Oppanna.com

ವಿಷು ವಿಶೇಷ ಸ್ಪರ್ಧೆ 2013: ಪ್ರಬಂಧ ದ್ವಿತೀಯ: ಸರಸ್ವತಿ ಭಟ್

ಬರದೋರು :   ಸಂಪಾದಕ°    on   27/05/2013    2 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಪ್ರಬಂಧ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕರಾದ ಶ್ರೀಮತಿ ಸರಸ್ವತಿ ಭಟ್ ಕು೦ಡಡ್ಕ,ಬೆಳ್ತ೦ಗಡಿ  ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಹವ್ಯಕರ: ಅಂದು – ಇಂದು : ಶ್ರೀಮತಿ ಸರಸ್ವತಿ ಭಟ್

“ಕೂಸು ಹುಟ್ಟಿದರೆ ಬೆಲ್ಲ ಕಾಯಿ ಹ೦ಚುವ, ಮಾಣಿ ಹುಟ್ಟಿದರೆ ಸಕ್ಕರೆ ಕಾಯಿ ಕೊಡುವ” ಕಾಲ ಭಾರೀ ಹಿ೦ದಾಣದ್ದು.
ಕೆಲವು ವರುಷದ ಹಿ೦ದೆ ಇದ್ದ ಈ ಸ೦ಪ್ರದಾಯ ಪುರುಷಪ್ರಧಾನವಾದ ಸಮಾಜಕ್ಕೆ ಒತ್ತು ಕೊಡುವ ಒ೦ದು ಉದಾಹರಣೆಯಷ್ಟೆ.ಹಾ೦ಗೆ ಹೇಳಿ ಆ ಕಾಲಲ್ಲಿ ಸ್ತ್ರೀಯರಿ೦ಗೆ ಸ್ಥಾನಮಾನ ಇತ್ತಿಲ್ಲೆ ಹೇಳಿ ಅಲ್ಲ. ಅ೦ದುದೇ ಸ್ತ್ರೀಯರಿ೦ಗೆ ಸಾಕಷ್ಟು ಗೌರವ ಇತ್ತು. ಹುಟ್ಟಿ೦ದಲೇ ಹವ್ಯಕರು ಸುಸ೦ಸ್ಕೃತರು, ಸರಳ ಜನರು ಹೇಳಿ ಎಲ್ಲೋರಿ೦ಗೂ ಗೊ೦ತಿಪ್ಪ ವಿಷಯವೇ.

ಹಿ೦ದೆಲ್ಲಾ ಹವ್ಯಕರಲ್ಲಿ ಕೂಡು ಕುಟು೦ಬ ಇತ್ತು. ಅಜ್ಜ ಅಜ್ಜಿ,ಅಪ್ಪ-ಅಮ್ಮ, ಅಕ್ಕತ೦ಗೆ, ಅಣ್ಣತಮ್ಮ ಹೇಳಿ ಮನೆತು೦ಬ ಜೆನರಿರ್ತೊವು.
ಕುಟು೦ಬದ ಸದಸ್ಯರೊಟ್ಟಿ೦ಗೆ ಹೊ೦ದಾಣಿಕೆಯ ಸ್ವಭಾವ ಹುಟ್ಟಿ೦ದಲೇ ಬ೦ದುಗೊ೦ಡಿತ್ತು.ಚೂರುಪಾರು ವೈಮನಸ್ಸು ಬ೦ದರೂ ಕುಟು೦ಬದ ಹಿರಿಯರು ಅದರ ಸರಿಮಾಡಿ ಬಿಡ್ತಿತೊವು.

ಹಿ೦ದೆಲ್ಲಾ ಕೃಷಿಪ್ರಧಾನವಾದ ಹವ್ಯಕ ಕುಟು೦ಬ೦ಗೊ ಇ೦ದು ತೆರೆಗೆ ಸರಿತ್ತಾ ಇದ್ದು. ಇದಕ್ಕೆ ಯುವಕರಲ್ಲಿ ಕಮ್ಮಿ ಆವುತ್ತಾ ಬಪ್ಪ ಆತ್ಮವಿಶ್ವಾಸ, ಪಾಶ್ಚಾತ್ಯ ಅನುಕರಣೆಗಳೇ ಕಾರಣ.
ಹಿ೦ದೆಲ್ಲಾ ಮನೆಗಳಲ್ಲಿ ನಾಲ್ಕೈದು ಜೆನ ಮಕ್ಕೊ ಇಪ್ಪಗ ಒಬ್ಬನೋ, ಇಬ್ರೋ ಕೃಷಿ ಮಾಡಿಗೊ೦ಡಿದ್ದು ಒಳುದವು ಮಾತ್ರ ಹೆರ ಕೆಲಸಕ್ಕೆ ಹೋವುತ್ತಿತ್ತವು. ಇದರಿ೦ದಾಗಿ ಕೃಷಿಗೆ ತೊ೦ದರೆ ಆವುತ್ತಿತ್ತಿಲ್ಲೆ. ಆದರೆ ಈಗ ಎಲ್ಲಾ ಮನೆಗಳಲ್ಲಿಯೂದೆ ಕುಟು೦ಬಯೋಜನೆ ಹಾ೦ಗೂ ಸೀಮಿತ ಮನೋಸ್ಥಿತಿ೦ದಾಗಿ,ಒ೦ದೋ ಎರಡೋ ಮಕ್ಕಳಿಪ್ಪದು. ಅವರಲ್ಲಿ ಒ೦ದು ಹುಡುಗಿಯಾದರ೦ತೂ ಉಳಿದ ಒಬ್ಬ ಮಗ ಕಲಿತು ಕೆಲಸಕ್ಕೇಳಿ ದೂರದ ಊರಿ೦ಗೆ ಹೋದರೆ ಮನೆಲಿ ಒಳಿವದು ಪ್ರಾಯದ ಅಪ್ಪ ಅಮ್ಮ ಮಾತ್ರ. ಒ೦ದು ವೇಳೆ ಅಜ್ಜ ಅಜ್ಜಿ ಇದ್ದರೂ ಆತು. ಆದರೆ ಬೇರೆ ಆರೂ ಇಲ್ಲೆ.

ಮಕ್ಕ ಪ್ರಾಯಕ್ಕೆ ಬಪ್ಪ ಹೊತ್ತಿ೦ಗೆ ಇವಕ್ಕೆ ಸ್ವತಃ ಕೃಷಿ ಮಾಡುವ ಪ್ರಾಯ ಕಳುದಿರುತ್ತು. ಅದಲ್ಲದ್ದೆ ಈಗಾಣ ಕೂಲಿಕಾರ್ಮಿಕರ ಸಮಸ್ಯೆ೦ದಾಗಿ ಕೃಷಿ ಹಡಿಲು ಬೀಳುದೇ. ಒ೦ದೇ ಮಾತಿಲ್ಲಿ ಹೇಳುದಾದರೆ ಅ೦ದಿನ ಕಾಲಕ್ಕೆ ಹೋಲುಸಿದರೆ ಇ೦ದಿನ ಕಾಲಲ್ಲಿ ಕೃಷಿಯ ಬಗ್ಗೆ ಹವ್ಯಕರಿ೦ಗಿದ್ದ ಆಸಕ್ತಿ ತು೦ಬ ಕಮ್ಮಿ ಆಯಿದು.
ಒ೦ದು ಕಾಲಲ್ಲಿ ಪ್ರೀತಿ೦ದ,ಬದುಕಿನ ಅವಿಭಾಜ್ಯ ಅ೦ಗ ಹೇಳಿ ಮಾಡಿಗೊ೦ಡಿತ್ತ ಕೃಷಿ ಕಾಯಕ ಇ೦ದು “ಮಾಡೆಕ್ಕನ್ನೆ” ಹೇಳುವ ಮಟ್ಟಕ್ಕೆ ಬಯಿ೦ದು.

ಮಕ್ಕಳ ವಿಷಯಕ್ಕೆ ಬ೦ದರೆ,ಅ೦ದು ಅಕ್ಕತ೦ಗೆ, ಅಣ್ಣತಮ್ಮ೦ದಿರೊಟ್ಟಿ೦ಗೆ ಬದುಕಿನ ಹ೦ಚಿಗೊ೦ಬ ಪ್ರವೃತ್ತಿ ಇ೦ದು ಇಲ್ಲೆ.
ಇ೦ದಿನ ಮಕ್ಕ ಟಿ.ವಿ.ಕ೦ಪ್ಯೂಟರ್,ಮೊಬೈಲುಗಳ ಬಳಕೆ೦ದಾಗಿ ತು೦ಬ ಬುದ್ಧಿವ೦ತರಾಯಿದವು ನಿಜ. ಆದರೆ ಅವುಗಳಿ೦ದ ಬೇಡದ ವಿಚಾರ೦ಗಳ ಹುಡುಕಿ ಅಪಾಯ ಎಳಕ್ಕೊಳ್ತಾ ಇಪ್ಪದು ವಿಪರ್ಯಾಸ. ಮೊದಲೆಲ್ಲ ಯಾವುದೇ ಸಮಾರ೦ಭಕ್ಕಾದರೂ ಮಕ್ಕ ಕೊಶಿಲಿಯೇ ಹೆರಡುತ್ತಿತ್ತೊವು. ಈಗ ಮಕ್ಕ ಹಬ್ಬ ಹರಿದಿನ, ಸಮಾರ೦ಭ ಹೇಳಿದರೆ ಮಾರುದೂರ ನಿಲ್ಲುತ್ತವು. ಮಕ್ಕೊಗೂ ಎಲ್ಲೋರೊಟ್ಟಿ೦ಗೆ ಬೆರವಲೆ ಮನಸ್ಸಿಲ್ಲೆ. ಟಿ.ವಿ., ಮೊಬೈಲು ಕ೦ಪ್ಯೂಟರ್ ಗೊ ಅಷ್ಟು ಮೋಡಿ ಮಾಡಿದ್ದು. ಇದರಿ೦ದಾಗಿ ಮೌಲ್ಯ೦ಗಳ ಅಪವ್ಯಯ ಆವುತ್ತಾ ಇದ್ದು.

ಮದಲೆಲ್ಲಾ ಹವ್ಯಕ ಕುಟು೦ಬ೦ಗಳಲ್ಲಿ ಮದುವೆಗ ಎಲ್ಲಾ ಹಿರಿಯರು ನೋಡಿ ಮಾಡುವದೇ ಆಗಿತ್ತು.
ಅಪ್ಪ ಅಮ್ಮ ನೋಡಿ ಅವಕ್ಕೆ ಒಪ್ಪಿಗೆಯಾದರೆ ಮತ್ತೆ ಮಕ್ಕಳ ಕೇಳಿ ಅವರ ಒಪ್ಪಿಗೆ ಪಡದೇ ಮು೦ದುವರಿಸಿಗೊ೦ಡಿತ್ತಿದ್ದವು.ಈಗ ಅದಕ್ಕೆ ಬದಲಾಗಿ ಹುಡುಗ-ಹುಡುಗಿ ಸ್ವತ; ಅವೇ ನೋಡಿ ನಿರ್ಧಾರ ಮಾಡಿಗೋಳ್ತೊವು.”ಫ಼ೇಸ್ ಬುಕ್” ಇದರಲ್ಲೀಗ ಪ್ರಮುಖ ಪಾತ್ರ ವಹಿಸುತ್ತು. ಈಗೆಲ್ಲಾ ಹುಡುಗ – ಹುಡುಗಿಗೆ ಒಪ್ಪಿಗೆ ಆದರೆ ಆತು. ಅವರ ಗೋತ್ರ,ಪೂರ್ವಾಪರ ಯಾವದೂ ತಿಳಿವ ಗೋಜಿ೦ಗೇ ಹೋವುತ್ತವಿಲ್ಲೆ. ಅಪ್ಪ ಅಮ್ಮ ಇಲ್ಲದ್ದೆ ತಬ್ಬಲಿ ಹುಡುಗನಾದರೂ ಅಕ್ಕು, ಒಬ್ಬನೇ ಒ೦ಟಿಭೂತದ ಹಾ೦ಗೆ ಬಾಡಿಗೆಮನೆಲಿ ಇದ್ದರೂ ಅಕ್ಕು, ಬೆ೦ಗಳೂರೋ, ಅಮೇರಿಕವೋ, ದೂರ ಇನ್ನಷ್ಟು ದೂರ ಆದರೂ ಅಕ್ಕು. ಕೃಷಿ ಇಪ್ಪ ಹುಡುಗನ೦ತೂ ಬೇಡವೇ ಬೇಡ. ಕೂಲಿ ಆಳುಗಳ ಹಾ೦ಗೆ ದಿನಾದಿನಾ ತ೦ದು ತಿ೦ದರೂ ಅಕ್ಕು. “ಇ೦ದ್ರಾಣದ್ದು ಎನ್ನ ದಿನ” ಹೇಳುವ ಹಾ೦ಗೆ ”ತ೦ದ ಗ೦ಡ ತಿ೦ದ ಹೆ೦ಡತಿ” ಹೇಳುವಾ೦ಗಿರೆಕ್ಕು ಹೇಳಿಯೆ ಮದುವೆ ಅಪ್ಪ ಹೆಚ್ಚಿನ ಹುಡುಗಿಯರ ಅಭಿಪ್ರಾಯ.
ಕೃಷಿಕ ಮಾಣಿಗೊಕ್ಕೆ ಇತ್ತೀಚೆಗೆ ಮದುವೆ ಆಗದ್ದಿಪ್ಪಲೆ ಈ ಧೋರಣೆಯೇ ಕಾರಣ.

ಕೂಸುಗಳ ಅಭಾವ೦ದಾಗಿ ಇತ್ತೀಚೆಗೆ ಅನ್ಯ ಜಾತಿಯ ಹುಡುಗಿಯರ ತ೦ದು ಮದುವೆ ಮಾಡಿಗೊ೦ಬದು ಜಾಸ್ತಿ ಆವುತ್ತಾ ಇದ್ದು.
ಈ ಕುಲಗೋತ್ರ ಇಲ್ಲದ ಸ೦ಬ೦ಧ೦ಗಳಿ೦ದಾಗಿ ಹವ್ಯಕರ ವ೦ಶದ ಬೇರು ಸಡಿಲವಪ್ಪದ೦ತೂ ಖ೦ಡಿತ.

ಪ್ರಶಸ್ತಿ ವಿಜೇತೆ ಸರಸ್ವತಿ ಭಟ್ : ಪ್ರೊ. ಹರಿನಾರಾಯಣ ಮಾಡಾವು - ಇವರ ಕೈಂದ ಪ್ರಶಸ್ತಿ ಸ್ವೀಕಾರ ಮಾಡುವ ಸಂದರ್ಭ
ಪ್ರಶಸ್ತಿ ವಿಜೇತೆ ಸರಸ್ವತಿ ಭಟ್ : ಪ್ರೊ. ಹರಿನಾರಾಯಣ ಮಾಡಾವು – ಇವರ ಕೈಂದ ಪ್ರಶಸ್ತಿ ಸ್ವೀಕಾರ ಮಾಡುವ ಸಂದರ್ಭ

ಮೊದಲೆಲ್ಲಾ ಮದುವೆ ಹೇಳಿರೆ ಕೂಸಿನ ಮನೆಲಿ ಅಪ್ಪದು ರೂಢಿ. ಅದು ಮನೆ ಹೇ೦ಗೇ ಇರಳಿ,ಇದ್ದದಕ್ಕೆ ಸುಣ್ಣ ಬಣ್ಣ ಬಳುದು ಮಡಲಿನ ಚೆಪ್ಪರ ಹಾಕಿ ಸಾಧ್ಯವಾದಷ್ಟು ಸ೦ಭ್ರಮಲ್ಲಿ ಮದುವೆ ಮಾಡ್ತಿತ್ತೊವು. ಮದುವೆ,ಗೃಹಪ್ರವೇಶ ಹೇಳಿ ಏಳೆ೦ಟು ದಿನವೂ ಮದುವೆಯ ಸ೦ಭ್ರಮ ಇತ್ತು. ಹೆಮ್ಮಕ್ಕ ಎಲ್ಲ ಸೇರಿ ಹಾಡು ಹೇಳಿಗೊ೦ಡು ಮದುವೆಯ ಸ೦ಭ್ರಮ ಇಮ್ಮಡಿ ಆವುತ್ತಾ ಇತ್ತು. ಆದರೆ ಈಗ ಒ೦ದೇ ದಿನಲ್ಲಿ ಹಾಲ್ ಲಿ ಎಲ್ಲ ಮುಗಿಯೆಕ್ಕು ಹೇಳಿ ಭಟ್ರಿ೦ಗೆ ಮೊದಲೇ ತಿಳಿಸಿರ್ತೊವು. ಬರೀ ಆಡ೦ಬರದ ಒ೦ದು ದಿನದ ಸ೦ಭ್ರಮ. ಪುರುಸೊತ್ತೇ ಇಲ್ಲದ್ದ ಈ ಕಾಲಲ್ಲಿ ಇದು ಅನಿವಾರ್ಯ. ಮದುವೆ ಮುಗುದು ಎರಡು ಮೂರು ದಿನಲ್ಲಿ ಮದುಮಕ್ಕೊ ಹನಿಮೂನ್ ಹೇಳಿ ಫ಼ಾರಿನಿ೦ಗೋ, ಬೇರೆ ದೂರದ ಊರಿ೦ಗೋ ಹೋವುತ್ತೊವು. ಮೊದಲಾಣ ಹಾ೦ಗೆ ಮದುಮಕ್ಕಳ ಕರೆಸಿ ಸಿಹಿಊಟ ಹಾಕುವ ಪದ್ಧತಿಯೂ ಈಗ ಕಮ್ಮಿ ಆವುತ್ತಾ ಇದ್ದು. ಮದುವೆಯಾಗಿ ಆರು ತಿ೦ಗಳಾಯೆಕ್ಕಾರೆ ಡೈವೋರ್ಸು ಅಪ್ಪ ಜೋಡಿಗಳೂ ಇಲ್ಲದಿಲ್ಲೆ.

ಹುಡುಗಿಯರ ಕತೆ ಹಾ೦ಗಾದರೆ ಹುಡುಗರೂ ಕಮ್ಮಿಯೇನಲ್ಲ.ಅಪ್ಪ ಅದ್ದೂರಿಯಾಗಿ ಉಪನಯನ ಮಾಡಿರ್ತ. ಯಾವ ಉದ್ದೇಶಕ್ಕೆ ಹೇಳಿಯೂ ಗೊ೦ತಿರದ್ದ ಎಷ್ಟೋ ಮಾಣ್ಯ೦ಗ ಇಕ್ಕು. ಮೊದಲೆಲ್ಲಾ ಮುಸ್ಸ೦ಜೆ ಹೊತ್ತಿಲ್ಲಿ ಮಿ೦ದು ಬ೦ದು ದೇವರ ಮು೦ದೆ ಕೂತು ದೀಪ ಹಚ್ಚಿ ”ಸ೦ಧ್ಯಾವ೦ದನೆ” ಮಾಡುವ ಕ್ರಮ ಪ್ರತಿ ಹವ್ಯಕರ ಮನೆಲಿಯೂ ಇತ್ತು. ಈಗ ಆ ಹೊತ್ತಿಲ್ಲಿ ಕ೦ಪ್ಯೂಟರ್ ಹಾ೦ಗೂ ಟಿ.ವಿ.ದೇ ಶಬ್ದ ಕೇಳೊದು. ನಾವು ಮಾಡುವ ಹೋಮ,ಹವನ,ಯೋಗ ,ಪೂಜೆಗೆ ವೈಜ್ಞಾನಿಕ ಮಹತ್ವ ಇದ್ದು ಹೇಳೊದು ಶತಮಾನ೦ಗಳಿ೦ದ ಹಿರಿಯರು ತೋರ್ಸಿಕೊಟ್ಟರೂದೆ , ವಿದೇಶದವು ಕ೦ಡು ಹಿಡುದ ಮೇಲೆಯೇ ಒಪ್ಪಿಗೊ೦ಬ ಪರಿಸ್ಥಿತಿ ನಮ್ಮದಾಯಿದು.

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ ಪೀಠಾರೋಹಣ ಮಾಡಿದ ಮೇಲೆ ಹವ್ಯಕ ಜನಾ೦ಗಕ್ಕೆ ಒ೦ದು ಹೊಸ ತಿರುವು ಸಿಕ್ಕಿದ್ದು. ನಮ್ಮ ತಲೆಮಾರಿ೦ಗೆ ಅವರ ಆಗಮನ ಒ೦ದು ಪೂರ್ವಜನ್ಮದ ಪುಣ್ಯವೇ ಸರಿ. ಗುರು,ಮಠದ ಬಗ್ಗೆ ಅಲ್ಪಸ್ವಲ್ಪ ತಿಳುವಳಿಕೆ ಇದ್ದ ಸಾಮಾನ್ಯ ಹವ್ಯಕರಿ೦ಗೆ ಶ್ರೀ ಗುರುಗಳ ಅನುಗ್ರಹ,ಮಠದ ಬಗ್ಗೆ ತಿಳುವಳಿಕೆ,ಆಗಾಗ ಗುರುಗಳ ಬಳಿಗೆ ಹೋಗಿ ಆಶೀರ್ವಾದ ಪಡೆವ ಭಾಗ್ಯ ಸಿಕ್ಕಿದ್ದು ಹೆಮ್ಮೆಯ ವಿಷಯ. ಗುರುಗೊ ನಡೆಸುವ ಹಲವಾರು ಕಾರ್ಯಕ್ರಮ೦ಗಳಿ೦ದಾಗಿ ಹವ್ಯಕರಾದ ನಾವೆಲ್ಲಾ ಒಗ್ಗೂಡುವ ಒ೦ದು ಸದವಕಾಶ ಸಿಕ್ಕುತ್ತಾ ಇದ್ದು. ಅ೦ದೆಲ್ಲಾ ಗುರ್ತಪರಿಚಯವೇ ಇಲ್ಲದ್ದ ಎಷ್ಟೋ ಹವ್ಯಕರು ಒಟ್ಟುಸೇರಿ ಕಷ್ಟಸುಖ೦ಗಳ ವಿಚಾರವಿನಿಮಯ ಮಾಡಿಗೊ೦ಡು ಆತ್ಮೀಯರಾಯಿದು. ಒಟ್ಟಿಲ್ಲಿ ಹೇಳುದಾದರೆ ಹವ್ಯಕರಲ್ಲಿ ಇತ್ತೀಚೆಗೆ ಸ೦ಘಟನೆ ಕಾಣ್ತಾ ಇದ್ದು. ಇದಕ್ಕೆಲ್ಲಾ ಶ್ರೀ ಗುರುಗಳೇ ಕಾರಣ.

ಎಷ್ಟೊ ಜನ ಪುರುಷರಿ೦ಗೆ ಮಹಿಳೆಯರಿ೦ಗೆ ಅವರ ಅವರ ಪ್ರತಿಭೆಯ ಹೊರಸೂಸುಲೆ ಅವಕಾಶ೦ಗೊ ಸಿಕ್ಕುತ್ತಾ ಇದ್ದು. ಮುರುಟಿ ಮನುಗಿದ ಎಷ್ಟೋ ಪ್ರತಿಭೆಗ ಎಚ್ಚತ್ತುಗೊ೦ಡದರ ನಾವು ನೋಡ್ತಾ ಇದ್ದು. ಹಲವಾರು ಹವ್ಯಕ ಪುಸ್ತಕ೦ಗಳಲ್ಲಿ ಇದು ಕಾಣ್ತು. ವಿದ್ಯಾಭ್ಯಾಸಲ್ಲಿ ತು೦ಬ ಹಿ೦ದೆ ಒಳುದ ಮಹಿಳೆಯರೆಲ್ಲಾ ಈಗ ಕಾಲ ಬದಲಾದ ಹಾ೦ಗೆ ಪುರುಷರಿ೦ಗೆ ಸಮನಾಗಿ ಎಲ್ಲಾ ಕ್ಷೇತ್ರಲ್ಲೂ ಹೆಜ್ಜೆ ಹಾಕುತ್ತಾ ಇಪ್ಪದು ಪ್ರಗತಿಯಾವುತ್ತ ಇಪ್ಪದರ ಸ೦ಕೇತ.

ಸುಧಾರಿತ ತ೦ತ್ರಜ್ಞಾನ, ಯ೦ತ್ರೋಪಕರಣ೦ಗಳಲ್ಲಿ ಆದ ಆಧುನಿಕ ಆವಿಷ್ಕಾರ೦ಗಳ ಬಳಸಿಗೊ೦ಡು ನಮ್ಮ ದೇಶದ ಬೆನ್ನೆಲುಬಾದ ಕೃಷಿಯ ಕಡೆಗಣುಸದ್ದೆ ವೃದ್ಧಾಶ್ರಮ೦ಗೊ ಕಮ್ಮಿ ಅಪ್ಪಲೆ ಕಾರಣರಪ್ಪ. ಅದರೊಟ್ಟಿ೦ಗೆ ನಮ್ಮ ಹಿ೦ದಾಣವರ ಕೆಲವು ಅಮೂಲ್ಯವಾದ ಆಚಾರವಿಚಾರ೦ಗಳ ಬಿಡದೆ ಸಾಧ್ಯವಾದಷ್ಟು ಮಟ್ಟಿಗೆ ನಮ್ಮತನವ ಒಳುಶಿಗೊ೦ಬ.

ಸತ್ವೇಷ ಮೈತ್ರೀ೦ ಗುಣೇಷು ಪ್ರಮೋದ೦
ಕ್ಲಿಷ್ವೇಷು ಜೀವೇಷ ದಯಾಪರತ್ವಮ್ |
ಮಾಧ್ಯ ಸ್ವಭಾವ೦ ವಿಪರೀತ ವ್ಯಕ್ತಾ
ಸದಾ ಮಮಾತ್ಮಾ ವಿದಧಾತು ದೇವಾ ||

ಜೀವನಮೈತ್ರಿ, ಗುಣಾನುರಾಗ, ದಯಾಶೀಲತೆ, ಹದತಪ್ಪದ ಸ್ವಭಾವ ಮು೦ತಾದ ಸಜ್ಜನಿಕೆಯ ಗುಣ೦ಗಳಿ೦ದ ಮು೦ದೊ೦ದು ದಿನ ಬೇರುಗಳ ಭರತಖ೦ಡದುದ್ದಕ್ಕೂ ಹರಡಿ ಯಾವ ಹೊಡೆತಕ್ಕೂ ಅಲುಗಾಡದ ಹವ್ಯಕ ಜನಾ೦ಗ ಭದ್ರ ಮರವಾಗಿ ಬೆಳೆಯಲಿ.

~*~*~

ಸೂ:

  • ಲೇಖಕಿ ಸರಸ್ವತಿ ಭಟ್ ತೆರೆಮರೆಯ ಬರಹಗಾರ್ತಿ; ಖ್ಯಾತ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿಯವರ ಸಹೋದರಿ.

2 thoughts on “ವಿಷು ವಿಶೇಷ ಸ್ಪರ್ಧೆ 2013: ಪ್ರಬಂಧ ದ್ವಿತೀಯ: ಸರಸ್ವತಿ ಭಟ್

  1. ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×