ನಾಯಿ ನಾಮಾಯಣ : ಲಘುಬರಹ – ಅನುಷಾ ಹೆಗಡೆ

May 5, 2012 ರ 10:01 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಲೇ: ಕು| ಅನಷಾ ಹೆಗಡೆ

ವಿಷು ವಿಶೇಷ ಸ್ಪರ್ಧೆ- 2012 ರಲ್ಲಿ ಲಘು ಬರಹ ಸ್ಪರ್ಧೆಲಿ ಪ್ರಥಮ ಬಹುಮಾನ ಸಿಕ್ಕಿದ ಲೇಖನ.
ಲೇಖಕಿ ಕು| ಅನುಷಾ ಹೆಗಡೆ ಪ್ರತಿಷ್ಠಾನದ ಪರವಾಗಿ ಹಾರ್ದಿಕ ಅಭಿನಂದನೆಗೊ..

ನಾಯಿ ನಾಮಾಯಣ

“ಪಟ ಪಟ ಬನ್ನಿ ಆಸ್ರಿಗೆ ಕುಡ್ಯಲೆ. ತೆಳ್ಳೇವು ತಣದೋಗ್ತು.. ಬೆಳಗ್ಗಿನ ಆಸ್ರಿಗೆ ಸಂತೆ ಮುಗ್ಸಿಕ್ಕೆ ಅಡಿಕೆ ಸುಲಿಯಲೆ ಕುತ್ಕಂಬ ತನಕ ಮತ್ತೆ ಮಧ್ಯಾಹ್ನದ ಅನ್ನ ಪದಾರ್ಥ ಮಾಡಲೆ ಹದಾ ಆತು..
ಸುಲದೇ ಸಾಗ್ತಿಲ್ಲೆ….” ಹೇಳಿ  ಬೆಳಬೆಳಗ್ಗೆ ಮನಯವ್ಕೆಲ್ಲಾ ಗಡಬಡೆ ಮಾಡ್ಸಿ, ಮನಾರ್ತನೆ ಮುಗ್ಸಿಕ್ಕೆ ತೊಳ್ಕಂಡಿದ್ದ ಕೈಯ ಸೆರಗಿಗೆ ಒರಸ್ಕ್ಯತ್ತಾ ಕೊನೆರಾಶಿ ಬುಡಕೆ ಮೆಟಕತ್ತಿ ಮಣೆ ಹಾಕ್ಯಂಡು ಕುತ್ಗಂತು ಯಮುನಕ್ಕ.
“ ತಮ್ಮಾ … ಓ ಮಾಣಿ… ಇಲ್ಲೊಂದು ಬಾರಿ ಬಾ ಮಗಾ” ಹೇಳಿ ಆವಾಗಷ್ಟೆ ಶಾಲಿಗೆ ಹೊಂಟಿದ್ದ ಮಗನ್ನ ಕರತ್ತು.
ಅವಾರುವಾ ಸಿಕ್ಕಿದ್ದೇ ಛಾನ್ಸು ಹೇಳಿ ತುದಿಕಾಲಲ್ಲಿ ಓಡಿ ಬಂದ.

“ತಮ್ಮಾ ಎರಡು ಗನಾ ಕೊನೆ ತೆಕ್ಕೊಡು ನೋಡನ…ಅಡಿಕೆ ತೆರಕೊಡು, ಸುಲಿಯಲೆ ಬತ್ತಾ ಹೇಳಿ ನೋಡ್ತಿ” ಹೇಳಿ ಕೇಳಿದ್ದೇ ತಡ ಆ ಮಾಣಿ ಕೊನೆರಾಶಿ ಮೇಲೆ ಜಿಗಿದೆ ಬಿಟ್ಟ.
ಅಂವ ಹಾರಿದ ಹೊಡ್ತಕ್ಕೆ ಕೊನೆರಾಶಿನೂ ಜರಕಂಡ ಬಿತ್ತು.
“ಥೋ ಥೋ ಥೋ ಯಡಬಟ್ಟ ಮಾಣಿನೆಯಾ… ಒಂದು ಕೆಲ್ಸನು ಸುಸೂತ್ರ ಮಾಡ್ತ್ಯಿಲ್ಯೆಪಾ” ಹೇಳಿ ಯಮುನಕ್ಕ ಬಯ್ಯಲೇ ಷುರು ಮಾಡದಕ್ಕೂ ನಾಯಿ ಮರಿ ಕುಂಯ್ ಕುಂಯ್ ಗುಟ್ಟದಕ್ಕೂ ಸಮಾ ಆತು.
“ಅಮ್ಮಾ ಇಲ್ಯೋಡು ನಾಯಿಮರಿನಾ ಬಿಳೀಕ ಎಷ್ಟು ಚಂದಿದ್ದು ಹೇಳಿ.. ಟುಮ್ ಟುಮ್ಮಗಿದ್ದು. ನಮ್ಮನಿಗೆ ಅಡ್ಡಿಲ್ಲೆ” ಹೇಳಿ ಮಾಣಿ ಒಂದೇ ಉಸರಲ್ಲಿ ಅದರ ವರ್ಣನೆ ಮಾಡಿ ಅದನ್ನು ಎತ್ಕ್ಯಂಡು ಕುಂತೇ ಬಿಟ್ಟ.
“ನಾಯಿ ಮರಿ  ಎತ್ಕ್ಯಂಡು ಅಂಗಿ ಗಲೀಜು ಮಾಡ್ಕ್ಯತ್ತೆ.. ಯನ್ನತ್ರಂತು ಅಂಗಿ ತೊಳ್ಯಲೇ ಅಪ್ಪದಲ್ಲಾ” ಹೇಳಿ ಅಮ್ಮ ಬೈಕ್ಯತ್ತಿಪ್ಪಕಾದ್ರೆ, ಬ್ಯಾಣಕ್ಕೆ ಹೊಂಟಿದ್ದ ಗಜಾನ ಭಾವ ಕತ್ತಿ ಮಸ್ಯಲೆ ಹೇಳಿ ಆ ಬದಿಗೆ ಬಂದ.
ಅಮ್ಮ ಮಗನ ಮಾತುಕತೆಯೆಲ್ಲಾ ಕೇಳಿ ಎಂತಾ ಅನಸ್ತನ “ತೆಳತ್ತನೆ  ಒಂದು ದೋಸೆ ಚೂರು ಹಾಕ್ಬುಡು..ಯಾರು ತಂದು ಬಿಟ್ಟಿಕ ಹೋಜ್ವ ಎಂತನ.. ಕೊನೆ ಕೊಯ್ಲಿಗೆ ಸರಿ ಬಂಜು ಮನೆಗಾವಲಿಗಾತು” ಹೇಳಿ ಹೇಳಿಕ್ಕ ಹೋದ°

ಅತ್ಲಾ ಬದಿಗೆ ಮಾಣಿ ರಾಶಿ ಜವಾಬ್ದಾರಿ ಬಂದೊರಂಗೆ ಅದಕ್ಕೊಂದು ಗೋಣಿಚೀಲ, ಹಾಲು ಕುಡ್ಯಲೆ ತಂಬಾಣ ಎಲ್ಲ ತಂದಿಟ್ಟು ಅವ್ರಮನೆ ಹಳೇ ನಾಯಿದ ದೊಡ್ಡ ಚೈನೇ ತಂದು ಅದ್ರ ಕುತ್ಗಿಗೆ ಹಾಕ್ದ ಹೇಳಾತು.
“ಶಾಲಿಗೆ ಹೊತ್ತಾಜಿಲ್ಯನ?” ಹೇಳಿ ಅಮ್ಮ ನೆನಪು ಮಾಡತಂಕ ಅಲ್ಲೇ  ಮಳ್ ಹರಕತ್ತಿದ್ದಿದ್ದ ಮಾಣಿ ಆಚೀಚೆ ಮನೆ ಹುಡ್ರಿಗೆ ಹೊಸ ನಾಯಿಮರಿ ಸುದ್ಢಿ ಹೇಳ್ಕ್ಯತ್ತ ಶಾಲಿಗೆ  ಹೋದ.
ಇತ್ಲಾಗಿ ಯಮುನಕ್ಕ “ನಾಯಿಮರಿ ಗನಾಕಿದ್ದು.. ಇದಕೊಂದು ಗನಾ ಹೆಸ್ರು ನಿಂಗವೇ ಹೇಳಿ” ಅಂತ ಟಿ ವಿ 9 ಲ್ಲಿ ಚುನಾವಣೆ ಫಲಿತಾಂಶ ನೋಡ್ಕ್ಯತ್ತಿದ್ದಿದ್ದ ಗಜಾನಭಾವನ ಕೇಳ್ತು.
“ಎಂತಾ ರಾಜಕೀಯನಪಾ ಸಿದ್ಧರಾಮಯ್ಯ ಗೆದ್ಬಿಟ್ಯಡಾ. ಈ ಕುನ್ನಿ ಮರಿಗೂ “ಸಿದ್ಧ” ಹೇಳಿ ಹೆಸರಿಡನಾ” ಅಂದ.  ಆವಾಗ ಯಮುನಕ್ಕ “ ಅಲ್ದ್ರಿ, ಗೋಕುಲಾಷ್ಟಮಿಗೂ ಇಮಾಂಸಾಬಿಗು ಎಂತಾ ಸಂಬಂಧ ಹೇಳವುಂಗೆ ನಾಯಿಮರಿಗೂ ಚುನಾವಣೆಗೂ ಎಂತಾ ಸಂಬಂಧನಪಾ!!” ಹೇಳಿ ಅಲ್ಲೆ ಒಂಚೂರು ಗಂಡಂಗೆ ರೇಗ್ಸಕ್ಯತ್ತಾ.
ಆದ್ರೆ ಅಂವ ಹೇಳಿದ ಹೆಸ್ರೆ ಅಡ್ಡಿಲ್ಲೆ ಹೇಳಿ ಒಪ್ಕ್ಯತ್ತಾ ಲೋಟದಲ್ಲಿ ಉಳಕಂಡಿದ್ದ ಹಾಲಿಗೆ ನೀರ ಹಾಕಿ ಸಿದ್ಧನ ತಂಬಾಣಕ್ಕೆ ಹೊಯ್ದಿಕ್ಕೆ ಬಂತು.

“ದಿನವು ಕಳೆದು ಹೋಯಿತಲ್ಲ..ಮುನಿಸುವವರು ಯಾರು ಇಲ್ಲ” ಹೇಳಿ ಸಿದ್ಧ ಸಂಜೆ ತನಕ ಸುಮ್ಮಂಗೆ ಮನ್ಕ್ಯಂಡಿತ್ತು.
ಮಾಣಿ ಶಾಲೆ ಬಿಟ್ಟು ಬಂದಂವ ಪಾಟಿಚೀಲನೂ ತೆಗಿದೆ ನಾಯಿಮರಿ ಆಟ ಆಡಸ್ತಾ. ಅದಕ್ಕಿಟ್ಟ ಹೊಸ ಹೆಸ್ರು ಕೇಳಿ “ ಅಪ್ಪಾ ಸಿದ್ಧ ಹೇಳಿ ಹೆಸರಿಟ್ಯಲಾ ಮಾರಾಯ. ಇದು ಹೆಣ್ಣು ನಾಯಿಮರಿ ಅಲ್ದನಾ” ಹೇಳಿ ಕೇಳ್ದ.
“ ಅಯ್ಯೋ ಹೌದನ ತಮ್ಮ… ನಿನ್ನ ಅಪ್ಪ ಯಾವಾಗ್ಲೂ ಹಿಂಗೆ ಭಾನಗಡೆ ಮಾಡದೆಯ” ಹೇಳಿ ಅಮ್ಮ ಒಳಗಿನಿಂದಲೆ ನಗಾಡ್ತು. ಗಜಾನಭಾವಂಗೆ ಮುಖಭಂಗ ಆದಂತೆ ಆಗೋತು. “ಹೋಗ್ಲಿ ಬಿಡ ಮಾಣಿ, “ಸಿದ್ಧಿ” ಹೇಳಿ ಕರದ್ರಾತು. ಸಿದ್ಧಿ ಬಾರೆ ನಿಂಗ ಆ ಬದಿಗೆ ಕಟಹಾಕ್ತಿ” ಹೇಳ್ಕತ್ತಾ ಅಲ್ಲಿಂದ ಜಾರ್ಕ್ಯಬಿಟ್ಟ.
ಕಡಿಗೆ ಸುಮಾರು ದಿನ ಮನೆಯವ್ರ ಬಾಯಲ್ಲೂ ಮನೆ ಅಂಗಳದಲ್ಲೂ ಸಿದ್ಧಿ ಓಡಾಡ್ಕಂಡಿತ್ತು.

ಹೀಂಗಿಪ್ಪಕಾರೆ ಒಂದಿನ ಯಮುನಕ್ಕ “ಸಿದ್ಧಿ ಎಲ್ಲ ಹೋದ್ಯೆ.. ನಿನ್ನ ಕಟ್ಟಿಹಾಕಿಕ್ ನಾ ತೋಟಕ್ಕಾರು ಹೋಗ್ತಿ” ಹೇಳಿ ಕರೀತಾ ಇತ್ತು. ಅಲ್ಲೆ ದಾರಿಯಲ್ಲಿ ಹೋಗ್ತಾ ಇದ್ದಿದ್ದ ಇವ್ರ ಮನಿಗೆ ಕೆಲ್ಸಕ್ಕೆ ಬಪ್ಪ ಆಳು ಸಿದ್ಧಿ “ಎಂತದ್ರ ಅಮ್ಮ ನಿಮ್ಮನಿಗೆ ಕೆಲ್ಸಕ್ಕೆ ಬರ್ಲಾ ಹೇಳಿ ಕುನ್ನಿ ಮರಿಗೆ ನನ್ನ ಹೆಸ್ರು ಇಟ್ಟೀರಾ” ಹೇಳಿ ಗುರುಗುಟ್ಕ್ಯಂಡು ನೋಡ್ಕ್ಯಂಡು ಹೋತು.
ನಾಯಿಗೆ ಸಿದ್ಧಿ ಹೇಳಿ ಕರ್‍ಯದು ಬ್ಯಾಡ. ಆಳ್ಗ ಸಿಟ್ಟು ಮಾಢಂಡು ಕೆಲ್ಸಕ್ಕೆ ಬರ್ದೆ ಇಪ್ಪದು ಬೇಡ ಹೇಳಿ ಯೋಚನೆ ಮಾಡಿದ ಯಮುನಕ್ಕ ಸಿದ್ಧಿ ಹೇಳಿ ಕರ್‍ಯಲಿಲ್ಲೆ ಹೇಳಿ ಎಲ್ರಿಗೂ ತಾಕೀತು ಮಾಡ್ತು

ಹೆಸರಿಲ್ಲದ ನಾಯಿಮರಿಗೆ ಎಲ್ರೂ “ಕುರು ಕುರು ಇಲ್ಲ ಬಾರೆ ಕುರು ಕುರು ಎತ್ಲಾಗ್ ಹೋದ್ಯೆ” ಹೇಳಿ ಕರ್‍ಯಂಗಾತು.
ಯಾರ ಮನೆಲೂ ಇಟ್ಟಿಲ್ದೆ ಇರೋ “ಕುರು ಕುರು” ಹೇಳ ಹೆಸ್ರೆ ಖಾಯಂ ಆಗೋತು
ಹೀಂಗಿಪ್ಪಕಾರೆ ಕಾವೇರಜ್ಜಿ ಅಂದ್ರೆ ಗಜಾನಭಾವನ ಅಮ್ಮ ಮಗಳ ಮನೆಗೆ ಹೋಗಿದ್ದು ವಾಪಾಸ್ ಬಂತು.
ನಾಯಿಮರಿ ಕಥೆ ಎಲ್ಲಾ ಕೇಳಿ ತಾನೂ ಎರಡು ದಿನ “ಕುರು ಕುರು” ಹೇಳೇ ಕರತ್ತು. ಎಂತಕೋ ಅದ್ಕೆ ಆ ಹೆಸ್ರು ಸಮಾ ಬಂಜೇ ಇಲ್ಲೆ. ಅದ್ಕೆಯಾ ಅದ್ಕೆ ಸ್ವಲ್ಪ ಉಲ್ಟಾ ಮಾಡಿ “ರುಕ್ಕು” ಹೇಳಿ ಕರ್‍ಯಲೇ ಷುರು ಮಾಡ್ತು. ಪುಣ್ಯಕ್ಕೆ ರುಕ್ಕು ಹೇಳ ಹೆಸ್ರನವು ಯಾರು ಇದ್ದಿದ್ವಿಲ್ಲೆ ಆಬದಿಗೆ.
ಆವತ್ತಿನಿಂದ ಸಿಟ್ಟು ಬಂದ್ರೆ, ನಾಯಿಮರಿ ಎಂತಾರು ಹೋಳಿ ಮಾಡ್ರೆ “ಏ ರುಕ್ಮಿಣಿ” ಹೇಳಿ, ಸೋಕಾಗಿ ಕರ್‍ಯಲೆ, “ರುಕ್ಕು” ಹೇಳಿ ರಾಶಿ ಪ್ರೀತಿ ಬಂದೊದ್ರೆ, “ರುಕ್ಕಮ್ಮ” ಹೇಳಿ ಹೆಸ್ರು, ಅಡ್ಡ ಹೆಸ್ರು ಎಲ್ಲಾ ಅದೇ ಆತು.

ಮನುಷ್ಯರ ಹೆಸರಲ್ಲೆಂತಾ ಇರ್ತು? ಹೇಳಿ ಕೇಳಾಗ್ತು ನಾವು. ನಾಯಿಮರಿ ಹೆಸ್ರಲ್ಲೂ ಎಂತೆಂತಾ ಆಗ್ಲಕ್ಕು ಅಲ್ದ ??!!
ಈಗ ಎಂತಾ ಆಜು ಅಂದ್ರೆ ರುಕ್ಕು 3 ಮರಿ ಹಾಕಿದ್ದು. ಇನ್ನೊಂದು ನಾಮಾಯಣ ಷುರು ಆಜು. ನಿಂಗಕ್ಕೆಲ್ಲಾರು ಹೆಸ್ರು ಹೋಳ್ದರೆ ಹೇಳಿ ಆತಾ?!

~*~*~

ಲೇಖಕರ ವಿಳಾಸ:

ಅನುಷಾ ಹೆಗಡೆ
ತೃತೀಯ ಎಂ.ಬಿ.ಬಿ.ಎಸ್
ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ,
ಬೆಂಗಳೂರು

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ನಿಂಗಳ ಪ್ರೋತ್ಸಾಹ ಹಿಂಗೆ ಇದ್ರೆ ಬರಿಯಲೇ ಇನ್ನು ಉಮೇದಿ ಬತ್ತು..ಪ್ರತಿಕ್ರಿಯಿಸಿದ ಎಲ್ಲರಿಗೂ ರಾಶಿ ಧನ್ಯವಾದ …

  [Reply]

  VA:F [1.9.22_1171]
  Rating: 0 (from 0 votes)
 2. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಲಾಯಿಕಾಯಿದು ಬರದ್ದು. ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 3. ಡೈಮಂಡು ಭಾವ
  ಡೈಮಂಡು ಭಾವ

  ಆಭಿನಂದನೆ.

  [Reply]

  VA:F [1.9.22_1171]
  Rating: 0 (from 0 votes)
 4. sathyakantha
  ಸಥ್ಯ

  ಲಾಯಿಕಾಯಿದು ಬರದ್ದು. ಅಭಿನಂದನೆಗೊ

  [Reply]

  VA:F [1.9.22_1171]
  Rating: 0 (from 0 votes)
 5. ದೀಪಿಕಾ
  ದೀಪಿಕಾ

  ಲಘು ಬರಹ ಲಾಯಿಕಿದ್ದು..ಅಭಿನ೦ದನೆಗೊ

  [Reply]

  VN:F [1.9.22_1171]
  Rating: 0 (from 0 votes)
 6. ಅನಿತಾ ನರೇಶ್, ಮಂಚಿ
  Anitha Naresh Manchi

  ಲಘು ಬರಹ ಲಾಯಿಕಿದ್ದು.

  [Reply]

  VA:F [1.9.22_1171]
  Rating: 0 (from 0 votes)
 7. ನಾಗೇಂದ್ರ ಮುತ್ಮುರ್ಡು

  ತೆಳ್ಳೇವಿನ ಹಾಗಿನ ತೆಳ್ಳನೆಯ ಕುಶಾಲಿನಿಂದ
  ಕೂಡಿದ ಚುರುಕಾದ ಬರಹ!
  ಅಭಿನಂದನೆಗಳು.

  [Reply]

  VA:F [1.9.22_1171]
  Rating: 0 (from 0 votes)
 8. ಸದಾಶಿವ

  ಹ .. ಹಾ .. ಭಾಷೆ ಭಾರಿ ಖುಷಿ ಆತು ..ಅದಕ್ಕೆ (ಹೀನ್ಗೆಲ್ಲ ಆವುತ್ತು ಹೇಳಿ) ನಾಯಿಗೊಕ್ಕೆ ಸಾಧಾರಣವಾಗಿ “ಇನ್ಗ್ಲೀಷು ” ಹೆಸರು ಮದಗುವುದು .. ಇಲ್ಲಿಯಾಣವಕ್ಕೆ ಆರಿನ್ಗೂ ಬೇಜಾರು ಅಪ್ಪಲಾಗ ಹೇಳಿ ಎನ್ನ ಸ್ನೇಹಿತನ ಮನೇಲಿ ಒಂದು ಚೆಂದದ ನಾಯಿ ಇತ್ತು ಅದರ ಹೆಸರು “ರಾಸ್ಕಲ್ ” ಪ್ರೀತಿಂದ “ರಾಸ್ ” ಹೇಳಿ ಕರೆತ್ತಿತವು..

  [Reply]

  VA:F [1.9.22_1171]
  Rating: 0 (from 0 votes)
 9. ಮಾಲಕ್ಕ°

  ಅನುಷಾ ಲಘು ಬರಹ ಲಾಯಿಕ ಆಯಿದು. ಅಭಿನಂದನೆಗೊ. ಇನ್ನೂ ಬರೆತ್ತಾ ಇರು

  [Reply]

  VN:F [1.9.22_1171]
  Rating: 0 (from 0 votes)
 10. Shreedhar Hegde

  Olle lekhana..congrats :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಸರ್ಪಮಲೆ ಮಾವ°ಉಡುಪುಮೂಲೆ ಅಪ್ಪಚ್ಚಿಸುವರ್ಣಿನೀ ಕೊಣಲೆಪೆಂಗಣ್ಣ°ಅಜ್ಜಕಾನ ಭಾವಸುಭಗಪುತ್ತೂರಿನ ಪುಟ್ಟಕ್ಕಅಕ್ಷರ°ದೇವಸ್ಯ ಮಾಣಿಅನುಶ್ರೀ ಬಂಡಾಡಿಪವನಜಮಾವಬೋಸ ಬಾವಶೀಲಾಲಕ್ಷ್ಮೀ ಕಾಸರಗೋಡುವಿದ್ವಾನಣ್ಣವಿನಯ ಶಂಕರ, ಚೆಕ್ಕೆಮನೆಶರ್ಮಪ್ಪಚ್ಚಿವೇಣೂರಣ್ಣಡಾಮಹೇಶಣ್ಣವೆಂಕಟ್ ಕೋಟೂರುವಿಜಯತ್ತೆವಸಂತರಾಜ್ ಹಳೆಮನೆಪಟಿಕಲ್ಲಪ್ಪಚ್ಚಿನೀರ್ಕಜೆ ಮಹೇಶಜಯಗೌರಿ ಅಕ್ಕ°ಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ