ವಿಷುವಿಶೇಷ ಸ್ಪರ್ಧೆ – 2016: ಪ್ರಬಂಧ ದ್ವಿತೀಯ – ಶ್ರೀಲತಾ ಹರೀಶ್, ಕುಂಬಳೆ

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು)
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಪ್ರಬಂಧ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಪ್ರಬಂಧ.
ಲೇಖಕಿ ಶ್ರೀಮತಿ ಶ್ರೀಲತಾ ಹರೀಶ್ ಕುಂಬಳೆ ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

ಅತೀ ನಗರೀಕರಣ ವರವೋ ಶಾಪವೋ?

ನಾವು ಸಣ್ಣ ಕ್ಲಾಸುಗಳಲ್ಲಿಪ್ಪಗಳೇ ನಗರ ಹೇಳಿರೆ ಎಂತರ? ಅದರ ವಿಶೇಷ, ವ್ಯತ್ಯಾಸಗಳ ಬಗ್ಗೆ ಸಮಾಜ ವಿಜ್ಞಾನ ವಿಷಯದಡಿ ಕಲಿತ್ತು. ನಗರ ಹೇಳಿರೆ ಹಳ್ಳಿಯ ಜೀವನಕ್ಕಿಂತ, ಆಚಾರ ವಿಚಾರ, ಸಂಸ್ಕಾರ ಸಂಸ್ಕೃತಿ ಎಲ್ಲದರಲ್ಲಿಯೂ ವ್ಯತ್ಯಸ್ತವಾಗಿರ್ತು. ಹಳ್ಳಿಗಿಂತ ಎಷ್ಟೋ ವಿಚಾರಲ್ಲಿ ಮುಂದೆ ಇಪ್ಪ ಒಂದು ವ್ಯವಸ್ಥೆ ಹೇಳಿಯೂ ಹೇಳಲಕ್ಕು, ಅದರ ವ್ಯವಸ್ಥೆ ಸರಿಯಾಗದ್ದೆ ಇದ್ದರೆ ಅದೊಂದು ಅವ್ಯವಸ್ಥೆಯ ಗೂಡು ಹೇಳಿರೂ ತಪ್ಪಾಗ.
ನಗರ್‍ಈಕರಣ ಹೇಳ್ತ ವಿಷಯ ತುಂಬಾ ಸಣ್ಣದಾದರೂ ಅದರ ಬಗ್ಗೆ ಸುಮಾರು ವಿಷಯಂಗೊ ಇದ್ದು. “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು” ಕಾಂಬಲೆ ಸಣ್ಣ ವಿಷಯ ಅದರೆ ಅದರ ಪ್ರಭಾವ ಮಾತ್ರ ದೊಡ್ದದು. ಹೆಸರ್‍ಏ ಹೇಳ್ತ ಹಾಂಗೆ ನಗರ್‍ಈಕರಣ ಹೇಳಿರೆ ಒಂದೇ ಕಡೆ ಹೊಸ ವಾಸಸ್ಥಾನ, ಜೀವನಕ್ಕೆ ಮುಖ್ಯವಾಗಿ ಬೇಕಾಪ್ಪ ಸೌಕರ್ಯಂಗೊ, ಹೊಸ ಉದ್ಯಮಂಗೊ, ಕೆಲಸ, ಆಚಾರ ವಿಚಾರಂಗಳ ಸೃಷ್ಟಿಸಿದ್ದಕ್ಕೆ ಹೆಸರು. ಜನರಿಂಗೆ ಒಗ್ಗಟ್ಟಿನಲ್ಲಿ ಬಲವಿದೆ ಹೇಳಿ ನಿಧಾನಕ್ಕೆ ಗೊಂತಾತು, ಹಾಂಗಾಗಿ ಜಾಗತೀಕರಣ ಹೇಳ್ತ ಒಂದು ವ್ಯವಸ್ಥೆ ಜಾರಿಗೆ ಬಂತು. ಇದರಿಂದಾಗಿ ಇಡೀ ವಿಶ್ವದ ಜನಂಗೊ ಪರಸ್ಪರ ಮುಖಾಮುಖಿ ಆದವು. ವಿಶ್ವದ ಮೂಲೆ ಮೂಲೆಗೂ ಕ್ಷಣಾರ್ಧಲಿ ಪ್ರತಿ ವಿಷಯಂಗಳ ರವಾನೆ ಆತು. ಮನುಷ್ಯರು ಹೊಸ ಚಿಂತನೆಗಳ ಮಾಡಲೆ ಸುರು ಮಾಡಿದವು. ಈ ಜಾಗತೀಕರಣ ನಮ್ಮ ದೇಶ ಭಾರತಕ್ಕೆ ೧೯೯೧ ರಲ್ಲಿ ಪಾದಾರ್ಪಣೆ ಮಾಡಿತ್ತು. ೧೯೯೧ ರಿಂದ ೫ ವರ್ಶದವರೆಗೆ ಅದರ ಗತಿ ರಜ್ಜ ನಿಧಾನವಾಗಿದ್ದತ್ತು. ಮತ್ತೆ ೫ ವರ್ಷಲ್ಲಿ ತನ್ನ ಪ್ರಭಾವ ಬೀರಿ ಬೆಳವಣಿಗೆ ಸುರು ಆತು. ಹೀಂಗಿಪ್ಪ ಜಾಗತೀಕರಣದ ಒಂದು ಪ್ರಭಾವ ಅಥವಾ ಚೊಚ್ಚಲ ಕೂಸು ನಗರೀಕರಣ.
ಅದರ ಹೆಸರ್‍ಏ ಹೇಳ್ತ ಹಾಂಗೆ ನಗರಂಗಳ ಉದ್ಭವ. ಇದರಿಂದಾಗಿ ಹಲವಾರು ವ್ಯವಸ್ಥೆಗಳು ಇದರೊಟ್ಟಿಂಗೆ ಬೆಳೆದು ಬತ್ತು. ನಗರಗಳಲ್ಲಿ ಸಾಮಾನ್ಯವಾಗಿ ಕಂಡು ಬಪ್ಪದು ದೊಡ್ದ ದೊಡ್ದ ಕಟ್ಟಡಂಗೋ, ಹತ್ತರೆ ಮನೆಗಳು, ಕಲುಷಿತ ವಾತಾವರಣ, ವಾಹನ ದಟ್ಟಣೆ, ಇತ್ಯಾದಿ ಕಾಂಬಲೆ ಸಿಕ್ಕುತ್ತು. ಇದು ನಗರಗಳ ಸಾಮಾನ್ಯ ಲಕ್ಷಣಂಗೊ. ನಗರಲ್ಲಿ ಇಲ್ಲದ್ದ ಜನರ ಮನಸ್ಸು ಹಳ್ಳಿಲಿ ಎಂತದೂ ಇಲ್ಲೆ, ಹೇಳಿ ಆದ್ರೆ, ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ ಹೇಳುವ ಭಾವನೆ ಪರಿಸ್ಥಿತಿ ಉಂಟಾದರೆ ಅದು ನಗರೀಕರಣದ ವಿಜಯವೇ ಸರಿ.
ನಗರೀಕರಣ ನಮ್ಮ ದೇಶಲ್ಲಿ ೧೯೯೫ ರ ನಂತರ ತುಂಬ ಬದಲಾವಣೆ ಮಾಡಿತ್ತು. ಅದರ ಫಲವಾಗಿ ಎಲ್ಲರೂ ಹೊಸ ಚಿಂತನೆ ಮಾಡ್ಲೆ ಸುರು ಮಾಡಿದವು, ಎಲ್ಲರೂ ಹಳ್ಳಿ ಬಿಟ್ಟು ನಗರದೆಡೆಂಗೆ ಮೋರೆ ಮಾಡಿ ನಡದವು. ನಗರಲ್ಲಿ ಹೊಸ ಹೊಸ ಉದ್ಯಮಗಳ ಸೃಷ್ಟಿ ಆತು. ಹಾಂಗಾಗಿ ಹೊಸ ಚಿಂತನೆಗಳೊಂದಿಗೆ ಜನರು ನಗರಕ್ಕೆ ಬಂದವು. ಕೆಲವು ಮಂದಿ ನಗರ ಜೀವನವ ಅರಗಿಸ್ಯೊಂಬಲೆ ಎಡಿಯದ್ದವು, ನಗರ ಜೀವನ ಕಷ್ಟ ಹೇಳಿ ತಿಳ್ಕೊಂಡವು ಮಾತ್ರ ಹಳ್ಳಿಲಿ ಒಳುದವು. ಕಲಿತ್ತ ಮಕ್ಕೊ ಕೂಡಾ ತಾನು ಕಲ್ತು ಪೇಟೆಗೆ ಹೋಗಿ ಕೆಲಸಕ್ಕೆ ಸೇರಿದರೆ ಎಲ್ಲವೂ ಸುಗಮ… ಜೀವನ ಸುಖವಗಿರ್ತು ಕಂಡುಗೊಂಡವು. ಹೀಂಗಿಪ್ಪ ಹಲವಾರು ಕಾರಣಂಗೊ ನಗರೀಕರಣದ ಬೆಳವಣಿಗೆಗೆ ಸಹಕಾರಿ ಆತು. ಇನ್ನು ಹಲವು ಕಾರಣಂಗೊ ಈ ರೀತಿಯಾಗಿದ್ದು.
೧. ಹೊಸ ಉದ್ಯಮಂಗಳ ಉದ್ಭವ: ಉದ್ಯಮ ಸುರು ಆದ ಕೂಡ್ಲೆ ಅಲ್ಲಿ ಕೆಲಸ ಮಾಡ್ಲೆ ಜನರ ಅವಶ್ಯಕತೆ ಇರ್ತು. ಹಾಂಗಾಗಿ ಜನರೂ ಪಟ್ಟಣಕ್ಕೆ ಬಪ್ಪಲೆ ಸುರು ಮಾಡಿದವು.
೨. ವಿದ್ಯಾಭ್ಯಾಸ: ನಗರೀಕರಣದ ಪ್ರಭಾವಕ್ಕೆ ಒಳಗಾದ ಒಬ್ಬ ಕಾಲೇಜ್ ವಿದ್ಯಾರ್ಥಿಗೆ ವಿದ್ಯಾಭ್ಯಾಸ ಕಳುದ ಕೂಡಲೇ ಆನು ಮುಂದೆ ನಗರಕ್ಕೆ ಕಲಿವಲೆ ಹೋದರೆ ಒಳ್ಳೆದು ಹೇಳಿ ತೋರ್ತು. ಅಲ್ಯಾಣ ವಿದ್ಯಾಭ್ಯಾಸ ಕ್ರಮ, ಎಲ್ಲಾ ಒಳ್ಳೆದಿರ್ತು. ಅಲ್ಲಿ ಓದಿ ಉಶಾರಾದರೆ ಒಳ್ಳೆ ಕೆಲಸ ಸಿಕ್ಕುಗು ಹೇಳ್ತ ಭರವಸೆ ಇರ್ತು. ಹಾಂಗಾಗಿ ವಿದ್ಯಾರ್ಥಿಗೊ ಕೂಡಾ ನಗರಕ್ಕೆ ಬತ್ತವು. ವಿದ್ಯಾಭ್ಯಾಸಲ್ಲಿ ಕೂಡಾ ಬೇಕಾದ ವಿಷಯವ ತೆಕ್ಕೊಂಡು ಒಂದೇ ವಿಷಯವ ಕಲಿವ ವ್ಯವಸ್ಥೆ ಕೂಡಾ ಇರ್ತು.
೩: ಸಾಮಾಜಿಕ ಜೀವನ ಶೈಲಿ: ನಗರೀಕರಣದ ಮತ್ತೊಂದು ಫಲ ಹೇಳಿರೆ ಎಲ್ಲರನ್ನೂ ಮರುಳು ಮಾಡುವ ಗುಣ. ಅದರಿಂದಾಗಿ ಮನುಷ್ಯಂಗೆ ತಾನು ಪೆತೆಲಿದ್ದರೆ ಒಳ್ಳೇದು, ಜೀವನ ಶೈಲಿ ಬದಲುತ್ತು. ಕೆಲಸ ಸಿಕ್ಕುತ್ತು. ಮನೆ, ಮಕ್ಕೊ ಹೇಳಿ ನಮ್ಮಷ್ಟಕ್ಕೇ ಇಪ್ಪಲಕ್ಕು ಹೇಳ್ತ ಕನಸು ಕಾಣುತ್ತವು. ಆರಾರು ಮಾತಾಡ್ಸುವಾಗ ಆನು ಬೆಂಘ್ಲೂರಿಲ್ಲಿ ಕೆಲಸಲ್ಲಿದ್ದೆ ಹೇಳಿರೆ ಖುಷಿ ಆವುತ್ತು. ಒಟ್ಟಾರೆ ನಮ್ಮ ಜೀವನ ಶೈಲಿ ಬದಲುತ್ತು.
೪: ಹಳ್ಳಿ ಜೀವನ: ಹಳ್ಳಿ ಜೀವನ ಹೇಳಿರೆ ಇಲ್ಲಿ ಎಲ್ಲರೂ ‘ಕೂಪ ಮಂಡೂಕ’ದ ಹಾಂಗೆ ಇರೆಕಾದ ಪರಿಸ್ಥಿತಿ. ಇಲ್ಲಿ ಕೃಷಿಯೇ ಎಲ್ಲರ ಜೀವನಕ್ಕೆ ಆಧಾರ. ಹಳ್ಳಿಲಿಪ್ಪವಕ್ಕೆ ಡೆಲ್ಲಿಲಿ ಎಂತಾವ್ತು ಹೇಳಿ ಗೊಂತಾವ್ತಿಲ್ಲೆ. ಇಲ್ಲಿ ಕಷ್ಟಪಟ್ಟು ಬೆಗರು ನೀರಿಳಿಸಿರೆ ಮಾಂತ್ರ ಹೊಟ್ಟೆ ತುಂಬಾ ಉಂಬಲಕ್ಕಷ್ಟೇ. ಇಲ್ಲದ್ರೆ ಒಪ್ಪತ್ತಿನ ಊಟಕ್ಕೇ ಕಷ್ಟ. ಹಳೆಯ ಚಿಂತಕರ ಪ್ರಕಾರ ನಮ್ಮ ಸಣ್ಣ ಹಳ್ಳಿಗಳಿಂದಲೇ ಗ್ರಾಮವೂ ದೇಶವೂ ಉದ್ಧಾರ ಆಯೆಕ್ಕು ಹೇಳಿ ಹೇಳ್ತವು. ಇದರ ಗತಿ ನಿಧಾನ. ಆದರೆ ಜಾಗತೀಕರಣ ಮತ್ತು ನಗರೀಕರಣದ ಗತಿ ಬೇಗ. ಆದ್ದರಿಂದ ಇದು ಕೂಡಾ ಒಂದು ಕಾರಣ.
೫: ಸ್ವಂತ ಉದ್ಯಮ: ನಗರಲ್ಲಿ ಕಲ್ತು ಉಷಾರಾದರೆ ಅಲ್ಲಿಯೇ ಒಳ್ಳೆ ಕಂಪೆನಿಲಿ ಕೆಲಸ ಸಿಕ್ಕುತ್ತು. ಅಲ್ಲಿಯೇ ಸ್ವಂತ ಉದ್ಯಮವನ್ನೂ ಮಾಡಿ ಪೈಸೆ ಸಂಪಾದನೆ, ಹೆಸರೂ ಮಾಡಲಾವುತ್ತು. ಎಲ್ಲವೂ ಒಳ್ಳೆದಾದರೆ ವಿಶ್ವ ಮಾನ್ಯತೆಯೂ ಸಿಕ್ಕುತ್ತು.
೬: ನಿತ್ಯ ಜೀವನ, ಆರೋಗ್ಯ: ನಗರಲ್ಲಿ ಜೀವನ ಯಾವಾಗಲೂ ಒಂದೇ ರೀತಿಯಾಗಿರ್ತು. ಎಲ್ಲವೂ ಗಡಿಬಿಡಿ. ಪ್ರತಿ ನಿಮಿಷವಊ ಅತಿ ಅಮೂಲ್ಯ. ಇಲ್ಲಿ ಕಲಿತ್ತ ಮಕ್ಕೊ ೭ ಗಂಟೆ ಆಯೆಕ್ಕಾರೆ ಶಾಲೆಗೆ ಹೋವ್ತವು. ಮನೆಲಿ ಅಪ್ಪ, ಅಮ್ಮ ಇಬ್ರೂದೆ ಅರ್ಜೆಂಟ್ ಕಾಫಿ, ತಿಂಡಿ ಮುಗುಶ್ಯೊಂಡು ಕೆಲಸಕ್ಕೆ ಹೋಪ ದೃಶ್ಯ ಸಾಮಾನ್ಯ. ಮತ್ತೆ ಕಸ್ತಲೆಗೆ ಗಡಿಬಿಡಿ, ಮನೆಕೆಲಸ, ಮಕ್ಕಳ ಕೆಲಸ, ಎಲ್ಲವೂ ಯಾಂತ್ರಿಕವಾಗಿ ಮುಗಿತ್ತು. ಇನ್ನು ಆರೋಗ್ಯದ ವಿಷಯಲ್ಲಿ ನಗರಲ್ಲಿಪ್ಪವಕ್ಕೆ ೮೦ ಶೇಕಡಾ ಸರಿ ಇರ್ತಿಲ್ಲೆ. ಮೇಲ್ನೋಟಕ್ಕೆ ಯಾವುದೇ ಸಮಸ್ಯೆ ಇಲ್ಲದ್ದ ಹಾಂಗೆ ಕಂಡರೂ ಆಮಂತ್ರಣ ಇಲ್ಲದ್ದೆ ಬಂದ ರೋಗಂಗೊ ಸುಮಾರು ಇರ್ತು. ಆದರೆ ನಗರ ಜೀವನಲ್ಲಿ ಪ್ರತಿ ರೋಗಕ್ಕೂ, ಸಂಕಟಕ್ಕೂ ಮದ್ದಿದ್ದು ಹೇಳ್ತವು. ಹೊಸ ಹೊಸ ಸಂಶೋಧನೆ, ಯಂತ್ರೋಪಕರಣಂಗಳೇ ವೈದ್ಯಕೀಯ ಕ್ಷೇತ್ರಲ್ಲಿ ನಗರೀಕರಣ ಬೀರಿದ ಪ್ರಭಾವ.
೭: ಹೊಸ ವಿಚಾರ: ಹಳ್ಳಿ ಜೀವನ ಮಾಡ್ತವಕ್ಕೆ ಒಂದರಿ ಪೇಟೆಗೆ ಹೋಗಿ ಬಂದವಕ್ಕೆ ನಗರಲ್ಲಿ ಎಂತೋ ವಿಶೇಷ ಇದ್ದು ಹೇಳ್ತ ಅರಿವು ಆವ್ತು. ಹೊಸ ವಿಚಾರ, ಹೊಸ ಆಚಾರಂಗಳೂ ಅಲ್ಲಿರ್ತು. ಈ ಹಳ್ಳಿಲಿ ಅಸಬಡಿತ್ತದಕ್ಕಿಂತ ಅಲ್ಲಿ ೪ ದಿನ ಕೆಲಸ ಮಾಡುದೇ ಮೇಲು ಹೇಳಿ ತೋರ್ತು. ಹಾಂಗಾಗಿ ಹಳ್ಳಿಲಿಪ್ಪವು ಪೇತೆಗೆ ಹೋಪಲೆ ಸುರು ಮಾಡ್ತವು. ಇದೆಲ್ಲ ನಗರೀಕರಣ ಹಂತಹಂತವಾಗಿ ಬೆಳದು ಬಪ್ಪಲೆ ಕಾರಣ ಆವುತ್ತು.
ನಗರ- ಒಂದು ಪಕ್ಷಿ ನೋಟ.
ಮೊದಲೇ ಹೇಳಿದ ಹಾಂಗೆ ನಗರ ಜೀವನಲ್ಲಿ ಎಲ್ಲವೂ ಗಡಿಬಿಡಿಲ್ಲಿಯೇ ಕೆಲಸಂಗಳೂ ಮುಗುದು ಹೋವುತ್ತು. ಉದಿಯಾತೋ ಯಂತ್ರದ ಹಾಂಗೆ ಬೇಕಾದ ಹಂಗೆ , ಸ್ವಿಚ್ ಹಕಿದ ಹಂಗೆ ಕೆಲಸ ಮಡ್ಲೆ ಸುರು ಮಾಡಿ, ಕಸ್ತಲೆಗೆ ಕಾಲುಚಾಚಿ ಒರಗಿರೆ ನಗರ ಜೀವನ ಮುಗುದತ್ತು. ಹತ್ರಾಣ ಮನೆ ಬೇಡ, ಜೆಂಬರದ ಊತ ಬೇಡ, ಪರಸ್ಪರ ಪರಿಚಯವೂ ಇಲ್ಲದ್ದ ಪರಿಸ್ಥಿತಿ. ಏವ ರಗಾಳೆ ಇಲ್ಲೆ.
ಬೆಂಗ್ಳೂರು ಮೈಸೂರು, ಬೊಂಬಾಯಿ ಇವ್ವೆಲ್ಲ ನಗರದ ಸಾಲಿಂಗೆ ಸೇರ್ತು. ಒಂದು ಸಣ್ಣ ಕುಟುಂಬವ ತೆಕ್ಕೊಂಡು ನಗರೀಕರಣ ಮತ್ತದರ ಪ್ರಭಾವ, ವರವೋ ಶಾಪವೋ ಹೇಳಿ ಅರ್ಥಕ್ಕು.
ಒಂದು ಕುಟುಂಬಲ್ಲಿ ಅಪ್ಪ ಅಮ್ಮ ಮಗ ಮಗಳು ಇದ್ದವೂಳಿ ಆದರೆ ಅಪ್ಪನ್ಗೆ ಒಳ್ಳೆಯ ಕಂಪೆನಿಲಿ ಕೆಲಸ ಇರ್ತುಳಿ ಗ್ರೆಶುವ. ಅಂಬಗ ಅವರ ಜೀವನ ಶೈಲಿ ಬೇರೆ ಆಗಿರ್ತು, ವಿದ್ಯಾಭ್ಯಾಸ ಗುಣಮಟ್ಟವೂ ಒಳ್ಳೆದಿರ್ತು. ಅದಲ್ಲದ್ದೆ ಮಕ್ಕೊಗೂ ಕೂಡಾ ಒಲ್ಲೆಯ ಶಿಕ್ಷಣ ಕೊಡ್ಸುತ್ತವು, ಎಲ್ಲರಿಂಗೆ ಸರಿಸಮ ಇರೇಕು, ಹೇಳಿ ಕನಸು ಕಾಣ್ತವು. ಇದರಿಂದಾಗಿ ಮಕ್ಕೊಗೆ ಇಷ್ಟವೋ ಕಷ್ಟವೋ ಒಳ್ಳೆ ಶಾಲೆ ಕಾಲೇಜುಗಳಲ್ಲಿ ಕಲಿತ್ತವು. ಇದರಿಂದ ಸಮಾಜಲ್ಲಿ ಸ್ಥಾನ ಮಾನದ ಏರಿಕೆ ಅವುತ್ತು, ಗೌರವ ಹೆಚ್ಚುತ್ತು. ಹಳ್ಳಿಲಿದ್ದು ಇಡೀ ದಿನ ಕೆಲಸ ಮಾಡಿರೂ ಕೈಲಿ ಚಿಕ್ಕಾಸೂ ಸಿಕ್ಕದ್ದಿಪ್ಪಗ ರಜ್ಜ ಸಮಯ ಕಂಪ್ಯ್ಯೂಟರಿನ ಎದುರು ಕೂದು ಕೆಲಸ ಮಾಡಿ ತುಂಬಾ ಸಂಪಾದನೆ ಮಾಡ್ಲಕ್ಕು, ಇದುವೇ ಲೇಸು ಹೇಳಿ ಕಾಣ್ತು. ಸಧ್ಯದ ಪರಿಸ್ಥಿತಿ ಹೇಂಗೆ ಹೇಳಿರೆ…ಪ್ರಾಯ ಬಂದ ಕೂಸುಗೊ ಎಲ್ಲ ನಗರಲ್ಲಿ ಕೆಲಸ ಮಾಡಿಗೊಂಡಿಪ್ಪ ಮಾಣಿಯಂಗಳನ್ನೇ ಒಪ್ಪಿ ಮದುವೆ ಅಪ್ಪದು. ಹಳ್ಳಿಲಿ ಕೃಶಿ ಮಾಡ್ತವನ ಒಪ್ಪುದೇ ಕಡಮ್ಮೆ ಆಯಿದು. ನಗರಲ್ಲಿಪ್ಪ ಮಾಣಿಯಂಗೊ ಆದ್ರೆ ಅದುವೇ ಒಂದು ಪ್ಲಸ್ ಪಾಂಯಿಂಟ್.
ನಗರೀಕರಣದ ಗಾಳಿ ಬೀಸಿದವಕ್ಕೆ ಈಗ ಹಳ್ಳಿ ಹಿಡಿಶುತ್ತೇ ಇಲ್ಲೆ. ಹಳ್ಳಿಲಿ ಕೃಷಿ, ಮಳೆ, ಜಮೀನು, ಮನೆ ಹೇಳಿ ಸದಾ ಒಂದಲ್ಲ ಒಂದು ಕೆಲಶ ಇದ್ದೇ ಇರ್ತು. ಆದರೆ ಪೇಟೆಲಿ ಬೇಕಾದಷ್ತು ಮಾಂತ್ರ ಕೆಲಸ ಮಾಡಿ ಮನೆಗೆ ಬಂದರಾತು.ಏವ ರಗಳೆ ಇರ್ತಿಲ್ಲೆ. ಮನೆ ಬೆಳಗಲೆ ಬಪ್ಪ ಸೊಸೆಯಕ್ಕಗೂ ಅಥೆ ಮಾವನ ಸೇವೆ ಮಾಡುವ ತಾಳ್ಮೆ ಇಲ್ಲೆ, ದನ ಇಪ್ಪ ಮನೆ ಬೇಡ, ಹೇಳ್ತವು.ಈಗೆಲ್ಲ ಜೆಂಬ್ರದ ಮನೆಗೆ ಹೋಗಿ ಮನೆಯವರ ಊಟ ಅಪ್ಪಲೂ ಪುರುಸೊತ್ತಿಲ್ಲೆ, ತಾನು ಉಂಡು ಎದ್ದು ಕೈತೊಳದು ಅಲ್ಲಿಂದಲೆ ಮೆಟ್ಟು ಕಾಲಿಂಗೆ ಸಿಕ್ಕಿಸಿ ಮನೆ ಕಡೆಂಗೆ ಮೋರೆ ಮಾಡುವ ಕಾಲ. ಈಗಾಣ ವ್ಯವಸ್ಥೆಯೇ ಬದಲಾಇದು.ಬಳ್ಸಲೂ ಗೊಂತಿಲ್ಲೆ, ಉಂಬಲೂ ಗೊಂತಿಲ್ಲೆ, ಎಲ್ಲವೂ ಅರ್ಧಂಬರ್ಧ. ಬಫ಼್ಫ಼ೆ ಊಟ ಇದರ ಒಂದು ಭಾಗ. ಈಗಾಣವಕ್ಕೆ ಎಲ್ಲಿಂದ ಉಂಬಲೆ ಸುರು ಮಾಡೇಕು ಗೊಂತಿಲ್ಲೆ. ಪ್ರತಿ ಮನೆಗಳಲ್ಲಿಯು, ಜನಂಗೊ ಕಮ್ಮಿ. ಕುಟುಂಬ ಯೋಜನೆಯೇ ಅಡಿಮೇಲಾಯ್ದು. ಒಂದು ತಪ್ಪಿರೆ ಎರಡು ಮಕ್ಕೊ. ಹಾಂಗಾಗಿ ಅಂದ್ರಾಣ ಒಗ್ಗಟ್ಟು ಕುಟುಂಬವೂ ಕಾಣದ್ದೆ ಅಯಿದು.
ನಗರ ಜೀವನದ ಅನುಭವ ಇದ್ದವಕ್ಕೆ ಅದುವೇ ಲಾಯಿಕ್ಕ ಆವುತ್ತು. ಆದರೆ ಪೇಟೆ ಹೇಳುದು ಮನುಶ್ಯನ ಮರುಳು ಮಾಡ್ತು. ಮನುಷ್ಯನ ಅಗತ್ಯತೆಗಳ ತಿಯಾಗಿ ಪೂರೈಸುತ್ತಿದು. ಇಲ್ಲಿ ಎಲ್ಲವೂ ಇದ್ದು ಹೇಳಿ ಮನುಷ್ಯರಿಂಗೆ ಅನ್ಸುತ್ತು. ಪೇಟೆಲಿಪ್ಪವಕ್ಕೆ ಒಬ್ಬನ ಸಂಬಳಲ್ಲಿ ಜೀವನ ಸಾಗ್ಸುದು ಭಾರೀ ಕಷ್ಟದ ಸಂಗತಿ. ಇಲ್ಲಿ ಗಂಡ ಹೆಂಡತಿ ಕೆಲಸ ಮಾಡಿ ಅದರಿಂದ ಜೀವನ ಸಾಗ್ಸಿರೆ ಸುಗಮ. ಮನೆಲಿ ಅರ್ಧರ್ಧ ಕೆಲಸ ಮಾಡಿ ಒಫ಼್ಫ಼ೀಸ್ಗೆ ಹೋಗಿ ಅಲ್ಲಿ ಕೆಲಸ ಮಾಡೇಕವುತು. ಬಂದ ಸಂಬಳವ ಕಿಟ್ಟಿದ್ದಕ್ಕೆ ಮುಟ್ಟಿದ್ದಕ್ಕೆಲ್ಲಾ ನೀರಿಂದ ಹಿದುದು ಎಲ್ಲಾ ವಸ್ತುಗೊಕ್ಕು ಹಣ ವ್ಯಯ ಮಾಡೇಕಾವುತು. ನಗರಲ್ಲಿಪ್ಪವರ ಆಚಾರವೇ ಬೇರೆ. ಇಂಗ್ಲೀಷ್ ಬಾರದ್ದರೂ ಅದೇ ಭಾಷೆಲಿ ಮಾತಾಡ್ಲೆ ಸುರು ಮಾಡ್ತವು. ಅಚ್ಚ ಕನ್ನಡಲ್ಲಿ ಮಾತಾಡ್ಲೆ ಸುರು ಮಾಡಿರೂ ಅದರ್ಲಿ ಅರ್ಧಕ್ಕರ್ಧ ಇಂಗ್ಲೀಷ್ ಭಾಷೆ ಒಳಗೊಂಡಿರ್ತು. ಇಲ್ಲಿ ಹತ್ರೆ ಹತ್ರೆ ಮನೆಗಳಿದ್ದರೂ ಅಲ್ಲಿ ಆರಿದ್ದವು? ಅವರ ಪರಸ್ಪರ ಪರಿಚಯ, ಆರಿಂಗೂ ಇರ್ತಿಲ್ಲೆ. ಹೀಂಗಿಪ್ಪ ಪರಿಸ್ಥಿತಿ ಇಪ್ಪಗ ಮನೆ ಹತ್ರೆ ಕಳ್ಳರೋ ಉಗ್ರಗಾಮಿಯೋ ಬಂದು ವಾಸ ಮಾಡಿರು ನವಗೆ ಗೊಂತಾಗ, ಬಾಂಬ್ ಮಡಗಿರೂ ಗೊಂತಾಗ. ಹಳ್ಳಿಲಿಪ್ಪ ಆತ್ಮೀಯತೆ, ಭಾಂಧವ್ಯ, ಸ್ನೇಹ ಎಲ್ಲಿಯೂ ಕಾಂಬಲೆ ಸಿಕ್ಕ.
ಪೇಟೆ ಜೀವನ ದೂರಂದ ಕಾಂಬಗ ಒಳ್ಳೇದು ಹೇಳಿ ಕಾಣ್ತು. ಆದರೆ ಅಲ್ಯಾಣ ಅವ್ಯವಸ್ಥೆ ಕಾಂಬಗ ಬೇಡವೇ ಬೇಡ. ಅಲ್ಲಿ ಬೇಸಗೆ ಬಂತೂಳಿ ಆದರೆ ನೀರಿಂಗುಉ ತತ್ವಾರ, ಅಂಬಗ ನೀರಿಂಗೂ ಪೈಸೆ ಕೊಟ್ಟು ಕುಡಿಯೇಕ್ಕಾದ ಸ್ಥಿತಿ.ಕಾಫಿ ಮಾಡ್ಲೆ ಹಾಲಿಂಗೂ ಪೈಸೆ, ಊಟಕ್ಕೆ ಕೂಡುವ ಬೆಂದಿಗಿಪ್ಪ ಸಾಮಾನಿಂಗೂ ಪೈಸೆ ಕೊಡದ್ದೆ ಬತ್ತಿಲ್ಲೆ.ಇಲ್ಲಿ ಪೈಸೆ ಇದ್ದರೆ ಮಾತ್ರ ಜೀವನ ಸುಖಮಯ. ಆದರೆ ಹಳ್ಳಿಲಿ ಹಾಂಗಲ್ಲ ಒಂದರಿ ಬಂಡವಾಳ ಹಾಕಿತ್ತೂಳಿ ಆದರೆ ಕಷ್ಟಪಟ್ಟು ದುಡುದರೆ ಮತ್ತೆ ಭೂಮಿತಾಯಿ ನಮ್ಮ ಕೈ ಬಿಡ್ತಿಲ್ಲೆ. ಒಂದಲ್ಲಾ ಒಂದು ದಾರಿ ಇದ್ದೇ ಇರ್ತು. ಹಳ್ಳಿಲಿ ಗ್ಯಾಸ್ ಇಲ್ಲದ್ದೆಯು ಅಡಿಗೆ ಮಾಡಲಕ್ಕು. ಹಸಿರು ತರಕಾರಿ, ವಿಷಮಯ ಅಲ್ಲದ್ದಿಪ್ಪ ತರಕಾರಿಗೊ ಧಾರಳ ಸಿಕ್ಕುತ್ತು. ಎಂತೂ ಇಲ್ಲದ್ರೆ ಉರಗೆ ಕೊಡಿಯೋ, ಎಂತಾರು ತಂದು ಚಟ್ನಿಯೋ ತಂಬುಳಿಯ್ಯೋ ಮಾಡಿ ಉಂಬಲಾವುತ್ತು. ಹಳ್ಳಿಯ ಮಕ್ಕೊಗೆ ಹಾಲು ಎಲ್ಲಿಂದ ಸಿಕ್ಕುತ್ತು ಹೇಳಿ ಗೊಂತಿರ್ತು., ಆದರೆ ಪೇಟೆ ಮಕ್ಕೊಗೆ ತೊಟ್ಟೆ ಹಾಲೇ ಕಂಡು ಗೊಂತಿಪ್ಪದು. ಅದರ ಉಗಮ ಎಲ್ಲಿಂದ ಹೇಲಿ ಗೊಂತಿರ್ತಿಲ್ಲೆ.
ಪೇಟೆಲಿಪ್ಪವಕ್ಕೆ ಕೆಲಸಗಳ ಒತ್ತಡ ಜಾಸ್ತಿ ಇರ್ತು. ಬೇಕಾಗಿ ಬಂದರೆ ಇರುಳು ಕೂಡಾ ಕೆಲಸ ಮಾಡ್ತವು. ಇದರಿಂದ ಕೌಟುಂಬಿಕ ಅಭದ್ರತೆ, ನಿದ್ರಾಹೀನತೆ, ಮಾನಸಿಕ ಮತ್ತು ದೈಹಿಕ ರೋಗಗಳ ಸಮಸ್ಯೆ ಸುರು ಆವುತ್ತು.ಒಟ್ಟಾರೆ ಮನುಷ್ಯನ ದೇಹಕ್ಕೆ ವಿಶ್ರಾಂತಿಯೇ ಕಮ್ಮಿ.ವಾಹನ ದಟ್ಟಣೆ ಕೂಡಾ ಪೇಟೆಗಳಲ್ಲಿ ಜಾಸ್ತಿ. ವಾಹನಗಳ ಹೊಗೆಂದಾಗಿ ಮನುಷ್ಯಂಗೆ ಶ್ವಾಸ ಸಂಬಂಧೀ ಖಾಯಿಲೆಗೊ ಬತ್ತು. ನಗರಲ್ಲಿ ಒಟ್ಟಾರೆ ವಾತಾವರಣವೇ ಕಲುಷಿತವಾಗಿರ್ತು. ನೀರಿಂದಾಗಿಯೇ ಬತ್ತ ಕೆಲವು ರೊಗಂಗೊ ಇದ್ದು, ಕಾಮಾಲೆ, ಕಾಲರಾ,ಇತ್ಯಾದಿ.ಇಲ್ಲಿಪ್ಪ ಜನರಿಂಗೆ ಆಮಂತ್ರಣ ಇಲ್ಲದ್ದೆ ಶರೀರಕ್ಕೆ ಬಂದ ರೋಗ ಹಲವು. ಚಿಕುನ್ ಗುನ್ಯಾ, ಮದ್ರಾಸ್ ಐ ಇಂತಹ ಅಂತುರೋಗಂಗೊ ಪುನ್ಃಅ ಕಂಡು ಬತ್ತಾ ಇದ್ದು. ಇದೆಲ್ಲಾ ನಗರೀಕರಣದ ಕೆಟ್ಟ ಪ್ರಭಾವ ಹೇಳಿ ಹೇಳ್ಳಕ್ಕು.
ನಗರಲ್ಲಿ ಎಲ್ಲಾ ಸೌಲಭ್ಯ ಸೌಕರ್ಯಗಳಿರ್ತು, ಹೇಳುವ ಕಾರಣಕ್ಕೆ ನಗರ ಬೆಳೆದು ಬತ್ತ ಇದ್ದು. ಅಪ್ಪು ನಗರಲ್ಲಿ ಎಷ್ಟೇ ಗಡಿಬಿಡಿ ಇದ್ದರೂ ಸೌಕರ್ಯ ಇದ್ದು ಹೇಳ್ತ ಕಾರಣಕ್ಕೆ ಎಲ್ಲರು ನಗರವನ್ನೇ ಇಷ್ಟ ಪಡ್ತವು.ಹಿಂದಿನ ಕಾಲಲ್ಲಿ ಗರ್ಭಿಣಿಯರು ಸಕಾಲಕ್ಕೆ ಉಪಚಾರ ಸಿಕ್ಕದ್ದೆ ಸತ್ತು ಹೋದ ಘಟನೆ ಇದ್ದು. ಅದ್ರೆ ಈಗ ಅದು ಕಮ್ಮಿ ಆಯಿದು, ಸಹಜ ಹೆರಿಗೆಯ ಸಂಖ್ಯೆ ಇಳಿತ ಆಯಿದು,ಈಗೆಲ್ಲಾ ಓಪರೇಷನ್ ಮಾಡ್ಸ್ಯೊಂಬವೇ ಹೆಚ್ಚು.ಇಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರ ಇದ್ದು ಹೇಳಿ ಅವರ ಕಾಣ್ಕೆ.
ಈಗೀಗ ಜಾಗತೀಕರಣ ನಗರೀಕರಣದ ಪ್ರಭಾವದ ಫಲವಾಗಿ ಹಳ್ಳಿ ಕೂಡಾ ನಗರವಾಗಿ ಮಾರ್ಪಾಡಾವುತ್ತಾ ಇದ್ದು. ಇಲ್ಲಿಯುದೆ ಹತ್ರೆ ಮನೆಗೋ, ಸಣ್ಣ ಕಾರ್ಖಾನೆಗಳ ಬೆಳವಣಿಗೆ ಜಾಸ್ತಿ ಆಯಿದು.ಹಳ್ಳಿಯ ಜನ್ಂಗೊಕ್ಕೆ ಪೇಟೆಯ ಗಾಳಿ ಬೀಸಿದ್ದು, ಅವರ ಅನುಕರಣೆ ನಾವು ಮಾಡ್ತಾ ಇದ್ದು.ಇದರಿಂದಾಗಿ ಹಳ್ಳಿ ಮತ್ತು ಜಾನಪದ ಸೊಗಡು ನಶಿಸಿ ಹೋವುತ್ತಾ ಇದ್ದು.
ಈ ಮೊದಲು ಭೂಮಿಯ ಮಡಿಲು ಹಚ್ಚ ಹಸಿರಾಗಿದ್ದತ್ತು. ಈಗೆಲ್ಲಿಯೂ ಆ ಹಸಿರಿನ ಹೊದಕ್ಕೆ ಕಾಂಬಲೇ ಸಿಕ್ಕುತ್ತಿಲ್ಲೆ. ಕಡಮ್ಮೆ ಆಯಿದು.ಈ ಭೂಮಿಲಿ ಸಸ್ಯ ಸಂಪತ್ತು, ಸಮೃದ್ಧಿ ಈಗಿಲ್ಲೆ. ಶಾಲೆಗೆ ಹೋಪಗಳೋ ಬಪ್ಪಗಳೋ ಗುಡ್ಡೆಲ್ಲಿ ಬತ್ತಾ ಇಪ್ಪಗ ಕಾಟು ಹಣ್ನು, ಹುಳಿ, ಚೂರಿಕಾಯಿ ಇತ್ಯಾದಿ ತಿಂದುಗೊಂಡಿತ್ತಿದ್ದು ಈಗಳೂ ನೆಂಪಿದ್ದು. ಈಗ ಹಾಂಗಿಪ್ಪ ಪರಿಸರ ಸ್ನೇಹಿ- ಒಡನಾಟವೂ ಇಲ್ಲೆ.ಎಲ್ಲ ಮನೆ ಮೆಟ್ಟ್ಲಿನ ಹತ್ರೆಂದ ಶಾಲೆ ವಾಹನಕ್ಕೆ ಹತ್ತಿ ಹೋಪವ್ವೆ ಇಪ್ಪದು. ಈಗೆಲ್ಲಾ ಗುಡ್ಡೆಗಳು ರಬ್ಬರ್ ಕೃಷಿಗೆ ಮಾತ್ರ ಸೀಮಿತ ಆಯಿದು. ಅದಲ್ಲದ್ರೆ ಗುಡ್ಡೆಯೋ ತೋಟವೋ ನೋಡದ್ದೇ ಪಾರೆಯನ್ನು ಗರ್ಪಿ ಮನೆ ಮಾಡುವ ಗೌಜಿ.ಇಲ್ಲಿಯು ಜಾಗೆ ಇಲ್ಲದ್ದೆ ಆಯಿದು. ಕ್ರಮೇನ ನಗರ ಆವುತ್ತಾ ಇದ್ದು. ಹೊಸ ಮೋರೆಗೋ, ಹೊಸ ಆಚಾರಂಗೋ. ಹಸಿರಿನ ಹೊದಕ್ಕೆ ಕಮ್ಮಿ ಆದ ಕಾರಣ ಭೂಮಿಲ್ಲಿ ಏರುಪೇರು ಅವುತ್ತ ಇದ್ದು. ಜಾಗತಿಕ ತಾಪಮಾನದ ಏರಿಕೆ, ಅಕಾಲಿಕ ಮಳೆ, ಭೂಕಂಪ, ಸುನಾಮಿ, ಮಂಜು ಕರಗುವಿಕೆ, ಇದೆಲ್ಲಾ ಅತಿಯಾದ ನಗರೀಕರಣದ ಪ್ರಭಾವ.ಸಣ್ಣ ಸಮಸ್ಯೆ ಇದ್ದರೂ ಈಗ ನಾವದರಬೆಟ್ಟದಷ್ಟು ದೊಡ್ಡದು ಮಾಡ್ತು.ರಕ್ತದೊತ್ತಡ, ಮಧುಮೇಹ, ಇದೆಲ್ಲ ಸಾಮಾನ್ಯ ಸಮಸ್ಯೆಗೊ. ಆದ್ರೆ ಈಗ ಅದಕ್ಕೆ ಜೀವನ ಪರ್ಯಂತ ಮದ್ದು ತೆಕ್ಕೊಳ್ಳೇಕ್ಕಾದ ಸ್ಥಿತಿ. ಪ್ರತಿಯೊಂದಕ್ಕೂ ಸ್ಪೆಷಲಿಸ್ಟ್ ಗೊ ಬೇಕವುತ್ತು. ಸಣ್ಣ ಸಣ್ಣ ಮನೆ ಮದ್ದುಗಳಲ್ಲಿ ಯೇವದೂ ಕಮ್ಮಿ ಆವುತ್ತಿಲ್ಲೆ. ಹಿತ್ತಿಲ ಗಿಡ ಮದ್ದೇ ಅಲ್ಲ ಹೇಳ್ತ ಹಾಂಗಾಯಿದು. ಮೊದಲು ಮನೆ ಹಿತ್ತಿಲಿಲ್ಲಿ ತುಳಸಿ, ಸಾಂಬ್ರಾಣಿ,ಅಲೋವೆರಾ, ಕಾಮ ಕಸ್ತೂರಿ ಗಿಡಂಗೊ ಇದ್ದತ್ತು. ಈಗ ಯೇವದೂ ಪ್ರಯೋಜನಕ್ಕೆ ಬತ್ತಿಲ್ಲೆ.
ನಗರೀಕರಣದ ಅತಿಯಾದ ಪ್ರಭಾವಂದಾಗಿ ಈಗ ಹಲವಾರು ಹೊಸ ಆಚರಣೆಗಳು ನಾವು ಮಾಡ್ತಾ ಇದ್ದು. ನಮ್ಮ ದೇಶಲ್ಲಿ ಮೊದಲೇ ಆಚರಣೆಲಿತ್ತಿದ್ದ ವಿಷು, ಮಕರ ಸಂಕ್ರಾಂತಿ, ದೀಪಾವಲಿ, ನಾಗರ ಪಂಚಮಿ, ನವರಾತ್ರಿ ಇದೆಲ್ಲಾ ಹೊಸ ರೀತಿಲ್ಲಿ ಆಚರಣೆ ಮಾಡ್ತಾ ಇದ್ದೆಯೊ.ಇದರೆಡೆಲ್ಲಿ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಗೆ ಒತ್ತುಕೊಡ್ತ ರೀತಿಲಿ ಕೆಲವು ದಿನಂಗಳ ಹೊಸದಾಗಿ ಆಚರಣೆ ಮಾಡ್ತಾ ಇದ್ದು. ಉದಾಹರಣೆಗೆ.. ಅಮ್ಮಂದಿರ ದಿನ, ಅಪ್ಪಂದಿರ ದಿನ, ಪ್ರ್‍ಏಮಿಗಳ ದಿನ, ಸ್ನೇಹಿತರ ದಿನಾಚರಣೆ ಹೀಂಗೆ.ಇದರಿಂದ ಹಳೆಯ ಕೆಲವು ಆಚರಣೆಗೊ ಹೊಸ ರೂಪವ ಪಡಕ್ಕೊಂಡಿದು, ಮತ್ತು ಅದರ ಅರ್ಥ ಅನರ್ಥ ಆಯಿದು. ಮಹತ್ವ ಕುಉಡಾ ಮೂಲೆಗುಂಪಾಯಿದು. ಇತ್ತೀಚೆಗೆ ಬಂದ ನಗರೀಕರಣ ಹೇಳ್ತ ವ್ಯವಸ್ಥೆ ಅಡಿಪಾಯ ಇತ್ತಿದ್ದ ಸುವ್ಯವಸ್ಥೆಯ ಅಡಿಮೇಲು ಮಾಡಿದ್ದು.ಇತ್ತೀಚೆಗಿನ ಬೆಳವಣಿಗೆಲಿ ಯಾವ ವ್ಯವಸ್ಥೆಗೂ ಸರಿಯಾದ ಅಡಿಪಾಯ ಇರ್ತಿಲ್ಲೆ.ಸ್ಂಸ್ಕಾರ ಸಂಸೃತಿಗೂ ಹಿನ್ನಲೆ ಇಲ್ಲೆ. ಆದ್ದರಿಂದ ನಾವು ಒಳ್ಳೆಯ ವಿಚಾರಗಳ ಮಾಂತ್ರ ತೆಕ್ಕೊಂಡು ಮುಂದೆ ಹೋಪ.
ಅತಿಯಾದರೆ ಅಮೃತವೂ ವಿಷ ಹೇಳ್ತ ನುಡಿ ಯಾವತ್ತಿಂಗೂ ಸತ್ಯವೇ. ಇಂತಹ ಅತೀ ಶೀಘ್ರ ಬೆಳವಣಿಗೆಂದಾಗಿ ಒಳ್ಳೆದೂ ಅವುತ್ತು ಕೆಟ್ಟದ್ದೂ ಆವುತ್ತು. ಭೂಮಿ, ಸಂಸ್ಕೃತಿ, ಆಚಾರ ವಿಚಾರದ ಮೇಲೆ ನೇರ ಪರಿಣಾಮ ಬೀರ್ತು. ಈಗ ಆವುತ್ತ ಪ್ರಾಕೃತಿಕ ವಿಕೋಪ, ಹೆಸರಿಲ್ಲದ್ದ ರೋಗಗಳ ಉದ್ಭವ, ಉಲ್ಬಣವೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಆದ್ದರಿಂದ ಅತಿಯಾದ ನಗರೀಕರಣ ಶಾಪವೇ ಸರಿ

~*~

Admin | ಗುರಿಕ್ಕಾರ°

   

You may also like...

3 Responses

  1. ಶ್ರೀಲತಂಗೆ ಅಭಿನಂದನೆಗೊ. ನಮ್ಮ ಸಂಸ್ಕೃತಿ, ಹಿತ್ತಿಲ ಗಿಡಂಗೊ ಎಲ್ಲವುದೆ ನಗರಲ್ಲಿ ಕಡಮ್ಮೆಯೇ ಹೇಳಲಕ್ಕು. ಪ್ರಬಂಧ ಲಾಯಕಾಯಿದು.

  2. ಶ್ರೀ ಲತಂಗೆ ಅಭಿನಂದನೆಗೊ. ಇನ್ನೂ ಬರೆತ್ತಾಇರು.[ಅಕ್ಷರ ತಪ್ಪು ಬಪ್ಪದರ,ಉಚ್ಚಾರ , ಸರಿಮಾಡ್ಳೆ ಪ್ರಯತ್ನ ಮಾಡು ].ಶುಭಾಶಯಂಗೊ .

  3. ಶ್ರೀಲತಾ ಹರೀಶ್ says:

    ಧನ್ಯವಾದಂಗೊ.. ಅಕ್ಷರ ತಪ್ಪು ಬಂದದು ಬರಹ ತಂತ್ರಾಂಶಲ್ಲಿ ಬಂದ ದೋಷ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *