ಭಾರತಮಾತೆಯ ಆನಂದಕಂದ .. ಸ್ವಾಮೀ ವಿವೇಕಾನಂದ

ವಿವೇಕ ಜಯಂತಿಯ ಪ್ರಯುಕ್ತ ವಿಶೇಷ ಲೇಖನ

ಆತ್ಮವಿಶ್ವಾಸದ ಪ್ರತೀಕ

ಇಂದು ಭಾರತ ಮಾತೆಯ ಕಣ್ಮಣಿಯಾಗಿ ಹುಟ್ಟಿ, ಹಿಮಾಲಯದ ಹಾಂಗೆ ಬೆಳದು, ಮೃಗರಾಜನ ಗಾಂಭೀರ್ಯಲ್ಲಿ ಮೆರದು, ಹಿಂದುತ್ವದ ಸಾರವ ಲೋಕದ ಮೂಲೆ ಮೂಲೆಗೆ ಸಾರಿದ ಸ್ವಾಮೀ ವಿವೇಕಾನಂದರ ಹುಟ್ಟಿದ ದಿನ.
ಸಾಂಪ್ರದಾಯಿಕ ಕಾಯಸ್ಥ ಮನೆತನಲ್ಲಿ ಕಲ್ಕತ್ತಾ ಹೈ ಕೋರ್ಟು ಒಕೀಲ° ವಿಶ್ವನಾಥ ದತ್ತ° ಮತ್ತೆ ಭುವನೇಶ್ವರಿ ದೇವಿಯ ಮಗ ಆಗಿ ಜನವರಿ 12, 1863 ರಲ್ಲಿ ಹುಟ್ಟಿದವು.
ಮಾಣಿ ಆದಿಪ್ಪಗ ನರೇಂದ್ರದತ್ತ° ಹೇಳುವ ಹೆಸರಿದ್ದ ಇವು, ಅಪ್ಪನ ಆದರ್ಶ, ಅಮ್ಮನ ಸಂಸ್ಕಾರಂಗಳಲ್ಲಿ ಬೆಳದು, ಸಣ್ಣ ಪ್ರಾಯಲ್ಲಿಯೇ ಆಧ್ಯಾತ್ಮದ ಕಡೆಂಗೆ ಮನಸ್ಸು ಮಾಡಿದವು.
ಓದುದರಲ್ಲಿ ತುಂಬಾ ಆಸಕ್ತಿ ಇದ್ದ ನರೇಂದ್ರ° ತನ್ನ ಪದವಿ ಗಳಿಸಿದ ಕಾಲಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಕಡೆಂಗೆ ಆಕರ್ಷಿತನಾಗಿ, ಅವರ ಶಿಷ್ಯ ಆಗಿ, ವಿವೇಕಾನಂದ ಹೇಳುವ ಹೆಸರಿಲಿ ತನ್ನ ಗುರುವನ್ನೂ ಮೀರಿದ ಶಿಷ್ಯ ಆಗಿ ಮೆರದವು.
ರಾಮಕೃಷ್ಣರ ನಂತರ ಪರಿವ್ರಾಜಕನ ಹಾಂಗೆ ದೇಶದ ಉದ್ದಗಲ ಸುತ್ತಿ, ಹಿಂದುತ್ವದ ಪ್ರಚಾರ ಮಾಡಿದವು.
ಸೆಪ್ಟೆಂಬರ್ 11, 1893 ರಲ್ಲಿ, ತನ್ನ ದೇಶವ, ಸಂಸ್ಕೃತಿಯ ಇಡೀ ಲೋಕದೆದುರು ಚಿಕಾಗೋದ ಸಮ್ಮೇಳನಲ್ಲಿ ಹರಡಿ ಮಡಿಗಿ, ಅಮೇರಿಕಾದ ಎಲ್ಲೋರೂ ತನ್ನ ಸೋದರಂಗ ಹೇಳುವ ಹಾಂಗೆ ಭಾಷಣ ಸುರು ಮಾಡಿ ಅಪ್ಪಗ, ಜನಂಗ ಇವರ ಸಿಂಹವಾಣಿಗೆ ಮನಸೋತು ಅವರ ಶಿಷ್ಯಂಗಳೇ ಆದವು.
ನಮ್ಮ ದೇಶದ ಬಗ್ಗೆ ಎಲ್ಲೋರಿಂಗೂ ಅಭಿಮಾನ ಮೂಡುವ ಹಾಂಗೆ ಮಾತಾಡಿದ್ದು ಮಾತ್ರ ಅಲ್ಲ, ಎಲ್ಲಾ ಜನಂಗಳ ಮನಸ್ಸಿಲಿ ಭಾರತದ ಬಗ್ಗೆ, ಹಿಂದುತ್ವದ ಬಗ್ಗೆ ಇದ್ದ ಸಂಶಯ ಪರಿಹಾರ ಮಾಡಿದವು.
ನಮ್ಮ ದೇಶ ಬೆಳ್ಚಂಗಳ ಅಧೀನಲ್ಲಿ ಇಪ್ಪಗ ನಮ್ಮ ಜವ್ವನಿಗರು ಅವರ ಕಡೆಂಗೆ ಆಕರ್ಷಿತರಪ್ಪಗ, ಜವ್ವನಿಗರ ಒಟ್ಟು ಮಾಡಿ, ಅವರ ವಿದೇಶ ಪ್ರೇಮವ ಕಳದು, ನಮ್ಮ ದೇಶಕ್ಕೆ ದುಡಿವಲೇ ಪ್ರೇರೇಪಣೆ ಮಾಡಿ ಸ್ವಾತಂತ್ರ್ಯದ ಒಂದು ಸಮರವನ್ನೇ ಮಾಡಿದವು.
ಇಂದಿಂಗೂ ನಮ್ಮ ಜವ್ವನಿಗರಿಂಗೆ ಅವ್ವೆ ಆದರ್ಶ!!!
ಜುಲೈ 4, 1902 ರಲ್ಲಿ ಈ ಪ್ರಪಂಚವ, ಭೌತಿಕ ಶರೀರವ ಬಿಟ್ಟರೂ, ನಮ್ಮ ಮನಸ್ಸಿಲಿ, ನಮ್ಮ ಎಲ್ಲರ ಬದುಕಿಲಿ ಯಾವತ್ತಿಂಗೂ ಜೀವಂತ ಆಗಿಪ್ಪ ಆ ಮಹಾನ್ ಚೇತನಕ್ಕೆ ಶತ ಶತ ನಮನಂಗೋ…!!

ನಮ್ಮ ದೇಶ, ಸಂಸ್ಕೃತಿಯ ಬಗ್ಗೆ ನಾವೇ ನಮ್ಮ ಗುರುಗಳಿಂದ ತಿಳ್ಕೊಂಡು ಅದರ ಪಾಲನೆ ಮಾಡಿ, ನಮ್ಮ ವೈಭವವ ಸಾರೆಕ್ಕು ಹೇಳುವ ಮಹಾನ್ ಸಂದೇಶ ಕೊಟ್ಟ ಸ್ವಾಮೀ ವಿವೇಕಾನಂದರು ಇನ್ನೊಂದರಿ ಹುಟ್ಟಿ ಬರಲಿ..
ನಮ್ಮ ಜೆನಂಗೊಕ್ಕೆ ಸರಿ ದಾರಿ ತೋರ್ಸಿ ಒಳ್ಳೆಯ ಮನುಷ್ಯರಪ್ಪ ಪ್ರೇರಣೆ ಕೊಡಲಿ..
ಭಾರತದ ಮನೆ ಮನೆಗಳಲ್ಲಿ ವಿವೇಕಾನಂದರ ಚಿಂತನೆಗ ಪ್ರವಹಿಸಲಿ..
ಅವರ ಭಾರತದ ಕಲ್ಪನೆ ನನಸಾಗಲಿ..

ಅವರ ಚಿಕಾಗೋ ಭಾಷಣ ಈ ಸಂಕೊಲೆಲಿ ಇದ್ದು…:
http://www.youtube.com/watch?v=N8MRaedvfUU

ಶ್ರೀಅಕ್ಕ°

   

You may also like...

15 Responses

  1. ಲೇಖನದ ಶೀರ್ಷಿಕೆ ಎನಗೆ ತುಂಬಾ ಇಷ್ಟ ಆತು.. ಅಲ್ಲದ್ದೆ ವಿವೇಕಾನಂದರ ಬಗ್ಗೆ ಲಾಯ್ಕಕ್ಕೆ ಬರದ್ದಿ. ಇಂದ್ರಾಣ ದಿನಲ್ಲಿ ಎಲ್ಲರೂ ಅನುಸರ್ಸೆಕಾದ ದಾರಿಯ ಸುಮಾರು ಹಿಂದೆಯೇ ತೋರ್ಸಿಕೊಟ್ಟಿದವು ವಿವೇಕಾನಂದರು. ಕೆಲವು ಜೆನಕ್ಕೆ ವಿವೇಕಾನಂದರ ಬಗ್ಗೆ ಗೊಂತಿಪ್ಪದು ಚಿಕಾಗೋಲ್ಲಿ ಮಾಡಿದ ಭಾಷಣದ ಸುರುವಾಣ ಎರಡು ಮೂರು ಶಬ್ದಂಗೊ ಮಾಂತ್ರ ಹೇಳುದು ದುಃಖದ ವಿಚಾರ. ಒಬ್ಬ ವ್ಯಕ್ತಿ ತನ್ನ ಜೀವಿತದ ೩೯ ವರ್ಷಲ್ಲಿ ಮಾಡಿದ ಸಾಧನೆ ಎಷ್ಟು !! ವಿವೇಕಾನಂದರ ಒಬ್ಬ ವ್ಯಕ್ತಿ ಹೇಳಿ ಹೇಳುದಕ್ಕಿಂತ ಶಕ್ತಿ ಹೇಳಿ ಹೇಳುದೇ ಸರಿ ! ಅಂತಹ ಶ್ರೇಷ್ಠ ವ್ಯಕ್ತಿತ್ವ ಹೊಂದಿದ ವಿವೇಕಾನಂದರು ಹುಟ್ಟಿದ ಭೂಮಿಲಿ ನಾವು ಇಪ್ಪದೇ ನಮ್ಮ ಪುಣ್ಯ. ಅವರ ಪ್ರತಿಯೊಂದು ಮಾತುಗಳ, ಆಶಯಂಗಳ, ಆದರ್ಶಂಗಳ ಪಾಲನೆಮಾಡೆಕಾದ್ದು ಎಲ್ಲ ಭಾರತೀಯರ ಕರ್ತವ್ಯ. ಅಂಬಗಳೇ ನಮ್ಮ ’ಭಾರತೀಯತೆ’ಗೆ ಅರ್ಥ ಬಪ್ಪದು ಅಲ್ಲದಾ?

  2. ಪುಟ್ಟಭಾವ ಹಾಲುಮಜಲು says:

    ಸಮಯೋಚಿತ ಲೇಖನ ಲಾಯ್ಕಾಯ್ದು!

  3. ಆರತಿ says:

    ನನಗೆ ಈ ಲೇಖನ ಓದಿ ತುಂಬಾ ಖುಶಿ ಆಯಿತು. ಎಲ್ಲರಿಗೂ ಆರೋಗ್ಯ ಅಯುಷ್ಯ ಸುಖ ಶಾಂತಿ ನೆಮ್ಮ್ಫದಿಯನ್ನು ಕರುಣಿಸು ದೇವಾ ಎಲ್ಫ್ಲಾರಿಗೂ ಒಳಿತಾಗಲಿ ಎಲ್ಲಾರಿಗೂ ಶುಭಾವಾಗಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *