ವಿಷುವಿಶೇಷ ಸ್ಪರ್ಧೆ – 2016: ಲಘುಬರಹ ದ್ವಿತೀಯ: ಶೀಲಾಲಕ್ಷ್ಮೀ ವರ್ಮುಡಿ

April 18, 2016 ರ 9:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು)
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಲಘುಬರಹ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕಿ ಶೀಲಾಲಕ್ಷ್ಮೀ ವರ್ಮುಡಿ, ಕಾಸರಗೋಡು ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

ಶಂಕರ ಮಾವನೂ ಬಾಳೆಕಾಯಿ ಪೋಡಿಯೂ….

ನಮ್ಮ ಶಂಕರ ಮಾವಂಗೆ ಒಳ್ಳೆತ ಪೇಚಾಟ ಆದ್ದದು ಅಮೇರಿಕಂದ ಪುಳ್ಳಿ ಬಂದ ಮತ್ತೆ. ಅಂವ ಅಲ್ಲಿ ದಾಕುದಾರ. ರಜೆಲಿ ಊರಿಂಗೆ ಬಂದವಂಗೆ ಅಜ್ಜನ ಕಣ್ಣಕರೆಯೂ ಪಾದವೂ ಬೀಗಿಯೊಂಡಿಪ್ಪದು ಮದಾಲು ಕಣ್ಣಿಂಗೆ ಬಿದ್ದತ್ತು. ಪರೀಕ್ಷೆ ಮಾಡಿ ನೋಡಿಯಪ್ಪಗ ಬಿ.ಪಿ. ಯೂ ಸೀಮೂತ್ರವೂ ರಜ್ಜ ಹೆಚ್ಚೇ ಇತ್ತಿದ್ದು. ಮಾತ್ರೆಗಳ ಪೆಟ್ಟಿಗೆಯೇ ಅಜ್ಜನ ಬುಡಕ್ಕೆ ಬಂತಯ್ಯ…, ಅಬ್ಬೆಯತ್ರೂ ಕಿರಿಯಬ್ಬೆಯತ್ರೂ ಅಜ್ಜಂಗೆ ಕೊಡೇಕಾದ ಊಟ ತಿಂಡಿಯ ಪಟ್ಟಿ ಕೊಟ್ಟ. ಕಾಯಿಸೊಳೆ ದೋಸೆ ಮಾಡಿರೆ ಕಣ್ಣು ಮುಚ್ಚಿ ನಾಲ್ಕೆಲ್ಲ ತಿಂದು ಒಂಡು ಕೌಳಿಗೆ ಸೀವು ಕಾಪಿಯ ಕುಡಿಕೊಂಡಿತ್ತಿದ್ದ ಶಂಕರಮಾವನ ಹತ್ರೆ ಇನ್ನು ಒಣಕ್ಕಟೆ ಚಪಾತಿ ಮಾಂತ್ರ ತಿನ್ನಿ ಹೇಳಿರೆ ಹೇಂಗಾಗೇಡ ನಿಂಗಳೇ ಜಾನ್ಸಿಯೋಳಿ…ಬರಗಾಲಲ್ಲಿ‌ಅಧಿಕ ಮಾಸ ಹೇಳ್ತ ಹಾಂಗೆ ಅದಕ್ಕೆ ಸರಿಯಾಗಿ ಮೊನ್ನೆ ಅವರ ಹೆಂಡತ್ತಿ ಭಾಮೆ ಅತ್ತೆ ಪುಳ್ಳಿಯ ಮನೆಗೆ ಹೋಗಿ ಕೂದೋಂಡಿದವು. ಆ ಪುಳ್ಳಿ ಕೂಸು ಬಸರಿ. ಅದಕ್ಕೆ ಅತಿರಸ ತಿಂಬಲೆ ಬಯಕ್ಕೆಯಾಡ. ಭಾಮೆ ಅತ್ತೆಯ ಅತಿರಸ ಹೇಳಿರೆ ಲೋಕಪ್ರಸಿದ್ಧಿ. ಕೊಂಗಾಟದ ಪುಳ್ಳಿ ಹೇಳುವಾಗ ಮಾಡಿ ಕೊಡದ್ದೆ ಕಳಿಗೋ…? ಅದರ ಇಲ್ಲಿಗೆ ಬಪ್ಪಲೆ ಹೇಳ್ಳೂ ಗೊಂತಿಲ್ಲೆ. ಬಸರಿ ರೆಶ್ಟಿಲ್ಲಿರೇಕು ಹೇಳಿ ಡಾಕ್ಟ್ರೆತ್ತಿ ಹೇಳಿದ್ದಾಡ. ಶಂಕರಮಾವನೂ ಗ್ರೀನ್ ಸಿಗ್ನಲ್ ಕೊಟ್ಟ ಕಾರಣ ಭಾಮೆತ್ತೆ ಈಗ ಪೇಟೆ ವಾಸಿ. ಶಂಕರಮಾವಂಗೆ ದಿನಾಗ್ಳೂ ಕಸ್ತಲಪ್ಪಗ ಕಾಪಿಗೆ ಮಂಗಬಾಳೆಕಾಯಿ ಪೋಡಿಯೇ ಆಯೇಕು. ಅದೂ ಭಾಮೆತ್ತೆಯೇ ಮಾಡಿಕೊಡೇಕು. ಪುಳ್ಳಿ ಮನೆಗೆ ಹೆಂಡತ್ತಿ ಹೋದಮೇಗೆ ಸೊಸೆಕ್ಕೊ ಮಾಡಿಕೊಟ್ಟೊಂಡಿತ್ತಿದ್ದ ಪೋಡಿ ಅವಕ್ಕೆ ಹಿತ ಆಗಿಯೊಂಡಿತ್ತಿದ್ದಿಲ್ಲೆ. ಅಂದ್ರೂ ಪರಂಚಿಯೊಂಡು ತಿಂದೊಂಡಿತ್ತಿದ್ದವು. ಈಗ ಅದಕ್ಕೂ ಕಲ್ಲು ಬಿದ್ದತ್ತು! ಅಜ್ಜಂಗೆ ಎಣ್ಣೆ ಪಸೆ ಸರ್ವತ್ಥಾರಿ ಕೊಟ್ಟಿಕ್ಕಲೆಡಿಯ ಹೇಳಿ ಪುಳ್ಳಿಯ ತಾಕೀತಾಯಿದನ್ನೆ..?

ಪೋಡಿ ತಿಂಬ ಹೊತ್ತಿಂಗೆ ಗೆದ್ದೆಂದ ಕೊಯಿದು ತಂದ ಹಸಿ ನೆಟ್ಟಿಕಾಯಿಗಳ ಸಳ್ಳಿಯೂದೆ ಕೆಂಡಲ್ಲಿ ಸುಟ್ಟ ಎರಡು ಚಪಾತಿಯೂ ಸಕ್ಕರೆ ಹಾಕದ್ದ ಕಾಪಿಯನ್ನೂ ಹಿಡ್ಕೊಂಡು ಪುಳ್ಳಿ ಅಜ್ಜ ಇಪ್ಪಲ್ಲಿಗೆ ಬಂದ (ಸೊಸೆಯಕ್ಕೊಗೆ ಹಾಂಗಿರ್‍ತ ತಿಂಡಿ ಹಿಡ್ಕೊಂಡು ಮಾವನೋರ ಎದರು ಬಪ್ಪಲೆ ಧೈರ್ಯ ಸಾಕಾಯಿದಿಲ್ಲೆ). ಬಿ.ಪಿ., ಶುಗರ್ ಇಪ್ಪವು ಹೇಂಗಿರೇಕು ಹೇಳಿ ಉದಿಯಪ್ಪಾಗಿಂದ ಪುಳ್ಳಿ ಹೇಳಿವದ್ರ ಕೇಳಿ ಕೇಳಿ ಶಂಕರಮಾವನ ಪಿತ್ತ ನೆತ್ತಿಗೇರಿಯೊಂಡೇ ಇತ್ತಿದ್ದು. ಈಗ ಈ ತಿಂಡಿಯ ನೋಡಿ ಅದು ಸ್ಫೋಟ ಆತು. ತೆಕ್ಕೋ…,ಶಂಕರ ಮಾವನ ಭಾಗವತಿಕೆ ಸುರುವಾತಂಯ್ಯ, “ಆನು ಅಂದೇ ಹೇಳಿತ್ತಿದ್ದೆ, ವಕಾಲತ್ತು ಕಲ್ತವು ಮದಾಲು ಮನೆಯವರ ಮೇಗೆ ಕೇಸು ಹಾಕುತ್ತದೂದೆ ದಾಕುದಾರಿಕೆ ಕಲ್ತವು ಮದಾಲು ಮನೆಯವರ ಕೊಲ್ಲುತ್ತದೂದೆ ಹೇಳಿ…., ಏ ಮಾಣಿ, ನೀನೀಗ ಅದ್ರನ್ನೇ ಅಲ್ದೋ ಮಾಡ್ಲೆ ಹೆರಟದು…ಹೇಂ..? ಹೀಂಗಿರ್‍ತದ್ರೆಲ್ಲ ಪುಕ್ಳಿ ತೊಳೆಯದ್ದ ನಿನ್ನ ಆ ಅಮೇರಿಕದವಕ್ಕೆ ಕೊಡು. ಹಂದಿ ಮಾಂಸ, ದನದ ಮಾಂಸ ತಿಂದಿಕ್ಕಿ ಜೀರ್ಣ ಆಯೇಕಾರೆ ಅವಕ್ಕೆ ಹೀಂಗಿರ್‍ತೇ ಆಯೇಕಟ್ಟೇ…. ಆನು ಎರಡೂ ಹೊತ್ತು ಮಿಂದಿಕ್ಕಿ ಗಾಯತ್ರಿ ಜೆಪ, ವಿಷ್ಣು ಸಹಸ್ರನಾಮ, ರುದ್ರ ಎಲ್ಲ ಮುಗಿಶಿಕ್ಕಿಯೇ ಊಟ ಉಪಚಾರ ಮಾಡಿಗೊಂಬವ. ಎನ್ನ ಎಂತಾಳಿ ಜಾನ್ಸಿದ್ದೆ ನೀನು… ಹಿಂಗಿಪ್ಪ ಕಸಂಪಟೆ ತಿಂಬೆ ಹೇಳಿಯೋ…,ಹೇಂ?

ಎನಗೆ ಬರೇ ಕಾಪಿ ಸಾಕು” ಹೇಳಿ ಮೋರೆ ಪೀಂಟ್ಸಿಯೊಂಡು ಕಾಪಿಯ ಒಂದು ಮುಕ್ಳಿ ಕುಡುದ್ದವೋ ಇಲ್ಲ್ಯೋ…ಥೂ….ಲೆ… ಹೇಳಿ ಗ್ಲಾಸಿಂಗೆ ಅದರ ಇರೂವಾರ ತುಪ್ಪಿಕ್ಕಿ, “ಈಗಳೇ ಭಾಮೆಯ ಕರಕ್ಕೊಂಡು ಬಾ ನೊಡ್ವೋಂ… ಎನಗೆ ಬೆಕಾದ್ದರ ಮಾಡಿ ಕೊಡೇಕಾರೆ ಅದೇ ಆಯೇಕಟ್ಟೆ…, ಇದೆಂತರ ದನಕ್ಕೆ ಮಡುಗಿದ ಅಕ್ಕಚ್ಚಿನ ಎನಗೆ ತಂದು ಕೊಟ್ಟದೋ… ಇಷ್ಟೆಲ್ಲ ಕಲ್ಶಿದ್ದಕ್ಕೆ ನೀನು ಹೀಂಗೋ ಮಾಡ್ತದು ಮಾಣಿ.,.ಹೇಂ..? ಎನ್ನ ಕೊಂದು ಹಾಕಲೇ ನೀನು ಬಂದದು…” ಅಜ್ಜನ ಆರ್ಭಟೆಗೆ ಪುಳ್ಳಿ ಜಗ್ಗಿದ ಹೇಳಿ ನಿಂಗೊ ಜಾನ್ಸಿದಿರೋ? ಅವನೂದೆ ಅದೇ ಶಂಕರ ಮಾವನ ನೆತ್ತರೆ ಅಲ್ದೋ ಹೇಳಿ… ಅಜ್ಜನ ತಾಂಡವ ನೃತ್ಯಕ್ಕೆ ಪುಳ್ಳಿಯ ಕಾಳಿಂಗ ಮರ್ದನ…. ಅಂತೂ ಇಂತೂ ಇವರಿಬ್ರ ಬಯಲಾಟಲ್ಲಿ ಚಟ್ನಿ ಆದ್ದದು ಸೊಸೆಯಕ್ಕೊ. ಮೂರನೆ ದಿನ ಉದೀಯಪ್ಪಗಳೇ ಶಂಕರಮಾವನ ಬೊಬ್ಬೇ ಬೊಬ್ಬೆ…,
“ಆನು ಪಾಯಿಖಾನೆಲಿ ಕೂದು ಆರ್ಧಘಂಟೆ ಆತು…, ಇನ್ನೂ ಶೋಧನೆ ಆಯಿದಿಲ್ಲೆ…, ಇನ್ನು ಮೀಯಾಣ, ಜೆಪ ಎಲ್ಲ ಆವುತ್ತದು ಯೇವಾಗ…ಹೇಂ? ಅಯ್ಯೋ ಹೊಟ್ಟೆ ಬೇನೇ…ತಡವಲೆಡಿತ್ತಿಲ್ಲೇ….,ಎನಗೊಂದೆಲ್ಲಟ್ಟು ವಿಷಾರೂ ಕೊಟ್ಟಿಕ್ಕಿ….ಭಾಮೆಯ ಕರಕ್ಕೊಂಡು ಬನ್ನಿ ಹೇಳಿರೆ ಆರಿಂಗೂ ಗಣ್ಯವೇ ಆಯಿದಿಲ್ಲೆ. ಆನೀಗ ಬಾವಿಗೆ ಹಾರಿ ಸಾಯಿತ್ತೇ…ಏ ಮಾಣಿ…, ಇದಾ ಈಗಳೇ ಹೇಳ್ತೆ.., ಆನು ಸತ್ರೆ ಬ್ರಹ್ಮಹತ್ಯಾ ದೋಷ ನಿನಗೇ ಬಕ್ಕು… ಹೇಂ..”
ಮಾಣಿಯೂ ಸುಮ್ಮನೆ ಕೂಬ ಗ್ರಾಯಕಿ ಅಲ್ಲ,

“ಅಜ್ಜಾಂ…, ಹೆರ ಹೋಗದ್ರೆ ಸಮಾ ನೀರು ಕುಡಿದ್ರಾತು….”
“ಎಂತರ…? ನೀರೋ…? ಆನಿಲ್ಲಿ ಸಾವಲೆ ಬಿದ್ದಿದಿಲ್ಲೆ, ಬಾಯಿಗೆ ನೀರು ಎರಕ್ಕೊಂಬಲೆ….ಅದೆಲ್ಲ ನಿನ್ನ ಅಮೆರಿಕಾದ ಕಳ್ಳು ಕುಡ್ಕಂಗೊಕ್ಕೆ ಬೇಕಾದ್ದದು…”
“ಹಾಂಗಲ್ಲ ಅಜ್ಜಾ.., ಹೆರ ಹೋಗದ್ದೆ ಕರಳಿಲ್ಲಿ ಒಳುದ ಕಲ್ಮಶಂದಾಗಿ ಮುಂದೆ ಬೇರೆಂತೆಲ್ಲ ಉಪದ್ರ ಸುರು‌ಅಕ್ಕು. ಅದಕ್ಕೆ ಮತ್ತೆ ಬೇರೆ ಚಿಕಿತ್ಸೆ ಆಯೇಕಕ್ಕು. ಈಗಳೇ ನೀರು ಸರೀ ಕುಡುದಿಕ್ಕಿ…,ಅಂಬಗ ತೊಂದರೆ ಆಗ”.

‘ಬೇರೆ ತೊಂದರೆ…, ಚಿಕಿತ್ಸೆ’ ಹೇಳುವದು ಕೇಳಿಯೇ ಶಂಕರಮಾವನ ಪೆರ್ಜೀವ ಹಾರಿ ಹೋತು. ಇನ್ನು ಕಡೇಯಾಣ ಬ್ರಹ್ಮಾಸ್ತ್ರ ಹೆರ ತೆಗೆಯದ್ದೆ ಕಳಿಯ ಹೇಳಿ ಕಂಡತ್ತೋ ಏನೋ…,ಕಣ್ಣು ನೀರು ಹಾಕಿಯೊಂಡು ಪುಳ್ಳಿಗೆ ಕೈಮುಗಿದು ಹೇಳಿದವು,
“ಇದಾ…,ಒಂದಾರಿ ಎನ್ನ ಭಾಮೆಯ ಕರ್‍ಕೊಂಡು ಬಂದಿಕ್ಕು.., ಎನಗೆ ಬೇರೆಂತ್ಸೂ ಬೇಡ…”
ಈಗ ಮಾಂತ್ರ ಪುಳ್ಳಿಗೆ ಛೆ..ಹೇಳಿ ಆತು. ಇಷ್ಟು ಹಿರಯವು ಎನಗೆ ಕೈಮುಗಿತ್ತದೋ..? ಮನೆಯವೂ ಎಲ್ಲ ಅಂವನ ಪುಸ್ಲಾಯಿಸಿ ಅಜ್ಜಿಯ ಕರಕ್ಕೊಂಡು ಬಪ್ಪಲೆ ಕಳ್ಸಿದವು. ಭಾಮೆ ಅತ್ತೆ ಗೆಂಡನ ಕಥೆ ಕೇಳಿ ಕಿಲಕಿಲನೆ ನೆಗೆ ಮಾಡಿದವು. ‘ಎನಗೆ ಗೊಂತಿದ್ದು ಮಾಣಿ..,ಅವರ ರೋಗಕ್ಕೆ ಮದ್ದು… ’,
ಹೇಳಿ ಒಳ್ಳೆ ಮಂಗ ಬಾಳೆಕಾಯಿ ಕೊರದು ಬೆಶಿ ಬೆಶಿ ಪೋಡಿ ಮಾಡಿ ಒಂದು ತಟ್ಟೆ ತುಂಬ ಮಡುಗಿ ಗೆಂಡಂಗೆ ತಿಂಬಲೆ ಕೊಟ್ಟವು ಒಟ್ಟಿಂಗೆ ಒಂದು ಕೌಳಿಗೆ ಸೀವು ಕಾಪಿಯೂದೆ. ಅದರ ತಿಂದು ಅರ್ಧ ಗಂಟೆಯಪ್ಪಗ ಶಂಕರಮಾವ ಹೇಳ್ತದು ಕೇಳಿತ್ತು,

“ಭಾಮೇ.., ಪಾಯಿಖಾನೆಲಿ ನೀರಿದ್ದೋ.. ಹೇಂ?”

“ಓ…,ಇದ್ದೂ..ಇದ್ದೂ…ಆನು ಪೋಡಿ ಮಾಡ್ಲೆ ಕೂಬಾಗಳೇ ತುಂಬ್ಸಿ ಮಡುಗಿತ್ತಿದ್ದೆ…”

ಅಮೇರಿಕಾದ ದಾಕುದಾರ ಪುಳ್ಳಿ ಗೆಬ್ಬಾಯಿಸಿ ನೋಡಿಯೊಂಡೇ ಬಾಕಿ!

~
ಶೀಲಾಲಕ್ಷ್ಮೀ, ಕಾಸರಗೋಡು.

~*~*~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ವಿಜಯತ್ತೆ

  ಒಳ್ಳೆದಿದ್ದು ಶೀಲ ,ಮೊದಲು ಅಯ್ಯೋ ಪಾಪ! ಹೇಳಿ ಜಾನ್ಸಿರೆ ಮತ್ತೆ ನೆಗೆ ಬಂತು. ಮುಗುಷಿದ್ದು ಬಹು ಲಾಯಿಕಾಯಿದು. ಅಂಬಗ ಮೋಷನ್ ಹೋಪಲೆ ಮನಸ್ಸಿನ ಹಿತವೇ ಪ್ರಧಾನ ಹೇಳಿ ಆತು .

  [Reply]

  ಶೀಲಾಲಕ್ಷ್ಮೀ ಕಾಸರಗೋಡು

  sheelalakshmi Reply:

  ವಿಜಯಕ್ಕಾ, ನೆಗೆಯೇ ಜೀವನದ ಟಾನಿಕ್ ಅಲ್ಡೋ…? ಶಂಕರ ಮಾವನ ಪ್ರಕರಣಂದಾಗಿ ನಿಂಗೊಗೆ ಆ ಟಾನಿಕ್ ರಾಜಾ ಸಿಕ್ಕಿದ ಹಾಂಗಾತು ಅಲ್ಡೋ? ಖುಶಿಯಾತು.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಅಭಿನಂದನೆಗೊ. ಪೋಡಿಯ ತಿಂದರೆ ಪೋಡಿಗೆ ಇಲ್ಲೆ ಹೇಳಿದ ಹಾಂಗಾತು. ಲಾಯಕಿತ್ತು.

  [Reply]

  ಶೀಲಾಲಕ್ಷ್ಮೀ ಕಾಸರಗೋಡು

  sheelalakshmi Reply:

  ನಮಸ್ಕಾರ. ಅನಿವಾರ್ಯ ಕಾರಣಂಗಳಿಂದಾಗಿ ಬೈಲಿಂಗೆ ಬಪ್ಪಲಾಯಿದಿಲ್ಲೆ. ಕ್ಷಮಿಸಿ. ಈಗ ನೋಡಿದೆ. ಪ್ರೋತ್ಸಾಹಿಸಿದ ಎಲ್ಲರಿಂಗೂ ಧನ್ಯವಾದಂಗೊ.
  ಅಪ್ಪು. ಬೊಳುಂಬು ಭಾವ, ಪೋಡಿಗೆ ಮನಸ್ಸಿಲ್ಲಿದ್ರೆ ಏವ ಕೆಲಸಾದ್ರು ಅಷ್ಟಕ್ಕಷ್ಟೇ. ಮತ್ತೆ ಹೊಸ ವೈದ್ಯಂದ ಹಳೇ ರೋಗಿ ವಾಸಿ ಅಲ್ಡೋ?

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಲಾಯಿಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 4. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ನಮಸ್ಕಾರ. ಅನಿವಾರ್ಯ ಕಾರಣಂಗಳಿಂದಾಗಿ ಬೈಲಿಂಗೆ ಬಪ್ಪಲಾಯಿದಿಲ್ಲೆ. ಕ್ಷಮಿಸಿ. ಈಗ ನೋಡಿದೆ. ಪ್ರೋತ್ಸಾಹಿಸಿದ ಎಲ್ಲರಿಂಗೂ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ನೆಗೆಬರುಸುವ ಲಘುಬರಹ . ಅಭಿನಂದನೆಗೋ .

  [Reply]

  VA:F [1.9.22_1171]
  Rating: 0 (from 0 votes)
 6. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ದೇವಸ್ಯ ಮಾಣಿಬಟ್ಟಮಾವ°ಶೇಡಿಗುಮ್ಮೆ ಪುಳ್ಳಿಪುತ್ತೂರುಬಾವವಿಜಯತ್ತೆದೊಡ್ಮನೆ ಭಾವಶಾ...ರೀಪೆಂಗಣ್ಣ°vreddhiಚೆನ್ನೈ ಬಾವ°ಅಜ್ಜಕಾನ ಭಾವತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°ಡೈಮಂಡು ಭಾವರಾಜಣ್ಣಅಕ್ಷರ°ಸುವರ್ಣಿನೀ ಕೊಣಲೆಪಟಿಕಲ್ಲಪ್ಪಚ್ಚಿಸರ್ಪಮಲೆ ಮಾವ°ಹಳೆಮನೆ ಅಣ್ಣಚುಬ್ಬಣ್ಣಡಾಗುಟ್ರಕ್ಕ°ಕೊಳಚ್ಚಿಪ್ಪು ಬಾವಕಳಾಯಿ ಗೀತತ್ತೆಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ