ವಿಷು ಸ್ಪರ್ಧೆ – 2014: ಕವನ ಪ್ರಥಮ – “ಹಬ್ಬದ ಗೌಜಿ” – ಲಲಿತಾ ಲಕ್ಷ್ಮೀ ಸಿದ್ದಾಪುರ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ಲಲಿತಾ ಲಕ್ಷ್ಮೀ ನಾರಾಯಣ ಭಟ್ ಸಿದ್ದಾಪುರ

ಶ್ರೀಮತಿ ಲಲಿತಾ ಲಕ್ಷ್ಮೀ ನಾರಾಯಣ ಭಟ್ ಸಿದ್ದಾಪುರ

ವಿಷು ವಿಶೇಷ ಸ್ಪರ್ಧೆ- 2014ಕವನ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಲೇಖಕಿ ಶ್ರೀಮತಿ ಲಲಿತಾಲಕ್ಷ್ಮಿ ಎನ್ ಭಟ್ಟ ,ಸಿದ್ಧಾಪುರ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

~

ಹಬ್ಬದ ಗೌಜಿ

ಬ೦ತಲ್ಲೆ ಮಾಲಕ್ಷ್ಮಿ ದೀಪಾವಳಿ ಹಬ್ಬ
ಎ೦ತೆ೦ತ ತಯಾರಿ ಮಾಡವೆ ಅಬ್ಬ..||

ಮೊಗೆಕಾಯಿ ಇದ್ದನೆ ಬಲೀ೦ದ್ರನ ಬರುಲೆ ?
ಬಗೆ ಬಗೆ ನೈವೇದ್ಯ ಬಲೀ೦ದ್ರಗಿಡುಲೆ ?
ಉಗಿ ಮೇಲೆ ಬೇಯ್ಸವೆ ಮೊಗೆಕಾಯಿ ಕಡಬ
ತೆಗೆದಿಡೆ ದನಕರಕೆ ಹೊಸಹೊಸ ದಾಬ ||1||

ಅಕ್ಕಿಯ ನೆನೆಸಿದ್ಯ ಕಡುಬು ಮಾಡುಲಕೆ ?
ಸಕ್ಕರ್ಯೋ ಬೆಲ್ಲವೋ ಯಾವ್ದೇ ಪಾಯ್ಸಕ್ಕೆ ?
ಮಕ್ಕೊಗೆಲ್ಲಾ ಪ್ರೀತಿ ಪೋರಿ ಮಾಡ್ ಹಾಕೆ
ಅಕ್ಕನೇ ಮಾಲಕ್ಷ್ಮಿ ಬೇಜಾರೆ೦ತಕ್ಕೆ ? ||2||

ಹ೦ಡೆಯ ತೊಳ್ಯವೊ ? ಕೈಯ್ಯಲ್ಲಾ ನೋಯ್ತು !
ಶಿ೦ಡ್ಲೆಕಾಯ್ ಬಳ್ಳಿಯ ತಪ್ಪುದ್ ಹೆ೦ಗಾತು ?
ಬೆ೦ಡಾಜೋ ಮೊಗೆಕಾಯಿ ನೋಡಕಾಗಿತ್ತು
ತಿ೦ಡಿಗೆ ಆಚೆಮನೆ ಕರ್ಯಕಾಗಿತ್ತು  ||3||

ಹೇ೦ಗಿದ್ನೆ ಮಾಲಕ್ಷ್ಮಿ ಪ್ರಾಯ್ ದಲ್ಲಿ ನಾನು ?
ನಿ೦ಗೆ೦ತ ನೆನಪಿದ್ದ ಹೊಸಹಬ್ಬದ್ ಜೇನು ?
ಈಗೆ೦ತ ಮಾಡುದೆ ಕೈಲಾಗ್ತೇ ಇಲ್ಲೆ
ಹೇ೦ಗಾರು ಹಬ್ಬವ ಮಾಡಕಾತಲ್ಲೆ … ||4||

ನಿ೦ಗೋಕೆ೦ತಾಗವ್ರೋ ಹೇಳೂಲಕ್ಕೇನು ?
ಇ೦ಗು ತೆ೦ಗಿಲ್ದಿರೂ ಮಾಡಾಕ್ವವ ನಾನು !
ಹೆ೦ಗಸ್ರ ಕಷ್ಟ ನಿ೦ಗೊಕ್ ಗುತ್ತಿದ್ದನು ?
ತೆ೦ಗೀನ್ಕಾಯ ನಿ೦ಗೋ ಸೊಲದಿಟ್ರೋ ಏನು ?||5||

ಜಾಜೀಕಲ್ ತ೦ಜ್ನಿಲ್ಲೆ ತಪ್ಲಾಗೂ ಇಲ್ಲೆ
ರಾಜಿ ಮಗ್ಳಿದ್ದಿದ್ರೆ ಬಿಡ್ತಿತ್ತೇ ಇಲ್ಲೆ
ಕೇಜ್ ಗಟ್ಳೆ ಕಲ್ ತ೦ದು ಬಣ್ಣ ತೇಯ್ತಿತ್ತು
ಹೋಜಲಿ ಪರದೇಶಕ್ ಏನ್ ಮಾಡುಲಾಗ್ತು ?||6||

ಹಬ್ಬ ಹಬ್ಬ ಹೇಳಿ ಹಾರಾಡ್ತ್ರಿ ಹೀ೦ಗೆ
ಇಬ್ರೇಯ ನ೦ಗೋ ಮಕ್ಳೊ ಬೆ೦ಗ್ಳೂರ್ಗೆ
ಒಬ್ರಾದ್ರೂ ಮೊಮ್ಮಕ್ಕೊ ಬತ್ವೋ ಇಲ್ಲಿಗೆ ?
ಹಬ್ಬಿಲ್ಲೆ ಗೌಜಿಲ್ಲೆ ಮನಿಕಳಿ ಸುಮ್ಮ೦ಗೆ||7||

( ಇದು ಹಬ್ಬದ ಹಿ೦ದಾಣ ಇರುಳು ಹಳ್ಳಿಯ ಮನೆಲಿಪ್ಪ ವೃದ್ಧ ದ೦ಪತಿಯ ಸ೦ಭಾಷಣೆ.
ಈ ಕವನಲ್ಲಿ ದ್ವಿತೀಯಾಕ್ಷರ ಮತ್ತೆ ಅ೦ತ್ಯಪ್ರಾಸ ಇದ್ದು)

~*~*~

ಸಂಪಾದಕ°

   

You may also like...

9 Responses

 1. ವಿಜಯತ್ತೆ says:

  ಹರೇರಾಮ, ಬಹು ಒಳ್ಳೆದಾಯಿದು ಲಲಿತನ ಪದ್ಯ. ಉತ್ತರ ಕನ್ನಡ ಹವ್ಯಕರ ಹಬ್ಬದ ಗೌಜಿ ಗೊಂತಾವುತ್ತು. ಕೊಶಿಲಿ ಓದುಸಿಗೊಂಡು ಹೋವುತ್ತನ್ನೆ! ಲಲಿತಾ ಹೀಂಗಿಪ್ಪದು ಒಪ್ಪಣ್ಣ ಬಯಲಿಂಗೆ ಇನ್ನೂ ಬರಲಿ.

 2. ಲಲಿತಾಲಕ್ಷ್ಮೀ ಎನ. ಭಟ್ಟ says:

  ಹರೇರಾಮ. ನಾ ಬರೆದ ಕವನವ ಬೈಲಲ್ಲಿ ನೋಡಿ ರಾಶಿ ರಾಶಿ ಕುಶಿ ಆತು.ಎಲ್ಲರಿಗೂ ಧನ್ಯವಾದ. ಒಳ್ಳೆದಾಜು ಹೇಳಿ ಬೆನ್ ತಟ್ಟಿದ ವಿಜಯಕ್ಕಂಗೆ ಪ್ರೀತಿಪೂರ್ವಕ ದನ್ಯವಾದ.ಬೈಲಿನ ಎಲ್ಲಾ ಬಂಧುಗಳೂ ಕವನ ಓದ್ತೊ ಹೇಳುದು ಸಂತೋಷದ ಸಂಗ್ತಿ ನಿಂಗ್ಳೆ ಲ್ಲರ ಸಲಹೆ ಸೂಚನೆಗೆ ಕಾಯ್ತಾ ಇಪ್ಪ –ಲಲಿತಾಲಕ್ಷ್ಮೀ

 3. ಲಲಿತತ್ತೇ,
  ಚೆಂದದ ಪದ್ಯ. ಬಹುಮಾನ ಬಂದದಕ್ಕೆ ಅಭಿನಂದನೆಗೊ. ಬೈಲಿಂಗೆ ಬತ್ತಾ ಇರಿ, ಬರೆತ್ತಾ ಇರಿ.
  ಹರೇರಾಮ

 4. ತೆಕ್ಕುಂಜ ಕುಮಾರ ಮಾವ° says:

  ಪದ್ಯ ತುಂಬಾ ಲಾಯಿಕ್ಕಾಯಿದು. ಬಹುಮಾನ ಸಿಕ್ಕಿದ್ದಕ್ಕೆ ಅಭಿನಂದನೆಗೊ.

 5. ರಘುಮುಳಿಯ says:

  ಲಲಿತಕ್ಕನ ರಸವತ್ತಾದ ಕವನವ ನಮ್ಮ ಹಬ್ಬದ ಮುನ್ನಾಣ ದಿನದ ಗಡಿಬಿಡಿಯ ವರ್ಣನೆ ಹೇಳಿ ಓದಿಗೋ೦ಡು ಹೋಪಗ ಕಡೇ ಚರಣ ವರ್ತಮಾನದ ವಾಸ್ತವವ ಕಣ್ಣ ಮುಂದೆ ನಿಲ್ಲುಸಿತ್ತು .
  ಪ್ರಾಸಬದ್ಧ ಪದ್ಯ ನಮ್ಮ ಜನಪದದ ಶ್ರೀಮಂತಿಕೆಯ ತೋರುಸಿದ್ದು . ಅಭಿನಂದನೆಗೋ .. ಇನ್ನೂ ಹೆಚ್ಚಿನ ಸಾಹಿತ್ಯ ರಚನೆ ಮಾಡುವ ಪ್ರತಿಭೆ ಇಪ್ಪ ನಿಂಗೊಗೆ ಹೆಚ್ಚಿನ ಯಶಸ್ಸು ಈ ಕ್ಷೇತ್ರಲ್ಲಿ ಸಿಕ್ಕಲಿ ಹೇಳಿ ಶುಭಾಹಾರೈಕೆಗೋ .

 6. ಬಾಲಣ್ಣ (ಬಾಲಮಧುರಕಾನನ) says:

  ಲಲಿತಕ್ಕನ ಪದ್ಯ ಲಾಯಕಿದ್ದು. ನಿಂಗಳ ಉತ್ತರ ಕನ್ನಡ ದ ಭಾಷೆ ಎಂಗೊಗೆ ಅರ್ಥ ಆವುತ್ತು ,ಆದರುದೆ ಓದುಲೆ ರೆಜಾ ಕಷ್ಟ .

  *ಜಾಜಿ ಕಲ್ಲು- ಅದೆಂತರ ಗೊಂತಾತಿಲ್ಲೆನ್ನೆ ಲಲಿತಕ್ಕ ….

 7. ಗೋಪಾಲ ಬೊಳುಂಬು says:

  ಹಬ್ಬದ ಗೌಜಿ ಸೊಗಸಾಗಿ ಬಯಿಂದು. ಅಭಿನಂದನೆಗೊ.

 8. ಶಾರದಾಗೌರೀ says:

  ಲಲಿತತ್ತೆಯ ಕವನ ಲಾಯ್ಕಾಯಿದು.
  ಮೊನ್ನೆ ಪುತ್ತೂರಿನ “ಕಾವ್ಯ-ಗಾನ-ಯಾನ” ಕಾರ್ಯಕ್ರಮಲ್ಲಿ ಬೈಲಿನ ಸುಭಗಣ್ಣ ಈ ಕವನ ಓದಿದ್ದವಡ್ಡ, ಮಾಷ್ಟ್ರು ಮಾವ ಹೇಳಿದವು.
  ಲಾಯ್ಕಾಯಿದಡ್ಡ!

 9. Lalitalaxmi N. Bhat says:

  ಹರೇರಾಮ. ಅಭಿನಂದಿಸಿದ ಎಲ್ಲರಿಗೂ ಧನ್ಯವಾದ. ನಮ್ಮನೆಲಿ ನೆಟ್ ತಾಗ್ತಿಲ್ಲೆ.ಅಸ್ಕೆ ನಂಗೆ ದಿನ ದಿನ ಮೇಲ್ ನೋಡುಲಾಗ್ತಿಲ್ಲೆ. ಸೈಬರ್ಗೆ ದಿನಾ ಹೋದ್ರೆ ಚೆಂದ್ವಾ? ಅದ್ಕೇ ನಿಂಗ್ಳ ಸುದ್ದಿಗೆ ನಂಗೆ ಉತ್ತರ ಕೊಡುಲಾಗ್ತಿಲ್ಲೆ. ಜಾಜಿಕಲ್ಲು ಅಂದ್ರೆ ಭುಮಿಲಿ ಸಿಕ್ಕುವ ಸಹಜ ಬಣ್ಣದ ಕಲ್ಲು. ದೀಪಾವಳಿ ಹಬ್ಬದ ಹಿಮದಿನ ದಿನ ಅದ್ನ ಹೆಕ್ಕಂಡ್ ಬಂದು ಹೆಣ್ಮಕ್ಕೊ ಗಂದ ತೇಯ್ದಾಂಗೆ ತೇಯ್ತೊ. ಒಂದು ದೊಡ್ಡ ತಪ್ಪಲೆ ತುಂಬಾ ತೇಯ್ದಿಟ್ಕಂಡು, ದನ ಬಿಡುವ ದಿನ ವಂದು ಲೋಟ ಅದ್ರಲ್ಲಿ ಅದ್ದಿ ಆಕಳಿನ ಮೈಮೇಲೆ ಹಚ್ಚತೊ. ಇದ್ಕೆ ಹಂಡುಂಡು ಹಾಕುದು ಹೇಳ್ತೊ. ಇದು ಬಣ್ಬಬಣ್ಣವಾಗಿ ರಾಶಿ ಚೆಂದ ಕಾಣ್ತು. ಆಕಳ ಮೈಮೇಲೆ ಭಾಳ ದಿನ ಇರ್ತು. ಇಂಥ ರಾಶಿ ಜನಪದೀಯ ಆಚರಣೆ ನನ್ನ ಅಪ್ಪನಮನೆಕಡೆಗಿದ್ದು. ನಿಂಗ್ಳನ್ನೆಲ್ಲ ಖುದ್ದಾಗಿ ಸಿಕ್ದಾಗ ಚೆಂದಮಾಡಿ ಹೇಳ್ತೆ ಅಡ್ಡಿಲ್ಯಾ ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *