ವಿಷುವಿಶೇಷ ಸ್ಪರ್ಧೆ – 2016: ಕಥೆ ದ್ವಿತೀಯ – ವಿಜಯಲಕ್ಷ್ಮಿ ಕಟ್ಟದಮೂಲೆ

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು)
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಕಥೆ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಕಥೆ.
ಲೇಖಕಿ ವಿಜಯಲಕ್ಷ್ಮಿ ಕಟ್ಟದಮೂಲೆ ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

ಅಜ್ಜಿ ಹೇಳಿದ ಕಥೆ :

ಅಜ್ಜಿ ಹೇಳಿದ ಕಥೆ
“ಅಪ್ಪಾ°… ರಜ ನಿಧಾನಕೆ ಹೋಗಿ… ತುಂಬಾ ಜೋರಾಗಿ ಕಾರಿನ ಓಡುಸಲಾಗ ಅಲ್ಲದಾ ಅಪ್ಪಾ°..” ಪುಟ್ಟು ಮಾಣಿ ಹೇಳಿದ್ದರ ಕೇಳುವವ° ಆರು?
“ಈಗಳೇ ತಡವಾತು.. ಕಾರ್ಯಕ್ರಮ ಸುರು ಆಯೆಕ್ಕಾದರೆ ಎತ್ತೆಕ್ಕು. ಸಮಯಕ್ಕೆ ಯಾವಾಗಳೂ ಬೆಲೆ ಕೊಡೆಕ್ಕು..” ಹೇಳಿಯೊಂಡು ಮತ್ತೂ ಸ್ಪೀಡಿಲ್ಲಿ ಕಾರಿನ ಬಿಟ್ಟೊಂಡು ಹೋದಪ್ಪಗ, ದಾರಿಲಿ ನೆಡಕ್ಕೊಂಡು ಹೋಪ ಅಜ್ಜಂಗೆ ಕುಟ್ಟಿತ್ತು! ಬಿದ್ದ ರಭಸಕ್ಕೆ ಮಾರ್ಗದ ಕರೇಲಿ ಇಪ್ಪ ಮರಕ್ಕೆ ತಲೆ ಬಡುದತ್ತು! ‘ಶಿವ ಶಿವಾ..’ ಹೇಳಿಯೊಂಡು ಅಜ್ಜ° ಬೇನೆಲಿ ಹೊರಳಿದ ದೃಶ್ಯ ಕಂಡು ನರಹರಿಗೆ ಎದೆ ಬಡಿವಲೆ ಸುರುವಾತು. ‘ಅಯ್ಯೋ..ಪಾಪ! ಅಜ್ಜಂಗೆ ತಾಗಿತ್ತು!! ಕಾರು ನಿಲ್ಲಿಸಿ ಅಪ್ಪಾ°..’ ಮಾಣಿ ಗೋಗರದ°. ‘ಆರೋ.. ಏನೋ.. ಮುಟ್ಳೆ ಹೋದರೆ ಎಡವಟ್ಟಕ್ಕು’ ಯೋಚಿಸಿಯೊಂಡು ಹಿಂದೆ ಮುಂದೆ ನೋಡಿದ°. ಆರುದೇ ಇತ್ತಿದ್ದವಿಲ್ಲೆ. ‘ರಜ ಹೊತ್ತು ನಿಂದರೂ ತೊಂದರೆ’ ಹೇಳಿ ಗ್ರೇಶಿಯೊಂಡು ಸೀದಾ ಮಗನ ಶಾಲೆಯ ಹೊಡೆಂಗೆ ಕಾರು ತಿರುಗಿಸಿದ°. ಮಗನ ಶಾಲೆಲಿ ಬಿಟ್ಟಿಕ್ಕಿ, ಅವಂಗೆ ಅಗತ್ಯ ಹೋಯೇಕ್ಕಾದ ಜಾಗಗೆ ಹೋದ°.
ವಾಣಿ, ಪತ್ರಿಕೋದ್ಯಮಲ್ಲಿ ಕಲ್ತುಗೊಂಡು ಇಪ್ಪಗ, ನರಹರಿಯ ಪರಿಚಯ ಆಗಿ ಪ್ರಣಯಕ್ಕೆ ತಿರುಗಿ, ಬಾಳ ಬಂಧನಲ್ಲಿ ಒಂದಾದವು. ಇಬ್ರೂ ಒಂದೇ ‘ಪ್ರೆಸ್ಸ್’ಲ್ಲಿ ಕೆಲಸ ಮಾಡಿಗೊಂಡು ಇತ್ತಿದ್ದವು. ಟೈಪಿಂಗ್ ವಿಭಾಗಲ್ಲಿ ವಾಣಿಗೆ ವಿಷಯಂಗಳ ಸಂಗ್ರಹಿಸಿ ಕೊಡುವ ಕೆಲಸಕ್ಕೆ ಸಹಾಯಕರು ಇತ್ತಿದ್ದವು. ನರಹರಿ ಮುಖ್ಯ ಕಾರ್ಯನಿರ್ವಾಹಕ° ಆಗಿ ಇತ್ತಿದ್ದ°.
ಸಾಧಾರಣ ಕಸ್ತಲಪ್ಪಗ ಐದುಗಂಟೆ ಆಯಿದಾಯಿಕ್ಕು! ಆಫೀಸಿಂದ ಹೆರಡ್ಳೆ ಹೇಳಿ ಅಂದಾಜು ಮಾಡುವಗ…
“ಮೇಡಂ… “ ಈಗ ಬಂದ ಸುದ್ದಿ… “ಹಿರಿಯ ನಾಗರಿಕನ ಕಾಪಾಡಿದ ಆರು ವರ್ಷದ ಸಾಹಸಿ ಬಾಲಕ..’ ಹೇಳಿ ಹೆಡ್ಡಿಂಗ್ ಕೊಟ್ರೆ ಸರಿ ಅಕ್ಕು ಅಲ್ಲದಾ..?” ಹೇಳಿ ವರದಿ ಸಂಗ್ರಹಿಸಿದವು ಹೇಳಿದವು. ಫೋಟೋ ತೋರಿಸಿದವು. ನೋಡಿಯಪ್ಪಗ ವಾಣಿಗೆ ಗಾಬರಿಂದ ಮಾತೇ ಹೆರಡದ್ದೆ ಆತು!!
“ಹಲೋ…ಎಲ್ಲಿದ್ದಿ ನಿಂಗೋ… ಉದಿಯಪ್ಪಗ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಪಗ ಮಗನ ಶಾಲಗೆ ಬಿಟ್ಟಿದಿರಲ್ಲದೋ..?”
“ಹ್ಹಾಂ.. ಅಪ್ಪು…ಎಂತಾತು ಈಗ..?”
“ಈಗ ಕಿರಣ ಎಲ್ಲಿದ್ದ° ಹೇಳಿ ಗೊಂತಿದ್ದಾ..?”
“ಅವ° ಶಾಲೆ ಬಿಟ್ಟು ಮನಗೆ ಎತ್ತಲಾತನ್ನೇ..!?”
“ಆಗಂದಿತ್ತೆ ಮನಗೆ ಫೋನ್ ಮಾಡಿಯೊಂಡೇ ಇದ್ದೆ. ಇನ್ನೂ ಬಯಿಂದಾ° ಇಲ್ಲೆ ಹೇಳಿ ಅತ್ತೆ ಹೇಳಿದವು. ನಿಂಗೊ ಒಂದಾರಿ ಬನ್ನಿ! ಹೆರ ಹೋದರೆ ಹೆಂಡತಿ ಮಕ್ಕಳ ಬಗ್ಗೆ ಗೊಡವೆಯೇ ಇಲ್ಲೆ..” ತಲೆಬೆಶಿ ಅಪ್ಪಲೆ ಸುರುವಾತು ವಾಣಿಗೆ. ಹಾಂಗೆ ಶಾಲೆಯ ನಂಬರಿಂಗೆ ಫೋನು ತಿರುಗಿಸಿತ್ತು.
“ಆರು ಮಾತಾಡುವದು? ಬೇಗ ಹೇಳಿ! ಎಂಗೊಗೆ ಮಾತಾಡುಲೆ ಪುರುಸೊತ್ತಿಲ್ಲೆ. ಎಂತ ವಿಷಯ..?” ಶಾಲೆಯ ಟೀಚರ್ ಗಡಿಬಿಡಿಮಾಡಿತ್ತು.
“’ಕಿರಣ’ ಹೇಳುವ ಮಾಣಿಯ ಅಬ್ಬೆ ಮಾತಾಡುವದು. ಇನ್ನುದೆ ಮಗ° ಶಾಲೆಂದ ಮನಗೆ ಬಾರದ್ದ ಕಾರಣ ಫೋನು ಮಾಡಿದ್ದದು..” ಬೆಗರು ನೀರು ಉದ್ದಿಯೊಂಡತ್ತು ವಾಣಿ. “ಓ..ನಿಂಗಳೋ.. ಒಂದು ‘ಗುಡ್ ನ್ಯೂಸ್’! ನಿಂಗಳ ಮಗ° ಇಲ್ಲಿ ಆರಾಮಕೆ ಇದ್ದ°. ಗಾಬರಿ ಬೇಡ. ಅವನ ಸಾಹಸ ಕೆಲಸ ಕೊಶಿ ಆಗಿ ದೂರದರ್ಶನದವು ಸಂದರ್ಶನ ಮಾಡಿಯೊಂಡು ಇದ್ದವು. ಅವನ ಕರಕ್ಕೊಂಡು ಎಂಗಳೇ ಬತ್ತೆಯೊ°.” ಹೋದ ಜೀವ ಬಂದ ಹಾಂಗಾತು ವಾಣಿಗೆ. ನಿಟ್ಟುಸಿರು ಬಿಟ್ಟೊಂಡು ಗೆಂಡಂಗೆ ಫೋನು ಮಾಡಿತ್ತು.. “ಪೇಪರಿಂಗೆ ವಿಶೇಷ ಶುದ್ಧಿಗೊ ಬತ್ತಾ ಇದ್ದು. ಇನ್ನು ಟಿ.ವಿಲಿ ನ್ಯೂಸ್ ಬಪ್ಪಲಿದ್ದು ನೋಡಿ..!”
ನರಹರಿಗೆ ಒಂದೂ ಅರ್ಥ ಆಯಿದಿಲ್ಲೆ. ‘ಪುಟಾಣಿ ಕಿರಣನ ಸಾಹಸ… ವೃದ್ಧನ ಜೀವ ಉಳಿಸಿದ ಧೀರ ಬಾಲಕ’ ಹೇಳಿ ಬೊಬ್ಬೆ ಹಾಕಿಯೊಂಡು ಇದ್ದ ‘ಸಂಜೆ ಪೇಪರು’ ಮಾರುವ ಮಾಣಿಯ ಕೈಯಿಂದ ಪೇಪರು ತೆಕ್ಕೊಂಡು ನೋಡಿದ°. ಮಗನ ಸಾಧನೆ ಕಂಡು, ಕೇಳಿ ನರಹರಿ ಮೂಕನ ಹಾಂಗಾದ°. ಒಳಾಂದ ಅಪರಾಧಿ ಪ್ರಜ್ಞೆ ಕಾಡಿಯೊಂಡು ಇತ್ತಿದ್ದು.
“ಈಗಾಣ ಕಾಲದ ಮಕ್ಕೊಗೆಲ್ಲ ಇವ° ಮಾದರಿಯಾಗಿದ್ದ° ಒಳ್ಳೆ ರೀತಿಲಿ ಮಗನ ಬೆಳೆಶಿದ್ದಿ ನಿಂಗೊ.. ಮಾರ್ಗದ ಕರೇಲಿ ತಲೆ ಒಡದು ನೆತ್ತರು ಹೋಗಿಯೊಂಡಿಪ್ಪ ಸಂದರ್ಭಲ್ಲಿ ಅಜ್ಜನ ಪ್ರಾಣ ಒಳುಶಿದ ನಿಂಗಳ ಮಾಣಿಯ ಸಮಯಪ್ರಜ್ಞೆ ಮೆಚ್ಚೆಕ್ಕಾದ್ದದೆ..” ಕಿರಣನ ಮನೆಯ ವರೆಗೆ ತಂಉ ಬಿಟ್ಟ ಪೋಲಿಸ್ ಇನ್ಸುಪೆಕ್ಟರ° ‘ಗೌತಮ್’ ನ ಮಾತು ಕೇಳಿ ಮನೆಯವಕ್ಕೆಲ್ಲಾ ಭಾರೀ ಸಂತೋಷ ಆತು. ಅಬ್ಬೆ, ಮಗನ ಅಪ್ಪಿ ಹಿಡುದು ಒಪ್ಪ ಕೊಟ್ಟತ್ತು. ಅಪ್ಪ° ‘ಒಳ್ಳೆ ಕೆಲಸ ಮಾಡಿದ್ದೆ ಮಗಾ°..! ಹೇಳಿ ಕೈ ಕುಲುಕ್ಕಿದ° ಅಲ್ಲಿಂದ ನೆಗೆ ಮಾಡಿಕ್ಕಿ ಮಾಣಿ ಓಡಿಕೊಂಡು ಹೋದ್ದದು ಎಲ್ಲಿಗೆ ಗೊಂತಿದ್ದಾ…?!!!
“ಅಜ್ಜೀ…. ಅಬ್ಬೆ…” ಹೇಳಿಯೊಂಡು ಒಳಾಂಗೆ ಓಡಿದ° ಪುಳ್ಳಿ.
ಇಷ್ಟು ಹೊತ್ತು ಎಲ್ಲಿಗೆ ಹೋಯಿದೆ ನೀನು? ಅಬ್ಬೆ ಅಪ್ಪಂಗೆ ಎಷ್ಟು ಗಾಬರಿ ಆಯಿದು ಗೊಂತಿದ್ದಾ..?” ಅಜ್ಜಿ ಪುಳ್ಳಿಯ ತಲೆಸವರಿಯೊಂಡು ಹೇಳಿದವು.
“ಅಂಬಗ ಅಜ್ಜೀ.. ನಿಂಗೊಗೆ ಹೆದರಿಕೆ ಆಯಿದಿಲ್ಲೆಯಾ..?!”
‘ಧೈರ್ಯ ಇತ್ತಿದ್ದು ಅಜ್ಜಿಗೆ… ಕಸ್ತಲಪ್ಪಗ ಆರು ಗಂಟಗೆ ಕಥೆ ಕೇಳುವ ಸಮಯಕ್ಕಪ್ಪಗ ಎನ್ನ ಮುದ್ದು ಪುಳ್ಳಿ ಎಲ್ಲಿದ್ದರೂ ಓಡಿಯೊಂಡು ಬಕ್ಕು.. ಹೇಳಿ’
“ಅಜ್ಜೀ.. ಅಜ್ಜೀ… ಕಥೆ ಹೇಳಿ ಅಜ್ಜೀ.. “ – ಪುಳ್ಳಿ ಗಿರ್ಗಾಣುಸಲೆ ಸುರುಮಾಡಿದ°
“ಈಗ ಎನ್ನ ಪುಟ್ಟುಗೆ ಹಶುವಾವುತ್ತು. ಅಲ್ಲದೋ..? ಕೈ ಕಾಲು ಮೋರೆ ತೊಳಕ್ಕೊಂಡು ಬರೆಕ್ಕು. ಬೆಶಿ ಬೆಶಿ ದೋಸೆ ತಿಂದಿಕ್ಕಿ, ಜಾಯಿ ಕುಡುದಿಕ್ಕಿ… ಮತ್ತೆ ಕಥೆ ಸುರುವಾವುತ್ತು.” ತುಪ್ಪ ಹಾಕಿ ಆರುಸಿದ ಗರಿ ಗರಿ ದೋಸೆಯ ಒಪ್ಪ ಕೈಲಿ ತೆಗದು ತಿಂಬ ಪುಳ್ಳಿಯ ಚೆಂದ ನೋಡಿಯೊಂಡು ಅಜ್ಜಿಗೆ ಅಜ್ಜನ ನೆಂಪಾತು..
“ಅವು ಇತ್ತಿದ್ದರೆ ಎಷ್ಟು ಸಂತೋಷ ಪಟ್ಟೊಳ್ತಿತವು. ಸಣ್ಣ ಮಕ್ಕೊ ಹೇಳಿರೆ ಭಾರೀ ಪ್ರೀತಿ. ಮಗಂಗೆ ಸೋದರಿಕೆಮ್ದ ಕೂಸು ತರೆಕ್ಕು ಹೇಳಿ ಅವಕ್ಕೆ ಆಶೆ ಇತ್ತಿದ್ದು. ಮಗ° ನರಹರಿಗೆ ಸರ್ವಥಾ ಮನಸ್ಸಿಲ್ಲೆ. ಎನಗೆ ಇಷ್ಟ ಇಪ್ಪ ಕೂಸನ್ನೇ ಆನು ಮದುವೆಯಪ್ಪದು ಹೇಳಿ ಖಡಾಖಂಡಿತವಾಗಿ ಹೇಳಿದ°. ಜಾತಿ ಇಲ್ಲದ್ದ ಕೂಸಿನ ‘ಸೊಸೆ’ ಹೇಳಿ ಒಪ್ಪಿಗೊಂಬಲೆ ಎಡಿಗಾಗದ್ದ ಕೋಪಲ್ಲಿ, ಬೇಜಾರಿಲ್ಲಿ ಆರಿಂಗೂ ಹೇಳದ್ದೆ ಮನೆಬಿಟ್ಟು ಹೋದವು ಎಲ್ಲಿದ್ದವೋ… ಏನೋ?! ವರುಷ ಹತ್ತು ಕಳುದತ್ತು! ಗೆಂಡ° ಬಿಟ್ಟಿಕ್ಕಿ ಹೋದ ಅಂದ್ರಾಣ ದಿನ…
“ಎನ್ನ ಹತ್ತರೆ ಒಂದು ಮಾತು ಹೇಳಿದ್ದರೆ, ಆನುದೆ ಅವರೊಟ್ಟಿಂಗೆ ಹೋವುತ್ತಿತ್ತೆ. ಅಶನ ನೀರು ಬಿಟ್ಟು ಕೂದು ಕಾದರೂ ಬಾರದ್ದಿಪ್ಪಗ, ಮನಸ್ಸಿನ ಕಲ್ಲು ಮಾಡಿಗೊಂಡೆ ದಿನಕ್ಕೊಂದಾರಿ ಕಣ್ಣೀರಿಳಿಸಿ, ಮನಸ್ಸಿನ ಭಾರವ ಹೋಗಿಸಿಕೊಂಡು ಇತ್ತಿದ್ದೆ. ಹೀಂಗೆ ದಿನ ಕಳಕ್ಕೊಂಡು ಇಪ್ಪಗ, ಪುಳ್ಳಿ ‘ಕಿರಣ’ ಹುಟ್ಟಿದ°. ಅವನ ಮೋರೆ ನೋಡಿ ಎಲ್ಲವೂ ಸಂತೋಷಲ್ಲಿ ಇಪ್ಪಲೆ ಕಲ್ತುಗೊಂಡೆ. ನಮ್ಮ ಪ್ರಾಕಿನ ಕಟ್ಟುನಿಟ್ಟಿನ ಕ್ರಮಲ್ಲೇ ಬದುಕ್ಕೆಕ್ಕು ಹೇಳಿರೆ ಕೇಳುವವ° ಆರು?. ಹೊಂದಿಕೊಂಬ ಗುಣ ಇದ್ದರೆ ಎಲ್ಲಿಯೂ ಜೀವನ ತೆಗವಲೆ ಎಡಿಗು..” ಕೈಹಿಡುದ ಗೆಂಡನ ಒಟ್ಟಿಂಗೆ ಕಳುದ ದಿನಂಗಳ ನೆನಪು ಮಾಡಿಯೊಂಡಪ್ಪಗ ಕಣ್ಣಿಲ್ಲಿ ನೀರು ತುಂಬುಕೊಂಡತ್ತು.
“ಅಜ್ಜೀ… ಕಣ್ಣಿಲ್ಲಿ ನೀರು ಬಪ್ಪದು ಹೇಂಗಜ್ಜೀ… ಆನು ಕೂಗಿಯಪ್ಪಗ ಕಣ್ಣಿಲ್ಲಿ ನೀರು ಬತ್ತು. ಹಾಂಗಾದರೆ … ಈಗ ನಿಂಗೊ ಕೂಗಿದ್ದಿರಾ..?
ುಳ್ಳಿಯ ಸೂಕ್ಷ್ಮಬುದ್ಧಿಯ ಕಂಡು ಅಜ್ಜಿಗೆ ಎಂತ ಹೇಳೆಕ್ಕು ಹೇಳಿ ಗೊಂತಾಗದ್ದೆ ‘ಕಣ್ಣಿಂಗೆ ಕಸವು ಬಿದ್ದದು.. ಹಾಂಗಾಗಿ ನೀರು ಬಪ್ಪದು..’ ಹೇಳಿ ಸಮಾಧಾನ ಮಾಡಿದವು. ಚಕ್ಕನಹೆಟ್ಟಿ ಕೂದು ಕಥೆ ಕೇಳ್ಳೆ ರೆಡಿ ಆದ ಪುಳ್ಳಿ. ಅಜ್ಜಿಯ ಮೋರೆಗೆ ನೋಡಿದ°. ‘ಕಣ್ಣಿನ ಕರೇಲಿ ನೀರಿದ್ದಜ್ಜೀ..’ ಹೇಳಿ ಅಜ್ಜಿಗೆ ಮೊಟ್ಟಗೆ ಹತ್ತಿ, ಅವನ ಅಂಗಿಯ ನೆಗ್ಗಿ, ಅಜ್ಜಿಯ ಕಣ್ಣಿನ ಕರೆಯ ಉದ್ದಿದ°. ಮುಗ್ಧ ಮನಸ್ಸಿನ ಪ್ರೀತಿಯ ಕಂಡು ಹೆರಿ ಜೀವ ಧನ್ಯತೆಯ ಪಡದತ್ತು. ಭಾರೀ ಉಲ್ಲಾಸಲ್ಲಿ ಕಥಾಕಾಲಕ್ಷೇಪ ಮಾಡಿದವು.
ಅಜ್ಜಿ-ಪುಳ್ಳಿಯ ಕಥೆ ಮುಗಿವಲಪ್ಪಗ ಅಬ್ಬೆ ಬಂತೇ ಬಂತು. ಹೂಂಕಾರಕುಟ್ಟಿಯೊಂಡು, ಕಣ್ಣರಳಿಸಿ, ಕೆಮಿಯಗಲಿಸಿ, ಕಥೆ ಕೇಳುವ ಮಗನ ನೋಡಿ, ಹೆತ್ತಬ್ಬೆಗೆ ನೆಗೆ ಬಂದು ತಡೆಯ.
ಇನ್ನು ಹೋಂ ವರ್ಕ್ ಎಲ್ಲ ಆಯೆಕ್ಕಷ್ಟೆ.. ಇಂದು ಸುಮಾರು ಬರವಲೆ, ಓದುಲೆ ಇದ್ದು. ನಾಳ್ತಿಂಗೆ ಪರೀಕ್ಷೆ. ಅಂಬಗ ಕಥೆ ಕೇಳ್ಲೆ ಇಲ್ಲೆ ಗೊಂತಾತಾ..?”
“ಅದು ಹೇಂಗಪ್ಪದು!., ಆಗಲೇ… ಆಗ..” ಹಠ ಹಿಡಿವಲೆ ಸುರು ಮಾಡಿದ°…
“ಆ ದಿನ ಸಣ್ಣ ಕಥೆ ಹೇಳುವದು” ಅಜ್ಜಿ ಹೇಳಿಯಪ್ಪಗ ಸಮಾಧಾನ ಆತು ಮಾಣಿಗೆ. ದಿನಾಗ್ಳೂ ಅರ್ಧಗಂಟೆ ಕಥೆಗೆ ಮೀಸಲು. ಅಬ್ಬೆ ಹಾಂಗೆ ತಾಕೀತು ಮಾಡಿದ್ದು. ಇಲ್ಲದ್ರೆ ಹೇಂಗೇ!?
ಈಗಾಣ ಮಕ್ಕೊಗೆ ಯಾವುದೆಲ್ಲ್ಲಾ ಕಲಿಯೆಕ್ಕು! ಸಂಗೀತ, ಚಿತ್ರಕಲೆ, ಡ್ಯಾನ್ಸ್, ಚೆಂಡೆ, ಕೊಳಲು, ಕರಾಟೆ… ಇವೆಲ್ಲಾ ಇಪ್ಪಗ ಎಲ್ಲದಕ್ಕೂ ಸಮಯ ಹೊಂದುಸೆಕ್ಕನ್ನೆ..” ಅಜಿ ಮನಸ್ಸಿಲ್ಲೇ ಮಾತಾಡಿಯೊಂಡವು.
ಪರೀಕ್ಷೆ ಕಳುದು ರಜೆ ಸುರುವಾದ ಕಾರಣ ಅಜ್ಜಿ-ಪುಳ್ಳಿದೇ ಕಾರುಬಾರು!
“ಅಜ್ಜೀ.. ಆಸ್ಪತ್ರೆಲಿ ಇಪ್ಪ ಅಜ್ಜಂಗೆ ಆರೂ ಇಲ್ಲೆಡ. ಇನ್ನೆಲ್ಲಿಗೆ ಹೋಪದು ಅಜ್ಜ°? ನಾಳಂಗೆ ಡಾಕ್ಟ್ರ° ಮನಗೆ ಹೋಪಲಕ್ಕು ಹೇಳಿ ಹೇಳಿದ್ದ°. ಅಜ್ಜನ ನೋಡಿರೆ ಪಾಪನ್ನೇ.. ಹೇಳಿ ತೋರುತ್ತು. ಇಲ್ಲಿಗೆ ಕರಕ್ಕೊಂಡು ಬಪ್ಪನಾ..?”
“ಆರೋ .. ಎಂತದೋ..? ನಾವು ಹೇಂಗೆ ಮನಗೆ ಬರುಸುವದು? ಅಬ್ಬೆ-ಅಪ್ಪನ ಹತ್ತರೆ ಕೇಳೆಕ್ಕು ಅಲ್ಲದೋ..?”
“ಅದೆಲ್ಲ ಬೇಡಜ್ಜೀ… ನಿಂಗೊ ಎಲ್ಲೋರಿಂದಲೂ ದೊಡ್ಡ ಅಲ್ಲದೋ? ನಿಂಗೊ ಹೇಳಿದರೆ ಸಾಕು” ಅಜ್ಜಿಯ ಮಾತಿಂಗೆ ಬೆಲೆಕೊಟ್ಟು ಅಬ್ಬೆ-ಅಪ್ಪನ ಹತ್ತರೆ ಒಂದೇ ಸಮನೆ ಹಟ ಹಿಡುದ°.
“ನಮ್ಮ ಮನೆ, ಧರ್ಮ ಛತ್ರವೂ ಅಲ್ಲ, ವೃದ್ಧಾಶ್ರಮವೂ ಅಲ್ಲ.. ಸುಮ್ಮನೆ ಏನಾರೂ ಹೇಳಿ ತಲೆ ತಿನ್ನೆಡ..” ಅಬ್ಬೆಯ ಮಾತು ಕೇಳಿ ಆತು. ಅಪ್ಪನ ಹತ್ತರೆ ಹೇಳಿಯಪ್ಪಗ, ಪರಂಚಲೆ ಸುರುಮಾಡಿದ°. ಪುಳ್ಲಿಯ ಹಟ ಹೆಚ್ಚಾಗಿಯೊಂಡು ಹೋತು. ಎಲ್ಲೋರು ಅಜ್ಜನ ಕಾಂಬಲೆ ಆಸ್ಪತ್ರೆಗೆ ಹೋದವು. ಅಲ್ಲಿಗೆ ಎತ್ತಿದ್ದೇ ತಡ ಅಜ್ಜನ ಅಪ್ಪಿ ಹಿಡುಕ್ಕೊಂಡಾ. ಅಜ್ಜಂಗೆ ಹೃದಯ ತುಂಬಿ ಬಂತು. “ಪರಮಾತ್ಮನ ರೂಪಲ್ಲಿ ಬಂದು ಎನ್ನ ಕಾಪಾಡಿದ ಮುದ್ದುಕೃಷ್ಣಂಗೆ ಆನು ಎಂತರ ಕೊಡುವದು? ಎಂತದೂ ಇಲ್ಲದ್ದ ಅನಾಥ ಆನು..” ಮನಸ್ಸಿಲ್ಲೇ ಕೊರಗಿದ°. ಚೀಲಲ್ಲಿದ್ದ ಹಾಲು, ಹಣ್ಣು ತೆಕ್ಕೊಂಡು ಮಂಚದ ಹತ್ತರಂಗೆ ಬಂದಪ್ಪಗ ಅಜ್ಜಿಗೆ ಮಾತೇ ಬಾರದ್ದೆ ಆತು. ಅಜ್ಜನುದೆ, ಅಜ್ಜಿಯ ಕಂಡಪ್ಪಗ ತಲೆ ತಗ್ಗುಸಿದ°! ಆಯೇಕ್ಕಾದ ಲೆಕ್ಕ ಎಲ್ಲಾ ಮುಗುಶಿಕ್ಕಿ, ಅಜ್ಜನ ಕರಕ್ಕೊಂಡು ಆಶ್ರಮದ ಹತ್ತರಂಗೆ ಕಾರು ಬಂತು. ಅಜ್ಜಿ ಅಜ್ಜನ ಹೆಸರು ನೋಂದಾವಣಿ ಮಾಡಿ ಆತು.

ಅಜ್ಜ° ಈಗ ಇಲ್ಲಿರಲಿ. ರಜ ದಿನ ಕಳುದು ಮನಗೆ ಕರಕ್ಕೊಂಡು ಹೋಪ°” ಹೇಳಿ ಅಪ್ಪ° ಮಗನ ಸಮಾಧಾನ ಮಾಡಿದ°. ಮಾಣಿಗೆ ಅಲ್ಲಿಂದ ಹೆರಡುಲೆ ಕಾಲೇ ಬಾರ. ಅಬ್ಬೆ ಕೈ ಹಿಡುದು ಕರಕ್ಕೊಂಡು ಬಂದಪ್ಪಗ, ಅಜ್ಜಿಯ ಕಾಣ್ತೇ ಇಲ್ಲೆ!!
“ಅಜ್ಜಿ ಎಲ್ಲಿಗೆ ಹೋದವು?” ಪುಳ್ಳಿ ದೊಡ್ಡಕೆ.. “ಅಜ್ಜೀ..” ಹೇಳಿಯೊಂಡು ಓಡಿದ°. ಅಜ್ಜಿ ಅಜ್ಜನ ಹತ್ತರೆ ನಿಂದುಕೊಂಡು ಇತ್ತಿದ್ದವು!
“ಆನು ಅಜ್ಜನೊಟ್ಟಿಂಗೆ ಇರೆಕ್ಕಾದೋಳು. ನಿಂಗೊ ಹೋಗಿ..” ಅಜ್ಜಿಯ ಮಾತು ಕೇಳಿ ವಾಣಿಯೂ ಕಿರಣನೂ ಬೆರಗಾಗಿ ನೋಡಿಯೊಂಡು ಇತ್ತಿದ್ದವು. ನರಹರಿಗೆ ನಿಜವಾದ ಸಂಗತಿ ಗೊಂತಿದ್ದರೂ, ಗೊಂತಿಲ್ಲದ್ದವರ ಹಾಂಗೆ ಮಾಡಿದ°.
“ಅಜ್ಜಿ ಬಾರದ್ರೆ ಆನುದೆ ಬತ್ತಿಲ್ಲೆ..!” ಹಟ ಹಿಡುದು ಅಜ್ಜಿ-ಅಜ್ಜನ ನಡುವೆ ಹೋಗಿ ನಿಂದು ಇಬ್ರನೂ ಅಪ್ಪಿ ಹಿಡುಕ್ಕೊಂಡ°
“ಇನ್ನೆಂತದೂ ಮಾತಾಡಿ ಪ್ರಯೋಜನ ಇಲ್ಲೆ. ಎನಗೆ ಎನ್ನ ಕೆಲಸಕ್ಕೆ ತಡವಾವುತ್ತು. ನೀನು ಬತ್ತರೆ ಬಾ..” ಹೆಂಡತಿಗೆ ಹೇಳಿಕ್ಕಿ ಕಾರು ಹತ್ತಿದ. ತಲೆಬುಡ ಅರ್ಥ ಆಗದ್ದೆ ವಾಣಿ ಗೆಂಡನ ಹಿಂಬಾಲಿಸಿತ್ತು!!!
ನವಂಬರ್ ಒಂದನೇ ತಾರೀಖು. ಕನ್ನಡ ರಾಜ್ಯೋತ್ಸವದ ದಿನ. ನಾಲ್ಕು ವರುಷಂದ ಹಿಡುದು ಹದಿನಾರು ವರ್ಷದ ವರೆಗೆ ಇಪ್ಪ ಆರು ಜೆನ ಮಕ್ಕೊ ಇಂದು ಪ್ರಶಸ್ತಿ ತೆಕ್ಕೊಂಬಲೆ ಬಹಿಂದವು. ಎಲ್ಲೋರು ಅವಕ್ಕಿಪ್ಪ ಪ್ರಶಸ್ತಿಗಳ ತೆಕ್ಕೊಂಡು ಬಂದವು. ಕಿರಣನ ಹೆಸರು ಹೇಳಿಯಪ್ಪ ಎದ್ದು ನಿಂದವ° ಅಲ್ಲೇ ಬಾಕಿ!
“ಎಂತಕೆ ಪುಟ್ಟಾ..! ವೇದಿಕೆ ಮೇಲೆ ಬಪ್ಪಲೆ ಹೆದರಿಕೆ ಆವುತ್ತಾ..?” ಅಲ್ಲಿಯಾಣ ನಿರೂಪಣೆ ಮಾಡುವವು ಕೇಳಿದವು.
“ಅಪ್ಪು.. ಎನಗೆ ಅಜ್ಜಿ ಒಟ್ಟಿಂಗೆ ಬಂದರೆ ಧೈರ್ಯ ಬತ್ತು”
“ಓ .. ಧಾರಾಳ, ಅಜ್ಜಿಯ ಕರಕ್ಕೊಂಡು ಬಾ..” ಮಾಣಿಯ ಮೋರೆ ಅರಳಿತ್ತು!. ಅಜ್ಜಿಯ ಕೈ ಹಿಡುದು ಬಂದೇ ಬಿಟ್ಟ!! ಪ್ರಶಸ್ತಿ ಕೊಡುವಗ ರಾಜ್ಯಪಾಲರಿಂಗೆ ಕುತೂಹಲ ತಡವಲೆ ಎಡಿಯದ್ದೆ ಪ್ರಶ್ನೆ ಕೇಳೆಕ್ಕಾಗಿಯೇ ಬಂತು!..
“ನಿನ್ನ ಅಜ್ಜಿಯ ಕರಕ್ಕೊಂಡು ಬಪ್ಪಲೆ ಕಾರಣ?..”
“ಎನ್ನ ಈ ಪ್ರಶಸ್ತಿಗೆ ಅಜ್ಜಿ ಹೇಳಿದ ಕಥೆಯೇ ಕಾರಣ..”
“ಅಪರೂಪದ ಘಟನೆ!!” ರಾಜ್ಯಪಾಲ° ಮನಸ್ಸಿಲ್ಲಿ ಯೋಚಿಸಿಯೊಂಡ° .
“ಇಂದು ಸನ್ಮಾನ ಮಾಡಿದ ಎಲ್ಲಾ ಮಕ್ಕಳೂ ಒಂದಲ್ಲ ಒಂದು ರೀತಿಲಿ ಆದರ್ಶರಾಗಿದ್ದು, ಈ ಎಲ್ಲ ಮಿನುಗುವ ನಕ್ಷತ್ರಂಗಲ ಎಡೆಲಿ ಧ್ರುವ ತಾರೆಯಾಗಿ ಕಾಂಬದು ‘ಕಿರಣ’ ಹೇಳುವ ಆರು ವರ್ಷದ ಮಾಣಿ! ಅಪ್ಪ° ಕಾರಿಲ್ಲಿ ಶಾಲಗೆ ಕರಕ್ಕೊಂಡು ಹೋಪಗ ಮಾರ್ಗದ ಕರೆಲಿ ಬಿದ್ದ ಅಜ್ಜನ ಕಂಡಿದ°. ಅಪ್ಪಂಗೆ ಪುರುಸೊತ್ತಿಲ್ಲದ್ದ ಕಾರಣ ಮಗ° ಈ ಕೆಲಸವ ಮಾಡಿದ್ದ°. ಶಾಲೆಂದ ಕೂಡ್ಳೆ ಹೆರಟು, ಅಜ್ಜ ಬಿದ್ದ ಜಾಗಗೆ ಬಂದು ಗಾಯದ ಧೂಳಿನ ಅವನ ಕರವಸ್ತ್ರಲ್ಲಿ ಉದ್ದಿ ಚೀಲಲ್ಲಿಪ್ಪ ಬ್ಯಾಂಡೇಜ್ ಹಾಕಿದ್ದ°. ಬುತ್ತಿಲ್ಲಿಪ್ಪ ಅಶನವ ಅಜ್ಜಂಗೆ ತಿನಿಸಿ, ನೀರು ಕುಡಿಶಿದ್ದ°. ದಾರಿಲಿ ಬಂದೊಂಡು ಇತ್ತಿದ್ದ ಆಟೋರಿಕ್ಷಾವ ನಿಲ್ಲಿಸಿ ಅಜ್ಜನ ಆಸ್ಪತ್ರೆಗೆ ಸೇರಿಸಿದ್ದ°. ‘ಮಾಣಿಯ ಚೀಲಲ್ಲಿ ಬ್ಯಾಂಡೇಜ್ ಎಲ್ಲಿಂದ?’ ಹೇಳ್ವದು ಸಹಜ ಪ್ರಶ್ನೆ. ‘ಶಾಲೆಲಿ ಬಿದ್ದು ತಾಗಿಸಿಕೊಂಡರೆ ಬ್ಯಾಂಡೇಜ್ ಹಾಯೆಕ್ಕು. ಇಲ್ಲದ್ದರೆ ಗಾಯಲ್ಲಿ ಧೂಳು ಕೂದು ಜೋರಕ್ಕು.. ಹೇಳಿ ಅಜ್ಜಿ ಎನ್ನ ಚೀಲಲ್ಲಿ ಇದರ ಹಾಕಿತ್ತಿದ್ದವು.’ ಇದು ಮಾಣಿಯ ಉತ್ತರ!. ಅಬ್ಬೆ-ಅಪ್ಪಂಗೆ ಸಕಾಲಲ್ಲಿ ಉಪಕಾರ ಮಾಡೆಕ್ಕಾದ್ದದು ಮಕ್ಕಳ ಕರ್ತವ್ಯ… ಆರಾದರೂ ಕಷ್ಟ ಕಾಲಲ್ಲಿಪ್ಪಗ, ನಮ್ಮ ಎಲ್ಲ ಕೆಲಸವ ಬಿಟ್ಟು ಅವಕ್ಕೆ ಸಹಾಯ ಮಾಡೆಕ್ಕು.. ಇಂದ್ರಾಣ ಕಾಲಲ್ಲಿ ಹೇಂಗೆ ಬದುಕ್ಕೆಕು ಹೇಳುವದರ ಕಥೆಯ ರೂಪಲ್ಲಿ ಅಜ್ಜಿ ಹೇಳಿಕೊಟ್ಟದು ನಿಜವಾಗಿಯೂ ಮೆಚ್ಚೆಕ್ಕಾದ್ದದೆ. ನಾಲ್ಕನೆಯ ಕ್ಲಾಸು ಓದಿದ ಕಿರಣನ ಅಜ್ಜಿ, ‘ಅಪರೂಪದ ಅಜ್ಜಿ; ಹೇಳುವದರಲ್ಲಿ ಸಂಶಾಯ ಇಲ್ಲೆ. ಮಗ-ಸೊಸೆ ಇಬ್ರೂ ಕೆಲಸಲ್ಲಿಪ್ಪಗ ಅವಕ್ಕೆ ಅವರದ್ದೇ ಆದ ತಲೆಬೆಶಿಗೊ, ಕೆಲಸದ ಒತ್ತಡಂಗೊ ಇರ್ತು. ಅಷ್ಟಪ್ಪಗ ಮಕ್ಕಳ ಕಡೆಂಗೆ ಗಮನ ಕೊಡ್ಳೆ ಎಡಿತ್ತಿಲ್ಲೆ. ಜೋರು ಮಾಡಿಕ್ಕಿ ಕೂರ್ತವು. ಅವು ಉಂಡಿದವೋ..ಮಿಂದಿದವೋ ಹೇಳಿ ನೋಡ್ಳೆ ಕೇಳ್ಳೆ ಪುರುಸೊತ್ತು ಇರ್ತಿಲ್ಲೆ. ಹಾಂಗಿಪ್ಪ ಸಂದರ್ಭಲ್ಲಿ ಅಜ್ಜಿಯಾವು ಇವು ಎಲ್ಲ ಪಾತ್ರಂಗಳ ಸರಿಯಾಗಿ ನಿರ್ವಹಿಸಿದ್ದವು. ಮನೆಯ ಮೇಲ್ತನಿಖೆ, ಪುಳ್ಳಿಯ ಜವಾಬುದಾರಿ, ಟಿ.ವಿ ನೋಡುವದು, ಪೇಪರು ಓದುವದು… ಇದೆಲ್ಲಾ ಅಜ್ಜಿಯ ನಿತ್ಯದ ಕೆಲಸಂಗೊ. ಈಗಾಣ ಕಾಲಲ್ಲಿ ಆರೊಟ್ಟಿಂಗೆ ಹೇಂಗಿರೆಕ್ಕು ಹೇಳುವದು ಸರಿಯಾಗಿ ಗೊಂತಿದ್ದು. ಕಿರಿಯರೊಟ್ಟಿಂಗೆ ಕಿರಿಯರಾಗಿ ಬಾಳೆಕ್ಕು, ಹಿರಿಯರಾಗಿ ತಗ್ಗೆಕ್ಕು! ಅವರ ಪರಿಸ್ಥಿತಿಯ ಅರ್ಥಮಾಡಿಕೊಂಡು ಅವರ ಕಾರ್ಯಕ್ಕೆ ನಾವು ಸಾಥಿಯಾಯೆಕ್ಕು! ‘ಪರೋಪಕಾರಾರ್ಥಮಿದಂ ಶರೀರಂ’ ಇದು ಕಿರಣ ಅಜ್ಜಿಯ ತತ್ವ!!!. ಹೀಂಗಿಪ್ಪ ಹಿರಿಯೋರ ಸಹಾಯ ಹಸ್ತ ಕುಟುಂಬಲ್ಲಿ ಇದ್ದರೆ ಮುಂದಾಣ ಸಮಾಜ ಸಂಬಂಧಂಗಲ ಒಂದುಗೊಡುಸುವಲ್ಲಿ ಯಶಸ್ವಿಯಕ್ಕು..” . ರಾಜ್ಯಪಾಲ° ಭಾಷಣ ಮುಗುಶಿಯಪ್ಪಗ ಸಭಿಕರು ಎಲ್ಲೋರು ಚಪ್ಪಾಲೆ ತಟ್ಟಿದವು. ‘ಕಣ್ಣೆದುರಿಂಗೇ ನೆಡಕ್ಕೊಂಡು ಹೋಪ ದೇವತೆ ಇದ್ದರೂ, ಇಷ್ಟರವರೆಗೆ ತಿಳುಕೊಳದ್ದ ಹೆಡ್ಡತನಕ್ಕೆ ಎಂತಾಳಿ ಹೇಳ್ಳಿ?! ಇಷ್ಟು ದಿನ ಅಜ್ಜ್-ಪುಳ್ಳಿ ಕಥೆ ಹೇಳುವುದಕ್ಕೆ ಕೆಮಿ ಕೊಡದ್ದೆ, ಅವನದ್ದೇ ಆದ ಪ್ರಪಂಚಲ್ಲಿ ಇದ್ದ ನರಹರಿಗೆ, ಅಬ್ಬೆಯ ಸಾರಥ್ಯಲ್ಲಿ ರಥ ನೆಡೆಶುವ ಮಗನ ಕಂಡು ಧನ್ಯತೆಯ ಭಾವನೆ ಮೂಡಿಕೊಂಡತ್ತು!. ‘ಅಜ್ಜಿ ಹೇಳಿದ ಕಥೆ’ ಅಭ್ಹೆ-ಅಪ್ಪ°, ಮಗ-ಸೊಸೆ, ಪುಳ್ಳಿ .. ಎಲ್ಲೋರನ್ನೂ ಒಟ್ಟಿಂಗೆ ಬಾಳುವ ಹಾಂಗೆ ಮಾಡಿತ್ತು.

~*~

Admin | ಗುರಿಕ್ಕಾರ°

   

You may also like...

5 Responses

 1. S.K.Gopalakrishna Bhat says:

  ಒಳ್ಳೆ ಕತೆ. ಮಗ ನರಹರಿಯ ವರ್ತನೆ ರಾಜ ವಿಚಿತ್ರ ಕಾಣುತ್ತು. ಪುಳ್ಳಿಗೆ ಅವು ನಿಜ ಅಜ್ಜನೋ ಹೇಳಿ ಗೊಂತಾಗದ್ದರೂ ಅಜ್ಜಿ ಹೇಳುಲಾವ್ತಿತ್ತು . ಒಟ್ಟಿನಲ್ಲಿ ಒಳ್ಳೆ ನಿರೂಪಣೆ.

 2. S.K.Gopalakrishna Bhat says:

  ರಜ* ಹೇಳಿ ಆಯೆಕ್ಕು

  • Vijayalaxmi Kattadamoole says:

   ಓದಿ ಅಭಿಪ್ರಾಯ ಬರದ್ದದಕ್ಕೆ ಗೋಪಾಲಣ್ಣಂಗೆ ಧನ್ಯವಾದಂಗೊ.

 3. ವಿಜಯಲಕ್ಷ್ಮಿಗೆ ಅಭಿನಂದನೆಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *