ವಿಷುವಿಶೇಷ ಸ್ಪರ್ಧೆ – 2016: ಕವನ ದ್ವಿತೀಯ: ಗೋಪಾಲಕೃಷ್ಣ ಭಟ್ ಎಸ್.ಕೆ

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು)
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಕವನ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಕವನ.
ಕವಿ ಗೋಪಾಲಕೃಷ್ಣ ಭಟ್ ಎಸ್.ಕೆ ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

ವಿಷಯ: ಪ್ರಕೃತಿ ವಿಕೋಪ

ನೀ ಹೀಂಗೆ ಮಾಡಲಕ್ಕೊ?

ಮಳೆರಾಯ ಬಂದ ಕೈಲೆತ್ತಿ ಹಿಡಿದ
ಕಪ್ಪಾದ ಮುಗಿಲಮರಿಗೆ||
ಚೆಲ್ಲಿದನೊ ಇಲ್ಲಿ ಈ ಪಟ್ಟಣಲ್ಲಿ
ಜನವಸತಿ ಮುಂಗುವಾಂಗೆ||೧||

ಆನೊಬ್ಬ ದೊಡ್ದ ಅಧಿಕಾರಿ ಹೇಳಿ
ಎದೆಯೆತ್ತಿ ನಡೆವ ಭೂಪ||
ಆದಲ್ಲೋ ಗುಜರಿ ಎತ್ತಿಂಡು ಹೋಪ
ಆಣೊಬ್ಬನಾಂಗೆ, ಪಾಪ||೨||

ಮಳೆರಾಯನೆದುರು ಆರದ್ದು ಎದುರು?
ಆರಿಂಗು ಇಲ್ಲೆ ದಸುರು||
ಎಲ್ಲೆಲ್ಲೂ ನೀರು, ಮಾರ್ಗಲ್ಲಿ ದೋಣಿ
ಮಾಳಿಗೆಯ ಮನೆಲೂ ಕೆಸರು!||೩||

ಹೀಂಗಿಪ್ಪ ಮಳೆಯ ಎಲ್ಲಿಂದ ತಂದೆ
ಓ ದೇವ, ಎಲ್ಲಿ ಹೋದೆ?||
ಕಾಪಾಡು ನಮ್ಮ ಹೇಳಿಂಡು ಕೈಯ
ಮುಗಿದತ್ತು ಜನರ ಮಂದೆ||೪||

ಮಳೆಸಿಡಿಲ ಕೋಪ , ತಟ್ಟಿತ್ತು ನೆಲವ
ಮಧ್ಯಲ್ಲಿ ಜನರ ಕಷ್ಟ||
ಆರದ್ದು ತಪ್ಪು, ಆರಿಂಗೆ ಗೊಂತು
ಆರಿಂಗೆ ಅಕ್ಕು ಇಷ್ಟ?||೫||

ಹೇಳಿದವು ಗುರುಗೊ, ಹಾಳಬ್ಬೆಯಿಲ್ಲೆ
ಹುಟ್ಟಿದರು ಕೆಟ್ಟ ಮಕ್ಕೊ||
ಈ ಮಾತು ಸಟೆಯೊ , ಏ ಬಾನಿನಬ್ಬೆ
ನೀ ಹೀಂಗೆ ಮಾಡಲಕ್ಕೊ?||೬||

~*~

 

Admin | ಗುರಿಕ್ಕಾರ°

   

You may also like...

5 Responses

 1. ಅಂತೂ ಪ್ರಥಮ , ದ್ವಿತೀಯ ಎರಡು ಕವನಂಗಳ ಆಶಯವೂ ಒಂದೇ ಹೇಳ್ಲಕ್ಕು. ಒಳ್ಳೆ ಕವನ ಗೋಪಾಲ . ಇದು ಚನ್ನೈಲಿ ಆದ ವಿಕೋಪವೋ .ಆ ಮಳೆಯ ಎಳ್ಲಿಂದೇಳು ಭಾಗ ಇಲ್ಲಿಗೀಗ ಬರಲಿ ಹೇಳಿ ಪ್ರಾರ್ಥಿಸುವೋ .

 2. ಕವನ ಒಪ್ಪ ಆಯಿದು.

 3. ಬೊಳುಂಬು ಗೋಪಾಲ says:

  ಗೋಪಾಲಣ್ಣಂಗೆ ಅಭಿನಂದನೆಗೊ. ವಿಭಿನ್ನ ಶೈಲಿಲಿ ಚೆಂದ ಆಯಿದು ಕವನ.

 4. ರಘು ಮುಳಿಯ says:

  ಗೋಪಾಲಣ್ಣ , ಅಭಿನಂದನೆಗೋ . ಮೇಘರಗಳೆಯ ವಸ್ತು ಅದೇ ಛಂದಸ್ಸು .. ಒಳ್ಳೆ ಯೋಚನೆ , ಯೋಜನೆ .ಅಂತ್ಯಪ್ರಾಸದೊಟ್ಟಿ೦ಗೆ ಲಯಬದ್ಧವಾಗಿ ಹಿತವಾಗಿ ಮೂಡಿದ್ದು .

 5. S.K.Gopalakrishna Bhat says:

  ಧನ್ಯವಾದ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *