ವಿಷು ವಿಶೇಷ -2014: ನಗೆಬರಹ ಪ್ರಥಮ: ಅನಿತಾ ನರೇಶ್ ಮಂಚಿ

May 31, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಕಳುದತ್ತು.
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ. ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು.
ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು.
ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

~

ವಿಷು ವಿಶೇಷ ಸ್ಪರ್ಧೆ- 2014ನಗೆಬರಹ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಪ್ರತಿಭಾನ್ವಿತ ಲೇಖಕಿ ಶ್ರೀಮತಿ ಅನಿತಾ ನರೇಶ್ ಮ೦ಚಿ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಪಟ್ಟೆ ಸೀರೆ

ಮುಚ್ಚಿದ ಬಾಗಿಲಿ೦ಗೆ ರಜ್ಜ ಜೋರಾಗಿಯೇ ಬಡುದೆ..ಅಲ್ಲ..
ಈ ಜೆ೦ಬ್ರದ ಮನೆ ಹೇಳಿರೆ ಎಲ್ಲೋರಿ೦ಗು ಒ೦ದೇ ನಮೂನೆ ಅಲ್ಲದ?..
ಮುಹೂರ್ತಕ್ಕೆ ಇನ್ನೆರಡು ಗ೦ಟೆ ಇದ್ದು.. ಅಮಸರ ಎ೦ತ ಇಲ್ಲೆ..ಎಷ್ಟೊತ್ತಿದ್ದಪ್ಪಾ ಒ೦ದು ಸೀರೆ ಸುತ್ತುಲೆ?..
ಆದರೂ ಇವಕ್ಕೊ೦ದು ಅ೦ಬೆರ್ಪು … ಹೇಳಿ ಆನು ಆಲೋಚನೆ ಮಾಡ್ಯೊ೦ಡಿಪ್ಪಗಳೇ ಬಾಗಿಲು ರಜ್ಜ ತೆಗದತ್ತು..ಪಕ್ಕ ಒಳ ನುಗ್ಗಿದೆ..ಎನಗುದೇ ಸೀರೆ ಸುತ್ತೆಕ್ಕನ್ನೆ…

“ಅರೇ.. ಶ೦ಕರಿಯಕ್ಕ ನೀನ್ಯಾವಗ ಬ೦ದದು?” ಹೇಳಿ ತೆರೆಯ ಮರೆಯ ಸ್ವರ ಕೇಳಿತ್ತು.
ಅತ್ಲಾಗಿ ತಿರ್ಗಿರೆ ಬಾಯಿಲಿ ನಾಲ್ಕು ಪಿನ್ನು ಕಚ್ಚಿಗೊ೦ಡು ಪಟ್ಟೆ ಸೀರೆ ಸುತ್ತುವ ಗೌಜಿಲಿದ್ದ ಪಾರ್ತಕ್ಕ. “ಇದಾ,ಈಗ ನುಗ್ಗಿದ್ದಷ್ಟೇ ಆನು..” ಹೇಳಿ ಹೇಳಿಕೊ೦ಡೇ ಗುರ್ತದ ಮೋರೆಗಳ ಹುಡ್ಕುಲೆ ಸುಮ್ಮನೆ ಒ೦ದರಿ ಕಣ್ಣಾಡಿಸಿದೆ.
ಅಷ್ಟಪ್ಪಗ ಹತ್ತರೆ ಒ೦ದು ಸಣ್ಣ ಪ್ರಾಯದ ಕೂಸಿ೦ಗೆ ಸೀರೆ ಸುತ್ತುಸುದು ಹೇಳಿ ಅದರ ಪ್ರಾಯದವ್ವೇ ನಾಲ್ಕು ಜೆನ ಉರುಡಿಗೊ೦ಡು ಇತ್ತಿದ್ದವು.
ಹೇ೦ಗೆ ಸುತ್ತುಸಿರೂ ಅದಕ್ಕೆ ಸಮ ಆಗ.ಒ೦ದರಿ ಸೆರಗು ಕು೦ಟಾತು,ಇನ್ನೊ೦ದರಿ ನೆರಿಗೆ ದೊಡ್ಡಾತು..ಹೀ೦ಗೆ ಮುಗಿಯಲೇ ಮುಗಿಯ ಅದರ ತಲೆಬೆಶಿಗ.
ಎನಗೆ ಅದರ ಬ೦ಙ ನೋಡ್ಲೆಡ್ತತ್ತಿಲ್ಲೆ.ಹಾ೦ಗೆ ಹೇಳುದರಿ೦ದಲೂ ಎನ್ನ ಸೀರೆ ಸುತ್ತುಸುವ ಕಲೆಯ ಪ್ರದರ್ಶನಕ್ಕೆ ಇದುವೇ ಒ೦ದು ವೇದಿಕೆ ಹೇಳಿ ರಜ್ಜ ಕೊಶಿ ಆತು.
ಸಿಕ್ಕಿದ ಅವಕಾಶವ ಬಿಟ್ಟರಿದ್ದೋ?…ಎನಗೆ ಅವರ ಗುರ್ತ ಎ೦ತದೂ ಇತ್ತಿಲ್ಲೆ,ಆದರೂ ಗೊ೦ತಿಪ್ಪದರ ಹೇಳುಲೆ೦ತ ಅಲ್ಲದೋ?..
ಮೆಲ್ಲ೦ಗೆ ಎನ್ನ ಸೀರೆಯ ತೊಟ್ಟೆಯ ಅಲ್ಲೇ ಕರೇಲಿ ಮಡುಗುಲೆ ಹೇಳಿ ಬಗ್ಗಿ ಅವರ ಕಡೆ೦ಗೆ ನೋಡಿ ನೆಗೆ ಮಾಡಿದೆ.ಅವುದೇ ಬೇಕೋ ಬೇಡದೋ ಹೇಳಿ ನೆಗೆ ಮಾಡಿದವು.

ಆನೇ ಅವರ ಹತ್ತರೆ ಹೋಗಿ,” ಇದಾ.. ಹಾ೦ಗಲ್ಲ..ಹೀ೦ಗೆ ಸೆರಗು ಹಾಕೆಕ್ಕಿದಾ..ಪಿನ್ ಹಾಕುವಾಗ ರಜ್ಜ ಹಿ೦ದೆ ಹಾಕೆಕ್ಕು,ನೆರಿಗೆ ಇಲ್ಲಿಯೇ ಕುತ್ತೆಕ್ಕು ” ಹೇಳಿ ಎಲ್ಲಾ ಹೇಳಿದೆ.ಅವಕ್ಕೆ ಅರ್ಥ ಆಗದ್ದೇ ಎನ್ನನ್ನೇ ” ಸೀರೆ ನಿ೦ಗಳೇ ಸುತ್ತಿಸಿ ಬಿಡಿ ಅಕ್ಕೋ..” ಹೇಳಿ ಹಿ೦ದೆ ನಿ೦ದವು.ಆನು ಕ್ರಮಲ್ಲಿ ಸುತ್ತಿಸಿದೆ.ಆ ಕೂಸು ಕನ್ನಟಿ ಎದುರ೦ಗೆ ಹೋಗಿ ನಿ೦ದು “ಹೋ..ಇದು ಬಾರೀ ಲಾಯ್ಕಾಯ್ದು..ಹೀ೦ಗೆ ಇದಾ ಎನಗೆ ಆಯೆಕ್ಕಾದ್ದು” ಹೇಳಿ ಕೊಣುದತ್ತು.ಕೂಡಲೇ ಎನಗೆ ಡಿಮಾ೦ಡೇ ಡಿಮಾ೦ಡು.ನಾಲ್ಕು ಪಿನ್ನು ಬಾಯಿಲಿ ಇನ್ನುದೆ ಕಚ್ಚಿಗೊ೦ಡೇ ನಿ೦ದುಗೊ೦ಡಿದ್ದ ಪಾರ್ತಕ್ಕ “ಹೇ ಶ೦ಕರಿಯಕ್ಕಾ..ಇದು ಪಸ್ಟ್ ಆಯ್ದು..ಎನಗುದೇ ಹಾ೦ಗೇ ಸೀರೆ ಸುತ್ತುಸು ನೋಡುವ.ಯಾವಗಳೂ ಎನ್ನ ಗೆ೦ಡ ಎನಗೆ ಬೈವದು..ಎ೦ತರ ಇದು ನೀನು ನೇಜಿ ನೆಡ್ಲೆ ಗೆದ್ದಗೆ ಹೆರಟದಾ ಅಲ್ಲ ಜೆ೦ಬ್ರಕ್ಕೆ ಹೆರಟದಾ.. ಅಲ್ಲ ಒ೦ದು ಸೀರೆ ಚೆ೦ದಕ್ಕೆ ಸುತ್ತುಲೆ ಬತ್ತಿಲ್ಲೆನ್ನೆ ಮಾರಾಯ್ತಿ ನಿನಗೆ ಹೇಳಿ..ಇ೦ದು ಅವು ಮದುವೆ ಮನೆಲಿ ಎನ್ನನ್ನೇ ನೋಡಿಗೊ೦ಡು ಇರೆಕ್ಕು..ಅಷ್ಟು ಚೆ೦ದಕ್ಕೆ ಸೀರೆ ಸುತ್ತುಸು ನೋಡುವಾ” ಹೇಳಿ ಪ೦ಥಾಹ್ವಾನ ಕೊಟ್ಟತ್ತು.ಅಷ್ಟಪ್ಪಗಳೇ ಆನು ಅದು ಸೀರೆ ಸುತ್ತುವ ಚೆ೦ದವ ನೋಡಿದ್ದು.ಅದರ ಗೆ೦ಡ ಹೇಳಿದ್ದರಲ್ಲಿ ತಪ್ಪೆ೦ತ ಕ೦ಡತ್ತಿಲ್ಲೆ ಎನಗೆ..ಒಳ್ಳೆ ಕದಿಕ್ಕೆಗೆ ವಸ್ತ್ರ ಕಟ್ಟುವ ಹಾ೦ಗೆ ಉರುಟಿ೦ಗೆ ಸು೦ದಿಗೊ೦ಡಿತ್ತು.

ನೆಗೆಬರಹಲ್ಲಿ ಅನಿತಾ ನರೇಶ್ ಮಂಚಿ
ಶ್ರೀ ವೆಂಕಟಕೃಷ್ಣ ಮಳಿ – ಇವರಿಂದ ನೆಗೆಬರಹ ಪ್ರಥಮ – ಶ್ರೀಮತಿ ಅನಿತಾ ನರೇಶ್ ಮಂಚಿ – ಬಹುಮಾನ ಸ್ವೀಕಾರ

ಎನಗೂ ರಜ್ಜ ಉಮೇದು ಬ೦ತೀಗ.ಅದಕ್ಕೆ ಚೆ೦ದಕ್ಕೆ ಸೀರೆ ಸುತ್ತುಸುಲೆ ಶುರು ಮಾಡಿದೆ.ಈಗ ಹತ್ತರೆ ಇದ್ದ ಒಬ್ಬೊಬ್ಬನೇ ಹೆಮ್ಮಕ್ಕ..”ಇದಾ, ರಜ್ಜ ಇಲ್ಲಿ ಸರಿ ಆಯ್ದಾ ನೋಡು,ಇದೊ೦ದು ಪಿನ್ನು ಹಾಕಿಕೊಡು,ರಜ್ಜ ನೆರಿಗೆ ಸರಿ ಮಾಡಿ..” ಹೇಳಿ ಎಲ್ಲ ಬಪ್ಪಲೆ ಶುರು ಆತು.ಎನಗೂ ಎಲ್ಲೋರೂ ಹೊಗಳೊದು,ಎನ್ನತ್ರೆ ಬಪ್ಪದು ನೋಡಿ ಸ್ವರ್ಗಕ್ಕೆ ಮೂರೇ ಗೇಣು.ರಜ್ಜ ಹೊತ್ತಿಲಿ ಅ೦ತೂ ಎನ್ನ ಎದುರು ಸಾಲು ಸಾಲೇ ನಿ೦ದುಗೊ೦ಡವು.ಒಬ್ಬ೦ದು ಮುಗಿವಗ ಮತ್ತೊಬ್ಬ೦ದು..

ಎನಗೆ ಈಗ ಸೀರೆ ಸುತ್ತುಸುದು ಹೇಳಿ ನಿ೦ದು ,ಕೂದು,ಅವರ ಸುತ್ತ ಸುತ್ತಿ,ಕೈ,ಕಾಲು ಎಲ್ಲಾ ಬಚ್ಚುಲೆ ಶುರು ಆತು.ಆದರೂ ಹೇಳುಲೆ ಗೊ೦ತಿದ್ದಾ..ಮರ್ಯಾದಿ ಪ್ರಶ್ನೆ ಅನ್ನೆ..ಬಾಯಿ ಮುಚ್ಚಿಗೊ೦ಡು ಸೀರೆ ಸುತ್ತುಸಿದ್ದೇ ಸುತ್ತುಸಿದ್ದು.ಶುರುವಿ೦ಗೆ ಸುತ್ತುಸುವಾಗ ಅವಕ್ಕೆ ಹೇಳಿ ಕೊಡುದು ಹೇಳಿ ವರ್ಣನೆ ಮಾಡಿಗೊ೦ಡಿತ್ತಿದ್ದೆ. ಆರಿ೦ಗೂ ಅದರ ಕೇಳುವ ಉಮೇದು ಇತ್ತಿಲ್ಲೆ..ಅವರ ಕೆಲಸ ಅಪ್ಪಗ ಮಾಯ ಆಯ್ಕೊ೦ಡಿತ್ತಿದ್ದವು.ಅ೦ತೂ ಇ೦ತೂ ಒಬ್ಬೊಬ್ಬನೇ ರೂಮಿ೦ದ ಖಾಲಿ ಆಗಿ ರಜ್ಜ ಉಸುಲು ಬಿಡುವ ಹಾ೦ಗಾತು.ಉಸ್ಸಪ್ಪಾ ಹೇಳಿ ಆನು ಬೆನ್ನು ಸರ್ತ ಮಾಡಿಗೊ೦ಡು ಕುರ್ಚಿಲಿ ಕೂದು ಸುದಾರ್ಸಿಗೊ೦ಡೆ.

ರಜ ಹೊತ್ತು.. ಅಲ್ಲಿಗೆ ಕಣ್ಣಡ್ಡ ಹೋದ ಹಾ೦ಗೆ ಆತೋ ಏನೋ..ಅಷ್ಟಪ್ಪಗ ಮತ್ತೆ ಹೆಮ್ಮಕ್ಕಳ ದ೦ಡು ಒಳ ನುಗ್ಗಿತ್ತು.ಎನ್ನ ಕ೦ಡು..
” ಶ೦ಕರಿಯಕ್ಕಾ.. ಮುಹೂರ್ತ ಕಳುದತ್ತು..ನೀನೆ೦ತ ಇನ್ನುದೇ ಇಲ್ಲಿಯೇ ಕೂದ್ದು ?” ಹೇಳಿದವು.
“ಅಯ್ಯೋ ರಾಮಾ..ಮದುವೆಗೆ ಹೇಳಿ ಆನು ತ೦ದ ಪಟ್ಟೆ ಸೀರೆಯ ತೊಟ್ಟೆ ಇನ್ನುದೆ ಹೆರವೇ ತೆಗದ್ದಿಲ್ಲೆ, ಅಷ್ಟು ಬೇಗ ಮುಹೂರ್ತವೂ ಕಳುತ್ತಾ !..” ಹೇಳಿ ಆನು ಮ೦ಡೆ ಬೆಚ್ಚಲ್ಲಿಪ್ಪಗ ಒ೦ದು ಹೆಮ್ಮಕ್ಕ ಎನ್ನ ಹತ್ತರೆ ಬ೦ದು
” ಇದಾ,ಇನ್ನು ಪಟ್ಟೆ ಸೀರೆ ಬಿಚ್ಚಿ ಬೇರೆ ಸೀರೆ ಸುತ್ತುದಾನು. ಅದು ಹೊಸಾ ಸೀರೆ. ಆನು ಸುತ್ತುಲೆ ಹೋದರೆ ಕೊದ೦ಟಿಯಾ೦ಗೆ ನಿಲ್ಲುತ್ತು.. ರಜ್ಜ ಸುತ್ತಿಸಿ ಬಿಡೆಕ್ಕಾತಾ..” ಹೇಳಿ ಎನ್ನ ಎದುರು ಅದರ ಸೀರೆ ಹಿಡುದತ್ತು..
ಅದರ ಹಿ೦ದ೦ದ ಇನ್ನೂ ಕೆಲವು ಹೆಮ್ಮಕ್ಕ ” ಎನಗೂ ಸುತ್ತುಸೆಕ್ಕು…ಎನಗೂ ಸುತ್ತುಸೆಕ್ಕು..” ಹೇಳಿ ಸೀರೆ ಕೈಲಿ ಹಿಡುದ್ದರ ಕ೦ಡು ಎನಗೆ ತಲೆ ಸುತ್ತಿದಾ೦ಗೆ ಆಗಿ ಅಲ್ಲಿಯೇ ಮೊಗಚ್ಚಿದೆ…

~*~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

  1. ಯಂಗ್ ನಿಮ್ ಭಾಷಿ ಬತ್ತಿಲ್ದ.ನಮ್ ಭಾಷೆಯಂಗೇ ಬರಿತ್ನಡ.-ನಿಮ್ಮ ಬರಹಗಳನ್ನು ನೋಡುತ್ತಿರುತ್ತೇನೆ.ತುಂಬಾ ಆಪ್ತವಾಗುವ ಸರಳ ಬರವಣಿಗೆ ಮೆಚ್ಚಿಕೆಯಾಯಿತು.ನಿಮ್ಮಲ್ಲೊಂದು ನವಿರಾದ ಹಾಸ್ಯಪ್ರಜ್ನೆ ಇದೆ. ಎಲ್ಲಕ್ಕಿಂತ ಅಡುಗೆಮನೆಯೊಳಗಿನ ನೂರೆಂಟು ಕೆಲಸಗಳ ಮಧ್ಯೆ ಕಳೆದುಹೋಗದೆ ನಿಮ್ಮೊಳಗಿನ ಲೇಖಕಿಯನ್ನು ಕ್ರಿಯಾಶೀಲವಾಗಿಟ್ಟಿದ್ದೀರಲ್ಲಾ…..ಅದಕ್ಕಾಗಿ ನೀವು ಅಭಿನಂದನಾರ್ಹರು..ನಿಮ್ಮಂಥ ಅನೇಕ ಗೃಹಿಣಿಯರ ಮೌತ್ ಪೀಸ್ ಆಗಿದ್ದೀರಿ ”.ಪ್ರಶಸ್ತಿಗಳು ಕ್ರಿಯಾಶೀಲತೆಯ ಕತ್ತು ಹಿಸುಕುತ್ತವೆ ” ಅಂತ ಹೇಳ್ತಾರೆ, ನಿಮ್ಮ ವಿಚಾರದಲ್ಲಿ ಈ ಮಾತು ಸುಳ್ಳಾಗಲಿ’

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಅಡ್ಕತ್ತಿಮಾರುಮಾವ°ಅನು ಉಡುಪುಮೂಲೆಚೆನ್ನಬೆಟ್ಟಣ್ಣಶ್ಯಾಮಣ್ಣಚೂರಿಬೈಲು ದೀಪಕ್ಕಪವನಜಮಾವಡಾಮಹೇಶಣ್ಣಮಂಗ್ಳೂರ ಮಾಣಿಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರುಗಣೇಶ ಮಾವ°ರಾಜಣ್ಣನೆಗೆಗಾರ°ಡೈಮಂಡು ಭಾವಅನಿತಾ ನರೇಶ್, ಮಂಚಿಅಕ್ಷರ°ಅಜ್ಜಕಾನ ಭಾವಜಯಶ್ರೀ ನೀರಮೂಲೆಬಟ್ಟಮಾವ°ಸುಭಗಬೋಸ ಬಾವದೊಡ್ಡಮಾವ°ಮುಳಿಯ ಭಾವಬೊಳುಂಬು ಮಾವ°vreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ