ವಿದ್ವಾನಣ್ಣ ಬೈಲಿಂಗೆ ಬಂದರೆ ಬೈಲಿನ ವಿದ್ವತ್ತೇ ಜಾಸ್ತಿ ಆವುತ್ತು!

ಬೈಲಿನ ಎಲ್ಲೋರಿಂಗೂ ಹರೇರಾಮ.
ಅಬ, ಮೊನ್ನೆಂದ ಗುರುಗೊ ನಮ್ಮ ಊರಿಲೇ ಇತ್ತಿದ್ದವು. ಗುರುಗೊ ಇದ್ದಲ್ಲಿ ನಾವುದೇ ಇರ್ತಿದಾ, ಹಾಂಗಾಗಿ ನಾವುದೇ ತಿರುಗಾಟಲ್ಲೇ ಇತ್ತು.
ನಮ್ಮ ಊರಿಲೇ ಕೆಲವು ದಿಕ್ಕೆ ಭೇಟಿ, ಭಿಕ್ಷೆ ಸ್ವೀಕರುಸಿ, ಮತ್ತೆ ಹೊರನಾಡು-ತೀರ್ಥಹಳ್ಳಿ ಹೊಡೆಲಿ ಆಗಿ, ಅಲ್ಲಿಂದ ಸೀತ ರಾಜಸ್ಥಾನಕ್ಕೆ ಹೋದವು ಗುರುಗೊ.
ಈಗ ಅಲ್ಲಿಂದ ಇತ್ಲಾಗಿ ಬಂದವಡ, ನಿನ್ನೆ ಎಡಪ್ಪಾಡಿಂದ ಪೋನು ಬಂದಿಪ್ಪಗ ಗೊಂತಾತು.
ನಾಳ್ದು ಕೊಡೆಯಾಲಕ್ಕೆ ಬತ್ತವು – ಬೈಲಿನ ಶರ್ಮಪ್ಪಚ್ಚಿ ಅಲ್ಯಾಣ ಕಾರ್ಯದರ್ಶಿ – ಬೈಲಿಂದಲೂ ಹೋಯೇಕು.
ಅದಿರಳಿ.
~
ಈ ಸಣ್ಣ ಪ್ರಾಯಲ್ಲೇ ನಮ್ಮ ಗುರುಗಳ ಸಾಧನೆ ಅಪಾರ.
ಯೇವದೇ ಒಂದು ಕಾರ್ಯ ಸಾಧನೆ ಆಯೆಕ್ಕಾರೆ ಅದಕ್ಕೆ ಶ್ರಮಪಡುವ ತಂಡ ಒಂದು ಬೇಕು.
ಒಂದು ಜೆಂಬ್ರ ಚೆಂದಲ್ಲಿ ಕಳಿವಲೆ ಗುರಿಕ್ಕಾರ° ಎಷ್ಟು ಅಗತ್ಯವೋ – ಸುದಾರಿಕೆಗೆ ನೆರೆಕರೆಯೂ ಅಷ್ಟೇ ಅಗತ್ಯ.
ಹಾಂಗೆ, ನಮ್ಮ ಗುರುಗೊ ಲೋಕಕಲ್ಯಾಣಕ್ಕಾಗಿ ಹಾಕಿದ ಕಾರ್ಯಂಗೊ ಯಶಸ್ವಿ ಆಯೆಕ್ಕಾರೆ ನಾವೆಲ್ಲರೂ ಇದ್ದುಗೊಂಡೇ ಆದ್ದದು – ಹೇಳ್ತದು ತತ್ವ.

ನಾವೆಲ್ಲರೂ ಹೇಳಿರೆ ಆರು? ಊರೂರಿಂದ ಹೋಗಿ ನಿರಂತರ ಶ್ರಮ ಕೊಡ್ತ ಕಾರ್ಯಕರ್ತರಿಂದ ಹಿಡುದು, ಕಾರ್ಯಕರ್ತರ ನಿಭಾಯಿಸುತ್ತ ಎಡಪ್ಪಾಡಿಬಾವನಿಂದ ತೊಡಗಿ,
ಕಾರ್ಯಕ್ರಮದ ರೂಪುರೇಷೆಗಳ ಹಾಕುತ್ತ ಅತ್ಯಂತ ತಲೆಕರ್ಚಿನ ಕೆಲಸ ಮಾಡ್ತ ತಂಡದ ಒರೆಂಗೆ – ಪ್ರತಿಯೊಂದುದೇ ಅತ್ಯಗತ್ಯ.
ಹಾಂಗೆ, ಗುರುಗಳ ಎಲ್ಲಾ ಯೋಚನೆ, ಯೋಜನೆಗೊಕ್ಕೆ ಸ್ಪಷ್ಟ ಚಿತ್ರಣ ಕೊಡುವ ಸಂದರ್ಭಲ್ಲಿ, ಅವುಗೊಕ್ಕೆ ಅಕ್ಷರ ರೂಪ ಕೊಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ನಮ್ಮ ವಿದ್ವಾನಣ್ಣಂದು!

~

ವಿದ್ವಾನಣ್ಣ ಮುಗುಳುನೆಗೆ ಮಾಡ್ತದು!

ಮೂಲತಃ ಸಾಗರ ಹೋಬಳಿಂದ ಬಂದ ಇವು, ಹವ್ಯಕದಷ್ಟೇ ಸಲೀಸಾಗಿ ಸಂಸ್ಕೃತಲ್ಲಿಯೂ ಮಾತಾಡುಗು!
ಸಂಸ್ಕೃತ, ಸಾಹಿತ್ಯ, ಕಾವ್ಯಂಗಳ ಗೋಕರ್ಣಲ್ಲೇ ಕಲ್ತು, ಮುಂದಕ್ಕೆ ಜ್ಯೋತಿಷ್ಯವ ತೆಂಕ್ಲಾಗಿ (ಕೇರಳಲ್ಲಿ) ಕಲ್ತದಡ.
ಹಾಂಗಾಗಿ ರಜರಜ ಮಲೆಯಾಳವೂ ಅರಡಿಗೋ ಏನೋ! ಉಮ್ಮ!!

ನಮ್ಮ ಕ್ರಮ, ಕಟ್ಟುಪಾಡು, ಆಚಾರ, ವಿಚಾರಂಗಳ ಬಗ್ಗೆ ಸಮರ್ಥವಾಗಿ ಮಾತಾಡುವ ಶೈಲಿ-ಸಾಮರ್ಥ್ಯ ಇಪ್ಪ ವಿದ್ವಾನಣ್ಣಂಗೆ, ಮಹತ್ತರ ಜೆವಾಬ್ದಾರಿಗಳ ನಮ್ಮ ಗುರುಗೊ ಕೊಟ್ಟಿದವು.
ನಮ್ಮ ಗುರುಗಳದ್ದೇ ಆದ ವೆಬ್-ಸೈಟು ಇದ್ದಲ್ಲದೋ? ಹರೇರಾಮ.ಇನ್ (http://hareraama.in) ಹೇಳ್ತದು, ಅದರ್ಲಿ ಮುಖ್ಯ ಸಂಪಾದಕರಾಗಿಪ್ಪ ಜೆವಾಬ್ದಾರಿ ಅಡ!
ಮಠಂದಲೇ ಬತ್ತ ಧಾರ್ಮಿಕ ಮಾಸಿಕವಾದ ಧರ್ಮಭಾರತಿಯ  ಸಂಪಾದಕರಾಗಿಯೂ ಬಹಳಷ್ಟು ಕಾರ್ಯ ಅವರಿಂದ ಆವುತ್ತಾ ಇದ್ದಡ.
ಅದಲ್ಲದ್ದೇ ಮಠಲ್ಲಿ ಸಾಹಿತ್ಯಿಕವಾದ ಅಗತ್ಯತೆ ಎಲ್ಲೆಲ್ಲಿ ಬತ್ತೋ – ಅಲ್ಲಿಗೆ ಪ್ರಥಮವಾಗಿ ಗುರುಗೊಕ್ಕೆ ಕಾಂಬದು ಈ ವಿದ್ವಾನಣ್ಣನನ್ನೇ ಅಡ, ಎಡಪ್ಪಾಡಿಬಾವ ಹೇಳಿದ್ದು..!
~
ಮೊನ್ನೆ ನಮ್ಮ ಬೈಲಿಂಗೆ ಬಂದಿತ್ತಿದ್ದವು, ಮಾಷ್ಟ್ರುಮಾವನಲ್ಲಿಗೆ.
ಬೆಂಗುಳೂರಿಂದ ಮುನ್ನಾಣದಿನವೇ ಹೆರಟು, ಆ ದಿನ ಉದೆಕಾಲಕ್ಕೇ ಬೇಗ ಬಂದು ಎತ್ತಿಗೊಂಡಿದವು.
ಅವರ ಜೆಪತಪ ಸಂಧ್ಯಾವಂದನೆ ಆಗಿ ಕೂದಂಡಿಪ್ಪಗ – ಮೆಲ್ಲಂಗೆ ಹತ್ತರಾಣ ಕುರ್ಶಿಲಿ ಹೋಗಿ ಕೂದಂಡೆ, ನಮಸ್ಕಾರ – ಹೇಳಿದೆ.
ಕೈಲಿ ಎಂತದೋ ಪುಸ್ತಕ ಹಿಡ್ಕೊಂಡು ಓದಿಗೊಂಡಿತ್ತವು ಪಕ್ಕನೆ ಮೋರೆ ನೋಡಿ ಚೆಂದಕೆ ಒಂದು ಬಾಬೆನೆಗೆಮಾಡಿದವು; ಪುರುಸೋತಿಲಿ ಇದ್ದ ಕಾರಣ ರಜ ಮಾತಾಡ್ಳುದೇ ಸಿಕ್ಕಿದವು!
~
ಮಾತಾಡಿಗೊಂಡು ಹೋಪಗ ಮೆಲ್ಲಂಗೆ ಕೇಳಿತ್ತು ನಾವು:

ವಿದ್ವಾಂಸರಿಂಗೆ ಪುಸ್ತಕ ತುಂಬ ಇಷ್ಟ, ಅಲ್ಲದೋ?! ಯೇನಂಕೂಡ್ಳಣ್ಣಂಗೆ ಸಿಕ್ಕಿದ್ದು ಈ ಪಟ!!


ವಿದ್ವಾನಣ್ಣ, ಬೈಲಿಂಗೆ ಶುದ್ದಿ ಹೇಳ್ತಿರೋ? – ಹೇಳಿ.
ಎನಗೆ ಕುಂಬ್ಳೆಸೀಮೆಯ ಭಾಶೆ ಅಷ್ಟಾಗಿ ಬತ್ತಿಲ್ಲೆ, ರಜರಜ ಸಾಗರ ಹೊಡೆಯ ಭಾಶೆಯೂ ಸೇರಿಹೋವುತ್ತು! – ಹೇಳಿದವು, ಶುದ್ಧಕುಂಬ್ಳೆಭಾಷೆಲಿ!!
ಸಾರ ಇಲ್ಲೆ, ಎಲ್ಲಾ ಭಾಶೆಯೂ ಇಲ್ಲಿ ಬಂದಿರಳಿ ಹೇಳ್ತದು ಬೈಲಿನ ಹಾರಯಿಕೆ – ಹೇಳಿ ಒಪ್ಪುಸಿತ್ತು ಅವರ.

ಅಂತೂ ಒಪ್ಪಿದವು, ತುಂಬಾ ಕೊಶಿ ಆತು ನವಗೆ. 🙂
~
ವಿದ್ವಾನಣ್ಣ ಬೈಲಿಂಗೆ ಬಂದು ಶುದ್ದಿ ಹೇಳ್ತರೆ ಅದು ಬೈಲಿನ ವಿದ್ವತ್ತನ್ನೇ ಜಾಸ್ತಿ ಮಾಡ್ತು ಹೇಳ್ತದು ಸಮಷ್ಟಿಯ ಅಭಿಪ್ರಾಯ.
ಈಗಾಗಲೇ ಸಂಸ್ಕೃತದ ವಿದ್ವಾಂಸರು ಇಪ್ಪ ಬೈಲಿಂಗೆ ವಿದ್ವಾನಣ್ಣ ಬಂದರೆ ಕಿರೀಟಕ್ಕೆ ಹವಳ ಮಡಗಿದ ಹಾಂಗೆ!
ನಮ್ಮವೇ ಆದ, ನಮ್ಮ ಬೈಲಿನವೇ ಆದ ವಿದ್ವಾನಣ್ಣನ ಶುದ್ದಿಗಳ ಓದಿ ಅರ್ತ ಮಾಡಿಗೊಂಬ°.
ಅರ್ತ ಆದರೆ ಶುದ್ದಿಗೊಕ್ಕೆ ಒಪ್ಪ ಕೊಟ್ಟು ಇನ್ನಾಣ ಶುದ್ದಿ ಬರವಲೆ ಪ್ರೋತ್ಸಾಹ ಮಾಡುವೊ°.
ಅವರ ಮನೆಮಾತಿನ ನಾವು ಕಲ್ತು, ನಮ್ಮ ಮನೆಮಾತಿನ ಶೆಬ್ದಂಗಳ ಅವಕ್ಕೆ ತಿಳುಸುವೊ°..

ವಿದ್ವಾನಣ್ಣಾ –  ಸ್ವಾಗತಮ್!
~
ಗುರಿಕ್ಕಾರ°

ಸೂ:
ವಿದ್ವಾನಣ್ಣನ ಪುಟಂಗೊ:
ಮೋರೆಪುಟ: http://www.facebook.com/profile.php?id=100000021769211&sk=info
ಓರುಕುಟ್ಟುತ್ತ ಪುಟ: http://www.orkut.co.in/Main#Profile?uid=12388448537866549937

Admin | ಗುರಿಕ್ಕಾರ°

   

You may also like...

26 Responses

 1. ಶರ್ಮಪ್ಪಚ್ಚಿ says:

  ಇವ್ರ ಮಾತುಗಳ ಆನು ಕೇಳಿದ್ದು, ನಮ್ಮ ಮಾಷ್ಟ್ರು ಮಾವನ ಸಣ್ಣ ಮಗನ ಸಟ್ಟುಮುಡಿ ದಿನ, ಪುಸ್ತಕ ಬಿಡುಗಡೆ ಸಂದರ್ಭಲ್ಲಿ.
  ಇನ್ನೂ ಇನ್ನೂ ಕೇಳೆಕ್ಕು ಹೇಳ್ತ ಹಾಂಗಿಪ್ಪ ಮಾತುಗೊ. ಸರಳ ಸುಂದರ.
  ಬೈಲಿಂಗೆ ಆತ್ಮೀಯ ಸ್ವಾಗತ

 2. ಅನುಶ್ರೀ ಬಂಡಾಡಿ says:

  ಸ್ವಾಗತ ವಿದ್ವಾನಣ್ಣ. ಶುದ್ದಿಗೊ ಬೇಗ ಬರಳಿ.

 3. ವಿದ್ವಾನಣ್ಣ says:

  ಗುರಿಕಾರರಿಗೆ ಶರಣು…

  ತಮ್ಮ ಅಭಿಮಾನ ನನ್ನ ಮಟ್ಟಕ್ಕಿಂತ ದೊಡ್ಡದು. ಬೈಲಿನ ಸೌಂದರ್ಯ ಹಾಳಾಗದಂತೆ ಪ್ರಯತ್ನಿಸುತ್ತೇನೆ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *