ವಿಷುವಿಶೇಷ ಸ್ಪರ್ಧೆ – 2016: ಕವನ ಪ್ರಥಮ : ಸರಸ ಬಿ. ಕಮ್ಮರಡಿ

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು)
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಕವನ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಕವನ.
ಕವಯಿತ್ರಿ ಸರಸ ಬಿ ಕಮ್ಮರಡಿ ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

ವಿಷಯ: ಹೆತ್ತಬ್ಬೆಯ ಶಾಪ – ಪ್ರಕೃತಿ ವಿಕೋಪ

ಎಂತಕಬ್ಬೇ ಈ ರುದ್ರ ಭೀಕರ ಪ್ರತಾಪ
ನೀ ಹೆತ್ತ ಮಕ್ಕಳತ್ರೂ ಕೋಪ ತಾಪ
ಎಷ್ಟು ಪಟ್ಟರೂ ಬೇಜಾರ – ಪಶ್ಚಾತ್ತಾಪ
ಏಕೆ ತೋರ್ಸುತ್ತಿಲ್ಲೆ.. ಕರುಣೆ – ಸಂತಾಪ…!? ||೧||

ಪಚ್ಚೆ ಸಿರಿ ಸಂಪತ್ತಿನ ಸೌಭಾಗ್ಯ ನಿನ್ನೊಡಲು
ಸಕಲರನೂ ಪ್ರೀತಿಲ್ಲಿ ಸಲಹಿ ತೂಗುವ ತೊಟ್ಟಿಲು
ಬರಡಾಗಿ ಹೋತನ್ನೇ ಮಕ್ಕೊ ಹಸಿದು ಉಂಬ ಬಟ್ಟಲು
ಪ್ರಳಯ ಬಕ್ಕೋ ಎಂಗಳಿಲ್ಲಿಂದ ಹೊಡಿ ಹೆಟ್ಟಲು ||೨||

ನಾಗರಿಕತೆಯ ಹೆಸರಿಲ್ಲಿ ನಿನ್ನ ತೊಳುದು ಹತ್ತಿ
ನೀರಿಂಗಾಗಿ ನಿನ್ನ ಬಸರು ಒಟ್ಟೆ – ಕುತ್ತಿ ಕುತ್ತಿ
ಸ್ವಾರ್ಥ ದುರಾಸೆಗಳ ಬಿತ್ತು ಬಿತ್ತಿ
ಮಕ್ಕೊ ಮಸದವು ರೋಷ ದ್ವೇಷದ ಕತ್ತಿ..! ||೩||

ಲೋಕವಿಡೀ ತುಂಬಿತ್ತು ಹಿಂಸೆ ಅನಾಚಾರ
ಅಕ್ಕ ತಂಗೆಕ್ಕಳ ಮೇಲೂ ದೌರ್ಜನ್ಯ – ಅತ್ಯಾಚಾರ
ಎಷ್ಟು ಸಹಿಸುವೆ ಅಬ್ಬೇ ಕಿರಾತಕರ ದುರಾಚಾರ
ಎಲ್ಲರನೂ ಧ್ವಂಸ ಮಾಡುವ ಭಸ್ಮಾಸುರರವತಾರ! ||೪||

ಹಾಳು ಕೆಡವಿದವು ಜೀವಜಲರಾಶಿ
ಕಾಡು – ನಾಡು ಸರ್ವನಾಶ ಸಸ್ಯ ಕಾಶಿ
ನಗರ – ಕಾರ್ಖಾನೆಗಳ ಧೂಳು ಹೊಗೆಯ ಬೆಶಿ
ನಿನ್ನ ಮಡಿಲಿನ ತುಂಬಾ ಕೊಳಕು – ಕಸವು ಹೊದಶಿ ||೫||

ನಿನ್ನ ಮಾನ ಸನ್ಮಾನ ಹಣೆ ಬೊಟ್ಟು ಅಳಿಸಿ
ಅಂದ ಚಂದದ ರೂಪವ ಸೊಲುದು ವಿವಸ್ತ್ರಗೊಳಿಸಿ
ನಿನ್ನ ತಾಳ್ಮೆ – ಸಹನೆಯ ಮೀರಿ ಹದ ತಪ್ಪಿಸಿ
ಅಟ್ಟಾಸು ಕೊಟ್ಟವು ಮಕ್ಕೊ ನೀ ಕೂಗಿದರೂ ಕಣ್ಣೀರು ಹರಿಸಿ..! ||೬||

ತ್ಸುನಾಮಿಯಾಗಿ ಉಕ್ಕಿ ಹರಿದೆಯೋ
ಮೈ ಕುಡುಗಿ ನಡುಗಿ ಬಿರುದೆಯೋ
ಚಂಡಮಾರುತವಾಗಿ ಅಪ್ಪಳಿಸಿದೆಯೋ..
ಅಬ್ಬೇ.. ‘ಕ್ಷಮ ಯಾ ಧರಿತ್ರಿ.. ’ ಹೇಳುವುದರ ಮರೆತೆಯೋ..!? ||೭||

~*~

Admin | ಗುರಿಕ್ಕಾರ°

   

You may also like...

5 Responses

 1. ಬಹು ಒಳ್ಳೆ ಕವನ ಸರಸ.ಪ್ರಸ್ತುತ ಮನುಷ್ಯರಿಂದ ಭೂತಾಯಿಗಪ್ಪ ಕಂಟಕವ ಎತ್ತಿ ತೋರ್ಸುವಲ್ಲಿ ಹೆಚ್ಚಿಂದೂ ಕವರಾಯಿದು { ಕ್ಷಮಿಸುವವರ ಮತ್ತೂ ಮತ್ತೂ ಕ್ಷಮಿಸು ಹೇಳಿ ಕೇಳುದು ಮಾನವರ ಸಹಜ ಗುಣ ಅಲ್ಲೋ!! }

 2. ಲಾಯಕ ಆಯಿದು ಕವನ

 3. S.K.Gopalakrishna Bhat says:

  olle kavana.

 4. ಬೊಳುಂಬು ಗೋಪಾಲ says:

  ಸರಸಕ್ಕಂಗೆ ಅಭಿನಂದನೆಗೊ. ಹೆತ್ತಬ್ಬೆಯ ಮೇಲೆ ನೆಡತ್ತಾ ಇಪ್ಪ ದೌರ್ಜನ್ಯ ಅದು ತೆಕ್ಕೊಂಡ ಪ್ರತೀಕಾರ ಸರಿಯಾಗಿ ಬಯಿಂದು. ಪ್ರಾಸವುದೆ ಲಾಯಕಿದ್ದು.

 5. ರಘು ಮುಳಿಯ says:

  ಭೂಮಾತೆಯ ಹಣೆಬೊಟ್ಟು ಅಳುಶಿ ,ವಿವಸ್ತ್ರಗೊಳುಶಿ ..
  ವಿವಿಧ ರೂಪಕಂಗಳ ಅಳವಡುಶಿದ ಭಾವಪೂರ್ಣ ಕವನ . ಅಭಿನಂದನೆಗೋ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *