ಸ್ವಚ್ಛ ಭಾರತ – ವಿಷು ವಿಶೇಷ ಸ್ಪರ್ಧೆ – ದ್ವಿತೀಯ ಬಹುಮಾನ ಪಡದ ಕವನ

September 1, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

 

ವಿಷು ವಿಶೇಷ ಸ್ಪರ್ಧೆ- 2015ಕವನ ಸ್ಪರ್ಧೆಲಿ  ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕ ಶ್ರೀ ವಿ.ಬಿ.ಕುಳಮರ್ವ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.DSC_8602

ಸ್ವಚ್ಛ ಭಾರತ

ನಮ್ಮ ದೇಶದ ದೊಡ್ಡ ಮ೦ತ್ರಿಗೊ
ತಮ್ಮ ಪೀಠದ ಮೇಲೆ ಕೂಪಗ
“ಸುಮ್ಮನೆ೦ದೂ ಕೂರೆ” ಹೇಳುವ ಶಪಥ ಮಾಡಿದವು |
“ಬ್ರಹ್ಮದೇವರು ವಿಷ್ಣು ರುದ್ರರು
ಎಮ್ಮೆಗೆ೦ಡನ ಬೆನ್ನ ಯಮನುದೆ
ಹೆಮ್ಮೆ ಬೀರುವ ಹಾ೦ಗೆ ನೆಡೆಶುವೆ ದೇಶ ಭಾರತವ”||

ಕ್ಲೇಶ ಕಳವಲೆ ಊರು ತಿರುಗುವೊ°
ದೇಶ ದೇಶವ ಸುತ್ತಿ ನೋಡುವೊ°
ಕಾಶಿ ಕಟ್ಟುವ ಪೈಸೆಗ೦ಟಿನ ಬಿಡುಸಿ ತೋರುಸುವೊ° |
ವಿಶ್ವ ಸೋದರ ಭಾವ ಬೆಳೆಶುವೊ°
ಅಶ್ವಶಕ್ತಿಯ ಬಲವ ಗಳಿಸುವೊ°
ನಾಶವಿಲ್ಲದ ದೇಶ ಕಟ್ಟುವೊ ಎಲ್ಲರೊ೦ದಾಗಿ ||

ಊರು ತು೦ಬಿದ ಕಸವು ರಾಶಿಯ-
ನಾರು ಚೊಕ್ಕಟ ಮಾಡಿ ಮುಗುಶುಗು
ದಾರಿ ಏವದು ಹೇಳಿಯರಡಿಯ ಸುಖದ ಬದುಕಿ೦ಗೆ |
ಕೇರಿ ಬೀದಿಯ ಸುತ್ತಿ ನೋಡಿರೆ
ಜೋರು ಹಿಡಿಯೆಕು ಮೂಗು ಬೆರಳಿಲಿ
ವಾರಕೊ೦ದರಿ ಕೊಳಕು ಹೇಸಿಗೆ ದೂರ ಹಾಕಿರುದೆ ||

ದೇಶ ಆಳುವ ದೊಡ್ಡ ದೊಡ್ಡವು
ನಾಶ ಮಾಡೆಕು ಕೊಳೆಯ ರಾಶಿಯ
ಕಾಶಿ ವಿಶ್ವನ ಕಾಲ ಅಡಿಲಿಯು ಇಪ್ಪ ವಾಸನೆಯ |
ಕೋಶ ತು೦ಬಿರೆ ಸಾಕೊ ನಮ್ಮದು
ಮೀಶಿ ತೊಳದರೆ ದೇಹ ಹೊಳೆಯದೊ
ಪಾಶ ಅ೦ಕುಶ ಹಾಕಿ ನೋಡೆಕು ಜೆನರ ಪೆರಟಿ೦ಗೆ ||

ಎಲ್ಲಿ ನೋಡಿದರಲ್ಲಿ ತುಪ್ಪುಗು
ಎಲ್ಲ ಜಾಗೆಲಿ ಕೊಳಕು ಚೆಲ್ಲುಗು
ಅಲ್ಲಿ ಇಲ್ಲಿಯೊ ಹೇಳಿ ಹುಡುಕಿರೆ ಅವನೆ ಬರಿ ಬೋಸ°|
ಬೆಲ್ಲದಚ್ಚಿಲಿ ಇಲ್ಲೆ ಕಡೆಕೊಡಿ
ಫುಲ್ಲಲೋಚನ ದೇವ ನೀನೇ
ಇಲ್ಲಿಗೊ೦ದರಿ ಬ೦ದು ನೋಡಿರೆ ನಿನಗೆ ಗೊ೦ತಕ್ಕು||

ಸ್ವಚ್ಛ ಭಾರತ ನಮ್ಮದಾಗಲಿ
ಅಚ್ಛ ಪರಿಸರ ಚೆ೦ದ ಹೆಚ್ಚಲಿ
ಹೆಚ್ಚು ಯತ್ನವ ಗೈದು ದೇಶವ ನಾವು ರಕ್ಷಿಸುವೊ° |
ಕೆಚ್ಚು ನಮ್ಮಲ್ಲಿರಲಿ ಮಿತ್ರರೆ
ಹೊಚ್ಚ ಹೊಸ ಚಳುವಳಿಯ ತೊಡಗುವೊ°
ಬೆಚ್ಚಿ ಬೀಳುವ ಹಾ೦ಗೆ ಮೆರೆಯಲಿ ಸ್ವಚ್ಛ ಭಾರತವು ||

ಕೆಲವು ಪದಗಳ ಅರ್ಥ :
ಕೂಪಗ – ಕುಳಿತುಕೊಳ್ಳುವಾಗ
ಕೂರೆ – ಕುಳಿತುಕೊಳ್ಳಲಾರೆ
ಎಮ್ಮೆಗೆ೦ಡ – ಕೋಣ , ಯಮನ ವಾಹನ
ಏವದು – ಯಾವುದು
ಪೆರಟು – ಅಧಿಕಪ್ರಸ೦ಗ

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಶ್ಯಾಮಣ್ಣ
  ಶ್ಯಾಮಣ್ಣ

  (ಫುಲ್ಲಲೋಚನ ದೇವ ನೀನೇ) ಈ “ಫುಲ್ಲಲೋಚನ ” ಹೇಳಿರೆ ಎಂತ ಅರ್ಥ ? ಆರಾದ್ರೂ ಹೇಳಿ.

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಹೂಗಿನಾ೦ಗೆ ಅರಳಿದ ಕಣ್ಣಿಪ್ಪವ ಹೇಳಿ ಅರ್ಥ , ವಿಷ್ಣುವಿನ ಹೆಸರುಗಳಲ್ಲಿ ಒ೦ದು . ಒಂದರಿ ಪುಸ್ತಕ ತೆಗದು ಸರಿಯಾಗಿ ಹೇಳುಲೆ ಎಡಿಗಷ್ಟೆ ಶ್ಯಾಮಣ್ಣ.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  (ಹೂಗಿನಾ೦ಗೆ ಅರಳಿದ ಕಣ್ಣಿಪ್ಪವ) ಅರಳಿದ ಹೂಗಿಂಗೆ ಕಮ್ಮಿಲಿ ನಾಲ್ಕಾದರೂ ದಳ ಇರ್ತು… :) ಅದಲ್ಲದಾ ಹೇಳಿ ಕಾಣ್ತು… ಬಹುಶ “ಪುಚ್ಚೆ ಕಣ್ಣಿನ” ಹಾಂಗಿಪ್ಪ ಕಣ್ಣೂ (ಬೆಳಿ ಅಥವಾ ನೀಲಿ ಅಥವಾ ನಸು ಹಸುರಿನ ಕಣ್ಣೂ) ಹೇಳಿ ಇಕ್ಕಾ?

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಉದಾಹರಣೆಗೆ ಐಶ್ವರ್ಯ ರೈಯ ಕಣ್ಣು …

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘು ಮುಳಿಯ Reply:

  ” ಜಿಂಕೆ ಕಣ್ಣು” ಹೇಳಿ ಒಂದು ಅರ್ಥ ಇದ್ದೋ ! ಡಾ. ಮಹೇಶಣ್ಣನತ್ರೆ ಕೇಳೆಕ್ಕಷ್ಟೆ ..

  VA:F [1.9.22_1171]
  Rating: 0 (from 0 votes)

  ಶ್ಯಾಮಣ್ಣ Reply:

  ಇಲ್ಲಿದ್ದು …
  https://kn.wiktionary.org/wiki/%E0%B2%AB%E0%B3%81%E0%B2%B2%E0%B3%8D%E0%B2%B2%E0%B2%B2%E0%B3%8B%E0%B2%9A%E0%B2%A8

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಒಳ್ಳೆ ಕವನ ಭಾವಯ್ಯ. ವಿ.ಬಿ. ಕುಳಮರ್ವದೊವು ಒಳ್ಳೆ ಪ್ರಸಿದ್ಧ ಕವಿ.ಹಲವಾರು ಸಾಹಿತ್ಯ ನಮುನೆಯ ಶಿಬಿರಂಗಳ , ಶಾಲಗಳಲ್ಲಿ, ಸಂಸ್ಥೆಗಳಲ್ಲಿ, ನಿತ್ಯ-ನಿರಂತರ ನೆಡೆಶುತ್ತಾ ಇರ್ತವು. ಅವು ಗಡಿಬಿಡಿಲಿ ಬರದ ಪದ್ಯವೂ ಒಳ್ಳೆ ರಸವತ್ತಾಗಿ ಛಂದಸ್ಸು ಸಹಿತ ಇರ್ತು.

  [Reply]

  VN:F [1.9.22_1171]
  Rating: 0 (from 0 votes)
 3. ಶೈಲಜಾ ಕೇಕಣಾಜೆ

  ಒಳ್ಳೇ ಕವನ.. ಮಾಷ್ಟ್ರಿಂಗೆ ಅಭಿನಂದನೆಗ ..

  [Reply]

  VA:F [1.9.22_1171]
  Rating: 0 (from 0 votes)
 4. K.Narasimha Bhat Yethadka

  ಅಭಿನಂದನೆ ವೆಂಕಪ್ಪಣ್ಣ.

  [Reply]

  VA:F [1.9.22_1171]
  Rating: 0 (from 0 votes)
 5. ವಿ.ಬಿ. ಕುಳಮರ್ವ

  ’ಸ್ವಚ್ಚಭಾರತ’ ಓದಿ ಒಪ್ಪಕೊಟ್ಟವಕ್ಕೆಲ್ಲೋರಿಂಗೂ ತುಂಬಾ ತುಂಬಾ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 6. ಇಂದಿರತ್ತೆ
  indiratte

  ಅಣ್ಣ , ಒಳ್ಳೆಯ ಕವನ – ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 7. parvathimbhat
  parvathimbhat

  ಕವನ ಬಹಳ ಲಾಯಿಕಾಯಿದು .

  [Reply]

  VN:F [1.9.22_1171]
  Rating: 0 (from 0 votes)
 8. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಉತ್ತಮ ಕವನ ಕುಳಮರ್ವದಣ್ಣ. ಅಭಿನಂದನೆಗೊ. ಬೈಲಿಂಗೆ ನಿಂಗಳ ಕವನ, ಕಥೆ, ವೈಚಾರಿಕ ಶುದ್ದಿಗೊ ಬತ್ತಾ ಇರಳಿ. ಬೈಲಿಲ್ಲಿ ಸಾಹಿತ್ಯ ಕೃಷಿಲಿ ಚೆಂದಕೆ ನೆಡೆಯಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ಕಳಾಯಿ ಗೀತತ್ತೆಬೋಸ ಬಾವಒಪ್ಪಕ್ಕವಿದ್ವಾನಣ್ಣಅನಿತಾ ನರೇಶ್, ಮಂಚಿತೆಕ್ಕುಂಜ ಕುಮಾರ ಮಾವ°ಅಕ್ಷರ°ವಾಣಿ ಚಿಕ್ಕಮ್ಮಯೇನಂಕೂಡ್ಳು ಅಣ್ಣಮಾಷ್ಟ್ರುಮಾವ°ಅಜ್ಜಕಾನ ಭಾವಪವನಜಮಾವಗೋಪಾಲಣ್ಣವಿಜಯತ್ತೆಅನು ಉಡುಪುಮೂಲೆಸಂಪಾದಕ°ಮುಳಿಯ ಭಾವಶ್ಯಾಮಣ್ಣಕಜೆವಸಂತ°vreddhiವಸಂತರಾಜ್ ಹಳೆಮನೆಮಂಗ್ಳೂರ ಮಾಣಿಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ