ವಿಷು ವಿಶೇಷ ಸ್ಪರ್ಧೆ 2013: ಪ್ರಬಂಧ ಪ್ರಥಮ: ಸನತ್ ಕೊಳಚ್ಚಿಪ್ಪು

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ “ವಿಷು ವಿಶೇಷ ಸ್ಪರ್ಧೆ” ನೆಡೆಶುತ್ತಾ ಇಪ್ಪದು ಬೈಲಿಂಗೆ ಹೆಮ್ಮೆಯ ಸಂಗತಿ.
ಎರಡ್ಣೇ ವರ್ಷದ ಸ್ಪರ್ಧಾವಳಿ 2013ರ ವಿಷುವಿನ ದಿನ ಫಲಿತಾಂಶವ ಘೋಷಣೆ ಮಾಡಿ, ಮೊನ್ನೆ ಎಪ್ರಿಲ್ 21ರ ಪುತ್ತೂರ ಕಾರ್ಯಕ್ರಮಲ್ಲಿ ಬಹುಮಾನ ವಿತರಣೆ ಆತು. ಬೈಲಿನ ದೊಡ್ಡಬಾವ ಇದರ ಸಂಚಾಲಕರಾಗಿತ್ತಿದ್ದವು. ಕತೆ, ಕವನ, ಪ್ರಬಂಧ, ನೆಗೆಬರಹ, ಫೋಟೋ- ಹೀಂಗೆ ಐದು ವಿಭಾಗಲ್ಲಿ ಸ್ಪರ್ಧೆ ನೆಡದು, ಪ್ರತಿಯೊಂದು ವಿಭಾಗಲ್ಲಿಯೂ ಸಾಧಕರಾಗಿಪ್ಪ ಸಮಾಜದ ಹಿರಿಯರು ತೀರ್ಪುಗಾರರಾಗಿ ಸಹಕರುಸಿದ್ದವು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಪ್ರಬಂಧ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಲೇಖಕರಾದ ಶ್ರೀ ಸನತ್ ಕೊಳಚ್ಚಿಪ್ಪುರಿಂಗೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಹವ್ಯಕರು ಅಂದು ಇಂದು: ಸನತ್ ಕೊಳಚ್ಚಿಪ್ಪು

ಲೇಖಕ: ಸನತ್ ಕೊಳಚ್ಚಿಪ್ಪು

ಲೇಖಕ: ಸನತ್ ಕೊಳಚ್ಚಿಪ್ಪು

ಭಾರತದ ಪಶ್ಚಿಮ ಕರಾವಳಿಲಿ ಇಪ್ಪ ಬ್ರಾಹ್ಮಣ ಪಂಗಡಗಳಲ್ಲಿ ಹವ್ಯಕರು ಒಂದು ಭಾಗ.
ಉತ್ತರಂದ ಬಂದು ಇಲ್ಲಿನ ಬದುಕಿಲಿ ಅವಿಭಾಜ್ಯವಾಗಿ ಹೋದ ನಮ್ಮ ಪಂಗಡದ ಪ್ರಮುಖ ವೃತ್ತಿ ಕೃಷಿ. ಕೃಷಿಯೊಟ್ಟಿಂಗೆ ದೇವತಾರಾಧನೆ,ಹೋಮ ಹವನಲ್ಲಿ ತೊಡಗಿಸಿಕೊಂಡವು. ನೀರಿಪ್ಪದಾದರೂ ನೀರಿಲ್ಲದ್ದಾದರೂ ಸರಿ, ಜಾಗೆಲಿ ಬೆವರು ಹನಿಸಿ ಸಮೃದ್ದ ಬೆಳೆ ತಪ್ಪ ಕಷ್ಟಜೀವಿಗೋ. ತೆಂಗು, ಕಂಗು, ಕೊಕ್ಕೋ, ಬಾಳೆ, ಕಾಳುಮೆಣಸು, ತರಕಾರಿಗೋ ಹೀಂಗೆ ತರಹ ತರಹದ ಕೃಷಿಯೊಟ್ಟಿಂಗೆ ಯಕ್ಷಗಾನ, ಗಾಯನ, ಗಮಕ ಹೇಳಿಯೊಂಡು ಕಲಾಸಕ್ತರಾಗಿ ಕೃಷಿ ಮತ್ತೆ ಕಲೆಯ ಸೇರ್ಸಿಕೊಂಡು ಬದುಕಿಯೊಂಡು ಬಂದಿಪ್ಪವು.

ಅಂದು

ಈಗ ಒಂದು ಹತೈವತ್ತು ವರ್ಷದ ಹಿಂದೆ, ಹವ್ಯಕರ ಬದುಕು ಕೇವಲ ಕೃಷಿ ಆಧಾರಿತ ಗ್ರಾಮೀಣ ಬದುಕು ಆಗಿತ್ತು.
ಮಳೆ, ಮದ್ದು, ಆಟ, ಪೂಜೆ, ಕೊಯ್ಲು ಹೇಳಿ ಗ್ರಾಮೀಣ ಬದುಕಿನ ಎಲ್ಲಾ ಸ್ವಾರಸ್ಯಂಗೊ ಬದುಕಿನ ಭಾಗ ಆಗಿತ್ತು. ಪರಸ್ಪರ ಸ್ನೇಹಲ್ಲಿ,ಸಹಕಾರಲ್ಲಿ,ಊರಿಲಿ ಎಲ್ಲರೂ ಎಲ್ಲರನ್ನೂ ನೋಡಿಕೊಂಡು,”ನಮ್ಮ ದುಡಿಮೆ ನವಗೆ ಫಲ ಕೊಡ್ತು”, ಹೇಳಿ ತೃಪ್ತಿಲಿ ಬದುಕು ಸಾಗಿಸಿಕೊಂಡು ಇತ್ತಿದ್ದವು.

1950 ರ ಮತ್ತೆ 1960ರ ದಶಕಲ್ಲಿ ಭೂ-ಸುದಾರಣೆ, ಗೇಣಿಯ ಬಗ್ಗೆ ಬಂದ ಕಾನೂನು, ಅದರ ಪರಿಣಾಮವಾಗಿ ಬಂದ ಸಾಮಾಜಿಕ ಪರಿಣಾಮಂಗೋ ಹವ್ಯಕರ ಕೃಷಿಯೊಟ್ಟಿಂಗೆ ಬ್ಯಾಂಕಿಂಗ್, ಶಿಕ್ಷಣ, ವಿಜ್ಞಾನ ಹೇಳಿ ಹತ್ತು ಹಲವು ಕ್ಷೇತ್ರಂಗಳ ಕಡೆ ನೋಡುವಾಂಗೆ ಮಾಡಿತ್ತು. ಈ ಹತ್ತು ಹಲವು ಕ್ಷೇತ್ರಂಗೋ ನಮ್ಮ ದೃಷ್ಟಿಕೋನವನ್ನೇ ಬದಲಾಯಿಸಿತ್ತು.  ಬೇರೆ ಬೇರೆ ವೃತ್ತಿಲಿ ಇದ್ದರೂ ಮೂಲವೃತ್ತಿ ಕೃಷಿಗೆ ಮೋಸ ಆಗದ್ದಾಂಗೆ ನಮ್ಮ ಹಿರಿಯರು ಬದುಕಿದವು. ಮನೆ ಹೆರ ಯಾವುದೇ ವೃತ್ತಿಲಿದ್ದರೂ ಮನೆಲಿಪ್ಪ ಕೃಷಿಯ ಕೈ ಬಿಡದ್ದೇ,  ಹೆರ ಕಲ್ತ ಹೊಸ ಹೊಸ ವಿಧಾನಂಗಳ ಕೃಷಿಗೆ ಬಳಸಿದವು. ಕನ್ನಡಲ್ಲಿ ಬಂಗಾರದ ಮನುಷ್ಯ ಸಿನಿಮಾ ಬಪ್ಪ ಮೊದಲೇ, ಎಷ್ಟೇ ಕಲ್ತರೂ ನಮ್ಮ ಊರು, ನಮ್ಮ ತೋಟ ಹೇಳಿ ಊರಿಲೇ ಬದುಕು ಕಟ್ಟಿಕೊಂಡವು ತುಂಬಾ ಜೆನ ಇದ್ದವು. ಅವರ ವಿದ್ಯೆ ಊರಿಂಗೆ ಉಪಕಾರಕ್ಕೆ ಹೇಳಿ,ಅನೇಕ ಸಮಾಜಮುಖಿ ಬದಲಾವಣೆಗಳ ತಂದವು. ದಕ್ಷಿಣ ಕನ್ನಡ,ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಲಿ ಇಪ್ಪ ಯಾವ ಪ್ರಮುಖ ಶಿಕ್ಷಣ ಸಂಸ್ಥೆಗಳ ತೆಕ್ಕೊಂಡ್ರೂ ಅದರಲ್ಲಿ ಹವ್ಯಕರ ಕೊಡುಗೆ ಇದ್ದೇ ಇರ್ತು.

1980ರ ದಶಕಲ್ಲಿ ನಮ್ಮ ಸಮಾಜಲ್ಲಿ ತುಂಬಾ ಬದಲಾವಣೆಗೋ ಬಂತು. ಎಲ್ಲಾ ತಾಲೂಕುಗೊಕ್ಕೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಬಂತು, ಹೆಚ್ಚಿನವರಲ್ಲಿಗೆ T.V. ಬಂತು. ಮುಂದೆ 1992ರಲ್ಲಿ ಭಾರತ ಜಾಗತೀಕರಣಕ್ಕೆ ಬಾಗಿಲು ತೆಗೆದ ಕಾರಣ ಸುಮಾರು ಹೊಸ ಹೊಸ ನಮುನೆಯ ಸಾಧನಂಗೋ, ಉಪಕರಣಂಗೋ ಬಂತು. ಅದರಿಂದ ನಮ್ಮ ಬದುಕಿಲಿ ಸುಮಾರು ಒಳ್ಳೆಯದ್ದೂ, ಮತ್ತೆ ಸುಮಾರು ಕೆಟ್ಟ ಬದಲಾವಣೆಗೊ ಬಂತು. ಜಾಗತೀಕರಣಂದಾಗಿ ಅಡಕ್ಕೆ ಮತ್ತೆ ಬೇರೆ ಕೃಷಿ ಉತ್ಪನ್ನಂಗೊಕ್ಕೆ ಹೊಸ ಹೊಸ ಮಾರುಕಟ್ಟೆ ಸಿಕ್ಕಿತ್ತು.ದುಡುದಕ್ಕೆ ಬೆಲೆ ಬಂತು. ನಮ್ಮ ಆರ್ಥಿಕ ಪರಿಸ್ಥಿತಿ ಬದಲಾವಣೆ ಆತು. ಎಲ್ಲರ ಮನೆಲು “ಓಮಿನಿ” ನಿಂಬಾಂಗೆ ಆತು. ಜಾಗತೀಕರಣಂದಾಗಿ ಕೆಲವು ಬೇಡದ್ದ ಬದಲಾವಣೆಗಳೂ ಬಂತು. ಮೊದಲಿಂಗೆ ಕೃಷಿ ಉತ್ಪನ್ನಂಗೊಕ್ಕೆ ಬೆಲೆ ಜಾಸ್ತಿ ಆತು ಆದರೂ, ಮತ್ತೆ ಕಡಮ್ಮೆ ಅಪ್ಪಲೆ ಶುರುವಾತು. ಅದಕ್ಕೆ ಮುಖ್ಯ ಕಾರಣ ಬೇರೆ ಬೇರೆ ದೇಶಂಗಳಂದ ಬಪ್ಪಲೇ ಶುರುವಾದ ಕಡಮ್ಮೆ ಬೆಲೆಯ ಕೃಷಿ ಉತ್ಪನ್ನಂಗೋ ,
ಉದಾ: ಮಲೇಶ್ಯಾಂದ , ಬರ್ಮಾಂದ ಬಂದ ಅಡಕ್ಕೆ.  ಬೇರೆ ಬೇರೆ ಹೊಸ ಹೊಸ ಕೈಗಾರಿಕೆಗೊ ಶುರುವಾಗಿ ಕಾರ್ಮಿಕರಿಂಗೆ ಹೊಸ ಹೊಸ ಉದ್ಯೋಗಾವಕಾಶ ಸಿಕ್ಕಿತ್ತು, ಕೃಷಿ ಕೆಲಸಕ್ಕೆ ಜನ ಸಿಕ್ಕುದು ಕಷ್ಟ ಅಪ್ಪಲೆ ಶುರು ಆತು.  ಕೃಷಿಲಿ ಬಪ್ಪ ಲಾಭ ಕಮ್ಮಿ ಅಪ್ಪಲೆ ಶುರುವಾತು.ಇದರಿಂದ ಹವ್ಯಕರು ಕೃಷಿ ಬಿಟ್ಟು ವೃತ್ತಿಪರ ಶಿಕ್ಷಣ , ಇಂಗ್ಲೀಷ್ ಶಿಕ್ಷಣದ ಕಡೆಗೆ ಹೆರಟವು. ಗಣಕೀಕರಣ ಕಂಪ್ಯೂಟರ್ ತಂತು. ಕಂಪ್ಯೂಟರ್ ಕೆಲಸ ತಂದತ್ತು.ಜೆನ ಇಂಜೀನೀಯರಿಂಗಿನ ಮೂಲಕ ಕಂಪ್ಯೂಟರ್ ಕೆಲಸಕ್ಕೆ ಹೋದವು. ಈ ಕಂಪ್ಯೂಟರ್ ಕೆಲಸ ,ಜಾಗತೀಕರಣ ನಮ್ಮ ಜೀವನಕ್ರಮಲ್ಲಿ ಬಹಳಷ್ಟು ಬದಲಾವಣೆಗಳ ತಂದತ್ತು.

ಇಂದು

ಈ ಬದಲಾದ ಜೀವನಕ್ರಮ ನಮ್ಮ ಬದುಕಿಲಿ ,ನಮ್ಮ ಸಮಾಜಕ್ಕೆ ಮೂರು ದೊಡ್ಡ ಸವಾಲು ಹಾಕಿದ್ದು.

 1. ನಗರೀಕರಣ
 2. ಜೀವನಪದ್ದತಿ ಬದಲಾವಣೆ
 3. ಬೇರೆ ಸಂಸ್ಕೃತಿ ಮತ್ತೆ ಮಾಧ್ಯಮಗಳ ಪ್ರಭಾವ

1. ನಗರೀಕರಣ:
ನಗರೀಕರಣ ಹೇಳಿರೆ ಗ್ರಾಮೀಣ ಜೀವನದ ಕ್ರಮ ಬದಲಾಗಿ ನಗರದ ಜೀವನ ಕ್ರಮ ಬಪ್ಪದು. ಇದರಲ್ಲಿ ಪ್ರಮುಖವಾದದ್ದು ಕೃಷಿಂದ ಕೃಷಿಯೇತರ ವೃತ್ತಿಗೆ ಹೋಪದು, ಗ್ರಾಮೀಣ ಪ್ರದೇಶಂದ ನಗರಗೊಕ್ಕೆ ವಲಸೆ ಬಪ್ಪದು, ನಗರಂಗೊಕ್ಕೆ ಹೋದವು ವಾಪಸು ಬಪ್ಪಾಗ ಹಳ್ಳಿಗೊಕ್ಕೆ ನಗರದ ಸವಲತ್ತುಗೋ,ಸಂಸ್ಕೃತಿಯ ತತ್ತವು.ಭಾರತಲ್ಲಿ ಕಳೆದ ಏರಡು ದಶಕಲ್ಲಿ ನಗರ ಪ್ರದೇಶದ ಜನಸಂಖ್ಯೆಲಿ ಗಣನೀಯ ಹೆಚ್ಚಳ ಆಯಿದು. ಊರಿಲಿ ಕಲ್ತು,ಬೆಂಗಳೂರಿಲಿಯೋ ಅಲ್ಲಾ ಹತ್ತರಾಣ ನಗರಂಗಳಲ್ಲಿ ಕೆಲಸಕ್ಕೆ ಸೇರುದು ಸಾಮಾನ್ಯ ಆಯಿದು. ಊರಿಲಿ ಇದ್ದರೂ ಹೊಸ ಹೊಸ ಸವಲತ್ತುಗಳ ಕಾರಣ ಕೃಷಿಯಿಂದ ಬೇರೆ ವೃತ್ತಿಗೆ ಹೋವುತ್ತಾ ಇದ್ದವು.ಇದರಿಂದ ನಾವು ಆದಷ್ಟೂ ನಗರದ ಜೇವನಕ್ರಮಕ್ಕೆ ಹೊಂದಿಯೊಂಡು ಇದ್ದು.

2. ಜೀವನಪದ್ಧತಿಲಿ ಬದಲಾವಣೆ:
ನಗರೀಕರಣಂದ ನಮ್ಮ ಜೀವನಪದ್ಧತಿಲಿ ತುಂಬಾ ಬದಲಾವಣೆ ಆಗಿಯೊಂಡು ಇದ್ದು.ಹಳ್ಳಿಲಿ ಇಪ್ಪವರ ಜೀವನಲ್ಲಿಯೂ ಬದಲಾವಣೆ ಆಗಿಯೊಂಡು ಇದ್ದು. ಅದರಲ್ಲಿ ಬಹುಮುಖ್ಯ ಬದಲಾವಣೆ ಹೇಳಿರೆ ಮದುವೆಲಿ. ಹವ್ಯಕರಲ್ಲಿ ಕೃಷಿಕರಿಂಗೆ ಕೂಸಿಲ್ಲೆ ಹೇಳ್ತದು ನಾವು ಸಾಮಾನ್ಯವಾಗಿ ಕೇಳ್ತಾ ಇಪ್ಪ ದೂರು. ಇದಕ್ಕೆ ಪರ್ಯಾಯ ಆಗಿ ಬೇರೆ ಪ್ರಾಂತ್ಯಂದ, ಬೇರೆ ಪಂಗಡಂದ ಕೂಸುಗಳ ತಪ್ಪಲಕ್ಕು ಹೇಳುವ ಪರಿಹಾರವೂ ಇದ್ದು. ಹಾಂಗೆ ತಪ್ಪ ಕೂಸುಗೊಕ್ಕೆ ನಮ್ಮ ಜೀವನ ಶೈಲಿಗೆ,ಸಂಸ್ಕೃತಿಗೆ ಹೊಂದಿಯೊಂಡು ಹೋಪಾಂಗೆ ಮಾಡುವುದು ನಾವು ಮಾಡೆಕ್ಕಾದ್ದು. ಇದು ಕಷ್ಟ ಇಕ್ಕು ಆದರೆ ಆಗದ್ದೇ ಇಪ್ಪಂತದಲ್ಲ.ಪ್ರೇಮ ವಿವಾಹ, ಅಂತರ್ ಪಂಗಡ ವಿವಾಹ, ಅಂತರ್ಜಾತಿ ವಿವಾಹ ಹವ್ಯಕ ಯುವಕ ಯುವತಿಯರಲ್ಲಿ ಕಂಡು ಬತ್ತಾ ಇದ್ದು. ನಾವು ನಮ್ಮ ಜೀವನ ಪದ್ಧತಿ,ಆಚಾರ-ವಿಚಾರ, ಸಂಸ್ಕೃತಿಯ ಬಗ್ಗೆ ಕಾಳಜಿವಹಿಸಿ ಹೆರಂದ ಬದುಕಿಲಿ ಬಂದವಕ್ಕೆ ಕಲುಶೆಕ್ಕು.

ಮಕ್ಕೊ ಎಲ್ಲರೂ ಓದಿ ಪೇಟೆ ಸೇರಿಯಪ್ಪಾಗ ಊರಿನ ಮನೆಲಿ ಅಬ್ಬೆ-ಅಪ್ಪ ಮಾಂತ್ರ ಉಳಿವದು.ಅವುದೇ ಅವಕ್ಕೆ ಏಡಿಗಾದಷ್ಟು ಕಾಲ ಇದ್ದು ಮಕ್ಕಳೊಟ್ಟಿಂಗೆ ಹೋಯೆಕ್ಕಾವುತ್ತು. ಹೀಂಗೆ ನಾವು ನಿಧಾನಕ್ಕೆ ನಗರದ ಕಡೆ ಹೋಪಲೆ ಶುರುಮಾಡಿದ್ದು. ಇದು ನಮ್ಮ ಊರಿನ ಬೇರಿನ ಮರವಾಂಗೆ ಮಾಡಲಾಗ ಅಷ್ಟೆ. ನಮ್ಮ ಆರ್ಥಿಕ ಪರಿಸ್ಥಿತಿ ಬದಲಾವಣೆ ಆಗಿಯೊಂಡು ಇಪ್ಪ ಕಾರಣ ನವಗೆ ಹಳಬ್ಬರಾಂಗೆ ಸರಳವಾಗಿ ಬದುಕುಲೆ ಆಗಿಯೊಂಡು ಇಲ್ಲೆ, ಜಾಗತಿಕರಣಂದ ನಮ್ಮ ಸಮಾಜಲ್ಲೂ ಅಲಂಕಾರಿಕ ಅಡಂಬರ ಬಯಿಂದು.ಇಪ್ಪ ಐಷಾರಾಮಿ ವಸ್ತುಗೊ,T.V.,ಕಂಪ್ಯೂಟರ್ ನಮ್ಮ ಬದುಕಿನ ಅವಿಭಾಜ್ಯ ಅಂಗ ಆಯಿದು. ಅದರಿಂದ ನಾವು ಸುಮಾರು ಒಳ್ಳೆ ವಿಷಯಂಗೋ ಕಲಿವಲಾವುತ್ತು,ಒಳ್ಳೆ ಬದಲಾವಣೆಗೋ ಬಯಿಂದು.ಆದರೆ ಅದರಿಂದ ಬಪ್ಪ ಕೆಟ್ಟ ಬದಲಾವಣೆಗಳ ಬಗ್ಗೆ ನಾವು ಜಾಗ್ರತೆ ವಹಿಸೆಕ್ಕು.

ಕೊಳಚ್ಚಿಪ್ಪು ಭಾವನ ಪರವಾಗಿ ಕೊಳಚ್ಚಿಪ್ಪು ಅತ್ತೆ ಪ್ರಶಸ್ತಿ ಸ್ವೀಕಾರ

ಕೊಳಚ್ಚಿಪ್ಪು ಭಾವನ ಪರವಾಗಿ ಕೊಳಚ್ಚಿಪ್ಪು ಅತ್ತೆ ಪ್ರಶಸ್ತಿ ಸ್ವೀಕಾರ

3. ಬೇರೆ ಸಂಸ್ಕೃತಿ ಮತ್ತೆ ಮಾಧ್ಯಮಗಳ ಪ್ರಭಾವ:
ಮಾಧ್ಯಮಂಗೊ ನವಗೆ ಹೊಸ ಹೊಸ ವಿಷಯ ಕಲುಸುತ್ತಾ ಇದ್ದರೂ, ಹೊಸ ಹೊಸ ಸವಾಲುಗಳ ತತ್ತಾ ಇದ್ದು.ಮಾಧ್ಯಮಂಗೊ ನವಗೆ ಹೊಸ ಹೊಸ ವಿಷಯ ಕಲುಸುತ್ತಾ ಇದ್ದರೂ, ಹೊಸ ಹೊಸ ಸವಾಲುಗಳ ತತ್ತಾ ಇದ್ದು. ನಾವು TV, ಗೇಮ್ಸ್,ಕಂಪ್ಯೂಟರ್ಲಿ ಮುಳುಗಿ ಹೋಗಿ ಜನರೊಟ್ಟಿಂಗೆ ಸೇರುದರ ಕಡಮ್ಮೆ ಮಾಡಿಯೊಂಡು ಇದ್ದಿಯೋ.ನಗರಂಗಳಲ್ಲಿ ಬೇರೆ ಬೇರೆ ಸಂಸ್ಕೃತಿಯ ಪ್ರಭಾವಂದ ಸುಮಾರು ಜನಕ್ಕೆ ನಮ್ಮ ಸಂಸ್ಕೃತಿಯ ಪರಿಚಯ ಆಗದ್ದೇ ಇದ್ದು. ಮುಂದು ನಾವು ಹೊಸ ಹೊಸ ತಂತ್ರಜ್ಞಾನವ, ಜಾಗತೀಕರಣದ ಉಪಯೋಗವ ಪಡಕ್ಕೊಂಡು,ಅದರ ಒಂದು ಸ್ಥಳೀಯ ವಿಷಯಕ್ಕೆ/ಸಮಸ್ಯೆಗೆ ಪರಿಹಾರಕ್ಕಾಗಿ ಅಳವಡಿಸಿಕೊಂಬದಕ್ಕೆ Glocalization ಹೇಳ್ತವು.

ಇದಕ್ಕೆ ಒಂದು ಒಳ್ಳೆ ಉದಾಹರಣೆ ಹೇಳಿರೆ ಒಪ್ಪಣ್ಣ.ಕಾಂ.ಬ್ಲಾಗ್ ಆಗಿ ಶುರುವಾದ್ದು ಈಗ ಒಪ್ಪಣ್ಣ-ಒಪ್ಪಕ್ಕಂದ್ರ ನೆರೆಕರೆ ಆಯಿದು. ಸುಮಾರು 6000 ಜೆನ 25-30 ದೇಶಂದ ಪ್ರತಿವಾರ ನೋಡ್ತವು. ನಮ್ಮ ಗುರುಗೊ ಅವರ ವೆಬ್ಸೈಟ್ hareraama.in ನ ಮೂಲಕ ನವಗೆ ಎಲ್ಲರಿಂಗೂ ಮಾರ್ಗದರ್ಶನ ಕೊಡ್ತಾ ಇದ್ದವು. ಬಹುಶ ಇಷ್ಟು ಕಡಮ್ಮೆ ಸಮಯಲ್ಲಿ ತುಂಬಾ ಜೆನರ ತಲುಪುಲೆ ಇದರಿಂದ ಸುಲಭೋಪಾಯ ಇಲ್ಲೆ ಹೇಳಿ ಕಾಣ್ತು. ಹೀಂಗೆ ಹೊಸ ತಂತ್ರಜ್ಞಾನವ ನಮ್ಮ ಹವ್ಯಕ ಸಂಸ್ಕೃತಿಯ, ಆಚಾರ-ವಿಚಾರದ ಬಗ್ಗೆ ತಿಳುಸುಲೆ ಬಳಕೆ ಮಾಡಲಕ್ಕು.

ಮುಂದು:

ಅಂತರ್ಜಾಲಲ್ಲಿ ಹವ್ಯಕ ಸಂಸ್ಕೃತಿಯ ಜ್ಞಾನ ಸಿಕ್ಕುವಾಂಗೆ ಮಾಡಿರೆ ಎಲ್ಲರಿಂಗೂ ಉಪಕಾರ ಅಕ್ಕು ನಮ್ಮ ಸಂಸ್ಕೃತಿಯ,ಭಾಷೆಯ, ಆಚಾರ-ವಿಚಾರಂಗಳ ಒಳುಶುವ ಕೆಲಸಲ್ಲಿ ನಮ್ಮ ಮುಂದಿನ ತಲೆಮಾರಿನ ಹಾಂಗೆ ನಮ್ಮದೂ ಪಾಲಿದ್ದು.ನಾವೂ ತಿಳುದು ನಮ್ಮ ತಲೆಮಾರಿಂದ ಮುಂದೆಯವಕ್ಕೆ ಹೇಳಿಕೊಟ್ಟರೆ ಅವೂ ಕಲ್ತು ಅದರ ಮುಂದುವರಿಸಿಯೊಂಡು ಹೋಕು.
ನಮ್ಮ ಗುರುಗಳೂ ನಮ್ಮ ಒಗ್ಗಟ್ಟಿಂಗೆ,ಏಳಿಗೆಗೆ ಹೇಳಿ ಹಲವು ಕಾರ್ಯಕ್ರಮಂಗಳ ಮಾಡ್ಲೆ ಆಶೀರ್ವಾದವನ್ನೂ, ಮಾರ್ಗದರ್ಶನವನ್ನೂ ಕೊಡ್ತ ಇದ್ದವು.
ಇದಕ್ಕಿಂತ ಭಾಗ್ಯ ಬೇರೆ ಇಲ್ಲೆ.ನಮ್ಮ ಸಂಸ್ಕೃತಿಯ,ಭಾಷೆಯ, ಆಚಾರ-ವಿಚಾರಂಗಳ ನಾವು ಒಳುಶೆಕ್ಕು,

ಈ ಪ್ರಯತ್ನಲ್ಲಿ ಗುರು-ಹಿರಿಯರ ಆಶೀರ್ವಾದ,ರಕ್ಷೆ ನಮ್ಮೆಲ್ಲರ ಮೇಲೆ ಇರಲಿ.

~*~*~

ಸೂ:
ಕೊಳಚ್ಚಿಪ್ಪು ಭಾವನ ಬೇರೆ ಶುದ್ದಿಗಳ ಅವರ ಬೈಲಿನ ಪುಟಲ್ಲಿ ಓದಲಕ್ಕು: ಸಂಕೊಲೆ

ಕೊಳಚ್ಚಿಪ್ಪು ಭಾವನ ಮೋರೆಪುಟ: ಸಂಕೊಲೆ

ಸಂಪಾದಕ°

   

You may also like...

16 Responses

 1. ಹರೇರಾಮ, ಒೞೆದಾಯಿದು ಪ್ರಭಂದ

 2. parvathi marakini says:

  ಅಭಿನಂದನೆಗೊ. ಪ್ರಬಂಧ ಲಾಯಿಕಾಯಿದು.

 3. Prabhakara Bhat Konamme says:

  ಹವ್ಯಕರ ಸ್ಥಿತಿಗತಿ ಬಗ್ಗೆ ಸರಳ ಸು೦ದರ ಪ್ರಬ೦ಧ ಬರದು ಪ್ರಸ್ತುತ ಪಡಿಸಿದ ಸನತ್ ಅಭಿನ೦ದನಾಹ೯೦. ಬಹುಮಾನಿತ೦ ಆದ್ದಕ್ಕೆ congrats!

 4. ಶರ್ಮಪ್ಪಚ್ಚಿ says:

  ಒಳ್ಳೆ ವಿಶ್ಲೇಷಣಾತ್ಮಕ ಬರವಣಿಗೆ.
  ಅಭಿನಂದನೆಗೊ

 5. a ramachandra bhat says:

  ಸನತ್ ಧನ್ಯವಾದಂಗೊ. ಹವ್ಯಕರು ನಡೆದು ಬಂದ ದಾರಿಯ ಚೆಂದಕ್ಕೆ ಹೇಳಿದ್ದೆ. ಕ್ರಿಶಿಯೊಟ್ಟಿಂಗೆ ಮಾಸ್ಟ್ರತ್ತಿಗೆ, ವಕೀಲತ್ತಿಗೆಗೇ ಸೀಮಿತ ಆಗಿದ್ದವು ಇಂದು ಎಲ್ಲಾ ಕ್ಶೇತ್ರಲ್ಲಿದೆ ಇಪ್ಪದು ಕುಶಿ ವಿಷಯ. ಬದಲಾವಣೆ ಆವುತ್ತು ಒೞೆಯ ದಿಕ್ಕಿಂಗೆ ಆಗಲಿ ಎಂಬ ಆಶಯ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *