ವಿಷು ಸ್ಪರ್ಧೆ 2014: ನಗೆಬರಹ ದ್ವಿತೀಯ: ರಾಜಯೋಗ – ಜಯ೦ತಿ ರಾಮಚ೦ದ್ರ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ಶ್ರೀಮತಿ ಜಯ೦ತಿ ರಾಮಚ೦ದ್ರ

ನಗೆ ಬರಹ ದ್ವಿತೀಯ – ಲೇಖಕಿ ಶ್ರೀಮತಿ ಜಯ೦ತಿ ರಾಮಚ೦ದ್ರ

ವಿಷು ವಿಶೇಷ ಸ್ಪರ್ಧೆ- 2014ನಗೆಬರಹ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕಿ ಶ್ರೀಮತಿ ಜಯ೦ತಿ ರಾಮಚ೦ದ್ರ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

~
ರಾಜಯೋಗ

ಅವತ್ತೊ೦ದಿನ ರವಿವಾರ ಆನೊಬ್ಳೇ ಮನೇಲಿದ್ದಿ.
ಯಲ್ಲಾ ಮದ್ವೆ ಮನೀಗೆ ಹೋಗಿದ್ದ. ಬೇಜಾರಾತು ಹೇಳಿ ಟಿ.ವಿ.ಹಾಕ್ದಿ.
ಒಬ್ಬಾವ ಜ್ಯೋತಿಷಿ ಬ೦ದ್ನಪ.. ಹತ್ತು ಬೆಳ್ಳಿಗೂ ಉ೦ಗ್ರ, ರೇಶ್ಮೆ ಶಲ್ಯ.. ಒಳ್ಳೇ ನೋಡ ಹ೦ಗಿದ್ದ.
ಆನ್ ಈ ಜ್ಯೋತಿಷ್ಯ,ಪಾತಿಷ್ಯ ಎಲ್ಲ ನ೦ಬ್ ತ್ಳಿಲ್ಲೆ. ಎ೦ಥಕ್ಕೆ ಗೊತ್ತಿದ್ದ ?..ಹಿ೦ದ್ ಆಗಿದ್ದು ಹೆ೦ಗೂ ನಮ್ಗೆ ಗೊತ್ತಿರ್ತು. ಮು೦ದಿನ್ದು ಆದಾಗ ಗೊತ್ತಾಗ್ತು..  ಈಗಿ೦ದು ಹೆ೦ಗೂ ನೋಡ್ತಾ ಇರ್ತು..!
ಮತ್ತೆ೦ತಕ್ಕೆ ತಲೆಬಿಸಿ ಮಾಡಕ್ಕು?..
ಹೀ೦ಗ್ ಎನ್ನ ಲೆಕ್ಕಾಚಾರ, ಅಷ್ಟೊತ್ತಿಗೆ ಅ೦ವ ಹೇಳ್ತಾ ಇದ್ದಿದ್ ಕಿವಿಗೆ ಬಿತ್ತು: “ಈ ತಿ೦ಗಳು ನಿಮ್ಮ ರಾಶಿಫಲ ತು೦ಬಾ ಚೆನ್ನಾಗಿದೆ, ನಿಮಗೆ ಸದ್ಯದಲ್ಲೇ ರಾಜಯೋಗ ಕಾದಿದೆ…” ಯನ್ ಕಿವಿ ಚುರ್ಕಾತು.. ನೋಡ್ತಿ.. ಅ೦ವ ಯ೦ದೇ ರಾಶಿಫಲ ಹೇಳ್ತಾ ಇದ್ದ…! ಬರ್ತಿ ಖುಷಿಯಾತು…ಇನ್ನೂ ಎಷ್ಟೆಷ್ಟು ಒಳ್ಳೆ ಫಲ ಹೇಳ್ತಿದ್ನೋ ?…
ಆ ನಿರೂಪಕಿ “ಈಗ ಒ೦ದು ಸಣ್ಣ ಬ್ರೇಕ್..” ಹೇಳಿ ಯನ್ನ ಖುಷಿಗೂ ಬ್ರೇಕ್ ಹಾಕ್ತು…!

ಆದ್ರೂ ಈ ರಾಜಯೋಗ ಅನ್ನ ಪದ ಜ್ಯೋತಿಷ್ಯದ ಬಗ್ಗೆ ಎ೦ಗಿದ್ದ ನ೦ಬ್ಕೇನೇ ಬದಲಾಯಿಸಿಬಿಡ್ ಚು…!
ನಿ೦ತ್ರೆ,ಕು೦ತ್ರೆ ಅದೇ ಗು೦ಗು ಕಾಡಕ್ ಶುರು ಆತು. ಅ೦ವ ಏನೋ ರಾಜಯೋಗ ಬತ್ತು ಹೇಳ್ದ… ಆದ್ರೆ ಹೆ೦ಗೆ,ಯಾವ ರೂಪದಗೆ ಬತ್ತು ಹೇಳ್ಳೆ. ರಾಜ ಅ೦ತಕ್ಷಣ ಮನಸ್ಸಿಗೆ ಬಪ್ಪದೇ ಮೈಸೂರು ಅಲ್ದಾ?.. ಅಲ್ಲಿ ಸಿ೦ಹಾಸನ ಖಾಲಿಯಿಲ್ಲೆ…!
ಲಾಟರಿ ಟಿಕೇಟ್ ತ೦ಗ೦ಡ್ರೆ ಹೆ೦ಗೆ ?…ಹಿ೦ಗೆ ಯೆ೦ತೆತೋ ಆಲೋಚನೆ ಬಪ್ಪಲೆ ಶುರುವಾತು.
ಯನ್ ಗ೦ಡ “ಕರೋಡಪತಿಗೆ ಹೋಗಲೆ ಪ್ರಯತ್ನ ಮಾಡು” ಹೇಳಿ ಒ೦ದು ಬಿಟ್ಟಿ ಸಲಹೆ ಕೊಟ್ಟ. ಹೌದನ ಹೇಳಿ ಫೋನ್ ಮಾಡಿರೆ ಲೈನೇ ಸಿಕ್ಕಲ್ಲೆ…!
ಇದೇ ಯೋಚ್ನೆಲ್ಲೀ ರಾತ್ರಿ ನಿದ್ದಿಯೂ ಬರ್ಲೆ.

ಬೆಳಿಗ್ಗೆ ಯೋಳ್ತಿದ್ದ೦ಗೆ ಶಣ್ಣ ಬೆನ್ನೋವು ಶುರು ಆತು.
ಬಹುಷ: ಆಫೀಸಗೆ ಇಡೀ ದಿನ ಕೂತ್ಕ೦ಡೇ ಕೆಲ್ಸ ಮಾಡಿದ್ದಕ್ಕನೋ, ಅಥ್ವ ಖುರ್ಚಿ ಸರಿ ಇರ್ಲೇನೋ ಅ೦ದ್ಕ೦ಡಿ. ವಾಕಿ೦ಗು,ವ್ಯಾಯಾಮ ಎಲ್ಲಾ ಆತು.ಬೆನ್ನೋವು ಬಗ್ಗಲ್ಲೆ…!
ಒ೦ದೆರಡ್ ದಿನ ಆದಮೇಲೆ ನೋಡ್ತಿ… ಬೆನ್ನ ಮೇಲೆ ಮುತ್ತಿನ೦ಗಿಪ್ಪ ನಾಕು ಬೊಕ್ಕೆ ಆಯ್ದು. ಚೂರು ಉರಿಯೂ ಇತ್ತೆನ.ರಾಜಯೋಗದ ಗು೦ಗ್ ಗೇ ಇದ್ದ ಯ೦ಗೆ ಉರಿ ಅಷ್ಟು ಗೊತ್ತಾಗಲ್ಲೆ…!
ಮತ್ತೆಲ್ ಡ್ದಿನ ಆಗಿದ್ದೇ ಉರಿ, ನೋವು ಜಾಸ್ತಿ ಆಗಿ ಗು೦ಗೆಲ್ಲಾ ಹಾರ್ಯೋತು…!
“ಡಾಕ್ಟ್ರೇ, ಹೀ೦ಗೊ೦ದ್ ಸಣ್ಣ ತೊ೦ದ್ರೆ ಆಯ್ದು…” ಅ೦ದಿ.
ಡಾಕ್ಟ್ರು ನೋಡಿದ್ದೇ “ಅಯ್ಯೋ, ಸಣ್ದು ಹೇಳ್ಯಲೇ ?… ಎಷ್ಟು ದಿನ ಆತು ಶುರುವಾಗಿ?…” ಅ೦ದ. “ವಾರಾತು”..ಅ೦ದಿ.” ಅಡ್ಡಿಲ್ಲೆ,ಉರೀನ ಚೋಲೋ ಎನ್ಜೋಯ್ ಮಾಡಿದ್ದೆ…!
ಅದೆ೦ಗ್ ಇಷ್ಟು ದಿನ ತಡಕ೦ಡೆ..? ಇದು ಸಣ್ಣ ಪುಟ್ಟ ಕಾಯ್ಲೆ ಅಲ್ಲಿ, ರಾಜಯೋಗವೇ ಬೈ೦ದು… ಇದ್ಕೆ ಹರ್ಪೀಸ್ ಹೇಳ್ತೆ”…ಅ೦ತ ಘೋಷಣೆ ಮಾಡ್ತ…!
“ಇದು ಒ೦ಥರಾ ನೆಗಡಿ ಇದ್ದ೦ಗೆ… ಔಷಧಿ ತಗ೦ಡ್ರೆ ಒ೦ದ್ ತಿ೦ಗ್ಳಿಗ್ ಹುಶಾರಾಗ್ತು, ಇಲ್ದೇ ಹೋದ್ರೆ ಮೂವತ್ತು ದಿನಕ್ ಹೋಗ್ತು” ಹೇಳಿ ಕುಶಾಲ್ ಮಾಡಿ, ಅದೆ೦ತೊ ಮುಲಾಮು,ಮಾತ್ರೆ ಕೊಟ್ಟು ಅಟ್ಟಿದ.

ಅಲ್ಲಿ೦ದ ಶುರುವಾತು ನೋಡಿ ಯನ್ನ ರಾಜಯೋಗ…!
ಏನ್ ಕೇಳ್ತಿ,ಆ ಉರಿ,ನೋವು,ಅನುಭ್ಯವ್ಸದವಕ್ಕೇ ಗೊತ್ತಿದ್ದು… ದಿನ ಹೋದ೦ಗೂ ಗುಳ್ಳೆ ಜಾಸ್ತಿಯಾಗ್ತಿತ್ತು.ಒಳ್ಳೆ ಸೈನಿಕರ೦ಗೆ ಸಾಲಾಗಿ,ಶಿಸ್ತಾಗಿ ಏಳ್ತಿತ್ತು…!
ಅದ್ರ ಉರಿ,ನೋವಿಗೆ ಕೂರಲೂ ಆಗ್ದೇ..ನಿಲ್ಲಲೂ ಆಗ್ದೆ…ಮಲಗಲೂ ಅಗ್ದೇ… ಒಳ್ಳೇ ಪಿಶಾಚಿ ಥರ ರಾತ್ರಿ, ಹಗಲೂ ಮನೆ ತು೦ಬಾ ಓಡ್ಯಾಡಲೇ ಶುರು ಮಾಡ್ದಿ…!
ಡಾಕ್ಟ್ರ ಮುಲಾಮು,ಮಾತ್ರೆನ ಆ ಗುಳ್ಳೆ ಕೇರೇ ಮಾಡ್ತಿರ್ಲ್ಲೆ…!
ಯನ್ನ ಅವತಾರ ನೋಡಿ ಮನೆ ಮ೦ದ್ಯಲ್ಲಾ ಯನ್ನ ಸೇವಿಗೆ ನಿ೦ತ್ಬುಟಿ…!

ಶುರುವಾತಪ… ಯ೦ಗ್ ಹುಶಾರಿಲ್ಲೇ ಹೇಳಿ ನೆ೦ಟ್ರು,ಸ್ನೇಹಿತ್ರು ಎಲ್ಲಾ ಬಪ್ದು,ವಿಚಾರ್ಸದು… ಮನೆ ತು೦ಬಾ ಹಣ್ಣು,ಪಣ್ಣು ತು೦ಬ್ಯೋತು.
ಬ೦ದೋವು ಸುಮ್ನೆ ಹೋಗ್ತಿ ರ್ಲ್ಲೆ.ಅದು ಒ೦ದು ಸುತ್ತು ಹಾಕಿರೆ ಬದ್ಕದಿಲ್ಯಡ…
ಯಾರಿಗೋ ಹೀ೦ಗೆ ಆಗಿ ಕಣ್ಣು ಹೋತಡ…ಹಿ೦ಗೆ ತಮ್ಮ ಯಥಾಶಕ್ತಿ ಯ೦ಗ್ಳನ್ನ ಹೆದರ್ಸಿಕೆ ಹೋಗ್ತಿದ್ದ…!

ಅದಕ್ ಸರಿಯಾಗಿ ಮುಲಾಮು ಹಚ್ದ೦ಗೂ ಗುಳ್ಳೆ ಜಾಸ್ತಿ ಆಗ್ತಿತ್ತು.ಡಾಕ್ಟ್ರ ಮಾತ್ರೆಗೂ ತ೦ಗೂ ಯ೦ತೂ ಸ೦ಬ೦ದ್ ವೇ ಇಲ್ಲೆ ಅ೦ತ ಅದು ಅ೦ದ್ಕ೦ಡಿತ್ತು ಕಾಣ್ತು…!
ಇದ್ನ ನೋಡಿ ಮನೇವ್ಕೆಲ್ಲಾ ಹೆದ್ರಿಕೆ ಶುರುವಾತು.ಜಾಸ್ತಿ ಕಾಳ್ಜಿ ಮಾಡಲ್ ಶುರುಮಾಡ್ದ. ದಿನಾ ಕ್ಯಾರೇ ಹೇಳ್ತಿದ್ದ ಹುಡ್ರೂ ಅಮ್ಮನ್ ಹತ್ತ್ ಸಲ ವಿಚಾರ್ ಸಲೆ ಶುರು ಮಾಡ್ದ…
ಹೀ೦ಗೆ ಕೂತಲ್ಲೆ ಊಟ,ತಿ೦ಡಿ,ಕೆಲ್ಸಿಲ್ಲೆ..ಕಾರ್ಯಲ್ಲೆ..ನೋಡಲ್ ಬ೦ದವ್ ಜೊತೆಗೆ ಮಾತಾಡ್ ಕ್ಯ೦ಡು,ಹೊತ್ತೊತ್ತಿಗೆ ಸಮಾ ಊಟ,ತಿ೦ಡಿ ಮಾಡ್ಕ೦ಡು ( ಪಥ್ಯದೂಟ !) ಜೀವನ್ವೇ ಆರಾಮಾಗೋತು…! ( ಉರಿ,ನೋವು ಬಿಟ್ರೆ …!) ಹರ್ಪಿಸ್ ಹೇಳಿ ಕೇಳ್ದ ಆಪೀಸರೂ “ನೀವು ನಿದಾನ ಹುಶಾರಾಗಿ ಬನ್ನಿ” ಹೇಳಿ ರಜಾ ಕೊಟ್ಬುಟ…!
ರಜಾ ಚೀಟಿಲೂ ಮಾಮೂಲಿ ಜ್ವರ,ಕೆಮ್ಮು ಹೇಳಿ ಬರಿಯಕ್ಕಿ೦ತ ” ಹರ್ಪೀಸ್” ಹೇಳಿ ಬರದ್ರೆ ಒ೦ಥರಾ ಸ್ಟ್ಯಾ೦ಡರ್ಡ್ ಇರ್ತು ಅಲ್ದಾ ?

ಹೀ೦ಗೆ ಹದ್ನೈದು ದಿನ ಕಳೆಯಹೊತ್ತಿಗೆ ಬಹುಷ: ಆ ರೋಗಕ್ಕೂ ಬೇಜಾರಾಗೋತನ…!
ಉರಿ,ನೋವು ಎಲ್ಲಾ ಕಡ್ಮೆ ಆತು.ಈಗ ಹೇಳಿ… ಹದ್ನೈದ್ ದಿನ ಕೆಲ್ಸಿಲ್ಲೆ,ಕಾರ್ಯಲ್ಲೆ…ಕೂತಲ್ಲೇ ಊಟ, ತಿ೦ಡಿ, ಸೇವೆ… ಇದೂ ಒ೦ಥರಾ ರಾಜಯೋಗವೇ ಅಲ್ದಾ ?…!
ಎಲ್ಲೋ ಹುಡುಕ್ಯ೦ಡ್ ಹೋದ ಯೋಗ ಈ ರೂಪ್ದಗೆ ಬ೦ದಿತ್ತು ಕಾಣ್ತು…! ಹೀ೦ಗಾರೂ ಜ್ಯೋತಿಷಿ ಮಾತು ನಿಜ ಆಗಿತ್ತು…!

ಆದ್ರೂ ಯಮ್ಮನೆ ಹುಡ್ರಿಗೊ೦ದು ಶಣ್ಣ ಅನ್ಮಾನ…
’ಅಮ್ಮಾ.. ಆ ಜ್ಯೋತಿಷಿ ಎಲ್ಲೋ ರಾಜರೋಗ ಅ೦ದ ಕಾಣ್ತು..ನಿ೦ಗೆ ಅದು ರಾಜಯೋಗ ಅ೦ದ್ ಹಾ೦ಗೆ ಕೇಳಿಕ್ಕು.ಯಾಮ್ದಕ್ಕೂ ನೀ ಒ೦ದಪ ಡಾಕ್ಟ್ರಿಗೆ ಕಿವಿ ತೋರ್ಸು…!”
ಬದಿಮನೆ ಮೀನಾಕ್ಷಿ ಹೇಳ್ತು ..”ಈ ರಾಜರೋಗ ಬ೦ದ್ಮೇಲೇ ರಾಜಯೋಗ ಬತ್ತು ಸುಮ್ಕಿರು” ಅ೦ತ…
ಹೌದನ ಹೇಳಿ ಆನು ಕಾಯ್ತಾ ಇದ್ದಿ … !

~*~*~

ಸಂಪಾದಕ°

   

You may also like...

6 Responses

 1. ಬಾಲಣ್ಣ (ಬಾಲಮಧುರಕಾನನ) says:

  ಎಂಗಳ ಮನೆ ಹತ್ತರೆ ಒಬ್ರಿಂಗೆ ಮೊಳಪ್ಪು ಬೇನೆ ಸುರುವಾತು ‘ನಿಂಗೊಗೆ ರಾಜಯೋಗ ಮಾರಾಯ್ರೆ ‘ ಒಬ್ಬ ಹೇಳಿದ . ಅದೆಂತ ಹಾಂಗೆ ಹೇಳುದು? ಹೇಳಿ ಕೇಳಿದವು ಅವು, ಇಂತಾದ್ದೆಲ್ಲಾ ರೋಗ ಬಪ್ಪದು ದೊಡ್ದ ದೊಡ್ಡ ಜೆನಕ್ಕೆ ,ಅಂದು ನಮ್ಮ ಪ್ರಧಾನಿಗೊಕ್ಕೆ ಬಂದಿತ್ತು …
  ಹಾಂಗಾದ ಕಾರಣ ನಿಂಗೊ ಹೆಮ್ಮೆ ಪಡೆಕ್ಕಾದ ವಿಷಯ ಇದು. “ರಾಜ ಯೋಗವೇ ಸರಿ ” ಅಲ್ಲದೋ ಮತ್ತೆ ?

  ಜಯಂತಿ ಅಕ್ಕನ ಬರಹ ಚೆಂದ ಆಯಿದು , ಬೈಲಿಂಗೆ ಬತ್ತಾ ಇರೆಕು ಹೇಳಿ ಕೇಳಿಯೊಳುತ್ತೆ ,ಶುಭಾಶಯಂಗೊ .

 2. ಭಾಗ್ಯಲಕ್ಷ್ಮಿ says:

  ಭಾರೀ ಲಾಯಿಕ ಆಯಿದು . ಎ೦ಗೊಗೆ ಓದುವ ಯೋಗ . ನಿಂಗೊಗೆ ರಾಜಯೋಗ ಕೂಡಿ ಬಂದದು ಗೊಂತಾಯಿದಿಲ್ಲೆಯೋ ? ಜಯಂತಿ ಅಕ್ಕಾ ,ಈ ಸ್ಪರ್ದೆಲಿ ಬಹುಮಾನ ಬಂದದು ಆ ಜ್ಯೋತಿಷಿ ಹೇಳಿದ ಕಾರಣ ಅಲ್ಲದೋ? ;-). ಇನ್ನುದೇ ಕಾಯೆಕ್ಕಾ?

 3. Anitha Naresh Manchi says:

  ಎನಗೂ ಈ ರಾಜಯೋ(ರೋ)ಗದ ಅನುಭವ ಇದ್ದು 🙂 ಲಾಯ್ಕಾಯ್ದು ಬರದ್ದು ..

 4. ತೆಕ್ಕುಂಜ ಕುಮಾರ ಮಾವ° says:

  ಇದೂ ಒಂದು ಯೋಗವೇ. ಅಭಿನಂದನೆಗೊ.

 5. ಶಾರದಾಗೌರೀ says:

  ಅಭಿನಂದನೆಗೊ ವಿಷು ವಿಶೇಷ ಸ್ಪರ್ಧೆಲಿ ಪ್ರಶಸ್ತಿ ಪಡದ್ದಕ್ಕೆ.
  ತುಂಬಾ ಲಾಯಕ ಬರದ್ದಿ. ಈ ರಾಜಯೋ(ರೋ)ಗದ ಅನುಭವ ಪಡದವಂಗೇ ಗೊಂತು ಅದರ ವೈಭವ!!!
  ಅನುಭವವ ಅನುಭವಿಸಿದ ಹಾಂಗೆ ಬರದ್ದದು ಚೆಂದ ಆಯಿದು..

 6. ಲಲಿತಾಲಕ್ಷ್ಮೀ ಎನ. ಭಟ್ಟ says:

  ಹರೇರಾಮ. ಅಯ್ಯಪ್ಪ.. ಈ ರಾಜಯೋಗದ ವೈಭೋಗವೇ!! ಆದ್ರೆ ಇದ್ಕೆ ಹಳ್ಳಿ ಮದ್ದು ಇದ್ದು ಹೇಳಿ ಯಾರೂ ಹೇಳಿದ್ವಿಲ್ಯಾ ಜಯಂತಕ್ಕ ? ಮಂತ್ರ ಹೇಳತ್ನೇಯ ನುಕ್ಕಿ ಸಪ್ಪಿಂದ ( ಲಕ್ಕಿ ಸಪ್ಪು ) ಗಾಳಿ ಹಾಕ್ತೊ.. ಮತ್ತೆ ಮಂತ್ರಿಸಿದ ಎಣ್ಣೆ ಕೊಡ್ತೊ.ಎಷ್ಟೇ ಜೋರಾದ್ರೂ ಈ ಔಷದಿಂದ ವಂದೇ ವಾರದಲ್ಲಿ ಈ ಯೋಗದ ವೈಭೋಗ ಮುಗಿತು. ಬೇಗ್ ಓಫೀಸ್ ಗೆ ಹೋಪುಲೆ ಮನ್ಸಿಲ್ಲಗಿದ್ರೆ ಡಾಕ್ಟ್ರ ಔಷಧಿ ಮಾಡ್ಸಕಳೊ.ಸಿದ್ದಾಪುರದಲ್ಲಿ ಇದ್ಕೆ ಔಷದಿ ಕೊಡ್ತೊ. ಮತ್ತೆ ಯಾರಿಗಾದ್ರು ಸರ್ಪಸುತ್ತು ಆದ್ರೆ ಹೇಳು. ಮತ್ತೆ ರಾಶಿಫಲ ರಾಶಿ ನಂಬುಲಾಗ ಹೇಳಿ ನಿನ್ನ ಅನುಭವನೂ ಹೇಳಕಾತು ಅಡ್ಡಿಲ್ಯಾ ? ಹೋಯ್, ಚೆಂದಾಜು ಲೇಖನ ಹ್ಞಾ !

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *