ವಿಷುವಿಶೇಷ ಸ್ಪರ್ಧೆ – 2016: ಪ್ರಬಂಧ ಪ್ರಥಮ- ರೇಖಾ ಶ್ರೀನಿವಾಸ್

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು)
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಪ್ರಬಂಧ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಪ್ರಬಂಧ.
ಲೇಖಕಿ ರೇಖಾ ಶ್ರೀನಿವಾಸ್ ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

ಅತಿಯಾದ ನಗರೀಕರಣ ಎಷ್ಟರ ಮಟ್ಟಿಂಗೆ ಸರಿ :

ಒಂದು ತಿಳುಶೆಕ್ಕಾರೆ ಅತಿಯಾದ ನಗರೀಕರಣ ಹೇಳುದು ಒಂದ್ಲೆಕ್ಕಲ್ಲಿ ವರವುದೆ ಅಪ್ಪು, ಶಾಪವುದೆ ಅಪ್ಪು. ಅದರ ನಾವು ಹೇಂಗೆ ತೆಕ್ಕೊಳ್ತೆಯೋ ಹಾಂಗಿದ್ದು. ನವಗೆ ಒಗ್ಗುತ್ತ ಹಾಂಗೆ ತೆಕ್ಕೊಂಬ ಈ ಜೀವನ ಅದಕ್ಕೆ ಸರಿಯಾಗಿಪ್ಪ ವಾತಾವರಣವ ಬಯಸ್ತು ಹೇಳಿದ್ರಲ್ಲಿ ತಪ್ಪಿಲ್ಲೆ. ನಾವಿಪ್ಪ ಜಾಗೆಲ್ಲಿ ಜನಂಗೊ ಎಲ್ಲ ಹೇಂಗೆ ಇರ್ತವೋ ಹಾಂಗೆ ನಾವಿರೆಕ್ಕು ಹೊರ್ತು ‘ಬೆಕ್ಕಿನ ಬಿಡಾರ ಬೇರೆ’ ಹೇಳ್ತಾಂಗೆ ಬದುಕ್ಲೆಡಿಯ. ಹಾಂಗಿಪ್ಪಗ ಹೆಚ್ಚಾವ್ತಿಪ್ಪ ನಗರೀಕರಣ ವ್ಯವಸ್ಥೆಗಳಿಂಗೆ ನಾವು ನಮ್ಮ ಒಪ್ಸಿಕೊಳ್ಳೆಕ್ಕು ಹೇಳಿ ಅರ್ಥ ಅಲ್ಲದಾ? ಇದು ಈಗಾಣ ಕಾಲಕ್ಕೆ ಅನ್ವಯವಾವ್ತ ಹಾಂಗೆ ಹೇಳಿದ್ದಷ್ಟೆ.
ಹಿಂದ್ರಾಣ ಕಾಲದವು ಹೇಳಿರೆ ನಮ್ಮ ಅಜ್ಜ-ಅಜ್ಜಿ ಅವಕ್ಕೆ ಪೇಟೆಲ್ಲಿ ಕೂಬದು ಹೇಳಿರೆ ತಲೆಬೇನೆ ಹೇಳ್ಯೊಂಡಿರ್ತವು ನಾವು ಕೇಳಿರಕ್ಕನ್ನೆ.ಎಂತಕೆ ಹೇಳಿರೆ ಈ ಹೊಸ ನಗರೀಕರಣ ವ್ಯವೆಸ್ಥೆಲಿ ಈಗಾಣವಕ್ಕೆ ಸಿಟಿಲ್ಲಿ ಜಾಗೆ ಸಿಕ್ಕುದು ಐದು ಅಥವಾ ಹತ್ತು ಸೆನ್ಸು.ಅದರಲ್ಲುದೇ ಕಾರು ಶೆಡ್ಡು ಬರೆಕ್ಕು, ಗಾರ್ಡನು ಬರೆಕ್ಕು,ಸ್ವಿಮಿಂಗ್ ಫೂಲ್ ಬರೆಕ್ಕು.ಇವಲ್ಲಿ ಅಜ್ಜ-ಅಜ್ಜಿಯಕ್ಕೊಕ್ಕೆ ಬೇಕಾದ್ದು ಯೇವುದು.?, ಇಲ್ಲೆ. ಹಾಂಗಿಪ್ಪಗ ಅವಕ್ಕೆ ಈ ನಗರೀಕರಣ ಅವಶ್ಯಕತೆ ಇದ್ದೋ ಹೇಳಿ ಎನ್ನ ಪ್ರಶ್ನೆ.? ಆಧುನಿಕ ವ್ಯವಸ್ಥೆಗೋ ಎಲ್ಲ ಆರಿಂಗುದೆ ಹೊಂದಿಕೊಳ್ಲೆ ಆವ್ತಿಲ್ಲೆ. ಆಧುನೀಕರಣದ ಆಡಂಬರವೇ ಈಗಾಣ ಕಾಲದವಕ್ಕೆ ಗೌಜಿ. ಅದರ ಬಿಟ್ಟತ್ತೂ ಹೇಳಿ ಆದರೆ ಜೀವನರಥ ಸಾಗ್ಸುಲೆ ಪಜೀತಿ ಇದೂ ನವಗೆ ಗೊಂತಿರೆಕ್ಕನ್ನೆ.

ಹೆಚ್ಚುತ್ತಿಪ್ಪ ನಗರೀಕರಣ ಪ್ರಜ್ಞೆ ಅಲ್ಲದೆ ಅಪಾಯಂಗೊ :
ನಗರಂಗೊ ದಿನೇ ದಿನೇ ಬೆಳೆತಾ ಇದ್ದು ಮಾಂತ್ರವಲ್ಲದೆ ಅದಕ್ಕೆ ಭೂಮಿ ಒದಗ್ಸುಲೆ ಒಟ್ಟಿಂಗೆ ಕಷ್ಟವಾವ್ತಲೂ ಇದ್ದು. ಈಗ ಭೂಮಿಯ ಮೇಗಣ ಬೆಲೆ ಹೊನ್ನಿನ ಹಾಂಗಾಯ್ದು. ಆದರುದೆ ಈ ಹೊನ್ನಿನ ಕಳದೊಂಡು ಬಿಡ್ತಿದ್ದೆಯೊ. ಭೂಮಿ ದೇವಿಯ ಮಟ್ಟೆ ಬತ್ತುತ್ತಿಪ್ಪ ಈ ಸಂದರ್ಭಲ್ಲಿ ಭೂಮಿಯ ಸಂಕಟವ ಹೇಳ್ಲೆಡಿಯ ಅದು ನೂರೆಂಟಿದ್ದು ಹೇಳಿ ಹೇಳೆಕ್ಕು. ನೆಲಗಳ್ಳರ ಎಡಕ್ಕಿಲಿ ನರಳ್ಯೊಂಡಿಪ್ಪ ಈ ಭೂಮಿ ನಗರೀಕರಣದ ಭರಾಟೆಲಿ ನಿಜ್ವಾಗ್ಲುದೆ ನಶಿಶಿ ಹೋವ್ತಾ ಇದ್ದು.
ಹೆಚ್ಚಾವ್ತ ನಗರೀಕರಣಂದಾಗಿ ಭೂಮಿಯ ಬೆಲೆ ಹೆಚ್ಚಾವ್ತದು ಒಂದೆಡೆಲಿ ಆತು ಹೇಳ್ಯಾದರೆ ಸ್ವಂತ ನೆಲವ ಕಳಕೊಂಡಿರ್ತ ಸಂಕಟ ರೈತ ಜನಂಗಳದ್ದು. ಈ ನಾಡಿನ ರೈತಾಪಿ ವರ್ಗಂಗಳ ಜನಂಗ ಅವರವರ ಅಶನಕ್ಕಾಗಿ ಯೇವುದೇ ಯೋಚನೆ ಮಾಡ್ಯೊಂಡಿರದ್ದೆ ಜೀವನ ಸಾಗ್ಸೋಂಡಿತ್ತಿದ್ದವು. ಈಗ ಎಂತ ಹೇಳ್ರೆ ಈ ನಗರಂಗಳ ವಿಸ್ತರಣಂದಾಗಿ ಕೃಷಿಯೋಗ್ಯ ಭೂಮಿಯುದೇ ಮನೆಗಳಾಗಿಕ್ಕಿ ಪರಿವರ್ತನೆಗೊಂಡಿದ್ದು. ಎಲ್ಲಾ ಕಡೆಯುದೇ ಸೈಟುಗಳದ್ದೇ ಕಾರ್ಬಾರು. ಕೇವಲ ವಾಸ ಮಾಡ್ಕೊಂಡಿರ್ತ ಉದ್ದೇಶ ಮಡಿಕ್ಕೊಂಡು ನಿರ್ಮಾಣ ಆವ್ತ ಸೈಟು, ಲೇಔಟುಗಳೆಲ್ಲವುದೇ ಅಲ್ಲಿರ್ತ ನೆಲವ ಬಂಜರು ಮಾಡಿಕ್ಕಿ ಮನುಷ್ಯ ಬದುಕಿನ ಸ್ಠಿತಿಯ ದುಸ್ತರಗೊಳಿಶ್ತಾ ಇದ್ದು. ಹೀಂಗೆ ನೋಡಿದಾಗ ನಗರೀಕರಣ ನವಗೆ ಒಂದು ದೊಡ್ಡ ಶಾಪ ಆದಿಕ್ಕೆ ಬತ್ತು ಹೇಳಿದ್ರಲ್ಲಿ ತಪ್ಪೆಂತಿದ್ದು.?
ನೀರು,ನೆಲ ವಿಷಪೂರಿತವಾವ್ತಾ ಹೋದಾಂಗೆ ಗಾಳಿಯುದೆ ಒಟ್ಟಿಂಗೆ ಮಲಿನವಾವ್ತು ಹೇಳಿ ನವಗೆ ಈಗಾಗಲೇ ತಿಳುದು ಹೋಯ್ದು. ನಗರೀಕರಣ ಹೆಚ್ಚು ಹೆಚ್ಚು ಬೆಳದೊಂಡು ಹೋದಾಂಗೆ ಮತ್ತಷ್ಟು ಹೊಂಡ ಗುಂಡಿಗೊ,ಮತ್ತಷ್ಟು ರೋಗ ರುಜಿನಂಗೊ ಬೆಳೆತ್ತಾ ಹೋವ್ತು. ನೀರು,ಅಶನ – ಆಹಾರಕ್ಕೆ ಹೇದು ತಾಕಲಾಟ ಶುರುವಾವ್ತು. ಗೆದ್ದೆ ಉಳ್ಕೊಂಡು ಇತ್ತಿದ್ದ ರೈತ ಅವನ ಭೂಮಿಯ ಕಳದೊಂಡು ವ್ಯವಸಾಯಂದ ವಂಚಿತನಾವ್ತ. ಮುಗಾಲು ಮುಟ್ಟಿದ ಬೆಲೆಗೊ,ಅಕಾಶಷ್ಟೆತ್ತರಕ್ಕೆ ಬೆಳದು ನಿಂತ ಕಟ್ತಡಂಗೊ ಅಪಾಯ ತಪ್ಪದು ಮಾಂತ್ರವಲ್ಲದೆ ಮನುಷ್ಯ ಜೀವನವ ತಿಕುಮುಕು ಮಾಡಿಕ್ಕಿ ಇತ್ತೆ ಬದುಕ್ಲೂ ಬಿಡದೆ ಅತ್ತೆ ಸಾವಲೂ ಬಿಡದೆ ಕತ್ತೆರಿ ನೆಡುವಿನ ಅಡಕ್ಕೆಯ ಹಾಂಗೆ ಮಾಡಿ ಬಿಡ್ತು.
ಅಪ್ಪು ಈ ನಗರೀಕರಣ ಪ್ರಜ್ಞೆಂದಾಗಿ ಇಂದು ಬದುಕಿನ ಗದ್ದಲ ಹೆಚ್ಚುತ್ತಿದ್ದು “ಸಂತೆಯೊಳಗೊಂದು ಮನೆಯ ಮಾಡಿ ಶಭ್ಧಗಳಿಗಂಜಿದೊಡೆಂತಯ್ಯಾ” ಇದು ಸರ್ವಜ್ಞ ಹೇಳುತ್ತಿದ್ದ ಮಾತು. ಆದರೆ ಇಂದು ಸಂತೆಯ ಶಬ್ಧ ಕೆಮಿಯ ಹೂಗಳ ಅರಳುಶುತ್ತ ಹಾಂಗೆ ಕೇಳಿಬತ್ತು. ಇದರ ನದುವೆ ಬದುಕು ಸಾಗ್ಸುತ್ತಾ ಇಪ್ಪ ನಮ್ಮೆಲ್ಲರ ಸ್ಥಿತಿಯುದೆ ದಯನೀಯ ಎಂದೇ ಹೇಳೆಕ್ಕಷ್ಟೆ. ಮರೆಯಾದಿಕ್ಕಿ ಹೋದ ಪಕ್ಷಿ ಸಂಕುಲ,ಪ್ರಾಣಿ ಸಂಕುಲಂಗಳ ಎಡೇಲಿ ನಮ್ಮ ಅತ್ಯಮೂಲ್ಯವಾಗಿರ್ತ ವನಸಂಪತ್ತು ನಾಶವಾವ್ತಾ ಇದ್ದು. ಛಿದ್ರೀಕರಣ ಆದೊಂಡಿಪ್ಪ ವ್ಯವಸ್ಥೆಗಳೆಡೆಲಿ ವಿನಾಶದ ಅಂಚಿನತ್ತೆ ಹೋಯ್ಕೊಡಿಪ್ಪ ಗ್ರಾಮಸಂಸ್ಕೃತಿ ಅಳುದು ಧಾವಂತದ,ನಿರ್ಲಜ್ಜೆಯ ಅಮಸರ – ಗಡಿಬಿಡಿಯ ಹೊಸ ನಾಗರಿಕತೆ ಬೆಳೀತಾ ಇದ್ದು.ಮನುಷ್ಯ ಮನಸ್ಸುಗಳೊಳ ಸೌಹಾರ್ಧ ಕಡಮ್ಮೆ ಆದಿಕ್ಕಿ ಅವಿಶ್ವಾಸದ ಅಮಲು ತುಂಬ್ತಾ ಇದ್ದು ಹೇಳ್ಲೆ ನಾಚಿಕೆ ಪಡೆಕ್ಕು.
ವರ್ಷದುದ್ದಕ್ಕುದೇ ನೆಲಲ್ಲಿ ದುಡುದು,ಒಳ್ಳೊಳ್ಳೆಯ ಫಲ ತೆಗದು ಅದರ ಅನುಭವಿಸಿ ಉಣ್ಣುವ ಭೂಮಿಯೇ ಇಲ್ಲವಾಯ್ದು ಹೇಳೊಗ ಎಲ್ಲಿಯೋ ಒಂದ್ಕಡೇಲ್ಲಿ ಬೇನೆಯ ಅನುಭವ ತೀರ್ವವಾದಿಕ್ಕಿ ಕಂಡು ಬಪ್ಪಲೆ ಶುರುವಾವ್ತು. ಹಾಂಗಿಪ್ಪಗ ಈ ನಗರೀಕರಣ ವ್ಯವಸ್ಥೆಂದಾಗಿ ಕಾರ್ಖಾನೆಗಳಂದ ಹೆರ ಬಪ್ಪ ವಿಷಪೂರಿತ ಅನಿಲ,ವಿಷಂದಲೇ ಕೂಡ್ಯೊಂಡಿಪ್ಪ ನೀರು,ನಮ್ಮ ಸ್ವಚ್ಛವಾಗಿರ್ತ ನದಿಮೂಲಗಳ ಕಲುಷಿತ ಮಾಡಿಕ್ಕಿ ಹಲವಾರು ರೋಗಂಗಳ ನವಗೆ ತಂದೊಡ್ಡುತ್ತು ಹೇಳೋದ್ರಲ್ಲಿ ಬೇರೆ ಮಾತೆಂತಕೆ.?ಎಷ್ಟೆಷ್ಟು ಒಳ್ಳೊಳ್ಳೆಯ ಮರಂಗಳ ಕಡುದು ನಾಶ ಮಾಡಿದ್ದರಿಂದ ವಾತವರಣದ ಉಷ್ಣತೆ ಮತ್ತುದೆ ಹೆಚ್ಚಿಕ್ಕಿ ಧ್ರುವ ಪ್ರದೇಶಗಳೆಲ್ಲವುದೇ ಕರಗಿ ನೀರಪ್ಪಲೂ ಸಾಧ್ಯತೆ ಇದ್ದು. ಸಾಗರದ ಮಟ್ಟ ಏರುದು ಮಾಂತ್ರವಲ್ಲ ಸುನಾಮಿ,ಚಂಡಮಾರುತಗಳಾಂಗಿಪ್ಪ ಅಪಾಯಂಗೊ ಕಡಲ ತೀರಗಳಿಂಗೆ ಬೀಸುಲೆ ಸಾಧ್ಯತೆ ಹೆಚ್ಚಿದ್ದು. ಜನಜೀವನದ ಮೇಗೆ ಪರಿಸರ ಮಾಲಿನ್ಯ ಹಲವು ಅಪಾಯಂಗಳ ತಂದೊಡ್ಡಿಕ್ಕಿ ಭೀಕರವಾಗಿರ್ತ ಖಾಯಿಲೆಗಳ ಪಗರ್ಸಿ ಬಿಡಿವ ಛಾನ್ಸು ಇದ್ದು ಹೇಳ್ಲಕ್ಕು.ಹಾಂಗಿಪ್ಪಗ ಪರಂಪರೆಯ ನಾಗರಿಕತೆಗಳೆಲ್ಲವುದೇ ನಾಶವ್ವವ್ತಾ ಹೋದ ಹಾಂಗೆ ನಗರಂಗಳ ಸ್ಥಿತಿ ಅವನತಿಯ ಹಂತಕ್ಕೆ ಎತ್ತಲೂ ಸಾಕು ಎನ್ನುತ್ತ ಅಪಾಯದ ಪ್ರಜ್ಞೆ ನವಗೆಲ್ಲಾ ಇರೇಕಾದ್ದು ಅತ್ಯವಶ್ಯ ಹೇಳಿ ಆನು ಹೇಳ ಬಯಸ್ತೆ.
ಹೆಚ್ಚಾವ್ತ ನಗರೀಕರಣಂದಾಗಿ ನಾವೆಲ್ಲೋರುದೇ ಅತೀ ಇಷ್ಟ ಪಟ್ಟೊಂಡಿತ್ತಿದ್ದ ಪ್ರಾಣಿಗೊ,ಪಕ್ಷಿಗೊ ಎಲ್ಲವುದೇ ನಮ್ಮ ಕಣ್ಣ ಮುಂದದಲೇ ಅಳಿಶಿ ಹೋವ್ತಾ ಇದ್ದು ಅಲ್ಲದೆ ಪೇಟೆಲಿಪ್ಪ ಜೂಗಳಲ್ಲಿ ಅವುಗಳ ನೋಡ್ಲೆ ಹೋಯೆಕ್ಕಾದ್ದು ಎಷ್ಟೊಂದು ಶೋಚನೀಯ ಹೇಲ್ರೆ ಹೇಳ್ಲೆಡಿಯಾಗಷ್ಟು.
ಹಳ್ಳೀಲಿಪ್ಪ ಹೂಗಿನ ಸೆಸಿಗೊ,ತೆಂಗಿನ ತೋಟಂಗೊ,ಗೆದ್ದೆ ಹೊಲಂಗೊ ಎಲ್ಲವುದೇ ನಿರ್ನಾಮವಾಗಿ ವಿಷಂದಲೇ ತುಂಬಿ ಮೆರೆತ್ತ ಈ ಜಗತ್ತು ಈಗ ಸೃಷ್ಟಿಯಾಯ್ದು.ಆದರೆ, ಒಂದು ಮಾಂತ್ರ ಹೇಳೆಕಾದ್ದು ಅನಿವಾರ್ಯ. ನಮ್ಮ ಹಶುವು ನೀಗುದು ಅಶನಂದಲೇ ಹೊರತು ಕಬ್ಬಿಣ, ಹೊಯ್ಗೆ,ಸಿಮೆಂಟಿಂದ ಅಲ್ಲ ಹೇಳುದು ನೆಂಪಿಲ್ಲಿ ಮಡಿಕ್ಕೊಂಡ್ರೆ ಒಳ್ಳೇದಿತ್ತಿದ್ದು.ಅದಕ್ಕೆ ಈ ನಗರೀಕರಣವ ನವಗೊದಗಿದ ಶಾಪ ಹೇಳುದು ಸತ್ಯ , ಅಲ್ಲದಾ.?
ಆನು ಮತ್ತೊಂದು ಹೇಳ್ಲೆ ಇಷ್ಟ ಪಡ್ತೆ.ನಾವೆಲ್ಲೋರುದೇ ಮನುಷ್ಯ ಪ್ರಯತ್ನಂಗಳ ನಂಬ್ಯೊಳ್ಳೆಕ್ಕೇ ಹೊರತು ಯಂತ್ರ ನಾಗರಿಕತೆಯನ್ನಲ್ಲ ಹೇಳಿಕ್ಕಿ.ಯಂತ್ರಂಗಳ ಚಕಮಕೆಂದ ಮಾನವ ಸಂಪನ್ಮೂಲಗಳ ನಾವಿಂದು ಮೂಲೆಲಿ ಹಾಕಿ ಮಡಿಗಿದ್ದೆಯೊ ಹೇಳುದು ನಗ್ನ ಸತ್ಯ.
ಅತಿಯಾದ ನಗರೀಕರಣ ವರವೋ ಶಾಪವೋ :
ಆಧುನಿಕ ನಾಗರಿಕರಣಲ್ಲಿ ವಿಜ್ಞಾನ ಜೆಗತ್ತು ಅಗ್ರಸ್ಥಾನ ಪಡದ್ದು ಹೇಳುದ್ದರಲ್ಲಿ ಹೆಮ್ಮೆ ಪಡೆಕ್ಕಾದ್ದ ವಿಷ್ಯ. ಮನುಷ್ಯ ಒಬ್ಬ ಜಿಜ್ಞಾಸುಜೀವಿ. ವಿಜ್ಞಾನ ಹೇಳುದು ಇಂದು ಮನುಷ್ಯನ ಸುಖಬಾಳ್ವೆಗೆ ಬೇಕಾಗಿರ್ತ ಸೌಕರ್ಯಂಗಳ ಕೊಡ್ತಾ ಬೈಂದು. ಹೊಸ ರೀತಿಲ್ಲಿ ಹೇಂಗೆ ಜೀವನ ನೆಡೆಶೆಕ್ಕು ಹೇಳುದರ ತಿಳುಶಿ ಕೊಟ್ಟದು ಮಾಂತ್ರವಲ್ಲ ಜೀವನ ಇರುವಿಕೆಯ ನೆಟ್ತಗೆ ಮಾಡಿಕ್ಕಿ ಆಶಾವಾದಗೊಳ್ಳಿದ್ದು. ಶಾರೀರಿಕ ಲವಲವಿಕೆಗೆ,ಸುಖ ಸಂತೋಷಕ್ಕೆ ಬೇಕಾಗಿರ್ತ ಎಲ್ಲ ಅನುಕೂಲಂಗಳೂ ಈ ಹೊಸ ನಗರೀಕರಣ ವ್ಯವಸ್ಥೆಂದಾಗಿ ಸಿಕ್ಕುತಾದರುದೇ ಮನುಷ್ಯ ದೇಹದೊಳಗಣ ಯಂತ್ರ ಸರಿಯಾಗಿ ಕೆಲ್ಸ ಮಾಡ್ತ ಆರೋಗ್ಯ ಕೊಡುತ್ತರಲ್ಲಿ ಹಿಂದಕ್ಕೆ ಬಿದ್ದಿದು ಹೇಳ್ಲೆ ಬೇಸರವಾವ್ತಾ ಇದ್ದು.
ಈಗ ಕೇಳಿದಾಂಗೆ ನಗರೀಕರಣ ಹೇಳೊದು ವರವೋ ಶಾಪವೋ ಹೇಳೊದು ಒಂದು ರೀತಿಲ್ಲಿ ಹೇಳ್ಲೆ ಕಷ್ಟ ಸಾಧ್ಯ. ವರ ಹೇಳ್ರೆ ಗ್ರಾಮೀಣ ಸಂಸ್ಕೃತಿ ಹಾಳಾದ್ದರ ಬಗ್ಗೆ.ಇನ್ನೊಂಡೆಲಿ ಶಾಪ ಹೇಳ್ರೆ ಆಧುನಿಕ ಸೌಲಭ್ಯಂಗಳ ಕೊರತೆ ಹೇಂಗೆ ನಿರ್ವಹಿಸುಲೆ ಸಾಧ್ಯ?ಹೇಳೊದು.
ಮನೆ ಜೆಗಿಲೀಲಿ ನಿಂದು ನೋಡಿರೆ ಸಾಕು ಕಣ್ಣು ಹಾಸುವಷ್ಟು ದೂರಕ್ಕುದೇ ಕಂಡೊಂಡಿತ್ತಿದ್ದ ಹಚ್ಚ ಹಸಿರು ಗೆದ್ದೆಗೋ ಈಗ ಇತಿಹಾಸದ ಕಾಲಗರ್ಭದೊಳ ಹೊಕ್ಕಿ ಬಿಟ್ಟದ್ದಾತು.ಆಳೆತ್ತರಕ್ಕೆ ಮೀರಿ ಬೆಳೆಶ್ಯೊಂಡಿತ್ತಿದ್ದ ಭತ್ತದ ರಾಶಿ ಈಗಣ ಕಾಲದ ಜೆನಂಗೊಕ್ಕೆ ಒಂದು ಹಳೇ ಕಾಲದ ವೈಭವದ ಹಾಂಗೆ ಕಂಡು ಬಪ್ಪಲೆ ಶುರುವಾಯಿದು. ನಗರೀಕರಣಂದಾಗಿ ಮತ್ತೊಂದು ಹೊಸ ಸಮಸ್ಯೆ ಕಾಂಬಲೆ ಶುರುವಾಗ ತೊಡಗಿದ್ದು.ಉಂಬಲೆ ತಿಂಬಲೆ ಹೇಳಿಕ್ಕಿ ಪರರ ಆಶ್ರಯಿಸಿಕೊಂಡಿರೆಕ್ಕಾದ ಸ್ಥಿತಿ ಒದಗಿ ಬೈಂದು.ಬಯಲುಗಳ ನಾಶಂದಾಗಿ ಜೀವ ಜಾಲಂಗಳ ವ್ಯವಸ್ಥೆ ಅಸಮತೋಲನದ ದಾರಿಲ್ಲಿ ಬಿದ್ದಿದ್ದು ಅಲ್ಲದೆ ನಮ್ಮ ಆರೋಗ್ಯದ ಮೇಗೆ ದುಷ್ಪರಿಣಾಮಂಗಳ ಬೀರ್ತಾ ಇದ್ದು. ಹಾಂಗಿಪ್ಪಗ ಇದರ ಒಂದು ರೀತಿಲ್ಲಿ ಶಾಪ ಹೇಳ್ರೆ ತಪ್ಪಪ್ಪಲಿಲ್ಲೆ ಹೇಳಿಕ್ಕಿ ಆನು ಜಾನ್ಸುತ್ತೆ.

ಸೂಕ್ತ ಪರಿಹಾರ :
ಬೆಳದೊಂಡು ಬಂದೊಂಡಿಪ್ಪ ಮನುಕುಲಕ್ಕೆ ವ್ಯವಸ್ಥಿತ ಉದ್ಯೋಗವ ಒದಗ್ಸಿ ಕೊಡುದೇ ನೆಮ್ಮದಿಯ ದಾರಿ.ಹಾಂಗಂದೊಂಡು ಕಾರ್ಖಾನೆಗಳ ತೆರದು ಯಂತ್ರಂಗಳಲ್ಲಿ ಮತ್ತಷ್ಟು ದುಡಿವಲೆ ಪ್ರೇರೇಪ್ಸುದು ಹೇಳಿಕ್ಕಿ ಅಲ್ಲ. ಯಂತ್ರಂಗಳಿಂದ ಮಾನವ ಶಕ್ತಿಯ ಆಧಾರಗಳ ಮೇಗೆ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗೆಕ್ಕು ಹೇಳಿ ಅರ್ಥ. ಮನುಷ್ಯ ಶಕ್ತಿಯ,ಮಾನವ ಸಂಪನ್ಮೂಲವ ಎಲ್ಲವನ್ನುದೇ ನಗರ ಕೇಂದ್ರಿತ ವ್ಯವಸ್ಥೆಗಳಿಂಗೆ ಬಿಟ್ಟು ಕೊಡದೆ ಮೂಲ ಕಸುಬು ಹೇಳಿಕ್ಕಿ ಮನೆಲ್ಲೇ ಕೂದೊಂಡು ಮಾಡ್ಯೊಂಬಲೆಡಿಗಾದ(ಗುಡಿ ಕೈಗಾರಿಕೆ) ವ್ಯವಸಾಯ ಆಧಾರಿತ ಗ್ರಾಮ ಪದ್ಧತಿಗಳಿಂಗೆ ಆದ್ಯತೆ ಕೊಡೊದು. ಈ ನಾಡು ಗಾಂಧೀಜಿಯ ಕನಸಿನ ರಾಮರಾಜ್ಯ ಆಯೆಕ್ಕು ಹೇಳ್ಯಾದರೆ ಪ್ರತಿ ಹಳ್ಳಿಯುದೇ ಉದ್ಧಾರವಾಗೆಕ್ಕಾದ್ದು ಅನಿವಾರ್ಯ. ಹಳ್ಳಿಗೊ ಎಲ್ಲ ಉದ್ಧಾರವಾವ್ತಾ ಹಾಂಗೆ ನಗರಂಗಳಿಂಗೆ ವಲಸೆ ಬಪ್ಪದು ತಪ್ಪುತ್ತು ಅಲ್ಲದ್ದೆ ಅವರವರ ಜಾಗೆಲ್ಲಿಯೇ ಯೋಗ್ಯ ಕಸುಬು ಸಿಕ್ಕಿಕ್ಕಿ ತೃಪ್ತಿ ಪಟ್ಟುಗೊಂಡಿರ್ತವು. ಹೇಳಿ ಅರ್ಥ ಮಾಡ್ಯೊಂಬಲಕ್ಕು.
ಅದೆಷ್ಟೋ ದೊಡ್ಡ ವಿಜ್ಞಾನಿಗೊ ವರದಿ ಮಾಡಿರ್ತ ಲೆಕ್ಕಲ್ಲಿ ನಗರೀಕರಣ ಪ್ರಕ್ರಿಯೆಂದ ವಾತವರಣದ ಉಷ್ಣತೆ ಹೆಚ್ಚಿ ಓಝೋನ್ ಪದರ ಆಶಗೊಂಡಿಕ್ಕಿ ದೇಶದ ಭವಿಷ್ಯ ವಿಪತ್ತಿನ ಅಂಚಿಲಿದ್ದು ಹೇಳ್ತ ಹೇಳಿಕೆ ಕೊಟ್ಟಿದವು. ಈ ವಿಪತ್ತಿನ ಜ್ಞಾನ ನಮ್ಮ ಹಾಂಗಿಪ್ಪ ಎಲ್ಲ ನಾಗರಿಕ ವಾಸಿಗಳಿಂಗೆ, ಎಲ್ಲಾ ರೀತಿ ಕಲ್ತೋರಿಂಗೆ, ದೇಶದ ಉನ್ನತಿ ಬಯಸ್ತಾ ಇಪ್ಪ ಎಲ್ಲೋರಿಂಗುದೇ ಅತ್ಯಗತ್ಯ. ಇಲ್ಲದೆ ಹೋತು ಹೇಳ್ಯಾರೆ ನಮ್ಮ ಪ್ರಾಚೀನ ನಾಗರಿಕತೆಗೊ ನಾಶವಾದ ಹಾಂಗೆ ಈಗಾಣ ನಾಗರಿಕತೆಗೊ ಕೂಡಾ ಒಂದಲ್ಲ ಒಂದಿನ ವಿನಾಶದ(collapse ) ಕಡೆಗೆ ಮೋರೆ ತಿರುಗ್ಸಿ ನಿಲ್ಲುಗು ಹೇಳುವ ಎಚ್ಚರಿಕೆ ಮಾತು ಎಲ್ಲೋರಿಂಗೂ ತಿಳುದಿರೆಕ್ಕು.
ಈ ನಿಟ್ಟಿಲಿ ನಾವೆಲ್ಲೊರುದೇ ಒಗ್ಗಟ್ಟಾಗಿ ಪ್ರಯತ್ನಿಶೆಕ್ಕು ಹೇಳ್ಯೊಂಡು ಮುನ್ನಡೆವ,ಎಂತ ಹೇಳ್ತಿ.?

~
ರೇಖಾ ಶ್ರೀನಿವಾಸ್

~*~*~

Admin | ಗುರಿಕ್ಕಾರ°

   

You may also like...

4 Responses

  1. shyamanna says:

    ತಲೆಬರಹಲ್ಲಿ ದ್ವಿತೀಯ ಹೇಳಿ ಇದ್ದು 🙁

  2. ಪ್ರಥಮ ಬಹುಮಾನ ಗಳಿಸಿದ್ದಕ್ಕೆ ಅಭಿನಂದನೆಗೊ. ವಿಷಯ ಭಾಷೆ ಶೈಲಿ ಎಲ್ಲವೂ ಲಾಯಕಿದ್ದು.

  3. ಓದಿಸಿಕೊಂಡು ಹೋಪ ಒಳ್ಳೆಯ ಪ್ರಭಂಧ. ರೇಖಕ್ಕಂಗೆ ವಿಷೇಷ ಅಭಿನಂದನೆ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *