ವೇದೋಕ್ತ ಮಂತ್ರಂ ಪುಷ್ಪಮ್

September 11, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಡಾ| ಮದ್ವ ಶಾಮ ಭಟ್
ವೈದ್ಯರು, ಸಾಹಿತಿ.
(ಲೇಖಕರ ಪರಿಚಯ)

ಓಂ. ಗಣಾನಾಂತ್ವಾ ಗಣಪತಿಗ್೦ ಹವಾಮಹೇ ಕವಿಂಕವೀನಾ ಮುಪಮಶ್ರವಸ್ತಮಮ್ ||
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತಆನಃ ಶ್ರುಣ್ವನ್ನೂತಿ ಭಿಃ ಸೀದ ಸಾದನಮ್ ||1||

ಗಣ ಸಮೂಹದ ಗಣ್ಯ ಗಣಪಗೆ ಬ್ರಹ್ಮ ಜ್ಞಾನದ ಬ್ರಹ್ಮ ಪತಿಗೆ
ಹವನಗೈಯುವೆ ಜ್ಯೇಷ್ಠರಾಜಗೆ ಸ್ತುತ್ಯದುಪಮೆಯ ಶ್ರೇಷ್ಠ ಕವಿಗೆ
ಸ್ತುತಿಯನಾಲಿಸಿ ನಮ್ಮ ಕರ್ಮಕೆ ಸಿದ್ದಿ ಕೊಡಲಾಸೀನನಾಗು ||೧||

ಸೋಮೋವಾ ಏತಸ ರಾಜ್ಯ ಮಾದತ್ತೇ|
ಯೋ ರಾಜಾ ಸನ್ರಾಜ್ಯೋವಾ ಸೋಮೇನ ಯಜತೇ|
ದೇವಸುವಾ ಮೇತಾನಿ ಹವೀಗ್೦ಷಿ ಭವಂತಿ|
ಏತಾವಂತೋ ವೈ ದೇವಾನಾಗ್೦ ಸವಾಃ|
ತ ಏವಾಸ್ಮೈ ಸವಾನ್ ಪ್ರಯಚ್ಛಂತಿ|
ತ ಏನಂ ಪುನಃ ಸುವಂತೇ ರಾಜ್ಯಾಯ|
ದೇವಸೂ ರಾಜ ಭವತಿ|| ||2||

ಸೋಮದೇವನು ಕಸಿದು ಕೊಂಬನು ಸೋಮಯಾಗವ ಗೈಯದವನ
ರಾಜ್ಯ ರಾಜನ ಸೋಮವರ್ಪಿಸೆ ಮರಳಿ ಕೊಡುವನು ತೃಪ್ತಿ ಪಡೆದು
ಹೋಮಿಸುತ್ತಿರೆ ಸೋಮರಸವನು ಈವರೈಸಿರಿ ದೇವತೆಗಳು
ಗ್ರಹಗಳಧಿಪತಿ ದೈವಪ್ರೇರಿತ ರಾಜನಾಗುವರಿದುವೆ ತೆರದಿ ||೨||

ಬಹುಗ್ವೈ ಬಹ್ವಶ್ವಾಯೈ ಬಹ್ವ ಜಾವಿಕಾಯೈ|
ಬಹು ವ್ರೀಹಿಯವಾಹಯೈ ಬಹುಮಾಷ ತಿಲಾಯೈ|
ಬಹು ಹಿರಣ್ಯಾಯೈ ಬಹು ಹಸ್ತಿಕಾಯೈ |
ಬಹುದಾಸ ಪೂರುಷಾಯೈ ರಯಿಮತ್ಯೈ ಪುಷ್ಟಿಮತ್ಯೈ|
ಬಹುರಾಯ ಸ್ಪೋಷಾಯೈ ರಾಜಾಸ್ತು||3||

ಬಹಳ ದನಗಳ ಬಹಳ ಹಯಗಳ ಬಹಳ ಕುರಿಗಳ ಆಡುಗಳನು
ತುಂಬು ಧಾನ್ಯವ ತುಂಬು ಕಾಳನು ತುಂಬು ಹೊನ್ನನು ಸೇವಕರನು
ಪಡೆದುಕೊಳ್ಳುತ ವೃದ್ಧಿಗೊಳ್ಳಲಿ ಸರ್ವ ವಿಧದಲಿ ರಾಜನಾಗಿ ||೩||

ರಾಜಾಧಿರಾಜಾಯ ಪ್ರಸಹ್ಯ ಸಾಹಿನೇ|
ನಮೋ ವಯಂ ವೈ ಶ್ರವಣಾಯ ಕುರ್ಮಹೇ|
ಸ ಮೇ ಕಾಮಾನ್ ಕಾಮ ಕಾಮಾಯ ಮಹ್ಯಮ್||
ಕಾಮೇಶ್ವರೋ ವೈ ಶ್ರವಣೋದದಾತು|
ಕುಬೇರಾಯ ವೈ ಶ್ರವಣಾಯ|
ಮಹಾರಾಜಾಯ ನಮಃ ||4||

ಸಕಲ ಲಾಭವ ತನ್ನೊಳಿರಿಸಿಹ ರಾಜ ಶ್ರೇಷ್ಥಗೆ ನಮಿಸುತಿರುವೆ
ಭೋಗವಿಚ್ಛಿಪ ನನಗಭೀಷ್ಟವ ವರ ಕುಬೇರನು ನೀಡುತಿರಲಿ
ಕಾಮಕೀಶ್ವರ ಧನದ ಅಧಿಪಗೆ ರಾಜ ರಾಜಗೆ ನಮಿಪೆ ನಮಿಪೆ ||೪||

ಪರ್ಯಾಪ್ತ್ಯಾ ಅನಂತ ರಾಯಾಯ ಸರ್ವಸ್ತೋಮೋತಿ ರಾತ್ರ ಉತ್ತಮ ಮಹರ್ಭವತಿ
ಸರ್ವಸ್ಯಾಪ್ತ್ಯೈ ಸರ್ವಸ್ಯಜಿತ್ಯೈ ಸರ್ವಮೇವ ತೇನಾಪ್ನೋತಿ ಸರ್ವಂ ಜಯತಿ ||5||

ಪರಿಧಿಯಿರದಾನಂತ ರಾಜಗೆ ಸ್ತೋತ್ರವಾತಿರಾತ್ರ ಪಠಿಸಲು
ದಿನವು ಶ್ರೇಷ್ಠವು ಸರ್ವ ಪ್ರಾಪ್ತಿಯು ಸರ್ವ ಇಷ್ಟವು ಸರ್ವ ಜಯವು
ಪಡೆಯುತಿರುವರು ಅವನ ದಯೆಯಿಂ ಸಕಲ ಸಂಪದ ಸಕಲ ಗೆಲುವು ||೫||

ಓಂ ಯೋ ವೇದಾದೌ ಸ್ವರಃ ಪ್ರೊಕ್ತೋ ವೇದಾಂತೇ ಚ ಪ್ರತಿಷ್ಠಿತಃ|
ತಸ್ಯ ಪ್ರಕೃತಿ ಲೀನಸ್ಯ ಯಃ ಪರಸ್ಯ ಮಹೇಶ್ವರಃ ||6||
ಓಂ ಶಾಂತಿಃ ಶಾಂತಿಃ ಶಾಂತಿಃ

ವೇದದಾದಿಯ ಪ್ರಣವ ಶಬ್ಧವು ವೇದದಂತ್ಯದಿ ಅದುವೆ ಸ್ವರವು
ಪ್ರಕೃತಿ ಲೀನತೆಗೊಂಡ ತಾರಕನಾತನೇ ಪರಮೇಶರೂಪ ||೬||
ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಸೂಕ್ತ ಗೀತಾಂಜಲಿ (ಡಾ| ಮಡ್ವ ಶಾಮ ಭಟ್ಟ)

ವೇದೋಕ್ತ ಮಂತ್ರಂ ಪುಷ್ಪಮ್, 5.4 out of 10 based on 9 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಶರ್ಮಪ್ಪಚ್ಚಿ, ಬಟ್ಟಮಾವ° ಮಂತ್ರ ಪುಷ್ಪದ ಗಣಪತಿ ಸೂಕ್ತಮ್ ಹಾಕಿ ಕನ್ನಡಲ್ಲಿ ಬತ್ತು ಇದರ ಅರ್ಥ ಹೇಳುವಾಗ ತುಂಬಾ ಖುಷಿ ಆತು. ನಾವು ಈ ಮಂತ್ರಪುಷ್ಪವ ಪ್ರತಿ ಪೂಜೆ ಅಕೇರಿಗೆ ಕೇಳ್ತು ಆದರೆ ಅದರ ಅರ್ಥೈಸಿಗೊಂಬಲೆ ಎಡಿಗಾಗಿಯೊಂಡಿತ್ತಿಲ್ಲೇ. ವೃತ್ತಿಲಿ ವೈದ್ಯ ಆಗಿದ್ದುಗೊಂಡು, ದೇವರ ಭಕ್ತನೂ ಆಗಿದ್ದ ಡಾ. ಮಡ್ವ ಶಾಮ ಭಟ್, ಎಲ್ಲೋರಿಂಗೂ ಅನುಕೂಲ ಅಪ್ಪ ಹಾಂಗೆ ಕನ್ನಡಕ್ಕೆ ಅನುವಾದ ಮಾಡಿ ದೇವರ ಮೇಲಿನ ಭಕ್ತಿ ಇನ್ನೂ ಜಾಸ್ತಿ ಅಪ್ಪ ಹಾಂಗೆ ಮಾಡಿದ್ದವು. ಇನ್ನು ಮುಂದೆ ಇದರ ಸರೀ ಗಮನಿಸಿಗೊಂಡು, ಬಟ್ಟಮಾವ° ಮಂತ್ರ ಹೇಳುವಾಗ ಎಂಗಳೂ ಸ್ವರ ಭಕ್ತೀಲಿ ಸೇರ್ಸುಲಕ್ಕು.
  ದಿ. ಡಾ. ಮಡ್ವ ಶಾಮ ಭಟ್ ರ ಬೈಲಿಂಗೆ ಪರಿಚಯ ಮಾಡಿದ್ದುದೆ ಅಲ್ಲದ್ದೆ, ಅವರಿಂದ ಅನುವಾದಿತ ಮಂತ್ರಂಗೋ ಬೈಲಿಂಗೆ ಬಪ್ಪ ಹಾಂಗೆ ವ್ಯವಸ್ಥೆದೇ ಮಾಡಿದ್ದಿ. ಧನ್ಯವಾದಂಗೋ. ಅವರ ಮಕ್ಕೊಗೆದೆ ಧನ್ಯವಾದಂಗ. ಶ್ರೀ ದೇವರ ಶ್ರೀ ಗುರುಗಳ ಅನುಗ್ರಹ ಎಲ್ಲರ ಮೇಲಿರಲಿ.

  [Reply]

  VA:F [1.9.22_1171]
  Rating: 0 (from 0 votes)
 2. ನೀರ್ಕಜೆ ಮಹೇಶ
  ನೀರ್ಕಜೆ ಅಪ್ಪಚ್ಚಿ

  ಒಳ್ಳೆಯ ಮಾಹಿತಿ ಕೊಟ್ಟ ಶರ್ಮಪ್ಪಚ್ಚಿಗೆ ಅನಂತಾನಂತ ಧನ್ಯವಾದಂಗೋ.

  ಅಜ್ಜಕಾನ ಭಾವ ಮಂತ್ರಪುಷ್ಪಂಗ ಸುಮಾರಿದ್ದು ಹೇಳಿ ಹೇಳಿತ್ತಿದವು. ಈ ಕೆಳ ಇಪ್ಪದು ಯಾವ ಸಂದರ್ಭಲ್ಲಿ ಹೇಳುವ ಮಂತ್ರ ಹೇಳಿ ಗೊಂತಾಯಿದಿಲ್ಲೆ ಎನಗೆ. (ಆನು ಮಂತ್ರ ಪಾಠಕ್ಕೆ ಹೋಯಿದಿಲ್ಲೆ, ಅಲ್ಲಿ ಇಲ್ಲಿ ಕೇಳಿ ಕಲ್ತ ಕೆಲವು ಮಂತ್ರಂಗೊ ಗೊಂತಿದ್ದಷ್ಟೆ).

  ಯೋಪಾಂ ಪುಷ್ಪಂ ವೇದ ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ
  ಚಂದ್ರಮಾವ ಅಪಾಂ ಪುಷ್ಪಂ ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ
  ಯ ಏವಂ ವೇದ ಯೋಪಾಮಾಯತನಂ ವೇದ ಅಯತನಾಂ ಭವತಿ

  ಅಗ್ನಿರ್ವಾ ಅಪಾಮಾಯತನಂ ಆಯತನಾವಂ ಭವತಿ
  ಯೋSಗ್ನೇರಾಯತನಂ ವೇದ ಆಯತನಾವಂ ಭವತಿ
  ಆಪೋವಾ ಅಗ್ನೇರಾಯತನಂ ಆಯತನಾಂ ಭವತಿ
  ಯ ಏವಂ ವೇದ ಯೋಪಾಮಾಯತನಂ ವೇದ ಆಯತನವಾಂ ಭವತಿ

  ವಾಯುರ್ವಾ ಅಪಾಮಾಯತನಂ ಆಯತನಾವಂ ಭವತಿ
  ಯೋವಾಯೋರಾಯತನಂ ವೇದ ಆಯತನಾವಂ ಭವತಿ
  ಆಪೋವೈ ವಾಯೋರಾಯತನಂ ಆಯತನಾವಂ ಭವತಿ
  ಯ ಏವಂ ವೇದ ಯೋಪಾಮಾಯತನಂ ವೇದ ಅಯತನಾಂ ಭವತಿ

  ಅಸೌ ವೈ ತಪನ್ನಪಾಮಾಯತನಂ ಆಯತನಾವಂ ಭವತಿ
  ಯೋಮುಷ್ಯತಪತ ಆಯತನಂ ವೇದ ಆಯತನಾವಂ ಭವತಿ
  ಆಪೋವ ಅಮುಷ್ಯತಪತ ಆಯತನಂ ಆಯತನಾವಂ ಭವತಿ
  ಯ ಏವಂ ವೇದ ಯೋಪಾಮಾಯತನಂ ವೇದ ಅಯತನಾಂ ಭವತಿ

  ಚಂದ್ರಮಾವ ಅಪಾಮಾಯತನಂ ಆಯತನಾವಂ ಭವತಿ
  ಯತ್ಚಂದ್ರಮಸ ಆಯತನಂ ವೇದ ಆಯತನಾವಂ ಭವತಿ
  ಆಪೋವೈ ಚಂದ್ರಮಸ ಆಯತನಂ ಆಯತನಾವಂ ಭವತಿ
  ಯ ಏವಂ ವೇದ ಯೋಪಾಮಾಯತನಂ ವೇದ ಅಯತನಾಂ ಭವತಿ

  ನಕ್ಷತ್ರಾಣಿವಾ ಅಪಾಮಾಯತನಂ ಆಯತನಾವಂ ಭವತಿ
  ಯೋ ನಕ್ಷತ್ರಾಣಾಮಾಯತನಂ ವೇದ ಆಯತನಾವಂ ಭವತಿ
  ಆಪೋವೈ ನಕ್ಷತ್ರಣಾಮಾಯತನಂ ಆಯತನಾವಂ ಭವತಿ
  ಯ ಏವಂ ವೇದ ಯೋಪಾಮಾಯತನಂ ವೇದ ಅಯತನಾಂ ಭವತಿ

  ಪರ್ಜನ್ಯೋವ ಅಪಾಮಾಯತನಂ ಆಯತನಾವಂ ಭವತಿ
  ಯಃ ಪರ್ಜನ್ಯಸ್ಯಾಯತನಂ ವೇದ ಆಯತನಾವಂ ಭವತಿ
  ಆಪೋವೈ ಪರ್ಜನ್ಯಸ್ಯಾಯತನಂ ಆಯತನಾವಂ ಭವತಿ
  ಯ ಏವಂ ವೇದ ಯೋಪಾಮಾಯತನಂ ವೇದ ಅಯತನಾಂ ಭವತಿ

  ಸಂವತ್ಸರೋವಾ ಅಪಾಮಾಯತನಂ ಆಯತನಾವಂ ಭವತಿ
  ಯತ್ಸ್ವತ್ಸರಸ್ಯಾಯತನಂ ವೇದ ಆಯತನಾವಂ ಭವತಿ
  ಅಪೋವೈ ಸಂವತ್ಸರಸ್ಯಾಯತನಂ ಆಯತನಾವಂ ಭವತಿ
  ಯ ಏವಂ ವೇದ ಯೋSಪ್ಸುನಾವಂ ಪ್ರತಿಷ್ಠಿತಾಂ ವೇದ ಪ್ರತ್ಯೇವ ತಿಷ್ಠತಿ

  ರಾಜಾಧಿರಾಜಾಯ ಪ್ರಶಸ್ಯ ಸಾಹಿನೇ
  ನಮೋ ವಯಂ ವೈ ಶ್ರವಣಾಯ ಕುರ್ಮಹೆ
  ಸ ಮೇ ಕಾಮಾನ್ ಕಾಮ ಕಾಮಾಯ ಮಹ್ಯಂ
  ಕಾಮೇಶ್ವರಾಯೈ ಶ್ರವಣೋ ದದಾತು
  ಕುಬೇರಾಯವೈ ಶ್ರವಣಾಯ ಮಹಾರಾಜಾಯನಮಃ

  “ಅಗ್ನಿರ್ವಾ ಅಪಾಮಾಯತನಂ ಆಯತನಾವಂ ಭವತಿ
  ಯೋSಗ್ನೇರಾಯತನಂ ವೇದ ಆಯತನಾವಂ ಭವತಿ
  ಆಪೋವಾ ಅಗ್ನೇರಾಯತನಂ ಆಯತನಾಂ ಭವತಿ
  ಯ ಏವಂ ವೇದ ಯೋಪಾಮಾಯತನಂ ವೇದ ಆಯತನವಾಂ ಭವತಿ”

  ಹೇಳುದರ ಭಾವಾರ್ಥ (ಅನುವಾದ ಅಲ್ಲ) ಇಂತಿದ್ದು :
  ಅಗ್ನಿಯೇ ನೀರಿನ ಮೂಲ, ಇದರ ತಿಳುದವ ಜ್ಞಾನಿ
  ನೀರೇ ಅಗ್ನಿಯ ಮೂಲ. ಇದರ ತಿಳುದವ ಜ್ಞಾನಿ
  ಈ ರೀತಿ ನೀರಿನ ಮೂಲ ತಿಳುದವ ಜ್ಞಾನಿಯಾವುತ್ತ.

  ಇದೇ ರೀತಿ ಅರ್ಥ ಒಳುದ ಎಲ್ಲ ಪ್ಯಾರಾ ಗೊಕ್ಕುದೆ ಬತ್ತು. ಇದರ ಅರ್ಥ ಎಂತರ? ಆಧ್ಯಾತ್ಮಿಕವಾಗಿ ಹೇಳುದಾದರೆ – ನವಗೆ ದೇವರು ಒಲಿಯೆಕ್ಕಾರೆ ನವಗೆ ಆತನ ಬಗ್ಗೆ ಭಕ್ತಿ ಬೇಕು. ಹಾಂಗೆ ಹೇಳಿ ದೇವರ ದಯೆ ಇಲ್ಲದ್ದೆ ಎಂತಾರು ಅಪ್ಪದಿದ್ದ? ಮತ್ತೆ ದೇವರ ದಯೆ ಇಲ್ಲದ್ದೆ ನವಗೆ ಭಕ್ತಿ ಬಪ್ಪದು ಹೇಂಗೆ? ಹಾಂಗಾಗಿ ದೇವರ ಮೇಲೆ ಭಕ್ತಿ ಬಪ್ಪಲುದೆ ದೇವರೇ ದಾರಿ ಮಾಡಿ ಕೊಡೆಕ್ಕು ಹೇಳ್ತ ಭಾವ – ನದಿ ದಾಟಿ ಆಚ ಕರೆ (ದೇವರ ಸಾನ್ನಿಧ್ಯ) ತಲುಪೆಕ್ಕು, ಅದಕ್ಕೆ ದೋಣಿಯನ್ನುದೆ ನೀನೆ (ದೇವರೇ) ವೆವಸ್ಥೆ ಮಾಡೆಕ್ಕು ಹೇಳಿದ ಹಾಂಗೆ – ಮತ್ತಾಣ ಎಲ್ಲಮಂತ್ರಂಗಳುದೆ ಅದೇ ರೀತಿ ಅರ್ಥ ಕೊಡುದು.

  ಇದಲ್ಲದ್ದೆ ಎನಗೆ ಈ ಮಂತ್ರಂಗಳಲ್ಲಿ ಗೂಢ ಅರ್ಥ ಮಾತ್ರ ಅಲ್ಲ, ವೈಜ್ಞಾನಿಕ ಅರ್ಥವೂ ಕಾಣುಸುತ್ತು. ಅಗ್ನಿ ಹೇಳ್ರೆ ಶಾಖ. ಮಳೆ ಬಪ್ಪಲೆ ಶಾಖ (ಬೇಸಗೆ) ಬೇಕಲ್ಲದ? ಹಾಂಗೆಯೇ ಅಗ್ನಿ ಹೊತ್ತೆಕ್ಕಾರೆ ನೀರು (ಆಮ್ಲಜನಕ) ಬೇಕು. ಹಾಂಗೆಯೇ ಮೂರನೆ ಪ್ಯಾರಾ – ಉರಿವ ಸೂರ್ಯನೇ (ಬೇಸಗೆ) ನೀರಿನ ಮೂಲ. ಸೂರ್ಯನ ಮೂಲವೇ ನೀರು (ಜಲಜನಕ)!. ಅಕೇರಣ ಮಂತ್ರ ಇನ್ನು ಗಮ್ಮತ್ತಿದ್ದು. ಸಂವತ್ಸರ (ಮಳೆಗಾಲ) ನೀರಿನ ಮೂಲ. ನೀರೇ ಮಳೆಗಾಲದ ಮೂಲವೂ ಅಪ್ಪು!

  ಈ ವೈಜ್ಞಾನಿಕ ಅರ್ಥ ನಿಜವಾದ ಅರ್ಥ ಆಗಿಲ್ಲದೇ ಇಕ್ಕು, ಆನು ಎನಗೆ ಮನಸ್ಸಿಂಗೆ ತೋಚಿದ ಹಾಂಗೆ ಹೇಳಿದ್ದಷ್ಟೇ. ಆದರೆ ಭಾವಾರ್ಥ ನೆಟ್ಟಿಲಿ ಓದಿ ತಿಳ್ಕೊಂಡದು. ಹಾಂಗಾಗಿ ಪ್ರಾಯಶಃ ಸರಿ ಇಕ್ಕು. ಇದರ ಬಗ್ಗೆ ತಿಳುದೊರು ಹೇಳೆಕ್ಕಿದ.. ಎನಗೆ ತಿಳ್ಕೊಂಬ ಆಸಕ್ತಿ ಇದ್ದು.

  ಹೇಳಿದ ಹಾಂಗೆ ನೆಟ್ಟಿಲಿ ವೇದಗಳ ಬಗ್ಗೆ ಸಾಕಷ್ಟು ಜಾಲತಾಣ ಗೊ ಇದ್ದು. ಅದರಲ್ಲಿ ಎನಗೆ ಖುಷಿ ಆದ್ದು :
  http://vedantabheri.com
  http://www.vedah.com (ಅರವಿಂದೋ ಕಪಾಲಿ ಶಾಸ್ತ್ರಿ ಸಂಸ್ಥೆ, ಅರ್ ಎಲ್ ಕಶ್ಯಪ್ ಬರದ್ದು).

  [Reply]

  ಮುಳಿಯ ಭಾವ

  raghumuliya Reply:

  ಪುಷ್ಪಂಗೋ ಸುಮಾರಿದ್ದು , ತುಂಬಾ ಪುಷ್ಪ ಅರ್ಪಣೆ ಮಾಡುತ್ತರೆ

  ಓಂ. ಗಣಾನಾಂತ್ವಾ ಗಣಪತಿಗ್೦ ಹವಾಮಹೇ ಕವಿಂಕವೀನಾ ಮುಪಮಶ್ರವಸ್ತಮಮ್ ||
  ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತಆನಃ ಶ್ರುಣ್ವನ್ನೂತಿ ಭಿಃ ಸೀದ ಸಾದನಮ್ ||1||

  ಶ್ರೀ ವಿಘ್ನೆಶ್ವರಾಯ ನಮಃ ಹೇಳಿಕ್ಕಿ ನಿಂಗೊ ಬರದ “ಆಯಾತ ನಮಾಂ …” ಹೇಳೊದು ಅಲ್ಲದೋ?ಒಪ್ಪುವ ಸೂಕ್ತವನ್ನೂ ಹೇಳುತ್ಸು ಕೇಳಿದ್ದೆ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  raghumuliya

  ಮಂತ್ರಪುಷ್ಪಾಮ್ಬುಧಿಲಿ ಮುಳುಗಿ ತೇಲಿದ ಅನುಭವ..
  ಧನ್ಯವಾದಂಗೋ ,ಶರ್ಮಪ್ಪಚ್ಚಿಗೂ,ನೀರ್ಕಜೆ ಭಾವಂಗೂ..

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  Shama doctora pustakaangala idi type maadisi hakigare olledittu.avu barada artha sariyagiyoo saralavagiyoo iddu.abhinandanego.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ನೀನು ತೋರುಸಿದ ಆಸಕ್ತಿಗೆ ಧನ್ಯವಾದಂಗೊ.
  ಎನ್ನ ಹತ್ರೆ ಎರಡು ಪುಸ್ತಕಂಗಳಲ್ಲಿ ಇಪ್ಪದರ ತಯಾರು ಮಾಡ್ತಾ ಇದ್ದೆ.
  ಸಮಯ ಸಿಕ್ಕಿದ ಹಾಂಗೆ ಪ್ರಕಟ ಅಕ್ಕು.

  [Reply]

  VA:F [1.9.22_1171]
  Rating: 0 (from 0 votes)
 5. ಪ್ರದೀಪ ಶರ್ಮ
  ಪ್ರದೀಪ ಶರ್ಮ

  ವೇದಪಾಠಶಾಲೆಯ ನೆನಪಾವ್ತಾ ಇದ್ದು………………………………………….

  ಆನು ಕಲ್ತ ಮೊದಲ ಸೂಕ್ತ ಇದು………………………………
  ವಿಟ್ಳ ವೇದಪಾಠಶಾಲೆಯ ಗುರುಗಳು ನೆನಪಿನ್ಗೆ ಬತ್ತಾ ಇದ್ದವು………………………………….

  [Reply]

  VN:F [1.9.22_1171]
  Rating: 0 (from 0 votes)
 6. Kesh
  Keshavchandra Bhatt Kekanaje

  ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 7. ನಾನೊಮ್ಮೆ ಈ ಮಂತ್ರ ಎಲ್ಲೋ ಪೂಜೆಲಿ ಕೇಲಿದ್ದೇ. ಆವಾಗ ಎಲ್ಲರೂ ಜೊತೆಲೀ ಹೇಳುವಾಗ ಕೇಳೋಕೆ ತುಂಭಾ ಖುಷಿ ಆಯ್ತು. ಪುನಃ ನೆಟ್ ನಲ್ಲಿ ಹುಡುಕುವಾಗ ನಿಮ್ಮ ಒಪ್ಪನ್ನ.ಕಂ ನಲ್ಲಿ ನಂಗೆ ಈ ಮಂತ್ರಪುಷ್ಪ ಸಿಕ್ತು. ಇದನ್ನ ಈವಾಗ ಕಲ್ತು ಪೂಜೆಲಿ ಹೇಳ್ತಿನಿ. ತುಂಬಾ ದನ್ಯವಾದಗಳು…!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಕೆದೂರು ಡಾಕ್ಟ್ರುಬಾವ°ಶೀಲಾಲಕ್ಷ್ಮೀ ಕಾಸರಗೋಡುಮಾಲಕ್ಕ°ಜಯಶ್ರೀ ನೀರಮೂಲೆಅನುಶ್ರೀ ಬಂಡಾಡಿಪ್ರಕಾಶಪ್ಪಚ್ಚಿದೀಪಿಕಾಅಕ್ಷರ°ವಸಂತರಾಜ್ ಹಳೆಮನೆಪುತ್ತೂರಿನ ಪುಟ್ಟಕ್ಕಸಂಪಾದಕ°ಶ್ರೀಅಕ್ಕ°ದೊಡ್ಡಭಾವಗಣೇಶ ಮಾವ°ಶ್ಯಾಮಣ್ಣಶಾ...ರೀಪುಣಚ ಡಾಕ್ಟ್ರುಶರ್ಮಪ್ಪಚ್ಚಿದೇವಸ್ಯ ಮಾಣಿಉಡುಪುಮೂಲೆ ಅಪ್ಪಚ್ಚಿಪವನಜಮಾವಪೆರ್ಲದಣ್ಣವಾಣಿ ಚಿಕ್ಕಮ್ಮಚೂರಿಬೈಲು ದೀಪಕ್ಕನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ