ಅಬ್ಬಿ : ಬಾಲ ಮಧುರಕಾನನ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ನಡೆಶಿದ “ವಿಷು ವಿಶೇಷ ಸ್ಪರ್ಧೆ 2012 ರ ಅಭೂತಪೂರ್ವ ಯಶಸ್ಸಿಂಗೆ ಬೈಲಿನ ಎಲ್ಲೋರಿಂಗೂ ಅಭಿನಂದನೆಗೊ.
ಕವನ, ಕತೆ, ಪ್ರಬಂಧ, ಲಘುಬರಹ, ಫೋಟೋ – ಐದು ವಿಭಾಗಲ್ಲಿ ಪ್ರಶಸ್ತಿ ಗಳುಸಿದ ಲೇಖನಂಗಳ ಬೈಲಿಲಿ ಪ್ರಕಟ ಮಾಡುವ ಆಲೋಚನೆಂದ, ಇಂದಿಂದ “ವಿಷು ಸ್ಪರ್ಧೆ 2012” ಅಂಕಣ ಆರಂಭ.
ಹೇಂಗಿದ್ದು ನೋಡಿ, ನಿಂಗಳ ಅಭಿಪ್ರಾಯ ತಿಳುಶಿ.

ಸಂ.

ಕವನ ವಿಭಾಗಲ್ಲಿ ಪ್ರಥಮ ಸ್ಥಾನ ಗಳುಸಿದ ಬಾಲ ಮಧುರಕಾನನರ “ಅಬ್ಬಿ” ಕವನ ಇಲ್ಲಿದ್ದು.
ತೀರ್ಪುಗಾರರಿಂಗೆ ಕುಶಿ ಆದ ಪದ್ಯ ನಿಂಗೊಗೂ ಕುಶಿ ಅಕ್ಕು ಹೇಳ್ತದು ಎಂಗಳ ನಂಬಿಕೆ.

ಅಬ್ಬಿ:

ಬಳ್ಳಿ ಪುದೆಲುಗಳೆಡೆ೦ದ
ಪಾರೆಕಲ್ಲಿನ ಕೊರದು
ಜೊಳಜೊಳನೆ ಹರಿವ ಈ ಅಬ್ಬಿ ನೋಡು|
ಹಾಲ ಹೊಳೆ ಹರುದಾ೦ಗೆ
ದಬದಬನೆ ಬೀಳುತ್ತು
ಎ೦ತ ಚೆ೦ದವೊ ನೋಡು, ಸುತ್ತ ಕಾಡು||1||

ಶ್ರೀ "ಬಾಲ" ಮಧುರಕಾನನ

ಪಾರೆಗಳ ಮೈತೊಳದು
ನೀರು ಪಳಪಳ ಹೊಳದು
ಕೈಬೀಸಿ ದೆನಿಗೋಳ್ತು ಕೇಳ್ತಿಲ್ಲೆಯೋ?|
ಮುಳ್ಳುಬಲ್ಲೆಯೊ! ಕಾಡೊ!
ಚಿಗುರು,ಬಳ್ಳಿಯ ಕೊಡಿಯೊ!
ಪಿಸಿಪಿಸಿನೆ ಕೆಮಿಲೆ೦ತೊ ಹೇಳ್ತಿಲ್ಲೆಯೋ?||2||

ಕೆಮಿಗೊ೦ಡೆ ಮಾಡಿದರೆ
ಸ೦ಗೀತ ಕೇಳುತ್ತು
ತಿಳಿನೀರ ಕನ್ನಟಿಲಿ ಮೋರೆ ಕಾಣುತ್ತು|
ಅಲ್ಲೆ ಸೀರಣಿ ಹಾರಿ
ಕೊಣಿವ ಚೆ೦ದವ ನೋಡಿ
ಇಲ್ಲೆ ಇಪ್ಪೊ° ಹೇಳಿ ಮನಸು ಹೇಳುತ್ತು||3||

ಕವಿತೆಗೆ ಪಟ

ಉಗುರು ಬೆಚ್ಚ೦ಗಿಪ್ಪ
ಹರಿವ ನೀರಿ೦ಗಿಳುದು
ಮು೦ಗಿ ಮೀಸುವ ಕೊಶಿಯ ಹೇಳಲೆಡಿಗ?|
ಜಳು೦ಬುಳುನೆ ಕೈಕಾಲು
ಬಡುದು ನೀರಿಲಿ ಸೊಕ್ಕಿ
ಬೊಬ್ಬೆ ಹಾಕುವ ಸುಖವ ಮರವಲೆಡಿಗ?||4||

ಈ ಕಾಡು ಈ ನೀರು
ಈ ಗುಡ್ಡೆ ಆ ಬೈಲು
ಎ೦ದಿ೦ಗು ಚೆ೦ದಕ್ಕೆ ಒಪ್ಪಕಿರಲಿ|
ಕಲ್ಲು ಬ೦ಡೆಯ ತೋಚಿ
ಹಿಡುದು ನಿ೦ದಾ ಬೇರು
ಕೊಡುವ ಸ೦ದೇಶ ನಮ್ಮ ನೆ೦ಪಿಲಿರಲಿ||5||


ಸೂ:

 • ಪ್ರಶಸ್ತಿ ಗಳಿಸಿದ ಬಾಲಮಾವಂಗೆ ಅಭಿನಂದನೆಗೊ.
 • ಲೇಖಕರ ವಿಳಾಸ:
  ಬಾಲಸುಬ್ರಹ್ಮಣ್ಯ ಕೆ.ಯಂ (ಬಾಲ ಮಧುರಕಾನನ)
  ಮಧುರಕಾನನ
  ಬೇಳ (ಅಂಚೆ)
  ಕುಂಬಳೆ, ಕಾಸರಗೋಡು
  671321

ಸಂಪಾದಕ°

   

You may also like...

18 Responses

 1. raghumuliya says:

  ‘ಅಬ್ಬಿ’ – ಈ ಶಬ್ದವೇ ಈಗ ಮರದುಹೋಯಿದು.ಚೆ೦ದದ ಶೀರ್ಷಿಕೆಯೊಟ್ಟಿ೦ಗೆ ರಸವತ್ತಾದ ಕವನ.ಕಲ್ಪನೆಯೂ,ಸ೦ದೇಶವೂ ,ಲಯಬದ್ಧವಾದ ಪದಜೋಡಣೆಯೂ ಮನಸ್ಸಿ೦ಗೆ ಹಿತ ಕೊಟ್ಟತ್ತು.
  ಬಾಲ ಮಧುರಕಾನನರಿ೦ಗೆ ವ೦ದನೆ,ಅಭಿನ೦ದನೆ.

 2. “ಪುದೆಲು”ಗಳೆಡೆಂದ ಬತ್ತ “ಅಬ್ಬಿ”ಯ ವರ್ಣನೆ ಲಾಯ್ಕಾಯಿದು.ಶಬ್ದಗಳ ಆಯ್ಕೆ , ಪ್ರಾಸ ಎಲ್ಲ ಚಂದ ಬಯಿಂದು.ಎನ್ನ ಡ್ರಾಯಿಂಗ್ ಮಾಷ್ಟ್ರಿಂಗೆ ಅಭಿನಂದನೆಗೊ..

 3. ಭಾರಿ ಲಾಯ್ಕ ಆಯಿದು. ಬರದ ಬಾಲ ಮಧುರಕಾನನ ಮಾವಂಗೆ , ಇಲ್ಲಿ ಪ್ರಕಟ ಮಾಡಿದ ಸಂಪಾದಕರಿಂಗೆ ಒಪ್ಪಂಗೊ…..

 4. PERMUKHA ISHWARA BHAT says:

  madhura kaanana annana kavana laayika iddu.

 5. ಉಂಡೆಮನೆ ಕುಮಾರ° says:

  ಪ್ರಾಸಬಧ್ಧ ಚೆಂದದ ಪದ್ಯ..

 6. ವಿದ್ಯಾ ರವಿಶಂಕರ್ says:

  ವಾವ್ ಸೂಪರ್ ಅಯಿದು.

 7. jayashree.neeramoole says:

  ಹರೇ ರಾಮ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *