ವಿಷು ವಿಶೇಷ ಸ್ಪರ್ಧೆ 2013: ನೆಗೆಬರಹ ಪ್ರಥಮ: ವೆಂಕಟ್ ಭಟ್ ಎಡನೀರು

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ನೆಗೆಬರಹ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಲೇಖಕರಾದ ಶ್ರೀ ವೆಂಕಟ್ ಭಟ್ ಎಡನೀರುಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಹಿಳ್ಳೆ ಬಾಳಂತಿ ಸೌಖ್ಯವೋ..?!: ವೆಂಕಟ್ ಭಟ್ ಎಡನೀರು

ಲೇ| ಶ್ರೀ ವೆಂಕಟ್ ಭಟ್ ಎಡನೀರು

ಲೇ| ಶ್ರೀ ವೆಂಕಟ್ ಭಟ್ ಎಡನೀರು

ಎಂಗಳ ಕೆಳಾಣ ಮನೆ ಸುಬ್ರಾಯ ಭಾವನ ಮಗಳ ಮದುವೆ ಮುನ್ನಾಣದಿನ ಅತ್ತಾಳಕ್ಕೆ ಕೊರವಲೆ ಅವರಲ್ಲಿಗೆ ಹೋಗಿತ್ತಿದ್ದೆ.
ನೆರೆಕರೆ, ಹೋಗದ್ದಿಪ್ಪಲೆ ಆವುತ್ತೋ. ಎಂಗೊ ಅಷ್ಟೂ ಅನ್ಯೋನ್ಯ. ಎಂಗಳ ಅಜ್ಜಂದ್ರು ಜಾಗೆಗೆ ಬೇಕಾಗಿ ಲಡಾಯಿ ಮಾಡಿ ಪೆಟ್ಟುಗುಟ್ಟು ಮಾಡಿ, ನಂಬ್ರ ಕೇಸು ಮಾಡಿ, ತೋಟಕ್ಕೆ ಬೇಲಿ ಹಾಕಿ, ಮುರುದು ದೊಡ್ಡ ಗಲಾಟೆಯೇ ಆಯಿದು ಹೇಳಿ ಎನ್ನ ಅಪ್ಪ ಹೇಳಿತ್ತಿದ್ದವು. ಹರಕ್ಕೆಯೂ ಆಯಿದಾಡ.
ಈಗಾಣ ಜವ್ವನಿಗಂಗೊ ಆದ ಮತ್ತೆ ಹೋಕೂರಕ್ಕು ಇಲ್ಲದ್ದೆಲ್ಲ ಸರಿಯಾಗಿ, ಪರಿಹಾರ, ಹೋಮ, ರಾಜಿ ಪಂಚಾಯತಿಗೆ ಎಲ್ಲಾ ಆಗಿ ಈಗ ಹಾಂಗೆ ಮತ್ತೆ ಅತ್ತಿತ್ತೆ ಹೋಪಲೆ ಸುರುವಾತದ.

ಸುಬ್ರಾಯ ಭಾವನ ಅಬ್ಬೆ ಬೆಂಗಳೂರಿಂಗೆ ಹೋಗಿ ಕೂದು ಕೆಲವು ವರ್ಷ ಕಳುದಿತ್ತಿದ್ದು.
ಪೇಟೆಲಿಪ್ಪ ‘ಅಜ್ಜಿ’ ಹೇಳಿರೆ ಕೋಪ ಬತ್ತು ಅವಕ್ಕೆ. ಪುಳ್ಳಿ ಮದುವೆಗೆ ಹೇಳಿ ನಿನ್ನೆ ಊರಿಂಗೆ ಬೈಂದಾಡ.
ಅದರ ಈಗಾಣ ಸ್ಟೆಯಿಲ್ ನೋಡಿ ಎಂಗೊಗೆಲ್ಲಾ ನೆಗೆ ಮಾಡಿ ಮಾಡಿ ಸಾಕಾತು. ಅದು ನಮ್ಮ ‘ಪೇಟೆ ಅಜ್ಜಿ’ ಹೇಳಿಯೇ ಅಡ್ಡ ಹೆಸರೂ ಬಿದ್ದಿದು.

ಯಕ್ಷಗಾನದ ಎಲ್ಲಾ ಹಾಸ್ಯಗಾರಂಗಳ ನೆಂಪಾತು ಹೇಳಿರೆ ನಿಂಗೊಗೆ ಆಶ್ಚರ್ಯ ಅಕ್ಕು.
ನಮ್ಮ ಈ ಅಜ್ಜಿಯ ವೇಷ, ಕೋಲ ಕಂಡು ‘ಪೇಟೆ ಅಜ್ಜಿಯ ವೇಷ ನೋಡೆಕ್ಕಾತು, ಚೂಡೀದಾರ ಹಾಕಿತ್ತಿದ್ದು, ಬೀಲ ಇತ್ತಿದ್ದರೆ ಹಳೇ ಹನುಮಂತನ ಹಾಂಗೆ ಕಾಣುತ್ತು.
ಅಲ್ಲಿ ಬೆಂಗ್ಲೂರಿಲ್ಲಿ ಮನೆಗಳಲ್ಲಿ ಚೂಡೀದಾರ ಹಾಕುವ ಮರುಳು. ಹೆತ್ತು ಹತ್ತು ಮಕ್ಕಳ ಅಬ್ಬೆಕ್ಕೊ ಆದರೂ ಅವರ ತಲೇಲಿಪ್ಪದು ಅವಕ್ಕಿನ್ನೂ ಹದಿನಾರು ಹೇಳಿ.
ಅಜ್ಜಿಯೂ ಹಾಂಗೇ. ಕೈಗೆ ಚಿನ್ನದ ಬಳೆ, ಉಂಗಿಲು, ಕೊರಳಿಂಗೊಂದು ನೆಕ್ಲೆಸು, ಕಪ್ಪು ಕನ್ನಡಕ, ಕೈಲಿ ಒಂದು ಮೊಬೈಲು. ಯೋ ಇದರ ವೇಷ ಕಂಡು ಎಂಗೊಗೇ ನಾಚಿಕೆ ಆತು. “ಭಾವಾ… ಪೇಟೆ ಅಜ್ಜಿಯ ನೋಡಿದಿರೋ” ಕೇಳುವವೇ ಜಾಸ್ತಿ.

ಮನಗೆ ಬಂದವರೆಲ್ಲಾ ದಿನುಗೊಳಿ, ದಿನುಗೊಳಿ ಮಾತಾಡಿಂಡಿತ್ತಿದ್ದು. ‘ಅತ್ತೆ, ಊರಿಗೆ ಯಾವಾಗ ಬಂದಿ…?’ ಹೇಳಿ ತುರ್ಕನಮೂಲೆ ಮಾಸ್ಟ್ರಣ್ಣ ಕೇಳಿದ್ದೇ ತಡ ಕುಟುಕುಟುನೆ ಓಡಿಂಡು ಬಂದ ಬೆಂಗ್ಲೂರಜ್ಜಿ ಕುರುಶಿ ಹಾಕಿ ಕೂದು ಸುರು ಮಾಡಿತ್ತದ ಪಟ್ಟಾಂಗ.
ಅದರ ಕೈಲಿಪ್ಪ ಮೊಬೈಲು ರಿಂಗಾತು. ಅಜ್ಜಿ ನೋಡಿಂಡು “ಇದು ಏವದು ಬಜ್ಜ. ಅಂಬಗಂಬಗ ಎನಗೆ ಕೋಲು ಕೊಡುತ್ತು. ಮಾತಾಡುವಾಗ ಕಟ್ಟು ಮಾಡುತ್ತವು. ಸುಮ್ಮನೆ ಉಪದ್ರ ಕೊಡುವದು ಮಾರಿಗೊ” ಹೇಳಿ ಪರಂಚಿಂಡಿತ್ತಿದ್ದು.

“ಇದು ಎನ್ನ ಅಳಿಯ ತಂದು ಕೊಟ್ಟದು. ಎನಗೆ ಬೇಡ ಹೇಳಿತ್ತಿದ್ದೆ. ಹಾಂಗಾರೂ ನಿಂಗೊಗೇ ಇರಲಿ ಹೇಳಿ ತಂದು ಕೊಟ್ಟ°. ಫಸ್ಟಿಂಗೆ ಎನಗೆ ಇದರ ಹಿಡಿವಲೇ ಗೊಂತಿತ್ತಿದ್ದಿಲ್ಲೆ. ಎನ್ನ ಪುಳ್ಳಿಯಕ್ಕೊ ಹೇಳಿ ಕೊಟ್ಟು ಕೊಟ್ಟು ಈಗ ರಜ ಗೊಂತಾತದ, ಒಲ್ಳೊಳೆ ಪದ್ಯವೂ ಬತ್ತು. ನಂಬರು ಸರಿಯಾಗಿ ಕಾಣದ್ರೂ ‘ಕೋಲು’ ಬಂದರೆ ತೆಗದು ಮಾತಾಡ್ತೆ. ಈಗಾಣ ಕಾಲಲ್ಲಿ ಇದು ಬೇಕಪ್ಪ. ಮನೆ ಕೆಲಸಕ್ಕೆ ಬತ್ತ ಹೆಣ್ಣಿನತ್ರೂ ಈಗ ಮೊಬೈಲು ಇದ್ದು ಹೇಳ್ತು. ಅಲ್ಲಿ ಮಗಳೂ, ಅಳಿಯನೂ ಉದಿಯಪ್ಪಗಳೇ ಕೆಲಸಕ್ಕೆ ಹೋದರೆ ಮತ್ತೆ ಮನೇಲಿ ಆನು ಮಾಂತ್ರ ಇಪ್ಪದು. ಹಾಂಗೆ ಅಲ್ಲಿಯಾಣ ಕೆಲವೆಲ್ಲಾ ನಂಬರೂ ಎನಗೆ ಕೊಟ್ಟಿದವು. ಅವೂ ದಿನುಗೊಳುತ್ತವು.” ಹೀಂಗೆ ಅಜ್ಜಿ ಮೊಬೈಲ್ ಬಗ್ಗೇ ಒಂದು ಅರ್ಧ ಗಂಟೆ ಭಾಷಣ ಬಿಗುದತ್ತದ.

ಅಷ್ಟಪ್ಪಗ ಅಜ್ಜಿಯ ಮೊಬೈಲ್ ರಿಂಗಾತು. ರಿಂಗ್ ಟೋನ್ “ಕೌಸಲ್ಯ ಸುಪ್ರಜಾ ರಾಮ…” ಪದ್ಯ ಎಂ.ಎಸ್. ಸುಬ್ಬುಲಕ್ಷ್ಮೀಯದ್ದು.
ಅದಕ್ಕೆಂತ ಗೊಂತು. ಸುಪ್ರಭಾತ ಮೊಬೈಲಿಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಬತ್ತು ಹೇಳಿ. “ಇದಾ ಮಗ ಕುಮಾರ ಇದು ಆರದ್ದು ನೋಡು. ಎನಗೆ ಕಣ್ಣೂ ಕಾಣುತ್ತಿಲ್ಲೆ. ತೆಗೆ…ತೆಗೆ…” ಹೇಳಿ ಅಜ್ಜಿ ಮೊಬೈಲು ಕುಮಾರಣ್ಣಂಗೆ ಕೊಟ್ಟತ್ತು. “ಹಲೋ… ಹ್ಹಾ °… ಅಜ್ಜಿ ಇದ್ದವು ಕೊಡ್ತೆ.” “ಅಜ್ಜಿ… ಇದು ನಿಂಗೊಗೆ ಪುಟ್ಟಕ್ಕನ ಫೋನು ಅದಕ್ಕೆ ಮದುವೆಗೆ ಬಪ್ಪಲೆ ಎಡಿತ್ತಿಲ್ಲೆಡ. ಅಮೇರಿಕಂದ ಭಾವನೂ ಪುಟ್ಟಕ್ಕನೂ.. ಮಾತಾಡಿ… ಮಾತಾಡಿ” ಹೇಳಿ ಕುಮಾರಣ್ಣ ಮೊಬೈಲ್ ಅಜ್ಜಿಗೆ ಕೊಟ್ಟ°.

ತೆಕ್ಕೋ… ಅಜ್ಜಿಯ ಸಂಭಾಷಣೆ. ಕೇಳಿ ನೆಗೆ ಮಾಡಿ ಹೊಟ್ಟೆ ಹುಣ್ಣಾತು.
ಹ್ಹಾ °… ಎಂತ ಮಗಾ ಸೌಖ್ಯವೋ… ಹೇಂಗಿದ್ದೆ..
ಇದಾ ಎಂಗೊ ಎಲ್ಲಾ ಮೋಳಿನ ಮದುವಗೆ ಬಂದದಿದಾ. ಎಲ್ಲೋರೂ ಬೈಂದವು.
ನಿನಗೆಂತ ರಜೆ ಸಿಕ್ಕಿದ್ದಿಲ್ಲೆಯೋ. ವಿಮಾನಲ್ಲಿ ಬರೆಕಾತು.
ಸುಭದ್ರೆ ಹೆತ್ತಿದಾಡ. ‘ಹಿಳ್ಳೆ ಬಾಳಂತಿ ಸೌಖ್ಯವೋ?’ ಮಾಣಿ ಹೇಂಗಿದ್ದ°. ನಿನ್ನ ಹಾಂಗೋ… ಅಪ್ಪೋ… ಅಪ್ಪೋ…
ಬಾಳಂತಿಯ ಮೀಶಲೆ ಎಂತ ಏರ್ಪಾಡು ಮಾಡಿದ್ದೆ?. ಎಣ್ಣೆ ಕಿಟ್ಟಿ ಸೀಗೆ ಹುಡಿ ಹಾಕಿ ಒಳ್ಳೆ ಬೆಶೀ ನೀರಿಲ್ಲಿ ಮೀಶೇಕು.
ಈಗ ಹೆಚ್ಚು ಕೆಲಸ ಮಾಡ್ಳಾಗ. ಹೆರಿಗೆ ಹೇಂಗೇ!? ನೋರ್ಮಲೋ… ಅಲ್ಲ ಈಗ ಎಂತದೋ ಹೇಳ್ತವಲ್ಲದೋ ಸೀಸೆ.. ಸೀಸೆ… ಆ° ಅದೇ ಅದೇ… ಸೌಕರ್ಯ ಇದ್ದನ್ನೆ.
ಎಂತ ಹೆರುವಾಗ ನೀನೂ ನೋಡಿದ್ದೆಯೋ. ಗೆಂಡಂದ್ರ ಬಿಡ್ತವೋ.. ಹೋ ಮಾರಿಗಳೇ… ಅಲ್ಯಾಣ ಕ್ರಮ…
ಅದಕ್ಕೆ ದಶಮೂಲಾರಿಷ್ಟ, ಕುಟಚಾದ್ರಿ, ಜೀರಿಗಾರಿಷ್ಟ ಕೊಡು. ಹಾಂಗೆ ಮಾಣಿಯ ಮೀಶುವಗ ತಲೆಗೆ ಚಂದನವೂ ಗಂಧವೂ ಸೇರುಸಿ ಕಲಸಿ ಕಿಟ್ಟೇಕು.
ಎಂತ ಅದೆಲ್ಲಾ ಅಮೇರಿಕಲ್ಲಿ ಸಿಕ್ಕದೋ… ಹಾಂಗಾದರೆ ಬಾಳಂತನ ಹೇಂಗೇ? ಮಲೆ ತಿಂತನೋ, ಹಾಲಿದ್ದಾಯಿಕ್ಕಲ್ಲದಾ! …
ಹೋ ಅಪ್ಪೋ… ಹಾಂಗಾರೆ ರಜ್ಜ ಕುಂಕುಮ ಬೆಶಿ ಮಾಡಿ ತಲೆಗೆ ನೆತ್ತಿಗೆ ಹಾಕಿ ತಿಕ್ಕು.
ಬಾಳಂತಿ ಸೊಂಟಕ್ಕೊಂದು ವಸ್ತ್ರ ಕಟ್ಟಿ ಆತಾ. ನಲುವತ್ತೈದು ದಿನ ಆದರೂ ಮೀಶೇಕು.
ಎಂತ ಜೆನ ಇಲ್ಲೆಯೋ… ನೀನೇ ಮೀಶೇಕೋ… ಎಂತ…
ಹಲೋ ಹಿಳ್ಳೆಗೆ ಹೊಟ್ಟೆಂದ ಹೋವುತ್ತರೆ ಉರಗೆ ರಜ್ಜ ಅರದು ಮಲೆಹಾಲಿಲ್ಲಿ ಕುಡುಶು. ಎಂತ ಅಲ್ಲಿ ಸಿಕ್ಕದಾ…? ಅಯ್ಯೋ.. ಮತ್ತೆ ಎಂತ ಸಿಕ್ಕುಗು…?
ಹೆತ್ತಿಕ್ಕಿ ಒಂದೇ ವಾರಲ್ಲಿ ಪುನ: ಕೆಲಸಕ್ಕೆ ಹೋಪಲೆ ಸುರು ಮಾಡಿದ್ದೋ! ರಾಮ ದೇವರೇ.. ಅಲ್ಲಿಯಾಣ ಕ್ರಮವೇ!
ಹಲೋ… ಹಲೋ… ಹ್ಹಾ °… ಅದು ಕಟ್ಟೂ ಆತು..” ಅಜ್ಜಿ ಮೊಬೈಲ್ ಒತ್ತಿ ಅದರ ಚೂಡೀದಾರದ ಕಿಸಗೆ ಹಾಕಿತ್ತು.

ಅಜ್ಜಿಯ ಮೊಬೈಲಿನ ವಿವರಣೆ ಸುರುವಪ್ಪಗ ಎಂಗೊ ಬೆಂದಿಗೆ ಕೊರದು ಚಾ ಕುಡಿವಲೆ ಸುರುಮಾಡಿತ್ತಿದ್ದೆಯೋ °!!

~*~*~

ಸೂ:

 • ಎಡನ್ನೀರು ವೆಂಕಟಣ್ಣನ ಮೋರೆಪುಟ: ಸಂಕೊಲೆ
 • ಎಡನ್ನೀರು ವೆಂಕಟಣ್ಣಂಗೆ ಪ್ರಶಸ್ತಿಪ್ರದಾನದ ಪಟ ಇಲ್ಲಿದ್ದು:
ಪ್ರೊ. ವಿ.ಬಿ.ಅರ್ತಿಕಜೆ ಇವರ ಕೈಂದ ಪ್ರಶಸ್ತಿ ಸ್ವೀಕಾರ

ಪ್ರೊ. ವಿ.ಬಿ.ಅರ್ತಿಕಜೆ ಇವರ ಕೈಂದ ಪ್ರಶಸ್ತಿ ಸ್ವೀಕಾರ

ಸಂಪಾದಕ°

   

You may also like...

10 Responses

 1. ಕೆ.ನರಸಿಂಹ ಭಟ್ ಏತಡ್ಕ says:

  ಅಂದು ನಾವು ಮಾತಾಡಿದ ಹಿನ್ನೆಲೆಲಿ ಬರಹ ಓದಿದೆ.ಅಜ್ಜಿಗೆ ‘ಕೋಲು’ಬಂದು ಮಾತಾಡಿಯಪ್ಪಗ ಬೆಂದಿಗೆ ಕೊರದು ಆಯಿದು.ಮತ್ತೆ ನಿಂಗೊ ಕಾಲಿಂಗೆ ಬುದ್ಧಿ ಹೇಳಿದಿ.ಅಲ್ಲದೋ? ಪಷ್ಟಾಯಿದು.ವೆಂಕಟಣ್ಣಾ ಅಭಿನಂದನೆಗೊ.

 2. ಬಾಲಣ್ಣ (ಬಾಲಮಧುರಕಾನನ) says:

  ವೆಂಕಟಣ್ಣ , ಅಜ್ಜಿಗೆ ಎಂಗಳದ್ದಾರದ್ದೂ ಮೊಬೈಲು ನಂಬ್ರ ಮಾಂತ್ರ ಕೊಟ್ಟಿಕ್ಕೆಡಿ ಮಿನಿಯಾ…

  ಲಾಯಕಾಯಿದು.ಅಭಿನಂದನೆಗೊ.

 3. ಬಾಲಣ್ಣ (ಬಾಲಮಧುರಕಾನನ) says:

  ಅಜ್ಜಿಗೆ ಎಂಗಳದ್ದಾರದ್ದುದೇ ಮೊಬೈಲು ನಂಬ್ರ ಕೊಟ್ಟಿಕ್ಕೆಡಿ ವೆಂಕಟಣ್ಣ …

  ಲಾಯಕ್ಕಾಯಿದು.ಅಭಿನಂದನೆಗೊ.

 4. ಬೊಳುಂಬು ಗೋಪಾಲ says:

  ಅಜ್ಜಿಯ ಪಟ್ಟಾಂಗ ತುಂಬಾ ಲಾಯಕಾಯಿದು. ನೆಗೆ ಲೇಖನವ ಎನ್ನ ಹೆಂಡತ್ತಿಗೆ ಗಟ್ಟಿಗೆ ಓದಿ ಹೇಳಿದೆ; ಒಟ್ಟಿಂಗೆ ನೆಗೆ ಮಾಡಿದ್ದೇ ಮಾಡಿದ್ದು. ಪ್ರಥಮ ಬಹುಮಾನ ಗಿಟ್ಟಿಸಿಕೊಂಡದಕ್ಕೆ ಅಭಿನಂದನೆಗೊ. ವೆಂಕಟಣ್ಣನ ಕಾರ್ಟೂನುಗಳ ಹಾಂಗೇ ನೆಗೆ ಬರಹಂಗಳೂ ಲಾಯಕಿರ್ತು. ಬೈಲಿಂಗೆ ಅಂಬಗಂಬಗ ಬತ್ತಾ ಇರಿ. ಬೈಲಿಲ್ಲಿ ನೆಗೆಯ ಹಳ್ಳ ಹರಿಯಲಿ.

  • ಉಡುಪುಮೂಲೆ ಅಪ್ಪಚ್ಚಿ says:

   ಹರೇ ರಾಮ,
   [ ಮೊಬೈಲು ರಿಂಗಾತು. ಅಜ್ಜಿ ನೋಡಿಂಡು “ಇದು ಏವದು ಬಜ್ಜ. ಅಂಬಗಂಬಗ ಎನಗೆ ಕೋಲು ಕೊಡುತ್ತು. ಮಾತಾಡುವಾಗ ಕಟ್ಟು ಮಾಡುತ್ತವು. ಸುಮ್ಮನೆ ಉಪದ್ರ ಕೊಡುವದು ಮಾರಿಗೊ” ಹೇಳಿ ಪರಂಚಿಂಡಿತ್ತಿದ್ದು.] ಹಳಬರ ಮಾತಿನ ಧಾಟಿಯ ನೆ೦ಪಾತು.ಇ೦ಥ ಮಾತುಗೊ ಇನ್ನು ಕೇಳ್ಳೆ ಸಿಕ್ಕಲೆ ಕಷ್ಟ!ನೆಗೆ ಬರಹ ಲಾಯಕಕ್ಕೆ ಬಯಿ೦ದು.ಪೇಟೆ ಅಜ್ಜಿಯ ಹೆಸರು ಎ೦ತದೊ?ನಿ೦ಗಳ ಹಾಸ್ಯದ ಮಾಲೆ ಪಟಾಕಿ ನಮ್ಮ ಬೈಲಿಲ್ಲಿ ಹೊಟ್ಟಿ೦ಗೊ೦ಡಿರೆಕು. ಧನ್ಯವಾದ೦ಗೊ

 5. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಪೇಟೆ ಅಜ್ಜಿಯ ಅಜ್ಜಿ ಹೇಳುಲಾಗ…
  ಭಾರೀ ಲಾಯ್ಕ ಬರಹ

 6. ಇಂದಿರತ್ತೆ says:

  ವೆಂಕಟಣ್ಣಾ, ನಿಂಗಳ ನಗೆಬರಹಲ್ಲಿ ನೆಗೆಗೆ ಬರಯಿಲ್ಲೆ. ಕೆಲವು ಹಾಸ್ಯಲೇಖನಂಗಳಲ್ಲಿ ಹಾಸ್ಯವ ಹುಡ್ಕೆಕ್ಕಾವುತ್ತು. ಲಾಯ್ಕಾಯಿದು ಲೇಖನ. ಕೆಲವು ಜೆನಂಗೊಕ್ಕೆ ಪ್ರಾಯ ಹೆಚ್ಚಾದ ಹಾಂಗೆ ತನ್ನ ಗುರುತುಸುದು ಕಮ್ಮಿಯಾವುತ್ತು ಹೇಳ್ತ ಭ್ರಾಂತು ಸುರುವಪ್ಪದೋ ಏನೋ- ಮೇಕಪ್ಪು ಹೆಚ್ಚೆಚ್ಚು ಮಾಡ್ಲೆ ಸುರುಮಾಡ್ತವು. ವೇಷ ಕಟ್ಟಿದ ಹಾಂಗೆ ಕಂಡರೂ ಮೇಕಪ್ಪು ಬಿಡವು. ಅಂತವರನ್ನೇ ಹಾಸ್ಯರೂಪಲ್ಲಿ ತೋರುಸಿದ್ದಿ- ಅಭಿನಂದನೆಗೊ.

 7. a ramachandra bhat says:

  ಆರಿಂಗಾದರೂ ನೆಗೆ ಮಾಡದ್ದೆ ಕೂಪಲೆಡಿಗೊ – ಇದರ ಓದಿ ಃ)

 8. ಚೆನ್ನೈ ಭಾವ° says:

  😀 😀

 9. ರಘುಮುಳಿಯ says:

  ಅಜ್ಜಿಯ ಸುರ್ಪ ಕಣ್ಣಿ೦ಗೆ ಕಟ್ಟಿತ್ತು.ವೇಷ ಹೊಸತ್ತಾದರೂ ಹಳ್ಳಿ ಮದ್ದುಗಳ ಮರದ್ದಿಲ್ಲೆನ್ನೆ,ಬಚಾವು.
  ಒಳ್ಳೆ ರಸ ಇದ್ದು ಈ ಹಾಸ್ಯ ರಸಾಯನಲ್ಲಿ.ವೆ೦ಕಟಣ್ಣ೦ಗೆ ಅಭಿನ೦ದನೆಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *