Oppanna.com

ಅಬ್ಬಿ : ಬಾಲ ಮಧುರಕಾನನ

ಬರದೋರು :   ಸಂಪಾದಕ°    on   01/05/2012    18 ಒಪ್ಪಂಗೊ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ನಡೆಶಿದ “ವಿಷು ವಿಶೇಷ ಸ್ಪರ್ಧೆ 2012 ರ ಅಭೂತಪೂರ್ವ ಯಶಸ್ಸಿಂಗೆ ಬೈಲಿನ ಎಲ್ಲೋರಿಂಗೂ ಅಭಿನಂದನೆಗೊ.
ಕವನ, ಕತೆ, ಪ್ರಬಂಧ, ಲಘುಬರಹ, ಫೋಟೋ – ಐದು ವಿಭಾಗಲ್ಲಿ ಪ್ರಶಸ್ತಿ ಗಳುಸಿದ ಲೇಖನಂಗಳ ಬೈಲಿಲಿ ಪ್ರಕಟ ಮಾಡುವ ಆಲೋಚನೆಂದ, ಇಂದಿಂದ “ವಿಷು ಸ್ಪರ್ಧೆ 2012” ಅಂಕಣ ಆರಂಭ.
ಹೇಂಗಿದ್ದು ನೋಡಿ, ನಿಂಗಳ ಅಭಿಪ್ರಾಯ ತಿಳುಶಿ.

ಸಂ.

ಕವನ ವಿಭಾಗಲ್ಲಿ ಪ್ರಥಮ ಸ್ಥಾನ ಗಳುಸಿದ ಬಾಲ ಮಧುರಕಾನನರ “ಅಬ್ಬಿ” ಕವನ ಇಲ್ಲಿದ್ದು.
ತೀರ್ಪುಗಾರರಿಂಗೆ ಕುಶಿ ಆದ ಪದ್ಯ ನಿಂಗೊಗೂ ಕುಶಿ ಅಕ್ಕು ಹೇಳ್ತದು ಎಂಗಳ ನಂಬಿಕೆ.

ಅಬ್ಬಿ:

ಬಳ್ಳಿ ಪುದೆಲುಗಳೆಡೆ೦ದ
ಪಾರೆಕಲ್ಲಿನ ಕೊರದು
ಜೊಳಜೊಳನೆ ಹರಿವ ಈ ಅಬ್ಬಿ ನೋಡು|
ಹಾಲ ಹೊಳೆ ಹರುದಾ೦ಗೆ
ದಬದಬನೆ ಬೀಳುತ್ತು
ಎ೦ತ ಚೆ೦ದವೊ ನೋಡು, ಸುತ್ತ ಕಾಡು||1||

ಶ್ರೀ "ಬಾಲ" ಮಧುರಕಾನನ

ಪಾರೆಗಳ ಮೈತೊಳದು
ನೀರು ಪಳಪಳ ಹೊಳದು
ಕೈಬೀಸಿ ದೆನಿಗೋಳ್ತು ಕೇಳ್ತಿಲ್ಲೆಯೋ?|
ಮುಳ್ಳುಬಲ್ಲೆಯೊ! ಕಾಡೊ!
ಚಿಗುರು,ಬಳ್ಳಿಯ ಕೊಡಿಯೊ!
ಪಿಸಿಪಿಸಿನೆ ಕೆಮಿಲೆ೦ತೊ ಹೇಳ್ತಿಲ್ಲೆಯೋ?||2||

ಕೆಮಿಗೊ೦ಡೆ ಮಾಡಿದರೆ
ಸ೦ಗೀತ ಕೇಳುತ್ತು
ತಿಳಿನೀರ ಕನ್ನಟಿಲಿ ಮೋರೆ ಕಾಣುತ್ತು|
ಅಲ್ಲೆ ಸೀರಣಿ ಹಾರಿ
ಕೊಣಿವ ಚೆ೦ದವ ನೋಡಿ
ಇಲ್ಲೆ ಇಪ್ಪೊ° ಹೇಳಿ ಮನಸು ಹೇಳುತ್ತು||3||

ಕವಿತೆಗೆ ಪಟ

ಉಗುರು ಬೆಚ್ಚ೦ಗಿಪ್ಪ
ಹರಿವ ನೀರಿ೦ಗಿಳುದು
ಮು೦ಗಿ ಮೀಸುವ ಕೊಶಿಯ ಹೇಳಲೆಡಿಗ?|
ಜಳು೦ಬುಳುನೆ ಕೈಕಾಲು
ಬಡುದು ನೀರಿಲಿ ಸೊಕ್ಕಿ
ಬೊಬ್ಬೆ ಹಾಕುವ ಸುಖವ ಮರವಲೆಡಿಗ?||4||

ಈ ಕಾಡು ಈ ನೀರು
ಈ ಗುಡ್ಡೆ ಆ ಬೈಲು
ಎ೦ದಿ೦ಗು ಚೆ೦ದಕ್ಕೆ ಒಪ್ಪಕಿರಲಿ|
ಕಲ್ಲು ಬ೦ಡೆಯ ತೋಚಿ
ಹಿಡುದು ನಿ೦ದಾ ಬೇರು
ಕೊಡುವ ಸ೦ದೇಶ ನಮ್ಮ ನೆ೦ಪಿಲಿರಲಿ||5||


ಸೂ:

  • ಪ್ರಶಸ್ತಿ ಗಳಿಸಿದ ಬಾಲಮಾವಂಗೆ ಅಭಿನಂದನೆಗೊ.
  • ಲೇಖಕರ ವಿಳಾಸ:
    ಬಾಲಸುಬ್ರಹ್ಮಣ್ಯ ಕೆ.ಯಂ (ಬಾಲ ಮಧುರಕಾನನ)
    ಮಧುರಕಾನನ
    ಬೇಳ (ಅಂಚೆ)
    ಕುಂಬಳೆ, ಕಾಸರಗೋಡು
    671321

18 thoughts on “ಅಬ್ಬಿ : ಬಾಲ ಮಧುರಕಾನನ

  1. ವಾವ್ ಸೂಪರ್ ಅಯಿದು.

  2. ಪ್ರಾಸಬಧ್ಧ ಚೆಂದದ ಪದ್ಯ..

  3. “ಪುದೆಲು”ಗಳೆಡೆಂದ ಬತ್ತ “ಅಬ್ಬಿ”ಯ ವರ್ಣನೆ ಲಾಯ್ಕಾಯಿದು.ಶಬ್ದಗಳ ಆಯ್ಕೆ , ಪ್ರಾಸ ಎಲ್ಲ ಚಂದ ಬಯಿಂದು.ಎನ್ನ ಡ್ರಾಯಿಂಗ್ ಮಾಷ್ಟ್ರಿಂಗೆ ಅಭಿನಂದನೆಗೊ..

  4. ‘ಅಬ್ಬಿ’ – ಈ ಶಬ್ದವೇ ಈಗ ಮರದುಹೋಯಿದು.ಚೆ೦ದದ ಶೀರ್ಷಿಕೆಯೊಟ್ಟಿ೦ಗೆ ರಸವತ್ತಾದ ಕವನ.ಕಲ್ಪನೆಯೂ,ಸ೦ದೇಶವೂ ,ಲಯಬದ್ಧವಾದ ಪದಜೋಡಣೆಯೂ ಮನಸ್ಸಿ೦ಗೆ ಹಿತ ಕೊಟ್ಟತ್ತು.
    ಬಾಲ ಮಧುರಕಾನನರಿ೦ಗೆ ವ೦ದನೆ,ಅಭಿನ೦ದನೆ.

  5. ಬಾಲ ಮಧುರಕಾನನರಿಂಗೆ ಅಭಿನಂದನೆಗೊ. ಫಟಕ್ಕೆ ಒಪ್ಪುವ ಒಪ್ಪ ಕವನ.

  6. ವಿವಿ ಕವನ ಸ್ಪರ್ಧೆಲಿ ಪ್ರಥಮ ಬಹುಮಾನ ಗಿಟ್ಟಿಸಿದ ಪದ್ಯ ಭಾರೀ ಶೋಕು ಆಯಿದು. ಅಪರೂಪದ ಹವ್ಯಕ ಪದಂಗೊ, ಅವುಗಳ ಜೋಡುಸಿದ ರೀತಿ ಅದ್ಭುತ. ಹಳೆಮನೆ ಅಣ್ಣನ ಫೊಟೋಕ್ಕೆ ಮಧುರಂಕಾನ ಬಾಲಣ್ಣನ ಪದ್ಯ ಲಾಯಕು ಹೊಂದುತ್ತು. ಬಳ್ಳಮೂಲೆ ಅಣ್ಣ ಹೇಳಿದ ಹಾಂಗೆ ಚೆಂದಕೆ ಹಾಡ್ಳುದೆ ಅಕ್ಕು. ಈ ಕಾಡು ಈ ನೀರು ಈ ಗುಡ್ಡೆ ಆ ಬೈಲು ಎ೦ದಿ೦ಗು ಚೆ೦ದಕ್ಕೆ ಒಪ್ಪಕಿರಲಿ. ಆಹಾಹ, ಎಂಥಾ ಒಳ್ಳೆಯ ಸಂದೇಶ. ಬಾಲಣ್ಣಂಗೆ ಅಭಿನಂದನೆಗೊ. ಮಧುರಂಕಾನ ಬಾಲಣ್ಣನ ಕವನಂಗೊ, ಬರಹಂಗೊ, ಕಾರ್ಟೂನುಗೊ ನಮ್ಮ ಬೈಲಿಂಗೆ ಏವತ್ತುದೆ ಬತ್ತಾ ಇರಳಿ.

  7. ಬಾಲ ಮಧುರ ಕಾನನ ಅವರ ಮಧುರ ಪದ್ಯ ಕುಶಿ ಆತು.ಅಭಿನಂದನೆಗೊ.

  8. ಪಟಕ್ಕೆ ಒಪ್ಪುವ ಕವನ ಲಾಯಿಕಕ್ಕೆ ಬಯಿಂದು.
    ಪ್ರಥಮ ಬಹುಮಾನ ವಿಜೇತರಾದ ಬಾಲ ಮಧುರಕಾನನ ಇವಕ್ಕೆ ಅಭಿನಂದನೆಗೊ

  9. ವಾಹ್ .. ಭಾರೀ ಲಾಯಕ ಆಯ್ದು. ಲಾಯಕ ಓದುಸಿಗೊಂಡು ಹೋವ್ತು. ಪ್ರಥಮ ಬಹುಮಾನ ಗಳಿಸಿದ್ದು ಖುಷಿ ಆತು. ಅಭಿನಂದನೆಗೊ. ಮದುರಕಾನನ ಮಾವ ಬೈಲಿಂಗೆ ಬಂದುಕೊಂಡಿರೆಕು, ನಮ್ಮೊಂದಿಂಗೆ ಶುದ್ದಿಲಿಯೂ ಕಾಣೆಕು ಹೇಳಿ ಕೇಳಿಕೆ.

  10. ಬಾಲಮಾವಾ°,
    ಪದ್ಯ ಲಾಯಕಿದ್ದು. ಓದಿ ತುಂಬ ತುಂಬ ಕೊಶಿ ಆತು. 🙂
    ಪದ್ಯ ಬರವಲೆ ಆದಿಪ್ರಾಸವೇ ಆಯೆಕೂಳಿ ಇಲ್ಲೆಪ್ಪೋ? 🙂

  11. ಪದ್ಯ ಭಾರೀ ಲಾಯಿಕಾಯಿದು. ಲಯಬದ್ಧ ವಾಗಿ ಅರ್ಥಗರ್ಭಿತವಾಗಿದ್ದು. ಆನು ಹಾಡಿ ನೋಡಿದೆ. ಕಲ್ಯಾಣೀ ರಾಗ ಸರೀ ಸೇರುತ್ತು. ಧನ್ಯವಾದಂಗಳು ಬಾಳಣ್ಣಂಗೆ.

    1. ಆರದ್ದಾರು ದನಿಲಿ ಇಲ್ಲಿ ಬರಳಿ..

  12. ಈ ಬಾಲ ಇದ್ದಲ್ಲದಾ….. ಎನ್ನ ಹಳೇಏಏಏಏಏಏಏಏ… ಪ್ರೆಂಡು…. ಅವಂಗೆ ಅಭಿನಂದನೆಗೋ….

  13. ಶ್ರೀ ಗುರುಭ್ಯೋ ನಮಃ.

    ಪದ್ಯ ಸೂ….ಪರ್!!!!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×