ನೆಂಪಣ್ಣ : ಲಘುಬರಹ : ಅನಿತಾ ನರೇಶ್ ಮಂಚಿ

May 30, 2012 ರ 10:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪ್ರತಿಷ್ಠಾನವು ನೆಡೆಶಿದ “ವಿಷು ವಿಶೇಷ ಸ್ಪರ್ಧೆ – 2012“ರಲ್ಲಿ ದ್ವಿತೀಯ ಸ್ಥಾನ ಗಳುಸಿದ ಲಘುಬರಹ “ನೆಂಪಣ್ಣ”.
ಲಘುಬರಹದ ಲೇಖಕಿ ್ರೀಮತಿ ಅನಿತಾ ನರೇಶ್ ಮಂಚಿ ಇವಕ್ಕೆ ಹೃತ್ಪೂರ್ವಕ ಅಭಿನಂದನೆಗೊ.
ಅನಿತಕ್ಕನ ಹವ್ಯಕ ಸಾಹಿತ್ಯ ಸೇವೆ ಇನ್ನೂ ಮುಂದುವರಿಯಲಿ. ಇನ್ನೂ ರಚನೆಗೊ, ಸಾಹಿತ್ಯಂಗೊ ಇವರ ಕೈಲಿ ಬರಳಿ – ಹೇಳ್ತದು ನಮ್ಮ ಹಾರೈಕೆ.

ಲೇ. ಅನಿತಾ ನರೇಶ್ ಮಂಚಿ

ನೆಂಪಣ್ಣ (ಲಘುಬರಹ)

“ಇದಾ ಇಲ್ಲಿ ಗೆಣಪ್ಪ ಬೈಂದ.. ಆನು ಪಕ್ಕ ತೋಟಕ್ಕೆ ಹೋಗಿ ನಾಲ್ಕು ಅರಿಕ್ಕೆಲು ಹುಲ್ಲು ಮಾಡಿಕೊಂಡು ಬತ್ತೆ, ನಿಂಗ ಒಂದರಿ ಮಾತಾಡಿ ನಿಘಂಟು ಮಾಡಿ” ಸಾವಿತ್ರಿ ಶಂಭಣ್ಣಂಗೆ ಕೇಳುವ ಹಾಂಗೆ ಮೆಲ್ಲೆ ಹೇಳಿ ಹೆರಟತ್ತು.
‘ಹ್ಹೋ.. ಗೆಣಪ್ಪ.. ಬಾ ಬಾ.. ಈಗೆಲ್ಲಿಂದ ಬಂದದು ನೀನು ಈ ನಟಬೆಶಿಲಿಂಗೆ..!? ಅಲ್ಲ ಆನೆಂತ ಜನ ಹೇಳಿ.. ಬೆಶಿಲು ಹೇಳಿ ಮನೆ ಒಳ ಕೂದರೆ ನಮ್ಮ ಕೆಲಸ ಅಪ್ಪಲಿದ್ದಾ.. ಇಲ್ಲೆನ್ನೆ.. ಎಂತಾರು ಜೆಂಬ್ರ ಇತ್ತಾಯಿಕ್ಕು ಇತ್ಲಾಗಿ ಅಲ್ಲದೋ.. ’
ಅಪ್ಪು ಮಾವ ವೈದಿಕಕ್ಕೆ ಹೋಪಲಿತ್ತು .. ಊಟ ಆದ ಕೂಡ್ಲೇ ಹೆರಟೆ. ಇದು ನಿಂಗೋ..’

‘ಹ್ಹೋ.. ಇದಾ ಈಗ ನೆಂಪಾತು ನೋಡು..ಅಲ್ಲಿ ಕಾಫಿ ಆಗಿರ ಹಾಂಗಾರೆ.. ಈಗೆಂತಕ್ಕು ಆಸರಿಂಗೆ..? ಕಾಫಿಯೋ, ಚಾಯವೋ ಆಯೆಕ್ಕಾದರೆ ಅತ್ತೆ ತೋಟಂದ ಬರೆಕ್ಕಷ್ಟೆ.. ಶರ್ಬತ್ತು ಅಕ್ಕಾರೆ ರೆಡಿ ಇದ್ದು ಕೊಡ್ತೆ..ಸೆಖೆಗೆ ಅದುವೇ ಲಾಯಿಕಪ್ಪದು..
ಎಂತಾ ಬೆಶಿ ಮಾರಾಯ ತಡವಲೆಡಿತ್ತಿಲ್ಲೆ.. ಫ್ಯಾನ್ ಹಾಕುವ ಹೇಳಿರೆ ಈ ಕರೆಂಟಿಂದೊಂದು ಉಪದ್ರ.. ನೋಡಿದಾ.. ಮೈ ಮೇಲೆ ಅರ್ಧ ಇಂಚು ದಪ್ಪಕ್ಕೆ ಬೆಗರ್ಸೆರೆ ಬಿದ್ದಿದು..!!
ಅದಾ.. ಈಗ ನೆಂಪಾತು ನೋಡು ಕರೆಂಟು ಹೇಳುವಾಗ.. ಮಕ್ಕೊಗೆ ಪರೀಕ್ಷೆ ಎಲ್ಲಾ ಮುಗುತ್ತಾ.. ಮುಗುದರೂ ರಗಳೆಯೇ..ಆದರೆ ಈಗ ಬೀಜದ ಗುಡ್ಡೆ, ಮಾವಿನಕಾಯಿ ಹೇಳಿ ಎಲ್ಲಾ ಹೆರ ತಿರುಗುತ್ತವಿಲ್ಲೆ.
ಎಷ್ಟೊತ್ತಿಂಗೆ ನೋಡಿರೂ ಟಿ ವಿ ಇಲ್ಲದ್ದರೆ ಕಂಪ್ಯೂಟರ್..
ನಿನ್ನಲ್ಲಿಯೂ ಇದ್ದಾಯಿಕ್ಕು ಅದು.. ಅಲ್ಲ.. ಬೇಕಪ್ಪ.. ಕಾಲಕ್ಕೆ ತಕ್ಕ ಹಾಂಗೆ ಕೋಲ.. ನೀ ಎಂತ ಹೇಳ್ತೆ..’

‘ಅಪ್ಪಪ್ಪು ಮಾವ.. ಪರೀಕ್ಷೆ ಇಂದು ಅಖೇರಿ. ಈಗ ಶಾಲೆಗೆ ಹೋಯೆಕ್ಕು ಮಗಳ ಕರಕ್ಕೊಂಡು ಬಪ್ಪಲೆ..ಮತ್ತೇ.. ನಿಂಗಾ..’

‘ಅದಾ.. ಈಗ ನೆಂಪಾತು ನೋಡು..ಶಾಲೆ ಹೇಳುವಾಗ .. ನಿಂಗಳ ಮನೆಯ ಹತ್ರೆ ಇತ್ತಿದ್ದ ಅಲ್ಲದಾ ಶಂಕರ ಹೇಳಿ ..
ಅವ ಎನ್ನ ಶಾಲೆ ಫ಼್ರೆಂಡ್ ಮಾರಾಯಾ.. ಈಗಳೂ ಅಲ್ಲೇ ಇದ್ದನಾ.. ಜಾಗೆ ಮಾರಿ ಹೋವ್ತಡ ಹೇಳಿ ಸುದ್ಧಿ ಇತ್ತೊಂದರಿ..
ಇದಾ.. ಎಂಗಳ ಮದುವೆ ಆದ ಸುರುವಿಲಿ ಮಾರಾಯನೇ..ಹೇಳಿರೆ ಈಗೊಂದು ನಲ್ವತ್ತು ವರ್ಷ ಮೊದಲು.. ಆನುದೇ ನಿನ್ನತ್ತೆದೇ ಶಂಕರ ಒತ್ತಾಯ ಮಾಡಿದ ಹೇಳಿ ಅವನ ಮನೆಗೆ ಹೋದ್ದು..
ಸಪೂರದ ಕಟ್ಟಪುಣಿ ಇದಾ ಅವನಲ್ಲಿಗೆ ಹೋಪಲೆ.. ನಿನ್ನತ್ತೆ ಹೊಸ ಜಾಗೆಯ ಗೆಬ್ಬಾಯಿಸಿಕೊಂಡು ಹೋಗಿ ತುಳುಂಕನೇ ಗೆದ್ದೆಗೆ ಬೀಳೆಕ್ಕಾ…!!
ಸುತ್ತಿದ ಸೀರೆ ಎಲ್ಲಾ ಚೆಂಡಿ .. ಅದರ ನೆಗ್ಗುಲೆ ಹೋಗಿ ಆನುದೆ ಪೂರ್ತಿ ಕಿರಿಂಚಿ ಮೆತ್ತಿಕೊಂಡೆ.. ಹಾಂಗೆ ಹೋದ್ದು ಅವನಲ್ಲಿಗೆ.. ಮತ್ತೆ ಅವನ ಹೆಂಡತಿ ಮಾತುಲೆ ಕೊಟ್ಟ ವಸ್ತ್ರಲ್ಲಿಯೇ ಇಬ್ರೂ ಮನೆಗೆ ಬಂದದು..’

‘ಹ್ಹ..ಹ್ಹ.. ಅಪ್ಪಾ.. ಮಾವ.. ಅವು ಈಗಳೂ ಅಲ್ಲೆ ಇದ್ದವು.. ಭಾರೀ ಕೃಷಿ ಅವರದ್ದು.. ’

‘ಅಪ್ಪನ್ನೆ.. ನೀನು ಕೃಷಿ ಹೇಳುವಾಗ ನೆಂಪಾತು ನೋಡು.. ಅಂದು ಭಾರೀ ಭಾರೀ ವೆನಿಲ್ಲಾ ಹಾಕಿತ್ತಿದ್ದ ಅಲ್ಲದಾ ಅವ..
ಬಳ್ಳಿ ಮಾರಿಯೇ ಒಳ್ಳೇ ಪೈಸೆ ಆದಿಕ್ಕು ಅವಂಗೆ..ಎಂಗಳಲ್ಲಿಯೂ ರಜ್ಜ ಇದ್ದು ಆದರೆ ಈಗ ಅಡಕ್ಕೆ ಮರದ ಕೊಬೆಲಿಪ್ಪ ಆ ಬಳ್ಳಿಯ ಮುತ್ಸುದು ಹೇಂಗೆ ಹೇಳಿ ತಲೆಬೆಶಿ ಮಾರಾಯ..
ಅದಾ.. ಅಡಕ್ಕೆ ಹೇಳುವಾಗ ನೆಂಪಾತು ನೋಡು.. ಈಗ ರಜಾ ಅಡಕ್ಕೆ ಕ್ರಯ ಪೊಕ್ಕುತ್ತಾ ಇದ್ದದ. ಸಧ್ಯ ಕೊಟ್ಟೆಯಾ..?
ಎಂತಾದರೆಂತ ನಮ್ಮ ಅಡಕ್ಕೆಗೆ ರೇಟ್ ಏರೆಕ್ಕರೆ ಮೊದಲೇ ಬಾಕಿ ಇಪ್ಪದರದ್ದು ಎಲ್ಲಾ ರೇಟು ತಲೆಂದ ಕಡ್ಪ ಹೋಗಿ ಆಗಿರ್ತು.ನಾವು ಮೊದಲಿದ್ದ ಹಾಂಗೇ ಇಪ್ಪದು..ಇಲ್ಲಿಂದ ಹತ್ರಾಣ ಪೇಟೆಗೆ ಹೋಯೆಕ್ಕಾರೆ ಬಸ್ಸಿಂಗೆ ಸುಮಾರು ಸೊರ್ಗೆಕ್ಕು.. ಇನ್ನು ಹೋಪ ಮಾರ್ಗದ ಕತೆ ಹೇಳಿ ಪೂರೈಸ.. ’

‘ಅದಪ್ಪು ಮಾವ.. ಮೊನ್ನೆ ನಿಂಗೋ…. ’

‘ಇದಾ ಮಾರ್ಗ ಹೇಳುವಾಗ ನೆಂಪಾತು ನೋಡು..ನಿನ್ನ ತೋಟದ ಮಾರ್ಗ ಸರಿ ಆತಾ.. ಜೆ ಸಿ ಬಿ ಲಿ ಗರ್ಪುಸಿದ್ದಾ..
ಅಲ್ಲ ಅದರೆಲ್ಲ ಕೆಲ್ಸದವರತ್ರೆ ಮಾಡ್ಸುವ ಆಲೋಚನೆಯೇ ಇಲ್ಲೆನ್ನೆ ಈಗ.. ಮಣ್ಣು ಇತ್ತಿಲ್ಲೆಯಾ ಸುಮಾರು.. ಅದರೆಂತ ಮಾಡಿದೆ.. ತೋಟಕ್ಕೆ ಹಿಡಿಶೆಕ್ಕಾತು.. ನಾಲ್ಕು ಅಡಕ್ಕೆ ಆದರೂ ಹೆಚ್ಚಾವ್ತಿತ್ತು.. ’

‘ಹೂಂ ಹಿಡಿಶೆಕ್ಕು ಮಾವ ಜನ ಆಯೆಕ್ಕನ್ನೆ ಅದಕ್ಕೂ.. ಮತ್ತೇ ..’

‘ಅಪ್ಪಪ್ಪಾ .. ಈಗ ನಿತ್ಯದ ಕೆಲಸ ಮುಗುಶುದೇ ರಗಳೆ.. ಹೊಸತ್ತೆಂತನ್ನೂ ಎಳದು ಹಾಕಿಕೊಂಬಲೇ ಎಡಿತ್ತಿಲ್ಲೆ..
ಅದಪ್ಪು ಅಡಕ್ಕೆ ಎಲ್ಲಾ ಒಳ ಬಿದ್ದತ್ತಾ.. ಎಂಗೊಗೂ ಇದಾ ಈ ಜಾಲಿಲಿ ಇಪ್ಪದಿಷ್ಟಿದ್ದು ಇದು ಒಳ ಹೋದರೆ ನೆಮ್ಮದಿ.. ರಜೆಲಿ ಬಪ್ಪ ಪುಳ್ಯಕ್ಕೊಗೆ ಆಡುಲೂ ಜಾಗೆ ಬೇಕನ್ನೆ..’

‘ಹುಂ .. ಅಪ್ಪಪ್ಪು ಮಾವ.. ಹ್ಹೋ.. ಹೊತ್ತಾದ್ದು ಗೊಂತೇ ಅಯಿದಿಲ್ಲೆ .. ಎನಗೆ ತಡ ಆವ್ತುಮಗಳ ಕರಕ್ಕೊಂಡು ಬಪ್ಪಲೆ .. ಆನಿನ್ನು ಬತ್ತೆ ಮಾವಾ.. ಅತ್ತೆಗೂ ಹೇಳಿಕ್ಕಿ.. ’

‘ಆತಂಬಗ ..ಸುಮಾರು ಹೊತ್ತಾತನ್ನೇ, ಗೊಂತಾಯಿದಿಲ್ಲೆ ..ಆಗಾಗ ಬತ್ತಾ ಇರು ಹೀಂಗೆ.. ’

ಸಾವಿತ್ರಿ ತೋಟಂದ ಬಂದದು, ಕತ್ತಿ ಕೆಳ ಮಡುಗದ್ದೆ ಕೇಳಿತ್ತು..
‘ಅಪ್ಪೊ.. ಯಾವಾಗಂಗೆ ಪೂಜೆ ನಿಘಂಟು ಮಾಡಿದಿ ನಿಂಗ.. ಚೈತ್ರ, ಚೈತನ್ಯ , ಪುಳ್ಳಿಯಕ್ಕ ಎಲ್ಲಾ ಬಪ್ಪ ದಿನಕ್ಕೆ ಅವಂಗೆ ಪುರುಸೊತ್ತಿದ್ದಡವಾ..?
ಇದೆಂತದಿದು.. ಈ ಶರ್ಬತ್ತು ಮಾಡಿ ಮಡುಗಿದ್ದರ ಅವಂಗೆ ಕೊಟ್ಟಿದಿಲ್ಲಿರಾ ಎಂತ..? ಮಾಡಿದ್ದು ಹಾಂಗೇ ಇದ್ದು..!!
ಅವನ ಫೋನ್ ಮಾಡಿ ಬಪ್ಪಲೆ ಹೇಳಿ ಒಂದು ಲೋಟ ಆಸರಿಂಗೂ ಕೊಡದ್ದದಿದ್ದಾ ನಿಂಗ..’ಅಂತೆ ಅಲ್ಲ ನಿಂಗಳ ಎಲ್ಲರೂ ನೆಂಪಣ್ಣ ಹೇಳುದು..!!

‘ಛೇ.. ಇದಾ. ಈಗ ನೆಂಪಾತಿದ .. ಅವನ ಪೂಜೆಗೆ ದಿನ ಕೇಳುಲೆ ಆನೇ ಬಪ್ಪಲೆ ಹೇಳಿದ್ದು ಹೇಳಿ.. ಅದೊಂದು ಕೇಳುಲೆ ಬಾಕಿ ಆತನ್ನೆ.. ’

~*~*~

ಸೂ:

 • ವಕೀಲ, ಛಾಯಾಗ್ರಾಹಕ, ಪ್ರಗತಿಪರ ಕೃಷಿಕ ಪತಿ ಶ್ರೀಯುತ ರಾಮ ನರೇಶ ಮಂಚಿ ಇವರ ಒಟ್ಟಿಂಗೆ ತೋಟದ ಕೃಷಿಲಿ ಹೆಗಲುಕೊಟ್ಟೊಂಡು, ಸಾಹಿತ್ಯ ಕೃಷಿಯನ್ನೂ ಮಾಡ್ತಾ ಇದ್ದವು ಅನಿತಕ್ಕ.
 • ಅನಿತಕ್ಕನ “ಮಹತಿ” ಶುದ್ದಿಗೊ ಅವರ ಬ್ಲೋಗು kadalu.blogspot.com ಲಿ ಕಾಂಬಲಕ್ಕು.
 • ಅನಿತಕ್ಕನ ವಿಳಾಸ:
  ಅನಿತಾ ನರೇಶ್ ಮಂಚಿ
  ಮಂಚಿ ಗ್ರಾಮ ಮತ್ತು ಅಂಚೆ
  ಬಂಟ್ವಾಳ ತಾಲೂಕು
  ದ. ಕ. ಜಿಲ್ಲೆ.
  ಪಿನ್: 574323
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ದೊಡ್ಮನೆ ಭಾವ

  ನ೦ಗಳ ಭಾಷೆಯ ಸ೦ಭಾಷಣೇನ ಸೂಕ್ಶ್ಮವಾಗಿ ಗ್ರೈಶಿದ್ರೆ ಎ೦ಥ ಚೊಲೋ ಮಜಾ ಸಿಕ್ತು ಅನ್ನೋದುಕ್ಕೆ ಇದೇ ಬರಹ ಸಾಕು. ಅನಿತಕ್ಕಾ, ಚೊಲೋ ಬೈ೦ದು, ಸ್ಪರ್ಧೆಯಲ್ಲಿ ಗೆದ್ದದ್ದಕ್ಕೂ ಅಭಿನ೦ದನೆಗೊ.

  [Reply]

  VN:F [1.9.22_1171]
  Rating: +1 (from 1 vote)
 2. ಡೈಮಂಡು ಭಾವ
  ಡೈಮಂಡು ಭಾವ

  ಲಾಯ್ಕ ಆಯಿದು… ಅಭಿನಂದನೆಗೊ…
  ಸಾಹಿತ್ಯ ಕೃಷಿ ಹೀಂಗೆ ಮುಂದುವರಿಯಲಿ ಹೇಳಿ ಹಾರೈಕೆ…

  [Reply]

  VA:F [1.9.22_1171]
  Rating: 0 (from 0 votes)
 3. n subraya bhat

  Nempannana nempina gaali tampaagi beesithu Anithakka Nareshannana kelidde tilisi aata? Abhinandane

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°ಚೆನ್ನಬೆಟ್ಟಣ್ಣಕಳಾಯಿ ಗೀತತ್ತೆಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ಜಯಗೌರಿ ಅಕ್ಕ°ಶೇಡಿಗುಮ್ಮೆ ಪುಳ್ಳಿವಸಂತರಾಜ್ ಹಳೆಮನೆಅಜ್ಜಕಾನ ಭಾವಶ್ಯಾಮಣ್ಣಚುಬ್ಬಣ್ಣಪವನಜಮಾವಶುದ್ದಿಕ್ಕಾರ°ಅಕ್ಷರ°ಶಾಂತತ್ತೆವೆಂಕಟ್ ಕೋಟೂರುಉಡುಪುಮೂಲೆ ಅಪ್ಪಚ್ಚಿಶಾ...ರೀಪುತ್ತೂರುಬಾವಚೂರಿಬೈಲು ದೀಪಕ್ಕಮಾಲಕ್ಕ°ವಿನಯ ಶಂಕರ, ಚೆಕ್ಕೆಮನೆಯೇನಂಕೂಡ್ಳು ಅಣ್ಣಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ