ಮಳೆಗಾಲಲ್ಲಿ ಒ೦ದು ದಿನ

June 22, 2013 ರ 7:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ
ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಕವನ ಸ್ಪರ್ಧೆಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಬರಹ.
ಲೇಖಕರಾದ ಶ್ರೀ ಈಶ್ವರಭಟ್ ಕೆ,ಕೊಮ್ಮೆ ಮನೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದು೦ಬಿದ ಅಭಿನ೦ದನೆಗೊ.ಈಶ್ವರಕಿರಣ

. ಮಳೆಬಂತು

ತೆಂಕಿನ ಮುಗಿಲಿನ ಬಿಂಕದ ನೆಡೆಗೆ

ಶಂಕೆಯ ಶೆಖೆಯೂ ಶುರುವಾತು

ಉಬ್ಬರಗಾಳಿಯ ಬೊಬ್ಬೆಯ ನಡುವೆಯೆ

ಹಬ್ಬದ ಮಳೆಯದು ಬಂದತ್ತು!


ಕೊಳೆತೊಳವದೆ ಸೈ! ನೆಲತೊಳವದೆ ಸೈ

ಬಲಕೊಡುವುದು ಮಳೆ ಸ್ವಂತಕ್ಕೆ!

ನಿರನಿರ್ಮಲ ಸಂತೋಷದ ಭಾವಕೆ

ಬಿರುಮಳೆ ಬೀಳ್ವದು ಗಮನಕ್ಕೆ.

 ನಾಚಿಕೆಲೋಡುವ ಹೆಣ್ಣಿನ ಬೆನ್
ರಾಚಿದ ತುಂತುರು ಹನಿ ಹಾಂಗೆ!
ಭೂಮಿಯ ತಬ್ಬಿದ ಮಳೆಹನಿ ಹಬ್ಬಿತು
ಕಾಮಿಸಿದ್ದದು ಆಕಾಶ!

. ಆಶೆಯತಂತು

ಬೆಶಿಲಿಂಗೆ ಮೈ ಒಡೆದು ಸತ್ತನರವೆಲ್ಲದುದೆ

ಖುಷಿಯ ಪಡೆಯೆಕ್ಕಿನ್ನು ಮಳೆಯ ಹೀರಿ
ಹೊಸದು ಹುಟ್ಟುವ ಭಾಷೆ ಬೆಳೆಯೆಕ್ಕು ಬೆಳೆಸೆಕ್ಕು
ವಿಷಮವಾಗದ್ದಿರಲಿ ಮಳೆಯ ಭೇರಿ!

 ಮಳೆಗಾಲದಾ ಕೆಸರು; ಒಗರಲ್ಲ ಹುಳಿಯಲ್ಲ
ಪುಳಕವಾ ಕೊಡುವಂತಾ ಸೀವು ಅಲ್ಲ!
ಮುಳಿ ಸೋಗೆ ಮಾಡುಗಳ ಬ್ರಹ್ಮಕಲಶವ ಮಾಡು!
ತೊಳೆವದೊಂದವಕಾಶ ಹಿರಿದು ಅಲ್ಲ!

 ಧಗೆಗೆಷ್ಟು ಬಿರುಸಿಕ್ಕೋ ಮಳೆಗು ಅಷ್ಟೇ ಕನಸು
ಜಗವೆಲ್ಲ ತುಂಬುಗೋs ಹನಿಯ ಮೇಳ,
ನೆಗೆಯ ಸುಖ ಕೊಡುವಂತ ಸೊಗದ ಮಳೆ ಬರಲೇಳಿ
ಮೊಗೆದು ಚಿಮ್ಮಲಿ ರಾಗಿ ಅಕ್ಕಿ ಜೋಳ!
. ಉಪಸಂಹಾರ

ಅಬ್ಬೆ ಮೋರೆಯ ತೊಳದು; ಕಿಚ್ಚಿನೊಲೆ ಹತ್ತರೆ
ಸುಟ್ಟುಗೊಂಡದು ತ್ಯಾಗ; ಹಸಿವು ಕಳೆಯೆ
ಮಳೆಯು ಪ್ರೀತಿಲಿ ಸುರಿದು ; ಆ ಪ್ರವಾಹಲ್ಲಳೆದು
ಬಿಟ್ಟು ಹೋದ್ದದು ಜಾಗ; ಫಸಲು ಬೆಳೆಯೆ.

 

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಕವನ .ಅಭಿನಂದನೆ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಕೋಳ್ಯೂರು ಭಾವಾ..
  ಭಾವಗೀತೆಯೇ ಸೈ.. ಸುಮಾರು ವಿಷಯ೦ಗೊ,ಕಲ್ಪನೆಗೊ ಒಟ್ಟು ಸೇರಿದ ಚೆ೦ದದ ಕವಿತೆ.
  ಒ೦ದೇ ಛ೦ದಸ್ಸಿಲಿದ್ದರೆ ಅತ್ಯದ್ಭುತ ಆವುತ್ತಿತ್ತು.
  ಮು೦ದೆಯೂ ಬರಳಿ ಗುಣಮಟ್ಟದ ಸಾಹಿತ್ಯ.
  ಅಭಿನ೦ದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಎನಗೆ ತುಂಬ ಇಷ್ಟ ಆತು, ಈ ಕವನ.

  [Reply]

  VN:F [1.9.22_1171]
  Rating: 0 (from 0 votes)
 4. ಕಲ್ಪನಾ ಅರುಣ್
  kalpanaarun

  ಚಲೊ ಹಾಡು

  [Reply]

  VA:F [1.9.22_1171]
  Rating: 0 (from 0 votes)
 5. Bellala Gopinatha Rao

  ಭ್ಹಟ್ಟರೇ ನಿಮ್ ಪದ್ಯ ಚಲೋ ಇತ್ತು ಓದಕೆರೆ
  ಧನ್ಯವಾದ, ಹ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಡಾಗುಟ್ರಕ್ಕ°ಗೋಪಾಲಣ್ಣಪವನಜಮಾವಪ್ರಕಾಶಪ್ಪಚ್ಚಿಅಕ್ಷರ°ದೊಡ್ಡಮಾವ°ವಿದ್ವಾನಣ್ಣಪಟಿಕಲ್ಲಪ್ಪಚ್ಚಿಹಳೆಮನೆ ಅಣ್ಣಮಾಲಕ್ಕ°ಅನಿತಾ ನರೇಶ್, ಮಂಚಿರಾಜಣ್ಣತೆಕ್ಕುಂಜ ಕುಮಾರ ಮಾವ°ಅನು ಉಡುಪುಮೂಲೆಚೆನ್ನಬೆಟ್ಟಣ್ಣದೊಡ್ಡಭಾವಕಾವಿನಮೂಲೆ ಮಾಣಿಕಜೆವಸಂತ°ದೇವಸ್ಯ ಮಾಣಿಚುಬ್ಬಣ್ಣಎರುಂಬು ಅಪ್ಪಚ್ಚಿವೆಂಕಟ್ ಕೋಟೂರುಒಪ್ಪಕ್ಕಗಣೇಶ ಮಾವ°ಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ