ವಿವೇಕ ಚೇತನ : ಸ್ವಾಮೀ ವಿವೇಕಾನಂದರ ಜನ್ಮದಿನ

January 12, 2012 ರ 1:00 amಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದು ವಿವೇಕಾನಂದ ಜಯಂತಿ. ಯುವ ಜನತೆಯ ಪ್ರತೀಕವಾದ ಸ್ವಾಮೀ ವಿವೇಕಾನಂದರ ಹುಟ್ಟಿದ ದಿನ.
ಆ ಪ್ರಯುಕ್ತ ಶ್ರೀ ಅಕ್ಕ ಬರದ  ಪರಿಚಯಾತ್ಮಕ ಶುದ್ದಿ.
~
ಗುರಿಕ್ಕಾರ
ಜನವರಿ ಹನ್ನೆರಡು ಹೇಳಿದ ಕೂಡ್ಲೇ ನೆನಪ್ಪಿಂಗೆ ಬಪ್ಪದು ಚಿರಂಜೀವಿಯಾದ ಭಾರತವ ಜಗತ್ತಿಲಿ ಎಲ್ಲೋರೂ ಗೌರವಲ್ಲಿ ನೋಡುವ ಹಾಂಗೆ ಮಾಡಿದ ಸ್ವಾಮೀ ವಿವೇಕಾನಂದರ ಜನ್ಮ ದಿನ. ಸರಿಯಾಗಿ 149 ವರ್ಷಂಗಳ ಹಿಂದೆ ಭಾರತದ ಈ ಪುಣ್ಯ ಭೂಮಿಲಿ ಅವತರಿಸಿದ ಮಹಾನ್ ಚೇತನ. ಭುವನೇಶ್ವರೀ ದೇವಿಯ ಗರ್ಭ ಸಂಜಾತ ಆದರೂ ಬೆಳದದ್ದು ಭಾರತಾಂಬೆಯ ಕಣ್ಮಣಿಯಾಗಿ. ಈ ವರ್ಷ ಸ್ವಾಮೀ ವಿವೇಕಾನಂದರ ನೂರೈವತ್ತನೇ ಜನ್ಮ ವರ್ಷ. ಹುಟ್ಟುವಾಗಿನ ಹೆಸರು ನರೇಂದ್ರ ಹೇಳಿದರೆ ರಾಜ ಹೇಳ್ತ ಅರ್ಥದ ಹಾಂಗೆ ಸಣ್ಣ ಆದಿಪ್ಪಗಳೇ ಪ್ರಾಯಕ್ಕೆ ಮೀರಿದ ಗಾಂಭೀರ್ಯವೂ, ಅಸಾಮಾನ್ಯ ವ್ಯಕ್ತಿತ್ವವೂ ಇದ್ದುಗೊಂಡು, ಕಾಲಕ್ರಮಲ್ಲಿ ದೈವವ ದೈವತ್ವವ ಸಾಕ್ಷಾತ್ಕಾರ ಮಾಡಿದ  ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯತ್ವವ ಸ್ವೀಕಾರ ಮಾಡಿ ಸ್ವಾಮೀ ವಿವೇಕಾನಂದರಾದವು. ರಾಮಕೃಷ್ಣರು ಮಹಾವಿಷ್ಣುವಿನ ಹಾಂಗೆ ಆದರೆ ವಿವೇಕಾನಂದರು ಸುದರ್ಶನ ಚಕ್ರದ ಹಾಂಗೆ!! ಗುರುವಿನ ಶಕ್ತಿ ಧಾರೆಯಾಗಿ ಪಡದ ವಿವೇಕಾನಂದರು ಜಗತ್ತಿನ ಅದರಲ್ಲಿಯೂ ಭಾರತದ ಜನಂಗಳ ವಿವೇಚನಾ ಶಕ್ತಿಯ, ವಿಮರ್ಶಾ ಮನೋಭಾವವ, ವೈಚಾರಿಕ ಗುಣವ ಬೆಳೆಸಿ ಎಲ್ಲರಲ್ಲಿಯೂ ವಿವೇಕ ಜಾಗೃತ ಅಪ್ಪ ಹಾಂಗೆ ಮಾಡಿದವು.
ಕೃಪೆ: ಅಂತರಜಾಲ

ರಾಮಕೃಷ್ಣರ ದೇಹತ್ಯಾಗದ ನಂತರ ವಿವೇಕಾನಂದರು ಭಾರತ ಭೂಭಾಗವ ಇಡೀ ಕಾಲ್ನಡಿಗೆಲಿ ಸಂಚಾರ ಮಾಡಿ, ದೇಶದ ನಿಜ ರೂಪವ ಕಂಡವು. ಕಲ್ಕತ್ತಂದ ದಕ್ಷಿಣದವರೆಗೆ ಪರಿವ್ರಾಜಕರಾಗಿ ತಿರುಗಿದ್ದದರಲ್ಲಿ ಅವು ಕಂಡದು ನಮ್ಮ ದೇಶದ ಹಳ್ಳಿಗಳ, ಬಡತನಲ್ಲಿ ಇಪ್ಪ ಮನುಷ್ಯರ, ಎಲ್ಲಾ ಕಡೆ ಕಾಡುತ್ತಾ ಅಸ್ಪೃಶ್ಯತೆ, ಜಾತೀಯತೆ ಇದರ ಎಡೆಲಿಯೂ ನಮ್ಮ ದೇಶ ಶ್ರೀಮಂತ ಭಾವನೆಯ ಮನುಷ್ಯರಿಂದ ತುಂಬಿದ ದೇಶ ಹೇಳಿ ಮನಗಂಡವು. ಸ್ವಾಮೀ ವಿವೇಕಾನಂದರ ಕಂಡಪ್ಪಗ ಅವರ ವರ್ಚಸ್ಸಿಲಿ ಇದ್ದ ದೈವತ್ವವ ಕಂಡು ಎಲ್ಲೋರೂ ಅವರ ಮಾತಾಡ್ಸುಲೆ, ಅವರವರ ಕಷ್ಟಂಗಳ ಹೇಳುಲೆ ಕಾದು ಕೂದುಗೊಂಡು ಇತ್ತಿದ್ದವು. ಅವರ ಮಾತಿಲಿ ಕಷ್ಟಂಗೊಕ್ಕೆ ಪರಿಹಾರ ಕಂಡುಗೊಂಡು ಇತ್ತಿದ್ದವು. ದೇಶ ಸುತ್ತಿದ ಸ್ವಾಮೀ ವಿವೇಕಾನಂದರಿಂಗೆ ನಮ್ಮ ಜನಂಗ ಅನ್ಯರ ದಾಸ್ಯಲ್ಲಿ ಸಿಕ್ಕಿದ್ದದರ ನೋಡಿ ತೀವ್ರವಾಗಿ  ನೊಂದುಗೊಂಡವು. ದೇಶದ ಜನಂಗಳ ಅಸಹಾಯಕತೆ ನೋಡಿ ಕನ್ಯಾಕುಮಾರಿಯ ಹತ್ತರೆ ಭೋರ್ಗರೆವ ಸಮುದ್ರದ ನೀರಿಂಗೆ ಹಾರಿ ಅಲ್ಲಿಪ್ಪ ಬಂಡೆಲಿ ನಿಂದು ದೇಶದ ಬಗ್ಗೆ ಧ್ಯಾನ ಮಾಡಿದವು. ಆ ಸಮಯಲ್ಲಿ ಅವಕ್ಕೆ ಭಾರತದ ಬಗ್ಗೆ ಪಶ್ಚಿಮಲ್ಲಿ ವಿಚಾರ ಹರಡೆಕ್ಕು.  ನಮ್ಮ ದೇಶದ ಹಿರಿಮೆ ವಿದೇಶದ ಜನಮನಲ್ಲಿ ಹರಡೆಕ್ಕು ಹೇಳಿ ಅನುಭವಜ್ಞಾನ ಗೋಚರ ಆಗಿ, ಚಿಕಾಗೊಲ್ಲಿ ನಡವ ಸರ್ವ ಧರ್ಮ ಸಮ್ಮೇಳನಕ್ಕೆ ಹೋವುತ್ತವು. ಕ್ರೈಸ್ತ ಮಿಷನರಿಗಳ ವಿರುದ್ಧ ಯಾವ ಹೆದರಿಕೆಯೂ ಇಲ್ಲದ್ದೆ ಅವರ ದೇಶಲ್ಲಿ, ಅವರ ಮಣ್ಣಿಲಿಯೇ ಮಾತುಗಳ ಹೇಳಿದವು. ಅವರ ಅತ್ಯಾಚಾರಂಗಳ ಜಗತ್ತಿಂಗೆ ಬಿಡಿಸಿ ಬಿಟ್ಟವು.  ಕಂಚಿನ ಕಂಠದ ಈ ಸ್ವಾಭಿಮಾನಿ ಸನ್ಯಾಸಿಯ ಕಾಲಿಂಗೆ ಬಿದ್ದತ್ತು ಲೋಕ ಎಲ್ಲಾ!!  ಭಾರತದ ವಿರುದ್ಧ, ಧರ್ಮದ ವಿರುದ್ಧ ಮಾತಾಡಿದವಕ್ಕೆ ಕೆಲವು ಸರ್ತಿ ನಯವಾಗಿ, ಕೆಲವು ಸರ್ತಿ ಖಾರವಾಗಿ ಉತ್ತರ ಕೊಟ್ಟು ಎಲ್ಲರ ಬಾಯಿ ಮುಚ್ಚಿಸಿದ್ದವು.

ನಾಲ್ಕು ವರ್ಷ ಅಮೆರಿಕಾಲ್ಲಿ ಇದ್ದು ವೇದಾಂತ ತತ್ತ್ವವ ಪ್ರಚಾರ ಮಾಡಿ ವಾಪಸು ಭಾರತಕ್ಕೆ ಬಂದು ಸ್ವಾಮೀ ವಿವೇಕಾನಂದರು ಭಾರತದ ಯುವ ಶಕ್ತಿಯ ಜಾಗೃತ ಮಾಡಿದವು.  ಸ್ವಾತಂತ್ರ್ಯದ ಚಳುವಳಿಗೆ ಅಡಿಪಾಯ ಅಪ್ಪ ಹಾಂಗೆ  ಜನಂಗಳ ಮನಸ್ಸಿನ ಏಕ ರೂಪಕ್ಕೆ ತಂದವು. ಅದ್ವೈತ ತತ್ತ್ವವ ನಂಬಿ ಪ್ರಚಾರ ಮಾಡಿದವು. ಸೇವೆಯ ಮೂಲಕ ಹಿಂದೂ ಧರ್ಮವ ಗಟ್ಟಿ ಮಾಡಿದವು. ರಾಮಕೃಷ್ಣ ಸೇವಾ ಸಮಿತಿಯ ಮೂಲಕ ಕ್ರಾಂತಿಯನ್ನೇ ತಂದವು. ಉಪನಿಷತ್ತಿನ ಮಾತುಗಳನ್ನೇ ಉದ್ಧರಿಸಿ ಜನಂಗಳ ಎಚ್ಚರಿಸಿ ಅವರ ಮಾತುಗ ಧ್ಯೇಯ ವಾಕ್ಯಂಗ ಅಪ್ಪ ಹಾಂಗೆ ಮಾಡಿದವು. ಎಲ್ಲಾ ಜನಂಗೊಕ್ಕೆ  ಮನುಷ್ಯರ ಪ್ರೀತಿ ಮಾಡೆಕ್ಕು ಹೇಳಿ ತೋರ್ಸಿ ಕೊಟ್ಟವು. ಭಗವಂತನ ಸೇವೆ ಹೇಳಿದರೆ ಜನಂಗಳ ಸೇವೆ ಹೇಳಿ ಇಡೀ ಸಮುದಾಯಕ್ಕೆ ಸಮಾಜಕ್ಕೆ ಕೆಲಸ ಮಾಡಿ ತೋರ್ಸಿ ಕೊಟ್ಟವು.
ಇಂದ್ರಾಣ ಈ ಪುಣ್ಯ ಪಾವನ ದಿನ ಸ್ಫೂರ್ತಿ ಶಕ್ತಿಯಾಗಿ ನಮ್ಮ ದೇಶದ ಯುವಕರ ರೂಪಲ್ಲಿ ಹರಿತ್ತಾ ಇಪ್ಪ ವಿವೇಕಚೇತನವ ಒಂದರಿ ನೆಂಪು ಮಾಡುವ°..
ಸ್ವಾಮೀ ವಿವೇಕಾನಂದರ ಜನ್ಮ ಆಗಿ ಇಷ್ಟು ವರ್ಷ ಆದರೂ ಕೂಡಾ ನಿತ್ಯ ಜನಂಗಳ ಮನಸ್ಸಿಲಿ ಇಪ್ಪ ದೇಶ ಭಕ್ತಿಲಿ, ಮಾಡುವ ದೇಶಸೇವೆಲಿ ಇಪ್ಪ ವಿವೇಕಾನಂದರ ಅದಮ್ಯ ಶಕ್ತಿಗೆ ವಂದಿಸಿ ಎಲ್ಲರ ವಿವೇಕ ಜಾಗೃತ ಆಗಿ ಯಾವಾಗಲೂ ಭಾರತದ ಶಕ್ತಿ ಪ್ರಜ್ವಲಿತ ಅಪ್ಪ ಹಾಂಗೆ ಆಗಲಿ ಹೇಳಿ ಒಂದು ಹಾರಯಿಕೆ..
ಕಳುದೊರಿಶ ಬರದ ಶುದ್ದಿಯ ಓದುಲೆ ಇಲ್ಲಿ ಒತ್ತಿ ( ಸಂಕೋಲೆ )
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

 1. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಸಕಾಲಿಕ ಲೇಖನ ಶ್ರೀಅಕ್ಕ .ಚೆಂದಕೆ ಬರದ್ದಿ. ಎನಗೆ ನೆಟ್ ಸರಿ ಇಲ್ಲದ್ದೆ ೩ ದಿನಂದ ನೋಡುಲೆ ಆಯಿದಿಲ್ಲೆ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಧನ್ಯವಾದ ವಿದ್ಯಾ!

  ನಿನ್ನ ಪುರುಸೋತ್ತಿಲಿ ಬೈಲಿಂಗೆ ಬಂದು ಎಲ್ಲೋರ ಶುದ್ದಿಗೆ ನೀನು ಒಪ್ಪ ಬರವದೇ ಎನಗೆ ಕೊಶಿ!! :-):-)

  [Reply]

  VN:F [1.9.22_1171]
  Rating: 0 (from 0 votes)
 2. ಪುತ್ತೂರಿನ ಪುಟ್ಟಕ್ಕ

  ಹರೇ ರಾಮ ಶ್ರೀ ಅಕ್ಕ…….
  ಲೇಖನ ತು೦ಬಾ ಚೆ೦ದ ಆಯ್ದು…..
  ಆನು ವಿವೇಕಾನ೦ದ ಸ೦ಸ್ಥೆಲಿ ವಿದ್ಯಾಭ್ಯಾಸ ಮಾಡಿದ್ದು ಹೇಳಿ ಹೆಮ್ಮೆ ಆವ್ತಾ ಇದ್ದು….

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಪುಟ್ಟಕ್ಕೋ..,
  ಧನ್ಯವಾದ ಒಪ್ಪಕ್ಕೆ.

  [ವಿವೇಕಾನ೦ದ ಸ೦ಸ್ಥೆಲಿ ವಿದ್ಯಾಭ್ಯಾಸ ಮಾಡಿದ್ದು ]
  ಕಲ್ತ ಸಂಸ್ಥೆಯ ಹೆಸರಿನ ಮಹತ್ವವ ತಿಳ್ಕೊಂಡು ಆ ಮಹತ್ತಿಂಗೆ ತಕ್ಕ ಮಕ್ಕೋ ಕಲ್ತು ಮುಂದೆ ಒಳ್ಳೆಯ ಜೀವನ ಮಾಡಿದರೆ ಯಾವ ಸಂಸ್ಥೆಯ ವಿವೇಕಾನಂದ ಹೇಳುವ ಮಹಾನ್ ವ್ಯಕ್ತಿಯ ಹೆಸರಿಲಿ ಕಟ್ಟಿದ್ದವೋ, ಆ ಸಂಸ್ಥೆಯ ಮೂಲ ಕಾರಣಕರ್ತರಿಂಗೆ ಸಂತೋಷ ಅಕ್ಕು.

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ದಿಕ್ಕು ತಪ್ಪಿ ಹೊವ್ತಾ ಇಪ್ಪ ಯುವ ಜನಾಂಗಂಗೊಕ್ಕೆ, ವಿವೇಕ ವಾಣಿಯ ಅಗತ್ಯ ಖಂಡಿತಾ ಇದ್ದು.
  ೧೫೦ ನೆ ಜನ್ಮ ದಿನದ ಸಂದರ್ಭಲ್ಲಿ ಸಕಾಲಿಕ ಲೇಖನ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಅಪ್ಪಚ್ಚಿ,

  ತುಂಬಾ ಧನ್ಯವಾದ.

  [ದಿಕ್ಕು ತಪ್ಪಿ ಹೊವ್ತಾ ಇಪ್ಪ ಯುವ ಜನಾಂಗಂಗೊಕ್ಕೆ, ವಿವೇಕ ವಾಣಿಯ ಅಗತ್ಯ ಖಂಡಿತಾ ಇದ್ದು.]
  ಬೈಲಿಲಿ ಎಂಗೋ ದಾರಿ ತಪ್ಪದ್ದ ಹಾಂಗೆ ನಿಂಗೋ ಅಂಬಗಂಬಗ ‘ವಿವೇಕವಾಣಿ’ ಹೇಳ್ತ ಹಾಂಗೋ!! :-) 😉

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಆವಗಾವಗ ಓದಿ,ನೆ೦ಪು ಮಡುಗಿ ಹೆಮ್ಮೆ ಪಡೆಕ್ಕಾದ ಶುದ್ದಿ. ದೇಶ ಧರ್ಮದ ಮೇಲೆ ಶ್ರದ್ಧೆ ಭಕ್ತಿ ಬೆಳೆಸಿಗೊ೦ಬಲೆ ವಿವೇಕ ವಚನ೦ಗೊ ಸ್ಪೂರ್ತಿ ನೀಡಲಿ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ರಘು ಭಾವ°,
  ಧನ್ಯವಾದ. ನಿಂಗೋ ಹೇಳಿದ ಹಾಂಗೆ ಎಲ್ಲೊರೂ ಹೆಮ್ಮೆ ಪಡೆಕ್ಕು. ಹೀಂಗಿಪ್ಪ ಸುಪುತ್ರಂಗ ನಮ್ಮ ದೇಶಲ್ಲಿ ಹುಟ್ಟಿದ್ದವು ಹೇಳಿ!! ವಿವೇಕ ವಚನಂಗೋ ಎಲ್ಲೋರಿಂಗೂ ಸ್ಫೂರ್ತಿ ಕೊಡಲಿ..

  [ವಿವೇಕ ವಚನ೦ಗೊ]
  ಭಾವ, ನಿಂಗಳ ಮನೆಂದ ಒಂದು ವಿವೇಕ ವಚನ ಬಂದುಗೊಂಡಿತ್ತು. ಈಗ ಸುಮಾರು ಸಮಯಂದ ಕಾಣ್ತಿಲ್ಲೆ. ಒಂದರಿ ಬೈಲಿನ ಹೊಡೆಂಗೆ ಬಪ್ಪಲೆ ಹೇಳ್ತಿರಾ? 😉 😉

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಅಕ್ಕಾ,
  ಆ ಚೇತನ ಎಲ್ಲಿದ್ದ° ಹೇಳಿ ಕೂಡ್ಲೆ ನೋಡ್ತೆ !

  [Reply]

  VA:F [1.9.22_1171]
  Rating: +1 (from 1 vote)
 5. ಅನು ಉಡುಪುಮೂಲೆ

  ಅಕ್ಕ ಶುದ್ದಿ ಭಾರಿ ಒಳ್ಳೆದಾಯಿದು. ಇಂದು ಓದಿದ್ದಷ್ಟೆ. ಯುವಜನೋತ್ಸವಲ್ಲಿ ಭಾಗವಹಿಸಿದಷ್ಟು ಜನಂಗೊಕ್ಕಾದರೂ ವಿವೇಕಾನಂದರ ಧ್ಯೇಯೋದ್ದೇಶಂಗ ಅರ್ಥ ಆದರೆ ಇಡೀ ದೇಶಲ್ಲಿ ಒಂದು ಹೊಸ ಕ್ರಾಂತಿಯೇ ಆಗಿ ಹೋಕು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ವಸಂತರಾಜ್ ಹಳೆಮನೆಶೀಲಾಲಕ್ಷ್ಮೀ ಕಾಸರಗೋಡುvreddhiಮಾಷ್ಟ್ರುಮಾವ°ಶ್ರೀಅಕ್ಕ°ಶುದ್ದಿಕ್ಕಾರ°ವಾಣಿ ಚಿಕ್ಕಮ್ಮಯೇನಂಕೂಡ್ಳು ಅಣ್ಣಪ್ರಕಾಶಪ್ಪಚ್ಚಿಪುತ್ತೂರಿನ ಪುಟ್ಟಕ್ಕವೆಂಕಟ್ ಕೋಟೂರುಪವನಜಮಾವವಿಜಯತ್ತೆಶರ್ಮಪ್ಪಚ್ಚಿಪುತ್ತೂರುಬಾವತೆಕ್ಕುಂಜ ಕುಮಾರ ಮಾವ°ಶ್ಯಾಮಣ್ಣಪುಟ್ಟಬಾವ°ಅನುಶ್ರೀ ಬಂಡಾಡಿಪೆಂಗಣ್ಣ°ಡೈಮಂಡು ಭಾವಕೇಜಿಮಾವ°ಅನು ಉಡುಪುಮೂಲೆದೇವಸ್ಯ ಮಾಣಿಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ