‘ವಂಶನಕ್ಷೆ’ ಬರೆಯೆಕ್ಕು, ಹಿರಿಯ ಎಲ್ಲೋರ ನೆಂಪು ಮಾಡೆಕ್ಕು

December 26, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

೧೦ ವರ್ಷದ ಹಿಂದೆ ಎನ್ನ ಅಪ್ಪ ತೀರಿ  ಹೋಗಿ ಉತ್ತರ ಕ್ರಿಯೆ ಮಾಡುವಾಗ ಎನ್ನಂದ ನಾಲ್ಕು ತಲೆಮಾರಿನವರ, ಹೇಳಿರೆ ಎನ್ನಜ್ಜನ ಅಜ್ಜನ ಹೆಸರು ಗೊಂತಾತು. ಅಷ್ಟರವರೆಗೆ ಎನಗೆ ಈ ವಿಷಯ ಗೊಂತಿತ್ತಿಲ್ಲೆ. ಅಂಬಗ ಎನಗೆ ಎನ್ನಂದ ನಾಲ್ಕನೆ ಹಿರಿ ತಲೆಮಾರಿನವರ ಹಿಂದಾಣವರ ಹೆಸರು ತಿಳಿಯೆಕ್ಕು ಹೇಳಿ ಆತು. ಎನ್ನ ಕುಟುಂಬದ ದೊಡ್ಡಪ್ಪನ ಮಗ ಅಣ್ಣನ ಹತ್ರೆ ಇಪ್ಪ ಹಳೆ ಒಂದು ವಂಶನಕ್ಷೆ ಸಿಕ್ಕಿತ್ತು. ಅದರ ಬಿಡಿಸಿ ನೋಡುವಾಗ ಎಂಟು ತಲೆಮಾರಿನವರ ಹೆಸರು ಸಿಕ್ಕಿ  ತುಂಬಾ ಕೊಶಿ ಆತು.

“ಊರ್ಧ್ವಮೂಲ ಅಧಃ ಶಾಖಂ ಅಶ್ವತ್ಥಂ ಬಾಹುರವ್ಯಯಂ” ಹೇಳಿ ಸಂಸ್ಕೃತಲ್ಲಿ ಒಂದು ಮಾತು ಇದ್ದು. ಅಶ್ವತ್ಥ ಮರಕ್ಕೆ ಅಳಿವಿಲ್ಲೆ, ಹಾಂಗೇ ವಂಶ ವೃಕ್ಷಕ್ಕೆ ಅಳಿವು  ಬಾರ, ಬಪ್ಪಲೆ ಆಗ. ಆದರೆ ಆ ಮರ ಎಷ್ಟು ವರ್ಷಗಳ ಹಿಂದೆ ಹುಟ್ಟಿತ್ತು ಹೇಳಿ ನಿಘಂಟು ಹೇಳಲೆ ಕಷ್ಟ. ಆದರೆ ನಮ್ಮಿಂದ ಆರು ಏಳು ತಲೆಮಾರಿನವರ ಹಿಂದಾಣ ಹೆಸರುಗಳ ಕಷ್ಟ ಪಟ್ಟು ಹುಡ್ಕಿದರೆ, ಹೆರಿಯವರ ಹತ್ರೆ ಕೇಳಿದರೆ, ಸಿಕ್ಕಲೆ ಕಷ್ಟ ಆಗ ಹೇಳಿ ಕಾಣುತ್ತು. ನವಗೆ ಹೆರಿಯರ ಹೆಸರು, ವಿವರ ಸಿಕ್ಕಿ ಅಪ್ಪಗ ಅದರ ಕ್ರಮಲ್ಲಿ ಬರದು ಮಡುಗೆಕ್ಕು. ನಮ್ಮ ಕುಟುಂಬದವು ಎಲ್ಲೆಲ್ಲಿ ಇದ್ದವು ಹೇಳಿ ಅರ್ತು ಅಲ್ಲಿಗೆ ಪುರುಸೊತ್ತು ಮಾಡಿಯೊಂಡು ವಿವರ ಸಂಗ್ರಹಿಸೆಕ್ಕು. ಇಂಥಾ ಕೆಲಸ ಒಬ್ರಿಬ್ರಂದ ಅಂಬೆರ್ಪಿಲ್ಲಿ ಆಪ್ಪ ಕೆಲಸ ಅಲ್ಲ. ಕುಟುಂಬದ ಕೆಲವು ಜೆನಂಗೊ ಸೇರಿಗೊಂಡು ಒಂದು ಕೂಟ ಕಟ್ಟಿ, ಹಠಂದ ಪ್ರಯತ್ನ ಮಾಡಿದರೆ ತುಂಬಾ ವಿಶಯ ಖಂಡಿತಾ ಸಿಕ್ಕುಗು (ಎಂಗಳ ಕುಟುಂಬದ ನಕ್ಷೆ ಮಾಡ್ಲೆ ಒಬ್ಬನೆ ಹೆರಟು, ಅದರ ಸಂಗ್ರಹಿಸಿ ಬರದು ಇನ್ನೂ ಪೂರ್ತಿ ಆಯಿದಿಲ್ಲೆ)

ಈಗ ವಿಚಾರ್ಸುವಗ ಎಂಗಳ ಹಿರಿಯರು ಎಲ್ಲಿಂದ ಎಲ್ಲಿಗೆ ಬಂದು ಮನೆ ಕಟ್ಟಿ ನೆಲೆಸಿದವು, ಎಲ್ಲೆಲ್ಲಿ ಪಾಲಾಗಿ ಹೋಯಿದವು, ಎಂತ ವೃತ್ತಿಲಿ ಇದ್ದವು ಎಲ್ಲಾ ವಿಷಯ ಅರ್ತೆ. ಆನು ನೋಡಿದ ಹಾಂಗೆ ವಸಿಷ್ಠ ಗೋತ್ರದವರ “ಕಿಳಿಂಗಾರ ಹಿಂಗಾರ” ಹೇಳುವ ಪುಸ್ತಕ ಒಂದು ದೊಡ್ಡ ವಂಶದ ಕವಲು ಎಲ್ಲೆಲ್ಲಿ ಹಬ್ಬಿದ್ದು ಹೇಳಿ ವಿವರ ಕೊಡ್ತು. ಇದರ ಓದಿ ನೋಡಿ, ಎನಗೂ ಎಂಗಳ ಕುಟುಂಬದ್ದು ಹೀಂಗಿಪ್ಪದೊಂದು ಆಯೆಕ್ಕು ಹೇಳ್ತ ಸ್ಪೂರ್ತಿ ಬಂದದು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.

ಆನೀಗ ಎಂಗಳ ವಂಶ ನಕ್ಷೆ ಬರವಾಗ ನಮ್ಮ ಹಿಂದಾಣವು ಎಲ್ಲಿಂದ ಬಂದವು, ಎಲ್ಲಿದ್ದವು, ಎಲ್ಲಿಗೆ ಹೋಯಿದವು?. ಹೊಸ ತಲೆಮಾರಿನವು ಕೃಷಿ, ವೈದಿಕ ವೃತ್ತಿಂದ ಹೊಸ ಕೆಲಸಕ್ಕೆ ಸೇರಿದವು, ಅವು ಎಷ್ಟು ಕಲ್ತಿದವು ಈ ಎಲ್ಲ ವಿಶಯವ ಬರೆತ್ತೆ.

ವಂಶ ನಕ್ಷೆಯ ವಿವರಂಗಳ ನೆಟ್ಟಿಂಗೆ ಹಾಕಲಕ್ಕು, ಅಥವಾ ಸಣ್ಣ ಪುಸ್ತಕ ರೂಪಲ್ಲಿ ಮುದ್ರುಸಲೆ ಅಕ್ಕು. ದೊಡ್ಡ ಕುಟುಂಬ ಆದರೆ ಪುಸ್ತಕವೂ ದೊಡ್ಡ ಅಕ್ಕು.
ಎಲ್ಲೆಲ್ಲಿ ನಮ್ಮ ಕುಟುಂಬದವು ಇದ್ದವೋ ಅವಕ್ಕೆಲಾ ನಕ್ಷೆಯ ಕೊಡ್ಲಕ್ಕು. ಅವರತ್ರೆ ಹೆಚ್ಚಿನ ವಿವರ ಇದ್ದರೆ ಸಂಗ್ರಹಿಸಿಗೊಂಬಲೂ ಅಕ್ಕು. ಪುಸ್ತಕ ಮುದ್ರುಸಲೆ ಹಾಕಿದ ಅಸಲು ಲಾಭ ಸಿಕ್ಕುಗು ಹೇಳಿ ಆರೂ ನಂಬಿಯೊಂಡು ಹೀಂಗಿಪ್ಪ ಕೆಲಸಕ್ಕೆ ಹೆರಡೆಡಿ. ನಮ್ಮ ಹೆರಿಯ ಕವಲುಗಳ ನೆಂಪು ಮಾಡ್ಲೆ ಒಂದು ಒಳ್ಳೆ ಅಧಾರ ಅಕ್ಕು, ನವಗೆ ಒಂದು ಅವಕಾಶ ಸಿಕ್ಕಿದ್ದು, ಇದು ನಮ್ಮ ವಂಶಕ್ಕೆ ನಾವು ಮಾಡುವ ಸೇವೆ ಹೇಳ್ತ ದೃಷ್ಟಿಲಿ ಮಾಡಿರೆ ಸಾಕು. ಇದಕ್ಕೆ ಕ್ರಯ ಕಟ್ಲೆ ಎಡಿಯ.

ಹೀಂಗಿಪ್ಪ ವಂಶ ನಕ್ಷೆಯ ದಾಖಲೆ ಮಡುಗಿದರೆ ನಮ್ಮ ಮುಂದಾಣಾವಕ್ಕೆ ಅದರ ಮುಂದುವರುಸಲೆ ಒಂದು ಆಧಾರ ಸಿಕ್ಕಿದ ಹಾಂಗೆ ಅಕ್ಕು. ಇಲ್ಲದ್ರೆ ಅವಕ್ಕೆ ವಂಶ ನಕ್ಷೆ ಬರೆಕು ಹೇಳಿ ಆದರೂ, ಕಷ್ಟ ಆಗಿ, ಕಣ್ಣಿಂಗೆ ಕಟ್ಟಿ ಕಾಡಿಂಗೆ ಬಿಟ್ಟ ಹಾಂಗಕ್ಕು.

ವಂಶ ನಕ್ಷೆ ಬರವಾಗ ಕೊಟ್ಟ ಕೂಸುಗಳ ಹೆಸರು, ಯಾವ ಮನೆತನಕ್ಕೆ ಕೊಟ್ಟದು ಹೇಳಿ  ಬರದರೆ ಉತ್ತಮ ಹೇಳಿ ಎನ್ನ ಅಭಿಪ್ರಾಯ. ವಂಶ ನಕ್ಷೆಯ ಬರವಾಗ ಹೀಂಗೇ ಬರೆಕ್ಕು ಹೇಳಿ “ಇದಮಿತ್ಥಂ” ಹೇಳಿ ಆರೂ ಹೇಳಿದ್ದವಿಲ್ಲೆ.

ಶಾಲೆಲಿ ನಾವು ಕಲಿವಾಗ ರಾಜ್ಯ, ದೇಶದ ಚರಿತ್ರೆಯ ಕಲ್ತಿದಿಲ್ಲೆಯೋ? ಆದರೆ ನಮ್ಮ ವಂಶದ ವಿವರ ತಿಳಿವಲೆ ನಾವು ಪ್ರಯತ್ನ ಪಟ್ಟಿದೋ?

ಬುಡ ಇಲ್ಲದ್ದೆ ಕೊಡಿ ಇದ್ದೋ? ಇಲ್ಲೆನ್ನೆ.

ಋಷಿ ಮೂಲ ನದಿ ಮೂಲ ಸಿಕ್ಕುದು ಕಷ್ಟ. ಮರದ ಬುಡ ಹೆಚ್ಚು ಒಕ್ಕಿ ನೋಡ್ಲೆ ಎಡಿಯ.

ಆದರೆ ಬುಡ ಎಲ್ಲಿ ನೋಡ್ಲಕ್ಕನ್ನೆ?

ನೋಡೆಕ್ಕು ಅಲ್ಲದೋ?

ನಮ್ಮ ವಂಶ ನಕ್ಷೆಂದ ಪಾಠ ಕಲಿವಲೂ ಆಕ್ಕು. ನಮ್ಮ ಹೆರಿಯರ ಸೋಲು, ಗೆಲುವು ಎಂತರ ಹೇಳಿ ಗೊಂತಾದರೆ ನಮ್ಮ ದೋಷವ ತಿದ್ದಿಗೊಂಬಲೆ ಎಡಿಗು. ನಮ್ಮ ಹೆರಿಯರು ಎಂಥಾ ಸಾಧನೆ ಸಿದ್ಧಿ ಸಾಧಿಸಿದ್ದವು, ಎಂತ ಕೆಲಸ ಎಲ್ಲಾ ಮಾಡಿಯೊಂಡು ಇತ್ತಿದ್ದವು ಇತ್ಯಾದಿ ತಿಳಿವಲಕ್ಕು. ಅವರ ಬಗ್ಗೆ ನಾವು ಅಭಿಮಾನ ಪಡ್ಲೆ ಅಕ್ಕು.

ಹೀಂಗೆ ವಂಶ ನಕ್ಷೆ ಒಂದು ಕುಟುಂಬದ ಬುಡ. ಕೊಡಿ, ವಿಸ್ತರಣೆ, ಕವಲು, ಏಳು-ಬೀಳು ಎಲ್ಲದರ ತಿಳುಶುತ್ತು. ಇಂದು ನವಗೆ ಹಲವಾರು ಕುಟುಂಬಗಳ ನಕ್ಷೆಯ ಪುಸ್ತಕ ರೂಪಲ್ಲಿ ನೋಡ್ಲೆ ಸಿಕ್ಕುತ್ತಾ ಇದ್ದು ಹೇಳುವದು ಒಂದು ಒಳ್ಳೆಯ ಬೆಳವಣಿಗೆ

ನಮ್ಮ ಬುಡವ, ಕೊಡಿಯ ಏವತ್ತೂ ಮರವಲಾಗ

‘ವಂಶನಕ್ಷೆ’ ಬರೆಯೆಕ್ಕು, ಹಿರಿಯ ಎಲ್ಲೋರ ನೆಂಪು ಮಾಡೆಕ್ಕು, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಚೆನ್ನೈ ಬಾವ°

  ಒಳ್ಳೆ ಚಿಂತನೆ. ವಂಶವೃಕ್ಷ ಅಗತ್ಯ ಬೇಕು. ಎಲ್ಲೋ ಒಂದಿಬ್ರು ಈ ಸಾಹಸ ಮಾಡಿದ್ದವು. ಕಿಳಿಂಗಾರ ಹಿಂಗಾರ ಪುಸ್ತಕ ಆನು ನೋಡಿತ್ತಿದ್ದೆ. ಒಳ್ಳೆ ಸಂಗ್ರಹ. ಅದೇ ರೀತಿ ಅಣಿಲೆ ವಂಶವೃಕ್ಷ ಹೇಳಿ ಕೂಡ ಒಂದು ಪುಸ್ತಕ ಇದ್ದು. (ಪುಸ್ತಕ ಹೆಸರು ಸರೀ ನೆಂಪಿಲ್ಲೆ). ಒಳ್ಳೆ ಉಪಯುಕ್ತ ಮಾಹಿತಿ.

  ಇದೇ ರೀತಿ ಎಲ್ಲಾ ವಂಶವೃಕ್ಷ ದಾಖಲೆ ಪುಸ್ತಕ ರೂಪಲ್ಲಿ ಬರೇಕು ಮನೆಮನೆಗಳಲ್ಲಿ ಇರೇಕು ಹೇಳಿ ಎನ್ನ ಒಪ್ಪ.

  [Reply]

  ಚಂದ್ರಮಾವ°

  ಚಂದ್ರಮಾವ° Reply:

  ವಂಶವೃಕ್ಷ ಬರೆಯೆಕ್ಕು ಹೇಳಿ ಆನು ಬರೆದ್ದರ, ಒಳ್ಳೆ ಚಿಂತನೆ ಹೇಳಿ, ಇನ್ನೂ ಎನಗೆ ಬರೆವಲೆ ಬೆನ್ನು ತಟ್ಟಿ ಬೆಂಬಲ ಕೊಟ್ಟ ಚೆನ್ನೈ ಭಾವಂಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ತುಂಬಾ ಒಳ್ಳೆ ಚಿಂತನೆ… ಅತೀ ಅಗತ್ಯವಾಗಿ ಆಯೆಕ್ಕಾದ ಕೆಲಸ… ಎಲ್ಲ ವಂಶ ವೃಕ್ಷಂಗಳ ಮಾಹಿತಿ ಪುಸ್ತಕ ರೂಪಲ್ಲಿಯೂ, ಇಂಟರ್ನೆಟ್ ಲಿಯೂ ಎಲ್ಲೋರಿಂಗೂ ಲಭ್ಯ ಅಪ್ಪ ಹಾಂಗೆ ಆಗಲಿ ಹೇಳಿ ಶುಭ ಹಾರೈಕೆಗೋ…

  [Reply]

  ಚಂದ್ರಮಾವ°

  ಚಂದ್ರಮಾವ° Reply:

  ಎನ್ನ ವಂಶವೃಕ್ಶದ ಚಿಂತನೆಯ ಬಗ್ಗೆ ಬಹುಬೇಗ ಇಂಟರ್ನೆಟ್ಟಿಲ್ಲಿ ಓದಿ ಒಳ್ಳೆದಾಗಲಿ ಹೇಳಿ ಶುಭ ಹಾರೈಸಿದ ನಿಂಗೊಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 3. ಮಂಗ್ಳೂರ ಮಾಣಿ

  ಚಂದ್ರ ಮಾವ,
  ಬರಹ ಲಾಯಿಕ ಆಯಿದು..
  ಒಳ್ಳೆ ವಿಷಯ..

  ಗುರಿಕ್ಕಾರ್ರೇ,
  ನಮ್ಮ ಬೈಲಿನ ಮೊಬೈಲಿಲ್ಲಿ ನೋಡುಲೆ ಎಡಿಗೋ? mo”bailu” ವರ್ಶನ್ ಬಂದರೆ ಹೇಂಗೆ?
  ಈ ಕಂಪ್ಲೀಟರಿನ ಎದುರೇ ಕೂರೆಕು ಹೇಳಿ ಇಲ್ಲೆ ಇದ??

  [Reply]

  ಚಂದ್ರಮಾವ°

  ಚಂದ್ರಮಾವ° Reply:

  ಮಂಗ್ಳೂರ ಮುದ್ದು ಮಾಣಿ ತುಂಬಾ ಪ್ರೀತಿಂದ, ಅಭಿಮಾನಂದ ಎನ್ನ ಬರಹ ಲಾಯ್ಕ ಆಯ್ದು, ಒಳ್ಳೆ ವಿಷಯ ಹೇಳಿದ್ದು ಎನಗೆ ಹೇಳಲೆಡಿಯದ್ದಷ್ಟು ಖುಷಿ ಆಗಿ ಇನ್ನೂ ಬರೆವಲೆ ಉಮೇದು ಬಂತು.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ನಿಂಗಳ ಖುಶಿ ಕಂಡು ಎನಗೂ ಖುಶಿ ಆತು ಮಾವಾ°…

  [Reply]

  VN:F [1.9.22_1171]
  Rating: 0 (from 0 votes)
 4. ಒಪ್ಪಣ್ಣ

  ಚಂದ್ರಮಾವಂಗೆ ಬೈಲಿಂಗೆ ಸ್ವಾಗತಮ್.
  ಸ್ವಾಗತಶುದ್ದಿಯಾಗಿ ಒಳ್ಳೆ ಶುದ್ದಿಯನ್ನೇ ಕೊಟ್ಟಿದಿ ಬೈಲಿಂಗೆ.

  ’ಅವು ಎಂಗಳ ಕುಟುಂಬ’ ’ಇವು ಎಂಗಳ ಪೈಕಿ’ ಹೇಳ್ತು ನಾವು. ಆದರೆ ನಿಜವಾಗಿಯೂ ಎಷ್ಟು ತಲೆ ಹಿಂದಾಣ ಸಮ್ಮಂದ ಹೇಳ್ತದರ ದಾಖಲೀಕರಣ ತುಂಬಾ ಅಗತ್ಯ.
  ಮುಂದಾಣ ಕಂಪ್ಲೀಟ್ರು ಯುಗಲ್ಲಿ ಅದರ ಅವಶ್ಯಕತೆ ಇನ್ನೂ ಹೆಚ್ಚಿದ್ದು – ಹೇಳ್ಸು ನಮ್ಮ ಅಭಿಪ್ರಾಯ.
  ಬೈಲಿಲಿ ನಿಂಗಳ ಶುದ್ದಿಗೊ ಇನ್ನೂ ಬರಳಿ ಮಾವಾ°…

  [Reply]

  ಚಂದ್ರಮಾವ°

  ಚಂದ್ರಮಾವ° Reply:

  ಎನ್ನ ಬೈಲಿಂಗೆ ಸ್ವಾಗತಿಸಿದ್ದಕ್ಕೆ, ವಂಶನಕ್ಷೆಯ ಬರಹವ ಮೆಚ್ಚಿದ್ದಕ್ಕೆ ಆತ್ಮೀಯ ಧನ್ಯವಾದಂಗೊ. 7 ತಲೆಮಾರಿನವರೆಗೆ 10 ದಿನದ ಸೂತಕ ಇದ್ದು, ಅದರ ಹಿಂದಾಣ ತಲೆಮಾರಿನವರ ಕುಟುಂಬಲ್ಲಿ ಆರಾರು ಹುಟ್ಟಿದರೆ, ತೀರಿಕೊಂಡರೆ 3 ದಿನದ ಸೂತಕ ಇದ್ದು. ಇದರ ಅರ್ಥ ಎಂತರ ಹೇಳಿದರೆ 7 ತಲೆಮಾರಿಂಗೆ ಹತ್ತರೆ ಸಂಬಂಧ ಇದ್ದು. ಇನ್ನೂ ಎನ್ನ ಶುದ್ದಿ ಬರಲಿ ಹೇಳಿದ್ದು ಭಾರಿ ಖುಶಿ ಆತು. ನಿನ್ನ ಬರಹಲ್ಲಿ ಕುಂಬಳೆ ಸೀಮೆಯ ಹವಿಗನ್ನಡದ ಹಳೆಯ ಶಬ್ದಂಗಳ ಆನು ತುಂಬಾ ನೋಡಿದ್ದೆ. ಉದಾ: ಹೇಳ್ಸು. ಇದರ ಎಲ್ಲರೂ ಹೊಗೆಳಕ್ಕಾದ್ದೆ.

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಚಿಂತನೆಗೆ ಅರ್ಹವಾದ ಸಮಯೋಚಿತ ಲೇಖನ
  ಪಿತೃ ಋಣ ತೀರುಸಲೆ ಇದೊಂದು ಒಳ್ಳೆ ಅವಕಾಶ.
  ನಿಂಗಳ ವಂಶ ನಕ್ಷೆ ಮಾಡುವಲ್ಲಿ ನೀನು ಪಡ್ತ ಶ್ರಮ ಸಾರ್ಥಕ ಆಗಲಿ ಹೇಳಿ ಶುಭ ಹಾರೈಕೆಗೊ

  [Reply]

  ಚಂದ್ರಮಾವ°

  ಚಂದ್ರಮಾವ° Reply:

  ವಂಶ ನಕ್ಷೆಯ ಎನ್ನ ಬರಹವ ಮೆಚ್ಚಿದ್ದಕ್ಕೆ, ಪಿತೃ ಋಣ ತೀರುಸಲೆ ಒಳ್ಳೆ ಅವಕಾಶ ಹೇಳಿದ್ದು ಒಳ್ಳೆಯ ವಿಷಯ. ಶರ್ಮಣ್ಣಂಗೆ ಅನಂತ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಒಳ್ಳೆಯ ಶುದ್ದಿ.
  ಬೇರುಗೊ ಎಷ್ಟು ಹಬ್ಬಿದ್ದು ಹೇಳಿ ಗೊ೦ತಾದರೆ ಮರ ನೆಲದ ಮೇಲೆ ಸಮೃದ್ಧವಾಗಿ ಹಬ್ಬುಗು.

  [Reply]

  ಚಂದ್ರಮಾವ°

  ಚಂದ್ರಮಾವ° Reply:

  ಲೇಖನ ಮೆಚ್ಚಿದ್ದಕ್ಕೆ ಸ್ವಾಗತ, ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆದೀಪಿಕಾಸರ್ಪಮಲೆ ಮಾವ°ಕಳಾಯಿ ಗೀತತ್ತೆಎರುಂಬು ಅಪ್ಪಚ್ಚಿಕಜೆವಸಂತ°ಪೆಂಗಣ್ಣ°ಪ್ರಕಾಶಪ್ಪಚ್ಚಿಯೇನಂಕೂಡ್ಳು ಅಣ್ಣಶಾ...ರೀಬೊಳುಂಬು ಮಾವ°ರಾಜಣ್ಣಗೋಪಾಲಣ್ಣಅಡ್ಕತ್ತಿಮಾರುಮಾವ°ಶುದ್ದಿಕ್ಕಾರ°ದೇವಸ್ಯ ಮಾಣಿಪವನಜಮಾವಅನುಶ್ರೀ ಬಂಡಾಡಿಬಂಡಾಡಿ ಅಜ್ಜಿಮಾಷ್ಟ್ರುಮಾವ°ಚೆನ್ನಬೆಟ್ಟಣ್ಣಶೀಲಾಲಕ್ಷ್ಮೀ ಕಾಸರಗೋಡುಸುಭಗಮಾಲಕ್ಕ°ವೇಣೂರಣ್ಣಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ