Oppanna.com

5 ಮೇ 2019: ಕಾವು “ಜನಮಂಗಲ” ಸಭಾಭವನಲ್ಲಿ ಬೈಲಿನ ವಾರ್ಷಿಕೋತ್ಸವ ಕಾರ್ಯಕ್ರಮ ಸುಸಂಪನ್ನ

ಬರದೋರು :   ಗುರಿಕ್ಕಾರ°    on   11/05/2019    5 ಒಪ್ಪಂಗೊ

ಮೇ 5 ಆದಿತ್ಯವಾರ: ಕಾವು ಜನಮಂಗಲ ಸಭಾಭವನಲ್ಲಿ ಒಪ್ಪಣ್ಣ ಬೈಲಿನ ಈ ವರ್ಷದ ಕಾರ್ಯಕ್ರಮ ಸುಸಂಪನ್ನವಾಗಿ ನೆರವೇರಿತ್ತು.  ತುಂಬಿದ ಸಭಾಬವನಲ್ಲಿ ಬಂದ ನೆಂಟ್ರುಗೊ ಎಲ್ಲೋರುದೇ ಖುಷಿಪಡುವ ಹಾಂಗೆ ಹೃದಯತುಂಬಿದ ಕಾರ್ಯಕ್ರಮ ಅದಾಗಿತ್ತು. ಕಾರ್ಯಕ್ರಮದ ವರದಿ, ಪಟಂಗೊ ಇಲ್ಲಿದ್ದು.

ಮಲೆನಾಡಿನ ಹಸುರಿನ ಹಿಂದೆ ಹವ್ಯಕರ ಶ್ರಮ, ಪರಿಸರಪ್ರೀತಿ ಇದ್ದು : ಚಿಂತಕ ಪೂರ್ಣಾತ್ಮರಾಮ

“ಮಲೆನಾಡ ಹಸಿರಿನ ಹಿಂದೆ ಹವ್ಯಕರ ಶ್ರಮ ಇದ್ದು, ಪರಿಸರ ಪ್ರೀತಿ ಇದ್ದು. ಹವ್ಯಕ ಭಾಷೆಲಿಪ್ಪ ವೈವಿಧ್ಯತೆಯೇ ಭಾಷೆಯ ಬೆಳೆಶಿದ್ದು. ಸಾಹಿತ್ಯದ ಬೆಳವಣಿಗೆಲಿ ಒಪ್ಪಣ್ಣ ಪ್ರತಿಷ್ಠಾನ ಚೆಂದಕೆ ಕಾರ್ಯ ನಿರ್ವಹಿಸುತ್ತಾ ಇದ್ದು. ಲೋಕಸೇವಾ ವಿಭಾಗದಲ್ಲಿ ಸೇವೆ ಸಲ್ಲುಸುವ ಬಗ್ಯೆ ಈಗಾಣ ಮಕ್ಕೊ ಗಮನ ಹರಿಸೇಕು. ರಾಷ್ಟನಿರ್ಮಾಣಲ್ಲಿ ಕೈಜೋಡುಸೇಕು.  ನೂಲಿಂಗೆ ಸೂಜಿಯ ನೇತೃತ್ವ ಬೇಕು. ಸೂಜಿ ತನ್ನ ಕೈಂಕರ್ಯವ ಪೂರೈಸಿ ಮುಂದೆ ಹೋಪ ಹಾಂಗೆ, ನಾಯಕ ಆದೋನು ಮುಂದಾಣ ಕೆಲಸ ಪೂರೈಸುವಲ್ಲಿ ಗಮನ ಕೊಡೇಕು“ ಹೇಳಿ ಚಿಂತಕ ಪೂರ್ಣಾತ್ಮರಾಮ ಅಭಿಪ್ರಾಯಪಟ್ಟವು. 05.05.2019ರ ಆದಿತ್ಯವಾರ ಕಾವು ಜನಮಂಗಲ ಸಭಾಭವನಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಈಶ್ವರಮಂಗಲ ಪ್ರಾಂತ ಹವ್ಯಕ ಮಹಾಸಭಾದ ಸಹಕಾರಲ್ಲಿ ಆಯೋಜಿಸಿದ `ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು `ಬಾಳಿಲ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದ ದಿಕ್ಸೂಚಿ ಭಾಷಣಲ್ಲಿ ಮಾತಾಡಿದವು.

ನಿವೃತ್ತ ಜಿಲ್ಲಾ ನ್ಯಾಯಮೂರ್ತಿ ಶ್ರೀ ಮನಮೋಹನ ಬನಾರಿ ಅಧ್ಯಕ್ಷತೆ ವಹಿಸಿತ್ತಿದ್ದವು. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಸಂಚಾಲಕ ಚಂದ್ರಶೇಖರ ದಾಮ್ಲೆಯವು, ಈಶ್ವರಮಂಗಲ ಪ್ರಾಂತ ಹವ್ಯಕ ಮಹಾಸಭಾದ ಅಧ್ಯಕ್ಷ ಶಿವಪ್ರಸಾದ್ ಪಟ್ಟೆ ಉಪಸ್ಥಿತರಾಗಿತ್ತಿದ್ದವು. ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಯ ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಅಜ್ಜಂಗೆ ಪ್ರದಾನ ಮಾಡಿತ್ತು. ತೆಕ್ಕುಂಜ ಕುಮಾರಮಾವ ಬರದ ಲಲಿತ ಪ್ರಬಂಧಂಗಳ ಸಂಕಲನ `ಪಾರುಪತಿಯ ಪಾರುಪತ್ಯ’, ಮುಳಿಯ ರಘುಭಾವನ ಭಾಮಿನಿ ಷಟ್ಪದಿಯ `ಪೆರ್ಲಲ್ಲೊಂದು ಪಿಕ್ಲಾಟ’ & ವರ್ಮುಡಿ ಶೀಲತ್ತೆ ಬರದ `ಅಬ್ಬೇ! ಎನಗೆ ಅರುಂಧತಿಯ ಕಂಡಿದಿಲ್ಲೆ!!’ ಹವ್ಯಕ ಕಾದಂಬರಿಯ ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿತ್ತು. ಪ್ರತಿಷ್ಠಾನಂದ ಕೊಡುವ `ವೇದ ವಿದ್ಯಾನಿಧಿ’ಯ ಚೂಂತಾರು ದಿ| ಕೃಷ್ಣ ಭಟ್ ಪ್ರತಿಷ್ಠಾನ (ರಿ) ಯವು ನೆಡೆಶುವ ವೇದಪಾಠಶಾಲಗೆ ಪ್ರದಾನ ಮಾಡಿತ್ತು. ಈ ಕಾರ್ಯಕ್ರಮವ ಒಪ್ಪಣ್ಣ ಪ್ರತಿಷ್ಠಾನದ ವೇದ ವಿದ್ಯಾ ವಿಭಾಗದ ಸಂಚಾಲಕರಾದ ಮಾಡಾವು ಗಣೇಶಮಾವ ನಿರ್ವಹಿಸಿದವು.

ಶಿಕ್ಷಣ ವಿಭಾಗಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಶ್ರೀ ಪೆರ್ನಾಜೆ ಕೆ. ಶಾಮಣ್ಣ, ಯಕ್ಷಗಾನ ಕಲಾವಿದರಾಗಿ, ಯಕ್ಷಸಂಘಟಕರಾಗಿ ಗುರುತಿಸಿಕಗೊಂಡ ಶ್ರೀ ರಾಮ ಜೋಯಿಸ ಬೆಳ್ಳಾರೆ, ಪಾಕಶಾಸ್ತ್ರ ಪರಿಣಿತರಾದ ಮರಿಮನೆ ಹೆಚ್.ನಾರಾಯಣ ಭಟ್ ಮಳಿ, ದ್ವಿತೀಯ ಪಿಯುಸಿಲಿ ರ‍್ಯಾಂಕ್ ವಿಜೇತರಾದ ಶ್ರೀಕೃಷ್ಣ ಶರ್ಮ ಕಡಪ್ಪು, ಸ್ವಸ್ತಿಕ್ ಮಾಡಾವು, ಸಾತ್ವಿಕಾ ಮಾಡಾವು, ಎಸ್ಸೆಸ್ಸೆಲ್ಸಿಲಿ ಅತ್ಯಧಿಕ ಅಂಕ ಗಳುಸಿದ ಕು.ಸಿಂಚನಲಕ್ಷ್ಮಿ ಬಂಗಾರಡ್ಕ ಇವರೆಲ್ಲೋರನ್ನೂ ಗೌರವಿಸಿತ್ತು. ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್ ಎಳ್ಯಡ್ಕ ಮಾಷ್ಟ್ರುಮಾವ ಪ್ರಾಸ್ತಾವಿಕ ಭಾಷಣ ಮಾಡಿದವು. ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಸ್ವಾಗತಿಸಿದವು. ಪ್ರತಿಷ್ಠಾನದ ಕಾರ್ಯದರ್ಶಿ ಮಹೇಶ ಎಳ್ಯಡ್ಕ ಧನ್ಯವಾದ ಸಮರ್ಪಿಸಿದವು. ಪ್ರತಿಷ್ಠಾನದ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಕಾರ್ಯಕ್ರಮ ನಿರೂಪಿಸಿದವು. ವಿಷು ವಿಶೇಷ ಸ್ಪರ್ಧಾ ಕಾರ್ಯಕ್ರಮದ ಅಂಗವಾಗಿ ಆಶುಭಾಷಣ ಸ್ಪರ್ಧೆ ಜರಗಿತ್ತು. ಗೋಪಾಲಮಾವ ಬೊಳುಂಬು ಈ ಕಾರ್ಯಕ್ರಮವ ನಿರ್ವಹಿಸಿದವು. ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವ ಮುಳಿಯ ರಘುಭಾವ ನಿರ್ವಹಿಸಿದವು. ಸಭಾ ಕಾರ್ಯಕ್ರಮದ ಪೂರ್ವಲ್ಲಿ ನೆಡದ ಯಕ್ಷಗಾನಾಮೃತ ಕಾರ್ಯಕ್ರಮಲ್ಲಿ ಶ್ರೀಮತಿ ದುರ್ಗಾಪರಮೇಶ್ವರೀ ಕುಕ್ಕಿಲ & ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಭಾಗವಹಿಸಿದವು. ಹಿಮ್ಮೇಳಲ್ಲಿ ಶಿವಶಂಕರ ಭಟ್ ಅಂಬೆಮೂಲೆ & ವರ್ಷಿತ್ ಕಿಜೆಕ್ಕಾರು ಸಹಕರಿಸಿದವು. ಸಭಾ ಕಾರ್ಯಕ್ರಮದ ಮತ್ತೆ ಸಬ್ಬಣಕೋಡಿ ರಾಮ ಭಟ್ ಶಿಷ್ಯವೃಂದದ ಪಡ್ರೆ ಚಂದ್ರು ಯಕ್ಷಗಾನ ಕೇಂದ್ರ ಪೆರ್ಲ ಇವರಿಂದ `ರಾಜಾ ದಿಲೀಪ’ ಯಕ್ಷಗಾನ ಬಯಲಾಟ ಜರಗಿತು. ತರಬೇತಿ ಪಡದ ಮಕ್ಕಳ ಅದ್ಭುತ ಪ್ರತಿಭೆ ಪ್ರಕಟಗೊಂಡತ್ತು.
ಮಧು ಮಲ್ಟಿಪಲ್ಸ್ ನ ಮಳಿಭಾವ ವೆಂಕಟಕೃಷ್ಣ ಎಮ್.ಎನ್ ಇವು ಸಮಗ್ರ ಆತಿಥ್ಯೋಪಚಾರದ ಉಸ್ತುವಾರಿಯ ಯಶಸ್ವಿಯಾಗಿ ನಿರ್ವಹಿಸಿದವು.

ಮೋರೆಪುಟಲ್ಲಿ ಪಟಂಗೊ:

ಕೆಲವು ಪಟಂಗೊ :

 

5 thoughts on “5 ಮೇ 2019: ಕಾವು “ಜನಮಂಗಲ” ಸಭಾಭವನಲ್ಲಿ ಬೈಲಿನ ವಾರ್ಷಿಕೋತ್ಸವ ಕಾರ್ಯಕ್ರಮ ಸುಸಂಪನ್ನ

  1. ಒಪ್ಪಣ್ಣ ಬೈಲಿನ ವಿವಿ ಕಾರ್ಯಕ್ರಮ ಚೆಂದಕೆ ನೆಡದತ್ತು. ಕಾರ್ಯಕ್ರಮಲ್ಲಿ ಸಂಪೂರ್ಣ ರೂಪಲ್ಲಿ ಭಾಗವಹಿಸಿದ ಕೊಶಿ ಎನ್ನದು.
    ಕಾರ್ಯಕ್ರಮ ನೆಡೆವಲ್ಲಿ ಕಾವು ಈಶ್ವರಮಂಗಲ ವಲಯದವರ ಸಹಕಾರ ಅತ್ಯಪೂರ್ವ. ಸಹಕರಿಸಿದ ಎಲ್ಲೋರಿಂಗು ಧನ್ಯವಾದ, ಪ್ರತಿ ವರ್ಷವೂ ವೈವಿಧ್ಯಮಯವಾಗಿ ನೆಡೆಯಲಿ ಬೈಲಿನ ಕಾರ್ಯಕ್ರಮ.

  2. ಈ ಸರ್ತಿಯಾಣ ಕಾರ್ಯಕ್ರಮ ಚಂದ ಆಯಿದು. ಕೊಶಿ ಆತು.

  3. ಒಳ್ಳೆಯ ಕಾರ್ಯಕ್ರಮ

  4. ಅಚ್ಚುಕಟ್ಟಾಗಿ ತುಂಬಾ ಒಪ್ಪ ಆಯಿದು ಕಾರ್ಯಕ್ರಮ…
    ಬಂದೋರೆಲ್ಲಾ ಖುಷಿಪಟ್ಟಿದವ್… ಅದೇ ಅಭಿಪ್ರಾಯ ಕೇಳಿತ್ತು….

  5. ಕಾರ್ಯಕ್ರಮ ಬಹಳ ಚೆಂದಕೆ ನೆಡದತ್ತು. ಕಾರ್ಯಕ್ರಮಲ್ಲಿ ಸಂಪೂರ್ಣ ಭಾಗವಹಿಸಿದೆ, ಖುಷಿಯಾತು. ಆನು ತೆಗದ ಫೊಟೊಂಗಳನ್ನೆ ಆಲ್ಬಂಲ್ಲಿ ಕಂಡು ಮತ್ತೂ ಕೊಶಿಯಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×