Oppanna.com

ವಿಷು ವಿಶೇಷ -2014: ನಗೆಬರಹ ಪ್ರಥಮ: ಅನಿತಾ ನರೇಶ್ ಮಂಚಿ

ಬರದೋರು :   ಸಂಪಾದಕ°    on   31/05/2014    13 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಕಳುದತ್ತು.
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ. ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು.
ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು.
ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

~

ವಿಷು ವಿಶೇಷ ಸ್ಪರ್ಧೆ- 2014ನಗೆಬರಹ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಪ್ರತಿಭಾನ್ವಿತ ಲೇಖಕಿ ಶ್ರೀಮತಿ ಅನಿತಾ ನರೇಶ್ ಮ೦ಚಿ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಪಟ್ಟೆ ಸೀರೆ

ಮುಚ್ಚಿದ ಬಾಗಿಲಿ೦ಗೆ ರಜ್ಜ ಜೋರಾಗಿಯೇ ಬಡುದೆ..ಅಲ್ಲ..
ಈ ಜೆ೦ಬ್ರದ ಮನೆ ಹೇಳಿರೆ ಎಲ್ಲೋರಿ೦ಗು ಒ೦ದೇ ನಮೂನೆ ಅಲ್ಲದ?..
ಮುಹೂರ್ತಕ್ಕೆ ಇನ್ನೆರಡು ಗ೦ಟೆ ಇದ್ದು.. ಅಮಸರ ಎ೦ತ ಇಲ್ಲೆ..ಎಷ್ಟೊತ್ತಿದ್ದಪ್ಪಾ ಒ೦ದು ಸೀರೆ ಸುತ್ತುಲೆ?..
ಆದರೂ ಇವಕ್ಕೊ೦ದು ಅ೦ಬೆರ್ಪು … ಹೇಳಿ ಆನು ಆಲೋಚನೆ ಮಾಡ್ಯೊ೦ಡಿಪ್ಪಗಳೇ ಬಾಗಿಲು ರಜ್ಜ ತೆಗದತ್ತು..ಪಕ್ಕ ಒಳ ನುಗ್ಗಿದೆ..ಎನಗುದೇ ಸೀರೆ ಸುತ್ತೆಕ್ಕನ್ನೆ…
“ಅರೇ.. ಶ೦ಕರಿಯಕ್ಕ ನೀನ್ಯಾವಗ ಬ೦ದದು?” ಹೇಳಿ ತೆರೆಯ ಮರೆಯ ಸ್ವರ ಕೇಳಿತ್ತು.
ಅತ್ಲಾಗಿ ತಿರ್ಗಿರೆ ಬಾಯಿಲಿ ನಾಲ್ಕು ಪಿನ್ನು ಕಚ್ಚಿಗೊ೦ಡು ಪಟ್ಟೆ ಸೀರೆ ಸುತ್ತುವ ಗೌಜಿಲಿದ್ದ ಪಾರ್ತಕ್ಕ. “ಇದಾ,ಈಗ ನುಗ್ಗಿದ್ದಷ್ಟೇ ಆನು..” ಹೇಳಿ ಹೇಳಿಕೊ೦ಡೇ ಗುರ್ತದ ಮೋರೆಗಳ ಹುಡ್ಕುಲೆ ಸುಮ್ಮನೆ ಒ೦ದರಿ ಕಣ್ಣಾಡಿಸಿದೆ.
ಅಷ್ಟಪ್ಪಗ ಹತ್ತರೆ ಒ೦ದು ಸಣ್ಣ ಪ್ರಾಯದ ಕೂಸಿ೦ಗೆ ಸೀರೆ ಸುತ್ತುಸುದು ಹೇಳಿ ಅದರ ಪ್ರಾಯದವ್ವೇ ನಾಲ್ಕು ಜೆನ ಉರುಡಿಗೊ೦ಡು ಇತ್ತಿದ್ದವು.
ಹೇ೦ಗೆ ಸುತ್ತುಸಿರೂ ಅದಕ್ಕೆ ಸಮ ಆಗ.ಒ೦ದರಿ ಸೆರಗು ಕು೦ಟಾತು,ಇನ್ನೊ೦ದರಿ ನೆರಿಗೆ ದೊಡ್ಡಾತು..ಹೀ೦ಗೆ ಮುಗಿಯಲೇ ಮುಗಿಯ ಅದರ ತಲೆಬೆಶಿಗ.
ಎನಗೆ ಅದರ ಬ೦ಙ ನೋಡ್ಲೆಡ್ತತ್ತಿಲ್ಲೆ.ಹಾ೦ಗೆ ಹೇಳುದರಿ೦ದಲೂ ಎನ್ನ ಸೀರೆ ಸುತ್ತುಸುವ ಕಲೆಯ ಪ್ರದರ್ಶನಕ್ಕೆ ಇದುವೇ ಒ೦ದು ವೇದಿಕೆ ಹೇಳಿ ರಜ್ಜ ಕೊಶಿ ಆತು.
ಸಿಕ್ಕಿದ ಅವಕಾಶವ ಬಿಟ್ಟರಿದ್ದೋ?…ಎನಗೆ ಅವರ ಗುರ್ತ ಎ೦ತದೂ ಇತ್ತಿಲ್ಲೆ,ಆದರೂ ಗೊ೦ತಿಪ್ಪದರ ಹೇಳುಲೆ೦ತ ಅಲ್ಲದೋ?..
ಮೆಲ್ಲ೦ಗೆ ಎನ್ನ ಸೀರೆಯ ತೊಟ್ಟೆಯ ಅಲ್ಲೇ ಕರೇಲಿ ಮಡುಗುಲೆ ಹೇಳಿ ಬಗ್ಗಿ ಅವರ ಕಡೆ೦ಗೆ ನೋಡಿ ನೆಗೆ ಮಾಡಿದೆ.ಅವುದೇ ಬೇಕೋ ಬೇಡದೋ ಹೇಳಿ ನೆಗೆ ಮಾಡಿದವು.
ಆನೇ ಅವರ ಹತ್ತರೆ ಹೋಗಿ,” ಇದಾ.. ಹಾ೦ಗಲ್ಲ..ಹೀ೦ಗೆ ಸೆರಗು ಹಾಕೆಕ್ಕಿದಾ..ಪಿನ್ ಹಾಕುವಾಗ ರಜ್ಜ ಹಿ೦ದೆ ಹಾಕೆಕ್ಕು,ನೆರಿಗೆ ಇಲ್ಲಿಯೇ ಕುತ್ತೆಕ್ಕು ” ಹೇಳಿ ಎಲ್ಲಾ ಹೇಳಿದೆ.ಅವಕ್ಕೆ ಅರ್ಥ ಆಗದ್ದೇ ಎನ್ನನ್ನೇ ” ಸೀರೆ ನಿ೦ಗಳೇ ಸುತ್ತಿಸಿ ಬಿಡಿ ಅಕ್ಕೋ..” ಹೇಳಿ ಹಿ೦ದೆ ನಿ೦ದವು.ಆನು ಕ್ರಮಲ್ಲಿ ಸುತ್ತಿಸಿದೆ.ಆ ಕೂಸು ಕನ್ನಟಿ ಎದುರ೦ಗೆ ಹೋಗಿ ನಿ೦ದು “ಹೋ..ಇದು ಬಾರೀ ಲಾಯ್ಕಾಯ್ದು..ಹೀ೦ಗೆ ಇದಾ ಎನಗೆ ಆಯೆಕ್ಕಾದ್ದು” ಹೇಳಿ ಕೊಣುದತ್ತು.ಕೂಡಲೇ ಎನಗೆ ಡಿಮಾ೦ಡೇ ಡಿಮಾ೦ಡು.ನಾಲ್ಕು ಪಿನ್ನು ಬಾಯಿಲಿ ಇನ್ನುದೆ ಕಚ್ಚಿಗೊ೦ಡೇ ನಿ೦ದುಗೊ೦ಡಿದ್ದ ಪಾರ್ತಕ್ಕ “ಹೇ ಶ೦ಕರಿಯಕ್ಕಾ..ಇದು ಪಸ್ಟ್ ಆಯ್ದು..ಎನಗುದೇ ಹಾ೦ಗೇ ಸೀರೆ ಸುತ್ತುಸು ನೋಡುವ.ಯಾವಗಳೂ ಎನ್ನ ಗೆ೦ಡ ಎನಗೆ ಬೈವದು..ಎ೦ತರ ಇದು ನೀನು ನೇಜಿ ನೆಡ್ಲೆ ಗೆದ್ದಗೆ ಹೆರಟದಾ ಅಲ್ಲ ಜೆ೦ಬ್ರಕ್ಕೆ ಹೆರಟದಾ.. ಅಲ್ಲ ಒ೦ದು ಸೀರೆ ಚೆ೦ದಕ್ಕೆ ಸುತ್ತುಲೆ ಬತ್ತಿಲ್ಲೆನ್ನೆ ಮಾರಾಯ್ತಿ ನಿನಗೆ ಹೇಳಿ..ಇ೦ದು ಅವು ಮದುವೆ ಮನೆಲಿ ಎನ್ನನ್ನೇ ನೋಡಿಗೊ೦ಡು ಇರೆಕ್ಕು..ಅಷ್ಟು ಚೆ೦ದಕ್ಕೆ ಸೀರೆ ಸುತ್ತುಸು ನೋಡುವಾ” ಹೇಳಿ ಪ೦ಥಾಹ್ವಾನ ಕೊಟ್ಟತ್ತು.ಅಷ್ಟಪ್ಪಗಳೇ ಆನು ಅದು ಸೀರೆ ಸುತ್ತುವ ಚೆ೦ದವ ನೋಡಿದ್ದು.ಅದರ ಗೆ೦ಡ ಹೇಳಿದ್ದರಲ್ಲಿ ತಪ್ಪೆ೦ತ ಕ೦ಡತ್ತಿಲ್ಲೆ ಎನಗೆ..ಒಳ್ಳೆ ಕದಿಕ್ಕೆಗೆ ವಸ್ತ್ರ ಕಟ್ಟುವ ಹಾ೦ಗೆ ಉರುಟಿ೦ಗೆ ಸು೦ದಿಗೊ೦ಡಿತ್ತು.

ನೆಗೆಬರಹಲ್ಲಿ ಅನಿತಾ ನರೇಶ್ ಮಂಚಿ
ಶ್ರೀ ವೆಂಕಟಕೃಷ್ಣ ಮಳಿ – ಇವರಿಂದ ನೆಗೆಬರಹ ಪ್ರಥಮ – ಶ್ರೀಮತಿ ಅನಿತಾ ನರೇಶ್ ಮಂಚಿ – ಬಹುಮಾನ ಸ್ವೀಕಾರ

ಎನಗೂ ರಜ್ಜ ಉಮೇದು ಬ೦ತೀಗ.ಅದಕ್ಕೆ ಚೆ೦ದಕ್ಕೆ ಸೀರೆ ಸುತ್ತುಸುಲೆ ಶುರು ಮಾಡಿದೆ.ಈಗ ಹತ್ತರೆ ಇದ್ದ ಒಬ್ಬೊಬ್ಬನೇ ಹೆಮ್ಮಕ್ಕ..”ಇದಾ, ರಜ್ಜ ಇಲ್ಲಿ ಸರಿ ಆಯ್ದಾ ನೋಡು,ಇದೊ೦ದು ಪಿನ್ನು ಹಾಕಿಕೊಡು,ರಜ್ಜ ನೆರಿಗೆ ಸರಿ ಮಾಡಿ..” ಹೇಳಿ ಎಲ್ಲ ಬಪ್ಪಲೆ ಶುರು ಆತು.ಎನಗೂ ಎಲ್ಲೋರೂ ಹೊಗಳೊದು,ಎನ್ನತ್ರೆ ಬಪ್ಪದು ನೋಡಿ ಸ್ವರ್ಗಕ್ಕೆ ಮೂರೇ ಗೇಣು.ರಜ್ಜ ಹೊತ್ತಿಲಿ ಅ೦ತೂ ಎನ್ನ ಎದುರು ಸಾಲು ಸಾಲೇ ನಿ೦ದುಗೊ೦ಡವು.ಒಬ್ಬ೦ದು ಮುಗಿವಗ ಮತ್ತೊಬ್ಬ೦ದು..
ಎನಗೆ ಈಗ ಸೀರೆ ಸುತ್ತುಸುದು ಹೇಳಿ ನಿ೦ದು ,ಕೂದು,ಅವರ ಸುತ್ತ ಸುತ್ತಿ,ಕೈ,ಕಾಲು ಎಲ್ಲಾ ಬಚ್ಚುಲೆ ಶುರು ಆತು.ಆದರೂ ಹೇಳುಲೆ ಗೊ೦ತಿದ್ದಾ..ಮರ್ಯಾದಿ ಪ್ರಶ್ನೆ ಅನ್ನೆ..ಬಾಯಿ ಮುಚ್ಚಿಗೊ೦ಡು ಸೀರೆ ಸುತ್ತುಸಿದ್ದೇ ಸುತ್ತುಸಿದ್ದು.ಶುರುವಿ೦ಗೆ ಸುತ್ತುಸುವಾಗ ಅವಕ್ಕೆ ಹೇಳಿ ಕೊಡುದು ಹೇಳಿ ವರ್ಣನೆ ಮಾಡಿಗೊ೦ಡಿತ್ತಿದ್ದೆ. ಆರಿ೦ಗೂ ಅದರ ಕೇಳುವ ಉಮೇದು ಇತ್ತಿಲ್ಲೆ..ಅವರ ಕೆಲಸ ಅಪ್ಪಗ ಮಾಯ ಆಯ್ಕೊ೦ಡಿತ್ತಿದ್ದವು.ಅ೦ತೂ ಇ೦ತೂ ಒಬ್ಬೊಬ್ಬನೇ ರೂಮಿ೦ದ ಖಾಲಿ ಆಗಿ ರಜ್ಜ ಉಸುಲು ಬಿಡುವ ಹಾ೦ಗಾತು.ಉಸ್ಸಪ್ಪಾ ಹೇಳಿ ಆನು ಬೆನ್ನು ಸರ್ತ ಮಾಡಿಗೊ೦ಡು ಕುರ್ಚಿಲಿ ಕೂದು ಸುದಾರ್ಸಿಗೊ೦ಡೆ.
ರಜ ಹೊತ್ತು.. ಅಲ್ಲಿಗೆ ಕಣ್ಣಡ್ಡ ಹೋದ ಹಾ೦ಗೆ ಆತೋ ಏನೋ..ಅಷ್ಟಪ್ಪಗ ಮತ್ತೆ ಹೆಮ್ಮಕ್ಕಳ ದ೦ಡು ಒಳ ನುಗ್ಗಿತ್ತು.ಎನ್ನ ಕ೦ಡು..
” ಶ೦ಕರಿಯಕ್ಕಾ.. ಮುಹೂರ್ತ ಕಳುದತ್ತು..ನೀನೆ೦ತ ಇನ್ನುದೇ ಇಲ್ಲಿಯೇ ಕೂದ್ದು ?” ಹೇಳಿದವು.
“ಅಯ್ಯೋ ರಾಮಾ..ಮದುವೆಗೆ ಹೇಳಿ ಆನು ತ೦ದ ಪಟ್ಟೆ ಸೀರೆಯ ತೊಟ್ಟೆ ಇನ್ನುದೆ ಹೆರವೇ ತೆಗದ್ದಿಲ್ಲೆ, ಅಷ್ಟು ಬೇಗ ಮುಹೂರ್ತವೂ ಕಳುತ್ತಾ !..” ಹೇಳಿ ಆನು ಮ೦ಡೆ ಬೆಚ್ಚಲ್ಲಿಪ್ಪಗ ಒ೦ದು ಹೆಮ್ಮಕ್ಕ ಎನ್ನ ಹತ್ತರೆ ಬ೦ದು
” ಇದಾ,ಇನ್ನು ಪಟ್ಟೆ ಸೀರೆ ಬಿಚ್ಚಿ ಬೇರೆ ಸೀರೆ ಸುತ್ತುದಾನು. ಅದು ಹೊಸಾ ಸೀರೆ. ಆನು ಸುತ್ತುಲೆ ಹೋದರೆ ಕೊದ೦ಟಿಯಾ೦ಗೆ ನಿಲ್ಲುತ್ತು.. ರಜ್ಜ ಸುತ್ತಿಸಿ ಬಿಡೆಕ್ಕಾತಾ..” ಹೇಳಿ ಎನ್ನ ಎದುರು ಅದರ ಸೀರೆ ಹಿಡುದತ್ತು..
ಅದರ ಹಿ೦ದ೦ದ ಇನ್ನೂ ಕೆಲವು ಹೆಮ್ಮಕ್ಕ ” ಎನಗೂ ಸುತ್ತುಸೆಕ್ಕು…ಎನಗೂ ಸುತ್ತುಸೆಕ್ಕು..” ಹೇಳಿ ಸೀರೆ ಕೈಲಿ ಹಿಡುದ್ದರ ಕ೦ಡು ಎನಗೆ ತಲೆ ಸುತ್ತಿದಾ೦ಗೆ ಆಗಿ ಅಲ್ಲಿಯೇ ಮೊಗಚ್ಚಿದೆ…

~*~

13 thoughts on “ವಿಷು ವಿಶೇಷ -2014: ನಗೆಬರಹ ಪ್ರಥಮ: ಅನಿತಾ ನರೇಶ್ ಮಂಚಿ

  1. ಯಂಗ್ ನಿಮ್ ಭಾಷಿ ಬತ್ತಿಲ್ದ.ನಮ್ ಭಾಷೆಯಂಗೇ ಬರಿತ್ನಡ.-ನಿಮ್ಮ ಬರಹಗಳನ್ನು ನೋಡುತ್ತಿರುತ್ತೇನೆ.ತುಂಬಾ ಆಪ್ತವಾಗುವ ಸರಳ ಬರವಣಿಗೆ ಮೆಚ್ಚಿಕೆಯಾಯಿತು.ನಿಮ್ಮಲ್ಲೊಂದು ನವಿರಾದ ಹಾಸ್ಯಪ್ರಜ್ನೆ ಇದೆ. ಎಲ್ಲಕ್ಕಿಂತ ಅಡುಗೆಮನೆಯೊಳಗಿನ ನೂರೆಂಟು ಕೆಲಸಗಳ ಮಧ್ಯೆ ಕಳೆದುಹೋಗದೆ ನಿಮ್ಮೊಳಗಿನ ಲೇಖಕಿಯನ್ನು ಕ್ರಿಯಾಶೀಲವಾಗಿಟ್ಟಿದ್ದೀರಲ್ಲಾ…..ಅದಕ್ಕಾಗಿ ನೀವು ಅಭಿನಂದನಾರ್ಹರು..ನಿಮ್ಮಂಥ ಅನೇಕ ಗೃಹಿಣಿಯರ ಮೌತ್ ಪೀಸ್ ಆಗಿದ್ದೀರಿ ”.ಪ್ರಶಸ್ತಿಗಳು ಕ್ರಿಯಾಶೀಲತೆಯ ಕತ್ತು ಹಿಸುಕುತ್ತವೆ ” ಅಂತ ಹೇಳ್ತಾರೆ, ನಿಮ್ಮ ವಿಚಾರದಲ್ಲಿ ಈ ಮಾತು ಸುಳ್ಳಾಗಲಿ’

  2. ಪಟ್ಟೆ ಸೀರೆ ಫಸ್ಟಿದ್ದು ಹೇಳಿದ ಎಲ್ಲೊರಿಂಗು ಧನ್ಯವಾದಂಗ 🙂

    1. ಹೊ.. ಹಾಂಗಾರೆ ತೀರ್ಪುಗಾರರನ್ನೂ ಸೇರ್ಸಿ ಧನ್ಯವಾದ ಸಮರ್ಪಣೆ ಮಾಡಿದ ಹಂಗಾತು ..!!

  3. ಎರಡು ಮದುವೆಗೊ , ಎರಡು ಸಟ್ಟುಮುಡಿಗಳೆಲ್ಲ ಕಳಿಶಿ ಬೆಗರಿಲಿ ಚೆ೦ಡಿ ಆದ ಪಟ್ಟೆ ಸೀರೆಗಳ ಉದ್ದಿ ಕೈ ಬಚ್ಚಿ ಬೈಲಿಂಗೆ ಬಂದರೆ ಇಲ್ಲಿಯೂ ”ಪಟ್ಟೆ ಸೀರೆ ”. ತಲೆಬರಹ ನೋಡಿಯೇ ಒಂದರಿ ಬೆಗರು ಬಿಚ್ಚಿತ್ತು :-).
    ಸಣ್ಣ ವಸ್ತುವಿನ ಹಿಡುಕ್ಕೊಂಡು ಅದರ ವಿಸ್ತಾರ ಮಾಡಿದ ರೀತಿ ಒಳ್ಳೆದಾಯಿದು ಅನಿತಕ್ಕ .

  4. ಸೂಪರ್ ಆಯಿದು ಅನಿತಕ್ಕ ,ನೆಗೆ ಮಾಡಿಕೊಂಡೇ ಇದ್ದೆ ಇನ್ನುದೆ ,ಅಭಿನಂದನೆಗ

  5. ಅನಿತಕ್ಕ, ಅಭಿನಂದನೆಗೊ.
    ಸೀರೆ ಸುತ್ತುಸಿದ ಕತೆ ಲಾಯ್ಕಾಯಿದು.
    ನಿಂಗಳ ಪಟ್ಟೆ ಸೀರೆ ಲಾಯ್ಕಿದ್ದು. 🙂

  6. ಅನಿತಕ್ಕಾ, ನಿಂಗಳ ಎಲ್ಲೋರು ಬ್ಯೂಟೀಶಿಯನು ಹೇಳಿ ಗ್ರೇಶಿದವೊ ಹೇಳಿ. ತುಂಬಾ ನೈಜವಾಗಿ ಬಯಿಂದು ನಗೆ ಬರಹ. ನಾಲ್ಕು ಪಿನ್ನು ಬಾಯಿಲಿ ಕಚ್ಯೊಂಡು ಪಟ್ಟೆ ಸೀರೆ ಸುತ್ತುವ ಭಂಗಿ ಸರಿಯಾಗಿಯೇ ಇದ್ದು.
    ಬಹುಮಾನ ಪಡಕ್ಕೊಂಡದಕ್ಕೆ ಅಭಿನಂದನೆಗೊ.

  7. ನಮ್ಮ ಯಕ್ಷಗಾನದ ಸ್ತ್ರೀವೇಷದ ಜವ್ವನಿಗರು ಸೀರೆ ಸುತ್ತುವ ರೀತಿ ನೋಡೆಕಾದ್ದೆ. ಭಾರೀ ಲಾಯಕಲ್ಲಿ – ಹೆಮ್ಮಕ್ಕೊ ಕೂಡಾ ಸೋಲೆಕು,ಅಷ್ಟು ಚೆಂದಕ್ಕೆ ಸುತ್ತುತ್ತವಲ್ಲದೋ ?ಅಂತೂ ಅನಿತಕ್ಕನ ” ಪಟ್ಟೆ ಸೀರೆ ” ಚೆಂದ ಇದ್ದು .ಅಭಿನಂದನೆಗೊ

  8. ಯಬ್ಬ.. ಪಟ್ಟೆಸೀರೆ ಪುರಾಣ ರೈಸಿದ್ದು ಅನಿತಕ್ಕ . ಮದುವೆ ಜೆ೦ಬ್ರದಷ್ಟೇ ಗಡಿಬಿಡಿ ಹೆಮ್ಮಕ್ಕಳ ಸೀರೆ ಸುತ್ತಾಣಲ್ಲಿಯೂ ಇದ್ದು .. ಅಪ್ಪೋ !
    ಅಭಿನಂದನೆಗೋ . ನಮ್ಮ ಭಾಷೇಲಿ ಇನ್ನೂ ಹೆಚ್ಚಿನ ಸಾಹಿತ್ಯ ರಚನೆ ಮುಂದುವರಿಯಲಿ ಹೇಳಿ ಹಾರೈಕೆಗೋ .

  9. ಹಹ್ಹಾ, ಪಟ್ಟೆಸೀರೆಯ ಸಂಗತಿ ಪಷ್ಟಾಯಿದು.
    ಸುದಾರಿಕೆ ಮಾಡ್ತ ನೆಂಟಭಾವಯ್ಯಂದ್ರ ಗೆನಾವೇಷ್ಟಿಯೂ ಹಾಂಗೇ ಬಾಕಿ ಅಪ್ಪದಿದ್ದು ಒಂದೊಂದರಿ. 🙂

  10. ಅನಿತಕ್ಕಂಗೆ ಅಭಿನಂದನೆಗೊ.

  11. ಅನಿತಕ್ಕ,
    ವಿಷು ವಿಶೇಷ ಸ್ಪರ್ಧೆಲಿ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಭಿನಂದನೆಗೊ.
    ಜೆಂಬ್ರದ ದಿನ ತೆರೆಮರೆಲಿ ಅಪ್ಪ ಪ್ರಸಂಗವ ಬಿಡುಸಿ ಮಡಗಿದ್ದದು ಪಷ್ಟಾಯಿದು ಆತೋ! 🙂
    ಸೀರೆ ಸುತ್ತುಸುಲೆ ಹೇಳಿ ನಿಂದವಕ್ಕೆ ಸಮಕಟ್ಟು ಸೀರೆ ಸುತ್ತುಲೆ ಎಡಿಯದ್ದೆ ಇಪ್ಪದು ಸತ್ಯವೇ!! 😉
    ಬರದ್ದದು ಲಾಯ್ಕಾಯಿದು.
    ನಿಂಗಳಿಂದ ಇನ್ನುದೇ ಹೆಚ್ಚಿನ, ಮನಮುಟ್ಟುವ ಬರವಣಿಗೆಯ ನಿರೀಕ್ಷೆಲಿ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×