ವಿಷುವಿಶೇಷ ಸ್ಪರ್ಧೆ – 2016: ಲಘುಬರಹ ಪ್ರಥಮ: ಪೂರ್ಣಿಮಾ ಭಟ್ಟ ಸಣ್ಣಕೇರಿ

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು)
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಲಘುಬರಹ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಲೇಖಕಿ ಪೂರ್ಣಿಮಾ ಸಣ್ಣಕೇರಿ ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

 ‘..ಯನ್ ಅಮ್ಮ ಮಾಡಿದ್ ಸಾರಿನಾಂಗಲ್ಲ ಬಿಡು‘

ಯನ್ನ ಮದ್ವೆಯಾದ ಹೊಸಾತು. ಆವಾಗಿನ ಕಥೆ ಇದು. ಇಪ್ಪತ್ಮೂರು ವರ್ಷ ದರದ್ದಿವಸ ತೆಳ್ಳೇವು, ತುಪ್ಪ-ಬೆಲ್ಲ, ತಂಬ್ಳಿ, ಅಪ್ಪೇಹುಳಿ, ಸಾಸ್ವೆ ತಿಂದ್ಕಂಡು ದೊಡ್ಡಾದ ಕೂಸು ಆನು. ಇಪ್ಪತ್ನಾಲ್ಕು ವರ್ಷಕ್ಕೆ ಮದ್ವೆಯಾತ ಇಲ್ಯ, ಒಂದು ಯು.ಕೆ (ಉತ್ತರ ಕನ್ನಡ) ಬಿಟ್ಟು ಇನ್ನೊಂದು ಯು.ಕೆ (ಯುನೈಟೆಡ್ ಕಿಂಗ್ಡಮ್)ಗೆ ಹೋದಿ. ಅಪ್ಪ-ಆಯಿಗಿಂತಾ ಮೊದ್ಲು ಆನೇ ಒಪ್ಗೆ ಕೊಟ್ಟು, ಮಾಣಿ ಗನಾವಾ – ಮನ್ಯೆವ್ವು ಗನಾಜನಾ ಎಲ್ಲಾ ಕೂಲಂಕುಶ ಮಾಡ್ಕಂಡು,ಕಡೀಗೆ ಹಿರಿಯಂದಿಕ್ಕಳ್ ಆಶೀರ್ವಾದ ತಗಂಡು ಆದ ಮದ್ವೆನೇಯಾ ಯಂದು. ಕಾಲೇಜಿಗೆ ಹೊಪ ಟೈಮಲ್ಲಿ ಪ್ಯಾಟೆಲ್ಲಿ ರೂಂ ಮಾಡ್ಕ್ಯಂಡು ಇಪ್ಪಕಾದ್ರೆ ಅಣ್ಣಂದಿಕ್ಕಗೆ ಅಡ್ಗೆ ಮಾಡಿ ಹಾಕ್ಯತ್ತಾ, ಅದೂ ಅಲ್ದೇ ಅಪ್ಪನ ಮನೆಲ್ಲಿ ಆಯಿಗೆ ಆವಾಗಿವಾಗ ಅಡ್ಗೆ ಒಳದಲ್ಲಿ ಕಾಲಿಗೆ ಸಿಕ್ಯತ್ತಾ ಇದ್ದಿದ್ದಕ್ಕೆ ಅಡ್ಗೆ ಮಾಡದು ಅಂದ್ರೆ ಕುಮ್ಟಿ ಬೀಳ ಪರಿಸ್ಥಿತಿ ಇತ್ತಿಲ್ಲೆ. ಹಾಂಗೆ ಹೇಳಿ ಪಾಕ ಶೂರೆ, ಪಾಯಸ ಪ್ರವೀಣೆ ಇತ್ಯಾದಿ ಬಿರುದೂ ಯಂಗೆ ಇತ್ತಿಲ್ಲೆ.
ಆನು ಮದ್ವೆ ಆದ ಮಾಣಿ ಮಂಗಳೂರು ಮೂಲದವನಾದ್ರೂ ಹುಟ್ಟಿ ಬೆಳೆದಿದ್ದೆಲ್ಲ ಬೆಂಗ್ಳೂರಲ್ಲೇಯಾ. ಬೆಳ್ಗಾದ್ರೆ ಉಪ್ಪಿಟ್ಟು, ಇಲ್ಲೆ ಉದ್ದಿನ ದ್ವಾಸೆ – ಪಲ್ಯ, ಇಲ್ಲೆ ಪೂರಿ-ಸಾಗು.. ಮಧ್ಯಾನ್ನ ಖಾರ್ ಖಾರ ಚಿತ್ರಾನ್ನ, ಇಲ್ಲೆ ಬಿಸಿ ಬೇಳೆ ಬಾತು ಅಥ್ವಾ ವಾಂಗೀ ಬಾತು, ಅದೂ ಇಲ್ದೇ ಇದ್ರೆ ಚಲೋ ಕುತ್ತುಂಬ್ರಿ ಸೊಪ್ಪು ಹಾಕಿ ಮಾಡಿದ್ ಸಾರು ಜೊತಿಗೆ ಒಂದು ಪಟ್ಟಾನ್ ಪಲ್ಯ… ರಾತ್ರೆಯಪ್ಪಾಗ ಚಪಾತಿ – ಭಾಜಿ, ಅನ್ನ – ಹುಳಿ… ಹೀಂಗಿತ್ತು ಲಿಸ್ಟು!
ಆನು ಮಾಡ ಹಶಿ-ತಂಬ್ಳಿ-ಮೆಣಸ್ಗಾಯಿ-ಮಜ್ಗೆ ಪಳಜಾ ಯಾವ್ದೂ ಈ ಮಹರಾಯನ ನಾಲ್ಗಿಗೆ ರುಚಿ ಹತ್ತತಿತ್ತಿಲ್ಲೆ. ಹೊಸಾ ಹೆಂಡ್ತಿ ಹತ್ರೆ ನೀ ಮಾಡಿದ ಅಡ್ಗೆ ಯಂಗೆ ಸೇರ್ತಿಲ್ಲೆ ಹೇಳಲೆ ಬಾಯಿ ಬರದೇ ಇದ್ರೂ ಪ್ಲೇಟಿನಲ್ಲಿಪ್ಪ ಅನ್ನ-ಪದಾರ್ಥ ಖಾಲಿ ಆಗದೇ ಇದ್ದಿದ್ದು ನೋಡಿ ಯಂಗೇ ಪರಿಸ್ಥಿತಿ ಅರ್ಥ ಆಗ್ತಿತ್ತು.

ಇದು ಹೀಂಗಾದ್ರೆ ಸರಿ ಅಲ್ಲ ಹೇಳಿ, ಮಾರನೆ ದಿನದಿಂದನೇ ದೂರದ ಲಂಡನ್‌ನಿಂದ ಬೆಂಗ್ಳೂರಿನಲ್ಲಿದ್ದ ಅತ್ತೆ ಹತ್ರ ಫೋನ್‌ನಲ್ಲಿ ರೆಸಿಪಿ ಕೇಳಲೆ ಶುರು ಮಾಡದಿ. ಮಧ್ಯಾನ್ನ ನಿಂಬೇಹಣ್ಣಿನ ಚಿತ್ರಾನ್ನದ ಪ್ರಯೋಗ ಆದ್ರೆ ರಾತ್ರೆ ಪೊಂಗಲ್. ಮರುದಿನ ಮಧ್ಯಾನ್ನ ಬಿಸಿ ಬೇಳೆ ಬಾತ್ ಪ್ರಯೋಗ! ಒಂದಿನ ಹೆಸರುಬೇಳೆ ಜಾಸ್ತಿ ಬೆಂದು ಹೋದ್ರೆ ಇನ್ನೊಂದಿನ ತೊಗರಿಬೇಳೆ ಬೇಯ್ತಿತ್ತೇ ಇಲ್ಲೆ..
ಅದ್ರಲ್ಲೂ ಯಮ್ಮನೆಯವನ ಅಮ್ಮ ಅಲಿಯಾಸ್ ಯನ್ನ ಅತ್ತೆ ಮಾಡ ತಿಳಿಸಾರು ಅಂದ್ರೆ ಯಂಗ್ಳ ಬಳಗದಲ್ಲೇ ವರ್ಲ್ಡ್ ಫೇಮಸ್ಸು! ಇಂವ ಒಂದಿನ ’ಅಮ್ಮನತ್ರೆ ತಿಳಿಸಾರಿನ ರೆಸಿಪಿ ಕೇಳು ನೀನು’ ಹೇಳಿದ್ದೇ ತಡ, ಅರ್ಧ ತಾಸು ಫೋನ್‌ನಲ್ಲಿ ಕಂಪ್ಲೀಟ್ ಇನ್‌ಫಾರ್ಮೇಶನ್ನು ತಗಂಡಿ. ಬೇಳೆ ಇಟ್ಟ ಕುಕ್ಕರ್ ಎಷ್ಟು ಶೀಟಿ ಹೊಡ್ಸವ್ವು ಹೇಳದ್ರಿಂದ ಹಿಡ್ದು ವಗ್ಗರಣೆ ಹಾಕಾದ ಮೇಲೆ ಎಷ್ಟೊತ್ತು ಕುದ್ಸವ್ವು ಹೇಳಲ್ಲಿವರಿಗೆ ಕೇಳ್ಕಂಡಿ. ಅಂತೂ ಒಂತಾಸುಗೂಡಿ ತಿಳಿಸಾರು ರೆಡಿ ಮಾಡಿದ ಮೇಲೆ ರುಚಿ ನೋಡನ ಹೇಳಿ ಎರಡು ಹನಿ ಬಾಯಿಗೆ ಹಾಕ್ತಿ… ಅದ್ಭುತ! ಉಪ್ಪು-ಹುಳಿ-ಖಾರ ಎಲ್ಲ ಅಚ್‌ಕಟ್. ಅತ್ತೆ ಮಾಡಿದ್ ಸಾರು ಹುಗುಶಿಡ ನಮ್ನಿ ಆಜು ಇವತ್ತು ಯನ್ನ ಸಾರು, ಊಟಕ್ಕೆ ಕುಂತವ್ವ ಇವತ್ತು ಭಾರೀ ಹೊಗಳ್ತ ಯನ್ನ ಅಡ್ಗೆನ ಅದು.. ಇದು.. ಹೇಳಿ ಆನು ಮನ್ಸಲ್ಲಿ ಡಬ್ಬಲ್ ಡೆಕ್ಕರ್ ಬಸ್ ಹತ್ತಿದವ್ವ ಇಳದ್ನೇ ಇಲ್ಲೆ.
ಅಂತೂ ಮಧ್ಯಾನ್ನ ಬಂದವ್ವ ಊಟಕ್ಕೆ ಕುಂತ. ಸಾರು ಬಡ್ಸಿಕ್ಯಂಡು ಸಮಾ ಊಟ ಮಾಡ್ಜ. ಮತ್ತೆ ಅನ್ನ – ಮತ್ತೆ ಸಾರು.. ಹಿಂಗೇ ಮೂರು ಸಲ ಆತು. ಬಾಯಲ್ಲಿ ಹಂಗೆ ಹೇಳಿ ಉಪ್ಪು-ಉಪ್ಪಿನ ಕಲ್ಲು ಮಾತಿಲ್ಲೆ. ಇನ್ನು ತಡಕಂಬ್ಲಾಗ್ದೇ ’ಸಾರು ಹೆಂಗಾಜು’ ಹೇಳಿ ಆನೇ ಕೇಳ್ದಿ. ’ಚನಾಗಿದೆ. ಅದ್ಕೇ ಬರೀ ಸಾರಲ್ಲೇ ಊಟ ಮಾಡಿದ್ದು. ಆದ್ರೂ.. ಅಮ್ಮ ಮಾಡಿದ್ ಸಾರಿನ ರುಚಿ ಇಲ್ಲ’ ಅಂದ್‌ಬಿಡವ! ಒಂದೇ ಸಲ ತರೆ ಗಿರ್ಕ್ ಅಂತು. ಮದ್ವೆ ಆಗಿ ಬರೀ ಮೂರು ವಾರ ಆಗಿತ್ತೇನ.. ಅಪ್ಪನ ಮನೆ ರೌದ್ರಾವತಾರ ಇವ್ನ್ ಮುಂದೆ ತೋರ್ಸಿರೆ ಪಾಪ ಹೆದ್ರ್ ಹೋಕು ಪಾರ್ಟಿ, ಸಂಜೆ ಬರೀ ಕಾರ್ನ್‌ಫ್ಲೇಕ್ಸ್ ತಿನ್ಸಿರೆ ಸ್ವಲ್ಪ ದಾರಿಗೆ ಬರ್ತಾ ತಗ ಹೇಳಿ ಮನ್ಸಲ್ಲೇ ಅಂದ್ಕಂಡು ಸುಮ್ನಾದಿ ಆವತ್ತು. ಮಾರನೇ ದಿನ ಅತ್ತೆಗೆ ಫೋನ್ ಮಾಡಿ ಸಾರು ಚಲೋ ಆಗಿದ್ ಸುದ್ದಿ ಹೇಳ್ದಾಗ ಖುಶಿ ಆತು ಅದ್ಕೆ. ಮಗ ಹೊಟ್ಟೆ ತುಂಬಾ ಉಂಡ ಹೇಳ ಸಮಾಧಾನ ಬೇರೆ!

ಹೀಂಗೆ ಮುಂದುವರೀತಾ ಇತ್ತು ನಂಗ್ಳ ಸಂಸಾರ. ವರ್ಷ ಕಳೀತ ಬಂದಾಂಗೆ ಅಡ್ಗೆ ಹದಾನೂ ಕೈಲಿ ಕೂತ್‌ತು. ಎಲ್ಲೋ ಅಪರೂಪಕ್ಕೆ ಒಂಚೂರು ಬೆಲ್ಲ ಜಾಸ್ತಿ – ಒಂದು ಹರಳು ಉಪ್ಪು ಕಮ್ಮಿ ಇಂಥದ್ದೇ ಸಣ್ಣ ಪುಟ್ಟ ಎಡವಟ್ಟು ಬಿಟ್ರೆ ಬೇರೆ ಎಲ್ಲ ಅಡ್ಗೆ ಚಲೋನೇ ಆಗ್ತಿತ್ತು. ಮಾಡಿದ್ದೆಲ್ಲ ಖಾಲಿ ಆಗಿ ಪಾತ್ರೆ ಲಕಲಕ ಹೊಳೀವಂಗೆ ತಳದವರೀಗೆ ಆಸೆ-ಪದಾರ್ಥನ ಒಂಚೂರೂ ಬಿಡದೇ ಹಾಕ್ಯಂಬ ಇವನ ನಮ್ನಿ ನೋಡಿ ಸಣ್ ಖುಶೀನೂ ಆಗ್ತಿತ್ತು. ಆವಾಗಿವಾಗ ಒಮ್ಮೊಮ್ಮೆ ’ಚನಾಗಿದೆ’ ಹೇಳ ಶಬ್ದ ಬಂದ್ರೂ ಅದ್ರ ಹಿಂದೆ ’ಅಮ್ಮ ಮಾಡಿದಷ್ಟು…’ ಹೇಳ ವಾಕ್ಯನೂ ಪರಾಮಶಿ ಆಗಿ ಬಂದೇ ಬಿಡ್ತಿತ್ತು. ನಂತ್ರ ಒಂದು ಐದು ನಿಮಿಷದ್ ಕಿಸಿಪಿಸಿ. ಆಮೇಲೆ ಮತ್ತೆಲ್ಲ ಸರಿ!
ಕಡೀಗೊಂದಿನ ಯನ್ ಅಣ್ಣನ ಹೆಂಡ್ತಿ ಅತ್ಗೆ ಹತ್ರ ಹೀಂಗೆ ಲೋಕಾಭಿರಾಮ ಮಾತಾಡ್ತಾ ಇರಕಾದ್ರೆ ಯುಗಾದಿಗೆ ಹೋಳ್ಗೆ ಮಾಡಿದ್ ಸುದ್ದಿ ಬಂತು. ಅದೂ ಆವಾಗ ಹೇಳ್ತಲ.. ’ಅತ್ಗೆ, ಬೆಳಗಾಗೆದ್ದು ಎದ್ನ ಬಿದ್ನ ಹೇಳಿ ಎಲ್ಲ ತಯಾರಿ ಮಾಡ್ಕ್ಯಂಡು ಒಂದು ಐವತ್ ಹೋಳ್ಗೆ ಮಾಡಿದಿದ್ದಿ. ತಿನ್ನಲೂ ಭಾರೀ ಚಲೋ ಆಗಿತ್ತು. ಮೂರು ಹೋಳ್ಗೆ ತಿಂದಮೇಲೆ ನಿನ್ ಅಣ್ಣ, ಆಯಿ ಮಾಡ ಹೋಳ್ಗೆ ನಮ್ನಿ ಆಜಿಲ್ಲೆ ಅಂದ್‌ಬಿಟ್ಟ’ ಅಂತು! ಆವತ್ತು ರಾತ್ರಿ ಆನು ಕಷ್ಟಪಟ್ಟು ಪೂರಿ-ಭಾಜಿ ಮಾಡಿರೂವ ’ಹೆಂಗಾಜು’ ಹೇಳಿ ಅಪ್ಪಿತಪ್ಪಿಯೂ ಕೇಳಿದ್ನೆಲ್ಲೆ! ಅದೆಂತೋ ಹೇಳ್ತ್ವಲಿ, ಎಲ್ಲಾರ್ ಮನೆ ದ್ವಾಸೆನೂ…

ಮಜಾ ಅಂದ್ರೆ, ಕಡೀಗೊಮ್ಮೆ ನಾಲ್ಕು ವರ್ಷ ಕಳದ್ ಮೇಲೆ ಅತ್ತೆ ನಮ್ಮನಿಗೆ ಬಂದು ಒಂದು ತಿಂಗ್ಳು ಉಳದಿತ್ತು. ಅದು ಹೊರಡ ಹಿಂದಿನ ದಿನ ಒಂದು ವಾರಕ್ಕೆ ನಂಗಕ್ಕಿಬ್ರಿಗೆ ಸಾಕಾಗಷ್ಟು ತಿಳಿಸಾರು, ಹಾಗ್ಲಕಾಯಿ ಪಲ್ಯ, ಪುಳಿಯೋಗರೆ ಗೊಜ್ಜು ಎಲ್ಲ ಮಾಡಿಟ್ಟಿತ್ತು. ಅತ್ತೆ ಫ್ಲೈಟ್ ಹತ್ತಿಸಿಕ್ಕೆ ಬಂದಿದ್ ಸಾಯಂಕಾಲ ಬೇರೆಂತ ಮಾಡಲೂ ಉದಾಸೀನ ಆಗಿ ಸ್ವಲ್ಪ ಅನ್ನ ಮಾಡಿ, ಅತ್ತೆ ಮಾಡಿದ್ ತಿಳಿಸಾರೇ ಬಿಸಿ ಮಾಡಿಟ್ಟಿ. ಹೊಟ್ಟೆ ಬಿರಿ ಊಟ ಮಾಡಿದ ಮೇಲೆ ಯಮ್ಮನೆ ಮಾರಾಯ್ರದ್ದು ಮತ್ತೆ ಹಳೇ ಸಲ್ಲು! ’ಚನಾಗಿದೆ, ಆದ್ರೆ ಅಮ್ಮ ಮಾಡಿದ್ ಸಾರಿನಾಂಗಲ್ಲ..’ ವಿಷಯ ಹೇಳಿದ ಕೂಡ್ಲೆ ಹೊಟ್ಟೆ ಹುಣ್ಣಾಪ್ಪಂಗೆ ಇಬ್ರೂ ನಕ್ಕ ಮ್ಯಾಲೆ, ಇನ್ಮುಂದೆ ಸಾಹೇಬ್ರು ’ಅಮ್ಮ ಮಾಡಿದ್…’ ಹೇಳಿ ಮಾತು ತೆಗೆದ್ರೆ ಒಂದ್ ಕಿವಿಲ್ಲಿ ಕೇಳಿ ಇನ್ನೊಂದು ಕಿವಿಲ್ಲಿ ದೂಡ್‌ಬಿಡದೇ ಸರಿಯಾದ್ ಉಪಾಯ ಹೇಳಿ ಡಿಸೈಡ್ ಕೂಡ ಮಾಡ್‌ಬಿಟ್ಟಿ!
ಯನ್ನ ಐದು ವರ್ಷದ್ ಮಗ ಮುಂದೆ ದೊಡ್ಡಾಗಿ, ಸೊಸೆ ಮನಿಗ್ ಕರ್ಕ ಬಂದ್ ಮೇಲೆ, ಆ ಸೊಸೆ ಏನಾದ್ರೂ ಅಡ್ಗೆ ಮಾಡಂತವ್ಳಾಗಿ, ಯನ್ ಮಗನತ್ರ ಹೆಂಗಾಜು ಹೇಳಿ ಕೇಳ್ವಂತವಳಾಗಿ, ಆವಾಗ ಮಗರಾಯ ’ಅಡ್ಡಿಲ್ಲೆ ಚಲೋ ಆಜು, ಆದ್ರೆ ಯನ್ನ ಅಮ್ಮ ಮಾಡಿದಾಂಗಾಜಿಲ್ಲೆ..’ ಹೇಳದನ್ನ ಈ ಪಾಪಿ ಕಿವಿಯಲ್ಲಿ ಕೇಳ್‌ಬಿಟ್ರೆ ಯನ್ನ ಜನ್ಮ ಸಾರ್ಥಕ!

~*~

Admin | ಗುರಿಕ್ಕಾರ°

   

You may also like...

4 Responses

 1. Poornima says:

  ಧನ್ಯವಾದಗಳು.. 🙂

 2. ಬೊಳುಂಬು ಗೋಪಾಲ says:

  ಅಭಿನಂದನೆಗೊ. ಲಘುಬರಹ ಲಾಯಕಿದ್ದು.

 3. S.K.Gopalakrishna Bhat says:

  ಒಳ್ಳೆದಾಯಿದು.ಭರತವಾಕ್ಯ ಅತಿ ಮುಖ್ಯ.-ಅತಿ ಅರ್ಥಗರ್ಭಿತ

 4. ರಘು ಮುಳಿಯ says:

  ರಸಮಯ ಬರಹ . ಅಭಿನಂದನೆಗೋ ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *