೋ ಅದು ಇರೆಕು . ಎಂತಕೆ ಬೇಕೋ ಅದಕ್ಕೆ ಉಪಯೋಗಮಾಡೆಕು. ಪೀಶಕತ್ತಿ ಕೈಲಿ ಇದ್ದು ಹೇಳಿ ಹಲಸಿನ ಹಣ್ಣು ಕೊರವಲೆ ಹೆರಡಲಕ್ಕೋ! ಅಲ್ಲಾ ಅದರಲ್ಲೇ ಬೆನ್ನು ತೊರುಸುತ್ತವೂ ಇದ್ದವನ್ನೇ!! ಮತ್ತೆ ಅದರಲ್ಲೇ ಬಾಕಿದ್ದದ್ದನ್ನೂ ಕೊರದತ್ತು. ತೊಳದ್ದೋ?!! . ಅದು ಬಿಟ್ಟು ಹುಡಿ ಪುಳ್ಳರುಗಳ ಕೈಲಿ ಕೊಟ್ಟಿಕ್ಕಿ ಹಾಳಾತು ಹಾಳಾದವು ಹೇಳಿ ಎನ್ನತ್ರೆ ಹೇಳಿ ಎಂತ ಗುಣ.!

  ಮತ್ತೆ ಅದು ಒತ್ತಿ ಇದು ಅಮರ್ಸಿ – ಅದು ಅವರ ಏಪಾರ ಟೆಕ್ನಿಕ್ಕು. ನಾವೆಂತಕೆ ಮರಳಾಯೆಕು.
  ಸುಭಗಣ್ಣನ ಕೈಲಿ ಒಂದು ಕಾಣುತ್ತು ಹೇಳಿ ಗೆಂಟಂಗೆ ಎಂತಕೆ ಈಗ ಅಂಬರೇಪು. ಗಾಯತ್ರಿ ಮಂತ್ರ ಎಂತರ ಹೇಳಿ ಗೊಂತಿದ್ದವಂಗೆ ಅಲ್ಲದೋ ಅದರ ಮಹತ್ವ ಅರಿವಪ್ಪದು. ಕಾಟು ಪೊರ್ಬೂ ಗಾಯತ್ರಿ ಹೇಳಿರೆ ಅದಕ್ಕೆ ಜೀವ ಇಕ್ಕೋ?! ಎಂತದೋ ೪ ಅಕ್ಷರ ಹೇಳಿದಷ್ಟೇ ಸಮ ಅದು. ಅದರ ತೂಕ ಆಳ ಗಾಂಬೀರ್ಯ ಶಕ್ತಿ ಎಲ್ಲಿ ಇರೆಕ್ಕಪ್ಪದೋ ಅಲ್ಲೇ ಇಕ್ಕು. ಮನೆ ಎದುರು ತುಳಸಿ ಕಟ್ಟೆ ಅದಕ್ಕೂ ಒಂದು ಇತಿ ಮಿತಿ ಶಾಸ್ತ್ರ ಇದ್ದು. ಅದರ ನೋಡದ್ದೇ ಒಂದು ದೊಡ್ಡ ಕಟ್ಟೆ ಕಟ್ಟಿ ಮಡುಗಿರೆ ಅದು ಅಂತೇ ಚೆಂದಕ್ಕಿಪ್ಪ ಒಂದು ಕಟ್ಟೆ ಅಕ್ಕಷ್ಟೆ. ಮಲ್ಲಿಗೆ ಮಾಲೆ ಇದ್ದು ಹೇಳಿ ಕೆಮಿಗೆ ಸುರುದರೆ ಹೇಂಗೆ!

  ನವಗೆ ಈಗಾಣ ಕಾಲಲ್ಲಿ ಎಲ್ಲವೂ ಬೇಕು. ಎಷ್ಟು ಬೇಕು ಹೇಂಗೆ ಬೇಕು ಹೇಳಿ ನವಗೆ ಭೋಧ ಬೇಕು. ಬಪೇ ಊಟ ಬೇಕು ಹೇಳಿ ನಾವೂ ಸಾಲು ಕಟ್ಟಿ ಚಾಂಟಿಯೊಂಡು ನಿಲ್ಲುತ್ತಿಲ್ಲ್ಯೋ. ಏವುದು ಬೇಕು ಎಷ್ಟು ಬೇಕು ಹೇಳಿ ನಮ್ಮ ನಿರ್ಧಾರ ಅಲ್ಲದೋ. ಎಸ್ ಎಂ ಎಸ್ , ಗೇಮ್ಸ್ ಎಲ್ಲವೂ ಹೊತ್ತೋಪಲೆ ಒಳ್ಳೇದೇ. ಆದರೆ ಅದರಲ್ಲೇ ಹೊತ್ತು ಹೋಗದ್ದಾಂಗೆ ನಮ್ಮ ನಾವೇ ನೋಡಿಗೊಳ್ಳೆಕ್ಕಷ್ಟೆ. ಮತ್ತೊಂದು ಸಂಗತಿ ಭಾವ, ಎಟ್ಟದರೂ ಭಾವ ನಮ್ಮ ಚಪಲ ಎಂದಿಂಗೂ ಎಲ್ಲಿಯಾರೂ ಬಿಟ್ಟು ಹೋಕೋ. ಏವುದು ಆಗ ಹೇಳುತ್ತೋ ಅದನ್ನೇ ಮದಾಲು ಮಾಡ್ವದಲ್ಲದೋ ನಾವು.

  ಚುಬ್ಬಣ್ಣನ ಕೈಲಿ ಹಿಡ್ಕೊಂಡ ಮೊಬೈಲ್ ಫಟವೂ ಲಾಯ್ಕ ಬಯಿಂದು. ಬರದ್ದೂ ಚೊಕ್ಕ ಆಯ್ದು ಹೇಳಿ ಇತ್ಲಾಗಿಂದ ಒಂದು ಒಪ್ಪ. ಅರ್ಗೆಂಟು ಮಾಣಿ ಮೊಬೈಲಿ ಕಾಮರಲ್ಲಿ ದದಿಗಿಣತೊಂ ಮಾಡಿದ್ದು ಏಕೆ ಬರೆಯದ್ದಪ್ಪಾ!!

  ಮತ್ತೆ ಅದು ಒತ್ತಿ ಇದು ಅಮರ್ಸಿ – ಅದು ಅವರ ಏಪಾರ ಟೆಕ್ನಿಕ್ಕು. ನಾವೆಂತಕೆ ಮರಳಾಯೆಕು.
  ಸುಭಗಣ್ಣನ ಕೈಲಿ ಒಂದು ಕಾಣುತ್ತು ಹೇಳಿ ಗೆಂಟಂಗೆ ಎಂತಕೆ ಈಗ ಅಂಬರೇಪು. ಗಾಯತ್ರಿ ಮಂತ್ರ ಎಂತರ ಹೇಳಿ ಗೊಂತಿದ್ದವಂಗೆ ಅಲ್ಲದೋ ಅದರ ಮಹತ್ವ ಅರಿವಪ್ಪದು. ಕಾಟು ಪೊರ್ಬೂ ಗಾಯತ್ರಿ ಹೇಳಿರೆ ಅದಕ್ಕೆ ಜೀವ ಇಕ್ಕೋ?! ಎಂತದೋ ೪ ಅಕ್ಷರ ಹೇಳಿದಷ್ಟೇ ಸಮ ಅದು. ಅದರ ತೂಕ ಆಳ ಗಾಂಬೀರ್ಯ ಶಕ್ತಿ ಎಲ್ಲಿ ಇರೆಕ್ಕಪ್ಪದೋ ಅಲ್ಲೇ ಇಕ್ಕು. ಮನೆ ಎದುರು ತುಳಸಿ ಕಟ್ಟೆ ಅದಕ್ಕೂ ಒಂದು ಇತಿ ಮಿತಿ ಶಾಸ್ತ್ರ ಇದ್ದು. ಅದರ ನೋಡದ್ದೇ ಒಂದು ದೊಡ್ಡ ಕಟ್ಟೆ ಕಟ್ಟಿ ಮಡುಗಿರೆ ಅದು ಅಂತೇ ಚೆಂದಕ್ಕಿಪ್ಪ ಒಂದು ಕಟ್ಟೆ ಅಕ್ಕಷ್ಟೆ. ಮಲ್ಲಿಗೆ ಮಾಲೆ ಇದ್ದು ಹೇಳಿ ಕೆಮಿಗೆ ಸುರುದರೆ ಹೇಂಗೆ!

  ನವಗೆ ಈಗಾಣ ಕಾಲಲ್ಲಿ ಎಲ್ಲವೂ ಬೇಕು. ಎಷ್ಟು ಬೇಕು ಹೇಂಗೆ ಬೇಕು ಹೇಳಿ ನವಗೆ ಭೋಧ ಬೇಕು.

  ಚುಬ್ಬಣ್ಣನ ಕೈಲಿ ಹಿಡ್ಕೊಂಡ ಮೊಬೈಲ್ ಫಟವೂ ಲಾಯ್ಕ ಬಯಿಂದು. ಬರದ್ದೂ ಚೊಕ್ಕ ಆಯ್ದು ಹೇಳಿ ಇತ್ಲಾಗಿಂದ ಒಂದು ಒಪ್ಪ. ಅರ್ಗೆಂಟು ಮಾಣಿ ಮೊಬೈಲಿ ಕಾಮರಲ್ಲಿ ದದಿಗಿಣತೊಂ ಮಾಡಿದ್ದು ಏಕೆ ಬರೆಯದ್ದಪ್ಪಾ!!

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಇದೆ೦ತಪ್ಪಾ! ಗೆ೦ಟ “ದದಿಗಿಣತೊಂ” ಎಲ್ಲ ಮಾಡಿದ್ದ ಹೇಳಿ ಭಾವ ಎರಡೆರಡು ಸರ್ತಿ ಬೊಬ್ಬೆ ಹಾಕುತ್ತಾ ಇದ್ದೊವು? ಉಮ್ಮಪ್ಪ ಎನಗೊ೦ತಿಲ್ಲೆ ಆನು ಡಾನ್ಸು ಕಲ್ತಿದಿಲ್ಲೆ.
  ಆನು ಗೆ೦ಟ ಸರಿ, ಈ ಭಾವ ಗೆ೦ಟಿಲಿ ಎನ್ನ ನೆ೦ಟನ ಹಾ೦ಗೆ ಕಾ೦ಣ್ತೆ! 😀
  ಭಾವ ಭರತನಾಟ್ಯ ಎಲ್ಲ ಮೊಬೈಲಿಲಿ ನೋಡ್ತಿ ಹೇಳಿ ಖುಶಿ ಆತು! 😉

  ನಿ೦ಗೊ ಮೊಬೈಲಿ೦ದಾಗಿ ಅಪ್ಪ ಒ೦ದು ಉಪದ್ರವ ಲಾಯ್ಕಕ್ಕೆ ಹೇಳಿದ್ದಿ. ಖುಶಿ ಆತು :)
  ಗೆ೦ಟ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಬೇಕು ಭಾವ. ನಿಂಗಳೂ ಬೇಕು ನವಗೆ ಇಲ್ಲಿ.

  [Reply]

  VA:F [1.9.22_1171]
  Rating: 0 (from 0 votes)
  ಚುಬ್ಬಣ್ಣ

  ಚುಬ್ಬಣ್ಣ Reply:

  ಚೆನ್ನೈ ಭಾವ ಎನಗೆ ಮೊಬೈಲಿ ಗಾಯತ್ರಿ ಮ೦ತ್ರವ ರಿ೦ಗು ಟೋನು ಮಾಡುತ್ತದು ತಪ್ಪು ಹೇಳಿ ಕಾಣ್ತು..
  ನಿ೦ಗೊ ಹೇಳಿದಾ೦ಗೆ, ಒ೦ದು ವಿಚಾರ/ ವಿಶಯಕ್ಕೆ ಅದರದೇ ಆದ ಮಹತ್ವ ಇದ್ದು.. ಮ೦ತ್ರ ಕೂಡ ಹಾ೦ಗೆ ಅಲ್ಲದೊ, ನಾವು ಅದಕ್ಕೆ ಸಲ್ಲೆಕಾದ ಮಹತ್ವ ಕೊಡೆಕಲ್ಲದೊ?

  [Reply]

  VN:F [1.9.22_1171]
  Rating: 0 (from 0 votes)
 4. ವಿಕ್ರಮ

  ಲೇಖನ ಲಾಯ್ಕ ಆಯಿದು ಭಾವ.. ಃ)

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಧನ್ಯವಾದ ವಿಕ್ರಮ ಭಾವ.. :)

  [Reply]

  VN:F [1.9.22_1171]
  Rating: 0 (from 0 votes)
 5. ಮುಣ್ಚಿಕ್ಕಾನ ಪ್ರಮೋದ
  ಪ್ರಮೋದ ಮುಣ್ಚಿಕ್ಕಾನ

  ಈ ಮೊಬೈಲಿ೦ದಾಗಿ ಈಗ ಬಸ್ಸುಗಳಲ್ಲಿಯೂ ,ನೆಡಕ್ಕೊಂಡು ಹೋಪಗಳು ಕೆಮಿli ತುಂಬ ವಯರಿನ ಸಿಕ್ಕಿಸಿಯೊಂದಡರೆ ಬೇರೆಯವರ ಹರಟೆ ಅವಕ್ಕೆ ಕೇಳುತ್ತಿಲ್ಲೆ.ಇದೂ ಒಂದು ಉಪಕಾರ ಅಲ್ಲದೊ??????????

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಹ ಹ…! ಅಪ್ಪು ಉಪಕಾರವೆ…!! ಇದರಿ೦ದಾಗಿ ಆರಿ೦ಗು ಅಪಕಾರ ಆಗದ್ರೆ ಸಾಕು..
  ಗುಮಾನವೇ ಇಲ್ಲದ್ದೆ ಮಾರ್ಗಲ್ಲಿ ಕೆಮಿಕೆ ಸಿಕ್ಕುಸೆ೦ಡು ಮಾರ್ಕ ದಾ೦ಟಿರೆ ಲಾಯಕೆ ಅಕ್ಕು.. 😉
  ಪದ್ಯ ಕೇಳುತ್ತೆಲ್ಲಾ ಗುಡ್ಡೆ ಹತ್ತುಗು.. ಅಲ್ಲದೊ?

  [Reply]

  VN:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘುಮುಳಿಯ Reply:

  ಪ್ರಮೋದ ಭಾವ,
  ಬೆ೦ಗಳೂರಿಲಿ ಕೆಮಿಗೆ ವಯರು ಸಿಕ್ಕಿಸಿಗೊ೦ಡು ರೈಲುಪಟ್ಟಿ ದಾ೦ಟೊಗ ರೈಲಿನಡಿ೦ಗೆ ಬಿದ್ದು ಸತ್ತ ೨-೩ ಘಟನೆ ಕಳುದ ವರುಷ ನೆಡದ್ದು !
  ಆನು ರೈಲು ಬಿಡೊದಲ್ಲ ಹಾ೦..

  [Reply]

  VA:F [1.9.22_1171]
  Rating: 0 (from 0 votes)
 6. ಒಪ್ಪಣ್ಣ

  ಚುಬ್ಬಣ್ಣೋ..
  ಮೊಬಯಿಲಿನ ಬಗ್ಗೆ ಚೆಂದಕೆ ತಿಳಿಶಿಕೊಟ್ಟೆ. ಅದರ ಸೇಪ್ಟೀ – ಹೇಳ್ತ ಅಂಟುಸಿದ ಪುಸ್ತಕವನ್ನೂ ನೋಡಿದೆ.
  ಒಳ್ಳೆ ಮಾಹಿತಿಗೊಕ್ಕೆ ಧನ್ಯವಾದಂಗೊ.

  ಮೊಬೈಲಿಂದಾಗಿ ಉಪಕಾರವೂ ಆಯಿದು, ಆದರೆ ಅತಿಮೀರಿ ಉಪಯೋಗಮಾಡ್ಳೆ ಹೆರಟ್ರೆ ಉಪದ್ರವೂ ಆವುತ್ತು ಹೇಳ್ತರ ನಾವೆಲ್ಲೋರುದೇ ತಿಳ್ಕೊಂಡ್ರೆ ಅನರ್ತ ತಪ್ಪುಗು.
  ಶಂಬಜ್ಜ ಮಾಲಿಂಗಜ್ಜನ ಮಾತಿಂಗೆ ಕೆಮಿಕೊಟ್ಟೆ, ಕೊಶೀ ಆತು.

  ಬೈಕ್ಕಿಲಿ ಹೋಪಗ ಆ ನಮುನೆ ಮಾತಾಡಿರೆ ಮತ್ತೆ ಮೊಬೈಲು ಬೇಕಾಗ, ಹಾಂಗೇ ಮಾತಾಡ್ಳಕ್ಕು ಬೇಕಾದವರ ಹತ್ರೆ! 😉

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಒಪ್ಪಣ್ಣ, ನಮ್ಮ ಶಂಬಜ್ಜ ಹೇಳಿದ್ದು ಎಷ್ಟಾದರು ನಿಜವೇ ಅಲ್ಲದೋ.. ಧನ್ಯವಾದ೦ಗೊ.. :)

  [Reply]

  VN:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°

  ಚುಬ್ಬಣ್ಣಾ, ಸರ್ವವ್ಯಾಪಿಯಾದ ಮೊಬಯಿಲಿನ ಬಗ್ಗೆ ಎಲ್ಲ ವಿವರಂಗಳನ್ನೂ ಕೊಟ್ಟು ಚೆಂದ ಶುದ್ದಿ ಬರದ್ದೆ. ತುಂಬಾ ಲಾಯ್ಕಾಯಿದು ಆತೋ.
  ತಂತ್ರಜ್ಞಾನ ಮುಂದರುದ ಹಾಂಗೆ ಜನಂಗಳ ಆವಷ್ಯಕತೆಗಳೂ ಹೆಚ್ಚಾವುತ್ತಾ ಇದ್ದು. ಇದಕ್ಕೆ ಕೊನೆ ಇಲ್ಲೆ ಅಲ್ಲದಾ? ಮೊದಲು ಮಾತಾಡ್ಲೆ ಮಾತ್ರ ಹೇಳ್ತ ಹಾಂಗೆ ಇದ್ದ ಈ ಮೊಬಯಿಲು ಈಗಾಣವಕ್ಕೆ ಜೀವಂದ ಮೇಗೆ ಆಯಿದು. ದೂರ ದಿಕ್ಕೆ ಇಪ್ಪ ಕೆಲವು ಜನಕ್ಕೆ ತನ್ನ ಮನೆಯೋರ, ಬಂಧುಗಳ ಹತ್ತರೆ ಮಾತಾಡ್ಲೆ ಒಂದು ಪ್ರಧಾನ ಅಂಗ ಇದು. ಅದೇ ಕೆಲವು ಜನಕ್ಕೆ ವ್ಯಾಪಾರಕ್ಕೆ!!! ಯಾವ ರೀತಿ ಬೇಕಾದರೂ ಉಪಯೋಗ ಮಾಡ್ಲೆ ಅಪ್ಪಂಥಾ ಒಂದು ವ್ಯವಸ್ಥೆ ಇದರದ್ದು ಅಲ್ಲದಾ? ಲೋಕಲ್ಲಿ ಯಾವುದೇ ಆಗಲಿ ಇದ್ದು ಹೇಳಿ ಉಪಯೋಗ ಮಾಡಿದರೆ ನವಗೇ ಹಾಳು!! ಅತಿಯಾದ್ದು ಎಲ್ಲವೂ ವಿಷವೇ ಆದ ಹಾಂಗೆ ನಮ್ಮ ಇತಿಮಿತಿಗೆ ತಕ್ಕ ಹಾಂಗೆ ಉಪಯೋಗಿಸಿದರೆ ಎಲ್ಲದಕ್ಕೂ, ಎಲ್ಲೋರಿಂಗೂ ಒಳ್ಳೇದು ಅಲ್ಲದಾ?

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಅಪ್ಪು ಅಕ್ಕ. ನಿ೦ಗೊ ಹೇಳಿದ್ದು ೧೦೦ ರಕ್ಕೆ ೧೦೦ ರು ಸತ್ಯ..

  [Reply]

  VN:F [1.9.22_1171]
  Rating: 0 (from 0 votes)
 8. mankuthimma

  engala kelasaddadara mobilinge call maadire adu heludu yaanu itte mitta illadeta annerna saarage marattulle,eeru onte portu karretu leppule heli.
  ambaga sarage marandalu call recieve maadlavuttu heli athu allada ?

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಹ ಹ..!! ಅದಪ್ಪು.. 😉

  [Reply]

  VN:F [1.9.22_1171]
  Rating: 0 (from 0 votes)
 9. Nutan Mungila

  ಈಗಾನ ಕಾಲಕ್ಕೆ ನೋಡಿರೆ ಉಪಕಾರವೆ ಜಾಸ್ತಿ ಹೇಲಿ ಕಾನ್ತು :)

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಅದುವೆ.. ಉಪ”ಕಾರ” ಇದ್ದು.. ನಾವು ಉಪಯೋಗ ಮಾಡಿದಾ೦ಗೆ ಅಲ್ಲದೋ ಮು೦ಗಿಲದಕ್ಕೊ.. :)

  [Reply]

  Nutan Mungila Reply:

  hmmm appu appu adu sari :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ಅಕ್ಷರದಣ್ಣಡಾಮಹೇಶಣ್ಣಅನುಶ್ರೀ ಬಂಡಾಡಿದೊಡ್ಡಭಾವವೆಂಕಟ್ ಕೋಟೂರುಸಂಪಾದಕ°ಹಳೆಮನೆ ಅಣ್ಣಚೆನ್ನೈ ಬಾವ°ಒಪ್ಪಕ್ಕಮಂಗ್ಳೂರ ಮಾಣಿಪೆಂಗಣ್ಣ°ಶುದ್ದಿಕ್ಕಾರ°ಚುಬ್ಬಣ್ಣನೆಗೆಗಾರ°ಪಟಿಕಲ್ಲಪ್ಪಚ್ಚಿಬಂಡಾಡಿ ಅಜ್ಜಿಅನಿತಾ ನರೇಶ್, ಮಂಚಿಶಾಂತತ್ತೆಪ್ರಕಾಶಪ್ಪಚ್ಚಿನೀರ್ಕಜೆ ಮಹೇಶಪವನಜಮಾವಚೂರಿಬೈಲು ದೀಪಕ್ಕಅಜ್ಜಕಾನ ಭಾವಎರುಂಬು ಅಪ್ಪಚ್ಚಿರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ