ಸ್ವಚ್ಛ ಭಾರತ – ವಿಷುವಿಶೇಷ ಸ್ಪರ್ಧೆ -2015 ಪ್ರಥಮ ಬಹುಮಾನ ಪಡದ ಕವನ

August 30, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

 

ವಿಷು ವಿಶೇಷ ಸ್ಪರ್ಧೆ- 2015ಕವನ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಲೇಖಕಿ ಶ್ರೀಮತಿ  ಇ೦ದಿರಾ ಜಾನಕಿ ಕೂಳಕೋಡ್ಳು, ಬೆ೦ಗಳೂರು ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

 

                            ಸ್ವಚ್ಛ ಭಾರತ  

ಕನಸ ಕ೦ಡವ° ಗಾ೦ಧಿಯಜ್ಜನು ರಾಮರಾಜ್ಯದ ಭಾರತಾIndiratte
ನನಸು ಮಾಡುಲೆ ಟೊ೦ಕ ಕಟ್ಟಿದ° ಎತ್ತಿ ಹೇಳಿ ಶುಚಿತ್ವವಾ
ಮನದೆ ಮೂಡಲಿ ದೇಶವಾಸಿಗಳೆಲ್ಲರಲ್ಲಿಯು ಎಚ್ಚರಾ
ನೆನೆದು ಹೀ೦ಗೆಯೆ ಬಿಟ್ಟುಹೋದನೆ ತನ್ನ ದೃಷ್ಟಿಯ ಚಕ್ರವಾ ||

ಕರಮಚ೦ದನ ಕಾರ್ಯವೈಖರಿ ಮೆಚ್ಚಿಗೊ೦ಡವ° ಮೋದಿಯೂ
ಕರಗಿ ಹೋತದ ಭಾವಶುದ್ಧಿಯು ಗಾ೦ಧಿ ತೋರಿದ ಕಾಣ್ಕೆಗೇ
ನರರ ಇ೦ದ್ರನು ದಾರಿಯುದ್ದಕು ಶುದ್ಧ ಮಾಡಿಯೆ ಬಿಟ್ಟನೂ
ಪರರು ನೋಡಿಯೆ ಕೂಡಿಗೊ೦ಡವು ತಮ್ಮ ಕೈಗಳ ಜೋಡಿಸೀ ||

ಭಕುತ ಮ೦ದಿಯು ಮಾಡೆ ಸಿ೦ಧುವ ಪಾಪಕೂಪವನಾಗಿಯೇ
ಸಕಲ ಪಾತಕ ನಾಶ ಮಾಡುವ ಗ೦ಗೆ ಹೊತ್ತಿದು ಭಾರವಾ
ಮುಕರದಾ೦ಗೆಯೆ ನೀರು ಕಾ೦ಬಲೆ ಗ೦ಗೆ ನಿರ್ಮಲಗೊಳ್ಳೆಕೂ
ನಿಕಷಗೊಡ್ಡುಗು ಚೊಕ್ಕ ಮಾಡುವ ಕಾರ್ಯಜಾಣ್ಮೆಲಿ ಮೋದಿಯೂ ||

ಹೆರಟು ಹೋಯಿದ° ತನ್ನ ಕಾಯಕ ದೇಶದೆಲ್ಲೆಡೆ ಹಬ್ಬುಸೀ
ತಿರುಗಿ ಬಕ್ಕವ° ಮೋದಿ ಮಾಡಿದ ಕಾರ್ಯ ಮೋಡಿಯ ಮೋಹಿಸೀ
ಬರಿದೆ ಹೇಳದೆ ಮಾಡಿ ತೋರ್ಸುವ ದೇಶಕಪ್ಪದು ಉನ್ನತೀ
ಎರಡು ಹೆಜ್ಜೆಯ ಮೆಟ್ಟಿ ಬನ್ನಿರಿ ಲೋಕದೆಲ್ಲೆಡೆ ಸೌಖ್ಯಕೇ ||

ಕಸವು ಕಶ್ಮಲ ಬಾಚಿ ಎತ್ತುವ ನಮ್ಮ ಸುತ್ತಣ ಜಾಗೆಲೀ
ವಿಷವು ತೊಟ್ಟೆಯು , ಕುತ್ತು ತಕ್ಕದು,ಇಡ್ಕಿ ಹಾಕೆಡಿ ಭೂಮಿಲೀ
ಉಸುರು ಸುಸ್ಥಿತಿಲಿಪ್ಪ ಹಾನ್ಗೆ ಮನಾರ ಮಾಡುಲೆ ಹೇಳೆಕೂ
ಕುಸುಮ ಕೋಮಲ ಮಕ್ಕೊಗೀಗಳೆ ಪಾಠ ಮಾಡಿಯೆ ಕಲ್ಸೆಕೂ  ||

ಬಡವ ಬಲ್ಲಿದರೆಲ್ಲರಲ್ಲಿಯು ಪೈಸೆ ಮಾಡುವ ಆಗ್ರಹಾ
ಕಡುದು ಕೊಲ್ಲುವ ಮಟ್ಟಕೆತ್ತುಗು ಭೂಗತಾದವರಾರ್ಭಟಾ
ಹುಡುಗಿ ಹಾದಿಲಿ ಹೋಪ ಹೊತ್ತಿಲೆ ಬೀದಿಕಾಮುಕ ಕಾಟಕೇ
ತಡೆಯಮಾಡದೆ ಶಾ೦ತಿ ಸಿಕ್ಕದು, ಎಲ್ಲ ಯತ್ನವ ಮಾಡುವಾ ||

ಜಲದ ಮೂಲವು ಶುದ್ಧವಪ್ಪಲೆ ಮ೦ದಿ ಎಚ್ಚರಗೊಳ್ಳಲಿ
ಸುಲಭ ಶೌಚವು ಕಾರ್ಯಗೊ೦ಡರೆ ಊರು ನೆಮ್ಮದಿ ಕಾಣಲಿ
ಕೆಲಸ ಕಾರ್ಯವು ಶೀಘ್ರವಾದರೆ ನಾಡು ಏಳ್ಗೆಯ ಹೊ೦ದಲಿ
ಒಲವು ಹೆಚ್ಚಲಿ ದೇಶಸೇವೆಗೆ ಭಾವ ನೂರ್ಮಡಿಯಾಗಲೀ ||

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. parvathimbhat
  parvathimbhat

  ತುಂಬಾ ಲಾಯಿಕ ಕವನ ಇಂದಿರೆ .ಅಭಿನಂದನೆ.

  [Reply]

  VN:F [1.9.22_1171]
  Rating: 0 (from 0 votes)
 2. ಇಂದಿರತ್ತೆ
  indiratte

  ಎನ್ನ ಕವನವ ಮೆಚ್ಚಿ ಅಭಿನಂದಿಸಿದ ಎಲ್ಲೋರಿಂಗೂ ಅಭಿವಂದನೆಗೊ. ನಿಂಗಳ ಮೆಚ್ಚುಗೆ ಎನ್ನ ಹಾಂಗಿಪ್ಪವಕ್ಕೆ ಪ್ರೋತ್ಸಾಹದಾಯಕವಾಗಿರುತ್ತು.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಪ್ರಥಮ ಬಹುಮಾನ ಕೊಡೆಕಾದ್ದದೇ. ಅಭಿನಂದನೆಗೊ ಇಂದಿರಕ್ಕ.
  ಬೈಲಿಲ್ಲಿ ವಿ ವಿ ಸ್ಪರ್ಧೆಯ ಲೇಖನಂಗೊ ಬಪ್ಪಲೆ ಶುರುವಾದ್ದು ಕಂಡು ಕೊಶೀ ಆತು. ಹಿಂದಾಣ ಎಲ್ಲ ಉತ್ತಮ ಪದ್ಯ/ ಲೇಖನಂಗಳೂ ಬರಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಪೆರ್ಲದಣ್ಣಪುಟ್ಟಬಾವ°ಸುವರ್ಣಿನೀ ಕೊಣಲೆಕೇಜಿಮಾವ°ಜಯಶ್ರೀ ನೀರಮೂಲೆದೀಪಿಕಾvreddhiಕೆದೂರು ಡಾಕ್ಟ್ರುಬಾವ°ಚೂರಿಬೈಲು ದೀಪಕ್ಕಶುದ್ದಿಕ್ಕಾರ°ಗಣೇಶ ಮಾವ°ದೊಡ್ಡಮಾವ°ವೇಣಿಯಕ್ಕ°ಸರ್ಪಮಲೆ ಮಾವ°ಪುಣಚ ಡಾಕ್ಟ್ರುದೊಡ್ಡಭಾವನೆಗೆಗಾರ°ಮುಳಿಯ ಭಾವಬೋಸ ಬಾವಬಟ್ಟಮಾವ°ಡಾಗುಟ್ರಕ್ಕ°ಅಜ್ಜಕಾನ ಭಾವಅಡ್ಕತ್ತಿಮಾರುಮಾವ°ಕಳಾಯಿ ಗೀತತ್ತೆಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ