ವಿಷು ವಿಶೇಷ ಸ್ಪರ್ಧೆ 2013: ಕವನ ದ್ವಿತೀಯ: ಇಂದಿರಾ ಜಾನಕಿ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಕವನ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕರಾದ ಶ್ರೀಮತಿ ಇಂದಿರಾ ಜಾನಕಿ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಮಳೆಗಾಲಲ್ಲಿ ಒಂದು ದಿನ : ಶ್ರೀಮತಿ ಇಂದಿರಾ ಜಾನಕಿ

ಶಾಲೆ ಸುರುವಿಲಿ ಮಳೆಯು ಬಪ್ಪಗ
ಚೀಲ ನೇಲಿಸಿ ಕೊಡೆಯ ಕೈಯೊಳ
ಗಾಳಿಗೊಡ್ಡಿರೆ ಜೋರು ರಭಸಕೆ ಕೊಡೆಯೆ ಹಾರುಗದಾ |
ಬೇಲಿ ಕೊಡಿಲಿಯೆ ತಡಮೆ ದಾಂಟಿರೆ
ಬೋಳುಗುಡ್ಡೆಯ ಹಾದಿ ಸಿಕ್ಕುಗು
ಗೋಳಿಮರದಡಿ ಗೆಳೆಯರೆಲ್ಲರು ಸೇರಿ ಹೋಪದದಾ ||

ಆಟಿತಿಂಗಳ ಮಳೆಯು ಸೊಯ್ಪುಗು
ಕೋಟುಹಾಕುವ ಚಳಿಲಿ ದರುಸಿರು
ಪಾಟಿಚೀಲವ ಹಿಡುದು ಬಪ್ಪಗ ಚಳಿಯೆ ಗೊಂತಾಗ |
ಚೀಟಿ ಹರುದಿಕಿ ದೋಣಿ ಮಾಡಿಕಿ
ಮೀಟಿ ಬಿಟ್ಟರೆ ಹರಿವ ತೋಡಿಲಿ
ಮೋಟುಮರದಾ ಬೇರಿನೆಡಕಿಲಿ ಸಿಕ್ಕಿ ಹಾಯ್ಕೊಂಗೂ ||

ಜಾಲಿನೊಳದಿಕೆ ಹರಿವ ನೀರಿಲಿ
ಕಾಲು ಕುಟ್ಟಿಸಿ ನೀರು ರಟ್ಟಿಸಿ
ಮೇಲೆ ಬೀಳುವ ಮಳೆಯ ಸೀರಣಿ ಮರವಲೆಡಿಯನ್ನೆ |
ಕಾಲ ತೊಳದಿಕಿ ಚೆಂಡಿಯುದ್ದಿಕಿ
ಹಾಲು ಕುಡಿವಲೆ ಹೋಗಿ ಕೂದರೆ
ಬೇಳೆಹೋಳಿಗೆ ಹೊರುದ ಹಪ್ಪಳ ಕೊಡುಗು ಸಾಂತಣಿಯಾ ||

ಗೆದ್ದೆ ಹೂಡುಲೆ ಕಿಟ್ಟ ತಕ್ಕದ
ಮುದ್ದಿನಿಂದಲೆ ಸಾಂಕಿ ಬೆಳೆಶಿದ
ತಿದ್ದಿ ಮಾಡಿದ ಬೆಳಿಯ ಬಣ್ಣದ ಜೋಡಿ ಹೋರಿಗಳಾ|
ಎದ್ದು ಬಕ್ಕದ ಕೂದ ಹೆಣ್ಣುಗೊ
ಬಿದ್ದ ನೀರಿಲಿ ನೆಡುಗು ನೇಜಿಯ
ಶುದ್ದಿ ಹೇಳುವ ನಮುನೆ ಹಾಡುಗು ಕೊಶಿಲಿ ಓಬೇಲೇ…….||

ಕಾಲ ದಾರಿಯ ಕೊಡಿಲಿ ತೋಡಿನ
ಪಾಲ ಬಿಟ್ಟಿಕಿ ನೀರಿಗಿಳುದರೆ
ಚೋಲಿ ತೆಗೆಗದ ಹುಳಿಯಡರು ತಂದೋಡುಸುಗು ಮನಗೇ |
ಸಾಲುಸಾಲಿನ ಬಾಲ್ಯ ನೆಂಪುಗೊ
ಮೂಲೆಮನಸಿಲಿ ಹುಗ್ಗಿ ಕೂದ್ದರ
ಲೀಲೆಯಿಂದಲೆ ಮೆಲುಕುಹಾಕಿರೆ ಮನವು ಮುದಗೊಳುಗೂ ||

~*~*~

ಸೂ:

ಇಂದಿರಾ ಜಾನಕಿ, ನಮ್ಮ ಬೈಲಿನ ಇಂದಿರತ್ತೆ ಪ್ರೊ. ಹರಿನಾರಾಯಣ ಮಾಡಾವು – ಇವರ ಕೈಂದ ಬಹುಮಾನ ಸ್ವೀಕಾರ ಮಾಡುವ ಸಂದರ್ಭ:

ಇಂದಿರತ್ತೆಗೆ ಬಹುಮಾನ ಕೊಡ್ತಾ ಇಪ್ಪ ಪ್ರೊ. ಹರಿನಾರಾಯಣ ಮಾಡಾವು

ಇಂದಿರತ್ತೆಗೆ ಬಹುಮಾನ ಕೊಡ್ತಾ ಇಪ್ಪ ಪ್ರೊ. ಹರಿನಾರಾಯಣ ಮಾಡಾವು

ಸಂಪಾದಕ°

   

You may also like...

12 Responses

 1. ರಘುಮುಳಿಯ says:

  ಸಣ್ಣಾಗಿಪ್ಪಗ ಗೆದ್ದೆಲಿ ನೆಟ್ಟಿಯ ಹೆಣ್ಣುಗೊ
  ”ಲಕುಜರಯೇ ಲಕುಜರಯೇ ದೂಜ ಪುರ್ಬುಳೇ”, ಹೇಳಿ ರಾಗಲ್ಲಿ ಹಾಡಿದ ಪಾಡ್ದನದ ನೆ೦ಪಾತು.
  ಹೂಡೊಗ ದೂಮನ ಲಯಬದ್ಧ ಹಾಡುಗಾರಿಕೆ,ಹೋರಿಗಳ ಮಾದುಸುವ ಚಳಕ ಕಣ್ಣಿ೦ಗೆ ಕಟ್ಟಿತ್ತು.
  ಆವಗ ಜೋರು ಮಳೆಗೆ ಬಹುತೇಕ ಮಕ್ಕೊ ಚೆ೦ಡಿಯಾಗಿ ಬ೦ದರೆ ಶಾಲೆಗೆ ರಜೆ ಕೊಟ್ಟುಗೊ೦ಡಿತ್ತಿದ್ದವು.ಒ೦ದರಿ ಬೇಕು ಹೇಳಿಯೇ ಚೆ೦ಡಿ ಆಗಿ ರಜೆ ಕೇಳುಲೆ ಹೋಗಿ ಬೈಶಿಗೊ೦ಡದೂ ನೆ೦ಪಾತು..ಆ ದಿನ೦ಗಳ ನೆನೆಸಿರೇ ಗಮ್ಮತ್ತಾವುತ್ತು.
  ಅಭಿನ೦ದನೆಗೊ ಅತ್ತೇ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *